Karnataka PUC 2 Practical Exams 2026: ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಗಳ ನಡೆಸುವ ಕುರಿತು ಮಹತ್ವದ ಸೂಚನೆ

Karnataka PUC 2  Practical Exams 2026: ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಗಳ ನಡೆಸುವ ಕುರಿತು ಮಹತ್ವದ ಸೂಚನೆ.

 

Karnataka PUC 2  Practical Exams 2026: ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಗಳನ್ನು ಜಿಲ್ಲಾ ಮಟ್ಟದಲ್ಲಿ ಆಯಾ ಜಿಲ್ಲಾ ಉಪನಿರ್ದೇಶಕರ ನೇತೃತ್ವದಲ್ಲಿ ಪ್ರತಿ ವರ್ಷ ನಡೆಸಲಾಗುತ್ತಿದ್ದಂತೆಯೇ ಪ್ರಾಯೋಗಿಕ ಪರೀಕ್ಷೆಗಳನ್ನು 2026ರ ಜನವರಿ ಮತ್ತು ಫೆಬ್ರವರಿ ಮಾಹೆಯಲ್ಲಿ ದಿನಾಂಕ: 27-01-2026 ರಿಂದ 14-02-2026 ರವರೆಗೆ ನಡೆಸುವ ಸಂಪೂರ್ಣ ಜವಾಬ್ದಾರಿಯು ಆಯಾ ಜಿಲ್ಲಾ ಉಪನಿರ್ದೇಶಕರದ್ದಾಗಿರುತ್ತದೆ.

ಪ್ರಾಯೋಗಿಕ ಪರೀಕ್ಷೆಗಳಿರುವ ವಿಷಯಗಳಲ್ಲಿ ವಿದ್ಯಾರ್ಥಿಗಳು ಪ್ರಾಯೋಗಿಕ ಪರೀಕ್ಷೆಗಳಲ್ಲಿ ಗರಿಷ್ಠ ಅಂಕಗಳನ್ನು ಪಡೆದು ತಾತ್ವಿಕ ಪರೀಕ್ಷೆಯಲ್ಲಿ ಕನಿಷ್ಠ ಅಂಕಗಳನ್ನು ಪಡೆಯುತ್ತಿರುವುದು ಮಂಡಲಿಯ ಗಮನಕ್ಕೆ ಬಂದಿರುತ್ತದೆ. ಇದು ಪ್ರಾಯೋಗಿಕ ಪರೀಕ್ಷೆಗಳ ಮೌಲ್ಯಮಾಪನದ ಪಾವಿತ್ರ್ಯತೆಯ ಬಗ್ಗೆ ಸಂದೇಹ ಮೂಡಿಸುತ್ತದೆ. ಇದನ್ನು ಮಂಡಲಿಯು ಗಂಭೀರವಾಗಿ ಪರಿಗಣಿಸಿದ್ದು 2025-26ರ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸುವಲ್ಲಿ ಈ ಕೆಳಗಿನ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲು ಜಿಲ್ಲಾ ಉಪನಿರ್ದೇಶಕರುಗಳಿಗೆ ಸೂಚಿಸಿದೆ.

ಜಿಲ್ಲಾ ಉಪನಿರ್ದೇಶಕರುಗಳ ಕರ್ತವ್ಯಗಳು ಮತ್ತು ಜವಾಬ್ದಾರಿಗಳು.

1. 2026ನೇ ಸಾಲಿನ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಲು ಈಗಾಗಲೇ ಮಂಡಲಿಯಿಂದ ನಿಗದಿಪಡಿಸಿರುವ ಪರೀಕ್ಷಾ ಕೇಂದ್ರಗಳ ಪಟ್ಟಿಯನುಸಾರ ಜಿಲ್ಲಾ ಹಂತದಲ್ಲಿ ವೇಳಾಪಟ್ಟಿಯನ್ನು ಸಿದ್ದಪಡಿಸಿ ನಿಗದಿತ ಅವಧಿಯೊಳಗೆ ಪ್ರಾಯೋಗಿಕ ಪರೀಕ್ಷೆಯನ್ನು ಮಂಡಲಿಯ ನಿಯಮಾನುಸಾರ ನಡೆಸುವುದು.

2. ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಲು ಆಯಾ ಜಿಲ್ಲೆಯ ವಿಜ್ಞಾನ ವಿಷಯದ ಒಬ್ಬರು ಪ್ರಾಂಶುಪಾಲರನ್ನು ಪ್ರತಿ ವಿಷಯಕ್ಕೆ ಸಂಚಾಲಕರನ್ನಾಗಿ ಹಾಗೂ ಪ್ರತಿ ಪ್ರಾಯೋಗಿಕ ವಿಷಯಕ್ಕೆ ಗರಿಷ್ಠ ಇಬ್ಬರು ಹಿರಿಯ ವಿಜ್ಞಾನ ಉಪನ್ಯಾಸಕರನ್ನು ಸದಸ್ಯರನ್ನಾಗಿ ಒಳಗೊಂಡ ಒಂದು ಜಿಲ್ಲಾ ಪ್ರಾಯೋಗಿಕ ಪರೀಕ್ಷಾ ಸಮಿತಿಯನ್ನು ರಚಿಸಬೇಕು.

3. ಜಿಲ್ಲಾ ಪ್ರಾಯೋಗಿಕ ಪರೀಕ್ಷಾ ಸಮಿತಿಯು ಜಿಲ್ಲೆಯ ಎಲ್ಲಾ ಪ್ರಾಯೋಗಿಕ ಪರೀಕ್ಷಾ ಕೇಂದ್ರಗಳ ವೇಳಾಪಟ್ಟಿಯನ್ನು ತಯಾರಿಸುವುದು ಹಾಗೂ ಆಂತರಿಕ ಮತ್ತು ಬಾಹ್ಯ ಪರೀಕ್ಷಕರನ್ನು ಪಾರದರ್ಶಕವಾಗಿ ಮಂಡಲಿಯ ನಿಯಮಗಳಿಗನುಸಾರವಾಗಿ ನೇಮಿಸಬೇಕು. ಪ್ರಾಯೋಗಿಕ ಪರೀಕ್ಷೆಯಲ್ಲಿ ಸೂಚನೆಯಂತೆ ಹಾಗೂ ಅಂಕಪಟ್ಟಿಯಂತೆ ತಂಡಗಳನ್ನು ಮಾಡಿ ವೇಳಾಪಟ್ಟಿಯನ್ನು ನೀಡಿದ ನಂತರ ನಿಗದಿತ ತಂಡದ ವಿದ್ಯಾರ್ಥಿಗಳ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆಗೆ ಅವಕಾಶ ನೀಡಬಾರದು.

4. ಆಂತರಿಕ ಮತ್ತು ಬಾಹ್ಯ ಪರೀಕ್ಷಕರನ್ನು ನೇಮಿಸುವಾಗ ಪ್ರಾಯೋಗಿಕ ಪರೀಕ್ಷಾ ಸಮಿತಿಯವರು. ಸಂಬಂಧಪಟ್ಟ ಕಾಲೇಜುಗಳಿಂದ ಈಗಾಗಲೇ ಮಂಡಲಿಯ Evaluators Portal ನಲ್ಲಿ ನೋಂದಣಿಯಾಗಿರುವ ಉಪನ್ಯಾಸಕರ ಚೆಕ್‌ಲಿಸ್ಟ್ ಪಡೆದು, ನೋಂದಣಿಯಾಗಿ Evaluator’s Code ಅನ್ನು ಹೊಂದಿದ ಉಪನ್ಯಾಸಕರುಗಳನ್ನು ಮಾತ್ರ ಪ್ರಾಯೋಗಿಕ ಪರೀಕ್ಷಕರನ್ನಾಗಿ ನೇಮಿಸುವುದು.

5. ಒಂದು ಪ್ರಾಯೋಗಿಕ ಪರೀಕ್ಷಾ ಕೇಂದ್ರದಲ್ಲಿ ಆಂತರಿಕ ಪರೀಕ್ಷಕರಾಗಿ ಒಬ್ಬ ಉಪನ್ಯಾಸಕರನ್ನು ಗರಿಷ್ಠ ನಾಲ್ಕು ದಿನಗಳಿಗೆ (12 ತಂಡಗಳಿಗೆ) ಮಾತ್ರ ನೇಮಕ ಮಾಡುವುದು. ಆ ಪರೀಕ್ಷಾ ಕೇಂದ್ರದಲ್ಲಿ ಆಂತರಿಕ ಪರೀಕ್ಷಕರ ಲಭ್ಯತೆಯಿಲ್ಲದಿದ್ದಲ್ಲಿ ಇಬ್ಬರು ಬಾಹ್ಯ ಪರೀಕ್ಷಕರನ್ನು ನೇಮಕ ಮಾಡುವುದು.

6. ಆಂತರಿಕ ಮತ್ತು ಬಾ ಬಾಹ್ಯ ಪರೀಕ್ಷಕರ ನೇಮಕಾತಿ ಪಟ್ಟಿಯನ್ನು ಕಡ್ಡಾಯವಾಗಿ ಜಂಟಿ ನಿರ್ದೇಶಕರು (ಪಿಯು ಪರೀಕ್ಷೆ), ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ, 6ನೇ ಅಡ್ಡ ರಸ್ತೆ, ಮಲ್ಲೇಶ್ವರಂ, ಬೆಂಗಳೂರು-560 003 ಇವರಿಗೆ ಸಲ್ಲಿಸುವುದು.

7. ಸೂಕ್ಷ್ಮ ಪ್ರಾಯೋಗಿಕ ಪರೀಕ್ಷಾ ಕೇಂದ್ರಗಳಿಗೆ ಹಾಗೂ ಅನುದಾನ ರಹಿತ ಕಾಲೇಜುಗಳ ಪರೀಕ್ಷಾ ಕೇಂದ್ರಗಳಿಗೆ ಮುಖ್ಯ ಅಧೀಕ್ಷಕರನ್ನಾಗಿ ಸರ್ಕಾರಿ/ಅನುದಾನಿತ ಕಾಲೇಜಿನ ಪ್ರಾಂಶುಪಾಲರು (ವಿಜ್ಞಾನ ವಿಷಯ)/ವಿಜ್ಞಾನ ವಿಭಾಗದ ಹಿರಿಯ ಉಪನ್ಯಾಸಕರನ್ನು ನೇಮಿಸುವುದು.

8. ಅನುದಾನ ರಹಿತ ಕಾಲೇಜುಗಳಿಗೆ ಸರ್ಕಾರಿ/ಅನುದಾನಿತ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರುಗಳನ್ನೇ ಬಾಹ್ಯ ಪರೀಕ್ಷಕರನ್ನಾಗಿ ನೇಮಕ ಮಾಡುವುದು.

9. ಪ್ರಾಯೋಗಿಕ ಪರೀಕ್ಷೆಯನ್ನು ನಿರ್ದಿಷ್ಟ ಪ್ರಯೋಗಗಳಿಗೆ ಮಾತ್ರ ಸೀಮಿತಗೊಳಸದೇ, ಪಠ್ಯಕ್ರಮದಲ್ಲಿ ನಿಗದಿಪಡಿಸಿರುವ ಎಲ್ಲಾ ಪ್ರಯೋಗಗಳನ್ನೊಳಗೊಂಡಂತೆ ಪರೀಕ್ಷೆಯನ್ನು ನಡೆಸಲು ಎಲ್ಲಾ ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರುಗಳಿಗೆ ಅಗತ್ಯ ಸೂಚನೆಗಳನ್ನು ನೀಡುವುದು. ಈ ಬಗ್ಗೆ ಪ್ರಾಯೋಗಿಕ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರುಗಳಿಂದ ದೃಢೀಕರಣ ಪಡೆಯುವುದು.

10. ಬಾಹ್ಯ ಪರೀಕ್ಷಕರನ್ನಾಗಿ ನೇಮಕ ಮಾಡುವಾಗ ಮೊದಲ ಆದ್ಯತೆಯನ್ನು ಸರ್ಕಾರಿ ಕಾಲೇಜುಗಳ ಉಪನ್ಯಾಸಕರಿಗೆ, ನಂತರ ಅನುದಾನಿತ ಕಾಲೇಜುಗಳ ಉಪನ್ಯಾಸಕರಿಗೆ ನೀಡುವುದು. ಬಾಹ್ಯ ಪರೀಕ್ಷಕರ ಕೊರತೆ ಇದ್ದಲ್ಲಿ ಮಾತ್ರ ಅನುದಾನ ರಹಿತ ಕಾಲೇಜುಗಳ ಉಪನ್ಯಾಸಕರುಗಳನ್ನು ನೇಮಿಸಿಕೊಳ್ಳಬಹುದು. ಪರೀಕ್ಷಾ ಕೇಂದ್ರದಲ್ಲಿ ಬಾಹ್ಯ ಪರೀಕ್ಷಕರನ್ನು ನೇಮಕ ಮಾಡುವಾಗ ಪುನರಾವರ್ತನೆಯಾಗದಂತೆ ಕ್ರಮ ವಹಿಸುವುದು. ಯಾವುದೇ ಕಾರಣಕ್ಕೂ ಎರಡು ಪರೀಕ್ಷಾ ಕೇಂದ್ರಗಳ ಉಪನ್ಯಾಸಕರನ್ನು ಪರಸ್ಪರ ಬದಲಾಯಿಸಿ ಪರೀಕ್ಷಕರನ್ನಾಗಿ ನೇಮಕ ಮಾಡಬಾರದು.

11. ಪ್ರತಿ ದಿವಸ ಪ್ರತಿ ತಂಡದ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸುವಾಗ ಬಾಹ್ಯ ಮತ್ತು ಆಂತರಿಕ ಪರೀಕ್ಷಕರು ಪರೀಕ್ಷೆ ಪ್ರಾರಂಭವಾಗುವ ಒಂದು ಗಂಟೆ ಮೊದಲೇ ಹಾಜರಿರಲು ಸೂಚಿಸುವುದು.

12. ಪ್ರಾಯೋಗಿಕ ಪರೀಕ್ಷೆಗಳ ಅಂಕಗಳನ್ನು ಪರೀಕ್ಷಾ ಕೇಂದ್ರಗಳಿಂದಲೇ ಆನ್‌ಲೈನ್ ಮುಖಾಂತರ ಮಂಡಲಿಯ ಸರ್ವ‌ರ್ಗಗಳಿಗೆ ಇಂದೀಕರಿಸಬೇಕಿದ್ದು ಸದರಿ ಪ್ರಕ್ರಿಯೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಪ್ರಾಯೋಗಿಕ ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯವಿರುವ ಎಲ್ಲಾ ತಾಂತ್ರಿಕ ವ್ಯವಸ್ಥೆಯನ್ನು ಮಾಡಿಕೊಳ್ಳಲು ಸೂಚಿಸುವುದು.

13. 2026ರ ಪ್ರಾಯೋಗಿಕ ಪರೀಕ್ಷೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಸಂಬಂಧಪಟ್ಟ ಕಾಲೇಜಿನ ಪ್ರಾಂಶುಪಾಲರ ಪಿಯು ಪರೀಕ್ಷಾ ಪೋರ್ಟಲ್ ಲಾಗಿನ್‌ನಲ್ಲಿ ಪ್ರವೇಶ ಪತ್ರಗಳನ್ನು ಮಂಡಲಿಯಿಂದ ಲಭ್ಯಗೊಳಿಸಲಾಗುವುದು. ಸದರಿ ಪ್ರವೇಶ ಪತ್ರಗಳನ್ನು ಮುದ್ರಿಸಿ ಪರೀಕ್ಷಾ ದಿನಾಂಕ, ಸಮಯ ಮತ್ತು ತಂಡದ ಸಂಖ್ಯೆಗಳನ್ನು ನಮೂದಿಸಿ ವಿದ್ಯಾರ್ಥಿಗಳಿಗೆ ಕಡ್ಡಾಯವಾಗಿ ವಿತರಿಸುವಂತೆ ಆಯಾ ಕಾಲೇಜಿನ ಪ್ರಾಂಶುಪಾಲರುಗಳಿಗೆ ಸೂಚಿಸುವುದು.

14. ಜಿಲ್ಲಾ ಉಪನಿರ್ದೇಶಕರು ತಮ್ಮ ಜಿಲ್ಲೆಯ ಎಲ್ಲಾ ಪ್ರಾಯೋಗಿಕ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡುವುದು ಹಾಗೂ ಸೂಕ್ಷ್ಮ ಕೇಂದ್ರಗಳಿಗೆ ಹೆಚ್ಚು ಭಾರಿ ಭೇಟಿ ನೀಡಿ ಸದರಿ ವರದಿಯನ್ನು ಜಂಟಿ ನಿರ್ದೇಶಕರು (ಪಿಯು ಪರೀಕ್ಷೆ), ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ, 6ನೇ ಅಡ್ಡ ರಸ್ತೆ, ಮಲ್ಲೇಶ್ವರಂ, ಬೆಂಗಳೂರು-560 003 ರವರಿಗೆ ಸಲ್ಲಿಸುವುದು.

15. ಜಿಲ್ಲಾ ಪ್ರಾಯೋಗಿಕ ಪರೀಕ್ಷಾ ಸಮಿತಿಯ ಸಂಚಾಲಕರುಗಳ, ಸದಸ್ಯರುಗಳ ಮತ್ತು ಎಲ್ಲಾ ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರುಗಳ ಸಭೆಯನ್ನು ಆಯೋಜಿಸಿ ಪ್ರಾಯೋಗಿಕ ಪರೀಕ್ಷೆಗಳನ್ನು ಮಂಡಲಿಯ ನಿಯಮಾನುಸಾರ ನಡೆಸುವ ಬಗ್ಗೆ ಅಗತ್ಯ ಸೂಚನೆಗಳನ್ನು ನೀಡುವುದು.

16. 2016-17 ನೇ ಸಾಲಿನಿಂದ ರಾಜ್ಯದ ಆಯ್ದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ NSQF ಯೋಜನೆ ವೃತ್ತಿ ಶಿಕ್ಷಣ ಪಠ್ಯ ಕ್ರಮದಲ್ಲಿ ಮಾಹಿತಿ ತಂತ್ರಜ್ಞಾನ, ರಿಟೇಲ್, ಆಟೊಮೊಬೈಲ್, ಬ್ಯೂಟಿ ಅಂಡ್ ವೆಲ್‌ನೆಸ್. ಎಲೆಕ್ಟ್ರಾನಿಕ್ಸ್ ಮತ್ತು ಯಂತ್ರಾಂಶ, (Electronics and Hardware) ಹಾಗೂ ಉಡುಪುಗಳ ತಯಾರಿಕೆ ಮತ್ತು ಗೃಹೋಪಯೋಗಿ ವಸ್ತುಗಳು (Apparels Madeups and Home Furnishing) ವಿಷಯಗಳನ್ನು ಅನುಷ್ಠಾನಗೊಳಿಸಿದೆ.

ಈ ವಿಷಯಗಳಿಗೆ ರಾಷ್ಟ್ರೀಯ ಕೌಶಲ್ಯಗಳ ಅರ್ಹತಾ ಚೌಕಟ್ಟುಗಳ ನಿಯಮಗಳಿಗನುಸಾರವಾಗಿ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸುವಂತೆ ಸೂಕ್ತ ಕ್ರಮ ವಹಿಸುವುದು.

17. ಪ್ರಾಯೋಗಿಕ ಪರೀಕ್ಷೆಯಲ್ಲಿ ಗರಿಷ್ಠ 30 ಅಂಕಗಳಿಗೆ ವಿದ್ಯಾರ್ಥಿಗಳು ಉತ್ತೀರ್ಣರಾಗಲು ಕನಿಷ್ಠ ಅಂಕಗಳ ಮಿತಿ ಇರುವುದಿಲ್ಲ. ತಾತ್ವಿಕ ಪರೀಕ್ಷೆಯಲ್ಲಿ ಗರಿಷ್ಠ 70 ಅಂಕಗಳಿಗೆ ವಿದ್ಯಾರ್ಥಿಗಳು ಉತ್ತೀರ್ಣರಾಗಲು ಕನಿಷ್ಠ 21 ಅಂಕಗಳನ್ನು ಪಡೆಯಬೇಕಾಗಿರುತ್ತದೆ. ತಾತ್ವಿಕ ಹಾಗೂ ಪ್ರಾಯೋಗಿಕ ಪರೀಕ್ಷೆಗಳು ಎರಡೂ ಸೇರಿ ಪ್ರತಿ ವಿಷಯಕ್ಕೆ ಪಡೆಯಬೇಕಾದ ಕನಿಷ್ಠ ಅಂಕಗಳು (paper minimum) 30. ಆದರೆ ವಿದ್ಯಾರ್ಥಿಗಳು ಉತ್ತೀರ್ಣರಾಗಲು ಒಟ್ಟಾರೆ ಶೇಕಡ 33 ಅಂಕಗಳನ್ನು ಪಡೆಯಬೇಕು.

ವಿದ್ಯಾರ್ಥಿಗಳು ಪ್ರಾಯೋಗಿಕ ಪರೀಕ್ಷೆಗೆ ಗೈರುಹಾಜರಾದರೂ ಸಹ ತಾತ್ವಿಕ ಪರೀಕ್ಷೆಗೆ ಹಾಜರಾಗಬಹುದಾಗಿದೆ. ಆದರೆ ಉತ್ತೀರ್ಣರಾಗಲು ಬೇಕಾಗಿರುವ ಕನಿಷ್ಠ ಅಂಕಗಳನ್ನು ತಾತ್ವಿಕ ಪರೀಕ್ಷೆಯಲ್ಲಿಯೇ ಪಡೆಯಬೇಕಾಗುತ್ತದೆ.

18. ಜಿಲ್ಲಾ ಉಪನಿರ್ದೇಶಕರು ತಮ್ಮ ಜಿಲ್ಲೆಯ ಪ್ರಾಯೋಗಿಕ ಪರೀಕ್ಷೆಗಳು ಮುಗಿದ 03 ದಿನಗಳೊಳಗೆ ಎಲ್ಲಾ ಪರೀಕ್ಷಾ ಕೇಂದ್ರಗಳಿಂದ ವಿಷಯವಾರು ಉಪಯೋಗಿಸಿದ (used) ಉತ್ತರ ಪತ್ರಿಕೆ ಬಂಡಲ್‌ಗಳು, ಅಂಕಪಟ್ಟಿಗಳ ಬಂಡಲ್‌ಗಳು ಮತ್ತು ಉಪಯೋಗಿಸದೇ ಇರುವ (unused) ಉತ್ತರ ಪತ್ರಿಕೆಗಳ ಬಂಡಲ್‌ಗಳನ್ನು ಪಡೆದು ಪರಿಶೀಲಿಸಿ ಮುಂದಿನ ಅದೇಶದವರೆಗೆ ಒಂದು ಭದ್ರತಾ ಕೊಠಡಿಯಲ್ಲಿ ತಮ್ಮ ಸುಪರ್ದಿನಲ್ಲಿ ಸಂರಕ್ಷಿಸಿಟ್ಟುಕೊಳ್ಳುವುದು.

ವಿದ್ಯಾರ್ಥಿಗಳ ಪ್ರಾಯೋಗಿಕ ಪರೀಕ್ಷೆಯ ಅಂಕಗಳನ್ನು ಪರಿಶೀಲಿಸಲು ಈ ಉತ್ತರ ಪತ್ರಿಕೆಗಳು ಅವಶ್ಯಕವಾಗಿ ಬೇಕಾಗಿರುವುದರಿಂದ ಅಗತ್ಯವಿದ್ದಲ್ಲಿ ಬೇಡಿಕೆಗೆ ಅನುಗುಣವಾಗಿ ಮಂಡಲಿಗೆ ಕಳುಹಿಸಿಕೊಡುವುದು.

19. 2025ರ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆ ಹಾಗೂ ತಾತ್ವಿಕ ಪರೀಕ್ಷೆ-1, 2 ಮತ್ತು 3 ರ ಎಲ್ಲಾ ವಿಷಯಗಳಿಗೆ ಗೈರುಹಾಜರಾದ ವಿದ್ಯಾರ್ಥಿಗಳು 2026 ರ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಗೆ ಉಪನಿರ್ದೇಶಕರ ಅನುಮತಿಯೊಂದಿಗೆ ಹಾಜರಾಗಬಹುದು.

ಸದರಿ ವಿದ್ಯಾರ್ಥಿಗಳ ಮಾಹಿತಿಯುಳ್ಳ ದೃಢೀಕೃತ ಪಟ್ಟಿಯನ್ನು ದಿನಾಂಕ: 22.01.2026ರ ಒಳಗೆ jdexam.kseab@gmail.com ಗೆ ಕಳುಹಿಸುವುದು. ಇಂತಹ ವಿದ್ಯಾರ್ಥಿಗಳ ಪ್ರಾಯೋಗಿಕ ಪರೀಕ್ಷೆಯ ಅಂಕಗಳನ್ನೂ ಸಹ ಅನ್‌ಲೈನ್‌ನಲ್ಲಿಯೇ ಇಂದೀಕರಿಸಬೇಕಾಗಿರುತ್ತದೆ. ಯಾವುದೇ ಮ್ಯಾನುಯಲ್ ಅಂಕಪಟ್ಟಿಗಳನ್ನು ಬಳಸಲು ಅವಕಾಶವಿರುವುದಿಲ್ಲ.

20. ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಗೊಂಡ ನಂತರ ಪ್ರಾಯೋಗಿಕ ಪರೀಕ್ಷೆಯ ಫಲಿತಾಂಶದಲ್ಲಿ ನ್ಯೂನತೆಗಳಿದ್ದಲ್ಲಿ 10 ದಿನಗಳೊಳಗಾಗಿ ಪೂರಕ ದಾಖಲೆಗಳೊಂದಿಗೆ ಮಂಡಲಿಯನ್ನು ಸಂಪರ್ಕಿಸಲು ಕಾಲೇಜಿನ ಪ್ರಾಚಾರ್ಯರಿಗೆ ಸೂಚಿಸುವುದು. ಯಾವುದೇ ಕಾರಣಕ್ಕೂ ವಿದ್ಯಾರ್ಥಿಯನ್ನಾಗಲಿ, ಅವರ ಪೋಷಕರನ್ನಾಗಲಿ ಮಂಡಲಿಗೆ ಈ ಸಂಬಂಧ ಕಳುಹಿಸಬಾರದು.

21. ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಗಳಲ್ಲಿ ಯಾವುದೇ ಲೋಪ ಅಥವಾ ದೂರುಗಳಿದ್ದಲ್ಲಿ ಜಿಲ್ಲಾ ಉಪನಿರ್ದೇಶಕರೇ ನೇರ ಹೊಣೆಗಾರರಾಗುತ್ತಾರೆ ಮತ್ತು ನಿಯಮಾನುಸಾರ ಮಂಡಲಿಯು ಅವರ ಮೇಲೆ ಶಿಸ್ತಿನ ಕ್ರಮ ಜರುಗಿಸುತ್ತದೆ.

ಪ್ರಾಯೋಗಿಕ ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರುಗಳ ಹಾಗೂ ಪ್ರಾಂಶುಪಾಲರುಗಳ ಕರ್ತವ್ಯಗಳು ಮತ್ತು ಜವಾಬ್ದಾರಿಗಳು:-

ಪ್ರಾಯೋಗಿಕ ಪರೀಕ್ಷೆಗಳ ಅಂಕಗಳನ್ನು ಪರೀಕ್ಷಾ ಕೇಂದ್ರಗಳಿಂದಲೇ ಆನ್‌ಲೈನ್ ಮುಖಾಂತರ ಮಂಡಲಿಯ ಸರ್ವ‌ರ್ಗಗಳಿಗೆ ಇಂದೀಕರಿಸಬೇಕಿದ್ದು, ಸದರಿ ಪ್ರಕ್ರಿಯೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಪ್ರಾಯೋಗಿಕ ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯವಿರುವ ಕೆಳಕಂಡ ತಾಂತ್ರಿಕ ವ್ಯವಸ್ಥೆಯನ್ನು ಮಾಡಿಕೊಳ್ಳುವುದು.

1. 2026ರ ಪ್ರಾಯೋಗಿಕ ಪರೀಕ್ಷೆಗಳನ್ನು ವೆಬ್‌ ಕ್ಯಾಸ್ಟಿಂಗ್ ಬಳಸಿ ನಡೆಸಲು ಬೇಕಾದ ಅಗತ್ಯ ವ್ಯವಸ್ಥೆಯನ್ನು ಮಾಡಿಕೊಳ್ಳುವುದು.

2.ಇಂಟನೆಟ್ Static IP Address ಅನ್ನು Network Provider (like BSNJ Airteļ Jio Fibre etc) ಮೂಲಕ 100 mbps INTERNET SPEED connectivity ಅನ್ನು ಪೂರ್ಣ ಪ್ರಮಾಣದಲ್ಲಿ ಪಡೆದುಕೊಳ್ಳುವುದು.

3. ಎಲ್ಲಾ ಪ್ರಾಯೋಗಿಕ ಪರೀಕ್ಷಾ ಕೇಂದ್ರಗಳ ಪ್ರಾಂಶುಪಾಲರು/ ಮುಖ್ಯ ಅಧೀಕ್ಷಕರು KSEAB ಮಂಡಲಿಯ ಜಾಲತಾಣದ PU Examination Portal 2 Exam-CENTRE CHIEF LOGIN ໖ ‘click here to update static IP’ ಮುಖಾಂತರ ಪರೀಕ್ಷಾ ಕೇಂದ್ರದ Static IP ಯನ್ನು ನಮೂದಿಸಿ Update ಮಾಡುವುದು. Static IP ಯನ್ನು ದಿನಾಂಕ: 10-01-2026 ರೊಳಗೆ ಕಡ್ಡಾಯವಾಗಿ ಅಪ್‌ಡೇಟ್ ಮಾಡಲು ಸೂಚಿಸಿದೆ.

4. Static IP ಯನ್ನು ನಮೂದಿಸಿ Update ಮಾಡಿದ ನಂತರ ಗಣಕ ಯಂತ್ರವನ್ನು Restart ಮಾಡಿ, ಮತ್ತೆ KSEAB ಮಂಡಲಿಯ ಜಾಲತಾಣದ PU Examination Portal 2 Exam – CENTRE CHIEF LOGIN 3, “Test your static IP” click ಮಾಡಿ ನಮೂದಿಸಿದ IP address ಸರಿ ಇರುವ ಬಗ್ಗೆ ಖಚಿತ ಪಡಿಸಿಕೊಳ್ಳುವುದು.

IP address ಬದಲಾಗಿದ್ದರೆ ಅದು Static IP ಅಲ್ಲ, Dynamic IP ಎಂದು ತಿಳಿದು, ಕೂಡಲೇ ನಿಮ್ಮ Network Provider ಅನ್ನು ಸಂಪರ್ಕಿಸಿ Static IP address ಅನ್ನು ಪಡೆದುಕೊಳ್ಳುವುದು ಕಡ್ಡಾಯವಾಗಿರುತ್ತದೆ. Static IP address ಅನ್ನು Update ಮಾಡದಿದ್ದರೆ, ಪ್ರಾಯೋಗಿಕ ಪರೀಕ್ಷೆಯಲ್ಲಿ ಅಂಕಗಳನ್ನು ನಮೂದಿಸಲು ಸಾದ್ಯವಾಗುವುದಿಲ್ಲ. ಅದರಿಂದ ಮುಂದಿನ ಆಗು-ಹೋಗುಗಳಿಗೆ ಪ್ರಾಯೋಗಿಕ ಪರೀಕ್ಷಾ ಕೇಂದ್ರಗಳ ಪ್ರಾಂಶುಪಾಲರು/ಮುಖ್ಯ ಅಧೀಕ್ಷಕರು ನೇರಹೊಣೆಗಾರರಾಗುತ್ತಾರೆ.

5. Static IP ಯನ್ನು ಅಪ್‌ಡೇಟ್ ಮಾಡಿದ ನಂತರ ಪ್ರತಿದಿನ Static IP ಯನ್ನು ಪರೀಕ್ಷಿಸಿ, ಒಂದೇ IP address ಇದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು. IP address ಬದಲಾಗಿದ್ದರೆ ಅದು Static IP ಅಲ್ಲ Dynamic IP ಎಂದು ತಿಳಿದು, ಕೂಡಲೇ ನಿಮ್ಮ Network Provider ಅನ್ನು ಸಂಪರ್ಕಿಸಿ Static IP address ಅನ್ನು ಪಡೆದು UPDATE ಮಾಡುವುದು ಕಡ್ಡಾಯವಾಗಿರುತ್ತದೆ.

6. ಪ್ರತಿ ಪ್ರಯೋಗಾಲಯಕ್ಕೆ ಕನಿಷ್ಠ ಒಂದರಂತೆ ಪರಸ್ಪರ ಸಂಪರ್ಕ (LAN CONNECTIVITY) ಹೊಂದಿದ ಗಣಕ ಯಂತ್ರಗಳನ್ನು INTERNET ಸಹಿತ ವ್ಯವಸ್ಥೆ ಮಾಡಿಕೊಳ್ಳುವುದು.

7. ನಿರಂತರ ವಿದ್ಯುತ್ ಪೂರೈಕೆಗಾಗಿ ಪ್ರತಿ ಪ್ರಯೋಗಾಲಯದಲ್ಲಿ UPS ಸೌಲಭ್ಯ ಅಳವಡಿಸುವುದು.

8. ಕಡ್ಡಾಯವಾಗಿ ಎಲ್ಲಾ ಪ್ರಯೋಗಾಲಯಗಳಲ್ಲಿ ಸಿಸಿಟಿವಿ ಅಳವಡಿಸುವುದು ಮತ್ತು ಪರೀಕ್ಷಾ ದಿನಗಳಂದು ಅದು ಕಾರ್ಯ ನಿರ್ವಹಿಸುತ್ತಿರುವುದನ್ನು ದೃಢಪಡಿಸಿಕೊಳ್ಳುವುದು. ಪರೀಕ್ಷೆಯ ಎಲ್ಲಾ ಘಟನಾವಳಿಗಳನ್ನು ವಿಡಿಯೋ ಮೂಲಕ ದಾಖಲಿಸಿ ಸಂರಕ್ಷಿಸಿ ಅವಶ್ಯವಿದ್ದಾಗ ಹಾಜರುಪಡಿಸುವುದು.

5. ಪ್ರತಿ ತಂಡದ ಪ್ರಾಯೋಗಿಕ ಪರೀಕ್ಷೆ ಮುಗಿದ ನಂತರ Scheme of Valuation ನ ಪ್ರಕಾರ ಉತ್ತರ ಪತ್ರಿಕೆಗಳನ್ನು ಇಬ್ಬರೂ ಪರೀಕ್ಷಕರು ಸಮಾಲೋಚಿಸಿ ಮೌಲ್ಯಮಾಪನ ಮಾಡುವುದು.

6. ಪ್ರಾಯೋಗಿಕ ಪರೀಕ್ಷೆಗೆ ಪ್ರತಿ ವಿದ್ಯಾರ್ಥಿಯು PRACTICAL RECORD ಅನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು. ಇದರಲ್ಲಿ ಸಂಬಂಧಿಸಿದ ಕಾಲೇಜಿನ ಉಪನ್ಯಾಸಕರು/ ವಿಭಾಗದ ಮುಖ್ಯಸ್ಮರ/ಪ್ರಾಚಾರ್ಯರ ದೃಢೀಕರಿಸಿದ ಪ್ರಮಾಣ ಪತ್ರವಿರಬೇಕು. ಪ್ರಮಾಣೀಕರಿಸಿದ PRACTICAL RECORD ಅನ್ನು ಹಾಜರುಪಡಿಸದಿದ್ದಲ್ಲಿ ಅಂತಹ ವಿದ್ಯಾರ್ಥಿಗಳಿಗೆ ಅದಕ್ಕೆ ಸಂಬಂಧಿಸಿದ ಅಂಕಗಳನ್ನು ಕಡಿತಗೊಳಿಸುವುದು.

7. ಪರೀಕ್ಷಕರು ಅಂಕಗಳನ್ನು ನೀಡಿದ ಬಳಿಕ ವಿದ್ಯಾರ್ಥಿಗಳಿಗೆ ಯಾವುದೇ ಕಾರಣಕ್ಕೂ ಅಂಕಗಳನ್ನು ಬಹಿರಂಗಪಡಿಸದೆ ಗೌಪ್ಯತೆಯನ್ನು ಕಾಪಾಡುವುದು.

8. ಪ್ರಾಯೋಗಿಕ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷಕರು ನೀಡುವ ಅಂಕಗಳೇ ಅಂತಿಮವಾಗಿರುತ್ತದೆ. ಆದ್ದರಿಂದ ಸರಿಯಾದ ಅಂಕಗಳನ್ನು ಪಿಯು ಎಕ್ಸಾಂ ಪೋರ್ಟಲ್‌ನಲ್ಲಿ ಇಂದೀಕರಿಸುವುದು. ಪ್ರಾಯೋಗಿಕ ಪರೀಕ್ಷೆಯ ವಿಷಯಗಳ ಉತ್ತರ ಪತ್ರಿಕೆಗಳ ಫೋಟೋ ಪ್ರತಿ ನೀಡುವ ವ್ಯವಸ್ಥೆ ಹಾಗೂ ಮರುಮೌಲ್ಯಮಾಪನಕ್ಕೆ ಅವಕಾಶವಿರುವುದಿಲ್ಲ. ಈ ವಿಷಯವನ್ನು ವಿದ್ಯಾರ್ಥಿಗಳ ಗಮನಕ್ಕೆ ತರುವುದು.

9. Evaluator Code ಅನ್ನು ಬಳಸಿಕೊಂಡು ಆಂತರಿಕ ಮತ್ತು ಬಾಹ್ಯ ಪರೀಕ್ಷಕರು ಪಿಯು ಎಕ್ಸಾಂ ಪೋರ್ಟಲ್‌ನಲ್ಲಿ ವಿದ್ಯಾರ್ಥಿಗಳು ಪ್ರಾಯೋಗಿಕ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಮೊದಲು ಆಂತರಿಕ ಪರೀಕ್ಷಕರು ನಂತರ ಬಾಹ್ಯಪರೀಕ್ಷಕರು ಪ್ರತ್ಯೇಕವಾಗಿ ಆಯಾ ದಿನಗಳಂದೇ ಕಡ್ಡಾಯವಾಗಿ ಇಂದೀಕರಿಸಬೇಕು.

10. ಸರ್ಕಾರದ ಆದೇಶ ಸಂಖ್ಯೆ ಇಪಿ.72.ಟಿಪಿಯು.2023 ಬೆಂಗಳೂರು ದಿನಾಂಕ: 31-10-2023 ಹಾಗೂ ತಿದ್ದುಪಡಿ ಆದೇಶ ಸಂಖ್ಯೆ ಇಪಿ.72.ಟಿಪಿಯು.2023, ಬೆಂಗಳೂರು ದಿನಾಂಕ: 02-12-2023 ರಂತೆ ದೃಷ್ಟಿದೋಷ ದೃಷ್ಟಿಮಾಂದ್ಯ ಹಾಗೂ ಕ್ಷೀಣದೃಷ್ಟಿ ವಿದ್ಯಾರ್ಥಿಗಳಿಗೆ ಸರ್ಕಾರದ ಆದೇಶ ಸಂಖ್ಯೆ ಇಪಿ. 46 ಟಿಪಿಯು.2023 ದಿನಾಂಕ: 10-07-2023 ರಲ್ಲಿ ನಿಗದಿಪಡಿಸಲಾಗಿರುವ ಆಂತರಿಕ ಮೌಲ್ಯಮಾಪನದಿಂದ ವಿನಾಯ್ತಿ ನೀಡಿ ಇಂತಹ ವಿದ್ಯಾರ್ಥಿಗಳಿಗೆ ತಾತ್ವಿಕ ಪರೀಕ್ಷೆ-1ಕ್ಕಿಂತ ಮುನ್ನವೇ 20 ಅಂಕಗಳಿಗೆ ಮೌಖಿಕ ಪರೀಕ್ಷೆ ನಡೆಸಿ ಅದರಲ್ಲಿ ವಿದ್ಯಾರ್ಥಿಗಳು ಗಳಿಸಿದ ಅಂಕಗಳನ್ನು ನೀಡಲು ಆದೇಶಿಸಿರುವುದನ್ನು ಪರಿಗಣಿಸುವುದು.

ಅಲ್ಲದೆ ಪ್ರಾಯೋಗಿಕ ಪರೀಕ್ಷೆಗಳನ್ನು ಹೊಂದಿರುವ ವಿಷಯಗಳನ್ನು ಬರೆಯುತ್ತಿರುವ ದೃಷ್ಟಿದೋಷ, ದೃಷ್ಟಿಮಾಂದ್ಯ ಹಾಗೂ ಕ್ಷೀಣದೃಷ್ಟಿ ವಿದ್ಯಾರ್ಥಿಗಳಿಗೆ ಪ್ರಯೋಗಕ್ಕೆ ಬದಲಾಗಿ ಸಮನಾದ ಅಂಕವುಳ್ಳ ಸಂಬಂಧಿಸಿದ ವಿಷಯದ ಪ್ರಶ್ನೆಯೊಂದಿಗೆ ಲಿಖಿತ ಪರೀಕ್ಷೆ ನಡೆಸಿ ಮೌಲ್ಯಮಾಪನ ಮಾಡಬೇಕು. (ಸರ್ಕಾರದ ಆದೇಶ ಸಂಖ್ಯೆ ಇಪಿ 40 ಟಿಪಿಯು 2022 ಬೆಂಗಳೂರು.ದಿನಾಂಕ:14-06-2022)

11. ಪ್ರಾಯೋಗಿಕ ಪರೀಕ್ಷೆಯಲ್ಲಿ ಗರಿಷ್ಠ 30 ಅಂಕಗಳಿಗೆ ವಿದ್ಯಾರ್ಥಿಗಳು ಉತ್ತೀರ್ಣರಾಗಲು ಕನಿಷ್ಠ ಅಂಕಗಳನ್ನು ಪಡೆಯಲೇಬೇಕೆಂಬ ನಿಬಂಧನೆ ಇರುವುದಿಲ್ಲ. ತಾತ್ವಿಕ ಪರೀಕ್ಷೆಯಲ್ಲಿ ಗರಿಷ್ಠ 70 ಅಂಕಗಳಿಗೆ ವಿದ್ಯಾರ್ಥಿಗಳು ಉತ್ತೀರ್ಣರಾಗಲು ಕನಿಷ್ಠ 21 ಅಂಕಗಳನ್ನು ಪಡೆಯಬೇಕಾಗಿರುತ್ತದೆ.

ತಾತ್ವಿಕ ಹಾಗೂ ಪ್ರಾಯೋಗಿಕ ಪರೀಕ್ಷೆಗಳು ಎರಡೂ ಸೇರಿ ಪ್ರತಿ ವಿಷಯಕ್ಕೆ ಪಡೆಯಬೇಕಾದ ಕನಿಷ್ಠ ಅಂಕಗಳು (paper minimum) 30. ಆದರೆ ವಿದ್ಯಾರ್ಥಿಗಳು ಉತ್ತೀರ್ಣರಾಗಲು ಸರಾಸರಿ ಒಟ್ಟಾರೆ ಶೇಕಡ 33 ಅಂಕಗಳನ್ನು ಪಡೆಯಬೇಕು.

ವಿದ್ಯಾರ್ಥಿಗಳು ಪ್ರಾಯೋಗಿಕ ಪರೀಕ್ಷೆಗೆ ಗೈರುಹಾಜರಾದರೂ ಸಹ ತಾತ್ವಿಕ ಪರೀಕ್ಷೆಗೆ ಹಾಜರಾಗಬಹುದಾಗಿದೆ. ಆದರೆ ಉತ್ತೀರ್ಣರಾಗಲು ಬೇಕಾಗಿರುವ ಕನಿಷ್ಠ ಅಂಕಗಳನ್ನು ತಾತ್ವಿಕ ಪರೀಕ್ಷೆಯಲ್ಲಿಯೇ ಪಡೆಯಬೇಕಾಗುತ್ತದೆ.

12. ಪರೀಕ್ಷೆ 2 ಮತ್ತು 3 ರಲ್ಲಿ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸುವುದಿಲ್ಲ. ವಿದ್ಯಾರ್ಥಿಯು 2026ರ ಪ್ರಾಯೋಗಿಕ ಪರೀಕ್ಷೆಯಲ್ಲಿ ಪಡೆದ ಅಂಕಗಳೇ ಅಂತಿಮ. ವಿದ್ಯಾರ್ಥಿಯು ತಾತ್ವಿಕ ವಿಷಯದಲ್ಲಿ ಉತ್ತೀರ್ಣರಾಗುವವರೆಗೂ ಈ ಪ್ರಾಯೋಗಿಕ ಅಂಕಗಳೇ ಅನ್ವಯವಾಗುತ್ತವೆ.

13. 2026 ರ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸುವ ಪರೀಕ್ಷಾ ಕೇಂದ್ರದ ಪರೀಕ್ಷಕರು ಪ್ರತಿ ವಿಷಯಕ್ಕೆ ಪ್ರತಿ ತಂಡಕ್ಕೆ ನೀಡಿರುವ ಅನುಬಂಧದಲ್ಲಿ ಮಾಹಿತಿಯನ್ನು ಭರ್ತಿ ಮಾಡಿ ಉತ್ತರ ಪತ್ರಿಕೆಗಳ ಜೊತೆಗೆ ಲಕೋಟೆಯಲ್ಲಿರಿಸಿ ಕಡ್ಡಾಯವಾಗಿ ಮುಖ್ಯ ಅಧೀಕ್ಷಕರಿಗೆ ಸಲ್ಲಿಸುವುದು.

14. ಪ್ರತಿದಿನ ಪ್ರಾಯೋಗಿಕ ಪರೀಕ್ಷೆ ನಡೆದ ತಂಡಗಳ ಎಲ್ಲಾ ಅಂಕಪಟ್ಟಿಗಳನ್ನು ಮತ್ತು ಉತ್ತರ ಪತ್ರಿಕೆಗಳನ್ನು ವಿಷಯವಾರು ಲಕೋಟೆಯಲ್ಲಿ ಇರಿಸಿ ಲಕೋಟೆಯ ಮೇಲೆ ವಿಷಯ ಮತ್ತು ಇತರೆ ಮಾಹಿತಿಯನ್ನು ಬರೆದು ಮೊಹರು ಮಾಡುವುದು.

ಮೊಹರು ಮಾಡಿದ ಪ್ರತಿಯೊಂದು ಲಕೋಟೆಯ ಮೇಲೆ ಆಂತರಿಕ ಮತ್ತು ಬಾಹ್ಯ ಪರೀಕ್ಷಕರು ಕನಿಷ್ಠ 06 ಸಹಿಗಳನ್ನು ಹಾಕಬೇಕು. ಈ ರೀತಿ ಮಾಡಲಾದ ಎಲ್ಲಾ ವಿಷಯಗಳ ಲಕೋಟೆಗಳನ್ನು ಆಯಾ ದಿನಗಳಂದೇ ಮುಖ್ಯ ಅಧೀಕ್ಷಕರಿಗೆ ಸಲ್ಲಿಸಿ ಅವರಿಂದ ಕಾರ್ಯ ನಿರ್ವಹಣಾ ವಹಿಯಲ್ಲಿ ಸ್ವೀಕೃತಿಯನ್ನು ಪಡೆಯುವುದು.

15. ಆಂತರಿಕ ಮತ್ತು ಬಾಹ್ಯ ಪರೀಕ್ಷಕರು ತಮ್ಮ ಪ್ರಯಾಣ ಭತ್ಯೆ, ದಿನಭತ್ಯೆ ಮತ್ತು ಸಂಭಾವನೆಯ ಬಿಲ್ಲಿನ ವಿವರಗಳನ್ನು ಪ್ರತಿ ದಿನ ಪರೀಕ್ಷೆ ಮುಗಿದ ನಂತರ PU EXAM PORTAL LOGIN ನಲ್ಲಿ ಕಡ್ಡಾಯವಾಗಿ ಇಂದೀಕರಿಸಬೇಕು.

ಆನ್‌ಲೈನ್ ಪ್ರಕ್ರಿಯೆಯಲ್ಲಿ ಯಾವುದೇ ತಾಂತ್ರಿಕ ಸಮಸ್ಯೆ ಎದುರಾದಲ್ಲಿ ಈ ಕೆಳಗೆ ಸೂಚಿಸಿರುವ ಗಣಕ ಶಾಖೆಯ ಅಧಿಕಾರಿಗಳು /ಸಿಬ್ಬಂದಿಗಳ ಮೊಬೈಲ್ ಸಂಖ್ಯೆಗಳಿಗೆ ಕಛೇರಿ ಸಮಯದಲ್ಲಿ (ಬೆಳಿಗ್ಗೆ 8-30 ರಿಂದ ಸಂಜೆ 6-30 ರವರೆಗೆ) ಸಂಪರ್ಕಿಸಲು ಸೂಚಿಸಿದೆ.

PUC

 

CLICK HERE TO DOWNLOAD

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

You cannot copy content of this page

error: Content is protected !!
Scroll to Top