Kannda Story-03 ಮರಗೋಟಿ

Kannda Story-03 ಮರಗೋಟಿ

 

Kannda Story-03 ಮರಗೋಟಿ

ಚುಂಚನಗಿರಿ ಅನ್ನೋದು ಒಂದು ಪಟ್ಟ. ಆ ಊರಾಗೇ ಗಂಡ ಎಂಡ್ತಿ ಇಬ್ರೂ ಆಳೀದ್ರೂ. ಅವರೆ ಎಷ್ಟು ದಿನಾ ಆದ್ರೂ ಮಕ್ಕು ಆಗ್ಲೆ ಇಲ್ಲ. ಆಗ ಏನ್ಮಾಡಿದ್ರೂ? ಭೈರೂ ಸ್ವಾಮೀಗೆ ಹೋಸ್ಪಿಟ್ಟು ‘ಸ್ವಾಮಿ ನಂಗೆ ಎಷ್ಟು ದಿನಾ ಆದ್ರೂ ಮಕ್ಕಳಾಗ್ಲಿವಲ್ಲ. ನನಗೆ ಮಕ್ಕಳ ಕೊಡೋಕು, ಅಂತ ವೋಗಿ ಕೇಳಿದ್ದೂ. ಆಗ ದೇವು, ಪ್ರತ್ಯಕ್ಷ ಆಗಿ ಅಮ್ಮ ಮಕ್ಕಳಾಗ್ತವೇ ಒಂದ್ ಹೆಣ್ಣು ಒಂದ್ ಗಂಡು, ಎರಡು ಮಕ್ಕಳಾಗ್ತವೆ. ಮಕ್ಕಳಾದ್ರೆ ನೀವು ಉಳಿಯಲ್ಲ ಗಂಡ ಎಂಡ್ತಿ. ಮಕ್ಕಳು ಮಾತ್ರ ಉಳ್ಕೊಂತಾವೆ. ಆದ್ರೂ ಪರಾಗಿಲ್ಲ. ನಾವು ಉಳ್ಳಾದಿದ್ರೂ ಹಾಗಿಲ್ಲ. ಮಕ್ಕು ಮಾತ್ರ ಕೊಡೋಕು. ನಿಂಗೆ ಗಂಡ್ ಕತ್ತರಿ ಆಕೀನಿ. ಮಕ್ಕಳ ಫಲ ಕೊಡ್ರಿ ಅಂತ ಹೇಳಿದ್ದು ಆಯಮ್ಮ.

ಆಗ ಅತು ಅಂತ ಹೇಳಿ ತೀರ್ಥ ಪ್ರಸಾದ ಕೊಟ್ಟು ಕಳಿಸಿಕೊಡು ದೇವು ಭೈರೂಸ್ವಾಮಿ. ಆಗ ಬಂದು ಆಯಮ್ಮ. ನೀರು ಉಳ್ಕೊಂಡ್ಲು. ಒಂದ್ ಗಂಡು, ಒಂದ್ ಎಣ್ಣು ಮಕ್ಕಳಾದ್ದು. ಹದಿನಾರು ಒಂಭತ್ತು ತಿಂಗು ತುಂಬಿ ಮಕ್ಕಳಾಗೂತಲೂವೆ, ಆಗ ಎರಡು ಮಕ್ಕಳಾದಾಗ ಆ ಮಕ್ಕು ಅಷ್ಟಾಗಿ ಇಷ್ಟಾಗಿ ಆಡಂಗೆ ಆದೋ, ಆ ಗಂಡ್ ಮಗಿಗೊಮ್ಮೆ ಸ್ನಾನ ಎಲ್ಲಾ ಮಾಡ್ಲಿ ಅದಕ್ಕೆ ಒಳ್ಳೆ ಅಂಗಿ ಹಾಕಿದಳು. ಆಡಾಕ್ ಗಂಡು ಮಗೂ ಹೋಯ್ತು. ಆಗ ಗಂಡ ಎಂಡ್ತಿ ಇಬ್ರೂ ಮನೇ ತವ ಇದ್ದರಲ್ಲ ? ಇವ್ರ ಪಡಸಾಲೆ ಒಳ್ಳೆ ಕೂತಿದ್ರು. ಹೆಣ್‌ಗುನು ಹೋಯ್ತು. ಗಂಡ ಹೆಂಡತಿ ಮಕ್ಕಳನ್ನು ನೋಡ್ಲಿಟ್ಟು ಸಂತೋಷ ಆಯ್ತು. ಆಗ ಅಪ್ಪನತಕ್ಕೆ ಗಂಡು ಮಗು ಹೋಯ್ತು. ಹೆಣ್‌ಗು ತಾಯಿ ತಕ್ ಬಂತು. ಆ ಮಗ ಎತ್ಕಂಡು ಮುದ್ದಾಡ್‌ ಬಿಟ್ಟು ಪಕಪಕನೆ ನಕ್ಕರಲ್ಲ. ಸತ್ತೋಗ್‌ ಬಿಟ್ರು! ಸತ್ತೋದಾಗ ಅಕ್ಕಪಕ್ಕದಾಗಿದ್ದವು ನಿಮ್ಮಂತವರೂ, ಅವು ಇನ್ನೇನು ಇಂಗೇ ಬಿಡಕ್ ಆಗ್ತದ ? ಆಗ ತಕ್ಕೊಂಡೋದ್ರು, ದಫನ್ ಮಾಡಿದ್ರು. ಮಕ್ಕು ಸಾಕೋರು ಯಾರು, ಅಕ್ಕಪಕ್ಕದಾಗಿದವು ಮಾಡಿದ್ದೇ ಇಷ್ಟು ಕೊಳ್ಕೊಂಡು ಹಿಂಗೇ ಬಳ್ಕೊಂಡು ಇಂಗೆ ಇಂದಿಬಿಟ್ರು.

ಆಗ ನಿಮ್ಮಂಥ ಗೌಡನೇಯ ಬಾರೋ ಮಗ ನಮ್ಮೂರ ಬಾಳೇಗಿಡದಾಗೇ ಬಾಳೇಗಿಡ ಅತ್ತೆ ಮಾಡೋಕು ಬಾರಪ್ಪ ತೋಟಕ್ಕೆ ಅಂತ ಆ ಗಂಡು ಮಗನ ಕಕ್ಕೊಂಡು ಹೋದ್ರು. ಆಗ ಹೆಣ್ಣು ಮಗ ಏನಂತು ಅಣ್ಣಯ್ಯ ನಾನೊಬ್ಳೆ ಇರೊಣೆನೋ ಅಣ್ಣಯ್ಯ ನಾನು ಬತ್ತೀನಿ ಅಣ್ಣಯ್ಯ ಅಂತು. ಅಂಗಂದಾಗ ಈ ಮಗನೂ ಕಕ್ಕೊಂಡು ಒಂದು ಗೋಣಿಚೀಲ ತಕ್ಕೊಂಡು ತೋಟಕ್ ಹೋದ್ರು.

ಒಂದು ಮಾವಿನಮರ, ಮಾವಿನ ಮರದಡಿ ಆ ಗೋಣಿಚೀಲ ಹಾಕಿಟ್ಟಿದ್ದೆ, ಈ ಹೆಣ್‌ಮಗ ಕುಂಡ್ರಿಸಿ ಬಾಳೆಗಿಡ ಅತ್ತೆ ಮಾಡ್ತ ಇದ್ರು. ಆ ಬಾಳೆಗಿಡ ಅತ್ತೆ ಮಾಡ್ತ ಇದ್ದೇನಾಗ ಒಂದು ಮಾವಿನಣ್ಣು ಬಿದ್ದಿತ್ತು. ಆ ಮಾವಿನಹಣ್ಣು ಬೀಳ್ಕೊಲೂವೆ ‘ಅಣ್ಣಯ್ಯ ಒಂದ್ ಹಣ್ಣು ಬಿದೈತೆ ಅಂದ್ಲು ಹೆಣ್ ಮಗು; ಅವ್ವ ಹಣ್ಣು ಬಿದ್ದಿದ್ರೆ ತಗೊಂಡು ತಿನ್ನು ಅಂದ. ತಿನ್ನಾಕ್‌ತಕಂಡು ನೋಡೋದ್ರೋಳೆ ಒಳ್ಳೇ ಹುಳಾ ಇತ್ತು ಅದರಾಗೊಂದು. ಅಣ್ಣಯ್ಯ ಇದರೊಳಗೆ ಉಳ ಐತೆ ಅಂದ್ಲು. ಹುಳಾ ಇದ್ರೆ ತಿನ್ನೇಡ ಅಂಗೆ ಮಡಿಕ್ಕೊಳವ್ವ, ಮನೀಗ್ ವೋಗಿ ತಿನ್ನಾಣ ಅಂತ ಅಣ್ಣಯ್ಯ ಹೇಳ್ತಾ. ಸಾಯಂಕಾಲ ತನ್ನ ಅತ್ತೆ ಮಾಡ್ಕೊಂಡು ಸಾಯಂಕಾಲ ಅಣ್ಣ, ತಂಗಿ ಇಬ್ರೂ ಮನೆಗೆ ಬಂದ್ರು. ಮನೆಗೆ ಬಂದಾಗ ಕುಡ್ಡು ಇತ್ತಲ್ಲ? ಕುಡ್ಡು ತಗೊಂಡು ಆ ಹುಳ ತೆಗೆದುಬಿಟ್ರು. ಒಂದು ಪಾವು ಇತ್ತು. ಪಾವಿಗೆ ಹಾಕ್ಸಿದ್ರು ಅವಣ್ಣು ಕುಡ್ಕೊಂಡು ತಿಂದ್ರು.

ಆ ಹುಳ ಏನ್ಮಾಡು ? ಬೆಳಕು ಹರಿಯೋದರೊಳೆ ಪಾವಿನ ಉದ್ದಕ್ಕೂ ಗಾತ್ರಕ್ಕೂ ಆಯ್ತು. ಈ ಮಕ್ಕಳು ನೋಡಿದ್ರಲ್ಲ ? ಯಾತಕ್ಕಾಗಿ ಇದು ಇಂಗೆ ಆಗುತ್ತಿಲ್ಲ ಅಂದರು. ಅಂದಿದ್ದೆಯಾ ತಿರಾ ಇನ್ನೊಂದು ಬೆಳಿಗ್ಗೆಗೆ, ಅಚ್ಚೇರಿತ್ತು, ಅಚ್ಚೇರೆ ಹಾಕಿದ್ರು. ಅದು ಅಚ್ಚರಿನುದ್ದಕ್ಕೂ ಆಯ್ತು, ಗಾತ್ರಕ್ಕೂ ಆಯ್ತು. ಇನ್ನೊಂದು ಬೆಳೆ ಸೇರಿತ್ತಲ್ಲ, ಆ ಸೇರಿಗಾಕಿದ್ರು. ಆ ಸೇರಿನುದ್ದಕ್ಕೂ ಸೇರಿನಗಾತ್ರಕ್ಕೂ ಆಯ್ತು. ಪ್ರತಿಯೊಂದು ದಿವೃಕ್ಕೂ ಒಂದೊಂದು ರಾತ್ರಿಗೆ ಒಂದೊಂದು ತರಾ ಆಯ್ತು. ಕೊಳಗಿತ್ತು ಕೊಳಗಕ್ಕೆ ಹಾಕಿದ್ರು. ಕೊಳಗ್ ಉದ್ದಕ್ಕೂ ಕೊಳಗ್ ಗಾತ್ರಕ್ಕೂ ಆಯ್ತು. ಆಗ ಈ ಗಂಡಮಗ ಅಷ್ಟೊತ್ತಿಗಾಗ್ಲೆ ಒಂದಿಟ್ಟುದ್ದ ಮಗ ಆದ, ಈ ಉಳ ಯಾತ್ರಾಗ್ದಾಕಿದ್ರೂ ಇಷ್ಟುದ್ದ ಇಷ್ಟು ಗಾತ್ರ ಆಗ್ತದಲ್ಲ, ಈ ಅರಮನೆ ಒಳಗಿದ್ದನ್ನೆಲ್ಲ, ಮನೆ ಉದ್ದಕ್ಕೂ ಮನೆ ಗಾತ್ರಕ್ಕೂ ಆದ್ರೆ, ನಮ್ಮನ್ನ ಬಿಡುತ್ತಾ ? ನಮ್ಮನ್ನ ಬಿಡಲ್ಲ. ಅಮ್ಮ ನಡೀ ನಾವೆಲ್ಲರೂ ಹೋಗಿ ಬಿಡೋಣ ಅಂತ ಹೇಳಿಟ್ಟು ಹೊರಟ್ರು. ಹೋಗೋಕಾದ್ರೆ, ಅವತ್ತು ಮಳೆ ಜಿಡಿ. ದನ ಕರೀನವು ನಮ್ಮಜ್ಜಿ ಅಂತವು ಒಳಗೇ ದನ ಮೇಯಿಸ್ತಾ ಇದ್ರು. ಆ ಮನೆಗೊಡೆಗೆ ಬೆಂಕಿ ಹಾಕ್ಕೊಂಡು ಕಾಯ್ದಿಕೊಂಡಿದ್ರು.

ಇವು ಯಾವಾಗ ಮನೆಯಿಂದಾಚೆಗೆ ತೆಗೆದ ಕದ ತೆಗೆದ್ದಂಗೆ ಬಿಟ್ಟು ಹೊರಲ್ಲ ? ಅಣ್ಣ ತಂಗಿ ಇಬ್ರೂನೆ. ಹುಳ ಉರುಡಿ ಉರುಡಿ ಹಿಂದೆ ವೋಗ್ತಾ ಐತಿ. ಉಳ ಬಂತು. ಉಳಾ ನೋಡ್ಲಿಟ್ಟು, ಈ ಉಳಾ ಎಲ್ಲೋದ್ರೂ ನಮ್ಮ ಹಿಂದೆ ಹಿಂದೆನೆ ಬರದಲ್ಲ ? ಇದಕ್ಕೇನು ಮಾಡೋದು ? ಅಂತ ಹೇಳಿ ಅಜ್ಜಿ ತವ ಹೋದ್ರು. ಅಜ್ಜಿ ಬೆಂಕಿ ಹಾಕಿದ್ರಲ್ಲ ? ಅಜ್ಜಿ ಇಲ್ಲೊಂದು ಹುಳ ನಮ್ಮನ್ನ ತಿನ್ನಾಕೆ ಅಂತ ಬರಾ ಐತೆ. ಅದು ಹುಡ್ಡು, ಬಂದ್ವ ಅಂತ ಕೇಳುತ್ತೆ. ಇಲ್ಲ ಬೆಂಕಿಗೆ ಹಾರಿ ಸತ್ತೋದ್ರು ಅಂತ ಹೇಳೋಡು ಅಂತ ಎದ್ದು ಮಕ್ಕಳು ಹೇಳಿದ್ರು. ಅವಾಗ ಆಲಿಗ್ಗಂಟ ಮುಂದಕೆ ಹೋದ್ರು.

ಉಳಾ ಅಲ್ಲಿಗೂ ಬಂತು. ಅಲ್ಲಿ ಬಂದಾಗ ಉಳಾ ಕೇಳು: ‘ಅಜ್ಜಿ ಎರಡಾಳು ಹುಡುಗ್ರು ಬಂದ್ವಲ್ಲ ಎತ್ತಾಗ್ ಹೋದ್ರು ? ಇವೈನ್ ಮಾಡ್ತು ಉಳಾ ತಿನ್ನಾಕೆ ಬರುತ್ತೇ ಅಂತೂ ವಾ ಹಾರಿ ಬೆಂಕಿಗೆ ಬಿದ್ದು ಸತ್ತೋತ್ತು ಅಂತು.

ಇನ್ನು ಮಕ್ಕು ಸತ್ತೋಲೆ ನಾನಿನ್ಯಾಕೆ ಇರೋಣ ? ಗಂಡಗಾತ್ರ ಆಗ್ತಿನಿ ಅಂತ ಹೇಳಿತ್ತಲ್ಲ? ದೇವಿಗೆ ಹುಳ ? ಅದು ಆತರ ಕಾಯ್ತಾ ಇತ್ತು ಮಕ್ಕುನ, ಉಳಾ ಕಾಯ್ತಾ ಇತ್ತು. ಉಳದರೂಪದಲ್ಲಿ ದೇವ್ರು ಬಂದು ಕಾಯ್ತಾ ಇತ್ತು. ಆಗ ಇನ್ನು ಮಕ್ಕು ಬೆಂಕಿಗೆ ಬಿದ್ದು ಸತ್ತೋದ್ವು ಅಂತ ಹೇಳಲ್ಲ ಅಜ್ಜಿ; ಆ ಮಕ್ಕು ಹೋಗಿಟ್ಟು, ಅಂತ ಹುಳ ಉರುಳಿ ಬಿದ್ದಿದ್ದು ಬೆಂಕಿ ಒಳಕ್ಕೆ. ಆಗ ಇವ್ರು ಉಳಾ ಬಿದ್ರೇ ಕೇಳೋ ಕಾ ? ಅವರು ಜಾಸ್ತಿ ಇನ್ನೊಂದಿಷ್ಟು ಸೌದೆ ಆಕಿದ್ರು. ಚೆನ್ನಾಗಿ ಸುಟ್ಟಾಕಬಿಟ್ಟು. ಆಗ ಇವ್ರು ಮಕ್ಕು ಮುಂದಕ್ಕೆ ಹೋಗೋಕಾದ್ರೆ, ಆ ಹುಳಾ ಯಾವಾಗ್ ಸತ್ತೋಗ್ ಬಿಡ್ತಿಲ್ಲ, ಮತ್ತು ಸಮರ್ಥ ಮಕ್ಕು ಆದ್ರು. ಇಬೂವೇ ಅಣ್ಣ-ತಂಗಿ ಇಬ್ರೂವೆ.

ಆಗ ಇಲ್ಲಿ ಬೆಟ್ಟ ಬಿಟ್ಟು ಕಲ್ಯಾಣಮಂಟಪಕ್ಕೆ ಹೋಗು ಅಷ್ಟರಕ್ಕೆ ಸಮರ್ಥ ಮಕ್ಕು ಅಣ್ಣ ತಂಗಿ ಇಬ್ರೂವೇ. ಅಣ್ಣಯ್ಯ ತಂಗಿಗೆ ಹೇಳ್ತಾ, ಅವ್ವಾ ನಾನು ನೀನೂ ಇಬ್ರೂ ನಡುವೆ ಸಮರ್ಥ ಮಕ್ಕಾದ್ದು, ಒಂದು ದಾರಿ ಒಳ್ಳೆ ಅಣ್ಣ ತಂಗೇರು ವೋಗ್ತಾ ಇದ್ರೆ, ಈಯಮ್ಮ ಏನಾಗೈಕು ? ಅಂತ ನನ್ನ ಕೇಳಿದ್ರೆ ಅಲ್ಲಿಗೆ ನಾನ್ ಏನಂತ ಹೇಳೋದು? ಅಲ್ಲಿಗೆ ನಾನೇ ದೋಷಕ್ಕೆ ಒಳಗಾದೇ. ನಾನು ಬೆಳ್ಳೂರು ದಾರಿ ಒಳಗೆ ವೋಡ್ತೀನಿ. ನೀನು ಚಿಕ್ಕ ಹಳ್ಳಿ ದಾರಿ ಒಳಗೆ ಹೋಗ್ತಿಡು. ನೀನು ಒಂದ್ ಪಟ್ಟನೋ, ಪಾಳ್ಯವೋ, ಸೇರೋ. ನಾನು ಒಂದ್ ಪಟ್ಲವೋ ಪಾಳ್ಯವೋ ಸೇರೋತೀನಿ ಅಂತ ಅಣ್ಣಯ್ಯ ತಂಗೀಗ್ ಹೇಳ್ತಾ. ತಂಗಿ ಅಣ್ಣಯ್ಯ ಇಷ್ಟಂತಾನೂ ಒಂದೇಳ್ಳಿವೆ ಹುಟ್ಟಿ ಬೆಳೆದಿದ್ದೆ. ಈವತ್ತು ನಾವು ಬೇರೆ ಬೇರೆ ಆಗೋ ಸ್ಥಿತಿ ಆಯ್ತಲ್ಲ ಅಂದಿದ್ದೆ ತಂಗಿ ಕೊಳ್ಳಾಗ ಕಳ್ಕೊಂಡಿದ್ದೆ ಒಂದಿಷ್ಟು ಅತ್ತು. ಆಗ ಅಣ್ಣ ತಂಗೀರು ಇಬ್ರೂನೂವೆ ಬೇರೆಯಾದರೂ.

ಚಿಕ್ಕನಹಳ್ಳಿ ದಾರಿ ಒಳಗ್ ತಂಗಿ ಹೊಂಟು. ಬೆಳ್ಳೂರ ದಾರಿ ಒಳಗೆ ಅಣ್ಣ ಹೊರಟ. ಅಷ್ಟು ದೂರ ಅಣ್ಣನೂ ವೋದ. ಇನ್ನೊಂದಷ್ಟು ದೂರ ತಂಗೀನೂ ಹೋದ್ಲು. ವೋಗಂದ ಗಂದ ವೋಗೂಲೂವೆ ಅಲ್ಲಿ ಒಂದು ಬಳೇ ಮಲ್ದಾರ ಬಿದ್ದಿತ್ತು. ಆಗ ತಿಲ್ಲಾ ತಂಗಿ ಅಣ್ಣಯ್ಯ ಅಂತ ಕೂಡ್ಕೊಂಡು ಅಡ್ಡಗೋದ್ಲು. ‘ಅಣ್ಣಯ್ಯ ನಿಲ್ಲಣ್ಣಯ್ಯ’ ಅಂತ ಹೇಳಿ. ಅಲ್ಲಿ ಏಕವ್ವಾ? ಅಂದ. ನಾನು ವೋಗ ದಾರಿ ಒಳಗೇ ಒಂದು ಬಳೇ ಮಲ್ದಾರ ಸಿಕ್ಕತುಕಣ್ಣಯ್ಯ, ಅದ್ಯೋಸ್ಕೋರ ನಿನ್ನ ಕೂಡ್ಕೊಂಡ ಬಂದೆ ಅಂತ ಅಂದ್ಲು. ಅಮ್ಮ ನಾನು ಬರೇ ದಾರಿ ಒಳಗೆ ಮುದ್ರೆಉಂಗುರ ಸಿಕ್ತು. ನೀನ್ ಬರೋ ದಾರಿ ಒಳ್ಳೆ ಬಳೇಮಲ್ದಾರ ಸಿಕ್ತು ಅಂತೀಯಾಅಂದ.

ನಾವು ಅಣ್ಣ ತಂಗಿ ಹುಟ್ಟಿದ್ದಕ್ಕೆ ನನ್ನೂರು ಹೆಸ್ರು ಗೊತ್ತಿಲ್ಲ. ನನ್ನ ಹೆಸ್ರು, ನಿನ್ನೊತ್ತಿಲ್ಲ. ನಿನ್ನ ಹೆಸ್ರು ನನ್ನೊತ್ತಿಲ್ಲ. ಸುಮೆ ಹುಟ್ಟಿದ್ದು, ಬೆಳೆದ್ದು. ತಾಯಿ ತಂದೆದೀರು ಹೆಸ್ರು ಒಂದು ಗೊತ್ತಿಲ್ಲ. ಇದರೊಳಗೆ ನಾನು ಒಂದು ಪಟ್ಟನೋ ಪಾಳ್ಯವೋ ಸೇರೊಂಡು, ಮದ್ಯೆ ಮುಂಜಿ ಆದ್ರೆ ನನಗೆ ಗಂಡುಮಕ್ಕು ಹುಟ್ಟಿದ್ರೆ ಮುದ್ರೆ ಕುಮಾರ ಅಂತ ಹೆಸ್ರುಕಟ್ಟಿನಿ. ನೀನು ಒಂದು ಪಟ್ಟವೋ ಪಾಳ್ಯವೋ ಸೇರೊಂಡು, ಮದ್ಯೆ ಆಗಿ ನಿನ್ನೊಂದು ಹೆಣ್ಣು ಮಗಳು ಹುಟ್ಟಿ ಹೆಣ್ಮಗಳು ಆದ್ರೆ ಬಳೇಬಂಗಾರಿ ಅಂತ ಹೆಸ್ರು ಕಟ್ಟು. ಅದಕ್ಕೆ ಅಣ್ಣನ ಮಗ ಆದನ್ನೇ ಮುದ್ರೆ ಕುಮಾರ, ತಂಗೇ ಮಗಳು ಆದನ್ನೇ ಬಳೆಬಂಗಾರಿ. ಈ ಎರಡು ಗುರು ಬಿಟ್ರೆ ನಮ್ಮ ಇನ್ನೇನು ಗುರು ಇಲ್ಲ ನಮಗೆ. ನಿನ್ನ ದಾರೀಲಿ ನೀನು ವೋಗು. ನನ್ನ ದಾರೀಲಿ ನಾನ್ ವೋಗ್ತಿನಿ ಅಂತ ಅಣ್ಣಯ್ಯ ಹೇಳ್ತಾ. ಆಗ ಅದೇ ದಾರೀಲಿ ತಂಗೀ ಬಂದ್ಲು. ಅದೇ ದಾರೀಲಿ ಅಣ್ಣಯ್ಯ ವೋದ, ಅಣ್ಣ ತಂಗಿ ಇಬ್ರೂ ಹೋಗೋಕಾದ್ರೆ, ತಂಗಿ ಇಷ್ಟ ಗಾತ್ರ ವೊಳ್ಳೆ ತಗೊಂಡು ಹೋಗಿದ್ದಾಳೆ. ತಂಗಿ ಸೀದಾ. ಇನ್ನ ಎತ್ತಾಗೂ ವೋಗಾಕಿಲ್ಲ.

ಇದೇ ಚುಂಚನಹಳ್ಳಿ ಒಳಗೇ ಮುತ್ತುಕದ ಮರ. ಒಂದು ಕೋರೆ ಇರುತ್ತೇ. ತಂಗಿ ಅಲ್ಲಿ ಗೋಗಿ ಸೇರೊಂಬಿಟ್ಟು. ಅಣ್ಣ ಬೆಳ್ಳೂರಿಗೆ ಹೋಗ್ತಿಟ್ಟ. ಸೀದಾ ಬೆಳ್ಳೂರಿಗೆ ಹೋದ. ಅಲ್ಲಿ ಒಂಟೆ, ಹುಲಿ ಬಂದು ಪಟ್ಟದ್ ಜನನೆಲ್ಲಾ ಬಡ್ಕೊಂಡು ತಿನ್ನುತ್ತಿರುತ್ತೆ. ಅಲ್ಲಿ ಹುಲಿ ಬರುತ್ತಲ್ಲ ? ತಿಂದು ಹಾಕುತ್ತಿಲ್ಲ ? ಅಂದ್ಬಟ್ಟು ಎತ್ತಾಗೆ ಹೊರಕ್ ಹೋದ್ರು ಜನ ಸೂರ ಮುಳಗೋ ಹೊತ್ತೆ ಒಳಕ್ ಸೇರೊಂಬಿಡೋರು. ಕದ ಹಾಕ್ಕೊಂಬಿಡೋರು.

ಇನ್ನು ಹೋದಮ್ಯಾಲೆ ಇನ್ನು ಯಾರ ಕಂಡವೆ ? ಅಲ್ಲಲ್ಲಿ ಕದ ಹಾಕೋಣಾಕೆ ಯಾರ ಮನೆಗೆ ವೋಗ್ತಾನೆ ? ಆ ಛಾವಡಿ ಒಳಗೇ ಸೇರೊಂಬಿಟ್ಟ. ಸೇರೊಂತ್ತೂವೆ ಈ ಹುಲಿ ಬಂತು ರಾತ್ರೇಗ್ ಒಳ್ಳೆ ಅರ್ಧರಾತ್ರೀಲಿ. ಅವಾಗ ಏನಂತ ಬೋರ್ಡು ಹಾಕ್ಸವೆ.

ಇನ್ನಾ ಆ ರಾಜನಿಗೆ ಒಬ್ಬು ಮಗಳು ಅವೈ. ಅವು ಏನಂಥ ಬೋರ್ಡು ಆಕವೇ ? ಈ ಹುಲಿ ಬಡಿದಗೆ ನನ್ನ ರಾಜ್ಯದಾಗೆ ರಾಜ್ಯ ಕೊಡ್ತೀನಿ. ನನ್ ಮಗಳ ಕೊಟ್ಟು ಮದ್ದೆ ಮಾಡ್ತೀನಿ. ಈ ಹುಲಿ ಯಾರಾದ್ರೂ ನೋಡಹುದು ಅಂತ ಬೋರ್ಡು ಆಕ್ಯಾವೆ. ಆ ಬೋರ್ಡು ಹಾಕಿದ್ದಾಗ, ಇವು ಆ ಹುಲಿ ಯಾವಾಗ ಅಬ್ಬರಿಸ್ಕೊಂಡು ಬಂತಲ್ಲ? ವೋಗಿ ಈ ಚಾವಿ ಇರುತ್ತಲ್ಲ, ಬಾಕು ಹೆಬ್ಬಾಗ್ಲು, ಮ್ಯಾಕೆ ವೋಗಿ ನಿಂತ್ಕಂಡು ವಡದಲೆ ಸೀಳ್ಕೊಂಡು ಚಂದ್ರಕಾಂತ ಮಡಿಕೊಂಡು ವೋಗಿದ್ದ, ಆ ಹುಲಿ ಯಾವಾಗ ಅಬ್ಬರಿಸ್ಕೊಂಡು ವೋಗ್ತಾ ಇದ್ದಾಗ ಹೆಬ್ಬಾಗಿಲು ಮ್ಯಾಲೆ ನಿಂತ್ಕಂಡು ಹೆಬ್ಬಾಗಿಲು ಅದುಮಿಸಿ ಇನ್ನು ಎತ್ತಾನ ಕಡಿಯೋಣ ಆ ಹುಲಿ ಬಿದ್ದಿತ್ತು.

ಆಗ ಚುಳುಗುರು ಹೂಬಾಲ ಐತಲ್ಲ ಹುಲೀಗೆ? ಅದನ್ನು ಕುಡ್ಕೊಂಡು, ಕಾಗ್ಲ ಆಕ್ಕೊಂಡು ಪಟ್ಟ ಕಟ್ಕಂಡು ಜೇಬಲ್ಲಿ ಮಡಿಕ್ಕೊಂಡು ವೋದ. ಭಾವಡಿ ಒಳಗೆ ಕೂತ್ಕಂಡ. ಇನ್ನು ಮಡಿವಾಳ ಶೆಟ್ಟಿ ಬಟ್ಟೆ ಒಗೆಯಾಕೆ ಅಂತ, ಬಟ್ಟೆಗಳೆಲ್ಲ ತಗೊಂಡು ಬಟ್ಟೆನೆಲ್ಲ ತುಂಬೊಂಡು, ಬಾಣೆ ತಗೊಂಡು ಹೇಳ್ಕೊಂಡು, ಕತ್ತೆ ಒಡ್ಕೊಂಡು ವೋಗ್ತಾ ಇದ್ದ.

ವೋಗ್ತಾ ಇರೋವಾಗ ಹುಲಿ ಬಿದ್ದಿರುತ್ತಲ್ಲ ? ಆಗ ನೋಡಿದ್ರಲ್ಲ ‘ಅಯ್ಯೋಯ್ಯೋ ಹುಲಿ ಬಿದ್ದಿಟೈತೆ. ಇನ್ನು ಕುಂಯ್ಯೋ ಬಿಟ್ಟಿದ್ದಲ್ಲ ? ಮೋಟು ಅದನ್ನೆಲ್ಲ ಕುಯ್ದು ಪಟ್ಟ ಕಳ್ಕೊಂಡು ತಗೋಂಡೋಗಿ ರಾಜನ್ಮನೇಗ್ ಕೊಟ್ಟ.

ರಾಜ ಏನ್ಮಾಡ್ಲಿಟ್ಟ ? ಎಲೆಲೆ ಈಟ್‌ತನ್ಯ ಹೊಡ್ಡಿಲ್ಲ ಹುಲಿಯಾ. ಇವತ್ತು ಹೊಡಿದ್ದಲ್ಲ ಅಂತ, ಮಡಿವಾಳ ಶೆಟ್ಟಿಗೆ ಮದ್ದೆ ಮಾಡಾತಗ ಹೊರಟ್ರು. ಹೋಗೋವಾಗ ನಿಮ್ಮಂಥ ಯಜಮಾನು ವೋಗ್ತಾ ಇದ್ರು. ವೋಗ್ತಾ ಇರೋವಾಗ ಇನ್ನಾ ಅಲ್ಲಿ, ಎಲೆ ಅಡಿಕೆ ಚೀಲ ಹಿಡ್ಕೊಂಬಿಟ್ಟು ಶೆಟ್ಟಿ ತಾಯಿ. ಅಯ್ಯೋ ಎಲ್ಲಾ ರೂವೆ ನನ್ನ ಮಗನ್ನ ದಡ್ಡ ಅಂತಾವೇ ಅನ್ನೋರು.

ಅಂತಾ ಅಲ್ಲಿಗೋಗಿ ಕೂಂತೊತ್ತೆ ಆಂಗಡ್ಡೆ, ಇಲ್ಲಿ ಗೋಗಿ ಕೂತ್ಕತ್ತೆ ಇಂಗಿತ್ಸೆ. ಅಂಗೋಗದು ಇಂಗ್ ಬಂದ್ವಿಡದು ಇಂಗಾಡ್ತ ಇದ್ರು, ಅಂದಳು. ಅಷ್ಟು ವೊತ್ಸೆ ಇವು ನಿಮ್ಮಂಥ ಯಜಮಾನು ಕರು ಅಯ್ಯಾ ಹುಲಿ ಉಗ್ರು ಫಸ್ಸು ಕುಯ್ದಿದ್ದೋವು ಯಾರು ? ಮೊಟು ಕುಯ್ದಿರೋದು ಯಾರು ಅಂತ ನೋಡು. ಹೆಚ್ಚು ದೊರೆ ಅಂತ ಕಾಣೀಯಾ ৩০৩. ಅವು ಗುರುತು ಕೊಟ್ಟು ಕಟ್ಟಿದ್ರು. ಆಗೋಗಿ ನೋಡೊದ್ರೋಳಗಾಗಿ ಫಸ್ಟು ಕುಡ್ಕೊಂಡು ಮಡಿಕ್ಕೊಂಡಿದ್ದಲ್ಲ ಅವನೇ ಸರಿ ಅನ್ನಿಸಿತು. ಮಡಿವಾಳ ಶೆಟ್ಟಿನಾ ಉಗ್ಗು ಕಳ್ಳಿ ಇನ್ನು ಕಕ್ಕೊಂಡೋದ್ರು. ಆಗ ಸ್ನಾನ ಮಾಡ್ಲಿ, ಅವಾಗ ಹೆಣ್ಣು ಮಗೀನ ಕೊಟ್ಟು ಮದ್ದೆ ಮಾಡಿಬಿಟ್ರು. ಮದ್ದೆ ಆದ ವರ್ಷಕ್ಕೆ ನೀರು ಹುಡ್ಕೊಂಡ್ಲು, ಅವನ ಹೆಂಡ್ತಿ, ರಾಜನ ಮಗಳು. ನೀರು ಉಲ್ಗೊಂಡು ಅವ್ರಗೆ ಗಂಡ್‌ಮಗ ಆಯ್ತು.

ನವನಾರು ಒಂಭತ್ತು ತಿಂಗು ತುಂಬಿ ಗಂಡಗ ಆಯ್ತು. ಆಗ ಮಗೀನ ಹೆಸ್ರು ಏನಂತ ಕಟ್ಟೋದಪ್ಪ ಅಂತ ಕೇಳಿದ್ರು. ಅಷ್ಟೇಯಾ ಅಪ್ಪ ಇನ್ನೊಂದು ಹುಟ್ಟಿದಾಗ ಏನಾರೂ ಕಳ್ಕೊಂಡ್ರೆ ಆಯ್ತು. ಈಗ ಮುದ್ರಾ ಕುಮಾರ ಅಂತ ಹೆಸ್ರು ಕಟ್ಟಿ ಅಂತ. ಮುದ್ರಾಕುಮಾರ ಅಂತ ಹೆಸ್ರು ಕಟ್ಟಿದ್ರು.

ಅಂತ ಇವು ಈ ತಂಗಿ ಇದ್ದಲ್ಲ ? ಅವಳಿದ್ದ ಕಡೆ ಇವು ಅತ್ತ ಸೀಮೆರಾಜನ ಮಗ ಎಲ್ಲಿ ಹೆಣ್ಣು ನೋಡಿದ್ರು ಮದ್ದೆ ಆಗೋಕಿಲ್ಲ. ಅವ್ರ ತಂದೆ ಎಲ್ಲೆಲ್ಲೋ ತಿರಿ ತಿರಿ ಸಾಕಾಗಿ, ಅಪ್ಪ ನಾನು ಎಲ್ಲಿ ಎಣ್ಣು ತಂದ್ರೂ ನೀನು ಮದ್ದೆ ಆಗಲ್ಲ. ನೀನು ವೋಗಿ, ಎಲ್ಲಾ ದ್ರೂ ವೋಗಿ, ನಿನ್ನೆ ಒಪ್ಪಿಗೆ ಆಗೋ ಹೆಣ್ಣು ನೋಡ್ಕೊಂಬಾ, ಮದ್ದೆ ಮಾಡೋದು ನಂಗಿ ಹೇಳ್ತಾ. ಆಗ ಇವು ದಂಡು ದಳ ಮಂದಿ ಮಾತ್ಸಲ ಎಲ್ಲ ಕರ್ಕೊಂಡು ಹೊರ. ಹೆಣ್ಣು ನೋಡಾಕೆ ರಾಜ ಮಂತ್ರಿನೂ ಕಟ್ಟಿಕೊಟ್ಟ. ಮಂತ್ರಿ ಕಕ್ಕೊ೦ಡ.

ರಾಜನ ಮಗ ವೋದ್ರು. ಅನ್ನು ಕುದ್ರೆ, ಒಂಟೆ ಹಾಕ್ಕೊಂಡು ವೋದ್ರಲ್ಲ ? ಇವು ಇಲ್ಲಿ ಚುಂಚನಹಳ್ಳಿ ತಕ್ ಬಾವಿಗೆ ಬಂದ್ರು. ಇವರು ಬೆಂಕಿಪಟ್ಟನೂ ಬಿಟ್ಟವೋ, ಬೀಡಿನೂ ಬಿಟ್ಟವೋ. ಏನೂ ಇಲ್ಲ ಬೀಡಿ ಸೇದಾಕೇ. ಆಗ ಆ ಮಂತ್ರಿ ಏನಂದ ? ಅಯ್ಯೋ ಎಲ್ಲಾನೂ ಬಿಟ್ಟಂದ್ರಲ್ಲ, ದೊರೆ ಮಗ್ನಗೆ ಹೆಣ್ ನೋಡಾಕಂತ ಬಂದು ನನ್ನ ತವ ಎಲ್ಲೋ ಒಂದಿಷ್ಟು ಮೋಟು ಐತೆ ಅನ್ನ ನೋಡೋಣ ಅಂತ ಅಂದ್ರೆ ಬೀಡಿಯೂ ಬೆಂಕಿಯೂ ಇಲ್ಲ ಏನ್ಮಾಡೋದು ? ಅದು ಮುತ್ತುಗದ ಮರಕ್ಕೆ ಕ್ವಾರೇ ಇತ್ತಲ್ಲ ? ಅದಕ್ ವೋಗಿ ಒಂದಾ ಮಾಡಾಕ್ ಕೂತ್ಕಂಡ ಮಂತ್ರಿ. ಇದೊಳಗೆ ಬೆಂಕಿ ಗಮ್ಮಲು ವೋಡಿತಾ ಇತ್ತು. ಅಲ್ಲಿ ಒಂದಾ ಮಾಡಿ ಎದ್ದ. ಅಮ್ಮ ಯಾರೂ ಇದರೊಳಗೆ ಇರೋದು ? ಬೆಂಕಿ ಗಮ್ಮಲು ಬಾ ಐತಲ್ಲ ಅಂದ. ಯಾಕಪ್ಪ ನಾನು ಅಂದ್ಲು. ತಂಗೀ ಅಂದ್ಲು. ಅಂಗಂತೂ ವಾ ನಿಮ್ಮನೆದು ಸ್ವಲ್ಪ ನೀರು ಕೊಡವ್ವ, ಬಾಯಾರೆ ಅಂದ. ಆಗ ಇಷ್ಟು ಗಾತ್ರ ಮಿಳ್ಳೆ ಒಳ್ಳೆ ಇನ್ನೆಷ್ಟು ಕೊಡಬಹುದು? ಕೊಟ್ಟು ನೀರು ಅವ್ರು. ಆಗ ನೀರು ಕೊಟ್ಟಾಗ, ನೀರ್ ತಕ್ಕೊಂಡು ಕೈಗೆ ಇಸ್ಕೊಂಡು ಆಗ ಇಸ್ಟ್ ಗಾತ್ರ ಮಿಳ್ಳೆಒಳ್ಳೆ ನೀರು ಕೊಟ್ಟಲ್ಲ ? ಅಷ್ಟು ಗಾತ್ರ ಮಿಳ್ಳೆ ಒಳ್ಳೆ ನೀರು ಕೊಡ್ತಿಯಲ್ಲ ಆಯ್ತದೇನವ್ವ ಅಂದಾ.

ಅಯ್ಯ ಆನೆ ಒಂಟೆ ಕುದುರೆ ದಂಡು ದಳ ಎಲ್ಲಾ ಇದೆ. ನೀನು ಇಷ್ಟು ಕೊಟ್ರೆ ಸಾಕಾಗೋಲ್ಲ ಅಂದ್ರು. ಅಪ್ಪ ನಿಮ್ಮ ಆನೆ ಒಂಟೆ ಕುದುರೆ ದಂಡು ದಳ ಮಂತ್ರಿ ಮಾರದಳಕ್ಕೆ ಕೊಡು ಇನ್ನೂ ಸ್ವಲ್ಪ ನೀರು ಅದೊಳಗೆ ಮಿಗುತ್ತೆ ಅಂದ್ಲು.

ಆಗ ತಕ್ಕೊಂಡೋದ. ಇಷ್ಟು ಗಾತ್ರ ಮಿಳ್ಳೆ, ಆನೆ ವಸೀ ನೀರು ಕುಡಿಯುತ್ತಾ ? ಒಂಟೆ ವಸೀ ನೀರು ಕುಡಿಯುತ್ತಾ ? ಎಲ್ಲಾ ಕುಡಿದು ಇನ್ನೂ ಸ್ವಲ್ಪ ನೀರು ಅದೊರೊಳಗೆ ಮಿಕ್ಕುತ್ತೆ! ಆಗ ಮಂತ್ರಿ ರಾಜನ ಮಗಂಗೆ ಹೇಳ್ತಾ, ಅಪ್ಪಾ ನಿನಗೆ ತಕ್ಕಾದ ಮಡದಿ, ನನ್ನೆ ತಕ್ಕಾದ ತಾಯಿ. ಈ ಮುಷ್ಕದ ಮರದ ಕ್ವಾರೇ ಒಳಗೆ ಐತೆ, ಬಾ ನೋಡೋಣ. ಮಿಳ್ಳೆ ಕೊಡೇಕಲ್ಲ ? ಬಾ ನೋಡೋಣ ಅಂತ ಕರ್ಕೋಂಬಂದು, ಕ್ವಳಮ್ಮ ಮಿಳ್ಳೆಯಾ ಅಂದ್ರು. ಮಿಳ್ಳೆ ಇಸ್ಕೊಣಾಕೆ ಈಚೆಗೆ ಬಂದಲ್ಲ ? ನೋಡಿದ್ರು. ನೋಡಿ ನಿಂದು ಮದ್ದೆ ಆಯ್ತಾ ಅಂತ ಕೇಳಿದ್ರು. ಇಲ್ಲಪ್ಪ ನನ್ನ ಮದ್ದೆ ಆಗಿಲ್ಲ ಅಂದ್ಲು. ಅದು ನಾವು ಹಿಂಗೇ, ಹೀಗೆ ದೊರೆಮಗ, ನಾವು ಮದ್ದೆ ಮಾಡ್ಕೊತಿವಿ ಬಾ ಅಂದ್ರು. ಆಗ ಬಾ ಅಂತ ಕರ್ಕೊಂಡು, ಕುದ್ರೆ ಮ್ಯಾಲೆ ಕುಂಡ್ರಿಸ್ಕೊಂಡ್ರು, ಬಂದ್ರು ಅರಮನೆಗೆ. ಪಟ್ಟ ಗುಡ್ಲಿ ಸಾರಿ ಮಧ್ವಮಾಡಿದ್ರು.

ಇನ್ನು ಮಧ್ವ ಆದ ವರ್ಷಕ್ಕೆ ನೀರು ಉಳ್ಕೊಂಡ್ಲು. ನವನಾರು ಒಂಭತ್ತು ತಿಂಗು ತುಂಬು. ಹೆಣ್ಣು ಮಗ ಆತು. ಆಯಮ್ಮನ್ನೇ ಕೇಳಿದ್ರು “ಏನಮ್ಮ ಮಗೀನ್ ಹೆಸ್ರು ಏನಂತ ಕಟ್ಟೋಣ ಅಂತ. ಮಗೀನ್ ಹೆಸ್ರು ಬಳೆಬಂಗಾರತಿ ಅಂತ ಕಟ್ಟಿ ಅಂತ ಅಂದ್ರು. ಮಗೀನ್ ಹೆಸ್ರು ಬಳೆಬಂಗಾರತಿ ಅಂತ ಹೆಸ್ರು ಕಟ್ಟಿದ್ರು. ಅಲ್ಲಿ ಅಣ್ಣನಮಗ ಬೆಳಿತಾನೆ. ಇಲ್ಲಿ ತಂಗೀಮನ್ನು ಬೆಳೀತಾಳೆ. ಆಗಂತೂ ವೇ-

ಅಣ್ಣನ ಮಗ ಮದ್ದೆಗೆ ಬಂದ. ಅನ್ನು ಮತ್ತೆ ತಿದ್ದಾ ಹೆಣ್ ನೋಡಾಕ್ ಹೊರ. ಹೋಗಬೇಕಾದ್ರೆ ಎಣ್ಣು ನೋಡ್ಕೊಂಬಂದ ಮಗ ಕೇಳ್ತಾ ಅಪ್ಪಾಜಿ ನೀನು ಎಲ್ಲಿಗೋಗಿದ್ದೆ ಅಂತ. ‘ಅಪ್ಪ ನಾನು ನಿನ್ನ ಮದ್ದೆ ಮಾಡೋಣ ಅಂತ ಹೇಳಿ ಹೆಣ್ಣೆಗೆ ಅಂತ ವೋಗಿದ್ದೆ ಕಣಪ್ಪ ಅಂದ.’ ಅಪ್ಪಾಜಿ ಮಧ್ಯೆ ಮಾಡೋದು ಸರಿ, ಹೆಣ್ಣು ನೋಡೋದು ಸೈ, ಆದ್ರೆ ನಿನ್ನೆ ಅಕ್ಕ ತಂಗಿ ಅಣ್ಣ ತಮ್ಮ ಎಷ್ಟು ಜನ ಇದ್ದೇರಿ ಅಂದ.

ಇಲ್ಲಪ್ಪ ನನಗೆ ಅಣ್ಣ ಇಲ್ಲ, ತಮ್ಮ ಇಲ್ಲ. ನಾವು ಇದ್ದೋರು ಇಬ್ರೂ ಅಣ್ಣ ತಂಗಿ. ನನ್ನ ತಂಗಿ ನಾನು ಇಂಗೇ ಬಚ್ಚೇಕಾದ್ರೆ, ನನ್ನ ತಂಗಿ ನಾನು ಸಮರ್ಥ ಮಕ್ಕಳಾದ್ದು, ಇಬ್ರೂ ಒಂದಾರಿ ಒಳಗೆ ಹೋದ್ರೆ ಯಾರು ಏನಂತಾರೆ? ಏನಾಗೈಕು ಈಯಮ್ಮ ಅಂತ ಕೇಳಿದ್ರೆ ನಾನು ಏನು ಹೇಳೋದು ಅಂತ ಹೇಳಿಟ್ಟು, ನನ್ನ ತಂಗೇ ಒಂದ್ ದಾರೀಲಿ ಹೋದ್ಲು. ನಾನೇ ಒಂದ್ ದಾರೀಲಿ ಬಂದೇ. ನನ್ನ ತಂಗಿ ಹೋಗೇಕಾದ್ರೆ ಒಂದ್ ಬಳೇ ಮಲ್ದಾರ ಸಿಕ್ತು. ನನಗೆ ಒಂದ್ ಮುದ್ರೆ ಉಂಗ್ರಾ ಸಿಗ್ತು. ನನ್ನ ತಂಗೇ ಕೂಡ್ಕೊಂಬಂದ್ರೂ. ಯಾಕೆ ಅಂತ ಅಲ್ಲಿ ನಾನು ನಿತ್ಕಂಡೆ. ನಿತ್ಕಳ್ಕೊ ವೊತ್ತೆ ಅಣ್ಣಯ್ಯ ನಂಗೊಂದು ಬಳೇ ಮಲಾರ ಸಿಕೈತೆ ಅಂದ್ಲು ತಂಗಿ.

ನಿನ್ನೆ ಸು ನನ್ನೊತ್ತಿಲ್ಲ. ನನ್ನ ಹೆಸ್ರು ನಿನ್ನೆ ಗೊತ್ತಿಲ್ಲ. ಈಗ ಮದ್ದೆ ಆಗಿ ಮಕ್ಕಾಗಿ ಹೆಣ್ ಮಗಳು ಹುಟ್ಟಿದ್ರೆ ಬಳೆ ಬಂಗಾರತಿ ಅಂತ ಹೆಸ್ರುಕಟ್ಟಿ. ನನಗೆ ಗಂಡು ಮಗ ಹುಟ್ಟಿದರೆ ನಾನು ಮುದ್ರೆಕುಮಾರ ಅಂಥ ಹೆಸ್ರು ಕಟೀನಿ. ಮುದ್ರೆಕುಮಾರ ಅನ್ನೋದೆ ಅಣ್ಣನ ಮಗ. ಬಳೇ ಬಂಗಾರತಿ ಅನ್ನೋಳೆ ತಂಗೆ ಮಗ್ಗು. ನಮಗೆ ಅಲ್ಲಿ ಗುರಾಗುತ್ತೆ ಅಂತ ಬೇರೆ ಬೇರೆ ಹೊರಟೋ.

ನನ್ನ ತಂಗಿ ಮದ್ಯೆ ಆದೋವೋ ಇಲ್ಲೋ ಅದಂತು ಗೊತ್ತಿಲ್ಲ ಅಂದ. ರಾಜ ಅಣ್ಣಂಗೆ, ಹುಡ್ಗನ ಅಪ್ಪಂಗೆ ಆಗ ಅವನಿಗೆ ಪ್ರಾಣ ಹೋಯ್ತು.

ರಾಜನ್ನ ತಗೊಂಡೋಗಿ ದಫನ್ ಮಾಡಿದ್ರೆ ಅಲ್ಲಿಗೆ ಮದ್ದೆ ಸುಗ್ಗಿ ಇಲ್ಲ. ಆ ವರ್ಷ ಕೈ ಬಿಟ್ಟಿದ್ರು. ಮುಂದಕ್ ಮದ್ಯೆ ಲಗ್ನ ಇತ್ತಲ್ಲ ? ಆವಾಗ ಅವು ಹೇಳ್ತಾ ಅಮ್ಮ ನಮ್ಮತ್ತೆ ಅವೋ ಇಲ್ಲೋ ಅದು ಯಾವ್ ಪಟ್ಟಣಗಾದ್ರೂ ಇಲ್ಲಿ ಏನೋ ದೇವ್ರು ಎಲ್ಲೂನೂ ಒಂದ್‌ತವ ಕೂಡಾಕ್‌ ಬೇಕು ಅನ್ನೋದಾದ್ರೆ ದೇವ್ರು ನಮಗೆ ತೋರೆ ತೋಡ್ತಾನೆ ದಾರಿಯಾ. ನಾನು ವೋಗಬೇಕು ಬುತ್ತಿ ಕಟ್ಟು ಅಂದ. ಅವರ ತಾಯಿ ಮೂರು ತುತ್ತು ಬುತ್ತಿ ಕಟ್ಟಿದ್ದು. ಆ ಬುತ್ತಿ ತಕ್ಕೊಂಡು ವೋದ. ವೋಗಂದು ವೋಗಂದು ವೋಗವಾಗ ಇದೇ ಕೆರೆ ಕೆಳೆ ಕಟ್ಟೆ ಐತಲ್ಲ ? ಆ ಕೆರೆ ಕಟ್ಟೆಗ್ ಬಂದು ಬುತ್ತಿ ಉಂಡ.

ಸೀದಾ ಚುಂಚನಗಿರಿಗೇ ಬಂದ. ಬಂದ್ರೆ ಕೆಳಗೆ ಕಟ್ಟೆ ತವ ಬುತ್ತಿ ಉಂಡನ್ನು ಕಲ್ಯಾಣಮಂಟಪತಕ್ ಬಂದ. ಅಲ್ಲಿ ಬಂದೋನೆ ಅಲ್ಲಿ ಕಲ್ಯಾಣಿ ಐತಲ್ಲ ? ಕಲ್ಯಾಣಿ ತಕ್‌ ಬಂದು, ಕೂತ್ಕಂಡ. ನೀರಿಗೆ ಬಂದ್ರೆ ಎತ್ತ ತಲೆ ನಮ್ಮ ಅಂತ ಎಂಗ್ ಕೇಳೋಕಾಗುತ್ತೆ ? ಅವ್ರು ಹೆಸ್ರು ಊರು ಏನೂ ಇಲ್ಲ. ಯಾರಾದ್ರೂ ನೀರಿಗೆ ಬಂದ್ರೆ ನೋಡೋಣ ಅಂತ. ಸಾಯಂಕಾಲ ಆಗ್‌ಬಿಡು. ಅಲ್ಲಿ ಕೂಕೊಂಡ.

ಅಲ್ಲಿ ಕೂಕೊಂಡಾಗ ಅತ್ತೆ ಮಗು ಜೊತೆಯೋರು ನೀರಿಗೆ ಹೋಗಿದ್ರು. ಅವ್ರ ಅತ್ತೆ ಮನೆ ಇಲ್ಲಿ, ಊರಹಳ್ಳ ಇಲ್ಲಿ. ಊರಳ್ಳ ಆದ್ರೆ ಈ ಜೊತೆಯವ್ರನೆಲ್ಲ ಕರ್ಕೊಂಡು ಬಳೆಮಲಾರತಿ ನೀರಿಗೆ ಬಂದ್ಲು. ನೀರ್ ಗೋದಾಗ ಸುಮ್ಮ ಅಮ್ಮ ಪಾಡಿಗೆ ಅವು ಕಲ್ಯಾಣಿಮ್ಯಾಲೆ ಕೂಕೊಂಡೇ ಇದ್ದ. ಇವ್ರು ಬಿಂದಿಗೆ ಬೆಳ್ಕೊಂಡ್ರು, ನೀರ್ ಮಡ್ಕೊಂಡ್ರು. ಬರ್‌ ಬೇಕಾದ್ರೆ ಬಳೆ ಮಲ್ಲಾರತಿ ತಿದ್ದಾ ನೀನು ನೀರಿಗೆ ಬರಿಯಾ ? ಸಾಕೋ ಅಂದ್ರು.

ಆಗ ಇನ್ನು ಕೇಳ್ಕೊಂಡ. ಓ ನಮ್ಮಪ್ಪಾಜಿ ಇಂಗೇಂತ ಹೇಳ್ಳಿಟ್ಟಾ. ಬಳೆಮಲಾರತಿ ಅನ್ನೋಳು ನಮ್ಮ ಅತ್ತೇ ಮಗಳೇಯಾ ಅಂದ. ಮತ್ತೆ ಅಮ್ಮ ನಿಮ್ಮಣ್ಣನ ಮಗನಂತೆ ಮುದ್ರೆ ಕುಮಾರ ಅಂತೆ. ಬಂದು ಕುಂತವೇ ಕಲ್ಯಾಣೀತವ. ಅಂತೂವೆ ನಮ್ಮ ಅತ್ಯಮ್ಮಂಗೆ ಹೇಳ್ಳಿಡ್ರಮ್ಮ ಅಂತ ಹೇಳಿಟ್ಟು ಅಲ್ಲೇ ಕೂಡ್ಕೊಂಡ.

ಕಲ್ಯಾಣಿ ಹತ್ರ ಕೂತೊಂಡಾಗ ಇವ್ರು ಇಲ್ಲಿಂದ ಚುಂಚನಗಿರಿಯಿಂದ ತಿದ್ದಾ ಅಲ್ಲಿಗೆ ವೋಸ್ಟು ದೂರ ಮುಂದಕ್ ಹೋಗೋಕಲ್ಲ? ಆಗ್ಲೆ ಸಾಯಂಕಾಲ ಆಗೋಗೈತೆ. ನಾವು ಅದ್ ಮಾಡೋಕು, ಇದು ಮಾಡೋಕು. ನಮ್ಮಮ್ಮ ಬೈತಾಳೆ, ನಮ್ಮಪ್ಪ ಬೈತಾನೆ, ಏನ್ಮಾಡೋದು ಅಂತ ಹೇಳಿ, ಹೇಳಿಯೆನೆ ಬಳೆಬಂಗಾರತಿ ನಿಮ್ಮವ್ವನ ಕೈಯಲ್ಲಿ ಅಂತ ಅಂದ್ರು. ನಾನ್ ಹೇಳೀನಿ ಬಿಡಕ್ಕ, ನೀನು ಇನ್ಯಕ್ ಬದ್ದೀಯಾ ಅಂತ ಅಂದ್ಲು. ಇವು ಹೇಳಿಲ್ಲ ಅವರವ್ವನ ಕೂಟೆ.

ನಿಮ್ಮಣ್ಣನ ಮಗ ಅಂತೆ ಮುದ್ರೆ ಬಂಗಾರ ಅಂತ ಹೇಳಿಲ್ಲ ಅವು. ಆಗ ಇನ್ನು ಸುಮ್ಮೆ ಆಕ್ಸಿಟ್ಟು ಇನ್ನು ಇವಳು ಹೇಳಿಲ್ಲ. ಅವು ಕಲ್ಯಾಣಿತವ, ಕಲ್ಯಾಣಿ ದಿಣ್ಣೆ ಮೇಲೆ ಮಲಗಿದ್ದಲ್ಲ ? ನೀರಿನಾಳದಿಂದ ಸರ್ಪ ಬಂದ್ದಿತ್ತು. ಮುಟ್ಟಿಟ್ಟು. ಸತ್ತೋಗ್ನಿಟ್ಟ, ಕಲ್ಯಾಣಿಮ್ಯಾಲೆ. ತಿದ್ದಾ ಬೆಳಿಗ್ಗೆಗೆ ಎದ್ರಲ್ಲ ? ಎದ್ದಾಗ ತಿದ್ದಾ ನೀರೊದ್ರು. ನೀರೋದಾಗ ಅಲ್ಲಿ ನೋಡಿದ್ರು. ಇದೇ ಸಾಯಂಕಾಲ ಅದ್ರೆ ಮೂರಾಳು ನೀರೋಗಿದ್ರಲ್ಲ ? ಅಲ್ಲ ನಿನಗ್ ತಕ್ಕಾದ ಗಂಡ, ನಮಗೆ ತಕ್ಕಾದ ತಾಯಿ, ನಿಮ್ಮ ಅಣ್ಣನ ಮಗ ಅಂತ ಹೇಳಿದ್ರು. ನೀನು ಹೇಳ್ತಿನಿ ಅನ್ನೋವೊತ್ತೆ ನಾವು ಬಂದ್‌ ಹೇಳಿಲ್ಲ. ನೀನು ಹೇಳೋಕಾಗಿತ್ತೋ ಇಲ್ಲೋ ಅಂತಲೇ ಅವು ಬಿಂದ್ ಬಿಂದಗೆಯಾ ಕುಕ್ಕುತ್ತಾರೆ. ಕುಕ್ಕುದ್ರೆ ಬರುತ್ತಾ? ಅವರೇ ನೀರ್ ತಕ್ಕೊಂಡ್ರು. ಬಂದ್ರು. ಮನೆತವ ವೋದ್ರು ಅಮ್ಮ ನಿನ್ನೆ ದಿವೃ ಬಂದವೆ, ನಿಮ್ಮಣ್ಣನ ಮಗ ಮುದ್ರೆ ಕುಮಾರ. ಅದಕ್ಕೆ ನಿನ್ನಗಳು ಹೇಳ್ತಿನಿ ಅಂದ್ಲು.

ನಾವು ಬರಿಲ್ಲ. ಸತ್ತೋಗವೆ ಕಣಮ್ಮ ಅಂದ್ರು. ‘ಅಯ್ಯೋ ನಾವೇ ಅಣ್ಣ ತಂಗಿ ಇಬ್ರಾಳು ಒಂದ್ದಾರಿ ಒಳಗೇ ಬರ್ಬೇಕಾದ್ರೆ ಎಷ್ಟು ದಿನಾತು ಏನ್ಮಥೆ ? ತಮ್ಮಣ್ಣಯ್ಯ ಅನ್ನೋ ಇಲ್ಲೋ ನೋಡಾರ ನೋಡೋದಾಗಿತ್ತು. ನೀನ್ ಹೇಳಿಲ್ಲವಲ್ಲ ? ನಮ್ಮಣ್ಣಯ್ಯನ ಮಗಂಗೆ ಕೊಟ್ಟು ಮದ್ದೆ ಮಾಡ್ತೀನಿ ಅಂದಿದ್ದೆ.

ಇನ್ನು ಹೇಳೇ ಹೋದ್ಲು. ನಾನು ಸತ್ ಹೆಣಕ್ಕೆ ಕೊಟ್ಟು ಮದ್ದೆ ಮಾಡ್ತೀನಿ ಅಂತ ಹೇಳಿಟ್ಟು ಆಗ್ಲೆ ವೋಬ್ಬಿಟ್ಟು ಕೊರಮರ ಕೇರಿಗೆ, ಅವ್ರ ಉದ್ದೂಕು ಮರ ಎಣಿಸ್ಬಿಟ್ಟು. ಸಾಬ್ರೂ ಗೌಸು ಅಕ್ಕೊಂತರಲ್ಲ ಆ ತರ ಗೌಸು ಆಕೊಂಗೆ ಎಣಿಸಿಬಿಟ್ಟು. ಅವಿಗೆ ಕರೇಬಳೆ ತೊಡ್ಲಿ, ಹೂವಿನ ಹಾರ ಅರಿಶಿನ ಹಾಲು ಎಲ್ಲಾ ತಗೊಂಡು ಊರ್ ಜನಾನೆಲ್ಲ ಕರ್ಕೊಂಡು, ಕಲ್ಯಾಣಿತಕ್ ಹೋಗ್ನಿಟ್ಟು, ಒಂದ್ ತಿರುಪಿನ ತಪ್ಪೆ ಎಣಿಸಿಬಿಟ್ಟು. ಒಂದ್ ಟ್ರಂಕ್ ಮಡಗಿದ್ದೆ ಅದಕ್ಕೆಲ್ಲ ಬಟ್ಟೆ ಒಡವೆ ವಸ್ತ್ರ ಎಲ್ಲಾ ಮಡಗಿದ್ದು, ಮಗಳಿಗೆ ಬಳೇ ಕೊಡಿಸಿದ್ದು. ನಮ್ಮ ಅಣ್ಣಯ್ಯನ ಮಗ ಬಂದಷ್ಟೇ ಅಂತ ನಂಗೆ ಹೇಳಿದ್ರೆ ಜೀವದೊರಸೆ ಇದ್ದಂಗೇನೆ ಮಧ್ವ ಮಾಡೀನೆ.

ನೀನು ಹೇಳಿಲ್ವಲ್ಲ ನಂಗೆ. ನಮ್ಮಣ್ಣಯ್ಯನ ಮಗ ಸತ್ತ ಎಣಾನೆ ಆಗಿರಿ, ಆವೆ ಕೊಟ್ಟು ಮದ್ವ ಮಾಡ್ತೀನಿ ಅಂತ ಹೇಳಿ. ಆಗ ನೀರು ಗೀರು ಎಲ್ಲಾ ಬಿಟ್ರು. ಮದ್ದೆ ಮಾಡ್ಲಿಟ್ಟು, ಎಣಕ್ಕೆ ಯಾ. ಸರಿ ಅದರೊಳಗೆ ಎಣ ತೆಗೆದು ಮಲಿಗ್ನಿ ಬಿಟ್ಟು ಇಷ್ಟೇನೇಯಾ ಅದೊಳಗೆ ಕುಂಡ್ರಿಸಿಬಿಟ್ಟು, ಆ ಪೆಟ್ಟಿಗೆ ಇತ್ತಲ್ಲ ಅದನ್ನ ಮಡ್ಡಿ ಬಿಟ್ಟು, ಜೈ ಪರಮೇಶ್ವರಾ ಅಂದ್ಲು. ಅಂದ್ಬಟ್ಟು ಅವ್ರತಾಯಿ.

ಹಿಂಗ್ ಅನೇಕಾದ್ರೆ ವೋಗೋಂದ ವೋಗೊಂದ ವೋಗ್ತಾ ಇದ್ರು. ಆ ಕಟ್ಟೆ ಹತ್ರ ಊಟ ಮಾಡಿದ್ದಲ್ಲ ? ಅಲ್ಲಿಗೋದ್ರು. ಅಲ್ಲಿ ಒಂದು ಆಲದ ಮರ. ಅಲ್ಲಿ ಗೋತ್ತು ಏನಂದು ? ಒಬ್ಬ ತಾಯಿಗೆ ಹುಟ್ಟಿ, ಒಬ್ಬ ತಾಯಿಗೆ ಹೆಸ್ರು ಕರೆದು, ಒಬ್ಬ ಗಂಡಿಗೆ ನಾನು ಸವಿಸಿದ್ರೆ ವರ ಅಂತ ಕೆಳಕ್ ಇಳಿಯಮ್ಮ ಅಂದ್ಲು. ಇಳಿತು ರೈಟು ಇಳೀತು ಇನ್ನು ಊಟ ಮಾಡಿದ್ದಲ್ಲ ? ಆ ಜಾಗಕ್ಕೆ ಏರಿ ಮೇಲೆ ಇಳಿದು, ಆಗ ಇಳಿದಾಗ, ಇನ್ನು ತೊಟ್ಟು ಬಿಟ್ಟು ಮ್ಯಾಕೆ ಏಲ್ಲಿಲ್ಲ. ಎಣೀನ್ ದಡದಾಗೆ ಕುಂತಿದ್ದಾಳೆ.

ಆ ಆಲದಮರದ ಮ್ಯಾಲೆ ಎರಡಕ್ಕಿ ಗಂಡಸೇ ಗಂಡಸೇ ನನಗೊಂದು ಕಥೆನಾದ್ರೂ ಹೇಳ್ವಾರಾ ? ಅಂತು. ಇವಿಗೆ ದಿವ್ಹಾನೂವೆ ಕತೆ ಹೇಳ್ತಾನೆ ಇದ್ದಾರೆ, ಅಂತ ಎರಡಕ್ಕಿನೂ ಗಂಡಕ್ಕಿ ಹೆಣ್ಣಕ್ಕಿ ಕಡಿದಾಡ್ ಬಿಟ್ಟು ಕೆಳಕ್ ಬಿದ್ದಿತ್ತು. ಸತ್ತೋಗ್ನಿಡು. ಆಗ ಆಲದಮರದಿಂದ ಒಂದು ಸರ್ಪ ಇಳಿದು ಕೆಳಕ್ಕೆ ಬಂದ್ ಬಿಡ್ತು. ಒಂದು ಗಿಡ, ಒಂದು ಸಸಿ ಕಡ್ಕೊಂಡು ಬಂತು. ಮೂರುಕಲ್ಲು ಮಡುಗು. ಎಲೆ ಒಳಗಿಯೂ ಕಲ್ಲು ಮಡುಗು. ಒಂದು ಬೆಂಕಿ ಮಡುಗು. ಆ ತೋಪು ಎಲೆ ಒಳಗೆ ಇಂಗೆ ಕರ್‌ಕೊಂಡು ಅದನ್ನ ಎಲೆ ಒಳಗೆ ಇಂಗೇ ಅಂತ, ಎಲೆ ಒಳಗೆ ಕಲ್ಲನ್ನ ಸವರಿಕೊಂಡು ಇಸ್ಲಾಗ್ ಇಸ್ಲಾಗ್ ಅಂದ್ಬಟ್ಟು, ಈಗೇನು ಇಲ್ಲ ಏಳಪ್ಪ ಇದ್ದಾಯ್ತು ಅಂತು. ಆಗ ಆವೊಕ್ಕಿ ಎಲ್ಲಾ ಎದ್ದು ಹಾರೋಯ್ತು.

ಮ್ಯಾಕೆ ಸರ್ಪ ಆಲದಮರದ ಮ್ಯಾಕೇ ಹೋಗಿತ್ತು. ಇನ್ನು ನೋಡ್ಕಂಡೇ ಕುಂತಿದ್ದಲ್ಲ? ಅದೇ ಬೆಂಕಿ ಅದೇ ಬೋಕಿ ಎಲ್ಲ ಇತ್ತಲ್ಲ ? ಆ ಗಿಡದಾಗೇ ಸೊಪ್ಪು ತೊಕೊಂಡು ಬಂದು ಆ ಬೋಕೆನೆ ಇಕ್ಕಿ ಅದರಾಗೆ ಉರಿದು ಮಡಿಕ್ಕೊಂಡ್ಲು. ಇನ್ನೊಂದು ಕಲ್ನಾಗೆ ಅರೆದು ಅವು ಮೈಗೆಲ್ಲ ಸವರಿ ಬಿಟ್ಟು. ಆಗ ಎಷ್ಟೊತ್ತು ಮಲಗಿದ್ದೀರಿ ? ಏನಪ್ಪಾ ಶಿವ ಶಿವ ಅಂತ ಇದ್ದ ಉದ್ದಕ್ಕೂ ಮರ ತಗಲಾಕ್ ಬಿಟ್ಟಿದ್ರಲ್ಲ ? ಆಗ್ ಎದ್ದ.

ಅಲ್ಲ ನಮ್ಮ ಅತ್ತೆಮ್ಮನ ಮಗ್ಗು ನೋಡೋವೊತ್ತೆ ನನ್ನಂಗೆ ಇದ್ದು. ಇನ್ನು ನಮ್ಮ ಅತ್ತೆಮ್ಮ ಇನ್ನೆಂಗಿದ್ದೋ? ಮಗು ಇನ್ನೆಂಗಿದ್ದೋ ? ಅಲ್ಲ ಇವು ಕೊರಮತಿ ಕಳ್ಳಿ ಬಿಟ್ಟಲ್ಲ. ನಮ್ಮ ಅತ್ತೆಯಮ್ಮ, ನಮ್ಮ ಅತ್ತೆಮ್ಮ ಏನ್ ಮಾಡಿಬಿಟ್ಟು ನೋಡ್ತಾ ಅಂದ.

ಏಯ್ ನನ್ನ ಹಿಂದೆ ಬಂದ್ಗಿಂದೇಯಾ. ನಮ್ಮ ತಾಯಿಗೆ ಏನಂತ ಹೇಳಿ ? ನಮ್ ಅತ್ತೇ ಮಗಳನ್ನ ತಂದು ನಾನು ಮದ್ದೆ ಮಾಡ್ಕೊತೀನಿ ಅಂತ ನಾನು ಹೇಳಿರೋದು. ಮರಗೋಟಿಗೆ ಕಟ್ಟಿಬಿಟ್ಟವೆ. ಬಡ ನನ್ ಹಿಂದೆ ನಮ್ಮಮ್ಮ ಬೈತಾಳೆ ಅಂದ.

ಆದರೂ ಇವು ವೋಗ್ತಾಳೆ, ಎಷ್ಟು ದೂರದಿಂದ ಕಲ್ಲೇಟಿಂದ ಬಡಿದ್ರು, ಮರ ಒದ್ದಿ ಬಿಡೋಳು. ಇವಳಿಗೆ ಏನು ತಗೋಲೋಲ್ದು. ಸರಿ ಅನ್ನು ಮುಂದೆಯಾ, ಇವು ಹಿಂದೆಯಾ, ಇಂಗ್ ಮಾಡಿ ಹೊರಟ್ರು. ಹಿಂಗ್ ಮಾಡಿ ಹೋಗಿ, ಆಗ ಅಲ್ಲಿ ಏನ್ಮಾಡ್ಡ ? ಮನೆಗೋದ. ಅರಮನೆಗೆ ಹೋದಾಗ, ಅಮ್ಮ ಮತ್ತೆ ನಮ್ಮ ‘ಅತ್ತೆಮ್ಮನ ಮಗಳು ಕೈತೊಳೆದು ಮುಟ್ಟೇಕು ಕಣಮ್ಮ ಅಂಗಿದ್ದು, ನನ್ನಂಗೆ ಇದ್ದು ಕಣಮ್ಮ. ಆದ್ರೆ ನಮ್ಮತ್ತೆ ಈ ಕೊರಮತಿ ಕಳ್ಳಿ ಬಿಟ್ಟವೃಲ್ಲಮ್ಮ ? ಈ ಮುಂಡೆ ಬ್ಯಾಡ ಅಂದ್ರೂ ಕೇಳಿಲ್ಲ. ನನ್ನ ಹಿಂದೆ ಬಂದ್ಲು. ಏನ್ಮಾಡೋಣ ?

ಅಪ್ಪ ಮಾಡೊಷ್ಟು ಬದುಕೈತೆ, ತಿನ್ನೋಷ್ಟು ಅನ್ನೈತೆ. ಅವಳು ಇದ್ರೇ ಏನ್ಮಾಡ್ತಾಳೆ ? ಕಸ ನೀರು ಮಾಡ್ಕೊಂಡು ಇದ್ದಾಳೆ. ನೀನು ಇನ್ನೊಬ್ಬಳನ್ನ ಮದ್ದೆ ಮಾಡ್ಕೊಳಿವಂತೆ ಇರು ಅಂತ ಅವಳನ್ನು ಅಲ್ಲಿ ಇಡ್ಕೊಂಡ್ರು.

ಅವು ಮರ ತೆಗೆಯೊಲ್ಲ ಏನಿಲ್ಲ. ಅವು ಹಿಂಗೇ ಕಸನೀರು ಮಾಡ್ಕೊಂಡು ಇದ್ದಾಳೆ. ಇನ್ನು ಮತ್ತೆ ಮಧ್ಯೆ ಲಗ್ನ ಬರುತ್ತುಲ್ಲ ? ಆಗ ವೋದ. ಚುಂಚನಹಳ್ಳಿಗೆ ವೋದ. ಒಂದು ಹೆಣ್ ನೋಡ್ಡ. ಇನ್ನು ಮನೆಗೆ ಏನೂ ಹೇಳೊದಿಲ್ಲ; ಅವ್ರ ತಾಯಿ ಕುಟ್ಟಿ. ಇನ್ನ ಹೋಗೋಕಾದ್ರೆ ಬತ್ತಲೇ ಸುಮ್ಮೆ, ಎದ್ದು ವೋಗ್‌ ಬಿಡ್ತಾನೆ. ಹೆಣ್ ನೋಡ್ಕೊತಾನೆ, ಬತ್ತಾನೆ. ಮನೆಗೆ ಬಂದಾಗ ತಾಯಿ ಏನಂದಾಳೆ ‘ಅಪ್ಪ ಎಲ್ಲಿಗೋಗಿದ್ದೆ ?’ ಹೇಳೋದು ಇಲ್ಲ, ಕೇಳೋದು ಇಲ್ಲ. ಹೋದೋನು ಹೋದಂಗೆ ಹೋಗ್ತಿಡ್ತಿಯಲ್ಲ ಅಂತ ಅಂದ್ರು. ಅಂಗ್ ಅಂದಾಗ ಅಮ್ಮ ಹಿಂಗೆಂಗೇ ಚುಂಚನಹಳ್ಳಿಗೆ ಹೋಗಿದ್ದೆ. ಒಂದ್ ಹೆಣ್ಣು ನೋಡಿದ್ದೀನಿ.

ಚೆನ್ನಾಗೈತ್ತೆ ಕಣವ್ವ. ಮದ್ದೆ ಆಗಬೇಕು ಚೆನ್ನಾಗೈತೆ ಅಂದ. ಆಗ ಇವು ಕೇಳ್ಕೊಂದ್ದಲ್ಲ? ಅವು ಏನಂದ್ರು? ಅಲ್ಲ ಕಣತ್ತಮ್ಮ ನಮ್ಮಪ್ಪನ ಮನೆಗೆ ಇರೋತಕ್ಕಾನೂ ಎಂಟು ದಿನಕ್ಕೊಂದ ಸರಿ ಗಂಗಮ್ಮನ ಮಡೀನೇ.

ಈಗ ಗಂಗಮ್ಮನೂ ಇಲ್ಲ; ಗೌರಮ್ಮನೂ ಇಲ್ಲ. ಅಲ್ಲಿ ನಿನ್ನೇನು ? ಏನೂ ಇಲ್ದಂಗ್ ಆಯ್ಕೆನೆ ಗೋಟಿ, ವೋಗು. ನಿನ್ಗೇನ್ ಬೇಕು, ಅದನ್ನ ತಗೊಂಡು ವೋಗಿ ಗಂಗಮ್ಮನ ಮಾಡ್ಕೊಂಡು ಬಾ ವೋಗು ಅಂದ್ಲು. ಆಗ ಇವಳು ಏನ್ಮಾಡಿದ್ದು ? ಎಲ್ಲಾ ಅವ್ರ ಅತ್ತೇತವ ಇಸ್ಕೊಂಡ್ಲು. ಅದೇ ಬೇಳೆ ಎಲ್ಲಾ, ಅವು ಅತ್ತೇತವ ಇಸ್ಕೊಂಡ್ಲು. ಆಮೇಲೆ ಅಂಗ್ನಿಗೆ ವೋದು ಕಡ್ಡಿ, ಕರ್ಪೂರ ತಕ್ಕೊಂಡ್ಲು. ತಕ್ಕಂಡೋಳೆ ಗಂಗಮ್ಮ ಮಾಡಾಕ್ ತಗೊಂಡೋದ್ಲು.

ಸಾಮಾನ್ನೆಲ್ಲ ಗಂಗೇ ಒಳಕ್ ಕಳ್ಳಿ ಬಿಟ್ಟು. ಈ ಮರ ಇತ್ತಲ್ಲ ? ಅವಳ ಉದ್ದಕ್ಕೂ, ತಗಲಿಸ್ಕೊಂಡಿತ್ತು. ಅದನ್ನೇ ಕುಕ್ಕೆ ಮಾಡ್ಕೊಂಬಿಟ್ಟು. ಕಣಿ ಏಳೀನಿ ಅಂತ ಊರೊಳಗೆ ವೋದ್ಲು.

ಊರೊಳಗೆ ಹೋದ್ಲು. ಅಲ್ಲಿ ವೋದಾಗ ಇನ್ನು ಹೆಣ್ ಕೊಡ್ತೀನಿ ಅಂದಿದ್ರಲ್ಲ ? ಮಾತಾಡಿದ್ರಲ್ಲ ? ಅವಳ ಗಂಡಂಗೇ. ಆಗ ಅವರು ಹೆಂಗ್‌ಹೆಂಗಸು ಕೇಳೇಕಾ ? ಬನ್ನಿ ನಾನೊಂದಿಷ್ಟು ಕಣೇ ಕೇಳೀನಿ ನಮ್ಮುಡುಗಿ ಕೋಡೋ ವಿಚಾರಕ್ಕೆ ಅಂತ ಕರೆದ್ರು. ಕರೆದಾಗ ಇವೇನೊ ಕಟ್ಟಿ ತಟ್ಟಿ ಪಟ್ಕಾ ಅಂದ್ದಿಡ್ತಾಳೆ.

ಅಮ್ಮ ಅಲ್ಲಾ ನಿನ್ನ ತಲೇ ಯಾತರ ಬೆಳೆಸಿದ್ದೆ ? ಅಯ್ಯೋ ನನ್ನ ತಲೇ ಬೆಲ್ಲಿದ್ದ ಕೇಳ್ತಾ ಇದ್ದೀಯಾ ? ಚೆಂದಾಗಿ ಬೆಳಿಕೆ ಏನು ಮಾಡಬೇಕು ಅಂದಳು. ಅಲ್ಲಾ ಚೌರಾ ಮಾಡೋರನ್ನ ಕರೊ೦ಬಂದು ಚೌರ ಮಾಡ್ಲಿ, ಕಲ್ಲು ಮುಳ್ಳು ಉಯ್ಯರನ್ನ ಕರೊ೦ಬ೦ದು ಕಲ್ಲು ಮುಳ್ಳು ಉಖ್ಯಿಸಿ, ಮುಂಡ್‌ಗಳ್ಳಿ ಹಾಲು ಉಯ್ದು ಬುರುಗು ಮಣ್ಣಾಕಿ ಮಾಳಿಗೆ ಪಟ್ಟಿ ಮ್ಯಾಲೇ ಮಲಗಿದ್ರೆ ಇದಕ್ಕಿನ್ನ ಹತ್ತು ಸಮಕ್ ಬೆಳೆಯುತ್ತೆ ಅಂದ್ಲು.

ಅಲ್ಲ ಒಂದೇ ಮನೆತವ ಇಷ್ಟೋತಕ್ ಹೇಳ್ತಾ ಕೂಡ್ಕೊಂಡ್ರೆ, ನಮ್ಮ ಹೊಟ್ಟೆ ಹೊರೆ ಯುತ್ತೇನಮ್ಮ ಅಂದ್ಲು. ಅಷ್ಟು ಮಾತ್ ಹೇಳಿಟ್ಟು ಎದ್ದು ಬಂದ್‌ಬಿಟ್ಟು. ಮರ ತಗಲಾಕ್ಕೊಂಡ್ಲು. ವೊಂಟ್ ಬಿಟ್ಟು.

ಇವು ಹೆಣ್ ನೋಡ್ಕೊಂಡು ಹೋಗಿದ್ರಲ್ಲ ? ನಮ್ಮೆಣ್ಣಿಗೂ ಅಂಗೇ ಮಾಡೋಣ ತಡೀ ಅಂದ್ರು. ಚೌರದವರನ್ನ ಕರೊಂಬಂದು ಚೌರ ಮಾಡಿಸಿದ್ರು. ಕಲ್ಲು ಮುಳ್ಳ ಉಯ್ಯರನ್ನ ಕರೊ ಬಂದು ಕಲ್ಲು ಮುಳ್ಳು ಉಯ್ದಿದ್ರು.

ಮುಂಡ್ಗಳ್ಳಿ ಆಲು ಉಯ್ಕೆಸಿ, ಬುಡದ ಮಣ್ಣು ಹಾಕಿದ್ರೂ. ಮಾಳಿಗೆ ಪಟ್ಟಿ ಮ್ಯಾಲೆ ಮಲಗ್ನಿದ್ರು. ಬೆಳಕು ಅರಿಯೋದ್ರಾಗೇ ತಪತಪನೇ ಬಿದ್ದು ಸತ್ತೋದ್ಲು. ನೀನು ನೋಡ್ಕೊಂಡ್ ಹೋದ ಹೆಣ್ಣು ಸಾಯ್ತು ಅಂದಾಗ, ಅವನು ವೋದಾ.

ಮಣ್ಣಿಗೆ ವೋದಾ. ಬಂದ. ಮನೆಗೆ ಬತ್ತು ಲೂವೆ ಇನ್ನೊಂದು ಎಂಟು ದಿವೃ ಸುಮೆ ಇದ್ದ. ಇನ್ನ ಬೇರೆ ಪಟ್ಟಣಕ್ ವೋಗಿ ಇನ್ನೊಂದು ಹೆಣ್ಣು ನೋಡ್ತಾ. ಅಲ್ಲಿ ಹೆಣ್ಣು ನೋಡ್ಕೊಂಡು ಮನೆಗೆ ಬಂದ. ತಾಯಿ ಇದ್ದಾಳಲ್ಲ ? ಅವಳ ತಾಯಿ ಎಲ್ಲಿಗೋಗಿದ್ವಿಯಪ್ಪ ಅಂದ್ಲು.

”ಅವ್ವ ಈಗ ಮಾಯಸಂದ್ರ ಅನ್ನೋ ಪಟ್ಟಕ್ ವೋಗಿದ್ದೆ. ಹೆಣ್ ನೋಡಿದ್ದೀನಿ ಅಲ್ಲಿ. ಒಳ್ಳೆ ಚೆನ್ನಾಗೈತೆ. ಅಪ್ಪರ ದಿವೃ ಬಿಡಂಗಿಲ್ಲ ಕಣವ್ವ. ಅವತ್ತೇ ಲಗ್ನದ ಶಾಸ್ತ್ರನೂ ಅವತ್ತೇ ಮದ್ದೇನೂ ಅವತ್ತೇ ಅಂತ ತೀರ್ಮಾನ ಮಾಡ್ಕೊಂಡು ಬಂದೇ ಬಿಟ್ಟಿದ್ದೀನಿ ಕಣಮ್ಮ ಅಂತ ಹೇಳ್ತಾ.

ಇವೃ ಕೇಳಿಸ್ಕೊಂಡ್ಲಲ್ಲ, ತಾಯಿ ಮಗ ಮಾತಾಡೋವಾಗ, ಅಲ್ಲ ಕಣ ಅತ್ತೆಮ್ಮ ಮತ್ತೆ ನಮ್ಮಮ್ಮನ ಮನೇಲಿ ಇರೋವಾಗ ಎಂಟು ದಿಕ್ಕೊಂದು ಸರಿ ಗಂಗಮ್ಮ ಮಾಡಿವೇ. ಇಲ್ಲಿ ಗಂಗಮ್ಮನೂ ಇಲ್ಲ ಗೌರಮ್ಮನೂ ಇಲ್ಲ ಅಂದ್ಲು. ಅಲ್ಲ ಮರಗೋಟಿ ನಿಂಗ್ ಯಾವಾಗ್ಲ ಗಂಗಮ್ಮಂದೇ ಆಗೈತೆ. ವೋಗೆ ನಮ್ಮನೇಲಿ ಇಲ್ಲಂಗ ಆಗೈತಾ ?.

ವೋಗಿ ಮಾಡ್ಕೊಂಬಾ ಅಂತ ಅಂದ್ಲು. ಅವತ್ನಂಗೇ ಎಲ್ಲಾ ಸಾಮಾನು ಇಸ್ಕೊಂಡು ಹೋಗಿಬಿಟ್ಟು, ಎಲ್ಲಾ ಗಂಗೇಗೆ ಬಿಟ್ಟು, ಕುಕ್ಕೆ ಮಾಡ್ಕೊಂಡು ಕಣಿ ಹೇಳೀನಿ ಅಂತ ವೋದ್ದು. ಇವ್ರು ಹೆಣ್ ನೋಡಿದ್ರಲ್ಲ. ಅದೇ ಮನೇಗೂ ಕರೆದ್ರು. ಅಲ್ಲಿಗೂ ವೋದ್ಲು. ಅಲ್ಲಿಗೆ ವೋಗಿ ಕಣಿ ಹೆಳ್ತಂಗೆ ಏನೊ ತಟ್ಟಪಟ್ಟ ಹೇಳಿದ್ದು. ಹೇಳ್ ದೋಳೆ ಅವತ್ತು ಹುಡುಗಿ ತಲೆ ಬಗ್ಗೆ ಕೇಳಿದಳು. ಅಮ್ಮ ನಿನ್ನ ತಲೆ ಏನಾದ್ರೂ ಕೊಟ್ಟು ಬೆಳಸಿದೆಯಮ್ಮ ? ನೋಡಮ್ಮ ಎಂಗೆ ಬೆತೆ ನೋಡಮ್ಮ ಅಂದ್ಲು. ಏನ್ ಮಾಡಬೇಕು ಅಂದಳು.

ಅಲ್ಲ ಚೌರ ಮಾಡೋರ ಕಕ್ಕೊಂಬಂದು ಚೌರ ಮಾಡ್ಲಿ, ಕಲ್ಲು ಮುಳ್ಳು ಉಯ್ಯುರ ಕಕ್ಕೊ೦ಬಂದು ಕಲ್ಲು ಮುಳ್ಳು ಉಯ್ಕೆಸಿ, ಮುಂಡಗಳ್ಳಿ ಹಾಲು ಉಯ್ದು, ಬುರುಗ ಮಣ್ಣು ಹಾಕಿ, ಮಾಳಿಗೆ ಕಟ್ಟೆ ಮ್ಯಾಲೆ ಮಲಗ್ಗಿದ್ರೆ ಇದಕ್ಕಿನ್ನ ಹತ್ತೂ ಸಮಕ್ ಬೆಳಿಯುತ್ತೆ ಅಂದ್ಲು. ಅಂತ ಹೇಳಿಟ್ಟು ಬಂದ್‌ ಬಿಟ್ಟು, ಮನೆಗೆ. ಅದೇ ಮರ ತಗಲಾಕ್ಕೊಂಡು ಬಂದ್ಲು. ಇವು ಅದೇ ರೀತಿ ಮಾಡ್ತಿದ್ರು.

ಚೌರ ಮಾಡಿಸಿದ್ರು, ಕಲ್ಲು ಮುಳ್ಳು ಉಯ್ಯಸಿ, ಬೂದಿ ಮಣ್ಣಾಕಿ, ಮಾಳಿಗೆ ಮ್ಯಾಲೇ ಮಲಗ್ಗಿದ್ರು. ಇನ್ನು ನೀನು ನೋಡ್ಕೊಂಡ್ ವೋದ ಹೆಣ್ಣು ಸಾಯ್ತು ಅಂತ ತಿದ್ದಾ ಅಂಗಂದ್ರು, ಅಲ್ಲಿಗೆ ಎರಡೂ ವೋ ? ಅಲ್ಲಿಗೇನ್ ಏಳ್ತಾ ಅವು ? ಅಯ್ಯೋ ನಾನ್ ಎಲ್ಲಿ ಗೋದ್ರೂವೇ ಇಂತ ಕಡೆ ಕಾಲಿಟ್ಟಾಗ ಇಂಗ ಆಯ್ಕೆ, ಇಂತ ಹೆಣ್ಣೆ ಹಿಂಗ್ ಆಯ್ತು, ನಾನೋಗಿದ್ದ ತವ ಎಲ್ಲಾ ಇಂಗೇ ಆಯ್ತಲ್ಲ ? ಎರುಡಾರಾಗೋಗಿ ಹೆಣ್ಣು ನೋಡಿದ್ದ. ನನಗೆ ಅದೃಷ್ಟವೋ ಏನೋ ಇನ್ನು ವೋಗೋದೆ ಬ್ಯಾಡ ಅಂತ ಸುಮ್ಮೆ ಆಗ್ನಿಟ್ಟ.

ಇನ್ನು ಅಂಗಾಡಿ ಇಂಗಾಡಿ ಮದ್ದೆ ಕಾಲ ಕಳದೋಗ್ ಬಿಡು. ಮುಂಗಾರು ಹುಟ್ಟಿಬಿಡು. ಅವು ಈಗೇನು ಅಂದ್ಲು ? ಮುಂಗಾರು ಮಳೆ ಬಿತ್ತು. ಎಲ್ಲಾ ಬೇಕಾದಂಗೆ ಹೊಲ ಗೇಡ್ಕೊಂಡು ಜೋಳ ತೊಳಿತಾ ಇದ್ರು. ಇವು ಏನಂದ್ಲು ? ಸಾಯಂಕಾಲದಲ್ಲಿ ? ಅಲ್ಲ ಕಣಿ ಅತ್ತಮ್ಮ ಮತ್ತೆ ಎಲ್ಲಾರೂ ಅಯ್ಯಾಲೋ ಅಂತ ಹೊಲ ಗೇಯ್ತಾರೇ, ಮುಂಗಾರಾಗ್ತಾದೆ ಅಲ್ಲಿ. ನಮ್ಮನೆಗಿನ್ನೂ ಹೊಲನೂ ಗೇಯಾಗಿಲ್ಲ. ಏನ್ ಮಾಡೋಂಗಿಲ್ವ ಅಂದ್ಲು.

ಅಂಗ್‌ ಅನ್ನತೇಯಾ ವೋಗಿದ್ದಾ, ನೀನು ವೋಗಿ ಹೊಲ ಗೆಯ್ದು ಜೋಳನಾದ್ರೂ ತೊಳಸು ವೋಗು ಅಂದ್ಲು. ಅವನು ಇನ್ನೇನು ಮಾತಾಡೋಲ್ಲ. ಅಂಗ ಅಂತ್ತೊವೇ ಇವು ಹೋದ್ರು ಏಳಿದ್ದೂ, ಅವ್ವ ಇನ್ನಾ ಅತ್ತಾಗ ಒಂದಗೆರೆ, ಇತ್ತಾಗೆ ಒಂದುಗೆರೆ, ನಾಕಲ್ವೆ ಎಕರೆ ಜ್ವಾಳ ತೊಳ್ಕೊಂಡ್ ಬಂದ, ಕಡ್ಡಾಯಕ್ ತೊಳ್ಕೊಂಡ.

ಮನೆಗೆ ಅಕ್ಕಿ ಬಡಿಯಂಗಾತು! ಅಲ್ಲ ಕಣಮ್ಮ ಅತ್ತಮ್ಮ ಎಲ್ಲೂ ಅಯ್ಯೋಲೋ ಅಂತ ಜೋಳ ಕಾಯ್ತಾರೆ. ಅಲ್ಲಾ ನಮ್ಮನೆಗೇನೂ ಕಾಯೋಂಗಿಲ್ವ ಅಂದ್ಲು. ಅಲ್ಲ ಇಲ್ಯಾರು ವೋಗ್ತಾರೇ ಜ್ವಾಳ ಕಾಯಾಕೇ ? ಮರಗೋಟಿ ನೀನೆ ವೋಗಬೇಕು. ನಾವು ಇನ್ನೇನು ವೋಗಾಕ ಆಗ್ತದ ಅಂದ್ಲು. ಅಂತ್ತೆ ಅಂಗತ್ಯವೇ ಇಷ್ಟೇ ಎದ್ದು. ಎರಡು ಅಸು ಇದ್ದಾವೆ. ಅವಸು ಹಿಡೋಕ್ಕೋದು, ಕುಡ್ಲು ತಗೋಳೋದು, ಕಸ ತುಂಬಿಕ್ಕೊಳೊದು, ಕಸ ಹೊಡ್ಕೊಳೋದು, ಕುಡ್ಲು ತಗೋಳೋದು ಜೋಳ ಕಾಯಾಕ್ ವೋಗೋದು.

ಜ್ವಾಳ ಕಾಯೋತವ ಒಂದು ಹೊರೆ ನುಗ್ಗಲನೊಪ್ಪು, ದನೀಗೆ ಒಂದು ಹೊರೆ ಕೀರೆ ಸೊಪ್ಪು ಕಿಡ್ಕೊಂಡು ಜ್ವಾಳ ಕಾಡ್ಕೊಂಡು ಸಾಯಂಕಾಲ ಕುಯ್ದಿಕೊಂಡು ಒಂದು ಹೊರೆ ನುಗ್ಗೆ ಸೊಪ್ಪು ಒಂದು ಹೊರೆ ಹುಲ್ಲು ಎರಡನ್ನು ಒಂದಕ್ ಕಳ್ಕೊಂಡೋಗಿ ಹೊಡ್ಕೊಂಡು ಮತ್ತೇ ತಿರಾ ಹೊರೆ ಇಡ್ಕೊಂಡು ಮನೇಗ್ ಬರೋಳು.

ಮನೆಗೆ ಬಂದಾಗ ಆ ನುಗ್ಗಸೊಪ್ಪು ಹರಡೋದು, ಹುಲ್ಲು ಬಡಿಯೋದು, ದನೀಗೆ ಹುಲ್ಲಾ ಕೋದು. ಅವತ್ತು ಅಡಿಗೆ ಮಾಡ್ತಿದ್ದಾಳೆ. ಒಂದು ಈಚೆಗೆ ಒಂದು ಸಿಲ್ವ‌ರ್ ತಟ್ಟೆ ಒಂದು ಸಿಲ್ವ‌ರ್ ಚೆಂಬು ಕೊಟ್ಟಿದ್ದಾಳೆ ಕೊರಮರೋಳು ಅಂತ. ಅದ್ದ ಈಚೆಗೆ ಮಡಗಿತ್ತವ ತಗೋಂಬಂದು ಊಟ ಮಾಡೋದೂ ಈಚಲೇ ಮಲಿಕ್ಕೋಳೋದೂ ಇಂಗ ಮಾಡ್ಕೊಂಡು ಇದ್ದು. ಆಗ ಇನ್ನು ಈತರ ಮಾಡೋಳು. ವೊತ್ತಿಲ್ಲಿಂದ ಊಟಿಲ್ಲ, ಊಟ ಮಾಡೋದೂ ಮಲಿಗೋದೂ ಅಷ್ಟೇ ಮಾಡ್ಕೊಂಡು ಇರೋಳು. ಆಗ ಮಗ ಏನಂದ ಅವ್ವ ಮತ್ತೆ ಯಾಕೋ ನನಗೆ ಬೇಜಾರಾಗ್ತಾ ಐತೆ. ದೊಂಬರಾಟ ಆಡಿಸಬೇಕು ಕಣವ್ವ ಅಂದ.

ವೋಗಪ್ಪ, ನಿಂಗ್ ಯಾರಾದ್ರೂ ಬೇಡ ಅಂದ್ರಪ್ಪ ? ವೋಗಿ ಆಡಿಸು ಅಂತ ಅಂದ್ಲು.

ಆಗ ವೋದ. ದೊಂಬರಟ್ಟಿಗೆ ಹೋದ. ವೀಳೆ ಕೊಟ್ಟು, ವೀಳ್ಯ ಕೊಟ್ಟಂದ ಅವತ್ತು.

ದೊಂಬರಾಟ ಆಡಿಸದು ಯವಾಗ ? ಅಂತ ಕೇಳಿದಳು ತಾಯಿ. ಈವತ್ತು ವೀಳ್ಯ ಕೊಟ್ಟಂದಿದ್ದೀನಿ, ಬತ್ತಾರೆ ಕಣವ್ವ ಸಾಯಂಕಾಲದೊತ್ತಿಗೆ ದೊಂಬರಾಟ ಆಡ್ತಾರೆ. ಆತು ಒಳ್ಳೇದ್ ತಗೋ. ಇವು ಕೇಳ್ಕೊಂಡಿದ್ದು. ಇನ್ನು ಸಾಯಂಕಾಲ ಎಂಟು ಗಂಟೆ ತನ್ನ ಬಲ್ಲೇ ಇಲ್ಲ. ಇನ್ನ ದೊಂಬರಾಟ ನೋಡಾಕ್ ವೋಗೋಕಂತ ಅವರ ತಾಯಿ ಅಡಿಗೆ ಮಾಡ. ಎಲ್ಲಾ ಮಾಡ.

ಆಗ ಅವರು ತಾಯಿ ಮಗ ಊಟ ಮಾಡ್ಕೊಂಡು ಹೊರಟ. ಇವು ಸಿಲ್ವ‌ರ್ ತಟ್ಟೆಗೆ ಮುದ್ದೆ ಇಕ್ಕವಳೆ. ಚೆಂಬಲ್ಲಿ ನೀರು ಮಡಿಗವಳೆ. ಇನ್ನು ಬಲ್ಲಿಲ್ಲವಲ್ಲ? ನಾವು ದೊಂಬರಾಟ ನೋಡಾಕ್ ವೋಗೋಕು ಅಂತ ದಾರಿ ದಾರಿ ಕಾಯ್ತಾ ಅವೈ. ಅಷ್ಟೊತ್ತಿನಲ್ಲಿ ಬಂದು. ಆಗ ಏನಂದ್ಲು ಇದಿರ್‌ಗೇ ಸಿಕ್ಕಿದ್ದಲ್ಲ. ‘ಅಲ್ಲ ಕಣೇ ಮರಗೋಟಿ ದೊಂಬರಾಡ್ತಾರೆ.

ನೋಡಾಕ್ ವೋಗೋಣ ಅಂದ್ರೆ ಎಷ್ಟು ಕರೆದ್ರು ನೀನು ಬರೋದೆ ಇಲ್ವಲ್ಲ ? ಅಲ್ಲ ಇಷ್ಟೊತ್ತರ ಏನೇ ನೀನು ಜ್ವಾಳ ಕಾಯೋದೂ ? ನೀನು ಬರೋಲ್ವೇನೆ ದೊಂಬರಾಟ ನೋಡಾಕೆ ? ಅಯ್ಯೋ ನಮಗೆ ತಾಳೊಂದು ಕೇಡು ಮ್ಯಾಳೊಂದು ಕೇಡು. ನಾನು ಜೋಳದಿಂದ ತಿದ್ದಿ ತಿರಿ ಕಾಲೆಲ್ಲ ಗಾಯವಾಗಿವೆ. ಅಲ್ಲ ನಂಗ್ ಮ್ಯಾಳೊಂದು ಕೇಡು ವೋಗ್ರಿ ನೀವು ಅಂದ್ಲು. ಅಂಗಾದ್ರೆ ನೀನು ಬರಲ್ಲೇನೆ ? ಇಲ್ಲ. ನಾನು ಬರಲ್ಲ ನೀವು ವೋಗ್ರಿ. ಇವು ವೋಗ್ನಿಟ್ರು.

ಆ ಮಾತ ಹೇಳಿ ಇವು ಹುಲ್ಲು ಬಡಿದ್ದು. ಬಡಬಡನೆ ಬಂದುಬಿಟ್ಟು. ದನಕ್ಕೆ ಹೋಗ್ನಿಟ್ಟು ನುಗ್ಗು ತೊಪ್ಪು ಹರಡಬಿಟ್ಟು ಊಟಾನೂ ಇಲ್ಲ ಏನೂ ಇಲ್ಲ ವೋದನ್ನೇ ಸರಸರನೇ ನೀರು ತಂದು ನಾಕು ಗಡಿಗೇಯಾ ಸರಸರನೆ ಸ್ನಾನ ಮಾಡ್ಕೊಂಬಿಟ್ಟು.

ಸ್ನಾನ ಮಾಡಿದ್ದಲ್ಲ ಮರ ತಗಲಾಕ್ಕೊಂಡಿದ್ದಲ್ಲ ? ಮರ ತೆಗೆದು ಬಿಟ್ಟು ಗೂಟಕ್ಕೆ ನೇತಾಕಿದ್ದೇ ಸ್ನಾನ ಮಾಡ್ಕೊಂಡು ಪೆಟ್ಟಿಗೆ ಒಳಗೆ ಸೀರೆ ಒಡವೆ ಎಲ್ಲಾ ಇತ್ತು. ಬೇರೆ ಸೀರೆ ಉಳ್ಕೊಂಬಿಟ್ಟು.

ಒಡವೆನೆಲ್ಲ ಇಕ್ಕೊಂಡ್ಲು. ತಲೆ ಕೆಕ್ಕೊಂಡು, ಜಡೆ ಹಾಕ್ಕೊಂಡ್ಲು. ಅಲ್ಲಿ ದೊಂಬರಾಟ ಆಡಾಕೇ ಗೋವಿಂದ ಅಂತರಲ್ಲ ಫಸ್ಸು ವೋಗಿದ್ದೆ ದೊಣ್ಣೆ ಎತ್ತಿ ಇನ್ನು ಆಡಿದ್ದು. ಇವು ಗಂಡ ವೀಳ್ಯಾ ಕೊಟ್ ಬಂದ್ದಿದಲ್ಲ ? ಮುಂದೆ ಕುಂತಿದ್ದಲ್ಲ ? ಚೇರು ಹಾಕ್ಕೊಂಡು ಕೂತ್ಕಂಡ. ಇವಳನ್ನು ನೋಡ್ತಾ. ದೊಂಬರೋಳನ್ನ. ಅಂಗೆ ಯೋಚೆ ಮಾಡ್ಡ. ಅಲ್ಲಿ ಫಸ್ಸಾಗಿ ಹೋಗಿಟ್ಟು, ಆಲ್ಬಟ್ಟು, ಇವಳ ಮನೇಗ್ ಬಂದ್ಲು. ಮರ ತಗಲಾಕ್ಕೊಂಡು ಮಲಿಕ್ಕೊಂಡ್ಲು ಮನೆಗೆ ಬರೂ ಲೂವೆ.

ಆಗ ಇನ್ನು ಏನಂತಾನೆ? ಅಲ್ಲ ಮನೇಲ್ ಇರೋಳು ಕೊರಮರೋಳು. ಇವಳು ದೊಂಬರೋಳು. ಇವು ದೊಂಬರೋಳು ಆದ್ರೂವೇ ಇದೇ ಹೆಣ್ಣು, ನಮ್ಮ ಅತ್ತೆ ಮಗಳಂಗೆ ಇವಳು ಅವೈ. ಅವಳಂಗೆ ಇನ್ನು ಯಾರೂ ಇಲ್ಲ. ಇವಳು ದೊಂಬರೋಳು ಆದ್ರೂವೆ ಇವಳನ್ನೇ ನಾನು ಇನ್ನೊಂದು ಮದ್ದೆ ಆಗೋಕು ಅಂದ.

ನಾಟಕ ಬೆಳಕು ಅರಿಯೋ ತನ್ನ ನೋಡ್ತಾ. ಇನ್ನೊಂದು ಸರಿ ದೊಂಬರಾಟ ಒಳ್ಳೆ ಇದ್ರೆ ಅಲ್ವ ಬರೋದು ಅತ್ತೆ ಮಗಳು ? ಅತ್ತೆ ಮಗಳು ಆಗ್ಲೆ ಮನಿಗ್ ಬಂದವಳೇ. ನೋಡಿ ನೋಡಿ ಸಾಕಾಗ್ ಬಿಟ್ಟು ನಾಟಕಕ್ಕೆ ಹೋಗ್ನಿಟ್ಟು ಮನೆಗೆ ಬಂದ.

ಬಂದನ್ನೇ ಏನ್ಮಾಡ್ಡಿಟ್ಟ? ಸೀದಾ ದೊಂಬರಾಟಕ್ಕೆ ಹೋದ. ಇವ್ರು ಆಗ್ಲೆ ಮರ ತಗಲಾಕ್ಕೊಂಡು ಗಂಡನೂ ಅತ್ತೆನೂ ಬರೋದ್ರಗಾಗಿ ದನ ಈಚೆಗ್ ಅಟ್ಟಿ, ಕಸಗೂಡಿಸ್ಕೊಂಡು, ಬಾಗಿಲಿಗೆ ಬೆಳಗಿ ರಂಗೋಲಿ ಬಿಟ್ಟು, ಕುಡ್ಲು ತಗೊಂಡು, ದನ ಇಡ್ಕೊಂಡು ಜ್ವಾಳದ ತವ ಹೋಗ್ತಾ ಇದ್ದಾಳೆ ಇವು. ಆಗ ಜ್ವಾಳತಕ್ ವೋದ್ಲು. ಅವುರು ಬಂದ್ರು.

ಇನ್ನು ಸೀದಾ ದೊಂಬರಟ್ಟಿಗೆ ವೋದಾ. ಮಗ ವೋಗಿ ಅಲ್ಲಿ ನಿಮ್ಮನೆಲಿ ಎಷ್ಟು ಜನ ಅವೇ ? ನಿಮ್ಮ ನಿಮ್ಮನೆಯವರು ಎಲ್ಲಿಗೋಗ? ಎಲ್ಲಾ ಒಂದು ಕುರಿ ಎಲ್ಲಾನೂ ಪರಿಚಯ ಮಾಡ್ಡ. ಅವು ಮನೇ ಜನಾನೆಲ್ಲ ಪರಿಚಯ ಮಾಡ್ಡಾ. ಅವ್ರ ಮನೆನೆಲ್ಲಾ ಟೆಸ್ಸು ಮಾಡ್ಡ. ಎಲ್ಲೆಲ್ಲಿ ನೋಡಿದ್ದೂಲೇನೆ ಅವ್ರ ಅತ್ತೆ ಮಗಳಂತೆ ಮಗಳಿಲ್ಲ.

ಅವಳು ನಮ್ಮ ಅತ್ತೆ ಮಗಳಂಗೆ ಬಂದು ಫಸ್ಸು ದೊಣ್ಣೆ ಎತ್ತಿ ಆಡಿದ್ದಲ್ಲ ಯಾರಾಗಿರೋದು ? ನಮ್ಮ ಅತ್ತೆ ಮಗಳೇ ಏನಾದ್ರೂ ಆಗಿದ್ದಾಳ ? ನೋಡ್ಲೆ ಬೇಕು ಅಂಥ ಅಲ್ಲಿಗೆ ಬಂದು ತಿಳ್ಕೊಂಡ. ದೊಂಬರಟ್ಟಿ ಒಳಗಿಲ್ಲ, ಅಮಗಳು.

ಮತ್ತೆ ಬಂದವು ಇನ್ನೊಂದು ನಾಕೈದು ದಿವ್ಯ ಬಿಡ್ಕೊಂಡು ತಿದ್ದಾ ಅವ್ರ ತಾಯಿಗೆ ಅವ್ವ ಮತ್ತೆ ನಂಗೆ ಯಾಕೋ ತುಂಬಾ ಬೇಜಾರಾಗುತ್ತೆ ಕಣವ್ವ. ಈವತ್ತು ಬೇರೆ ನಾಟ್ಕ ಆಡಿಸ್ಟೇಕು ತಿರಾ. ದೊಂಬರಾಟಕ್ಕೆ. ವೀಳ್ಯಾ ಕೊಡೋಕು ಕಣವ್ವ ಅಂದ. ಅಂಗತ್ತೂವೇ ಆಯ್ತಪ್ಪ ಆಡಿಸೋ. ನಿಂಗೆ ಬ್ಯಾಡ ಅಂದಿನಾ ಅಂದ್ಲು.

ಅಂಗ್ ಅಂದಾಗ ತಿದ್ದಾ ದೊಂಬರಾಟಕ್ಕೆ ವೀಳ್ಯ ಕೊಟ್ಟು ಬಂದಾ. ಬಲೂವೆ ಅವತ್ತು ಬೇರೆ ನಾಟಕಕ್ಕೆ ಹೇಳಿಬಂದ ಅವತ್ತು. ಇವು ಬಂದೇ ಇಲ್ಲ ನಾಟಕದ ದಿವ್ವ. ಜಲ್ಲಿ ಸರಿಯಾಗಿ ಬರೋಳು. ಅವತ್ತು ಲೇಟಾಗಿ ಬಾಳೆ.

ಅವತ್ತು ಅಂಗೇ ಲೇಟಾಗಿರದೆ. ಲೇಟಾಗಿ ಬಂದ್ಲು, ಅಷ್ಟೊತ್ತಿಗೆ ಇವರಾಗ್ಲೆ ತಾಯಿ ಮಗನೂ ಊಟ ಮಾಡಿ ಆಗ್ಲೆ ಹೊರಟು ನಿಂತಿದ್ದಾರೆ. ಅಲ್ಲಾ ಮರಗೋಟಿ, ಅವತ್ತೂ ಬರೇ ಹೋದೆ ನಾಟ್ಯ ನೋಡೋಕೆ. ಇವತ್ತಿಗಾದ್ರೂ ಬರಾಕಿಲ್ವೇನೆ? ಯಾವಾಗ ಬರೀಯೆ ನೀನು ? ಅಂತ ಕೇಳಿದರು.

‘ಅಯ್ಯೋ ನೋಡ ನಮಗೆ ನಾಟ್ಯ ಒಂದು ಕೇಡ ನಮಗೆ ಮ್ಯಾಳ ಒಂದು ಕೇಡ ನಮಗೇ ತಾಳ ಒಂದು ಕೇಡ. ಹೋಗ್ರಿ ನೀವು ಅಕ್ಕಿ ಅಲ್ಲಿಂದ ಹೊಡೆದ್ರೆ ಇತ್ತಾಗ ಹೋಗ್ತವೆ, ಇಲ್ಲಿಂದ ಹೊಡೆದ್ರೆ ಅತ್ತಾಗೆ ಹೋಗ್ತಾವೆ. ಅತ್ತಾಗೇ ಇತ್ತಾಗೇ ಓಡಾಡಿ ಓಡಾಡಿ ಕಾಲು ಸೋತೋಗೈತೆ. ಸಧ್ಯಕ್ಕೆ ವೋಗಿ ಎಷ್ಟೊತ್ತಿಗೆ ಮಲಿಕ್ಕೋಳ್ಳೋಣ ಅನ್ನೊಂಗೇ ಆಗೈತೆ ಅಂದ್ಲು.

ಬಿಡತ್ತಾಗೇ ನೀನು ಬರಲ್ವೇನೆ ? ಅಂಗಾದ್ರೆ ? ಇಲ್ಲ ನಾನು ಬರಲ್ಲ ಅಂದ್ಲು. ಅಂಗಂದ್ರೆ ಬಿಗಿಯಾಗಿ ಕದ ಆಕ್ಕೊಂಡು ಮಲಿಕ್ಕೊ ನೀನು ಅಂದ್ರು. ತಾಯಿ ಮಗ ಹೋದ್ರು.

ಇನ್ನೇನು ಮಾಡ್ಡ ? ಇವತ್ತು ಎಂತೂ ನನ್ನ ಅತ್ತೆ ಮಗಳೆ ಬರೋಳು ನೋಡ್ಲೆಬೇಕು ಅಂದ. ಇವನೋಗೋ ದಾರಿ ಒಳಗೆ ಖುರ್ಚಿ ಚೇರು ಹಾಕ್ಕೊಂಡ. ಕೂತ್ಕಂಡ. ಕೂತ್ಕಣೋ ಹೊತ್ತೇ… ಇವಳೇನು ಮಾಡಿದ್ದು ? ಇವಳಿಗೆ ಊಟವು ಇಲ್ಲ ಏನೂ ಇಲ್ಲ. ದಡದಡನೇ ಹುಲ್ಲು ಬಡಿದ್ದು ಹಾಕಿದ್ದು.

ನುಗ್ಗಲುಸೊಪ್ಪು ಹರಡಿದ್ದು. ಬೇರೆ ಡ್ರಸ್ಸು ಆಕ್ಕೊಂಡು ಅವತ್ತು ಗೋವಿಂದ ಅಂದ್ರಲ್ಲ ನಾಟಕ ಆಡಕ್ಕೆ ಅಲ್ಲಿಗೋದೊಳೆ ದೋಣಿ ಎತ್ತಿ ಆಡಕ್ಕೋದ್ದು. ಹೋಗ್ತಿದಂಗೆ ಮನೀಗೆ ಬಂದ ಅನ್ನು ಗಂಡ.

ಮನೀಗ್ ಬಂದು ನೋಡ್ತಾನೆ. ಮರ ಆ ಗೂಟಕ್ಕೆ ತಗಲಾಕಿದ್ದಾಳೆ. ಈ ಮರ ಇರೋ ಹೊತ್ತೆ ಹೌದೋ ಅಲ್ಲ ನೋಡು, ನಮ್ಮ ಅತ್ತೆ ಪಾಪ ಸತ್ತ ಹೆಣಕ್ಕೆ ಮದುವೆ ಮಾಡಿ, ಇಷ್ಟು ದಿನತನಕ ಇವಳು ಮರ ತಗಲಾಕ್ಕೊಂಡು ಕೊರಮರೊಳು ಕೊರಮರೊಳು ಅಂತ ನಾನು ಇಂಗೆ ಮಾಡಿದ್ರಲ್ಲ, ಅಂತ ಹೇಳಿ ಆ ಮರ ಇರೊಹೋತ್ತೆ ಅಲ್ವ ತಗಲಾಕ್ಕೊಳೋದು ಅಂತ ಹೇಳಿ ಆ ಮರ ಕೆಚ್ಚಿಬಿಟ್ಟು ಪುಡಿಮಾಡಿಟ್ಟು ಮನೆ ಹಿಂದಕ್ಕೆ ಎಸೆದುಬಿಟ್ಟು ವೋದ, ಅವನು ನಾಟ್ಯ ನೋಡಾಕೆ ತಿರುಗಿ

ಇವಳು ಅತ್ತಿಂದ ಬತ್ತಾ ಇದ್ದಾಳೆ. ಓ ಇವತ್ತು ಮರ ಇಲ್ಲ ಆಚೇ ತಗಲಾಕ್ಕಿದ್ದೀನಿ ಅಂತ ಇವನು ಅಂಡ್ಕೊಂಡ. ಹೋಸ್ಪಿಟ್ಟ ನಾಟ್ಕ ನೋಡಾಕ್ಕೆ. ಅವತ್ತು ಮರ ಇವಳು ತಗಲಾಕೊಳ್ಳೇ ಇಲ್ಲ. ಬಂದು ಮನೆಗೆ. ಮನೆಗೆ ಬಂದು ನೋಡ್ತಾಳೆ. ಮರ ಇಲ್ಲವಲ್ಲ? ದನ ಕಟ್ಟಕ್ಕೆ ಇಷ್ಟು ದಿನ ತನಕ ತಗಲಾಕ್ಕೊಂಡು, ಇವತ್ತು ಅಂಗೆ ಹೋಗ್ ಬೇಕಲ್ಲ ಅಂದ್ಲು.

ಅವತ್ತು ಎದ್ದೂ ಇಲ್ಲ ದನ ಕಟ್ಟೂ ಇಲ್ಲ ತೆಗೆದೂ ಇಲ್ಲ. ನಾಟ್ಕ ನೋಡ್ಕೊಂಡು ತಾಯಿ ಮಗ ಇಬ್ರೂ ಬಂದ್ರು ಜೊತೇಲಿ. ‘ಅಲ್ಲ ಈವತ್ತು ನಮ್ಮ ಮರಗೋಟಿ ಎಲ್ಲೋದ್ದು ? ನಮ್ಮ ಮರಗೋಟಿ ಎಲ್ಲೋ ಹೋಗಿಟ್ಟಲ್ಲ ? ಕದ ತೆಗೆದೇ ಇಲ್ಲ? ದನ ಕಟ್ಟಾಕೆ ಇಲ್ವಲ್ಲ ? ಅಂದ್ಲು ಅವರತ್ತೆ.

Story

ಯವ್ವಾ ನಡಿಯವ್ವಾ ಎಲ್ಲೋ ಅಷ್ಟೇ. ಅದೇನು ಅಂಗಂತೀಯಾ ಅಂದ. ಆಗ ಬಂದು ಕದ ತೆಗೆಯೋ ಹೊತ್ತೆ ಮನೆ ಎಲ್ಲ ಬೆಳಕಾಯ್ತಂತಂತೆ. ಆಗ ಅವರ ತಾಯಿ, ಬಳೆಬಂಗಾರತಿ ಅವರ ತಾಯಿಗೆ ಕಾರ್ಡು ಬರೆದು, ಅತ್ತೆಮಾವ ಅವರೆಲ್ಲ ಕರೇ ಕಂಡರು. ಆಗ ಪಟ್ಟ ಗುಡ್ಲಿ, ಪಟ್ಟ ಸಾರಿ, ಮದುವೆ ಆಗಿ ಬಾಳ್ಕೊಂಡು, ಬದಿಕೊಂಡು ಹೋದ್ರಂತೆ.

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

You cannot copy content of this page

error: Content is protected !!
Scroll to Top