Samagra Shikshana Karnataka: 2026-27ರ 3 ತಿಂಗಳ ವೇತನ ಅನುದಾನ ಬಿಡುಗಡೆ

Samagra Shikshana Karnataka: 2026-27ರ 3 ತಿಂಗಳ ವೇತನ ಅನುದಾನ ಬಿಡುಗಡೆ

Samagra Shikshana Karnataka: 2026-27ನೇ ಸಾಲಿನಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ, ಸಿಬ್ಬಂದಿ ಹಾಗೂ ಶಿಕ್ಷಕರ ವೇತನ ವೆಚ್ಚಕ್ಕಾಗಿ ಅಕ್ಟೋಬರ್–ಡಿಸೆಂಬರ್ 2026ರ 3 ತಿಂಗಳ ಅನುದಾನ ಬಿಡುಗಡೆ ಕುರಿತು ಸಂಪೂರ್ಣ ಮಾಹಿತಿ.

2026-27ನೇ ಸಾಲಿಗೆ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿಯಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ/ಸಿಬ್ಬಂದಿಗಳ/ ಶಿಕ್ಷಕರ ವೇತನ ವೆಚ್ಚದ ಬಾಬುಗಳಿಗೆ ಅಕ್ಟೋಬರ್ 2026 ರಿಂದ ಡಿಸೆಂಬರ್ 2026 ರವರೆಗಿನ 03 ತಿಂಗಳ ಅನುದಾನವನ್ನು ಬಿಡುಗಡೆಗೊಳಿಸುವ ಬಗ್ಗೆ.

ಪ್ರಸ್ತಾವನೆ:

2026-27ನೇ ಸಾಲಿನ ಆಯವ್ಯಯದಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ-ಶಿಕ್ಷಕರ ವೇತನಕ್ಕಾಗಿ ತಾಲ್ಲೂಕು ವಲಯದ ಲೆಕ್ಕ ಶೀರ್ಷಿಕೆ:2202-00-102-0-20 (2202-02-196-1-03) ಅಡಿಯಲ್ಲಿ ಒದಗಿಸಲಾದ ರೂ.1104.00 ಲಕ್ಷಗಳು ಹಾಗೂ ಜಿಲ್ಲಾ ವಲಯದ ಲೆಕ್ಕ ಶೀರ್ಷಿಕೆ:2202-00-101-0-19 (2202-01-197-1-02) ಅಡಿಯಲ್ಲಿ ಒದಗಿಸಲಾದ ರೂ.222994.28 ಲಕ್ಷಗಳು ಸೇರಿದಂತೆ ಒಟ್ಟು ರೂ.224098.28 ಲಕ್ಷಗಳನ್ನು ಹಂಚಿಕೆ ಮಾಡಲಾಗಿರುತ್ತದೆ.

ಮೇಲೆ ಓದಲಾದ ಕ್ರಮಾಂಕ (1) ರ ಸರ್ಕಾರದ ಅಧಿಕೃತ ಜ್ಞಾಪನದಲ್ಲಿ ಕಾಲಕಾಲಕ್ಕೆ ಜಾರಿಯಲ್ಲಿರುವ ಮಿತವ್ಯಯದ ಸೂಚನೆಗಳನ್ನು ಮತ್ತು ಸಾಮಾನ್ಯ ಆರ್ಥಿಕ ಅಧಿಕಾರ ಪ್ರತ್ಯಾಯೋಜನೆಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ವಿಧಾನ ಮಂಡಲವು ಅನುಮೋದಿಸಿರುವ ಕರ್ನಾಟಕ ಧನವಿನಿಯೋಗ (ಲೇಖಾನುದಾನ) ವಿಧೇಯಕದನ್ವಯ, 2025-26ನೇ ಸಾಲಿನ ವಿವಿಧ ಯೋಜನೆ/ಕಾರ್ಯಕ್ರಮಗಳಿಗೆ ದಿನಾಂಕ: 1 ನೇ ಏಪ್ರಿಲ್ 2026 ರಿಂದ ದಿನಾಂಕ: 31 ನೇ ಮಾರ್ಚ್ 2027ರ ಅವಧಿಯ ವೆಚ್ಚವನ್ನು ಭರಿಸಲು ಇಲಾಖಾ ಮುಖ್ಯಸ್ಥರು ಮತ್ತು ಅಂದಾಜು ಅಧಿಕಾರಿಗಳಿಗೆ ಅಧಿಕಾರ ನೀಡಲಾಗಿರುತ್ತದೆ.

ಮೇಲೆ ಓದಲಾದ ಕ್ರಮಾಂಕ (2) ರ ಸರ್ಕಾರದ ಆದೇಶದಲ್ಲಿ, 2026-27ನೇ ಆರ್ಥಿಕ ವರ್ಷದಲ್ಲಿ ಏಪ್ರಿಲ್-2026 ರಿಂದ ಜೂನ್-2026 ರ ಅವಧಿಯ ಮೂರು ತಿಂಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು, ಸದರಿ ಅನುದಾನವನ್ನು ಬಿಡುಗಡೆಗೊಳಿಸಲು ಆಡಳಿತ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿ/ ಪ್ರಧಾನ ಕಾರ್ಯದರ್ಶಿ/ಕಾರ್ಯದರ್ಶಿಯವರಿಗೆ ಆರ್ಥಿಕ ಅಧಿಕಾರ ಪ್ರತ್ಯಾಯೋಜನೆ ಮಾಡಿ ಆದೇಶಿಸಲಾಗಿರುತ್ತದೆ.

ಮೇಲೆ ಓದಲಾದ ಕ್ರಮಾಂಕ (3) ರ ಸರ್ಕಾರದ ಆದೇಶದಲ್ಲಿ, ಪ್ರತ್ಯಾಯೋಜಿಸಲಾದ ಅಧಿಕಾರದನ್ವಯ 2026-27ನೇ ಸಾಲಿನ ಏಪ್ರಿಲ್-2026 ರಿಂದ ಜುಲೈ-2026 ರ ಅವಧಿಯ ಮೂರು ತಿಂಗಳ ವೇತನ ಅನುದಾನ ರೂ.56024.57 ಲಕ್ಷಗಳನ್ನು ಬಿಡುಗಡೆ ಮಾಡಲಾಗಿರುತ್ತದೆ.

ಮೇಲೆ ಓದಲಾದ ಕ್ರಮಾಂಕ (4) ರ ಸರ್ಕಾರದ ಆದೇಶದಲ್ಲಿ 2026-27ನೇ ಆರ್ಥಿಕ ವರ್ಷದಲ್ಲಿ ಜುಲೈ-2026 ರಿಂದ ಸೆಪ್ಟೆಂಬರ್-2026 ರ ಅವಧಿಯ ಮೂರು ತಿಂಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು, ಸದರಿ ಅನುದಾನವನ್ನು ಬಿಡುಗಡೆಗೊಳಿಸಲು ಆಡಳಿತ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿ/ಪ್ರಧಾನ ಕಾರ್ಯದರ್ಶಿ/ಕಾರ್ಯದರ್ಶಿಯವರಿಗೆ ಆರ್ಥಿಕ ಅಧಿಕಾರ ಪ್ರತ್ಯಾಯೋಜನೆಮಾಡಿ ಆದೇಶಿಸಲಾಗಿರುತ್ತದೆ.

ಮೇಲೆ ಓದಲಾದ ಕ್ರಮಾಂಕ (5) ರ ಸರ್ಕಾರದ ಆದೇಶದಲ್ಲಿ, ಪ್ರತ್ಯಾಯೋಜಿಸಲಾದ ಅಧಿಕಾರದನ್ವಯ 2026-27ನೇ ಸಾಲಿನ ಜುಲೈ-2026 ರಿಂದ ಸೆಪ್ಟೆಂಬರ್-2026 ರ ಅವಧಿಯ ಮೂರು ತಿಂಗಳ ವೇತನ ಅನುದಾನ ರೂ.56024.57 ಲಕ್ಷಗಳನ್ನು ಬಿಡುಗಡೆ ಮಾಡಲಾಗಿರುತ್ತದೆ.

ಮೇಲೆ ಓದಲಾದ ಕ್ರಮಾಂಕ (6) ರ ಸರ್ಕಾರದ ಆದೇಶದಲ್ಲಿ, ಪ್ರತ್ಯಾಯೋಜಿಸಲಾದ ಅಧಿಕಾರದನ್ವಯ ಪುನರ್‌ವಿನಿಯೋಗದ ಮೂಲಕ ಒದಗಿಸಲಾದ ಒಟ್ಟು ರೂ.2302.42 ಲಕ್ಷಗಳನ್ನು ಬಿಡುಗಡೆ ಮಾಡಲಾಗಿರುತ್ತದೆ.

ಮೇಲೆ ಓದಲಾದ ಕ್ರಮಾಂಕ (7) ರ ಸರ್ಕಾರದ ಆದೇಶದಲ್ಲಿ, 2026-27ನೇ ಆರ್ಥಿಕ ವರ್ಷದಲ್ಲಿ ಅಕ್ಟೋಬರ್-2026 ರಿಂದ ಡಿಸೆಂಬರ್-2026 ರ ಅವಧಿಯ ಮೂರು ತಿಂಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದ್ದು, ಸದರಿ ಅನುದಾನವನ್ನು ಬಿಡುಗಡೆಗೊಳಿಸಲು ಆಡಳಿತ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿ/ಪ್ರಧಾನ ಕಾರ್ಯದರ್ಶಿ/ಕಾರ್ಯದರ್ಶಿಯವರಿಗೆ ಆರ್ಥಿಕ ಅಧಿಕಾರ ಪ್ರತ್ಯಾಯೋಜನೆಮಾಡಿ ಆದೇಶಿಸಲಾಗಿರುತ್ತದೆ.

ಪ್ರಸ್ತುತ 2026-27ನೇ ಸಾಲಿನ ಆಯವ್ಯಯದಲ್ಲಿ ಸಮಗ್ರ ಶಿಕ್ಷಣ ಕರ್ನಾಟಕದ ಶಿಕ್ಷಕರ ವೇತನಕ್ಕಾಗಿ ತಾಲ್ಲೂಕು ವಲಯದ ಲೆಕ್ಕ ಶೀರ್ಷಿಕೆ 2202-00-102-0-20 (2202-02-196-1-03) ಅಡಿಯಲ್ಲಿ ರೂ.1,196.34 ಲಕ್ಷಗಳು ಹಾಗೂ ಜಿಲ್ಲಾ ವಲಯದ ಲೆಕ್ಕ ಶೀರ್ಷಿಕೆ 2202-00-101-0-19 (2202-01-197-1-02)ಅಡಿಯಲ್ಲಿ ರೂ.2,25,204.36 ಲಕ್ಷಗಳು ಒಟ್ಟು ರೂ .2,26,400.70 ಲಕ್ಷಗಳ ವೇತನಾನುದಾನವನ್ನು ಒದಗಿಸಲಾಗಿದ್ದು. ಸದರಿ ಒಟ್ಟು ವೇತನಾನುದಾನದಲ್ಲಿ ಅಕ್ಟೋಬರ್-2026 ರಿಂದ ಡಿಸೆಂಬರ್-2026 ರವರೆಗಿನ 3 ತಿಂಗಳ ಅವಧಿಗೆ ರೂ.56,024.57 ಲಕ್ಷಗಳ ವೇತನಾನುದಾನವನ್ನು ಬಿಡುಗಡೆ ಮಾಡುವಂತೆ ರಾಜ್ಯ ಯೋಜನಾ ನಿರ್ದೇಶಕರು ಮೇಲೆ ಓದಲಾದ (8) ರಲ್ಲಿ ಪ್ರಸ್ತಾವನೆ ಸಲ್ಲಿಸಿರುತ್ತಾರೆ. ಸದರಿ ಪ್ರಸ್ತಾವನೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಇಪಿ 110 ಯೋಯೋಕ 2026, ಬೆಂಗಳೂರು ದಿನಾಂಕ:01.10.2026

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ 2026-27ನೇ ಸಾಲಿನ ಆಯವ್ಯಯದಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ-ಶಿಕ್ಷಕರ ವೇತನಕ್ಕಾಗಿ ತಾಲ್ಲೂಕು ವಲಯದ ಲೆಕ್ಕ  ಶೀರ್ಷಿಕೆ:2202-00-102-0-20 (2202-02-196-1-03) ಅಡಿಯಲ್ಲಿ ಒದಗಿಸಲಾದ ರೂ.1104.00 ಲಕ್ಷಗಳು ಹಾಗೂ ಜಿಲ್ಲಾ ವಲಯದ ಲೆಕ್ಕ ಶೀರ್ಷಿಕೆ:2202-00-101-0-19 (2202-01-197-1-02) ಅಡಿಯಲ್ಲಿ ಒದಗಿಸಲಾದ ರೂ.222994.28 ಲಕ್ಷಗಳು ಸೇರಿದಂತೆ ಒಟ್ಟು ರೂ.224098.28 ಲಕ್ಷಗಳಲ್ಲಿ ಮೂರನೇ ತ್ರೈಮಾಸಿಕ ಅವಧಿಯ (ಅಕ್ಟೋಬರ್ 2026 ರಿಂದ ಡಿಸೆಂಬರ್ 2026 ವರೆಗೆ) ವೇತನ ಪಾವತಿಗಾಗಿ ರೂ.56024.57 ಲಕ್ಷಗಳನ್ನು (ಐವತ್ತಾರು ಸಾವಿರದ ಇಪ್ಪತ್ತನಾಲ್ಕು ಲಕ್ಷದ ಐವತ್ತೇಳು ಸಾವಿರ ರೂಪಾಯಿಗಳು ಮಾತ್ರ) ಈ ಕೆಳಕಂಡಂತೆ ಬಿಡುಗಡೆ ಮಾಡಿ, ನಿಯಮಾನುಸಾರ ಭರಿಸಲು ಸಂಬಂಧಿಸಿದ ಇಲಾಖಾ ಮುಖ್ಯಸ್ಥರಿಗೆ ಅನುಮತಿ ನೀಡಿ ಆದೇಶಿಸಿದೆ.

@@@@

ಷರತ್ತುಗಳು:

1. ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ, ಬೆಂಗಳೂರು ಇವರು ಸದರಿ ಮೊತ್ತವನ್ನು ಜಿಲ್ಲಾವಾರು/ತಾಲ್ಲೂಕುವಾರು ಹಂಚಿಕೆಮಾಡಿ, ಮರು ಬಿಡುಗಡೆ ಮಾಡಲು ಮತ್ತು ಖಜಾನೆಯಲ್ಲಿ ಅಪ್ಲೋಡ್ ಮಾಡಲು ಕ್ರಮವಹಿಸತಕ್ಕದ್ದು.

2. ಪ್ರತಿ ತಿಂಗಳ 5ನೇ ತಾರೀಖಿನೊಳಗಾಗಿ ಅರ್ಹತೆಗೆ ಅನುಗುಣವಾಗಿ ವೇತನವನ್ನು ಸಂಬಂಧಿಸಿದ ಡಿ.ಡಿ.ಓ ಗಳು ಬಿಡುಗಡೆಗೊಳಿಸಿರುವುದನ್ನು ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ, ಬೆಂಗಳೂರು, ಇವರು ಖಚಿತಪಡಿಸಿಕೊಳ್ಳತಕ್ಕದ್ದು

3. ಇಲಾಖಾ ಮುಖ್ಯಸ್ಥರು ಅರ್ಹತೆಗೆ ಅನುಗುಣವಾಗಿ ವೇತನ ಬಿಡುಗಡೆ ಮಾಡುವಲ್ಲಿ ಯಾವುದೇ ವಿಳಂಬವಾದರೆ ಸಂಬಂಧಿಸಿದ ಡಿ.ಡಿ.ಓ ಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡತಕ್ಕದ್ದು ಮತ್ತು ಕೆ.ಸಿ.ಎಸ್.ಆರ್ (ಸಿ.ಸಿ.ಎ) ನಿಯಮಗಳ ಪ್ರಕಾರ ಕ್ರಮ ಕೈಗೊಳ್ಳತಕ್ಕದ್ದು

4. ಅರ್ಹತೆಗೆ ಅನುಗುಣವಾಗಿ ವೇತನ ಪಾವತಿಯನ್ನು ಖಚಿತಪಡಿಸಿಕೊಳ್ಳಲು ಪ್ರತಿ ತಿಂಗಳು 10ನೇ ತಾರೀಖಿನೊಳಗೆ ಎಲ್ಲಾ ಡಿ.ಡಿ.ಓ ಗಳೊಂದಿಗೆ ವಿಡಿಯೋ ಕಾನ್ಸರೆನ್ (VC) ಅನ್ನು ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ, ಬೆಂಗಳೂರು. ಇವರು ನಡೆಸತಕ್ಕದ್ದು. ವೇತನ ಪಾವತಿಗೆ ವಿಳಂಬವಾದ ಸಂದರ್ಭದಲ್ಲಿ ಕೆ.ಸಿ.ಎಸ್.ಆರ್ (ಸಿ.ಸಿ.ಎ) ನಿಯಮಗಳಂತೆ ಶಿಸ್ತು ಕ್ರಮಕೈಗೊಳ್ಳತಕ್ಕದ್ದು.

5. ಪ್ರತಿ ತಿಂಗಳು 12ನೇ ತಾರೀಖು ಅಥವಾ ಎಂ.ಪಿಕ್ ಸಭೆ, ಇವುಗಳಲ್ಲಿ ಯಾವುದು ಮೊದಲೋ ಆ ದಿನಾಂಕದೊಳಗಾಗಿ ವೇತನ ಬಳಕೆ ಪ್ರಮಾಣ ಪತ್ರವನ್ನು ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ, ಬೆಂಗಳೂರು, ಇವರು ನಿಗದಿತ ನಮೂನೆಯಲ್ಲಿ ಪಡೆಯತಕ್ಕದ್ದು, ಹೀಗೆ ಸಲ್ಲಿಸುವ ಬಳಕೆ ಪ್ರಮಾಣ ಪತ್ರಕ್ಕೆ ಅನುಗುಣವಾಗಿಯೇ ಮುಂದಿನ ಕಂತಿನ ಅನುದಾನವನ್ನು ಬಿಡುಗೆಡೆಗೊಳಿಸಲಾಗುವುದು.

6. ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದ ಯಾವುದೇ ಇತರೆ ಯೋಜನೆಯ ನಿಧಿ/ಅನುದಾನದೊಂದಿಗೆ ಈ ಸಂಬಂಳದ ಪಾವತಿಯಲ್ಲಿ ಯಾವುದೇ ಪುನಾರವರ್ತನೆ ಇಲ್ಲವೆಂದು ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ, ಬೆಂಗಳೂರು, ಇವರು ಖಚಿತಪಡಿಸಿಕೊಳ್ಳತಕ್ಕದ್ದು ಮತ್ತು ಒದಗಿಸಲಾದ ಅನುದಾನವನ್ನು ಯಾವ ಉದ್ದೇಶಕ್ಕಾಗಿ ಒದಗಿಸಲಾಗಿದೆಯೋ ಅದೇ ಉದ್ದೇಶಕ್ಕಾಗಿ ಬಳಸತಕ್ಕದ್ದು, ಇತರೆ ಯಾವುದೇ ಉದ್ದೇಶಕ್ಕಾಗಿ ಬಳಸತಕ್ಕದ್ದಲ್ಲ.

7. ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯ ಅಡಿಯಲ್ಲಿ ಕೇಂದ್ರದ ಪಾಲಿನ ಅನುದಾನದ ಬಿಡುಗಡೆಗಾಗಿ ಕೇಂದ್ರ ಸರ್ಕಾರದೊಂದಿಗೆ ಪತ್ರ ವ್ಯವಹಾರ ನಡೆಸಿ ಅನುದಾನವನ್ನು ಶೀಘ್ರುವಾಗಿ ಪಡೆಯಲು ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ ಇವರು ಕ್ರಮವಹಿಸತಕ್ಕದ್ದು

8. ಬಿಡುಗಡೆ ಮಾಡಲಾಗಿರುವ ಅನುದಾನದ ಬಳಕೆಯ ಬಗ್ಗೆ ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ, ಬೆಂಗಳೂರು, ಇವರು ನಿಯಮಾನುಸಾರ ಲೆಕ್ಕ ಪತ್ರಗಳನ್ನು ಇಡತಕ್ಕದ್ದು

9. ಒದಗಿಸಲಾದ ಅನುದಾನದಲ್ಲಿ ಪ್ರಸಕ್ತ ಆರ್ಥಿಕ ಸಾಲಿನ ವೇತನ ವೆಚ್ಚಗಳನ್ನು ಮಾತ್ರ ಭರಿಸತಕ್ಕದ್ದು, ಯಾವುದೇ ಕಾರಣಕ್ಕೂ ಹಿಂದಿನ ಆರ್ಥಿಕ ಸಾಲಿನ ವೇತನ ವೆಚ್ಚಗಳನ್ನು ಭರಿಸತಕ್ಕದ್ದಲ್ಲ.

10. ಪ್ರಸ್ತುತ ಮೂರನೇ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆಗೊಳಿಸಲಾಗಿದ್ದು ನಾಲ್ಕನೇ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆಗೂ ಮುನ್ನ ಕಡ್ಡಾಯವಾಗಿ ಇಲಾಖಾ ಮುಖ್ಯಸ್ಥರು ಉಪಯೋಗಿತಾ ಪ್ರಮಾಣ ಪತ್ರ (Utilisation Certificate), ಅನುದಾನ ಬಳಕೆಯ ವಿವರ ಮತ್ತು ಬೇಡಿಕೆ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸತಕ್ಕದ್ದು, ತಪ್ಪಿದಲ್ಲಿ ಅನುದಾನ ಬಿಡುಗಡೆಗೊಳಿಸಲಾಗುವುದಿಲ್ಲ.

11. ಈ ಸಂಬಂಧ ತಮ್ಮ ಹಂತದಲ್ಲಿ ಹೊರಡಿಸುವ ಜ್ಞಾಪನಾ ಹಾಗೂ ಸದರಿ ಆದೇಶ ಪ್ರತಿಯನ್ನು ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ, ಬೆಂಗಳೂರು, ಇವರು ತಮ್ಮ ಇಲಾಖಾ ವೆಬ್‌ಸೈಟ್‌ನಲ್ಲಿ ಕಡ್ಡಾಯವಾಗಿ ಪ್ರಕಟಿಸತಕ್ಕದ್ದು.

12. ಮೇಲ್ಕಂಡಂತೆ ಬಿಡುಗಡೆಗೊಳಿಸಿರುವ ಅನುದಾನದ ಅಡಿಯಲ್ಲಿ ಭರಿಸಲಾಗುವ ವೆಚ್ಚದ ವಿವರಗಳನ್ನು ಪ್ರತಿ ಮಾಹೆ ಅವಲೋಕನ ತಂತ್ರಾಂಶದಲ್ಲಿ (ಹೊಸ ಡಿಸಿಷನ್ ಸಪೋರ್ಟಿಂಗ್ ಸಿಸ್ಟಂ) ಅಂಕಿ-ಅಂಶಗಳನ್ನು ಇಂದೀಕರಿಸತಕ್ಕದ್ದು.

ಈ ಆದೇಶವನ್ನು ಆರ್ಥಿಕ ಇಲಾಖೆಯ ಆದೇಶ ಸಂಖ್ಯೆ: ಎಫ್‌ಡಿ 5 ಟಿಎಫ್ ಪಿ 2026, ದಿನಾಂಕ: 28.09.2026 ರಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಪ್ರತ್ಯಾಯೋಜಿಸಿರುವ ಅಧಿಕಾರದನ್ವಯ ಹೊರಡಿಸಲಾಗಿದೆ.

Samagra Shikshana Karnataka

CLICK HERE DOWNLOAD

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!