KASS Health Checkup 2026: 40 ವರ್ಷ ಮೀರಿದ ಸರ್ಕಾರಿ ನೌಕರರಿಗೆ ವಾರ್ಷಿಕ ಆರೋಗ್ಯ ತಪಾಸಣೆ

KASS Health Checkup 2026: 40 ವರ್ಷ ಮೀರಿದ ಸರ್ಕಾರಿ ನೌಕರರಿಗೆ ವಾರ್ಷಿಕ ಆರೋಗ್ಯ ತಪಾಸಣೆ

KASS Health Checkup 2026: 40 ವರ್ಷ ಮೀರಿದ ರಾಜ್ಯ ಸರ್ಕಾರಿ ನೌಕರರಿಗೆ ವೈದ್ಯಕೀಯ ತಪಾಸಣೆ (Annual Health Checkup) ಸೌಲಭ್ಯವನ್ನು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯಡಿಯಲ್ಲಿ (KASS) ಒದಗಿಸುವ ಬಗ್ಗೆ.

ಪ್ರಸ್ತಾವನೆ:

1] ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಅವರ ಕುಟುಂಬದ ಅರ್ಹ ಅವಲಂಬಿತ ಸದಸ್ಯರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸಾ ಸೌಲಭ್ಯಗಳನ್ನು ಕಲ್ಪಿಸಲು ರಾಜ್ಯ ಸರ್ಕಾರವು ದಿನಾಂಕ: 01.10.2025 ರಿಂದ ಜಾರಿಗೆ ತಂದಿರುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ಒಟ್ಟು 3,76,955 ನೌಕರರು opt-in ಆಗಿದ್ದು, 23,081 ನೌಕರರು Opt-out ಆಗಿರುತ್ತಾರೆ.

2] ಆಧುನಿಕ ಜೀವನ ಶೈಲಿಯು ಒತ್ತಡದಿಂದ ಕೂಡಿರುವುದರಿಂದ ಆರೋಗ್ಯಕರ ಜೀವನ ನಡೆಸಲು ದೇಹಕ್ಕೆ ಬೇಕಾದ ವ್ಯಾಯಾಮದ ಕೊರತೆ ಹಾಗೂ ಸರ್ಕಾರಿ ನೌಕರರಿಗೆ ಇರುವ ಕೆಲಸದ ಒತ್ತಡದಿಂದಾಗಿ 40 ವರ್ಷ ವಯಸ್ಸು ಮೀರಿದ ನೌಕರರು ಸಾಮಾನ್ಯವಾಗಿ ಮಧುಮೇಹ, ರಕ್ತದೊತ್ತಡದಂತಹ ಕಾಯಿಲೆಗಳಿಂದ ಬಳಲುತ್ತಿರುವ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದ್ದು ಇಂತಹ ಕಾಯಿಲೆಗಳಿಗೆ ತುತ್ತಾಗಿರುವ ಅರಿವು ಇಲ್ಲದೇ ಅವರು ಹೃದಯಾಘಾತ, ಪಾರ್ಶ್ವವಾಯು ಮುಂತಾದ ಅನೇಕ ರೋಗಗಳಿಗೆ ಒಳಗಾಗುತ್ತಿರುವುದು ಕಂಡುಬಂದಿರುವ ಕಾರಣ ಅವರು ಸೂಕ್ತ ಸಮಯದಲ್ಲಿ ಕೆಲವು ಅತ್ಯಗತ್ಯ ಸಾಮಾನ್ಯ ವೈದ್ಯಕೀಯ ತಪಾಸಣೆಗಳನ್ನು ಮಾಡಿಸಿಕೊಂಡಲ್ಲಿ ಆರಂಭದ ಹಂತದಲ್ಲಿ ಅವಶ್ಯಕ ಔಷದೋಪಚಾರಗಳನ್ನು ಪಡೆದು ಇಂತಹ ಗಂಭೀರ, ಅಪಾಯಕರ ಅನಾರೋಗ್ಯ ಸಮಸ್ಯೆಗಳನ್ನು ತಡೆಗಟ್ಟಿ ಆರೋಗ್ಯವನ್ನು ರಕ್ಷಿಸಿಕೊಳ್ಳಬಹುದಾಗಿರುವುದರಿಂದ ಕೇಂದ್ರ ಸರ್ಕಾರಿ ನೌಕರರಿಗೆ ಒದಗಿಸಲಾಗಿರುವ Preventive Health Checkupನ ಮಾದರಿಯಲ್ಲಿ “Annual Health Checkup” ಸೌಲಭ್ಯವನ್ನು ರಾಜ್ಯ ಸರ್ಕಾರಿ ನೌಕರರಿಗೂ ಒದಗಿಸುವ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕರ ಅಭಿಪ್ರಾಯವನ್ನು ಪಡೆದು ಪರಿಶೀಲಿಸಿ, ಕೇಂದ್ರ ಸರ್ಕಾರದ ಮಾದರಿಯಲ್ಲಿ ವಾರ್ಷಿಕ ಆರೋಗ್ಯ ತಪಾಸಣೆಯನ್ನು KASS ಯೋಜನೆಯಡಿ ನೋಂದಾಯಿತವಾಗಿರುವ (opt-in) ಸರ್ಕಾರಿ ನೌಕರರಿಗೆ ಒದಗಿಸುವುದು ಅವಶ್ಯಕತೆ ಇರುವುದನ್ನು ಸರ್ಕಾರವು ಪರಿಗಣಿಸಿದೆ.

ರಾಜ್ಯ ಸರ್ಕಾರವು ದಿನಾಂಕ: 01.10.2025 ರಿಂದ ಜಾರಿಗೆ ತಂದಿರುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ಒಳಪಟ್ಟಿರುವ (Opt-in) ಎಲ್ಲಾ ಸರ್ಕಾರಿ ನೌಕರರಿಗೆ ವಾರ್ಷಿಕ ವೈದ್ಯಕೀಯ ತಪಾಸಣೆ ಸೌಲಭ್ಯವನ್ನು ಮಂಜೂರು ಮಾಡಲು ಸರ್ಕಾರವು ತೀರ್ಮಾನಿಸಿ, ಈ ಸಂಬಂಧ ದಿನಾಂಕ: 05.09.2022ರ ಆದೇಶದಲ್ಲಿ ನೀಡಲಾಗಿರುವ ಸೂಚನೆಗಳನ್ನು ಭಾಗಶ: ಮಾರ್ಪಡಿಸಿ ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಿಆಸುಇ 16 ಎಸ್‌ಎಂಆರ್ 2020(ಭಾಗ-23), ದಿನಾಂಕ:
22.06.2026

ಪ್ರಸ್ತಾವನೆಯಲ್ಲಿ ವಿವರಿಸಲಾದಂತೆ, ದಿನಾಂಕ: 01.10.2025 ರಿಂದ ಜಾರಿಗೆ ತಂದಿರುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ಒಳಪಟ್ಟಿರುವ (Opt-in) ಸರ್ಕಾರಿ ನೌಕರರಿಗೆ

‘ವಾರ್ಷಿಕ ವೈದ್ಯಕೀಯ ತಪಾಸಣೆ’ ರಡಿ 40 ವರ್ಷ ಮೀರಿದ ಸರ್ಕಾರಿ ನೌಕರರು ಕ್ಯಾಲೆಂಡರ್ ವರ್ಷದಲ್ಲಿ ಒಂದು ಬಾರಿ ಈ ಕೆಳಗೆ ನಮೂದಿಸಿರುವ ಕೆಲವು ನಿರ್ದಿಷ್ಟ ಹಾಗೂ ಅತ್ಯಾವಶ್ಯಕ ವೈದ್ಯಕೀಯ ತಪಾಸಣೆಗಳನ್ನು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯಡಿ ನಗದು ರಹಿತವಾಗಿ ಪಡೆಯಲು, ಕೆಲವೊಂದು ಷರತ್ತಿಗೊಳಪಟ್ಟು ಅವಕಾಶ ಕಲ್ಪಿಸಿ ಆದೇಶಿಸಿದೆ:-

‘ವಾರ್ಷಿಕ ವೈದ್ಯಕೀಯ ತಪಾಸಣೆ’ ರಡಿ 40 ವರ್ಷ ಮೀರಿದ ಸರ್ಕಾರಿ ನೌಕರರು ಕ್ಯಾಲೆಂಡರ್ ವರ್ಷದಲ್ಲಿ ಒಂದು ಬಾರಿ ಈ ಕೆಳಗೆ ನಮೂದಿಸಿರುವ ಕೆಲವು ನಿರ್ದಿಷ್ಟ ಹಾಗೂ ಅತ್ಯಾವಶ್ಯಕ ವೈದ್ಯಕೀಯ ತಪಾಸಣೆಗಳನ್ನು ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯಡಿ ನಗದು ರಹಿತವಾಗಿ ಪಡೆಯಲು, ಕೆಲವೊಂದು ಷರತ್ತಿಗೊಳಪಟ್ಟು ಅವಕಾಶ ಕಲ್ಪಿಸಿ ಆದೇಶಿಸಿದೆ:-

A. EXAMINATION

I. GENERAL EXAMINATION

  1. Pulse Rate
  2. Blood Pressure
  3. Temperature
  4. Respiratory Rate
  5. Weight
  6. Body Mass Index (BMI)

II. SYSTEMIC EXAMINATION

  1. Respiratory System
  2. Cardiovascular System (CVS)
  3. Abdomen
  4. Central Nervous System (CNS)
  5. Locomotor System
  6. Dental Examination

III. EYE EXAMINATION

  1. Visual Equity (Near & Distant) and Refraction
  2. Tonometry
  3. Fundus Examination

IV. ENT EXAMINATION

V. GYNECOLOGICAL EXAMINATION (WOMEN)

a. PELVIC EXAMINATION

  1. Local examination
  2. Per vaginum examination
  3. Per speculum

b. BREAST EXAMINATION

VI. SURGICAL EXAMINATION


B. INVESTIGATIONS

I. HEMOGRAM

  1. Hemoglobin
  2. Total leucocyte counts
  3. Differential Leucocyte counts
    • a. Polymorphs
    • b. Lymphocytes
    • c. Eosinophils
    • d. Basophils
    • e. Monocytes
  4. Peripheral Smear

II. URINE EXAMINATION

  1. Routine
  2. Microscopic examination

III. BLOOD GLUCOSE

  1. Fasting
  2. Post-prandial
  3. HBA1C

IV. LIPID PROFILE

  1. Total cholesterol
  2. HDL cholesterol
  3. LDL cholesterol
  4. VLDL cholesterol
  5. Triglycerides

V. LIVER FUNCTION TESTS

  1. Serum bilirubin (Total)
  2. Serum bilirubin (Direct)
  3. ALT/SGPT
  4. AST/SGOT
  5. GGT
  6. Serum Alkaline phosphatase
  7. Total Protein
  8. Albumin and Globulin ratio

VI. KIDNEY FUNCTION TESTS

  1. Blood Urea
  2. Serum Creatinine
  3. Serum Uric Acid
  4. Serum Electrolytes (Sodium & Potassium)

VII. SERUM TSH, T3, T4

VIII. SPECIAL TESTS

  1. For Male: PSA
  2. For Female: PAP Smear
  3. X-ray chest PA view
  4. ECG
  5. Ultrasound Whole Abdomen with Prostate & Post Voiding Residual Urine Volume (Male)
  6. Ultrasound Whole Abdomen with Pelvis (Female)
  7. Mammogram (Female)

(v) ಷರತ್ತುಗಳು:

i. ಸ್ವ-ಇಚ್ಛೆಯಿಂದ ಯೋಜನೆಗೆ ಒಳಪಡದ (Opt-out ಆದ) ಸರ್ಕಾರಿ ನೌಕರರು ಈ ಸೌಲಭ್ಯಕ್ಕೆ ಅರ್ಹರಾಗುವುದಿಲ್ಲ.

ii. ವಾರ್ಷಿಕ ಆರೋಗ್ಯ ತಪಾಸಣೆ ಸರ್ಕಾರಿ ನೌಕರರಿಗೆ ಮಾತ್ರ ಅನ್ವಯವಾಗುತ್ತದೆ. ಸರ್ಕಾರಿ ನೌಕರರ ಕುಟುಂಬದ ಅವಲಂಬಿತ ಸದಸ್ಯರು ಈ ಸೌಲಭ್ಯವನ್ನು ಪಡೆಯಲು ಅರ್ಹರಿರುವುದಿಲ್ಲ.

iii) ಈ ತಪಾಸಣೆಗಳನ್ನು ಸರ್ಕಾರಿ ಆಸ್ಪತ್ರೆ (ಸ್ವಾಯತ್ತ ವೈದ್ಯಕೀಯ ಸಂಸ್ಥೆಗಳನ್ನು ಒಳಗೊಂಡಂತೆ) ಹಾಗೂ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯಡಿ (KASS) ನೋಂದಾಯಿಸಲ್ಪಟ್ಟಿರುವ ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಪಡೆಯತಕ್ಕದ್ದು.

iv. ಈ ತಪಾಸಣೆಗಳನ್ನು ಒಂದೇ ಸಂಸ್ಥೆಯಲ್ಲಿ ಪಡೆದು ಒಂದೇ ಕ್ಷೇಮಿನಲ್ಲಿ ಅವುಗಳನ್ನು ಇತ್ಯರ್ಥಪಡಿಸತಕ್ಕದ್ದು.

V. ನಿಗದಿಪಡಿಸಿರುವ ವಾರ್ಷಿಕ ವೈದ್ಯಕೀಯ ತಪಾಸಣೆಗಳಿಗೆ ರೂ. 2000/- (ಪುರುಷ ನೌಕರರಿಗೆ) ರೂ. 2,200/- (ಮಹಿಳಾ ನೌಕರರಿಗೆ) ಸಂಚಿತ ದರಗಳನ್ನು (Consolidated Rates) ನಿಗದಿಪಡಿಸಲಾಗಿದೆ. ವಿವಿಧ ತಪಾಸಣೆಗಳಿಗೆ ಸರ್ಕಾರ ನಿಗದಿಪಡಿಸಿದ ಗರಿಷ್ಠ ಮೊತ್ತದ ಮಿತಿಗೊಳಪಟ್ಟು ಮಂಜೂರಾತಿ ನೀಡತಕ್ಕದ್ದು.

vi. ವಾರ್ಷಿಕ ವೈದ್ಯಕೀಯ ತಪಾಸಣೆಗಳನ್ನು KASS ಯೋಜನೆಯಡಿ ಅಳವಡಿಸಿಕೊಳ್ಳಲು ಹಾಗೂ ಈ ಸಂಬಂಧ ನೋಂದಾಯಿತ ಖಾಸಗಿ ಆಸ್ಪತ್ರೆಗಳೊಂದಿಗೆ ಸೂಕ್ತ ಒಡಂಬಡಿಕೆಯನ್ನು ಮಾಡಿಕೊಳ್ಳಲು ಕಾರ್ಯಕಾರಿ ನಿರ್ದೇಶಕರು, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಇವರು ಸೂಕ್ತ ಕ್ರಮ ಕೈಗೊಳ್ಳತಕ್ಕದ್ದು.

ಈ ಆದೇಶವನ್ನು ಆರ್ಥಿಕ ಇಲಾಖೆಯ ಹಿಂಬರಹ ಸಂಖ್ಯೆ: ಆಇ 93 ವೆಚ್ಚ-12/2026, ದಿನಾಂಕ: 02.06.2026ರಲ್ಲಿ ನೀಡಿರುವ ಸಹಮತಿಯಂತೆ ಹೊರಡಿಸಲಾಗಿದೆ.

KASS Health Checkup 2026
CLICK HERE TO DOWNLOAD ORDER
ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Author: mastermitra

Leave a Reply

Your email address will not be published. Required fields are marked *