ಬ್ರಿಟಿಷ್ ಆಡಳಿತದ ಶೈಕ್ಷಣಿಕ ನೀತಿ ಮತ್ತು ಬೆಳವಣಿಗೆ

ಬ್ರಿಟಿಷ್ ಆಡಳಿತದ ಶೈಕ್ಷಣಿಕ ನೀತಿ ಮತ್ತು ಬೆಳವಣಿಗೆ

ಬ್ರಿಟಿಷ್ ಆಡಳಿತದ ಶೈಕ್ಷಣಿಕ ನೀತಿ ಮತ್ತು ಬೆಳವಣಿಗೆ: ಬ್ರಿಟಿಷರ ಆಳ್ವಿಕೆಯ ಪರಿಣಾಮ ಮತ್ತು ಅವರ ಸಂಪರ್ಕದಿಂದಾಗಿ ಪಾಶ್ಚಿಮಾತ್ಯ ಶಿಕ್ಷಣದ ಪರಿಚಯ ಭಾರತೀಯರಿಗೆ ಆಯಿತು. ಜೊತೆಗೆ ವನಿನಿಕ ವಿಚಾರವನ್ನು ತಿಳಿಯುವಂತಾಯಿತು. ಬ್ರಿಟಿಷ್ ಪೂರ್ವಕಾಲದಲ್ಲಿಯೂ ಭಾರತದಲ್ಲಿ ಶಿಕ್ಷಣ ಪದ್ಧತಿ ಜಾರಿಯಲ್ಲಿತ್ತು. ಮುಖ್ಯವಾಗಿ ಸಂಸ್ಕೃತ ಭಾಷೆಯಲ್ಲಿ ಉನ್ನತ ಶಿಕ್ಷಣವನ್ನು ಕೊಡಲಾಗುತ್ತಿತ್ತು.

ಈ ಕಾಲದಲ್ಲಿ ಹೆಚ್ಚಾಗಿ ಧಾರ್ಮಿಕ ವಿಚಾರಗಳನ್ನು ಭೋಧಿಸಲಾಗುತ್ತಿತ್ತು. ಆದರೆ ವಿದ್ಯೆ ಸಾರ್ವತ್ರಿಕವಾಗಿರದೇ ಕೆಲವೇ ವ್ಯಕ್ತಿಗಳಿಗೆ ಸೀಮಿತವಾಗಿತ್ತು. ಬ್ರಾಹ್ಮಣರು ವಿಧ್ಯಾಭ್ಯಾಸವನ್ನು ಪಡೆಯುವ ಸಂಪೂರ್ಣ ಏಕಸ್ವಾಮ್ಯವನ್ನು ಹೊಂದಿದ್ದರು ಆದರೆ ಮುಸ್ಲಿಮರಲ್ಲಿ ಈ ರೀತಿಯ ಯಾವುದೇ ಏಕಸ್ವಾಮ್ಯತೆಯನ್ನು ಹೊಂದದೆ ಉನ್ನತ ಶಿಕ್ಷಣ ಸಾರ್ವತ್ರಿಕವಾಗಿತ್ತು. ಎಲ್ಲಾ ಮುಸ್ಲಿಮರಿಗೂ ಮದರಸಗಳಲ್ಲಿ ಧಾರ್ಮಿಕ ಶಿಕ್ಷಣವನ್ನು ಪಡೆಯಲು ಅವಕಾಶವಿತ್ತು. ಉನ್ನತ ವಿಧ್ಯಾಭ್ಯಾಸವನ್ನು ಅರಾಬಿಕ್ ಭಾಷೆಯಲ್ಲಿ ನೀಡಲಾಗುತ್ತಿತ್ತು. ಬ್ರಿಟಿಷ್ ಪೂರ್ವಕಾಲದ ವಿಧ್ಯಾಭ್ಯಾಸವು ತರ್ಕಸಮ್ಮತವಾದ ಮತ್ತು ವ್ಯಕ್ತಿ ವಿಕಾಸಕ್ಕೆ ಬೇಕಾದ ವಿಚಾರಗಳನ್ನು ತುಂಬದೇ ವಿಧ್ಯಾರ್ಥಿಗಳನ್ನು ಕಟ್ಟಾ ಹಿಂದೂ ಅಥವಾ ಮುಸ್ಲಿಮರನ್ನಾಗಿಸಿತು.

ಆಧುನಿಕ ಮಾದರಿಯ ಶಿಕ್ಷಣವನ್ನು ಭಾರತದ ಚರಿತ್ರೆಯಲ್ಲಿ ಪರಿಚಯಿಸಿದ್ದು ಭಾರತದ ಚರಿತ್ರೆಯಲ್ಲಿ ಮಹತ್ವದ ಘಟನೆ. ಇದು ಬ್ರಿಟಿಷ್ ಆಡಳಿತದ ಪ್ರಗತಿಪರ ಕಾಯಿದೆಗಳ ಪ್ರಭಾವ. ಈಸ್ಟ್ ಇಂಡಿಯಾ ಕಂಪನಿ ಆಡಳಿತವನ್ನು ಆರಂಭಿಸಿದಾಗ ಯಾವುದೇ ಬದಲಾವಣೆಯನ್ನು ತರದೆ ಹಿಂದಿನ ಪದ್ದತಿಯನ್ನೇ ಮುಂದುವರಿಸಿಕೊಂಡು ಹೋಯಿತು.

ಭಾರತದಲ್ಲಿ ಆಧುನಿಕ ಶಿಕ್ಷಣ ಪ್ರಚಾರವಾಗಲು ವಿದೇಶಿ ಕ್ರೈಸ್ತ ಮಿಷನರಿಗಳು, ಬ್ರಿಟಿಷ್ ಸರ್ಕಾರ ಮತ್ತು ಪ್ರಗತಿಪರ ಭಾರತೀಯ ಚಿಂತಕರು ಪ್ರಮುಖ ಕಾರಣ. ಬ್ರಿಟಿಷ್ ಸರ್ಕಾರ ಉದಾರವಾಗಿ ಆಧುನಿಕ ಮಾದರಿಯ ಶಿಕ್ಷಣವನ್ನು ಪ್ರಚಾರ ಮಾಡಲು ಶಾಲಾ, ಕಾಲೇಜುಗಳ ಜಾಲವನ್ನೇ ಆರಂಭಿಸಿದರು. ಮೂಲಭೂತವಾಗಿ ಭಾರತದಲ್ಲಿ ಆಧುನಿಕ ಶಿಕ್ಷಣ ಪದ್ಧತಿಯನ್ನು ಬ್ರಿಟಿಷರು ಆರಂಭಿಸಲು ಹಲವಾರು ಕಾರಣಗಳಿದ್ದವು. ಅವರು ಭಾರತದಲ್ಲಿ ಆಡಳಿತ ವಿಸ್ತರಣೆ ಮತ್ತು ಸಂಘಟನೆಯನ್ನು ಆರಂಭಿಸಿದಾಗ ಆಡಳಿತದ ಅನುಕೂಲ ದೃಷ್ಟಿಯಿಂದ ಹೆಚ್ಚಿನ ಸಂಖ್ಯೆಯ ವಿದ್ಯಾವಂತ ನೌಕರರು ಬೇಕಾಗಿತ್ತು. ಬ್ರಿಟನ್ನಿನಿಂದಲೇ ಆಡಳಿತ ನಡೆಸಲು ಬೇಕಾದ ನೌಕರರನ್ನು ಕರೆತರುವುದು ಕಷ್ಟದ ಕೆಲಸವಾಗಿತ್ತು. ಜೊತೆಗೆ ದುಬಾರಿಯಾಗಿತ್ತು. ಈ ಒಂದು ಕಾರಣದಿಂದ ಬ್ರಿಟಿಷ್ ಸರ್ಕಾರ ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಶಾಲಾ, ಕಾಲೇಜುಗಳನ್ನು ತೆರೆದು ಜನರಿಗೆ ವಿದ್ಯಾಭ್ಯಾಸವನ್ನು ಕೊಟ್ಟು ಆಡಳಿತ ಸೇವೆಗಳಲ್ಲಿ ಹೆಚ್ಚಿನ ಜನರನ್ನು ತೊಡಗಿಸಿಕೊಳ್ಳುವ ಉದ್ದೇಶದಿಂದ ವಿದ್ಯಾಭ್ಯಾಸವನ್ನು ಆರಂಭಿಸಬೇಕಾಗಿತ್ತು. ಜೊತೆಗೆ ಬ್ರಿಟಿಷರ ವ್ಯಾಪಾರ, ವಾಣಿಜ್ಯ, ಕೈಗಾರಿಕೆಗಳು ಭಾರತದಲ್ಲಿ ಬೆಳವಣಿಗೆ ಹೊಂದಲಾರಂಭಿಸಿದ್ದರಿಂದಾಗಿ ಬ್ರಿಟಿಷರಿಗೆ ಇಂಗ್ಲಿಷ್‌ನ ಹೊಂದಿರುವ ಗುಮಾಸ್ತರು, ವ್ಯವಸ್ಥಾಪಕರುಗಳು ಅವಶ್ಯಕವಾಯಿತು.

ಇಂಗ್ಲಿಷ್ ವಿದ್ಯಾಭ್ಯಾಸವನ್ನು ಭಾರತದಲ್ಲಿ ಆರಂಭಿಸಲು ಬ್ರಿಟಿಷ್ ರಾಜನೀತಿರು ಪ್ರೋತ್ಸಾಹಿಸಿದರು. ಬ್ರಿಟಿಷರ ಸಂಸ್ಕೃತಿಯು ವಿಶ್ವದಲ್ಲಿಯೇ ಶ್ರೇಷ್ಟವಾದುದು ಹಾಗೂ ಉದಾರವಾದುದಾಗಿದೆ ಆದುದರಿಂದ ಅದನ್ನು ಹರಡುವುದು ಮುಖ್ಯವೆಂಬುದು ಇವರ ಅಭಿಪ್ರಾಯವಾಗಿತ್ತು. ಭಾರತದಲ್ಲಿ ಪಾಶ್ಚಿಮಾತ್ಯ ಶಿಕ್ಷಣವನ್ನು ಇಂಗ್ಲಿಷ್ ಮಾಧ್ಯಮದ ಮೂಲಕ ನೀಡಬೇಕೆಂದು ರಾಜಾರಾಮ್ ಮೋಹನ್‌ರಾಯ್ ಮತ್ತು ತಿರುವನಂತಪುರದ ಕೇಶವದಾಸರಂತಹ ಪ್ರಗತಿಪರ ಭಾರತೀಯರು ಹೆಚ್ಚಿನ ಒಲವನ್ನು ಹೊಂದಿದ್ದರು. ಈ ಒಂದು ಹಿನ್ನೆಲೆಯಲ್ಲಿ ಹಲವಾರು ಸಾಮಾಜಿಕ ಧಾರ್ಮಿಕ ಸಂಸ್ಥೆಗಳು, ಆಧುನಿಕ ಶಿಕ್ಷಣವನ್ನು ಪ್ರಚಾರ ಮಾಡಲು ಆರಂಭಿಸಿದವು. ಮೇಲಿನ ಈ ಎಲ್ಲಾ ಅಂಶಗಳು ಭಾರತದಲ್ಲಿ ಆಧುನಿಕ ಶಿಕ್ಷಣ ಪದ್ಧತಿಯ ಆರಂಭಕ್ಕೆ ನಾಂದಿಯಾಯಿತು. ಆದ್ದರಿಂದ ಈ ಆಧುನಿಕ ಶಿಕ್ಷಣ ಪದ್ಧತಿ ಭಾರತದಲ್ಲಿ ಹೇಗೆ ಹಂತ, ಹಂತವಾಗಿ ಬೆಳವಣಿಗೆ ಹೊಂದಲಾರಂಭಿಸಿತು ಇದಕ್ಕೆ ಸರ್ಕಾರ ಯಾವ ರೀತಿಯಲ್ಲಿ ಪ್ರೋತ್ಸಾಹವನ್ನು ಕೊಟ್ಟಿತು ಎಂಬುದನ್ನು ತಿಳಿಯುವುದು ಸೂಕ್ತ.

ವಾರನ್ ಹೇಸ್ಟಿಂಗ್ಸ್ ಭಾರತದ ಶಿಕ್ಷಣ ಅಭಿವೃದ್ಧಿಗೆ ಪ್ರೋತ್ಸಾಹಿಸಿ ಕಲ್ಕತ್ತಾದಲ್ಲಿ ಮದರಸವನ್ನು ಆರಂಭಿಸಿದ. ಇದರಿಂದ ಸ್ಫೂರ್ತಿಪಡೆದ ವಿಲಿಯಂ ಜೋನ್ಸ್ 1784ರಲ್ಲಿ ಕಲ್ಕತ್ತಾದಲ್ಲಿ ಏಷಿಯಾಟಿಕ್ ಸೊಸೈಟಿ ಆಫ್ ಬೆಂಗಾಳನ್ನು ಸ್ಥಾಪಿಸಿದರು. ಜೋನಾಥ್‌ನು 1791ರಲ್ಲಿ ಬನಾರಸ್ಸಿನಲ್ಲಿ ಸಂಸ್ಕೃತ ಕಾಲೇಜನ್ನು ಸ್ಥಾಪಿಸಿದ. ಭಾರತೀಯರಿಗೆ ಇಂಗ್ಲಿಷ್ ಶಿಕ್ಷಣವನ್ನು ಭೋದಿಸಲು ಶಾಲೆಗಳನ್ನು ತೆರೆಯುವ ವಿಚಾರವನ್ನು ಪ್ರಸ್ತಾಪಿಸಿದವನು ಕೋರ್ಟ್ ಆಫ್ ಡೈರೆಕ್ಟರಿನ ಸದಸ್ಯ ಚಾರ್ಲ್ಸ್ ಗ್ರಾಂಟ್: ಇಂಗ್ಲಿಷ್ ಶಿಕ್ಷಣವನ್ನು ಕೊಡುವುದರಿಂದ ಭಾರತೀಯರಲ್ಲಿರುವ ಜಾನ, ಅಂಧಕಾರವನ್ನು ತೊಡೆದು ಹಾಕಬಹುದು ಎಂಬುದಾಗಿ ಅಭಿಪ್ರಾಯ ಹೊಂದಿದ್ದ. ಆದರೆ ಗ್ರಾಂಟನ ಪ್ರಯತ್ನಗಳು ವಿಫಲವಾದವು.

ಆದರೆ ಕ್ರೈಸ್ತ ಮಿಷನರಿಗಳು ಅದನ್ನು ಕಂಪನಿ ಸರ್ಕಾರಕ್ಕೆ ಆಗಾಗ್ಗೆ ಒತ್ತಡ ಹಾಕಿದ್ದರಿಂದ ಇಂಗ್ಲಿಷ್ ವಿದ್ಯಾಭ್ಯಾಸ ಮತ್ತು ಪೌರ್ವಾತ್ಯ ಭಾಷೆಗಳಲ್ಲಿ ಶಿಕ್ಷಣವನ್ನು ನೀಡಲು ಒಪ್ಪಿಕೊಂಡಿತು. ಇದಲ್ಲದೆ ಪಾಶ್ಚಿಮಾತ್ಯ ವಿಾನ ವಿಷಯಗಳ ಬೋಧನೆಗೆ ಆಧ್ಯತೆ ನೀಡಿತು. ಯೂರೋಪಿನ ಮೈನಿಕ ಗ್ರಂಥಗಳನ್ನು ಪೌರ್ವಾತ್ಮ ಭಾಷೆಗಳಿಗೆ ಭಾಷಾಂತರಿಸಲಾಯಿತು.

1813ರ ಚಾರ್ಟರ್ ಕಾಯಿದೆ ಭಾರತದಲ್ಲಿ ಶಿಕ್ಷಣದ ಅಭಿವೃದ್ಧಿಗೆ ಒದಗಿಸಿದ ಹಣವನ್ನು ಪಾಶ್ಚಿಮಾತ್ಯ ವಿದ್ಯಾಭ್ಯಾಸದ ಪ್ರಚಾರಕ್ಕೆ ಉಪಯೋಗಿಸಿಕೊಳ್ಳಬೇಕೆ ಅಥವಾ ಪೌರ್ವಾತ್ಮ ವಿದ್ಯಾಭ್ಯಾಸದ ಅಭಿವೃದ್ಧಿಗೆ ಉಪಯೋಗವಾಗಬೇಕೆ ಎಂಬ ವಿಷಯ ಲಾರ್ಡ್ ವಿಲಿಯಂ ಬೆಂಟಿಕನ ಕಾಲದಲ್ಲಿ ಉದ್ಭವವಾಗಿ ಬ್ರಿಟಿಷರಲ್ಲೇ ಎರಡು ಗುಂಪುಗಳಾಗಿ ಒಂದು ಗುಂಪು ಪೌರ್ವಾತ್ಮ ಭಾಷೆ ಸಾಹಿತಿಗಳ ಗುಂಪು ಎಂತಲೂ ಈ ಗುಂಪು ಸರ್ಕಾರ ಬಿಡುಗಡೆ ಮಾಡಿರುವ ಹಣ ಪೌರ್ವಾತ್ಮ ಭಾಷೆಗಳ ಅಭಿವೃದ್ಧಿಗೆ ಬಳಕೆಯಾಗಬೇಕು ಎಂದು, ಮತ್ತೊಂದು ಗುಂಪು ಪಾಶ್ಚಿಮಾತ್ಮಇನದ ಭೋಧನೆಗೆ ಬಳಕೆಯಾಗಬೇಕೆಂಬ ಅಭಿಪ್ರಾಯ ಹೊಂದಿದ್ದವು.

ಮೊದಲನೆ ಗುಂಪಿನಲ್ಲಿ ಹೋರೆಸ್ ಹಾಗೂ ಸಂಪ್ರದಾಯಸ್ಥ ಹಿಂದೂ, ಮುಸ್ಲಿಮ್ ಪಂಡಿತರು, ಇನ್ನೊಂದು ಗುಂಪಿನಲ್ಲಿ ಅಂಗ್ಲಿಸಿಸ್ಟ್ ಅಥವಾ ಇಂಗ್ಲಿಷ್ ಭಾಷಾ ಸಾಹಿತಿಗಳು ಇದ್ದು ಈ ಗುಂಪಿನಲ್ಲಿ ಮೆಕಾಲೆ ಮತ್ತು ಉದಾರವಾದದ ಪ್ರಭಾವಕ್ಕೆ ಒಳಗಾಗಿದ್ದ ಡಫ್, ರಾಜಾರಾಮ್‌ ಮೋಹನ್‌ ರಾಯ್ ಮುಂತಾದವರು ಇಂಗ್ಲಿಷ್ ಜ್ಞಾನವನ್ನು ಭಾರತೀಯ ಭಾಷೆಗಳ ಮೂಲಕ ಜನಸಾಮಾನ್ಯರಿಗೆ ತಲುಪಬೇಕು ಎನ್ನುವುದು ಈ ಗುಂಪಿನ ವಾದವಾಗಿತ್ತು. ಹೀಗೆ ಆಂಗ್ಲ ಸಿಸ್ಟರು ಮಂಡಿಸಿದ ಈ ಸಿದ್ದಾಂತವನ್ನು ಸೋಸು ಸಿದ್ಧಾಂತವೆಂದು ಕರೆಯುತ್ತಾರೆ. ಮೆಕಾಲೆಯನ್ನು ಶಿಕ್ಷಣ ಮಂಡಳಿಗೆ ಅಧ್ಯಕ್ಷನನ್ನಾಗಿ ನೇಮಿಸುವವರೆವಿಗೂ ಈ ವಿಷಯದಲ್ಲಿ ಒಂದು ನಿರ್ಧಿಷ್ಟವಾದ ನೀತಿ ರೂಪುಗೊಂಡಿರಲಿಲ್ಲ ಮೆಕಾಲೆಗೆ ಪಾಶ್ಚಿಮಾತ್ಯ ನಾಗರಿಕತೆಯ ಹಿರಿಮೆಯ ಬಗ್ಗೆ ಹಾಗೂ ಇಂಗ್ಲಿಷ್ ಭಾಷೆಯ ಮೌಲ್ಯದ ಬಗ್ಗೆ ಅವನಿಗೆ ಅಚಲವಾದ ನಂಬಿಕೆ ಇತ್ತು.

1835ರ ಫೆಬ್ರವರಿ 2 ರಂದು ಮೆಕಾಲೆ ಶಿಕ್ಷಣ ನೀತಿಗೆ ಸಂಬಂಧಿಸಿದ ಟಿಪ್ಪಣಿಯನ್ನು ಸಿದ್ದಪಡಿಸಿ ಕೌನ್ಸಿಲ್ಲಿನ ಮುಂದಿಟ್ಟನು. ಮೆಕಾಲೆಯ ಟಿಪ್ಪಣಿಯು ಇಂಗ್ಲಿಷ್ ಭಾಷೆಯ ಶಿಕ್ಷಣದ ಪ್ರಚಾರಕ್ಕೆ ಅವಕಾಶಕೊಡುವ ವಿಚಾರದ ಪರವಾಗಿತ್ತು. ಮೆಕಾಲೆಯ ವರದಿಯು ಭಾರತೀಯ ಶಿಕ್ಷಣದ ಅಭಿವೃದ್ಧಿಗೆ ಹಾಗೂ ಪಾಶ್ಚಿಮಾತ್ಯ ಶಿಕ್ಷಣವನ್ನು ಪ್ರಚಾರ ಮಾಡುವ ವಿಚಾರವಾಗಿ ಬೆಂಟಿಂಕನ ಮನವನ್ನು ಗೆದ್ದು ಪಾಶ್ಚಿಮಾತ್ಮ ಶಿಕ್ಷಣವನ್ನು ಜಾರಿಗೆ ತಂದನು. ಇದು ಭಾರತದಲ್ಲಿ ಆಧುನಿಕ ಶಿಕ್ಷಣದ ಆರಂಭಕ್ಕೆ ಬುನಾದಿ ಹಾಕಿತು. ಧರ್ಮಪ್ರಚಾರ ಕಾರ್ಯವನ್ನು ಸುಲಭಗೊಳಿಸಲು ಮದ್ರಾಸ್ ಮತ್ತು ಬಂಗಾಳಗಳಲ್ಲಿ ಮಿಷನರಿ ಶಾಲೆಗಳನ್ನು ವಿಲಿಯಂ ಕ್ಯಾರಿ ಮತ್ತು ಬ್ಯಾಪ್ಟಿಸ್ಟ್ ಸಂಸ್ಥೆಗಳು ಆರಂಭಿಸಿದವು.

1800ರಲ್ಲಿ ಲಾರ್ಡ್ ವೆಲ್ಲಸ್ಲಿ ಪೋರ್ಟ್ ವಿಲಿಯಂ ಕಾಲೇಜನ್ನು ಆರಂಭಿಸಿದ. ಇದು ಹಿಂದೂಸ್ತಾನಿ ಮತ್ತು ಇಂಗ್ಲಿಷ್ ಪದಕೋಶವನ್ನು ಪ್ರಕಟಿಸಿತು. 1813ರ ಚಾರ್ಟರ್ ಕಾಯಿದೆಯಲ್ಲಿ ಇಂಗ್ಲೆಂಡಿನ ಸಂಸತ್ತು ಭಾರತೀಯರಿಗೆ ವಿದ್ಯಾಭ್ಯಾಸದ ಸೌಲಭ್ಯವನ್ನು ನೀಡುವ ಸಲುವಾಗಿ 1 ಲಕ್ಷ ರೂಪಾಯಿ ಬಿಡುಗಡೆ ಮಾಡಿತು. ಭಾರತೀಯರಿಗೆ ಇಂಗ್ಲಿಷ್ ಮತ್ತು ದೇಶೀಯ ಭಾಷೆಯಲ್ಲಿ ಶಿಕ್ಷಣ ಕೊಡುವುದರಿಂದ ಕಂಪನಿಯ ಆಡಳಿತದಲ್ಲಿ ಸುಧಾರಣೆ ಕಂಡುಬಂದು ನ್ಯಾಯಾಡಳಿತ ಮತ್ತು ಕಂದಾಯ ಇಲಾಖೆಯ ಆಡಳಿತವನ್ನು ಸುಧಾರಿಸಲು ಇಂಗ್ಲಿಷ್ ಮತ್ತು ದೇಶೀಯ ಭಾಷೆ ಬರುವವರನ್ನು ನೇಮಿಸುವುದರಿಂದ ಆಡಳಿತ ದೋಷಗಳನ್ನು ನಿವಾರಿಸಿ ಜನರೊಂದಿಗೆ ಒಳ್ಳೆಯ ಸಂಪರ್ಕವನ್ನು ಹೊಂದಬಹುದು ಎಂಬ ಅಭಿಪ್ರಾಯವಿತ್ತು.

ಶಿಕ್ಷಣವನ್ನು ಕೊಡುವುದರಿಂದ ದೇಶವನ್ನು ಅಂಧಕಾರದಲ್ಲಿ ಮುಳುಗಿಸಿದಂತಾಗುತ್ತದೆ, ಅದಕ್ಕೆ ಬದಲಾಗಿ ಜೀವನಕ್ಕೆ ಹತ್ತಿರವಾದ ಗಣಿತಶಾಸ್ತ್ರ, ಉಸಾಯನಶಾಸ್ತ್ರ, ಅಂಗರಚನಾ ಶಾಸ್ತ್ರ ಮತ್ತು ಇನ್ನಿತರ ವಿಷಯಗಳ ಜ್ಞಾನವನ್ನು ಪಡೆಯಲು ಸರ್ಕಾರ ಉದಾರವಾಗಿ ಸಹಾಯ ಮಾಡುವಂತೆ ಕೋರಿದರು. 1823ರಲ್ಲಿ ಬಂಗಾಳದಲ್ಲಿ ಸಾರ್ವಜನಿಕ ಶಿಕ್ಷಣಕ್ಕಾಗಿ ಒಂದು ಸಮಿತಿ ರಚನೆಗೊಂಡಿತು ಮತ್ತು ಒಂದು ಸಂಸ್ಕೃತ ಕಾಲೇಜನ್ನು ಸ್ಥಾಪಿಸಲು ಸರ್ಕಾರ ಮುಂದಾಯಿತು.

ಆಗ ರಾಜಾರಾಮ್ ಮೋಹನ್‌ ರಾಯರು ತಮ್ಮ ವಿರೋಧವನ್ನು ಲಾರ್ಡ್ ಆಮ್‌ ಹರ್ಸ್ಟ್ನಿಗೆ ಒಂದು ಮನವಿಯ ಮೂಲಕ ವ್ಯಕ್ತಪಡಿಸಿದರು. ಆ ಮನವಿ ಈ ಕೆಳಕಂಡಂತಿತ್ತು “ಇಲ್ಲಿಯ ವಿದ್ಯಾರ್ಥಿಗಳು ಎರಡು ಸಾವಿರ ವರ್ಷಗಳ ಹಿಂದೆ ಏನು ಬಲ್ಲವರಾಗಿದ್ದರೋ ಅದನ್ನಷ್ಟೇ ಕಲಿಯುವರು, ಬ್ರಿಟಿಷ್ ಶಾಸಕಾಂಗ ನೀತಿ ಭಾರತವನ್ನು ಸಂಪೂರ್ಣವಾಗಿ ಅಂಧಕಾರದಲ್ಲಿಡಬೇಕೆಂಬುದೇ ಆಗಿರುವುದಾದರೆ ಸಂಸ್ಕೃತ ಶಿಕ್ಷಣ ಕ್ರಮ ಅತ್ಯುತ್ತಮವಾದುದಾಗಿದೆ.

ಆದರೆ ಸರ್ಕಾರದ ಧೈಯ ಸ್ಥಳೀಯ ಜನತೆಯ ಸುಧಾರಣೆಯಾಗಿರುವುದರಿಂದ ವಿನಿಯೋಗಿಸಲಾಗಿರುವ ಹಣದಿಂದ ಅವಶ್ಯವಾದ ಪುಸ್ತಕಗಳು, ಉಪಕರಣಗಳು, ಸಾಧನಸಲಕರಣೆಗಳನ್ನೊಳಗೊಂಡ ಕಾಲೇಜನ್ನು ಸ್ಥಾಪಿಸಿ ಯೂರೋಪಿನಲ್ಲಿ ಶಿಕ್ಷಣ ಪಡೆದ ಕೆಲವು ತಜ್ಞರನ್ನು ಹಾಗೂ ಪ್ರತಿಭಾವಂತರನ್ನು ನೇಮಿಸಿಕೊಂಡು ಗಣಿತಶಾಸ್ತ್ರ, ರಾಸಾಯನಶಾಸ್ತ್ರ ಹಾಗೂ ಅಂಗರಚನಾಶಾಸ್ತ್ರ ಸೇರಿದಂತೆ ಇತರ ವಿಜ್ಞಾನ ವಿಷಯಗಳನ್ನು ಭೋದಿಸಬೇಕು. “ಡೇವಿಡ್ ಹೇರ್ ಮತ್ತು ರಾಜಾರಾಮ್ ಮೋಹನ್‌ರಾಯರು ಕಲ್ಕತ್ತಾದಲ್ಲಿ 1817ರಲ್ಲಿ ಹಿಂದೂ ಕಾಲೇಜನ್ನು ಆರಂಭಿಸಿದರು. ಇದೇ ಕಾಲೇಜು ಮುಂದೆ ಪ್ರೆಸಿಡೆನ್ಸಿ ಕಾಲೇಜಾಗಿ ಜನಪ್ರಿಯವಾಯಿತು.

ಮೆಕಾಲೆ ತನ್ನ ಟಿಪ್ಪಣಿಯಲ್ಲಿ ಪಾಶ್ಚಿಮಾತ್ಯ ಶಿಕ್ಷಣಕ್ಕೆ ಸಂಬಂಧಿಸಿದ ಹೇಳಿಕೆಯನ್ನು ಮಂಡಿಸಿದ್ದ. ‘ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯ ನಾಶವಾಗಬಹುದು ಆದರೆ ಇಂಗ್ಲೀಷ್ ಸಾಹಿತ್ಯ ಮಾತ್ರ ಶಾಶ್ವತ” ಎಂದು ತಿಳಿಸಿದ್ದಾನೆ.

ಯೂರೋಪಿನ ಪುನರುಜೀವನದ ಮಾದರಿಯನ್ನು ಇಟ್ಟುಕೊಂಡು ಭಾರತೀಯ ಸಮಾಜದಲ್ಲಿದ್ದ ಪೂರ್ವಾಗ್ರಹವನ್ನು ತೊಡೆದುಹಾಕಿ ಜ್ಞಾನದ ಶಾಖೆಗಳನ್ನು ವಿಸ್ತರಿಸುವ ಉದ್ದೇಶವನ್ನು ಮತ್ತು ಕಂಪನಿಯ ಕೆಳದರ್ಜೆಯ ಆಡಳಿತವನ್ನು ನಡೆಸಲು “ಕಂದು ಬಣ್ಣದ” ಇಂಗ್ಲಿಷರನ್ನು ತರಬೇತುಗೊಳಿಸುವ ಉದ್ದೇಶವನ್ನು ಮೆಕಾಲೆ ಹೊಂದಿದ್ದ. ಅವನಿಗೆ ಪೌರ್ವಾತ್ಯ ಸಾಹಿತ್ಯದ ಬಗ್ಗೆ ದುರಾಭಿಮಾನವಿತ್ತು. ಏಕೆಂದರೆ ಒಂದು ಕಪಾಟಿನಷ್ಟು ಇಂಗ್ಲಿಷ್ ಸಾಹಿತ್ಯ ಗ್ರಂಥಗಳಿಗಾಗಿ ಇಡೀ ಪ್ರಾಚ್ಯ ಸಾಹಿತ್ಯವನ್ನು ತ್ಯಾಗಮಾಡಲು ಸಿದ್ಧವಿರುವುದಾಗಿ ಆತ ಹೇಳಿದ.

ಒಟ್ಟಾರೆ ಮೆಕಾಲೆ ಭಾರತೀಯ ಶಿಕ್ಷಣದ ಬಗ್ಗೆ ತಳೆದಿರುವ ನಿಲುವನ್ನು ಪೂರ್ಣವಾಗಿ ಒಪ್ಪಿಕೊಳ್ಳಲಾಗದು. ಮೆಕಾಲೆಯ ಕೆಲವು ಅಭಿಪ್ರಾಯಗಳು ಪೂರ್ವಾಗ್ರಹ ಪೀಡಿತವಾಗಿವೆ. ಪ್ರಾಚೀನ ಭಾರತದ ವೈಜ್ಞಾನಿಕ ಚಿಂತನೆ ಮತ್ತು ಸಾಧನೆಯ ಬಗ್ಗೆ ಆತ ತಿಳಿದುಕೊಂಡಿದ್ದರೆ ಮೇಲಿನ ಅಭಿಪ್ರಾಯಕ್ಕೆ ಬಹುಶಃ ಬರುತ್ತಿರಲಿಲ್ಲವೇನೋ. ಬೆಂಟಿಂಕ್ ಮೆಕಾಲೆಯ ವರದಿಯನ್ನು ಒಪ್ಪಿ ಅದನ್ನು ಜಾರಿಗೆ ತಂದು ಸರ್ಕಾರ ಶಿಕ್ಷಣದ ಅಭಿವೃದ್ಧಿಗೆ ಕೊಡುವ ಹಣ ಇಂಗ್ಲಿಷ್ ಭಾಷೆ ಮತ್ತು ಪಾಶ್ಚಿಮಾತ್ಮ ವಿಜ್ಞಾನದ ಭೋಧನೆಗಾಗಿ ಖರ್ಚು ಮಾಡಲು ನಿರ್ಧರಿಸಲಾಯಿತು. ಭಾರತದಲ್ಲಿ ಶಿಕ್ಷಣ ಮಾಧ್ಯಮ ಇಂಗ್ಲಿಷ್ ಭಾಷೆಯಾಗಿರಬೇಕೆಂಬ ಆಜ್ಞೆಯನ್ನು ಬೆಂಟಿಂಕ್ ಹೊರಡಿಸಿದ. ಉನ್ನತ ಶಿಕ್ಷಣವನ್ನು ಇಂಗ್ಲಿಷ್ ಭಾಷಾ ಮಾಧ್ಯಮದ ಮೂಲಕ ಭೋಧಿಸಲು ಆರಂಭಿಸಲಾಯಿತು ಮತ್ತು ಪ್ರಾಥಮಿಕ ಶಿಕ್ಷಣವನ್ನು ದೇಶೀಯ ಭಾಷೆಯಲ್ಲಿ ಭೋಧಿಸಲಾಯಿತು.

ಲಾರ್ಡ್‌ ವಿಲಿಯಂ ಬೆಂಟಿಂಕ್ 1835ರ ಫೆಬ್ರವರಿಯಲ್ಲಿ ಕಲ್ಕತ್ತದಲ್ಲಿ ಮೊದಲ ಮೆಡಿಕಲ್ ಕಾಲೇಜನ್ನು ಸ್ಥಾಪಿಸುವ ಮೂಲಕ ಓರಿಯಂಟಲಿಸ್ಟರ ಶಕ್ತಿಯನ್ನು ಕುಂದಿಸಲಾಯಿತು. ದೊರೆಯಲಿರುವ ಸಾರ್ವಜನಿಕ ನಿಧಿಯನ್ನು ಇನ್ನು ಮುಂದೆ ಇಂಗ್ಲಿಷ್ ಶಿಕ್ಷಣಕ್ಕಾಗಿ ವ್ಯಯಮಾಡಬೇಕೆಂದು 1835ರ ಮಾರ್ಚ್ 7 ರಂದು ತೀರ್ಮಾನಿಸಲಾಯಿತು. ಸಂಸ್ಕೃತ ಕಾಲೇಜು ಮತ್ತು ಮದ್ರಸ ಮುಂತಾದ ಪ್ರಾಚ್ಯಸಂಸ್ಥೆಗಳ ವಿದ್ಯಾರ್ಥಿಗಳಿಗೆ ಶಿಷ್ಯವೃತ್ತಿ ವೇತನಗಳನ್ನು ಹೊಸದಾಗಿ ನೀಡಬಾರದೆಂದು ಮತ್ತು ಕ್ಲಾಸಿಕಲ್ ಕೃತಿಗಳ ಪ್ರಕಟಣೆಯನ್ನು ನಿಲ್ಲಿಸಬೇಕೆಂದು ತೀರ್ಮಾನಿಸಲಾಯಿತು.

ಸರ್ಕಾರಿ ಇಲಾಖೆಯ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇಮಕ ಮಾಡಬೇಕು ಎಂಬ ಕಾನೂನನ್ನು ಹಾರ್ಡಿಂಜ್ ಜಾರಿಗೆ ತಂದಿದ್ದರಿಂದ ಇಂಗ್ಲಿಷ್ ಭಾಷೆಯ ಬೆಳವಣಿಗೆಗೆ ಮತ್ತು ಜನಪ್ರಿಯತೆಗೆ ಪುಷ್ಟಿ ನೀಡಿತು. ಸ್ಥಳೀಯ ಶಿಕ್ಷಣದ ಬೆಳವಣಿಗೆಯ ಬಗ್ಗೆ ಅಧ್ಯಯನ ಮಾಡಲು ಬೆಂಟಿಂಕ್‌ನು ವಿಲಿಯಂ ಆಡಮ್ಸ್ ಎಂಬುವವನನ್ನು ನೇಮಿಸಿದ.

ಈತನ ವರದಿಯು ದೇಶೀಯ ಭಾಷಾ ಶಾಲೆಗಳ ದುಸ್ಥಿತಿ, ಜನತೆಯ ಮನಸ್ಸಿನಲ್ಲಿ ಮೂಡಿದ್ದ ಮೂಡನಂಬಿಕೆ ಮತ್ತು ಅಜ್ಞಾನ ಮುಂತಾದ ಅಂಶಗಳನ್ನು ವಿವರಿಸಿತು. ಈ ಅವಧಿಯಲ್ಲಿ ದೇಶೀಯ ಭಾಷಾ ಶಿಕ್ಷಣಕ್ಕೆ ಗಮನಾರ್ಹವಾದ ಪ್ರೋತ್ಸಾಹ ದೊರೆಯಲಿಲ್ಲ. ಒಟ್ಟಿನಲ್ಲಿ ಮಧ್ಯಮ ವರ್ಗದ ಜನರು ಇಂಗ್ಲಿಷ್ ವಿದ್ಯಾಭ್ಯಾಸದ ಪ್ರಯೋಜನ ಪಡೆದುಕೊಂಡರು. ಇಂಗ್ಲಿಷ್ ಶಿಕ್ಷಣ ಕೆಲವರಿಗೆ ಮಾತ್ರವೇ ಸೀಮಿತವಾಗಿದ್ದರೂ ಅದರಿಂದ ಅಮೂಲ್ಯ ಫಲಿತಾಂಶಗಳು ಹೊರಬಂದವು.

ಅಲ್ಲದೆ ಅದು ಇಂಗ್ಲೆಂಡಿನ ಮೇಲೆ ಪ್ರಭಾವ ಬೀರುತ್ತಿದ್ದ ಉದಾರ ಭಾವನೆಗಳಿಂದಲೂ ಭಾರತೀಯರನ್ನು ಎಚ್ಚೆತ್ತಿಸಿತು. ಆದರೆ ಹೊಸ ಶಿಕ್ಷಣ ವ್ಯವಸ್ಥೆಯಲ್ಲಿ ಹಲವು ದೋಷಗಳಿದ್ದವು. ಅಂತಹ ದೋಷಗಳೆಂದರೆ ಅತಿಯಾದ ಸಾಹಿತ್ಯ ರೂಪ ಹಾಗೂ ಧಾರ್ಮಿಕ ಮತ್ತು ನೈತಿಕ ಶಿಕ್ಷಣಗಳಿಂದ ಸಂಪೂರ್ಣವಾಗಿ ಭಿನ್ನವಾಗಿದ್ದುದು.

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

You cannot copy content of this page

error: Content is protected !!
Scroll to Top