2026-27 Post Matric Hostel Admission: ಆನ್ಲೈನ್ ಅರ್ಜಿ ಹೇಗೆ ಸಲ್ಲಿಸಬೇಕು?ಇಲ್ಲಿದೆ ಸಂಪೂರ್ಣ ಮಾಹಿತಿ
2026-27 Post Matric Hostel Admission: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್-ನಂತರದ ವಿದ್ಯಾರ್ಥಿನಿಲಯಗಳ ಪ್ರವೇಶ 2026-27: ಪಿಯುಸಿ ವಿದ್ಯಾರ್ಥಿಗಳಿಗೆ ಆನ್ಲೈನ್ ಅರ್ಜಿ ಆಹ್ವಾನ
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್-ನಂತರದ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿನಿಲಯಗಳಿಗೆ 2026-27ನೇ ಸಾಲಿನ ಪ್ರವೇಶಕ್ಕಾಗಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಪಿ.ಯು.ಸಿ ವ್ಯಾಸಂಗ ಮಾಡುತ್ತಿರುವ ಅರ್ಹ ವಿದ್ಯಾರ್ಥಿಗಳು ಈ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಬಹುದು.
ಯಾರು ಅರ್ಜಿ ಸಲ್ಲಿಸಬಹುದು?
ಹೊಸದಾಗಿ ವಿದ್ಯಾರ್ಥಿನಿಲಯ ಪ್ರವೇಶ ಬಯಸುವ ಕೆಳಕಂಡ ವರ್ಗಗಳ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು:
ಪ್ರವರ್ಗ-1
2A
2B
3A
3B
ಪರಿಶಿಷ್ಟ ಜಾತಿ (SC)
ಪರಿಶಿಷ್ಟ ವರ್ಗ (ST)
ಮುಖ್ಯ ಸೂಚನೆ: ಈ ಅಧಿಸೂಚನೆ ಪಿ.ಯು.ಸಿ ಕೋರ್ಸಿನ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯಿಸುತ್ತದೆ.
ವಿದ್ಯಾರ್ಥಿನಿಲಯಗಳ ಸೌಲಭ್ಯಗಳು ಏನು?
ವಿದ್ಯಾರ್ಥಿಗಳಿಗೆ ಸರ್ಕಾರದಿಂದ ವಿವಿಧ ಸೌಲಭ್ಯಗಳನ್ನು ಒದಗಿಸಲಾಗುತ್ತದೆ:
ಉಚಿತ ವಸತಿ
ಆಹಾರ ವ್ಯವಸ್ಥೆ
ಓದುಗೆ ಸೂಕ್ತ ವಾತಾವರಣ
ಮೂಲಭೂತ ಸೌಲಭ್ಯಗಳು
ಶೈಕ್ಷಣಿಕ ಸಹಾಯ
ಪೋಷಕರ ವಾರ್ಷಿಕ ಆದಾಯ ಮಿತಿ ಎಸ್ಟಿರಬೇಕು?
ಪ್ರವರ್ಗ-1, SC & ST ವಿದ್ಯಾರ್ಥಿಗಳಿಗೆ
ವಾರ್ಷಿಕ ಆದಾಯ ಮಿತಿ: ರೂ. 2.50 ಲಕ್ಷ
ಪ್ರವರ್ಗ-2A, 2B, 3A, 3B ವಿದ್ಯಾರ್ಥಿಗಳಿಗೆ
ವಾರ್ಷಿಕ ಆದಾಯ ಮಿತಿ: ರೂ. 1.00 ಲಕ್ಷ
ಅಗತ್ಯ ದಾಖಲೆಗಳು ಏನೇನು ಬೇಕು?
ಅರ್ಜಿ ಸಲ್ಲಿಸುವ ಮೊದಲು ಕೆಳಗಿನ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ:
ವಿದ್ಯಾರ್ಥಿಯ ಆಧಾರ್ ಕಾರ್ಡ್
ಜಾತಿ ಪ್ರಮಾಣ ಪತ್ರ
ಆದಾಯ ಪ್ರಮಾಣ ಪತ್ರ
ಎಸ್ಎಸ್ಎಲ್ಸಿ ಅಂಕಪಟ್ಟಿ
ಪಿಯುಸಿ ಪ್ರವೇಶ ದಾಖಲೆ
ಪಾಸ್ಪೋರ್ಟ್ ಗಾತ್ರದ ಫೋಟೋ
ಮೊಬೈಲ್ ಸಂಖ್ಯೆ
ಅರ್ಜಿ ಸಲ್ಲಿಸುವ ವಿಧಾನ:
1. ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ
2. Hostel Admission / Post Matric Hostel ಆಯ್ಕೆಮಾಡಿ
3. ವಿದ್ಯಾರ್ಥಿಯ ವಿವರಗಳನ್ನು ನಮೂದಿಸಿ
4. ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ
5. ಅರ್ಜಿಯನ್ನು ಸಲ್ಲಿಸಿ ಹಾಗೂ ಪ್ರಿಂಟ್ ತೆಗೆದುಕೊಳ್ಳಿ
ಪ್ರಮುಖ ಮಾಹಿತಿ
ಅರ್ಜಿ ಸಲ್ಲಿಕೆ ಸಂಪೂರ್ಣವಾಗಿ ಆನ್ಲೈನ್ ಮೂಲಕ ಮಾತ್ರ
ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸುವುದು ಕಡ್ಡಾಯ
ತಪ್ಪು ಮಾಹಿತಿಯನ್ನು ನೀಡಿದರೆ ಅರ್ಜಿ ತಿರಸ್ಕರಿಸಬಹುದು.
ಗ್ರಾಮೀಣ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸರ್ಕಾರದ ವಿದ್ಯಾರ್ಥಿನಿಲಯಗಳು ಉತ್ತಮ ಶೈಕ್ಷಣಿಕ ಅವಕಾಶವನ್ನು ಒದಗಿಸುತ್ತವೆ. ಪಿ.ಯು.ಸಿ ಓದುತ್ತಿರುವ ಅರ್ಹ ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಸಮಯಕ್ಕೆ ಸರಿಯಾಗಿ ಅರ್ಜಿ ಸಲ್ಲಿಸಬೇಕು.

CLICK HERE TO DOWNLOAD NOTIFICATION
CLICK HERE TO ONLINE APPLICATION


