Revised Pay Slip: ನೌಕರರು ತಿಳಿಯಬೇಕಾದ ಮಹತ್ವದ ಮಾಹಿತಿ- 2026
Revised Pay Slip-2026: ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ. ಇಲಾಖಾ ವ್ಯಾಪ್ತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಹಾಯಕ ಪ್ರಾಧ್ಯಾಪಕರು/ ದೈಹಿಕ ಶಿಕ್ಷಣ ನಿರ್ದೇಶಕರು/ಗ್ರಂಥಪಾಲಕರಿಗೆ ವ್ಯಕ್ತಿ ಪದೋನ್ನತಿ ಅಡಿಯಲ್ಲಿ 2016 ರ ಯುಜಿಸಿ ವೇತನ ಶ್ರೇಣಿಯಲ್ಲಿ ಈ ಕಛೇರಿ ಆದೇಶ ಸಂಖ್ಯೆ ಕಾಶಿಇ 42 ಶೈ ಹಂತ 13ಎ ಬಸ್ದಾವಿ 2022-23 ದಿನಾಂಕ:19.09.2022 ರಲ್ಲಿ ಸಹ ಪ್ರಾಧ್ಯಾಪಕರ ಶೈಕ್ಷಣಿಕ ಹಂತ 13 ಎ (900 ಎಜಿಪಿ)ರ ವೇತನ ಶ್ರೇಣಿ ರೂ.131400-217100 ರಲ್ಲಿ ಸ್ಥಾನೀಕರಣದ ಅರ್ಹತಾ ದಿನಾಂಕದಿಂದ ಪೂರ್ವಾನ್ವಯವಾಗಿ ಅನ್ವಯವಾಗುವಂತೆ ಆರ್ಥಿಕ ಸೌಲಭ್ಯವನ್ನು ಮಂಜೂರು ಮಾಡಲಾಗಿರುತ್ತದೆ.
ಸದರಿ ಆದೇಶಕ್ಕೆ ಉಲ್ಲೇಖ (1)ರ ಸರ್ಕಾರಿ ಪತ್ರದ ನಿರ್ದೇಶನದನ್ವಯ ಉಲ್ಲೇಖ (2) ರ ಮಾರ್ಪಾಡು ಆದೇಶದಲ್ಲಿ ವೇತನ ನಿಗದೀಕರಣ ಒಳಗೊಂಡಂತೆ ಆರ್ಥಿಕ ಸೌಲಭ್ಯವನ್ನು ಆದೇಶ ಹೊರಡಿಸಿದ ದಿನಾಂಕದಿಂದ ಭವಿಷಾವರ್ತಿಯಾಗಿ ಮಂಜೂರು ಮಾಡಲಾಗಿದೆ.
ಸದರಿ ಆದೇಶದಲ್ಲಿನ ಕೆಲವರು ಬೋಧಕರು ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿಯಲ್ಲಿ ಅರ್ಹತಾ ದಿನಾಂಕದಿಂದ ವೇತನ ನಿಗದೀಕರಣ ಒಳಗೊಂಡಂತೆ ಆರ್ಥಿಕ ಸೌಲಭ್ಯ ನೀಡುವಂತೆ ಅರ್ಜಿ ಸಂಖ್ಯೆ: 1)1848- 1928/2023, 2)103412-10347/2023 ಮತ್ತು 3)20300-20304/2023 ಗಳನ್ನು ದಾಖಲಿಸಿರುವದರಿಂದ ನ್ಯಾಯಮಂಡಳಿಯ ದಿ: 26.02.2024ರ ತೀರ್ಪಿನನ್ವಯ ಶೈಕ್ಷಣಿಕ ಹಂತ 13ಎ (ರೂ 9000 ಎಜಿಪಿ) ರ ಸ್ಥಾನೀಕರಣದ ರನ್ವಯ ಅರ್ಹತಾ ದಿನಾಂಕದಿಂದ ಮಹಾಲೇಖಪಾಲರು ನೀಡಿರುವುದಾಗಿ ಉಲ್ಲೇಖ (3)ರ ಪತ್ರದಲ್ಲಿ ತಿಳಿಸಿರುತ್ತಾರೆ.
ಪ್ರಸ್ತುತ ಕರ್ನಾಟಕ ಉಚ್ಚ ನ್ಯಾಯಾಲಯವು ದಿನಾಂಕ:26.02.2024 ರ ಕರ್ನಾಟಕ ಆಡಳಿತ ನ್ಯಾಯಮಂಡಳಿಯ ತೀರ್ಪಿಗೆ ಉಲ್ಲೇಖ (04) ರಲ್ಲಿ ಮದ್ಯಂತರ ತಡೆಯಾಜ್ಞೆ ನೀಡಿರುವದರಿಂದ ನ್ಯಾಯಾಲಯದ ಆದೇಶದನ್ವಯ ಉಲ್ಲೇಖ (2)ರ ಈ ಕಛೇರಿ ಆದೇಶದಲ್ಲಿ ವೇತನ ನಿಗಧೀಕರಣ ಒಳಗೊಂಡಂತೆ ಆರ್ಥಿಕ ಸೌಲಭ್ಯವನ್ನು ಆದೇಶ ಹೊರಡಿಸಿದ ದಿನಾಂಕದಿಂದ ಮಂಜೂರು ಮಾಡಿರುವಂತೆ ವೇತನ ಪ್ರಪತ್ರವನ್ನು (Pay slip) ಮಹಾಲೇಖಪಾಲರು ನೀಡುತ್ತಿರುವುದರಿಂದ ಅದರಂತೆ ಕ್ರಮವಹಿಸಲು ಪ್ರಾಂಶುಪಾಲರಿಗೆ ಕಟ್ಟುನಿಟ್ಟಾಗಿ ತಿಳಿಸಲಾಗಿದೆ.
ಮುಂದುವರೆದು ಉಲ್ಲೇಖ (05) ರಿಂದ (08) ರವರೆಗಿನ ಈ ಕಛೇರಿಯ ಮಾರ್ಪಾಡು ಆದೇಶಗಳ ಅನ್ವಯ ಮಹಾಲೇಖಪಾಲರು ನೀಡಿರುವ ಪರಿಷ್ಕೃತ ವೇತನ ಪ್ರಪತ್ರದನ್ವಯ ಕ್ರಮವಹಿಸಲು ಸಹ ತಿಳಿಸುತ್ತಾ ತಪ್ಪಿದಲ್ಲಿ ಸಂಬಂಧ ಪಟ್ಟ ಪ್ರಾಂಶುಪಾಲರು ಮತ್ತು ಬೋಧಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಲಾಗಿದೆ.
ಪ್ರಸ್ತುತ ಉಲ್ಲೇಖ (02) ಮತ್ತು (05 ರಿಂದ 08) ರ ಅದೇಶಗಳಲ್ಲಿನ ಹಲವು ಬೋಧಕರು/ಗ್ರಂಥಪಾಲಕರು/ದೈಹಿಕ ಶಿಕ್ಷಣ ನಿರ್ದೇಶಕರು ಶೈಕ್ಷಣಿಕ ಹಂತ 14 ರ ಸ್ನಾನೀಕರಣ ಮಂಜೂರಾತಿ ಸಂಬಂಧ ಆಯ್ಕೆ ಸಮಿತಿ ಸಂದರ್ಶನದಲ್ಲಿ ಪಾಲ್ಗೊಂಡಿದ್ದು ಸದಸ್ಯದಲ್ಲೆ ಸ್ಥಾನೀಕರಣ ಆದೇಶ ಹೊರಡಿಸಲಿದ್ದು ತದನಂತರದಲ್ಲಿ ಮಹಾಲೇಖಪಾಲರ ಹಂತದಲ್ಲಿ ವೇತನ ನಿಗದೀಕರಣಕ್ಕೆ ಅಡಚಣೆಯಾಗುವ ಸಂಭವವಿರುವುದರಿಂದ ಮಹಾಲೇಖಪಾಲರ ವೇತನ ಪತ್ರದನ್ವಯ ಕ್ರಮವಹಿಸಿ ಈ ಕಛೇರಿಗೆ ವರದಿ ನೀಡಲು ಮತ್ತೊಮ್ಮೆ ತಿಳಿಸಲಾಗಿದೆ. ಈ ಕುರಿತು ಸುತ್ತೋಲೆ ಹೊರಡಿಸಲಾಗಿದೆ.



