AISSEE 2026:ಸೈನಿಕ ಶಾಲಾ ಪ್ರವೇಶ ಪರೀಕ್ಷೆ ಉತ್ತರ ಕೀ ಬಿಡುಗಡೆ

AISSEE 2026: ಸೈನಿಕ ಶಾಲಾ ಪ್ರವೇಶ ಪರೀಕ್ಷೆ ಉತ್ತರ ಕೀ ಬಿಡುಗಡೆ

 

AISSEE 2026– ಸೈನಿಕ ಶಾಲಾ ಪ್ರವೇಶ ಪರೀಕ್ಷೆ ಉತ್ತರ ಕೀ ಬಿಡುಗಡೆ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ

(NTA) ಅಖಿಲ ಭಾರತ ಸೈನಿಕ್ ಶಾಲಾ ಪ್ರವೇಶ ಪರೀಕ್ಷೆ (AISSEE) 2026ರ ತಾತ್ಕಾಲಿಕ ಉತ್ತರ ಕೀಯನ್ನು ಅಧಿಕೃತ . ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದೆ.

ದೇಶಾದ್ಯಂತ ಪರೀಕ್ಷೆಯನ್ನು ಜ. 18ರಂದು 464 ಪರೀಕ್ಷಾ ಕೇಂದ್ರಗಳಲ್ಲಿ ಪೆನ್ನು ಮತ್ತು ಕಾಗದದ ವಿಧಾನದಲ್ಲಿ ನಡೆಸಲಾಯಿತು.

ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಈಗ

ಬಿಡುಗಡೆಯಾದ ಉತ್ತರ ಕೀಯೊಂದಿಗೆ ತಮ್ಮ

ಉತ್ತರ ಪತ್ರಿಕೆಗಳನ್ನು ಪರಿಶೀಲಿಸಬಹುದು.

ಆ ಮೂಲಕ ತಮ್ಮ ಸಂಭಾವ್ಯ ಅಂಕಗಳನ್ನು

ಅಂದಾಜು ಮಾಡಬಹುದಾಗಿದೆ.

ಪ್ರಶ್ನೆಗೆ ಉತ್ತರಕ್ಕೆ ಆಕ್ಷೇಪಣೆಗಳನ್ನು ಹೊಂದಿದ್ದರೆ, ಪ್ರತಿ ಪ್ರಶ್ನೆಗೆ 200/- ರೂ. ಮರುಪಾವತಿಸಲಾಗದ ಶುಲ್ಕವನ್ನು ಪಾವತಿಸುವ ಮೂಲಕ ಆನ್‌ಲೈನ್‌ನಲ್ಲಿ ಅದನ್ನು ಪ್ರಶ್ನಿಸಬಹುದು. ಎಲ್ಲ ಆಕ್ಷೇಪಣೆಗಳನ್ನು ಪರಿಶೀಲಿಸಿದ ನಂತರ ಅಂತಿಮ ಉತರ ಕೀಲಿಯನ್ನು ಬಿಡುಗಡೆ ಮಾಡಲಾಗುತ್ತದೆ.

ಆಕ್ಷೇಪಣೆಗೆ ನಿಯಮಗಳ ಅರ್ಥೈಸುವಿಕೆ:

▪️ ಸಂಸ್ಕರಣಾ ಶುಲ್ಕವನ್ನು ಸ್ವೀಕರಿಸದೆ ಆಕ್ಷೇಪಣೆಯನ್ನು ಪರಿಗಣಿಸಲಾಗುವುದಿಲ್ಲ.

▪️ ಅಭ್ಯರ್ಥಿಗಳು ಎತ್ತಿರುವ ಆಕ್ಷೇಪಣೆಗಳನ್ನು ವಿಷಯ ತಜ್ಞರ ಸಮಿತಿಯು ಪರಿಶೀಲಿಸುತ್ತದೆ.

▪️ ಪರಿಷ್ಕೃತ ಅಂತಿಮ ಉತ್ತರ ಕೀಲಿಯ ಆಧಾರದ ಮೇಲೆ ಮಾತ್ರ ಫಲಿತಾಂಶವನ್ನು ಸಿದ್ಧಪಡಿಸಲಾಗುತ್ತದೆ.

▪️ ಅಭ್ಯರ್ಥಿಗಳಿಗೆ ಅವರ ಆಕ್ಷೇಪಣೆಯನ್ನು ಸ್ವೀಕರಿಸಿದ ಅಥವಾ ತಿರಸ್ಕರಿಸಿದ ಬಗ್ಗೆ ಪ್ರತ್ಯೇಕವಾಗಿ ತಿಳಿಸಲಾಗುವುದಿಲ್ಲ.

▪️ ಆಕ್ಷೇಪಣೆಯ ನಂತರ ನೀಡಲಾಗುವ ಅಂತಿಮ ಉತ್ತರದ ಕೀಲಿ ಮಾತ್ರ ಮಾನ್ಯ.

▪️ ಫಲಿತಾಂಶ ಪ್ರಕಟವಾದ ನಂತರ ಉತ್ತರ ಕೀಲಿಯ ಕುರಿತು ಯಾವುದೇ ದೂರನ್ನು ಸ್ವೀಕರಿಸಲಾಗುವುದಿಲ್ಲ.

OMR ಬಗ್ಗೆ ಆಕ್ಷೇಪಣೆ ಸಲ್ಲಿಸುವ ವಿಧಾನ:

▪️ಅಭ್ಯರ್ಥಿಗಳು OMR ಗ್ರೇಡಿಂಗ್‌ನಿಂದ ತೃಪ್ತರಾಗದಿದ್ದರೆ, ಪ್ರತಿ ಪ್ರಶ್ನೆಗೆ 100/- ರೂ. ಶುಲ್ಕವನ್ನು ಪಾವತಿಸುವ ಮೂಲಕ ಆಕ್ಷೇಪಣೆ ಸಲ್ಲಿಸಬಹುದು.

▪️ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಪಾವತಿ ಮಾಡಬಹುದು.

▪️ ಎನ್‌ಟಿಎ ತನ್ನ ದಾಖಲೆಗಳ ವಿರುದ್ಧ ಆಕ್ಷೇಪಣೆಗಳನ್ನು ಪರಿಶೀಲಿಸುತ್ತದೆ. ಆಕ್ಷೇಪಣೆ ಸರಿಯಾಗಿದೆ ಎಂದು ಕಂಡುಬಂದಲ್ಲಿ, ಸಂಬಂಧಿತ ಡೇಟಾವನ್ನು ನವೀಕರಿಸಲಾಗುತ್ತದೆ.

ಆಕ್ಷೇಪಣೆಗೆ ಅಧಿಕೃತ ವೆಬ್‌ ಸೈಟ್ exams. nta.nic.in/sainik-school-society ಅನ್ನು ಸಂಪರ್ಕಿಸಿರಿ. ಎನ್‌ಟಿಎ ಸಹಾಯವಾಣಿ ಸಂಖ್ಯೆ 011-69227700 ಅಥವಾ 011-40759000 ಗೇ ಕರೆ ಮಾಡಬಹುದು ಅಥವಾ aissee@nta.ac.inಗೆ ಇಮೇಲ್ ಮೂಲಕವೂ ತಿಳಿಸಬಹುದು.

AISSEE 2026

 

ANSWER KEY CHALLENGE FOR AISSEE-2026

CLICK HERE OFFICIAL WEBSITE

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

You cannot copy content of this page

error: Content is protected !!
Scroll to Top