Ksheera Bhagya Scheme: ಕೆಎಂಎಫ್ ಹಾಲಿನ ಪುಡಿ ಹಾಗೂ ರಾಗಿ ಮಿಕ್ಸ್ ಸಂಗ್ರಹ–ನಿರ್ವಹಣೆಗೆ ಮಾರ್ಗಸೂಚಿ-2026

Ksheera Bhagya Scheme: ಕೆಎಂಎಫ್ ಹಾಲಿನ ಪುಡಿ ಹಾಗೂ ರಾಗಿ ಮಿಕ್ಸ್ ಸಂಗ್ರಹ–ನಿರ್ವಹಣೆಗೆ ಮಾರ್ಗಸೂಚಿ-2026

 

Ksheera Bhagya Scheme: ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಸರ್ಕಾರಿ ಶಾಲೆಗಳಲ್ಲಿನ ಪೂರ್ವ ಪ್ರಾಥಮಿಕ ಮಕ್ಕಳನ್ನು ಒಳಗೊಂಡು 1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಕ್ಷೀರಭಾಗ್ಯ ಯೋಜನೆಯಡಿ ಬಿಸಿಹಾಲು ವಿತರಿಸಲು ಕೆ.ಎಂ.ಎಫ್. ಸಂಸ್ಥೆಯಿಂದ ಶಾಲೆಗಳಿಗೆ ಎನ್.ಜಿ.ಓಗಳಿಗೆ ಕೆನೆಭರಿತ ಹಾಲಿನ ಪುಡಿ ಹಾಗೂ ರಾಗಿ ಹೆಲ್ ಮಿಕ್ಸ್ ಪುಡಿ ಸರಬರಾಜು ಮಾಡಲಾಗುತ್ತಿದ್ದು ಸರಬರಾಜಾದ ಸದರಿ ಪದಾರ್ಥಗಳನ್ನು ಸುರಕ್ಷಿತವಾಗಿ ನಿರ್ವಹಿಸಲು ಜಿಲ್ಲಾ, ತಾಲ್ಲೂಕು ಹಂತದ ಅನುಷ್ಟಾನಾಧಿಕಾರಿಗಳು ಹಾಗೂ ಶಾಲಾ ಮತ್ತು ಸ್ವಯಂ ಸೇವಾ ಸಂಸ್ಥೆಗಳ ಮುಖ್ಯಸ್ಥರು ನಿಯಮಾನುಸಾರ ಅನುಸರಿಸಬೇಕಾದ ಮಾರ್ಗಸೂಚಿಗಳು ಇಲ್ಲಿವೆ.

ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಸರ್ಕಾರಿ ಶಾಲೆಯ ಪೂರ್ವ ಪ್ರಾಥಮಿಕ ತರಗತಿಗಳನ್ನು ಒಳಗೊಂಡು 1 ರಿಂದ 10ನೇ ತರಗತಿ ಮಕ್ಕಳಿಗೆ ಕ್ಷೀರಭಾಗ್ಯ ಯೋಜನೆಯಡಿಯಲ್ಲಿ ಕೆನೆಭರಿತ ಹಾಲಿನ ಪುಡಿ ಹಾಗೂ 1 ರಿಂದ 10ನೇ ತರಗತಿ ಮಕ್ಕಳಿಗೆ ರಾಗಿ ಹೆಲ್ ಮಿಕ್ಸ್ ಪುಡಿಯನ್ನು ಕೆ.ಎಂ.ಎಫ್. ಸಂಸ್ಥೆಯಿಂದ ಶಾಲೆಗಳಿಗೆ ಸರಬರಾಜು ಮಾಡಲಾಗುತ್ತಿದೆ.

ಈ ಸಂಬಂಧ ಹಾಲಿನ ಪುಡಿ ಹಾಗೂ ರಾಗಿ ಹೆಲ್ ಮಿಕ್ಸ್ ಪುಡಿಯನ್ನು ವಿವಿಧ ಹಂತದಲ್ಲಿ ಕಡ್ಡಾಯವಾಗಿ ಸಂರಕ್ಷಣೆ ಮತ್ತು ನಿರ್ವಹಣೆ ಮಾಡಲು ಅನುಷ್ಠಾನಾಧಿಕಾರಿಗಳು ಉಸ್ತುವಾರಿ ಮಾಡಲು ಈ ಕೆಳಗಿನಂತೆ ಮಾರ್ಗಸೂಚಿಯನ್ನು ಹೊರಡಿಸಲಾಗಿದೆ.

ಜಿಲ್ಲಾ ಹಂತದಲ್ಲಿ ಹಾಗೂ ಕೆ.ಎಂ.ಎಫ್. ಸಂಸ್ಥೆ ನಿರ್ವಹಿಸಬೇಕಾದ ಜವಾಬ್ದಾರಿಗಳು:

1. ಕೆ.ಎಂ.ಎಫ್ ನವರು ಕಡ್ಡಾಯವಾಗಿ ತಾಲ್ಲೂಕಿಗೆ/ಶಾಲೆಗಳಿಗೆ ಪೂರೈಕೆ ಆಗುತ್ತಿರುವ ಕೆನೆಭರಿತ ಹಾಲಿನ ಪುಡಿಯ ಪ್ಯಾಕೇಟುಗಳ ಮೇಲೆ ಪ್ರಸ್ತುತ ಇರುವ ನಮೂದುಗಳೊಂದಿಗೆ ಹೆಚ್ಚುವರಿಯಾಗಿ ಬ್ಯಾಚ್ ನಂಬ‌ರ್ ಮತ್ತು ಪ್ರತಿಯೊಂದು ಪ್ಯಾಕೇಟ್ ಗಳಿಗೂ ಕ್ರಮಸಂಖ್ಯೆಯನ್ನು ಮುದ್ರಿಸತಕ್ಕದ್ದು. ಹಾಗೂ ಪ್ರತಿ ಶಾಲೆಗೆ/ಎನ್.ಜಿ.ಓ/ಸ್ವಸಹಾಯ ಸಂಘಗಳಿಗೆ ವಿತರಣೆ ಮಾಡುತ್ತಿರುವ ಪ್ಯಾಕೇಟ್ ಗಳ ಸಂಖ್ಯೆಯನ್ನು ಕಡ್ಡಾಯವಾಗಿ ಸರಬರಾಜಾದ ರಶೀದಿಯಲ್ಲಿ ಎಲ್ಲಾ ವಿವರಗಳನ್ನೊಳಗೊಂಡು ನಮೂದಿಸತಕ್ಕದ್ದು ಹಾಗೂ ಶಾಲಾ ಸ್ವೀಕೃತಿ ಪತ್ರದಲ್ಲಿ ಸರಬರಾಜಾದ ರಾಗಿ ಹೆಲ್ ಮಿಕ್ಸ್ ಪೌಡರ್ ಪ್ಯಾಕೇಟ್ ಗಳ ಸಂಖ್ಯೆ ಪ್ರಮಾಣ, ದಿನಾಂಕ, ಸ್ವೀಕರಿಸಿದ ಶಿಕ್ಷಕರ ಹೆಸರನ್ನು ತಪ್ಪದೇ ನಮೂದಿಸಲು ತಿಳಿಸಿದೆ.

2. ಬೃಹತ್ ಪ್ರಮಾಣದ ಚೀಲಗಳಲ್ಲಿ (Bulk) ಪೂರೈಕೆಯಾಗುವ ಪ್ಯಾಕೇಟ್‌ಗಳ ಮೇಲೆ ಸಹ ಬ್ಯಾಚ್ ನಂಬ‌ರ್ ಮತ್ತು ಚೀಲದಲ್ಲಿರುವ ಒಟ್ಟು ಪ್ಯಾಕೇಟ್‌ಗಳ ಸಂಖ್ಯೆ ಮತ್ತು ಪ್ಯಾಕೇಟ್ ಗಳ ಕ್ರಮ ಸಂಖ್ಯೆ 1 ರಿಂದ ಮುಂದುವರೆದ ಕ್ರಮ ಸಂಖ್ಯೆಯನ್ನು ಮುದ್ರಿಸತಕ್ಕದ್ದು, ಹಾಗೂ ಯಾವ ಸಂಸ್ಥೆಗೆ ಪೂರೈಕೆ ಮಾಡಲಾಗುತ್ತಿದೆಯೋ ಆ ಸಂಸ್ಥೆಯ ಇನ್‌ವಾಯ್ ನಲ್ಲಿ ಪೂರೈಕೆ ಮಾಡುತ್ತಿರುವ ಪ್ರಮಾಣ ಹಾಗೂ ವಿತರಣೆ ಮಾಡುತ್ತಿರುವ ಬ್ಯಾಚ್ ನಂ ಮತ್ತು ಕ್ರಮ ಸಂಖ್ಯೆಯನ್ನು ನಮೂದಿಸತಕ್ಕದ್ದು.

3. ಶಾಲೆಗಳಿಗೆ ಪೂರೈಕೆ ಮಾಡಲಾದ ಹಾಲಿನ ಪುಡಿ ಬಿಲ್‌ಗಳನ್ನು ಪಾವತಿಗೆ ಸಲ್ಲಿಸುವಾಗ ಸರಬರಾಜು ಮಾಡಿದ ಹಾಲಿನ ಪುಡಿಯ / ರಾಗಿ ಪುಡಿಯ ಪ್ಯಾಕೇಟ್ ನ ಮೇಲಿರುವ ಬ್ಯಾಚ್ ನಂ ಮತ್ತು ಬ್ಯಾಗ್/ಪಾಕೇಟಗಳ ಸಂಖ್ಯೆಯನ್ನು ಹಾಗೂ ಶಾಲೆಗಳಿಗೆ ಸರಬರಾಜಾದ ರಾಗಿ ಹೆಲ್ ಮಿಕ್ಸ್ ಪುಡಿಯ ಪ್ಯಾಕೇಟ್‌ಗಳ ಸಂಖ್ಯೆ ಮತ್ತು ಪ್ರಮಾಣದ ವಿವರಗಳನ್ನು ನಮೂದಿಸಿ ಸಲ್ಲಿಸತಕದ್ದು,

4. ಕೆ ಎಂ ಎಫ್ ನಿಂದ ಸರಬರಾಜಾದ ಹಾಲಿನ ಪುಡಿ ಹಾಗೂ ರಾಗಿ ಹಲ್ ಮಿಕ್ಸ್ ಪುಡಿಯು ಶಾಲೆಗಳಿಗೆ/ಎನ್.ಜಿ.ಓ/ಸ್ವಸಹಾಯ ಸಂಘಗಳಿಗೆ ವಿತರಣೆ ಮಾಡುವ ಪೂರ್ವದಲ್ಲಿ ಸಂಬಂಧಿಸಿದ ತಾಲ್ಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳು/ ಸಹಾಯಕ ನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಶಿಕ್ಷಣಾಧಿಕಾರಿಗಳು, ಪಿ ಎಂ ಪೋಷಣ್, ಜಿ.ಪಂ ಇವರ ಗಮನಕ್ಕೆ ತಂದ ನಂತರವೇ ವಿತರಣೆ ಮಾಡತಕ್ಕದ್ದು.

5. ಕಾಲ ಕಾಲಕ್ಕೆ ಕೆ.ಎಂ.ಎಫ್. ಸಂಸ್ಥೆಯ ಅಧಿಕಾರಿಗಳು ಮತ್ತು ಜಿಲ್ಲಾ, ತಾಲ್ಲೂಕು ಹಾಗೂ ಕ್ಲಸ್ಟರ್ ಮಟ್ಟದ ಮೇಲ್ವಿಚಾರಣಾಧಿಕಾರಿಗಳು ಶಾಲೆ/ಎನ್.ಜಿ.ಓ/ಸ್ವಸಹಾಯ ಸಂಘಗಳಿಗೆ ನಿಯಮಿತವಾಗಿ ಭೇಟಿ ನೀಡಿ ದಾಸ್ತಾನಿನ ಸಂಗ್ರಹ, ಗುಣಮಟ್ಟ, ರಾಗಿ ಪುಡಿ ಮಿಶ್ರಿತ ಹಾಲು ತಯಾರಿಕಾ ವಿಧಾನ ಹಾಗೂ ಗುಣಮಟ್ಟದ ಬಗ್ಗೆ ಪರಿಶೀಲಿಸಿ ವರದಿಗಳನ್ನು ಪ್ರತಿ ತಿಂಗಳು ಶಿಕ್ಷಣಾಧಿಕಾರಿಗಳು, ಪಿ ಎಂ ಪೋಷಣ್, ಜಿ.ಪಂ ಇವರಿಗೆ ಸಲ್ಲಿಸತಕ್ಕದ್ದು.

6. ಮೇಲ್ವಿಚಾರಣಾ ಅಧಿಕಾರಿಗಳು ಪರಿಶೀಲನೆ ವೇಳೆಯಲ್ಲಿ ಹಾಲಿನ ಪುಡಿ ಹಾಗೂ ರಾಗಿ ಹೆಲ್ ಮಿಕ್ಸ್ ಪುಡಿಯ ಪ್ಯಾಕೇಟ್ ಮೇಲಿನ ಕ್ರಮ ಸಂಖ್ಯೆ ಬ್ಯಾಚ್ ಸಂಖ್ಯೆ ಮತ್ತು ತಯಾರಿಸಿದ ಮತ್ತು ಮುಕ್ತಾಯದ ಅವಧಿಯ ದಿನಾಂಕಕ್ಕೆ ಉಳಿದ ದಾಸ್ತಾನುಗಳನ್ನು ಪರಿಶೀಲಿಸುವುದು ಕಡ್ಡಾಯವಾಗಿರುತ್ತದೆ.

7. ಶಾಲೆಗಳು, ಎನ್.ಜಿ.ಓ/ಸ್ವಸಹಾಯ ಸಂಘದವರು ಬಳಸಿರುವ ಹಾಲಿನ ಪುಡಿ ಮತ್ತು ರಾಗಿ ಹೆಲ್ ಮಿಕ್ಸ್ ಪುಡಿಯ ಪ್ಯಾಕೇಟ್‌ಗಳನ್ನು ಪರಿಶೀಲಿಸಿ ಉಪಯೋಗಿಸಿದ ಪ್ಯಾಕೇಟ್‌ಗಳಿಗೂ, ವಹಿಯಲ್ಲಿ ನಮೂದಿಸಿದ ವಿವರಗಳಿಗೂ ಹಾಗೂ ಉಳಿಕೆಯಾಗಿರುವ ಭೌತಿಕ ದಾಸ್ತಾನಿಗೆ ತಾಳೆ ಮಾಡತಕ್ಕದ್ದು, ಬಳಕೆಯಾದ ಖಾಲಿ ಪ್ಯಾಕೇಟ್‌ಗಳನ್ನು ಶಾಲೆ / ಸಂಸ್ಥೆಯಲ್ಲಿ ಜಿರಲೆ ಅಥವಾ ಕ್ರಿಮಿ ಕೀಟ ಮುಕ್ತವಾಗಿರುವಂತೆ ವ್ಯವಸ್ಥಿತವಾಗಿ ನಿರ್ವಹಿಸಬೇಕು ಹಾಗೂ ಎಲ್ಲೆಂದರಲ್ಲಿ ಎಸೆಯದಂತೆ ನಿರ್ವಹಿಸಲು ಮಾರ್ಗದರ್ಶನ ನೀಡುವುದು. ಜಿಲ್ಲಾ ಹಂತದಿಂದ ಬಳಸಿದ ಖಾಲಿ ಪ್ಯಾಕೇಟ್‌ಗಳ ವಿಲೇವಾರಿಯ ಬಗ್ಗೆ ಸೂಕ್ತ ನಿರ್ದೇಶನ ನೀಡಲು ಹಾಗೂ ವ್ಯವಸ್ಥಿತವಾಗಿ ಕ್ರಮ ವಹಿಸಲು ತಿಳಿಸಿದೆ.

ತಾಲ್ಲೂಕು ಹಂತದಲ್ಲಿ ನಿರ್ವಹಿಸಬೇಕಾದ ಜವಾಬ್ದಾರಿಗಳು:

1. ತಾಲ್ಲೂಕಿನ ಸಹಾಯಕ ನಿರ್ದೇಶಕರು, ಆಯಾ ಮಾಹೆಗೆ ಬೇಡಿಕೆಗನುಗುಣವಾಗಿ ಕೆನೆ ಭರಿತ ಹಾಲಿನ ಪುಡಿ ಹಾಗೂ ರಾಗಿ ಹೆಲ್ ಮಿಕ್ಸ್ ಪುಡಿಯ ಪೂರೈಕೆ ಆಗುತ್ತಿರುವ ಪ್ರಮಾಣ ಮತ್ತು ಗುಣಮಟ್ಟದ ಬಗ್ಗೆ ಖಾತ್ರಿಪಡಿಸಿಕೊಳ್ಳುವುದು.

2. ಕೆ.ಎಂ.ಎಫ್ ರವರೊಂದಿಗೆ ಸಮನ್ವಯ ಸಾಧಿಸಿ ತಾಲೂಕಿನಲ್ಲಿ ಬೇಡಿಕೆಗನುಗುಣವಾಗಿ ಶಾಲೆಗಳಿಗೆ ವಿತರಣೆಯಾಗುವಂತೆ ಕ್ರಮವಹಿಸತೆಕದ್ದು.

3. ತಾಲ್ಲೂಕಿನಾದ್ಯಂತ ಪೂರೈಕೆ ಆಗಬೇಕಾಗಿರುವ ಶಾಲೆಗಳ ರೂಟ್ ಮ್ಯಾಪನ್ನು ಕೆ.ಎಂ.ಎಫ್.ರವರ ಸಮನ್ವಯದೊಂದಿಗೆ ಸಿದ್ಧಪಡಿಸಿ ಅದರಂತೆ ವಿತರಣೆಗೆ ಕ್ರಮ ವಹಿಸತಕ್ಕದ್ದು.

4. ತಾಲ್ಲೂಕಿನಾದ್ಯಂತ ವಿತರಣೆ ಮಾಡುವ ಸಂದರ್ಭದಲ್ಲಿ ಇಲಾಖೆಯ ಸಿ.ಆರ್.ಪಿ/ಬಿ.ಆರ್.ಪಿ/ಇ.ಸಿ.ಓ ರವರು ಸೂಕ್ತ ಮೇಲ್ವಿಚಾರಣೆ ಮಾಡತಕ್ಕದ್ದು.

5. ಪ್ರತಿ ಶಾಲೆ/ಎನ್.ಜಿ.ಓ/ಸ್ವಸಹಾಯ ಸಂಘದವರು ಬಳಕೆ ಮಾಡಿದ ಖಾಲಿ ಪ್ಯಾಕೇಟ್ ಗಳನ್ನು ಜಿಲ್ಲಾ ಪಂಚಾಯಿತಿಯಿಂದ ಸೂಚನೆ ಬರುವವರೆಗೆ ಸಂರಕ್ಷಿಸಿ ಇಡುವಂತೆ ನಿರ್ದೇಶನ ನೀಡತಕ್ಕದ್ದು.

6. ಪ್ರತಿ ಕ್ಲಸ್ಟರ್‌ನಲ್ಲಿ ವಿತರಣೆಯಾಗಿರುವ ಹಾಲಿನ ಪುಡಿ ಹಾಗೂ ರಾಗಿ ಹೆಲ್ ಮಿಕ್ಸ್ ಪುಡೆಯನ್ನು ಪ್ರತಿ ಶಾಲೆಗಳ ದಾಸ್ತಾನು, ಸಂಗ್ರಹಣೆ ಮತ್ತು ಗುಣಮಟ್ಟದ ಬಗ್ಗೆ ಪರಿಶೀಲನೆ ಮಾಡತಕ್ಕದ್ದು. ಹಾಗೂ ದಾಸ್ತಾನು ಮತ್ತು ಬಳಕೆ ಆಗಿರುವ ಪ್ಯಾಕೇಟ್ ಗಳನ್ನು ಹೋಲಿಕೆ ಮಾಡಿ ಅಕ್ಷರ ದಾಸೋಹ ಸಂದರ್ಶನ ಪುಸ್ತಕದಲ್ಲಿ ನಮೂದಿಸತಕ್ಕದ್ದು.

7. ಪ್ರತಿ ತಿಂಗಳು ಸಹಾಯಕ ನಿರ್ದೇಶಕರು, ಎನ್.ಜಿ.ಓ/ಸ್ವಸಹಾಯ ಸಂಘಗಳಿಗೆ ಕಡ್ಡಾಯವಾಗಿ ಭೇಟಿ ನೀಡಿ ಬಳಕೆ ಮಾಡಿ ಖಾಲಿ ಇರುವ ಪ್ಯಾಕೇಟ್‌ಗಳನ್ನು ದಾಸ್ತಾನಿನೊಂದಿಗೆ ತಾಳೆ ಮಾಡತಕ್ಕದ್ದು. ಹಾಗೂ ಬಳಕೆ ಮಾಡಿರುವ ದಾಸ್ತಾನಿನ ಪ್ಯಾಕೇಟ್‌ಗಳ ಕ್ರಮ ಸಂಖ್ಯೆ ಬ್ಯಾಚ್ ಸಂಖ್ಯೆ ಮತ್ತು ತಯಾರಿಸಿದ ದಿನಾಂಕಗಳನ್ನು ನಮೂದಿಸಿ ಕಾರ್ಯನಿರ್ವಾಹಕ ಅಧಿಕಾರಿಗಳು, ತಾ.ಪಂ ರವರ ಗಮನಕ್ಕೆ ತಂದು ಬಿಲ್ಲು ಪಾವತಿಗೆ ಸಲ್ಲಿಸುವಾಗ ಸದರಿ ಪತ್ರವನ್ನು ಲಗತ್ತಿಸುವುದು.

8. ಪ್ರತಿ ಶಾಲೆ/ಎನ್.ಜಿ.ಓ/ಸ್ವಸಹಾಯ ಸಂಘದವರು ಸ್ವೀಕರಿಸಿದ ತಕ್ಷಣ ಪ್ಯಾಕೆಟ್‌ಗಳ ಮೇಲೆ ಕಡ್ಡಾಯವಾಗಿ PERMANENT MARKER ನಿಂದ (ಅಳಿಸಲಾಗದ ಶಾಯಿ)ಯಿಂದ ಪ್ಯಾಕೆಟ್‌ಗಳ ಸಂಖ್ಯೆ ಸಂಸ್ಥೆಯ ಹೆಸರು ಪೂರೈಕೆ ಮಾಡಿದ ದಿನಾಂಕ ಕಡ್ಡಾಯವಾಗಿ ನಮೂದಿಸತಕ್ಕದ್ದು. ಹಾಗೂ ಈ ಕೆಳಗಿನ ಪದ್ದತಿಯಂತೆ ಬಳಸುವುದು ಹಾಗೂ ವಹಿಯಲ್ಲಿಯೂ ನಿರ್ವಹಿಸಲು ಸೂಚಿಸಿದೆ.

9. ಪ್ರತಿ ಶಾಲೆಯಲ್ಲಿ ಕನಿಷ್ಠ ಪಕ್ಷ 15 ದಿನಗಳಿಗೊಮ್ಮೆಯಾದರೂ ಇಲಾಖೆಯ ಅನುಷ್ಠಾನಾಧಿಕಾರಿಗಳು (ಸಿ.ಆರ್.ಪಿ/ಬಿ.ಆರ್.ಪಿ/ಇ.ಸಿ.ಓ/ಬಿ.ಆರ್.ಸಿ/ಎಡಿಪಿಐ) ಆಹಾರ ಧಾನಗಳೊಂದಿಗೆ ಬಳಕೆ ಮಾಡಿರುವ ಹಾಲಿನ ಪುಡಿ ಹಾಗೂ ರಾಗಿ ಹೆಲ್ ಮಿಕ್ಸ್ ಪುಡಿಯ ಖಾಲಿ ಪ್ಯಾಕೆಟ್ ಗಳನ್ನು + ಬಳಕೆ ಮಾಡದೆ ಇರುವ ಪ್ಯಾಕೆಟ್‌ಗಳನ್ನು = ಒಟ್ಟು ದಾಸ್ತಾನಿನಲ್ಲಿರುವ ಹಾಲಿನ ಪುಡಿ ಪ್ಯಾಕೆಟ್‌ಗಳಿಗೆ ತಾಳೆ ಮಾಡತಕ್ಕದ್ದು. ಸಹಾಯಕ ನಿರ್ದೇಶಕರು ಪ್ರತಿ ಮಾಹೆ ಪ್ರತಿ ಶಾಲೆ/ಎನ್.ಜಿ.ಓ/ಸ್ವಸಹಾಯ ಸಂಘದವರ ಮೇಲ್ಕಂಡ ದಾಸ್ತಾನಿನ ವಿವರ ದಾಖಲೆಯನ್ನು ತಮ್ಮ ಕಛೇರಿಯಲ್ಲಿ ನಿರ್ವಹಿಸುವುದು.

10. ಪ್ರತಿ ತಿಂಗಳ ಅಂತ್ಯಕ್ಕೆ ಹಾಗೂ ಬೇಡಿಕೆ ಸಲ್ಲಿಸುವ ಹಿನ್ನಲೆಯಾಗಿ, ಕ್ಲಸ್ಟರ್ ಹಂತದ ಅನುಷ್ಠಾನಧಿಕಾರಿಗಳ ಸಹಯೋಗದೊಂದಿಗೆ ಸಹಾಯಕ ನಿರ್ದೇಶಕರು ಕಡಾಯವಾಗಿ ಎನ್.ಜಿ.ಓ/ಸ್ವಸಹಾಯ ಸಂಘ ಭೇಟಿ ನೀಡಿ ದಾಸ್ತಾನನ್ನು ಪರಿಶೀಲಿಸಿ ಪೂರೈಕೆ ಆದ ದಾಸ್ತಾನು ಹಾಗೂ ಉಳಿಕೆ ಆಗಿರುವ ದಾಸ್ತಾನು ಮತ್ತು ಬಳಕೆ ಮಾಡಿ ಖಾಲಿ ಇಟ್ಟಿರುವ ಪ್ಯಾಕೇಟ್‌ಗಳ ಸಂಖ್ಯೆಗೆ ತಾಳೆ ಆಗುತ್ತಿದೆ ಎಂದು ದೃಢೀಕರಿಸಿಕೊಳ್ಳಬೇಕು. ಖಾಲಿ ಆಗಿರುವ ಪ್ಯಾಕೇಟ್‌ಗಳ ಮೇಲೆ ನಮೂದಿಸಿದ ಸಂಖ್ಯೆ ಮತ್ತು ವಿವರಗಳನ್ನು ಪರಿಶೀಲಿಸಿ ವಿಲೇ ಮಾಡಲು ಲಿಖಿತವಾಗಿ ವಿವರಗಳನ್ನು ನಮೂದಿಸಿ ಅನುಮತಿ ನೀಡಿ, ಜಿಲ್ಲಾ ಕಛೇರಿಗೆ ವರದಿ ನೀಡುವುದು.

11. ಶಾಲೆ/ಎನ್.ಜಿ.ಓ/ಸ್ವಸಹಾಯ ಸಂಘಗಳಿಗೆ ಸ್ವೀಕರಿಸಿದ 1/10,2/10 (ದಿನಾಂಕ ದಿನಾಂಕ/ದಾಸ್ತಾನಿನ ಕ್ರಮ ಸಂಖ್ಯೆಗಳಂತೆ

( ದಿನಾಂಕ:_______ಕ್ರಮ ಸಂಖ್ಯೆ 1/10,2/10______ಗಳಂತೆ ಕ್ರಮ ಸಂಖ್ಯೆವಾರು (FIFO) ಬಳಕೆ ಮಾಡುವಂತೆ ತಿಳುವಳಿಕೆ ನೀಡತಕ್ಕದ್ದು.

ಶಾಲಾ /ಎನ್.ಜಿ.ಓ/ಸ್ವಸಹಾಯ ಸಂಘಗಳ ಹಂತದಲ್ಲಿ ಹಾಲಿನ ಪುಡಿ ದಾಸ್ತಾನು ಸ್ವೀಕೃತಿ, ನಿರ್ವಹಣೆ ಹಾಗೂ ಬಳಕೆಯ ಕ್ರಮಗಳು.

ಬಳಕೆಯ ಕ್ರಮಗಳು”

ಶಾಲಾ /ಎನ್.ಜಿ.ಓ/ಸ್ವಸಹಾಯ ಸಂಘಗಳ ಹಂತದಲ್ಲಿ ಹಾಲಿನ ಪುಡಿ ದಾಸ್ತಾನು ಸ್ವೀಕೃತಿ, ನಿರ್ವಹಣೆ ಹಾಗೂ

1. ಹಾಲಿನ ಪುಡಿ ಹಾಗೂ ರಾಗಿ ಹೆಲ್ ಮಿಕ್ಸ್ ಪುಡಿಯನ್ನು ಸ್ವೀಕರಿಸುವಾಗ ಇಲಾಖೆಯ ಪ್ರತಿನಿಧಿಗಳ ಸಮಕ್ಷಮದಲ್ಲಿ ಸಲ್ಲಿಸಿರುವ ಬೇಡಿಕೆಗೆ ಅನುಗುಣವಾಗಿ ದಾಸ್ತಾನಿನ ಪ್ರಮಾಣ ಮತ್ತು ಗುಣಮಟ್ಟ ಪರಿಶೀಲಿಸಿ ಸ್ವೀಕರಿಸತಕ್ಕದ್ದು.

2. ಪೂರೈಸಲಾಗುತ್ತಿರುವ ಪ್ರಮಾಣಕ್ಕೂ ರಶೀದಿಯಲ್ಲಿ ನಮೂದಿಸಿರುವ ದಾಸ್ತಾನಿಗೂ ತಾಳೆ ಆಗುತ್ತಿರುವ ಬಗ್ಗೆ ಪರಿಶೀಲಿಸಿದ ನಂತರವೇ ಸ್ವೀಕರಿಸತಕ್ಕದ್ದು.

3. ಯಾವುದೇ ಸಂದರ್ಭದಲ್ಲಿ ಪೂರೈಕೆ ಮಾಡುತ್ತಿರುವ ಸಾಗಾಣಿಕೆ ಗುತ್ತಿಗೆದಾರರಿಗೆ ಸಾಮಗ್ರಿಗಳನ್ನು ಮರಳಿ ನೀಡತಕ್ಕದ್ದಲ್ಲ. ಹೆಚ್ಚುವರಿಯಾಗಿದೆ ಎಂದು ಭಾವಿಸಿ ಆಗಲಿ ಅಥವಾ ದಾಸ್ತಾನು ಇದೆ ಎಂಬ ಕಾರಣಕ್ಕಾಗಲಿ ಮತ್ತು ಇತರೆ ಕಾರಣಕ್ಕಾಗಲಿ ಸಾಗಾಣಿಕಾ ಗುತ್ತಿಗೆದಾರರಿಗೆ ಹಾಲಿನ ಪುಡಿ/ ಇತರೆ ಸಾಮಗ್ರಿಗಳನ್ನು ಮರಳಿ ನೀಡತಕ್ಕದ್ದಲ್ಲ.

4. ಹೆಚ್ಚುವರಿ ದಾಸ್ತಾನು ಪೂರೈಕೆ ಆಗಿದ್ದಲ್ಲಿ ಅಥವಾ ಭೌತಿಕ ದಾಸ್ತಾನು ಹೆಚ್ಚಿನ ಪ್ರಮಾಣ ಉಳಿದಲ್ಲಿ ಈ ಬಗ್ಗೆ ಲಿಖಿತವಾಗಿ ತಾಲೂಕಿನ ಸಹಾಯಕ ನಿರ್ದೇಶಕರಿಗೆ ಕಡ್ಡಾಯವಾಗಿ ವರದಿ ಮಾಡತಕ್ಕದ್ದು.

ಸ್ವೀಕರಿಸಿದ ಹಾಲಿನ ಪುಡಿ ಹಾಗೂ ರಾಗಿ ಹೆಲ್ ಮಿಕ್ಸ್ ಪುಡಿಯ ಪ್ಯಾಕೇಟ್ ಗಳ ಮೇಲೆ ಮುಖ್ಯಶಿಕ್ಷಕರು ದಾಸ್ತಾನು ಸ್ವೀಕರಿಸಿದ ತಕ್ಷಣವೇ ಪ್ಯಾಕೇಟ್‌ಗಳ ಮೇಲೆ ಕಡ್ಡಾಯವಾಗಿ PERMANENT MARKER ಅಳಿಸಲಾಗದ ಶಾಯಿ)ಯಿಂದ ನಮೂದಿಸಿ, ಅದರಂತೆ ಬಳಸುವ ಸಂದರ್ಭದಲ್ಲಿ ಬಳಸಿದ ಪ್ಯಾಕೇಟ್ ಮೇಲೆ ‘ 0’ (ಶೂನ್ಯ) ಗುರುತು ಮಾಡುವುದು, ಸಂಸ್ಥೆಯ ಹೆಸರು ಪೂರೈಕೆ ಮಾಡಿದ ದಿನಾಂಕ ಮತ್ತು ದಾಸ್ತಾನಿನ ವಿವರ ಕಡ್ಡಾಯವಾಗಿ ನಮೂದಿಸತಕ್ಕದ್ದು. ದಾಸ್ತಾನು ವಹಿಯಲ್ಲಿ ಈ ಕೆಳಗಿನ ವಿವರಗಳನ್ನು ತಪ್ಪದೇ ನಮೂದಿಸಲು ತಿಳಿಸಿದೆ.

5. ಶಾಲೆ/ಎನ್.ಜಿ.ಓ/ಸ್ವಸಹಾಯ ಸಂಘಗಳು ಸ್ವೀಕರಿಸಿ ದಿನಾಂಕ/ದಾಸ್ತಾನಿನ ಕ್ರಮಸಂಖ್ಯೆಗಳಂತೆ (ದಿನಾಂಕ______ಕ್ರಮ ಸಂಖ್ಯೆ 1/10,2/10________ಗಳಂತೆ ಕ್ರಮ ಸಂಖ್ಯೆವಾರು (FIFO) ಬಳಕೆ ಮಾಡತಕ್ಕದ್ದು.

6. ಶಾಲೆ/ಎನ್.ಜಿ.ಓ/ಸ್ವಸಹಾಯ ಸಂಘದವರು ಬಳಕೆ ಮಾಡಿದ ಹಾಲಿನ ಪ್ಯಾಕೇಟ್‌ನ್ನು ಕಡ್ಡಾಯವಾಗಿ ಸಹಾಯಕ ನಿರ್ದೇಶಕರು ಅನುಮತಿ ಪಡೆದ ನಂತರವೇ ವಿಲೇ ಮಾಡತಕ್ಕದ್ದು. ಅಲ್ಲಿಯವರೆಗೆ ಅವುಗಳನ್ನು ಸಂರಕ್ಷಿಸಿ ಇಡತಕ್ಕದ್ದು.

7. ಸ್ವೀಕರಿಸಿದ ದಾಸ್ತಾನನ್ನು ಮುಕ್ತಾಯದ ಅವಧಿಯ ಆಧಾರದ ಮೇಲೆ ಪ್ಯಾಕೇಟ್ ಅಥವಾ ಬ್ಯಾಗ್ ಮೇಲೆ ಕ್ರಮ ಸಂಖ್ಯೆಯನ್ನು FIFO/FEFO ಆಧಾರದ ಮೇಲೆ ಹೊಂದಿಸಿ ಇಡತಕ್ಕದ್ದು. ಪರಿಶೀಲನೆ ವೇಳೆಗೆ ಗೊಂದಲವಾಗದಂತೆ ಹಾಗೂ ಸರಳವಾಗಿ ದಾಸ್ತಾನು ಲೆಕ್ಕಕ್ಕೆ ಅನುಕೂಲವಾಗುವಂತೆ ಸಂರಕ್ಷಣೆ ಮಾಡಿ ಇಡತಕ್ಕದ್ದು.

8. ದಾಸ್ತಾನು ಮಾಡುವ ಸಂದರ್ಭದಲ್ಲಿ ಹಾಲಿನ ಪುಡಿ ಹಾಗೂ ರಾಗಿ ಹೆಲ್ ಮಿಕ್ಸ್ ಪುಡಿಯ ಗುಣಮಟ್ಟ ಕಡಿಮೆ ಆಗದಂತೆ/ ಕೆಡದಂತೆ ಆಹಾರ ಭದ್ರತಾ ಕಾಯ್ದೆಯಡಿ ನಿಯಮಾನುಸಾರ ಸಂರಕ್ಷಿಸಿ ನಿರ್ವಹಿಸುವುದು ಸಂಸ್ಥೆಯ ಮುಖ್ಯಸ್ಥರ ಜವಾಬ್ದಾರಿ ಆಗಿರುತ್ತದೆ.

ವಿವಿಧ ಹಂತದಲ್ಲಿ ನಿರ್ವಹಣೆ ಮಾಡಬೇಕಾದ ಕ್ರಮಗಳನ್ನು ಈ ಸುತ್ತೋಲೆ ಮೂಲಕ ತಿಳಿಸಲಾಗಿದೆ. ಕಡ್ಡಾಯವಾಗಿ ಅನುಷ್ಠಾನಾಧಿಕಾರಿಗಳು ಕಾಲಕಾಲಕ್ಕೆ ಪರಿಶೀಲಿಸಿ “ ಯೋಜನೆಯ ಸದುದ್ದೇಶವನ್ನು ಸಫಲವಾಗುವಂತೆ ಕ್ರಮವಹಿಸತಕ್ಕದ್ದು. ನಿರ್ಲಕ್ಷ್ಯ ತೋರಿದ್ದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು, ಶಾಲಾ/ಸಂಸ್ಥೆಯ ಮುಖ್ಯಸ್ಥರ ವಿರುದ್ಧ ಶಿಸ್ತು ಕ್ರಮಕ್ಕೆ ಹಾಗೂ NGO ಸಂಸ್ಥೆಯ ವಿರುದ್ಧ ನಿಯಮಾನುಸಾರ ಕ್ರಮಕೈಗೊಳ್ಳಲಾಗುವುದು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

Ksheera Bhagya Scheme

 

CLICK HERE TO DOWNLOAD GUIDELINES

 

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

You cannot copy content of this page

error: Content is protected !!
Scroll to Top