ಗುರುವಾರ, ಡಿಸೆಂಬರ್ 12, 2024

Digital Arrest: ರಾಜ್ಯದಲ್ಲಿ ಡಿಜಿಟಲ್ ಅರೆಸ್ಟ್ ವಂಚನೆ ಪ್ರಕರಣ ತಡೆಗೆ ಕ್ರಮ-2024

  MASTERMITRA       ಗುರುವಾರ, ಡಿಸೆಂಬರ್ 12, 2024

Digital Arrest: ರಾಜ್ಯದಲ್ಲಿ ಡಿಜಿಟಲ್ ಅರೆಸ್ಟ್ ವಂಚನೆ ಪ್ರಕರಣ ತಡೆಗೆ ಕ್ರಮ:2024



ರಾಜ್ಯದಲ್ಲಿ ಡಿಜಿಟಲ್ ಅರೆಸ್ಟ್ ವಂಚನೆ ಬಗ್ಗೆ  ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ವಾಟ್ಸಾಪ್, ಹಾಗೂ ಸೈಬರ್ ಜಾಗೃತಿಯ ಸಂದೇಶಗಳ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ. ಡಿಜಿಟಲ್ ಅರೆಸ್ಟ್ ಮೂಲಕ ಸಾರ್ವಜನಿಕರನ್ನು ವಂಚಿಸುತ್ತಿರುವ ಸೈಬರ್ ವಂಚಕರ ವಿರುದ್ಧ ಪ್ರಕರಣಗಳನ್ನು ದಾಖಲಿಸಿ, ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ಅವರು ಬೆಳಗಾವಿ ಚಳಿಗಾಲದ ವಿಧಾನ ಮಂಡಲ ಅಧಿವೇಶನದಲ್ಲಿ ತಿಳಿಸಿದರು. 

ಸದನದಲ್ಲಿ  ಕೇಳಲಾದ ಪ್ರಶ್ನೆಗಳಿಗೆ ಉತ್ತರ:

'ರಾಜ್ಯದಲ್ಲಿ ಡಿಜಿಟಲ್ ಅರೆಸ್ಟ್‌ ವಂಚನೆ ಬಗ್ಗೆ ಸಾಮಾಜಿಕ ಜಾಲತಾಣಗಳಾದ ಫೇಸ್ಟುಕ್, ವಾಟ್ಸಾಪ್, ಹಾಗೂ ಸೈಬ‌ರ್ ಜಾಗೃತಿಯ ಸಂದೇಶಗಳ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗುತ್ತಿದೆ. ಡಿಜಿಟಲ್ ಅರೆಸ್ಟ್ ಮೂಲಕ ಸಾರ್ವಜನಿಕರನ್ನು ವಂಚಿಸುತ್ತಿರುವ ಸೈಬ‌ರ್ ವಂಚಕರ ವಿರುದ್ಧ ಪ್ರಕರಣಗಳನ್ನು ದಾಖಲಿಸಿ, ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ''.


ಪ್ರಶ್ನೆ : ರಾಜ್ಯದಲ್ಲಿ ದಿನಕ್ಕೊಂದು ವಂಚನೆಯ ಹೊಸ ಸಲುವಾಗಿ ಅಸ್ಸ ಪ್ರಯೋಗಿಸುತ್ತಿರುವ ಸೈಬರ್ ವಂಚಕರು “ಡಿಜಿಟಲ್ ಅರೆಸ್ಟ್" ಎಂಬ ಹೊಸ ಮಾದರಿಯ ವಂಚನೆಯ ಪ್ರಕಾರದ ಮೂಲಕ ಹಲವರನ್ನು ವಂಚಿಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ?

ಉತ್ತರ : ಹೌದು.

ಪ್ರಸ್ತುತ ವರ್ಷದಲ್ಲಿ "ಡಿಜಿಟಲ್ ಅರೆಸ್ಟ್" ಸಂಬಂಧಿತ ಒಟ್ಟು 641 ಪ್ರಕರಣಗಳು ದಾಖಲಾಗಿರುತ್ತವೆ.

ಪ್ರಶ್ನೆ: ಬಂದಿದ್ದಲ್ಲಿ ಪ್ರಸ್ತುತ ವರ್ಷದಲ್ಲಿ ಈ ಸಂಬಂಧಿತ ಒಟ್ಟು ಎಷ್ಟು ಪ್ರಕರಣಗಳು ದಾಖಲಾಗಿವೆ? ಸದರಿ ದಾಖಲಾದ ಪ್ರಕರಣಗಳಲ್ಲಿ ವಂಚಕರಿಂದ ಸಾರ್ವಜನಿಕರು ಕಳೆದುಕೊಂಡಿರುವ ಹಣದ ಮೊತ್ತವೆಷ್ಟು; (ವಿವರ ನೀಡುವುದು)

ಉತ್ತರ: ಡಿಜಿಟಲ್ ಅರೆಸ್ಟ್" ಸಂಬಂಧಿತ ಒಟ್ಟು 641 ಪ್ರಕರಣಗಳಲ್ಲಿ ವಂಚಕರಿಂದ ಸಾರ್ವಜನಿಕರು ಕಳೆದುಕೊಂಡಿರುವ ಹಣದ ಮೊತ್ತ ಮತ್ತು ವಂಚಕರನ್ನು ಪತ್ತೆ ಮಾಡಿ ಅವರಿಂದ ವಶಪಡಿಸಿಕೊಂಡ ಮೊತ್ತದ ವಿವರಗಳು ಈ ಕೆಳಕಂಡಂತಿವೆ.

ಪ್ರಶ್ನೆ: ಸದರಿ ಪ್ರಕರಣಗಳಲ್ಲಿ ವಂಚಕರ ಮೂಲವನ್ನು ಪತ್ತೆ ಮಾಡಿ, ಅವರಿಂದ ವಂಚನೆಯ ಹಣವನ್ನು ವಶಪಡಿಸಿಕೊಳ್ಳಲಾಗಿದೆಯೇ?

ಉತ್ತರ: ವಂಚನೆಯ ಮೊತ್ತ: 109,01,44,133

ವಶಪಡಿಸಿಕೊಂಡ ಮೊತ್ತ: 9,45,71,214

"ಡಿಜಿಟಲ್ ಅರೆಸ್ಟ್" ಸಂಬಂಧಿತ 641 ಪ್ರಕರಣಗಳ ವಿವರಗಳನ್ನು ಅನುಬಂಧದಲ್ಲಿ ಒದಗಿಸಲಾಗಿದೆ.

ಡಿಜಿಟಲ್ ಅರೆಸ್ಟ್ ವಂಚನೆಯ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು ಹಲವಾರು ಅಮಾಯಕರು ಈ ವಂಚನೆಯ ಜಾಲಕ್ಕೆ ಸಿಲುಕಿ ಸಂಕಷ್ಟಕ್ಕೀಡಾಗುತ್ತಿರುವುದನ್ನು ತಡೆಯಲು ಸರ್ಕಾರ ಕೈಗೊಂಡಿರುವ ಕ್ರಮಗಳೇನು?

ಉತ್ತರ: ಡಿಜಿಟಲ್ ಅರೆಸ್ಟ್" ವಂಚನೆಯ ಪ್ರಕರಣಗಳ ಬಗ್ಗೆ  ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ವಾಟ್ಸ್ ಆಪ್ ಹಾಗೂ ಟ್ವಿಟ್ಟರ್‌ಗಳ ಮೂಲಕ ಸೈಬ‌ರ್ ಜಾಗೃತಿಯ ಸಂದೇಶಗಳನ್ನು ರವಾನಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. 

ಶಾಲಾ ಕಾಲೇಜುಗಳಿಗೆ, ಇತರೆ ಸಂಸ್ಥೆಗಳಿಗೆ ಭೇಟಿ నిడి ವಿದ್ಯಾರ್ಥಿ ಹಾಗೂ ಸಾರ್ವಜನಿಕರಿಗೆ "ಡಿಜಿಟಲ್ ಅರೆಸ್ಟ್" ವಂಚನೆಯ ಬಗ್ಗೆ ಜಾಗೃತಿ ಮೂಡಿಸಲು ಜಾಗೃತಾ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. 

ಸಾರ್ವಜನಿಕರನ್ನು ಇಂತಹ ಅಪರಾಧಿಕ ಕೃತ್ಯಗಳ ಮೂಲಕ ವಂಚಿಸಲು ನಕಲಿ ಸಿಮ್‌ ಕಾರ್ಡ್ ಹಾಗೂ ನಕಲಿ ಬ್ಯಾಂಕ್ ಖಾತೆಗಳನ್ನು ಮಾರಾಟಕ್ಕೆ ಬಳಸುವ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, టెలిగ్రాం, ಇತರೆ ಅಂರ್ತಜಾಲ ವೇದಿಕೆಗಳಲ್ಲಿ ಸಕ್ರಿಯವಾಗಿರುವ ಖಾತೆಗಳು ಹಾಗೂ ಗುಂಪುಗಳನ್ನು ಪತ್ತೆ ಹಚ್ಚಿ, 268 ಫೇಸ್‌ಬುಕ್ ಗುಂಪುಗಳು, 465 ಟೆಲಿಗ್ರಾಂ ಗುಂಪುಗಳು, 15 ಇನ್‌ಸ್ಟಾಗ್ರಾಂ ಖಾತೆಗಳು ಹಾಗೂ 61 ವಾಟ್ಸ್ಆಪ್ ಗುಂಪುಗಳನ್ನು ನಿಷ್ಕ್ರಿಯಗೊಳಿಸಲಾಗಿರುತ್ತದೆ.

"ಡಿಜಿಟಲ್ ಅರೆಸ್ಟ್  ಸಾರ್ವಜನಿಕರನ್ನು  ವಂಚಿಸುತ್ತಿರುವ ಸೈಬರ್ ವಂಚಕರ ವಿರುದ್ಧ  ಪ್ರಕರಣಗಳನ್ನು ದಾಖಲಿಸಿ, ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುತ್ತಿದೆ.


CLICK HERE TO DOWNLOAD 

logoblog

Thanks for reading Digital Arrest: ರಾಜ್ಯದಲ್ಲಿ ಡಿಜಿಟಲ್ ಅರೆಸ್ಟ್ ವಂಚನೆ ಪ್ರಕರಣ ತಡೆಗೆ ಕ್ರಮ-2024

Newest
You are reading the newest post

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ