SSLC PUC ಅಂಕಪಟ್ಟಿಯಲ್ಲಿ UDISE Code ಕಡ್ಡಾಯ-2026

SSLC ಮತ್ತು PUC ಅಂಕಪಟ್ಟಿಯಲ್ಲಿ UDISE Code ಕಡ್ಡಾಯ-2026

SSLC  PUC ಅಂಕಪಟ್ಟಿಯಲ್ಲಿ UDISE Code ಕಡ್ಡಾಯ-2026: SSLC ಮತ್ತು PUC ಪರೀಕ್ಷೆಯಲ್ಲಿ ಪಾಸಾಗುವ ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ ಶಾಲೆ/ಕಾಲೇಜಿನ UDISE Code ಕಡ್ಡಾಯವಾಗಿ ನಮೂದಿಸುವ ಕುರಿತು ಶಿಕ್ಷಣ ಇಲಾಖೆಯ ಮಹತ್ವದ ಆದೇಶ ಹೊರಡಿಸಲಾಗಿದೆ.

ಓದಲಾದ ಕ್ರಮಾಂಕ (1) ರ ಏಕಕಡತದಲ್ಲಿ, ಅಧ್ಯಕ್ಷರು, ಕರ್ನಾಟಕ ಶಾಲಾ ಪರೀಕ್ಷೆ, ಮತ್ತು ಮೌಲ್ಯ ನಿರ್ಣಯ ಮಂಡಲಿ, ಬೆಂಗಳೂರು, ಇವರು ಭಾರತ ಸರ್ಕಾರದ ಶಿಕ್ಷಣ ಮಂತ್ರಾಲಯದ ಅರೆ ಸರ್ಕಾರಿ ಪತ್ರ ಸಂಖ್ಯೆ: DO No. 23-19/2020-Stats, dated: 05.06.20260,ಇನ್ನು ಮುಂದೆ ರಾಜ್ಯದ ಎಲ್ಲಾ ಶಾಲಾ ಪರೀಕ್ಷಾ ಮಂಡಲಿಗಳು ವಿತರಿಸುವ ಉತ್ತೀರ್ಣತಾ ಪ್ರಮಾಣ ಪತ್ರದಲ್ಲಿ (Marks Card) ಶಾಲಾ UDISE CODE ಅನ್ನು ನಮೂದಿಸುವಂತೆ ತಿಳಿಸಿರುವುದರಿಂದ ಮೇಲೆ ಓದಲಾದ ಕ್ರಮಾಂಕ (3)ರ ಸರ್ಕಾರದ ಆದೇಶದನ್ವಯ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ಅಂಕಪಟ್ಟಿಗಳನ್ನು NAD/Digilocker ನಲ್ಲಿ ವಿದ್ಯಾರ್ಥಿಗಳ APAAR ID, Aadhar ID ಹಾಗೂ PHOTO ಗಳನ್ನು ಅಳವಡಿಸುವುದರೊಂದಿಗೆ ಸಂಬಂಧಪಟ್ಟ ಶಾಲೆಯ UDISE CODE ಅನ್ನು ನಮೂದಿಸುವ ಸಂಬಂಧ ಸರ್ಕಾರದಿಂದ ಆದೇಶ ಹೊರಡಿಸುವಂತೆ ಪ್ರಸ್ತಾವನೆ ಸಲ್ಲಿಸಿರುತ್ತಾರೆ.

ಮೇಲೆ ಓದಲಾದ ಕ್ರಮಾಂಕ (2)ರ ಆದೇಶದಲ್ಲಿ 2026-27ನೇ ಶೈಕ್ಷಣಿಕ ಸಾಲಿನಿಂದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳ ಅಂಕಪಟ್ಟಿಯನ್ನು ಭೌತಿಕ ಪ್ರತಿ ನೀಡುವ ಪದ್ದತಿಯನ್ನು ಕೈ ಬಿಟ್ಟು  APAAR ID, Aadhar ID ಹಾಗೂ ಫೋಟೋ ದೊಂದಿಗೆ ಕಡ್ಡಾಯವಾಗಿ ಅಂಕಪಟ್ಟಿಯನ್ನು National Academic Depository (NAD)/ Digilocker ನಲ್ಲಿ ಅಳವಡಿಸುವಂತೆ ಹಾಗೂ ಸದರಿ ಅಂಕಪಟ್ಟಿ ಮತ್ತು ಪ್ರಮಾಣಪತ್ರಗಳನ್ನು ರಾಜ್ಯದ ಹೊರಗೆ ಹಾಗೂ ಒಳಗೆ ಉನ್ನತ ವ್ಯಾಸಂಗಕ್ಕಾಗಿ ಅಧಿಕೃತವೆಂದು ಪರಿಗಣಿಸುವಂತೆ ಮತ್ತು ನೇಮಕಾತಿಗೆ ದೃಢೀಕೃತವೆಂದು ಪರಿಗಣಿಸುವಂತೆ ಆದೇಶಿಸಲಾಗಿದೆ.

ಮೇಲೆ ಓದಲಾದ ಕ್ರಮಾಂಕ (3)ರ ಆದೇಶದಲ್ಲಿ 2026-27ನೇ ಶೈಕ್ಷಣಿಕ ಸಾಲಿನಿಂದ ಎಸ್.ಎಸ್.ಎಲ್.ಸಿ., ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳ ಅಂಕಪಟ್ಟಿಯನ್ನು ಭೌತಿಕ ಪ್ರತಿ ನೀಡುವ ಪದ್ದತಿಯನ್ನು ಕೈ ಬಿಟ್ಟು APAAR ID, Aadhar ಇದು ಹಾಗೂ PHOTO ದೊಂದಿಗೆ ಕಡ್ಡಾಯವಾಗಿ ಅಂಕಪಟ್ಟಿಯನ್ನು National Academic Depository (NAD)/ Digilocker ನಲ್ಲಿ ಅಳವಡಿಸುವಂತೆ ಹಾಗೂ ಸದರಿ ಅಂಕಪಟ್ಟಿ ಮತ್ತು ಪ್ರಮಾಣಪತ್ರಗಳನ್ನು ರಾಜ್ಯದ ಹೊರಗೆ ಹಾಗೂ ಒಳಗೆ ಉನ್ನತ ವ್ಯಾಸಂಗಕ್ಕಾಗಿ ಅಧಿಕೃತವೆಂದು ಪರಿಗಣಿಸುವಂತೆ ಮತ್ತು ನೇಮಕಾತಿಗೆ ದೃಢೀಕೃತವೆಂದು ಪರಿಗಣಿಸುವಂತೆ ಆದೇಶಿಸಲಾಗಿದೆ.

ಕರ್ನಾಟಕ ಶಾಲಾ ಪರೀಕ್ಷೆ, ಮತ್ತು ಮೌಲ್ಯ ನಿರ್ಣಯ ಮಂಡಲಿಯ ಏಕ ಕಡತದ ಪ್ರಸ್ತಾವನೆಯನ್ನು ನಿಯಮಾನುಸಾರ ಪರಿಶೀಲಿಸಲಾಗಿ, ಮೇಲೆ ಓದಲಾದ ಕ್ರಮಾಂಕ (4) ರ ಭಾರತ ಸರ್ಕಾರದ ಶಿಕ್ಷಣ ಮಂತ್ರಾಲಯದ ಅರೆ ಸರ್ಕಾರಿ ಪತ್ರದಲ್ಲಿ ಶಿಕ್ಷಣ ಸಚಿವಾಲಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (DoSEL) ವಿದ್ಯಾರ್ಥಿಗಳಿಗೆ ನೀಡಲಾಗುವ ಪ್ರಮಾಣಪತ್ರಗಳ ಮೇಲೆ ಶಾಲೆಯ UDISE ಕೋಡ್ ಅನ್ನು ಕಡ್ಡಾಯವಾಗಿ ನಮೂದಿಸಲು ಈ ಕೆಳಕಂಡ ಸೂಕ್ತ ಸೃಷ್ಟಿಕರಣದೊಂದಿಗೆ ನಿರ್ದೇಶನ ನೀಡಿರುತ್ತದೆ;

1. UDISE ಕೋಡ್ ಭಾರತದಲ್ಲಿನ ಶಾಲೆಗಳಿಗೆ ಪ್ರಮುಖವಾದ ವಿಶಿಷ್ಟ ಗುರುತಿಸುವಿಕೆಯಾಗಿದ್ದು, ಮಾನ್ಯತೆ ಪಡೆದ ಶಾಲೆಗಳಿಗೆ ಮಾತ್ರ ರಾಜ್ಯ ಸರ್ಕಾರದಿಂದ ವಿತರಿಸಲಾಗುತ್ತದೆ. UDISE ಕೋಡ್ ರಾಜ್ಯ ಸರ್ಕಾರಗಳ ವಿವಿಧ ಪ್ರೋತ್ಸಾಹಕಗಳ ಮೇಲ್ವಿಚಾರಣೆ ಮತ್ತು ಯೋಜನೆಗಾಗಿಯೂ ಸಹ ಹಲವಾರು ನೀತಿ ನಿರ್ಧಾರಗಳ ಆಧಾರವಾಗಿದ್ದು, ಇದರಿಂದ ಶಾಲೆ ಮತ್ತು ಅಂಕಪಟ್ಟಿಗಳ ಪರಿಶೀಲನ ಸುಗಮಗೊಳಿಸುತ್ತದೆ.

2. ಪ್ರಮಾಣಪತ್ರಗಳ ಮೇಲೆ UDISE ಕೋಡ್ನ ಗುರುತು ವಿದ್ಯಾರ್ಥಿಗಳು ಸೇರಿದಂತೆ ಪಾಲುದಾರರಿಗೆ PM ವಿದ್ಯಾಲಕ್ಷ್ಮಿ ಪೋರ್ಟಲ್ ಮೂಲಕ ವಿದ್ಯಾರ್ಥಿವೇತನಗಳು, ನೇರ ಪ್ರಯೋಜನ ವರ್ಗಾವಣೆ (DBT), APAAR ಐಡಿಗಳ ಉತ್ಪಾದನೆ ಮತ್ತು ಶೈಕ್ಷಣಿಕ ಸಾಲಗಳಂತಹ ವಿವಿಧ ಸೇವೆಗಳು ಮತ್ತು ಪ್ರಯೋಜನಗಳನ್ನು ಪಡೆಯಲು ಸಹಾಯ ಮಾಡುತ್ತದೆ. ಅಲ್ಲದೆ, ಮಂಡಳಿಗಳು ನೀಡುವ ಪ್ರಮಾಣಪತ್ರಗಳ ಮೇಲಿನ ಆ ಸಂಕೇತವು ಯಾವುದೇ ಹೆಚ್ಚುವರಿ ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸುವುದಿಲ್ಲ. ಆದರೆ ವಿದ್ಯಾರ್ಥಿಯು X ಮತ್ತು XI ತರಗತಿಗಳನ್ನು ಪೂರ್ಣಗೊಳಿಸಿದ ಸಂಸ್ಥೆಯ ಸಾರ್ವಜನಿಕ ಪರಿಶೀಲನೆಯನ್ನು ಸುಗಮಗೊಳಿಸುತ್ತದೆ.

3. ಪ್ರಸ್ತುತ, ಕೆಲವು ಶಾಲೆಗಳು ಪ್ರಾಥಮಿಕವಾಗಿ XI ಮತ್ತು XI ತರಗತಿಗಳನ್ನು ನೀಡುವ ಹೈಯರ್ ಸೆಕೆಂಡರಿ ಶಾಲೆಗಳನ್ನು “ಕಾಲೇಜುಗಳು” ಎಂದು ಗೊತ್ತುಪಡಿಸಿಕೊಳ್ಳುತ್ತಿವೆ. ಇದರ ಪರಿಣಾಮವಾಗಿ, ಅಂತಹ ಸಂಸ್ಥೆಗಳನ್ನು UDISE ಅಡಿಯಲ್ಲಿ ಕಂಡು ಹಿಡಿಯಲು ಸಾಧವಾಗದೇ ವಿದ್ಯಾರ್ಥಿಗಳು ತಮ್ಮ ಸಂಸ್ಥೆಗಳನ್ನು UDISE ಕೋಡ್ ಅಗತ್ಯವಿರುವ “ಡೇಟಾ ಬೇಸ್‌ಗಳು ಅಥವಾ ಅಪ್ಲಿಕೇಶನ್ ಪೋರ್ಟಲ್‌ಗಳಲ್ಲಿ ಪತ್ತೆಹಚ್ಚಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ, ಹಣಕಾಸಿನ ನೆರವು ಬಯಸುವ ವಿದ್ಯಾರ್ಥಿಗಳಿಗೆ ತೊಂದರೆಗಳನ್ನು ಸೃಷ್ಟಿಸುತ್ತದೆ.

ಮೇಲ್ಕಂಡ ಎಲ್ಲಾ ಅಂಶಗಳನ್ನಯ ಭಾರತ ಸರ್ಕಾರದ ಶಿಕ್ಷಣ ಮಂತ್ರಾಲಯದ ಅರೆ ಸರ್ಕಾರಿ ಪತ್ರ ಸಂಖ್ಯೆ: DO No. 23-19/2020-Stats, dated: 05.06.20260 ರಲ್ಲಿನ ನಿರ್ದೇಶನ ಅನುಸಾರ ಸಂಸ್ಥೆಗಳ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ, ಆರ್ಥಿಕ, ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ಎಸ್.ಎಸ್.ಎಲ್.ಸಿ. ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳ ಅಂಕಪಟ್ಟಿ ಪ್ರಮಾಣಪತ್ರಗಳಲ್ಲಿ ಇನ್ನು ಮುಂದೆ ಕಡ್ಡಾಯವಾಗಿ UDISE ಕೋಡ್ ಅನ್ನು ನಮೂದಿಸಲು ಸರ್ಕಾರವು ತೀರ್ಮಾನಿಸಿ, ಅದರಂತೆ ಈ ಕೆಳಕಂಡ ಆದೇಶ.

ಆದೇಶ: ಸರ್ಕಾರದ ಆದೇಶ ಸಂಖ್ಯೆ : ಇಪಿ 49 ಎಸ್‌ಓಹೆಚ್ 2026(ಭಾಗ-1). ಬೆಂಗಳೂರು ದಿನಾಂಕ:06.08.2026.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಭಾರತ ಸರ್ಕಾರದ ಶಿಕ್ಷಣ ಮಂತ್ರಾಲಯದ ಅರೆ ಸರ್ಕಾರಿ ಪತ್ರ ಸಂಖ್ಯೆ DO No. 23-19/2020-Stats, dated: 05.06.2026 ರಲ್ಲಿನ ನಿರ್ದೇಶನದನುಸಾರ 2026-27ನೇ ಶೈಕ್ಷಣಿಕ ಸಾಲಿನಿಂದ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳ ಅಂಕಪಟ್ಟಿಯಲ್ಲಿ APAAR ID, ವಿದ್ಯಾರ್ಥಿಯ PHOTO ಹಾಗೂ ಶಾಲೆ/ ಕಾಲೇಜಿನ UDISE CODE ನ್ನು ಕಡ್ಡಾಯವಾಗಿ ನಮೂದಿಸಿ National Academic Depository (NAD)/ Digilocker ನಲ್ಲಿ ಅಳವಡಿಸಲು ಆದೇಶ ಮಾಡಲಾಗಿದೆ.

ಮುಂದುವರೆದು, ಸರ್ಕಾರದ ಆದೇಶ ಸಂಖ್ಯೆ:ಇಪಿ 69 ಎಸ್‌ಹೆಚ್‌ಹೆಚ್ 2026, ದಿನಾಂಕ:08.04.2026 ಮತ್ತು ಆದೇಶ ಸಂಖ್ಯೆ:ಇಪಿ 49 ಎಸ್‌ಓಹೆಚ್ 2026, ದಿನಾಂಕ:18.04.2026ರಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು ಪಾಲಿಸಬೇಕಾಗಿರುವ ಷರತ್ತುಗಳನ್ನು ಶಾಲೆ/ಕಾಲೇಜಿನ UDISE CODE ನ್ನು ಅಳವಡಿಸುವುದರಲ್ಲಿಯೂ ಕಡ್ಡಾಯವಾಗಿ ಪಾಲಿಸತಕ್ಕದ್ದು ಎಂದು ಆದೇಶದಲ್ಲಿ ತಿಳಿಸಲಾಗಿದೆ.


CLICK HERE TO DOWNLOAD ORDER

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!