Eco Club Program-2025: Encouraging Environmental Protection Among Students

Eco Club Program-2025: Encouraging Environmental Protection Among Students

 

Eco Club Program-2025: ಪರಿಸರದ ಸುಸ್ತಿರ ಬೆಳವಣಿಗೆಯಲ್ಲಿ ಶಾಲಾ ಮಕಳ ಪಾತ್ರ ಪ್ರಮುಖವಾಗಿದೆ. ಈ ಹಿನ್ನೆಲೆಯಲ್ಲಿ ಶಾಲಾ ಹಂತದಲ್ಲಿ ಶಿಕ್ಷಕರು ಪರಿಸರ ಸಂರಕ್ಷಣೆ” ಕುರಿತು ಮಕ್ಕಳಿಗೆ ಜಾಗೃತಿ ಮೂಡಿಸುವ ಚಟುವಟಿಕೆಗಳನ್ನು ಹಮ್ಮಿಕೊಂಡು, ವಿದ್ಯಾರ್ಥಿಗಳನ್ನು ಪರಿಸರ ಸಂರಕ್ಷಣೆ ಮಾಡುವಂತೆ ಪ್ರೇರೇಪಿಸಲು ಇಕೋ ಕ್ಲಬ್ ಎಂಬುದು ಶಾಲಾ ಮಟ್ಟದಲ್ಲಿ ಪರಿಸರ ಶಿಕ್ಷಣದ ಅತ್ತುತ್ತಮ ಮಾಧಮವಾಗಿದೆ. ಇದು ಮಕ್ಕಳು ಕೇವಲ ಪುಸ್ತಕದ ಜ್ಞಾನಕ್ಕೆ ಸೀಮಿತವಾಗದೆ, ನೈಸರ್ಗಿಕ ಜಗತ್ತಿನ ಜೊತೆ ಅನುಭವದ ಮೂಲಕ ಕಲಿಯುವ ಅವಕಾಶವನ್ನು ಒದಗಿಸುತ್ತದೆ. ಇಂತಹ ಕ್ಲಬ್‌ಗಳು ಭವಿಷದ ಪರಿಸರ ಸಂರಂಕ್ಷಕರನ್ನು ರೂಪಿಸುತ್ತವೆ. ರಾಜ್ಯದ ಪ್ರತಿ ಶಾಲಾ ಕಾಲೇಜುಗಳಲ್ಲಿ ಕಡ್ಡಾಯವಾಗಿ ಇಕೋಕ್ಲಬ್‌ಗಳನ್ನು ಪ್ರಾರಂಭಿಸಬೇಕಾಗಿದೆ.

ವಾರ್ಷಿಕ ಯೋಜನಾ ಅನುಮೋದನಾ ಮಂಡಳಿಯಿಂದ ಶಾಲಾ-ಕಾಲೇಜುಗಳ ಹಂತದಲ್ಲಿ ಇಕೋಕ್ಲಬ್ ಚಟುವಟಿಕೆಗಾಗಿ ಪ್ರಾಥಮಿಕ ಶಾಲಾ ವಿಭಾಗಕ್ಕೆ ಪ್ರತಿ ಶಾಲೆಗೆ ಘಟಕ ವೆಚ್ಚ ರೂ.4000/-. ಗಳಂತೆ 20155 ಶಾಲೆಗಳಿಗೆ ರೂ. 806.20 ಲಕ್ಷಗಳ ಅನುದಾನೆ, ಹಿರಿಯ ಪ್ರಾಥಮಿಕ ಶಾಲಾ ವಿಭಾಗಕ್ಕೆ ಪ್ರತಿ ಶಾಲೆಗೆ ಘಟಕ ವೆಚ್ಚ 9000/-ರೂ. ಗಳಂತೆ 20919 ಶಾಲೆಗಳಿಗೆ ರೂ.1882.71 ಲಕ್ಷಗಳ ಅನುದಾನ ಹಾಗೂ Secondary and Sr. Secondary ಶಾಲಾ ವಿಭಾಗಕ್ಕೆ ಪ್ರತಿ ಶಾಲೆಗೆ ಘಟಕ ವೆಚ್ಚ 25000/-ರೂ. ಗಳಂತೆ 5207 ಶಾಲೆಗಳಿಗೆ ರೂ. 1301.75 ಲಕ್ಷಗಳ ಅನುದಾನ ಅನುಮೋದನೆಯಾಗಿರುತ್ತದೆ.


ಅನುಮೋದನೆಯಾಗಿರುವ ಶೇಕಡಾ 100 ರಷ್ಟು ಅನುದಾನ ಈ ಕೆಳಕಂಡಂತೆ ಬಿಡುಗಡೆ ಮಾಡ ಲಾಗಿದೆ.

▪️ಸರ್ಕಾರಿ ಕಿರಿಯ ಪ್‌ರಾಥಮಿಕ ಶಾಲೆಗಳಿಗೆ ಇಕೋ ಕ್ಲಬ್ ಅನುದಾನ ನೇರವಾಗಿ SDMC ಮತ್ತು ಶಾಲಾ ಮುಖ್ಯೋಪಾಧ್ಯಾಯರ ಜಂಟಿ ಖಾತೆಗೆ PRABANDH COMPONENT CODE: 5.4.1.1

▪️ ಸರ್ಕಾರಿ Secondary / Sr. Secondary ಶಾಲೆಗಳಿಗೆ ಇಕೋ ಕ್ಲಬ್ ಅನುದಾನ ನೇರವಾಗಿ ಪ್ರೌಢಶಾಲೆ SDMC ಮತ್ತು ಶಾಲಾ ಮುಖ್ಯೋಪಾಧ್ಯಾಯರ ಜಂಟಿ ಖಾತೆಗೆ ಅಥವಾ SDMC ಮತ್ತು ಪದವಿಪೂರ್ವ ಪ್ರಾಂಶುಪಾಲರ ಜಂಟಿ ಖಾತೆಗೆ PRABANDH COMPONENT CODE: 3.1.1.1 ಹಾಗೂ PFMS- CSS COMPONENT CODE F.03.06 ರಡಿ ಬಿಡುಗಡೆ ಮಾಡುವ ಸೂಚಿಸಿದೆ.



ಉದ್ದೇಶಗಳು:-

1. ವಿದ್ಯಾರ್ಥಿಗಳಲ್ಲಿ ಜೀವ ವೈವಿಧ್ಯ ಸಂರಕ್ಷಣೆ ಮತ್ತು ಸ್ಥಳೀಯ ಪರಿಸರ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವುದು.

2. ಪ್ರಕೃತಿಯ ಬಗ್ಗೆ ಪ್ರೀತಿ ಮತ್ತು ಸಂರಕ್ಷಣೆಯ ಜವಾಬ್ದಾರಿಯನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವುದು.

3. ವಿದ್ಯಾರ್ಥಿಗಳಲ್ಲಿ ಮರುಬಳಕೆ ಹಾಗೂ ನವೀಕರಿಸಲಾಗದ ಸಂಪನ್ಮೂಲಗಳನ್ನು ಉಳಿಸುವಂತಹ ಪರಿಸರ ಸ್ನೇಹಿ ಅಭ್ಯಾಸಗಳನ್ನು ಬೆಳೆಸುವುದು.

4. ಗಿಡಗಳನ್ನು ಬೆಳೆಸುವ ಮೂಲಕ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಹಸಿರು ಮತ್ತು ಸ್ವಚ್ಚವಾಗಿಡಲು ವಿದ್ಯಾರ್ಥಿಗಳನ್ನು ಪ್ರೇರೇಪಿಸುವುದು.

5. ಪ್ಲಾಸ್ಟಿಕ್ ಮಾಲಿನ್ಯದ ಹಾನಿಕಾರಕ ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವುದು.

6. ಮಕ್ಕಳಲ್ಲಿ ಪರಿಸರೆ ಮತ್ತು ಹವಾಮಾನದ ಬದಲಾವಣೆಯ ಸಮಸ್ಯೆಗಳ ಬಗ್ಗೆ ಅರಿವನ್ನು ಮೂಡಿಸುವುದು.

ಮಿಷನ್ ಲೈಫ್ ಥೀಮ್.

1. ಆರೋಗ್ಯಕರ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುವುದು.

2. ಸುಸ್ಥಿರ ಆಹಾರ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳುವುದು.

3. ಇ-ತ್ಯಾಜ್ಯವನ್ನು ಕಡಿಮೆ ಮಾಡುವುದು. ತಾಜವನು ಕಡಿಮೆ ಮಾಡುವುದು. 4. ತ್ಯಾಜ್ಯವನ್ನು

5. ಇಂಧನವನ್ನು ಉಳಿಸುವುದು.

6. ನೀರನ್ನು ಮಿತವಾಗಿ ಬಳಸುವುದು.

7. ಏಕಬಳಕೆಯ ಪ್ಲಾಸ್ಟಿಕ್‌ನ್ನು ನಿರಾಕರಿಸುವುದು.

ಇಕೋ ಕ್ಲಬ್ ಕಾರ್ಯಕ್ರಮದಡಿಯಲ್ಲಿ ಶಿಕ್ಷಕರು ಶಾಲಾ ಹಂತದಲ್ಲಿ ಹಮ್ಮಿಕೊಳ್ಳಬೇಕಾದ ಚಟುವಟಿಕೆಗಳು:

1. ಶಾಲಾ ಆವರಣದಲ್ಲಿ ಸಸಿಗಳನ್ನು ನೆಟ್ಟು, ಶಿಕ್ಷಕರು ಮಕ್ಕಳಿಗೆ ದತ್ತು ನೀಡಿ, ಅವುಗಳನ್ನು ಪೋಷಿಸುವುದರ ಮೂಲಕ ಶಾಲಾ ಆವರಣವನ್ನು ಹಸಿರು ವಾತಾವರಣವನ್ನಾಗಿ ರೂಪಿಸುವುದು.

2. EK PED MAA KE NAAM 2.0 ಕಾರ್ಯಕ್ರಮದ ಅಡಿಯಲ್ಲಿ ವಿದ್ಯಾರ್ಥಿಗಳು ತಮ್ಮ ತಾಯಿಯ  ಹೆಸರಿನಲ್ಲಿ/ತಾಯಿಯೊಂದಿಗೆ ಸಸಿಗಳನ್ನು ನೆಡುವುದು ಹಾಗೂ ಸಸಿಗಳನ್ನು ನೆಡುವ ಸೆಲ್ಪಿಪೋಟೊಗಳನ್ನು ಶಿಕ್ಷಕರು ಕಡ್ಡಾಯವಾಗಿ Eco club for mission life web portal ನಲ್ಲಿ ಅಪ್ಲೋಡ್ ಮಾಡುವುದು.

3. ಪ್ಲಾಸ್ಟಿಕ್ ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಮಕ್ಕಳಿಗೆ ಅರಿವು ಮೂಡಿಸುವುದು.

4. ಶಾಲೆಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ತ್ಯಜಿಸುವುದು ಹಾಗೂ ಪ್ಲಾಸ್ಟಿಕ್ ಮುಕ್ತ ಶಾಲೆಯನ್ನಾಗಿ ಪರಿವರ್ತಿಸುವುದು.

5. ಮಕ್ಕಳಲ್ಲಿ ಸಮತೋಲನ ಆಹಾರ ಬಳಕೆಯ ಅಭ್ಯಾಸ ಬೆಳೆಸುವುದು.

6. ಮಕ್ಕಳಿಗೆ ತ್ಯಾಜ್ಯದ ವಿಲೇವಾರಿ ಬಗ್ಗೆ ಜಾಗೃತಿ ಮೂಡಿಸಿ ಶಾಲಾ ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳುವುದು. (ಹಸಿ ಕಸ ಹಾಗೂ ಒಣ ಕಸವನ್ನು ಪ್ರತ್ಯೇಕಿಸುವ ಬಗ್ಗೆ)

7. ಶಿಕ್ಷಕರು ಪರಿಸರ ಮಾಲಿನ್ಯದಿಂದ (ಹವಾಮಾನ ವೈಪರೀತ್ಯ) ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದು.

8. ಶಾಲಾ ಮಕ್ಕಳಿಂದ ಘೋಷಣೆಗಳೊಂದಿಗೆ ಜಾಥಾ ಕಾರ್ಯಕ್ರಮ ಹಮ್ಮಿಕೊಂಡು, ಸಮುದಾಯದಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವುದು.

9. ನೀರಿನ ಮಿತ ಬಳಕೆ ಹಾಗೂ ನೀರಿನ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸುವುದು.

10. ಪರಿಸರ ಸಂರಕ್ಷಣೆ ಕುರಿತು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ, ಚರ್ಚಾ ಸ್ಪರ್ಧೆ, ರಸಪ್ರಶ್ನೆ ಸ್ಪರ್ಧೆ, ಭಾಷಣ ಸ್ಪರ್ಧೆ,

ಘೋಷವಾಕ್ಯಗಳು, ಕವನ ಹಾಗೂ ವ್ಯಂಗ್ಯ ಚಿತ್ರಗಳ ರಚನೆ, ಕಿರುನಾಟಕ ಹಾಗೂ ಚಿತ್ರಕಲೆ ಮುಂತಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು.

11. ಮರಗಿಡಗಳ ಎಲೆಗಳ ಸಂಗ್ರಹದಿಂದ ಕಾಂಪೋಸ್ಟ್ ಗೊಬ್ಬರವನ್ನು ತಯಾರಿಸಿ ಶಾಲಾ ಕೈತೋಟಕ್ಕೆ ಬಳಸುವುದು.

12. ಶಕ್ತಿ ಉಳಿತಾಯದ ಕುರಿತು ಮಕ್ಕಳಿಗೆ ಅರಿವು ಮೂಡಿಸುವುದು. (ಶಾಲೆ ಹಾಗೂ ಮನೆಗಳಲ್ಲಿ ಬಳಕೆಯ ನಂತರ Electric switch ಗಳನ್ನು off ಮಾಡುವುದು)

13. ತಜ್ಞರಿಂದ /ಸಂಪನ್ಮೂಲ ವ್ಯಕ್ತಿಗಳಿಂದ ಪರಿಸರ ಸಂರಕ್ಷಣೆ ಕುರಿತು ಉಪನ್ಯಾಸ ಒದಗಿಸುವುದು.

14. ವನ ಭೇಟಿ ಹಾಗೂ ಪ್ರಕೃತಿ ನಡಿಗೆ ಹಮ್ಮಿಕೊಳ್ಳುವುದು.(ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ)

15. ಶಾಲೆಯಲ್ಲಿ Bio-diversity Register ನ್ನು ನಿರ್ವಹಿಸಿ ಇಕೋಕ್ಲಬ್ ಅಡಿಯಲ್ಲಿ ಹಮ್ಮಿಕೊಂಡ ಚಟುವಟಿಕೆಗಳ ದಾಖಲೆಗಳನ್ನು ನಿರ್ವಹಿಸುವುದು.

16. ಶಾಲಾ ಹಂತದಲ್ಲಿ ಇಕೋಕ್ಲಬ್‌ನ 7 Mission life Themesಗೆ ಸಂಬಂಧಿಸಿದಂತೆ, ವಸ್ತುಪ್ರದರ್ಶನವನ್ನು ಹಮ್ಮಿಕೊಳ್ಳುವುದು.

17. ಶಾಲೆಯಲ್ಲಿ ವಿಜ್ಞಾನ ಶಿಕ್ಷಕರನ್ನು ಇಕೋಕ್ಲಬ್ ನೋಡಲ್ ಅಧಿಕಾರಿಯಾಗಿ ನಿಯೋಜಿಸಿ ಚಟುವಟಿಕೆಗಳನ್ನು

ಆಯೋಜಿಸಿ ಅನುಪಾಲನೆ ಮಾಡುವುದು.

18. ಶಾಲೆಯಲ್ಲಿ ಇಕೋಕ್ಲಬ್ ಸಂಘವನ್ನು ರಚಿಸಿ, ವಿದ್ಯಾರ್ಥಿ ನಾಯಕ ಮತ್ತು ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಂಡು ಚಟುವಟಿಕೆಗಳನ್ನು ನಡೆಸುವುದು.

19. ಶನಿವಾರ ದಿನದಂದು ಶಾಲೆಯಲ್ಲಿ ಸ್ವಚ್ಛತಾ ಕಾರ್ಯ ಹಾಗೂ ಇಕೋಕ್ಲಬ್‌ನ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು.

20. ಶಾಲಾ ಸೂಚನಾ ಫಲಕದಲ್ಲಿ Mission life Notification ನ್ನು ಕಡ್ಡಾಯವಾಗಿ ಪ್ರದರ್ಶಿಸುವುದು.

21. ಶಾಲಾ ಕೈತೋಟವನ್ನು ಕಡ್ಡಾಯವಾಗಿ ನಿರ್ವಹಿಸಿ, ತರಕಾರಿ ಸೊಪ್ಪುಗಳನ್ನು ಬೆಳೆದು ಮಧ್ಯಾಹ್ನದ ಅಕ್ಷರದಾಸೋಹಕ್ಕೆ ಬಳಸುವುದು. ಅದರೊಂದಿಗೆ ಔಷಧೀಯ ಸಸ್ಯಗಳನ್ನು ಬೆಳೆಸುವುದು.

22. ಶಾಲೆಗಳಲ್ಲಿ ಸ್ಥಳಾವಕಾಶ ಕೊರತೆ ಇದ್ದಲ್ಲಿ ಸಸ್ಯಗಳನ್ನು ಕುಂಡಗಳಲ್ಲಿ (Pots) ಬೆಳೆಸುವುದು.

23. ಶಾಲೆಗಳಲ್ಲಿ ಆಚರಿಸುವ ರಾಷ್ಟ್ರೀಯ ಹಬ್ಬಗಳು ಮತ್ತು ವಿವಿಧ ದಿನಾಚರಣೆಗಳಂದು ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು.

24. ವಿದ್ಯಾರ್ಥಿಗಳಿಗೆ ಪ್ಲಾಸ್ಟಿಕ್ ಚೀಲದ ಬದಲಿಗೆ ಬಟ್ಟೆ/ಕಾಗದದ ಚೀಲಗಳನ್ನು ಬಳಸಲು ಪ್ರೋತ್ಸಾಹಿಸುವುದು.

25. ಜಾಗತಿಕ ತಾಪಮಾನದ ಬಗ್ಗೆ ವಿಷಯ ತಜ್ಞರಿಂದ ಜಾಗೃತಿ ಮೂಡಿಸುವುದು.

26. ಪ್ರತಿ ಶಾಲೆಯಲ್ಲಿ ಎಲ್ಲಾ ವಿದ್ಯಾರ್ಥಿಗಳಿಂದ ಅವರವರ ತಾಯಿಯ ಹೆಸರಲ್ಲಿ ಸಸಿಗಳನ್ನು ನೆಡುವ Selfie Photo ಹಾಗೂ Notification Eco club for mission life web portal ನಲ್ಲಿ ಕಡ್ಡಾಯವಾಗಿ upload ಮಾಡುವುದು.

27. ವಾರಕೊಮ್ಮೆ ಪರಿಸರಕ್ಕೆ ಸಂಬಂಧಿಸಿದ ಕವನಗಳು, ಚಿತ್ರಗಳು ಮತ್ತು ಪತ್ರಿಕಾ ಪ್ರಕಟಣೆಗಳನ್ನು ಸೂಚನಾ ಫಲಕದಲ್ಲಿ ಪ್ರದರ್ಶಿಸುವುದು.

28. ಇಲಾಖೆಯಿಂದ ನೀಡುವ ಗ್ರಂಥಾಲಯ ಅನುದಾನದಲ್ಲಿ ಪರಿಸರಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಖರೀದಿಸಿ ವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಓದಲು ಪ್ರೇರೇಪಿಸುವುದು.

29. ವಿದ್ಯಾರ್ಥಿಗಳು ಸೂಕ್ತ ಸಂದರ್ಭದಲ್ಲಿ ಕೈತೊಳೆಯುವ ಅಭ್ಯಾಸ, ಪರಿಸರ ಸ್ನೇಹಿ ಹವ್ಯಾಸಗಳನ್ನು ಬೆಳಸಿಕೊಳ್ಳಲು ಮಕ್ಕಳಿಗೆ ಪ್ರೇರಣೆ ನೀಡುವುದು.

30. ಪರಿಸರ ಸ್ನೇಹಿ ವಸ್ತುಗಳ ಬಳಕೆಗೆ ಪ್ರೋತ್ಸಾಹ ನೀಡುವುದು.

31. ಶಾಲೆಗಳ ಆವರಣದಲ್ಲಿ ಸಸ್ಯಗಳು, ಗಿಡಗಳು/ಔಷಧಿಯ ಸಸ್ಯಗಳನ್ನು ನೆಟ್ಟು ಅವುಗಳ ಸಾಮಾನ್ಯ ಹಾಗೂ ವೈಜ್ಞಾನಿಕ ಹೆಸರು, ಉಪಯೋಗ ಇತ್ಯಾದಿ ಮಾಹಿತಿಗಳನ್ನು ಗಿಡ/ಸಸ್ಯಗಳಿಗೆ ನೇತುಹಾಕಿ ಮಕ್ಕಳಿಗೆ ದತ್ತು ನೀಡುವ ಮೂಲಕ ಪರಿಸರ ಸಂರಕ್ಷಣೆಯ ಮಹತ್ವದ ಪ್ರಜ್ಞೆ ಮೂಡಿಸುವುದು.

32. ವಿದ್ಯಾರ್ಥಿಗಳಿಗೆ ವಿಶೇಷ ದಿನಗಳನ್ನು ಗಿಡಗಳನ್ನು ನೆಡುವ ಮೂಲಕ ಆಚರಿಸಿಕೊಳ್ಳುವಂತೆ, ಹಾಗೂ ವಿಶೇಷ ದಿನಗಳಿಗೆ ಇತರರಿಗೆ ಗಿಡಗಳನ್ನು ಬಳುವಳಿಯಾಗಿ ನೀಡುವಂತೆ, ತಿಳಿಸುವುದು.

33. ಪರಿಸರ ವಿನಾಶಕ್ಕೆ ಕಾರಣವಾಗುವ ಅಂಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸುವುದು. ಪಟ್ಟಿಮಾಡುವಂತೆ ತಿಳಿಸುವುದು.

34. ಪರಿಸರ ಸಂರಕ್ಷಣೆಗಾಗಿ ಮಕ್ಕಳು ತಾವು ಸ್ವ ಅರಿವು ಪಡೆಯಲು ಅನುವಾಗುವಂತಹ ಚಟುವಟಿಕೆಗಳನ್ನು ಶಾಲೆಗಳಲ್ಲಿ ಆಯೋಜಿಸುವುದು.

35. ಶಾಲೆಯಲ್ಲಿರುವ ಸಸ್ಯಗಳನ್ನು ವಿದ್ಯಾರ್ಥಿಗಳಿಗೆ ದತ್ತು ನೀಡಿ ನಿರ್ವಹಣೆ ಮಾಡಲು ತಿಳಿಸುವುದು.

36. ಶಾಲಾ ಸಾಂಸ್ಕೃತಿ ಕಾರ್ಯಕ್ರಮಗಳಲ್ಲಿ ಪೋಷಕರ ಸಭೆಗಳಲ್ಲಿ ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಅಂಶಗಳನ್ನು ತಿಳಿಸಿ ಜಾಗೃತಿ ಮೂಡಿಸುವುದು.

37. ಪ್ರತಿ ನಿತ್ಯ ಶಾಲಾ ಪ್ರಾರ್ಥನ ವೇಳೆಯಲ್ಲಿ ಪರಿಸರ ಸಂರಕ್ಷಣೆ ಸಂಬಂಧ ಘೋಷಣಾ ವಾಕ್ಯಗಳನ್ನು ಹೇಳಿಸುವುದು.

38. ತ್ಯಾಜ್ಯ ವಿಂಗಡಣೆ ಹಾಗೂ ಮರು ಬಳಕೆಯ ಬಗ್ಗೆ ಅರಿವನ್ನುಂಟುಮಾಡಲು ಅವಕಾಶವಿದ್ದಲ್ಲಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡುವುದು.

39. ಅವಕಾಶವಿದ್ದಲ್ಲಿ ಶಾಲೆಯ ಸಮೀಪದಲ್ಲಿರುವ ಕೃಷಿ ವಿದ್ಯಾಲಯಗಳಿಗೆ ಭೇಟಿ ನೀಡುವುದು.

40. ಪರಿಸರ ವಿನಾಶದಿಂದ ಪ್ರಸ್ತುತ ಎದುರಿಸುತ್ತಿರುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವುದು.


▪️ಪರಿಸರದ ಘೋಷಣೆಗಳು
▪️ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ.
▪️ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಉಳಿಸಿ.
▪️ಕುಡಿಯಿರಿ ಶುದ್ದ ಜಲ ಉಳಿಸಿರಿ ಅಂತರ್ಜಲ
▪️ಕಾಡು ಬೆಳೆಸಿ ನಾಡು ಉಳಿಸಿ.
▪️ಮನೆಗೊಂದು ಮರ ಊರಿಗೊಂದು ವನ
▪️ಅರಣ್ಯ ಸಂಪತ್ತು ಸಂರಕ್ಷಿಸಿ ವನ್ಯ ಜೀವಿ ಸಂತತಿ ಉಳಿಸಿ.
▪️ಸಸಿನೆಟ್ಟು ಬೆಳೆಸೋಣ- ಪರಿಸರ ಉಳಿಸೋಣ.
▪️ನೀರನ್ನು ಮಿತವಾಗಿ ಬಳಸಿ.
▪️ಪರಿಸರ ಸ್ನೇಹಿ ಬೈಸಿಕಲ್ ಬಳಸಿ ಇಂಧನ ಉಳಿಸಿ.
▪️ನಿಸರ್ಗ ಸಂರಕ್ಷಣೆ ನಮ್ಮೆಲ್ಲರ ಹೊಣೆ.
▪️ಜೀವ ಸಂಕುಲದ ಸಂರಕ್ಷಣೆ ನಮ್ಮೆಲ್ಲರ ಹೊಣೆ.
▪️ಕಾಡೇ ರಾಷ್ಟ್ರದ ಸಂಪತ್ತು.
▪️ಅಂರ್ತಜಲ ಸಂರಕ್ಷಣೆ ನಮ್ಮೆಲ್ಲರ ಹೊಣೆ.
▪️ಜೀವ ವೈವಿಧ್ಯ ಸಂರಕ್ಷಣೆ ನಮ್ಮೆಲ್ಲರ ಹೊಣೆ.


ಅನುದಾನದ ವಿವರ:

ರಾಜ್ಯದ ಪ್ರತಿ ಸರ್ಕಾರಿ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಈ ಕೆಳಕಂಡಂತೆ ಅನುದಾನ ಬಿಡುಗಡೆಯಾಗಿರುತ್ತದೆ. ಈ ಅನುದಾನವನ್ನು ಬಳಸಿ ಶಾಲಾ-ಕಾಲೇಜುಗಳ ಹಂತದಲ್ಲಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು.



ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಗೆ ಬರುವ ಶಾಲೆಗಳಿಗೆ ಪ್ರತಿ 15 ದಿನಕ್ಕೊಮ್ಮೆ ಭೇಟಿನೀಡಿ ಸುತ್ತೋಲೆ ರೀ, ಚಟುವಟಿಕೆಗಳನ್ನು ಸಕಾಲದಲ್ಲಿ ಮಾಡಲಾಗುತ್ತದೆ ಎಂಬುದರ ಬಗ್ಗೆ ಖಾತ್ರಿಪಡಿಸಿಕೊಳ್ಳುವುದು, ವರದಿಯನ್ನು ಉಪನಿರ್ದೇಶಕರು (ಆಡಳಿತ) ರವರಿಗೆ ಸಲ್ಲಿಸುವುದು.

ಶಾಲಾ ಮುಖ್ಯ ಶಿಕ್ಷಕರು ನಿಗಧಿಪಡಿಸಿದ ಅವಧಿಗಳಿಗನುಗುಣವಾಗಿ ಚಟುವಟಿಕೆಗಳನ್ನು ನಡೆಸಿ ಅಗತ್ಯ ದಾಖಲೆಗಳನ್ನು ನಿರ್ವಹಿಸುವುದು.

ಜಿಲ್ಲಾ ಹಂತದಲ್ಲಿ ಉಪನಿರ್ದೇಶಕರು(ಆಡಳಿತ) ರವರು ಒಬ್ಬ ನೋಡಲ್ ಅಧಿಕಾರಿಯನ್ನು ನೇಮಿಸಿ ಶಾಲಾ ಹಂತದಲ್ಲಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು, ಕ್ರಮವಹಿಸುವುದು ಹಾಗೂ ಕಾರ್ಯಕ್ರಮ ಅನುಷ್ಠಾನಗೊಳಿಸಿದ ಬಗ್ಗೆ ಪೋಟೋ ಸಹಿತ ಮಾಹಿತಿಯನ್ನು Shagun portalನಲ್ಲಿ ಹಾಗೂ Photo ಸಹಿತ ವರದಿಯೆನ್ನು ಎಸ್.ಎಸ್.ಕೆ ಕಛೇರಿಯ ಇ-ಮೇಲ್ ವಿಳಾಸ innovativessk2526@gmail.com ಗೆ ಕಳುಹಿಸಲು ಸೂಚಿಸಿದೆ.

Eco Club



CLICK HERE TO DOWNLOAD

 

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

You cannot copy content of this page

error: Content is protected !!
Scroll to Top