Necessity of Preliminary Enquiry- ಪ್ರಾಥಮಿಕ ತನಿಖೆಯ ಅವಶ್ಯಕತೆ ಮಾಹಿತಿ-02

Necessity of Preliminary Enquiry- ಪ್ರಾಥಮಿಕ ತನಿಖೆಯ ಅವಶ್ಯಕತೆ. ಮಾಹಿತಿ-02

 

Necessity of Preliminary Enquiry: ವಿಚಾರಣೆಗಳನ್ನು ಆದೇಶ ಮಾಡುವ ಮುನ್ನ ನೌಕರನು ಎಸಗಿರುತ್ತಾನೆಂದು ಹೇಳಲಾಗಿರುವ ಕೃತ್ಯಗಳ ಬಗ್ಗೆ ಒಂದು ತನಿಖೆಯನ್ನು ನಡೆಸಿದಲ್ಲಿ ನಿಜಕ್ಕೂ ಸಂವಿಧಾನದಲ್ಲಿ ಹೇಳಲಾಗಿರುವ “ಮುಕ್ತ ಮತ್ತು ನ್ಯಾಯಪರ” ವಿಚಾರಣೆ ನಡೆಸಬೇಕೆಂದು ಹೇಳಲಾಗಿರುವ ವಿಧಿಗೆ ಬೆಲೆಕೊಟ್ಟಂತಾಗುತ್ತದೆ. ಕೇವಲ ಯಾರೋ ಹೇಳಿದರೆಂದು ವಿಚಾರಣೆಗಳನ್ನು ಜಾರಿ ಮಾಡುವುದರಲ್ಲಿ ಅರ್ಥವಿಲ್ಲ.

ಕೆಲವೊಮ್ಮೆ ಬೇನಾಮಿ ದೂರುಗಳು ಕಛೇರಿಗಳಲ್ಲಿ ನೌಕರನ ವಿರುದ್ಧ ಬರುತ್ತವೆ. ಅಷ್ಟೇ ಸಾಕೆಂದು ವಿಚಾರಣೆಗೆ ಕೈಹಾಕುವುದು ದುಸ್ಸಾಹಸವಾಗುತ್ತದೆ. ಕಾರಣ ವಿಚಾರಣೆ ನಡೆಯುವಾಗ ಅಂತಹ ವಿಚಾರಣೆಯಲ್ಲಿ ಸಾಕ್ಷಿ ಪುರಾವೆಗಳು ಇರುವುದಿಲ್ಲ.

ವಾಸ್ತವತೆಗೆ ವಿರುದ್ಧವಾಗಿ ದೂರುಗಳಾಗಿರಬಹುದು. ಕೆಲವೊಮ್ಮೆ ದುರುದ್ದೇಶದಿಂದ ಅನ್ಯರು ನೌಕರನ ಮೇಲೆ ಸುಳ್ಳುದೂರುಗಳನ್ನು ಕೊಡಬಹುದು. ಆದರೆ, ಆಧಾರ ಸಹಿತವಾಗಿ ವಿಚಾರಣಾ ಪ್ರಾಧಿಕಾರದ ಮುಂದೆ ಹಾಜರಾಗಿ ಆರೋಪಕ್ಕೆ ಸಮರ್ಥನೆ ನೀಡುವಂತೆ ಸಾಕ್ಷ್ಯ ನೀಡುವುದಿಲ್ಲ.

ಆದ್ದರಿಂದ, ತನಿಖೆ ಎಂಬುದನ್ನು ಮೊದಲು ನಡೆಸಿ ಅದರಲ್ಲಿ ನಿಜಕ್ಕೂ ನೌಕರನು ತಪ್ಪುಗಳನ್ನು ಎಸಗಿರುತ್ತಾನೆ ಎಂಬುದು ಸ್ಪಷ್ಟವಾದಾಗ ಮಾತ್ರ ಇಲಾಖಾ ವಿಚಾರಣೆಗೆ ಕೈಹಾಕುವುದು ಒಳ್ಳೆಯದು.

ತನಿಖೆಗಳನ್ನು ಆದೇಶ ಮಾಡುವಾಗ ನಿಷ್ಪಕ್ಷಪಾತವಾಗಿ ಮಾಡುವವರನ್ನು ಆ ಜವಾಬ್ದಾರಿ ನಿರ್ವಹಿಸಲು ಗೊತ್ತು ಮಾಡುವುದು ಒಳ್ಳೆಯದು. ಅವರೂ ಕೂಡ ತನಿಖೆ ಮಾಡುವ ಮುನ್ನ ದೂರಿಗೆ ಒಳಗಾಗಿರುವ ನೌಕರನಿಗೆ ತನಿಖೆಯ ದಿನ ಹಾಜರಿರುವಂತೆ ನೋಟೀಸು ಕಳುಹಿಸಿ ಅವನ ವಿರುದ್ಧ ದೂರು ನೀಡಿರುವವರನ್ನೂ ಕೂಡ ತನಿಖೆ ದಿನ ಹಾಜರಿರುವಂತೆ ಕರೆಸಿಕೊಳ್ಳುವುದು ನ್ಯಾಯೋಚಿತವಾದ ತನಿಖೆಗೆ ಬೆಲೆಕೊಟ್ಟಂತಾಗುತ್ತದೆ.

ಅಂತಹ ಸಂದರ್ಭದಲ್ಲಿ ದೂರುದಾರರು ನೌಕರನ ವಿರುದ್ಧ ದಾಖಲೆ, ಪುರಾವೆ ಸಾಕ್ಷ್ಯಗಳನ್ನು ಸಲ್ಲಿಸಿ ಅವರ ದೂರು ಸಮರ್ಥನೀಯವೆಂದು ಹೇಳಬಹುದು. ನೌಕರನು ಕೂಡ ತನ್ನ ಸಮರ್ಥನೆಗೆ ಆಧಾರ ಪುರಾವೆಗಳನ್ನು ಸಲ್ಲಿಸಿ ತನ್ನ ಮೇಲಿನ ದೂರು ಕೇವಲ ದುರಾಗ್ರಹದ್ದು ಎಂದೋ ಅಥವಾ ಆಧಾರವಿಲ್ಲದ್ದೆಂದು ಮತ್ತು ಕುಯುಕ್ತಿಯಿಂದ ದೂರುದಾರರು ಸಲ್ಲಿಸಿರುವ ಪ್ರಕರಣವು ಇದೆಂದು ತನ್ನನ್ನು ಸಮರ್ಥಿಸಿಕೊಳ್ಳಬಹುದು.

ತನಿಖಾಧಿಕಾರಿಯು ಅಲ್ಲಿ ಹಾಜರಿರುವವರಿಂದ ಲಿಖಿತ ಹೇಳಿಕೆಗಳನ್ನು ಪಡೆಯಬಹುದು. ತಾನೂ ಕೂಡ ದಾಖಲೆ, ಪುರಾವೆಗಳನ್ನು ವೀಕ್ಷಿಸಿ ನಿಜಕ್ಕೂ ನೌಕರನ ಮೇಲಿನ ದೂರು ಆಧಾರ ಸಹಿತವೇ ಅಥವಾ ಆಧಾರ ರಹಿತವೇ ಎಂದು ತೀರ್ಮಾನಿಸಬಹುದು. ಆಪಾದಿತನ ಗೈರುಹಾಜರಿಯಲ್ಲಿ ತನಿಖೆಯು ಸಮಂಜಸವಲ್ಲ. ನಿಷ್ಪಕ್ಷಪಾತವಾದ ತನಿಖೆಯು ವಿಚಾರಣೆಗಳಿಗೆ ಮುನ್ನ ಅತಿ ಅವಶ್ಯಕ. ಈ ಒಂದು ತನಿಖೆಯು ಸಂವಿಧಾನದ ವಿಧಿ 311(2) ರಲ್ಲಿ ಹೇಳಿರುವ ವಿಚಾರಣೆ ಎಂಬ ಪದವಾಗಿಲ್ಲದಿರುವುದರಿಂದ ತನಿಖೆಗೂ, ವಿಚಾರಣೆಗೂ ಪ್ರಾರಂಭದಲ್ಲೇ ಸಂಬಂಧ ಕಲ್ಪಿಸತಕ್ಕದ್ದಲ್ಲ.

ವಿಚಾರಣೆಗಳನ್ನು ನಡೆಸಲೆಂದೇ ಉದ್ದೇಶಪೂರ್ವಕವಾಗಿ ತನಿಖಾಧಿಕಾರಿಯು ತನಿಖೆಗಳನ್ನು ಮಾಡತಕ್ಕದ್ದಲ್ಲ. ಹೀಗೆ ಸಲ್ಲಿಸುವ ತನಿಖಾಧಿಕಾರಿಗಳ ವರದಿಯು ಶಿಸ್ತು ಪ್ರಾಧಿಕಾರದ ವಿವೇಚನೆಗೆ ಒಳಪಡುತ್ತದೆ.(H.M.T Ltd., Vs. Chaya Srivatsa (2003-III-LLJ 729), ಶಿಸ್ತು ಪ್ರಾಧಿಕಾರವು ಆ ವರದಿಯಲ್ಲಿನ ವಿಷಯಗಳು ವಿಚಾರಣೆಗೆ ಯೋಗ್ಯವೇ ಅಥವಾ ಅಲ್ಲವೇ ಎಂಬುದನ್ನು ಸ್ಪಷ್ಟಪಡಿಸಿಕೊಂಡು ನಂತರ ವಿಚಾರಣೆ ಆದೇಶ ಮಾಡಿದಲ್ಲಿ ವಿಚಾರಣೆಗಳು ಕೂಡ ಪ್ರಶ್ನಾತೀತವಾಗುತ್ತವೆ.

ನ್ಯಾಯಾಲಯಗಳು ಹೇಳುವಂತೆ ಪೂರ್ವ ತನಿಖೆಗಳು ಕಡ್ಡಾಯವೇನೂ ಅಲ್ಲ. ಅವಿಲ್ಲದೆ ನಡೆದ ವಿಚಾರಣೆಗಳು ಅನೂರ್ಜಿತವಾಗುವುದಿಲ್ಲ (Ashok Bhatia Vs. State of Punjab (1996 (3) SCT 583 (P&H). 8, ವಿಚಾರಣೆಗೆ ಒಳಪಡುವ ನೌಕರನ ಮೇಲೆ ಆಧಾರ ಪುರಾವೆ ಸಹಿತದ ಆರೋಪಗಳು ಅವಶ್ಯಕ. ಅವುಗಳು ತನಿಖೆಯಿಂದ ದೊರಕಬಹುದಾಗಿದೆ. ಹಾಗಾಗಿ, ಯಾಂತ್ರಿಕವಾಗಿ ನೀಡುವ ಆರೋಪ ಪಟ್ಟಿ, ನಡೆವ ವಿಚಾರಣೆ ಮತ್ತು ದಂಡಿಸುವ ಆಯಾಮಗಳನ್ನು ನ್ಯಾಯಾಲಯಗಳು ಊರ್ಜಿತಗೊಳಿಸುವುದಿಲ್ಲ.

ಪ್ರಾಥಮಿಕ ತನಿಖೆಯನ್ನು ಈ ಸಂದರ್ಭಗಳಲ್ಲಿ ಕೈಗೊಳ್ಳತಕ್ಕದ್ದು. Preliminary Enquiry should be held in the following circumstances:

1) ನೌಕರನ ಮೇಲೆ ಮೂಗರ್ಜಿಗಳು/ಬೇನಾಮಿ ಅರ್ಜಿಗಳು ದೂರುಗಳನ್ನು ಹೊತ್ತು ಬಂದಲ್ಲಿ, ಪ್ರಾಥಮಿಕ ತನಿಖೆಯನ್ನು ಕೈಗೊಳ್ಳಲೇಬೇಕು.

2) ಮೇಲಧಿಕಾರಿಗಳು ವಿಚಾರಣೆಗಳನ್ನು ಕೈಗೊಳ್ಳತಕ್ಕದೆಂದು ಪೂರ್ಣ ವಿವರಗಳನ್ನು ಸಲ್ಲಿಸದೆ ಆದೇಶವಿತ್ತಲ್ಲಿ ಆ ವಿಷಯಗಳಲ್ಲಿ ಪ್ರಾಥಮಿಕ ತನಿಖೆಯನ್ನು ಕೈಗೊಳ್ಳಲೇಬೇಕು.

3) ವರ್ತಮಾನ ಪತ್ರಿಕೆಗಳಲ್ಲಿ ನೌಕರನ ಮೇಲೆ ತೀವ್ರತರವಾಗಿ ವರದಿಗಳು ಬಂದಾಗ ವಿಚಾರಣೆಗೆ ವಿವರಗಳನ್ನು ಸಂಪಾಧಿಸಲು ಪ್ರಾಥಮಿಕ ತನಿಖೆಯನ್ನು ನಡೆಸಲೇಬೇಕು. ಕೇವಲ ವರ್ತಮಾನ ಪತ್ರಿಕೆಗಳ ವರದಿಗಳೇ ಆಧಾರವಾಗುವುದಿಲ್ಲ.

4) ನೌಕರನು ಸಕ್ರಮ ವೈದ್ಯಾಧಿಕಾರಿಗಳಿಂದ ಪಡೆದ ವೈದ್ಯಕೀಯ ಪ್ರಮಾಣ ಪತ್ರವನ್ನು ಸಲ್ಲಿಸದೆ ಅನಾರೋಗ್ಯದ ನಿಮಿತ್ತವೆಂದು ಗೈರು ಹಾಜರಾದಲ್ಲಿ ವೈದ್ಯಕೀಯ ಮಂಡಳಿಯ ಅಭಿಪ್ರಾಯವನ್ನು ಪ್ರಾಥಮಿಕ ತನಿಖೆ ವರದಿ ಎಂದು ತಿಳಿಯಬಹುದು.

5) ನೌಕರನ ಜಾತಿ, ಆದಾಯಗಳ ಬಗ್ಗೆ ದೂರುಗಳ ಬಂದಲ್ಲಿ ಸಕ್ರಮ ಪ್ರಾಧಿಕಾರದಿಂದ ಪ್ರಾಥಮಿಕ ತನಿಖೆ ವರದಿಯನ್ನು ತರಿಸಿಕೊಳ್ಳಲೇಬೇಕು.

ಪ್ರಾಥಮಿಕ ತನಿಖೆಯು ಈ ಸಂದರ್ಭಗಳಲ್ಲಿ ಬೇಡ:-
Preliminary Enquiry need not be held in the following circumstances:

1) ನೌಕರನ ಮೇಲಿನ ಆರೋಪವು ಮಹಾ ಲೇಖಪಾಲರ ಅಥವಾ ರಾಜ್ಯ ಲೆಕ್ಕ ಪತ್ರ ಇಲಾಖೆಯ ತನಿಖಾ ವರದಿಯನ್ನು ಆಧರಿಸಲ್ಪಟ್ಟಿದ್ದಲ್ಲಿ ಪುನ: ಪ್ರಾಥಮಿಕ ತನಿಖೆ ಅನವಶ್ಯಕ.

2) ಕೆಲವೊಮ್ಮೆ ನ್ಯಾಯಾಲಯಗಳೇ ನೌಕರನ ಮೇಲೆ ವಿಚಾರಣೆಯನ್ನು ಕೈಗೊಳ್ಳತಕ್ಕದೆಂದು ಆದೇಶವಿತ್ತಿದ್ದಾಗ, ನ್ಯಾಯಾಲಯದಲ್ಲಿ ಚರ್ಚಿಸಲ್ಪಟ್ಟ ವಿಷಯಗಳನ್ನೇ ಆಧಾರವಾಗಿಟ್ಟುಕೊಂಡು ವಿಚಾರಣೆಯನ್ನು ಕೈಗೊಳ್ಳಬಹುದಾಗಿದೆ. ಪುನ: ಪ್ರಾರ್ಥಮಿಕ ತನಿಖೆ ಅವಶ್ಯವಿಲ್ಲ.

ಅಮಾನತ್ತು (Suspension):

ಕರ್ನಾಟಕ ಸಿವಿಲ್ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957ರ 10ನೇ ನಿಯಮವು ಅಮಾನತ್ತಿನ ಬಗ್ಗೆ ಇರುವ ನಿಯಮವಾಗಿದೆ.

1. ಅಮಾನತ್ತು ಅರ್ಥ ವಿವರಣೆ:- ಅಮಾನತ್ತಿನಲ್ಲಿಡುವುದು ಎಂದರೆ ಸರ್ಕಾರಿ ನೌಕರನು ತನ್ನ ಅಧಿಕಾರ ಚಲಾಯಿಸದಂತೆ ಹಾಗೂ ಕರ್ತವ್ಯಗಳನ್ನು ನಿರ್ವಹಿಸದಂತೆ ತಾತ್ಕಾಲಿಕವಾಗಿ ತಡೆಹಿಡಿಯುವುದಾಗಿದೆ.ಅಮಾನತ್ತು ದಂಡನೆ ಆಗಿರುವುದಿಲ್ಲ. ಅಮಾನತ್ತಿನಿಂದ ಸರ್ಕಾರ ಹಾಗೂ ಸರ್ಕಾರಿ ನೌಕರನ ಸಂಬಂಧ ಅಂತ್ಯಗೊಳ್ಳುವುದಿಲ್ಲ.

2. ಸರ್ಕಾರಿ ನೌಕರರನ್ನು ಅಮಾನತ್ತಿನಲ್ಲಿಡುವ ಉದ್ದೇಶವೇನು? ಲಘು ದಂಡನೆಯನ್ನು ವಿಧಿಸಬಹುದಾದ ಪ್ರಕರಣಗಳಲ್ಲಿ ಅಮಾನತ್ತಿನಲ್ಲಿಡಬಹುದೇ?

(1) ಯಾವುದೇ ದುರ್ನಡತೆಯ ತನಿಖೆ/ವಿಚಾರಣೆಯು ಪ್ರಗತಿಯಲ್ಲಿರುವಾಗ ಆಪಾದನೆಗೊಳಗಾದ ಸರ್ಕಾರಿ ನೌಕರನು ತನಿಖೆಯಲ್ಲಿ ಹಸ್ತಕ್ಷೇಪ ಮಾಡುವುದನ್ನು ತಡೆಯಲು ಅಥವಾ ಸಾಕ್ಷಿಗಳಿಗೆ ಬೆದರಿಕೆ ಹಾಕುವುದು ಇತ್ಯಾದಿಗಳನ್ನು ತಡೆಯುವುದು ಅಮಾನತ್ತಿನ ಉದ್ದೇಶವಾಗಿದೆ.[ P.R Nayak Vs Union of India (1972) 1 SCC 332].

(2) ತನಿಖೆಗೆ ಸಂಬಂಧಪಟ್ಟ ದಾಖಲೆಗಳನ್ನು ತಿದ್ದುವುದು ನಾಶಗೊಳಿಸುವುದನ್ನು ತಡೆಯುವುದು.ಹಾಗೂ (Shoorvir Singh Vs Lt. Governor, Delhi (1998) 7 ATC 535)

(3) ಆಪಾದನೆಗೊಳಪಟ್ಟ ನೌಕರರು ತನಿಖೆಯಲ್ಲಿ ಹಸ್ತಕ್ಷೇಪ ಮಾಡುವುದನ್ನು ತಡೆಯಲು ಸಂಬಂಧಪಟ್ಟ ನೌಕರರನ್ನು ಅಮಾನತ್ತು ಗೊಳಿಸಲಾಗುವುದು.

(4) ಘೋರದಂಡನೆಗಳನ್ನು ವಿಧಿಸಬಹುದಾದ ಪ್ರಕರಣಗಳಲ್ಲಿ ಮಾತ್ರ ಅಮಾನತ್ತಿನಲ್ಲಿಡಬೇಕು. ಲಘು ದಂಡನೆಗಳ ಪ್ರಕರಣದಲ್ಲಿ ಅಮಾನತ್ತಿನಲ್ಲಿ ಇಡಬಾರದು [Union of India Vs Jhaneendra Nath Deb (1991) 5 SLR 527]

3. ಸರ್ಕಾರಿ ನೌಕರನನ್ನು ಅಮಾನತ್ತಿನಲ್ಲಿಡುವುದರಿಂದ ಆಗುವ ಪರಿಣಾಮಗಳೇನು?

(1) ಅಮಾನತ್ತು ದಂಡನೆಯಾಗಿರುವುದಿಲ್ಲ. ಸರ್ಕಾರ ಹಾಗೂ ಸರ್ಕಾರಿ ನೌಕರನ ಸಂಬಂಧಗಳು ಮುಂದುವರೆಯುತ್ತವೆ.

(2) ಅಮಾನತ್ತುಗೊಂಡ ನೌಕರನು ವೇತನ ಪಡೆಯಲು ಅರ್ಹನಾಗುವುದಿಲ್ಲ. ಜೀವನಾಧಾರ ಭತ್ಯೆಯನ್ನು ಮಾತ್ರ ನೀಡಲು ಅವಕಾಶವಿದೆ. ಇದು ಆರ್ಥಿಕವಾಗಿ ಅವರಿಗೆ ತೊಂದರೆಯಾಗುವುದು.

(3) ಅಮಾನತ್ತಿನಲ್ಲಿರುವ ನೌಕರನು ಈ ಬಗ್ಗೆ ಪ್ರಚಾರವಾಗುವುದರಿಂದ ಮಾನಸಿಕ ವ್ಯಥೆಗೊಳಪಡುತ್ತಾನೆ.

(4) ಅಮಾನತ್ತುಗೊಂಡ ಸಿಬ್ಬಂದಿಯು ತನ್ನ ಕರ್ತವ್ಯವನ್ನು ನಿರ್ವಹಿಸಲು ಹಾಗೂ ಅಧಿಕಾರಗಳನ್ನು ಚಲಾಯಿಸಲು ನಿರ್ಬಂಧಿತನಾಗುವುದರಿಂದ ಕೆಲಸವಿಲ್ಲದ ವ್ಯಕ್ತಿಂಯಾಗಿ ಮುಂದುವರೆಯಬೇಕಾಗುವುದು.

(5) ಅಮಾನತ್ತಿನಲ್ಲಿರುವ ಸಿಬ್ಬಂದಿಯು ಕೇಂದ್ರ ಸ್ಥಾನವನ್ನು ಅನುಮತಿ ಇಲ್ಲದೆ ಬಿಡುವಂತಿಲ್ಲ ಹಾಗೂ ಖಾಸಗಿ ಉದ್ಯೋಗವನ್ನು ಮಾಡುವಂತಿಲ್ಲ.

(6) ಅಮಾನತ್ತು ರದ್ದಾಗಿ ಆರೋಪದಿಂದ ದೋಷಮುಕ್ತನಾದರೂ ಅಮಾನತ್ತುಗೊಂಡಿರುವ ಅಂಶವು ಸೇವಾವಧಿಯಲ್ಲಿ ಒಂಕಪ್ಪು ಚುಕ್ಕೆಯಾಗಿ ಮುಂದುವರೆಯುವುದು.

(7) ಅಮಾನತ್ತುಗೊಂಡ ನೌಕರನ ವಿರುದ್ಧದ ಆರೋಪವು ಸಾಬೀತಾಗದೇ ದೋಷಮುಕ್ತನಾದಲ್ಲಿ ಅಮಾನತ್ತಿನ ಅವಧಿಯು ಕರ್ತವ್ಯದ ಅವಧಿಯೆಂದು ಪರಿಗಣಿಸಲ್ಪಡುವುದರಿಂದ ಯಾವುದೇ ಕರ್ತವ್ಯವನ್ನು ನಿರ್ವಹಿಸದೇ ವೇತನ ಭತ್ಯೆ ಇತ್ಯಾದಿ ಪಡೆಯಲು ಅವಕಾಶವಾಗುವುದು.

4. ಅಮಾನತ್ತು ಆದೇಶ ಹೊರಡಿಸುವ ಪೂರ್ವದಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು ಯಾವುದು?

(1) ಅಮಾನತ್ತು ದಂಡನೆಯಲ್ಲದಿದ್ದರೂ ಸರ್ಕಾರಿ ನೌಕರನ ಸೇವೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಆದ್ದರಿಂದ ಅಮಾನತ್ತು ಆದೇಶ ಹೊರಡಿಸುವ ಪೂರ್ವದಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಹಾಗೂ ಅಮಾನತ್ತಿನಲ್ಲಿಡಲು ಸಮರ್ಪಕವಾದ ಕಾರಣಗಳು ಇರಬೇಕು[K.Subramanian Vs State of Kerala, 1973 SLR 521].

(2) ಅಮಾನತ್ತು ಆದೇಶವನ್ನು ಹೊರಡಿಸುವಾಗ ನಿಯಮಾನುಸಾರ ಹೊರಡಿಸಬೇಕು. ನಿಯಮಗಳಿಗೆ ವಿರುದ್ಧವಾದ ಕಾರಣಗಳಿಂದ ಅಮಾನತ್ತು ಆದೇಶವನ್ನು ಹೊರಡಿಸಬಾರದು.

(ಸಿ) ಲಂಚ, ಸರ್ಕಾರದ ಹಣ ದುರುಪಯೋಗದ ಬಗ್ಗೆ ಕ್ರಿಮಿನಲ್ ನ್ಯಾಯಾಲಯದಲ್ಲಿ ಆರೋಪ ಪಟ್ಟಿ ದಾಖಲಾಗಿದ್ದರೆ ನಿಯಮ 10(1)(ಸಿ) ಅನ್ವಯ; [Hrushikesh. Chaini Vs Union of India, (1992) 19 ATC 362]

(ಡಿ) ಕರ್ತವ್ಯ ನಿರ್ಲಕ್ಷತೆ ಬಗ್ಗೆ ಮೇಲ್ನೋಟಕ್ಕೆ ಸಾಕ್ಷಾಧಾರಗಳಿದ್ದರೆ ನಿಯಮ 10(1)(ಡಿ) ಅನ್ವಯ [K.K.Raman Kutty Vs State of Kerala (1972)2 LLJ 509; -‘ಯಾವುದೇ ಸರ್ಕಾರಿ ನೌಕರರನ್ನು ಅಮಾನತ್ತಿನಲ್ಲಿಡಬಹುದು.
6. ಅಮಾನತ್ತಿನಲ್ಲಿಡಲು ಸಕ್ಷಮ ಪ್ರಾಧಿಕಾರಿ ಯಾರು?

ಶಿಸ್ತು ಪ್ರಾಧಿಕಾರಿ ಅಥವಾ ಶಿಸ್ತು ಪ್ರಾಧಿಕಾರಿಯು ಯಾವ ಅಧಿಕಾರಿಯ ಅಧೀನದಲ್ಲಿ ಬರುವವರೋ ಅಂತಹ ಮೇಲಾಧಿಕಾರಿ ಅಥವಾ ಈ ಬಗ್ಗೆ ಸರ್ಕಾರದಿಂದ ಪ್ರಾಧಿಕೃತವಾಗಿರುವ ಯಾವುದೇ ಅಧಿಕಾರಿಯು ಅಮಾನತ್ತಿನಲ್ಲಿಡಲು ಸಕ್ಷಮ ಪ್ರಾಧಿಕಾರಿಯಾಗಿರುತ್ತಾರೆ.

7. ಅಮಾನತ್ತಿನಲ್ಲಿಡಬಾರದ ಪ್ರಕರಣಗಳು ಯಾವುವು?

(1) ಅಮಾನತ್ತನ್ನು ನಿಯಮ 10ರನ್ವಯ ಸಾಕಷ್ಟು ಕಾರಣಗಳಿದ್ದಲ್ಲಿ ಮಾತ್ರ ಜಾರಿ ಗೊಳಿಸಬೇಕಾಗಿದೆ. ಕ್ಷುಲ್ಲಕ ಹಾಗೂ ಅಪಕೀರ್ತಿಯದಲ್ಲದ ಕಾರಣಗಳಿಗಾಗಿ ಅಮಾನತ್ತಿನಲ್ಲಿಡಬಾರದು.[Nikka Ram Sharma Vs Central Social WelfareBoard (1990) 4 SLR 407]

(2) ಅನಧಿಕೃತ ಗೈರು ಹಾಜರಾಗಿರುವ ಅಥವಾ ರಜೆ ಅವಧಿಯ ನಂತರ ಗೈರು ಹಾಜರಾಗುವ ಸಿಬ್ಬಂದಿಯನ್ನು ಅಮಾನತ್ತಿನಲ್ಲಿಡಬಾರದು. ಅಂಥಹ ಸಿಬ್ಬಂದಿಯ ಮೇಲೆ ಆ ಕೂಡಲೇ ಇಲಾಖಾ ವಿಚಾರಣೆಯನ್ನು ಪ್ರಾರಂಬಿಸಿ ಸೂಕ್ತ ದಂಡನೆಯನ್ನು ವಿಧಿಸಬಹುದಾಗಿದೆ.

8. 48 ಗಂಟೆಗಳಿಗೂ ಅಧಿಕ ಅವಧಿಗೆ ಬಂಧನದಲ್ಲಿದ್ದಾಗ ಅಮಾನತ್ತಿನಲ್ಲಿರುವುದಾಗಿ ಭಾವಿಸತಕ್ಕದ್ದು. ಕೆ.ಸಿ.ಎಸ್. (ಸಿಸಿಎ) ನಿಯಮಗಳು, 1957ರ 10ನೇ ನಿಯಮದ (2)ನೇ ಉಪ-ನಿಯಮದನ್ವಯ,-

(ಎ) ಕ್ರಿಮಿನಲ್‌ ಮೊಕದ್ದಮೆ ಅಥವಾ ಇನ್ನಾವುದೇ ಪ್ರಕರಣದ ಬಗ್ಗೆ 48 ಗಂಟೆಗಳಿಗೂ ಅಧಿಕ ಅವಧಿಗೆ ಬಂಧನದಲ್ಲಿದ್ದರೆ, ಬಂಧಿತನಾದ ದಿನಾಂಕ ಹಾಗೂ ವೇಳೆಯಿಂದ ಅಮಾನತ್ತಿನಲ್ಲಿರುವನೆಂದು భావిసి ನೇಮಕಾತಿ ಪ್ರಾಧಿಕಾರಿಯು ಆದೇಶ ಹೊರಡಿಸುವುದರಿಂದ ನಿಯಮ 10(2)(ಎ) ಅನ್ವಯ ; ಹಾಗೂ

(ಬಿ) ಯಾವುದೇ ಅಪರಾಧಕ್ಕಾಗಿ 48 ಗಂಟೆಗಳಿಗೂ ಅಧಿಕ ಅವಧಿಗೆ ಸೆರೆವಾಸದ ಶಿಕ್ಷೆಗೆ ಒಳಗಾಗಿದ್ದಲ್ಲಿ ಹಾಗೂ ಆ ಕೂಡಲೇ ಅವರನ್ನು ವಜಾ ಮಾಡುವ ಅಥವಾ ಸೇವೆಯಿಂದ ಕಡ್ಡಾಯವಾಗಿ ನಿವೃತ್ತಿಗೊಳಿಸುವ ದಂಡನೆಯನ್ನು ವಿಧಿಸಿರದಿದ್ದಲ್ಲಿ ಆತನಿಗೆ ದಂಡನೆ ವಿಧಿಸಿದ ದಿನಾಂಕದಿಂದ ಅಮಾನತ್ತಿನಲ್ಲಿರುವನೆಂದು ಭಾವಿಸಿ ನೇಮಕಾತಿ ಪ್ರಾಧಿಕಾರಿಯು ಆದೇಶ ಹೊರಡಿಸುವುದರಿಂದ ನಿಯಮ 10(2)(ಬಿ)ಅನ್ವಯ.

ಅಮಾನತ್ತಿನಲ್ಲಿಡಲು ಅಧಿಕಾರ ಹೊಂದಿರುವ ಸಕ್ಷಮ ಪ್ರಾಧಿಕಾರಿಯು ಪ್ರಕರಣವನ್ನು ಪರಿಶೀಲಿಸಿ ಸರ್ಕಾರಿ ನೌಕರನನ್ನು ಅಮಾನತ್ತಿನಲ್ಲಿಡಲು ತೃಪ್ತಿಯಾಗುವಷ್ಟು ಸಾಕ್ಷಾಧಾರಗಳಿವೆ ಎಂದು ಭಾವಿಸಿದಲ್ಲಿ ಅಂಥಹ ಪ್ರಾಧಿಕಾರಿಯು ಸರ್ಕಾರಿ ನೌಕರನನ್ನು ಅಮಾನತ್ತಿನಲ್ಲಿಡಬಹುದು.[ನಿಯಮ 10(3)] [Nelson Motis Vs Union of India and others 1992(3) SLJ 65(SC)]

9. ಸೇವೆಯಿಂದ ವಜಾ ಮಾಡಲಾದ / ತೆಗೆದು ಹಾಕಿದ ಅಥವಾ ಕಡ್ಡಾಯ ನಿವೃತ್ತಿ ಗೊಳಿಸಿದ ದಂಡನೆಯನ್ನು ನ್ಯಾಯಾಲಯವು ರದ್ದುಪಡಿಸಿದಲ್ಲಿ ಅಮಾನತ್ತು. ಸೇವೆಯಿಂದ ವಜಾ ಮಾಡಲಾದ/ತೆಗೆದು ಹಾಕಿದ ಅಥವಾ ಕಡ್ಡಾಯ ನಿವೃತ್ತಿ ಗೊಳಿಸಿದ ಪ್ರಕರಣದಲ್ಲಿ ಸಕ್ಷಮ ನ್ಯಾಯಾಲಯವು ಅಂಥಹ ದಂಡನೆಯನ್ನು ರದ್ದುಪಡಿಸಿದಲ್ಲಿ ಅಥವಾ ಅಸಿಂಧುವೆಂದು ಘೋಷಿಸಿದಲ್ಲಿ ಶಿಸ್ತು ಪ್ರಾಧಿಕಾರಿಯು ಪ್ರಕರಣವನ್ನು ಪರಿಗಣಿಸಿ ಮುಂದಿನ ವಿಚಾರಣೆಯನ್ನು ಅದೇ ಆರೋಪದ ಬಗ್ಗೆ ಕೈಗೆತ್ತಿಕೊಳ್ಳಲು ಉದ್ದೇಶಸಿದಲ್ಲಿ ವಜಾ ಆಗಿ ರುವ/ಸೇವೆಯಿಂದ ತೆಗೆದು ಹಾಕಿರುವ/ ಕಡ್ಡಾಯ ನಿವೃತ್ತಿ ಗೊಳಿಸಿರುವ ಆದೇಶದ ದಿನಾಂಕದಿಂದ ಅಂಥಹ ಸರ್ಕಾರಿ ನೌಕರನು ಅಮಾನತ್ತಿನಲ್ಲಿ ಇರುವನೆಂದು ಭಾವಿಸತಕ್ಕದ್ದು ಹಾಗೂ ಈ ರೀತಿಯ ಅಮಾನತ್ತು ಮುಂದಿನ ಆದೇಶದವರೆಗೆ ಮುಂದುವರೆಯುವುದು. ನಿಯಮ10(4)] [Anand Narayan Shukla Vs State of M.P.AIR 1979 SC 1923] ಹಾಗೂ [A.K Bala Krishna Nair Vs Senior Superintendent of post offices 1982 (1) SLJ 345 (Kerala)]

10. ಅಮಾನತ್ತು ಗೊಳಿಸಲಾಗಿದೆ ಎಂದು ಭಾವಿಸಲಾದ ಪ್ರಕರಣಗಳಲ್ಲಿ ಆದೇಶ ಹೊರಡಿಸುವ ಅಗತ್ಯತೆ ಇದೆಯೇ?

(1) 48 ಗಂಟೆಗಳಿಗೂ ಅಧಿಕ ಅವಧಿಗೆ ಬಂಧನದಲ್ಲಿ ಇದ್ದಾಗ ಅಮಾನತ್ತಿನಲ್ಲಿರುವುದಾಗಿ ಭಾವಿಸಲು ನಿಯಮ 10(2)ರಲ್ಲಿ ಉಪಬಂಧಗಳಿದ್ದರೂ ಈ ಬಗ್ಗೆ ಆಡಳಿತಾತ್ಮಕ ಆದೇಶ ಹೊರಡಿಸುವುದು ಅಗತ್ಯತೆ ಇದೆ. ಇದರಿಂದ ಸಿಬ್ಬಂದಿಯು ಅಮಾನತ್ತಿನಲ್ಲಿರುವ ಬಗ್ಗೆ ಆಡಳಿತಾತ್ಮಕ ದಾಖಲೆ ಲಭ್ಯವಾಗುವುದು ಹಾಗೂ ಜೀವನಾಧಾರ ಭತ್ಯೆಯನ್ನು ಡ್ರಾ ಮಾಡಲು ಅವಕಾಶವಾಗುವುದು.

(2) ಅಮಾನತ್ತಿನಲ್ಲಿಡಲಾಗಿದೆ ಎಂದು ಭಾವಿಸಿರುವ ಪ್ರಕರಣಗಳಲ್ಲಿ ಹೊರಡಿಸುವ ಆದೇಶಗಳನ್ನು ಸದರಿ ಸಿಬ್ಬಂದಿಯು ದಸ್ತಗಿರಿಗೆ ಒಳಪಟ್ಟ ದಿನಾಂಕದಿಂದ ಜಾರಿ ಗೊಳಿಸುವಂತೆ ಹೊರಡಿಸಬಹುದು.

11. ಅಮಾನತ್ತು ಆದೇಶವು ಜಾರಿಗೊಳ್ಳುವ ದಿನಾಂಕ ಯಾವುದು?

(ಎ) ಸರ್ಕಾರಿ ನೌಕರನು ಕರ್ತವ್ಯದ ಮೇಲಿದ್ದರೆ.- ಅಮಾನತ್ತಿನ ಆದೇಶವನ್ನು ಹೊರಡಿಸುವಾಗ ಸರ್ಕಾರಿ ನೌಕರನು ಕರ್ತವ್ಯದ ಮೇಲಿದ್ದರೆ ಅಮಾನತ್ತು ಆದೇಶವನ್ನು ಅವನಿಗೆ ತಲುಪಿಸಿದ ದಿನಾಂಕದಿಂದ ಅದು ಜಾರಿಗೆ ಬರುತ್ತದೆ.

(ಬಿ) ಸರ್ಕಾರಿ ನೌಕರನು ರಜೆಯ ಮೇಲಿದ್ದರೆ.- ಅಮಾನತ್ತಿನ ಆದೇಶವನ್ನು ಹೊರಡಿಸುವಾಗ ಸರ್ಕಾರಿ ನೌಕರನು ರಜೆಯ ಮೇಲಿದ್ದರೆ ಆದೇಶವನ್ನು ರವಾನಿಸಿದ ದಿನಾಂಕದಿಂದ ಅದು ಜಾರಿಗೊಳ್ಳುವುದು. ಪಂಜಾಬ್ ರಾಜ್ಯ ವಿರುದ್ದ ಖೆಮಿರಾಮಾ ಎ.ಐ.ಆ‌ರ್. 1970 ಎಸ್ ಸಿ 214.

(ಸಿ) ಆದೇಶ ಹೊರಡಿಸುವ ಪೂರ್ವದಲ್ಲೇ ಅಮಾನತ್ತು ಜಾರಿಗೊಳ್ಳುವುದು.- 10ನೇ ನಿಯಮದ (2)ನೇ ಉಪ-ನಿಯಮದ (ಎ) ಖಂಡದಡಿ 48 ಗಂಟೆಗಳಿಗೂ ಅಧಿಕ ಅವಧಿಯಲ್ಲಿ ಬಂಧನದಲ್ಲಿದ್ದಾಗ, ಹಾಗೂ ನಿಯಮ 10(2)(ಬಿ) ಅನ್ವಯ 48 ಗಂಟೆಗಳಿಗೂ ಅಧಿಕ ಅವಧಿಗೆ ಸೆರೆವಾಸದ ಶಿಕ್ಷೆಗೊಳಗಾದಲ್ಲಿ ಬಂಧನದ ಅಥವಾ ಶಿಕ್ಷೆ ವಿಧಿಸಿದ ದಿನಾಂಕದಿಂದ ಅನ್ವಯ ವಾಗುವಂತೆ ಅಮಾನತ್ತು ಆದೇಶವನ್ನು ಹೊರಡಿಸಬಹುದು.

12. ಅಮಾನತ್ತು ಪೂರ್ವಾನ್ವಯವಾಗಿ ಜಾರಿಗೊಳಿಸಬಹುದೆ?

ನಿಯಮ 10(1)ರನ್ವಯ ಅಮಾನತ್ತಿನಲ್ಲಿಡುವ ಆದೇಶ/ಅಮಾನತ್ತಿನಲ್ಲಿ ಮುಂದುವರೆಸುವ ಆದೇಶವನ್ನು ಪೂರ್ವಾನ್ವಯವಾಗಿ ಆದೇಶಿಸಿ ಹೊರಡಿಸುವಂತಿಲ್ಲ.

ವರದರಾವ್ ವಿರುದ್ಧ ಕರ್ನಾಟಕ ರಾಜ್ಯ 1977(1) KLJ 291- No order may be passed after the date of the expiry of the period of suspension revining it.

13. ಒಂಂದು ಪ್ರಕರಣದಲ್ಲಿ ಹೊರಡಿಸಿರುವ ಅಮಾನತ್ತು ಆದೇಶವನ್ನು ಎಲ್ಲಾ ಪ್ರಕರಣಗಳು ಮುಕ್ತಾಯಗೊಳ್ಳುವವರೆಗೆ ವಿಸ್ತರಿಸಬಹುದೆ?

ಯಾವುದೇ ಒಂಂದು ದುರ್ನಡತೆಯ ಸಂಬಂಧದಲ್ಲಿ ಸಿಬ್ಬಂದಿಯನ್ನು ಅಮಾನತ್ತಿನಲ್ಲಿಟ್ಟಿದ್ದರೆ, ಅವರ ವಿರುದ್ದ ಇತರೆ ಶಿಸ್ತು ಕ್ರಮಗಳು ಬಾಕಿ ಇದ್ದಲ್ಲಿ, ಶಿಸ್ತು,
ಪ್ರಾಧಿಕಾರಿಯು ಆದೇಶ ಹೊರಡಿಸಿ ಸದರಿ ಅಮಾನತ್ತು ಆದೇಶವು ಎಲ್ಲಾ ಪ್ರಕರಣಗಳಿಗೂ ಅನ್ವಯವಾಗುವಂತೆ ಆದೇಶಿಸಬಹುದು. [ನಿಯಮ 10(5)(ಬಿ)]

14. ಅಮಾನತ್ತು ಆದೇಶವನ್ನು ಯಾವಾಗ ತೆರವು ಗೊಳಿಸಬಹುದು?

(1) ಹೊರಡಿಸಿರುವ ಅಮಾನತ್ತು ಆದೇಶವನ್ನು ಅಥವಾ ಅಮಾನತ್ತಿನಲ್ಲಿಡಲಾಗಿದೆ.ಎಂದು ಭಾವಿಸಲಾದ ಪ್ರಕರಣಗಳಲ್ಲಿ ಅಮಾನತ್ತು ಆದೇಶ ಹೊರಡಿಸಿರುವ ಅಧಿಕಾರಿ ಅಥವಾ ಸಕ್ಷಮ ಪ್ರಾಧಿಕಾರಿ ಅದನ್ನು ತೆರವು ಗೊಳಿಸಬಹುದು.

(2) ಯಾವ ದುರ್ನಡತೆಯ ಬಗ್ಗೆ ಅಮಾನತ್ತು ಆದೇಶ ಹೊರಡಿಸಲಾಗಿದೆಯೋ ಆ ದುರ್ನಡತೆಯ ಬಗ್ಗೆ ಇಲಾಖಾ ವಿಚಾರಣೆಯನ್ನು ನಡೆಸದೇ ಇರಲು ಉದ್ದೇಶಿಸಿದಲ್ಲಿ ಅಮಾನತ್ತು ಆದೇಶವನ್ನು ತೆರವು ಗೊಳಿಸಬಹುದು.

(3) ಕಡ್ಡಾಯ ನಿವೃತ್ತಿ, ನೇನೆಯಿಂದ ತೆಗೆದು ಹಾಕುವುದು ಅಥವಾ ವಜಾ ಮಾಡುವ ದಂಡನೆಯನ್ನು ವಿಧಿಸಿದ ಪ್ರಕರಣಗಳನ್ನು ಹೊರತುಪಡಿಸಿ ದಂಡನಾದೇಶವನ್ನು ಹೊರಡಿಸಿದಲ್ಲಿ ಅಮಾನತ್ತು ದಂಡನಾದೇಶದೊಂದಿಗೆ ಅಂತ್ಯ ಗೊಳ್ಳುವುದು.

(4) ಕ್ರಿಮಿನಲ್ ಮೊಕದ್ದಮೆಯ ಸಂಬಂಧದಲ್ಲಿ ಅಮಾನತ್ತಿನಲ್ಲಿಡಲಾಗಿದ್ದು, ಸದರಿ ಕ್ರಿಮಿನಲ್ ಮೊಕದ್ದಮೆಯು ಖುಲಾಸೆಯಲ್ಲಿ ಅಂತ್ಯಗೊಂಡಲ್ಲಿ ಹಾಗೂ ಶಿಸ್ತು ಪ್ರಾಧಿಕಾರಿಯು ಅದೇ ವಿಷಯದ ಬಗ್ಗೆ ಇಲಾಖಾ ವಿಚಾರಣೆಯನ್ನು ಪ್ರಾರಂಬಿಸಲು ಉದ್ದೇಶಿಸದಿದ್ದಲ್ಲಿ ಅಮಾನತ್ತನ್ನು ತೆರವು ಗೊಳಿಸಬಹುದು.

(5) ಮೇಲ್ಮನವಿ ಪ್ರಾಧಿಕಾರಿಯು, ಮೇಲ್ಮನವಿಯನ್ನು ಪರಿಗಣಿಸಿ ಅಮಾನತ್ತನ್ನು ತೆರವು ಗೊಳಿಸಬಹುದು.

(6) ವಯೋನಿವೃತ್ತಿ ಹೊಂದುವುದರಿಂದ ಅಮಾನತ್ತು ಆದೇಶವು ತೆರವು ಗೊಳ್ಳು

ವುದು.

(7) ಆಪಾದಿತ ಸಿಬ್ಬಂದಿಯು ಅಮಾನತ್ತಿನ ಅವಧಿಯಲ್ಲಿ ಮರಣ ಹೊಂದಿದಲ್ಲಿ ಅಮಾನತ್ತು ರದ್ದಾಗುವುದು.

15. ಅಮಾನತ್ತಿನ ಅವಧಿಯಲ್ಲಿ ಸರ್ಕಾರಿ ನೌಕರನು ಕೇಂದ್ರ ಸ್ಥಾನದಲ್ಲಿಯೇ ಇರುವುದು ಕಡ್ಡಾಯವೇ?

(1) ಅಮಾನತ್ತಿನ ಅವಧಿಯಲ್ಲಿ ತನ್ನ ಕೇಂದ್ರ ಸ್ಥಾನವನ್ನು ಬಿಡಲು ಸಕ್ಷಮ ಪ್ರಾಧಿಕಾರಿಯ ಅನುಮತಿ ಪಡೆಯಬೇಕು. ಕೆ.ಸಿ.ಎಸ್.ಆರ್.ನಿಯಮ 104,

(2) ಶಿಸ್ತು, ಪ್ರಾಧಿಕಾರಿ ಅಥವಾ ಸಕ್ಷಮ ಪ್ರಾಧಿಕಾರಿಯು ಆಡಳಿತಾತ್ಮಕ ಕಾರಣದಿಂದಾಗಿ ಅಮಾನತ್ತಿನಲ್ಲಿರುವ ಸಿಬ್ಬಂದಿಯ ಕೇಂದ್ರ ಸ್ಥಾನವನ್ನು ಬದಲಾಯಿಸಬಹುದು.

(3) ಕ್ರಿಮಿನಲ್ ಮೊಕದ್ದಮೆಯ ಸಂಬಂಧದಲ್ಲಿ ಸಿಬ್ಬಂದಿಯನ್ನು ಅಮಾನತ್ತಿನಲ್ಲಿಟ್ಟಿದ್ದರೆ, ಕ್ರಿಮಿನಲ್ ಪ್ರಕರಣದ ಜಾಮೀನಿನ ಷರತ್ತುಗಳಲ್ಲಿ ಕೇಂದ್ರ ಸ್ಥಾನವನ್ನು ಬಿಡದಿರಲು ಷರತ್ತು ಇರುವ ಪ್ರಕರಣಗಳಲ್ಲಿ ಆಡಳಿತಾತ್ಮಕ ಕಾರಣಗಳಿಂದಾಗಿ ಕೇಂದ್ರ ಸ್ಥಾನವನ್ನು ಬದಲಾಯಿಸುವ ಪ್ರಕರಣಗಳಲ್ಲಿ ಜಾಮೀನಿನ ಷರತ್ತನ್ನು ಸಡಿಲಿಸುವ ಬಗ್ಗೆ ಆಡಳಿತಾತ್ಮಕ ಕ್ರಮಗಳನ್ನು ಜರುಗಿಸತಕ್ಕದ್ದು.

.

16. ಅಮಾನತ್ತಿನ ಅವಧಿಯಲ್ಲಿ ರಜೆಯಲ್ಲಿ ತೆರಳಲು ಅವಕಾಶವಿದೆಯೇ?

ಅಮಾನತ್ತಿನಲ್ಲಿರುವ ನೌಕರರಿಗೆ ಯಾವುದೇ ರೀತಿಯ ರಜೆ ಮಂಜೂರು ಮಾಡಲು ಅವಕಾಶವಿರುವುದಿಲ್ಲ.

17. ಆರು ತಿಂಗಳಿಗೂ ಅಧಿಕ ಅವಧಿಗೆ ಮುಂದುವರೆದ ಅಮಾನತ್ತಿನ ಬಗ್ಗೆ ಸರ್ಕಾರಕ್ಕೆ ವರದಿ ಮಾಡತಕ್ಕದ್ದು ಸರ್ಕಾರವು ಅಮಾನತ್ತಿನ ಆದೇಶವನ್ನು ಹೊರಡಿಸದೇ, ಸರ್ಕಾರದ ಅಧೀನ ಅಧಿಕಾರಿಗಳು ಅಮಾನತ್ತಿನ ಆದೇಶವನ್ನು ಹೊರಡಿಸಿ, ಅಮಾನತ್ತಿನ ಅವಧಿಯು ಆರು

ತಿಂಗಳಿಗೆ ಮೀರಿದಲ್ಲಿ ಕೆ.ಸಿ.ಎಸ್. (ಸಿಸಿಎ) ನಿಯಮಗಳ 10ನೇ ನಿಯಮದ (6)ನೇ ಉಪ-ನಿಯಮದನ್ವಯ ಸರ್ಕಾರಕ್ಕೆ ವರದಿ ಮಾಡತಕ್ಕದ್ದು.

18. ಅಧಿಕಾರ ವ್ಯಾಪ್ತಿ ಇಲ್ಲದೆ ಮಾಡಿರುವ ಅಮಾನತ್ತು ಆದೇಶ ಊರ್ಜಿತವಾಗುವುದೇ?

(1) ಅಮಾನತ್ತು ಆದೇಶವನ್ನು,-

(ಎ) ಶಿಸ್ತು ಪ್ರಾಧಿಕಾರಿ;

(ಬಿ) ಶಿಸ್ತು ಪ್ರಾಧಿಕಾರಿಯು ಯಾವ ಅಧಿಕಾರಿಗೆ ಅಧೀನನಾಗಿರುವನೋ ಆ ಅಧಿಕಾರಿ

(ಸಿ) ಕೆ.ಸಿ.ಎಸ್. (ಸಿಸಿಎ) ನಿಯಮಗಳು, 1957ರ 10ನೇ ನಿಯಮದ (8)ನೇ ಉಪ-ನಿಯಮದನ್ವಯ ಪ್ರಾಧಿಕೃತ ಅಧಿಕಾರಿ ಹೊರಡಿಸಬಹುದು.

(2) ಸರ್ಕಾರಿ ನೌಕರರನ್ನು ಅಮಾನತ್ತು ಗೊಳಿಸಲು ಅಧಿಕಾರ ವ್ಯಾಪ್ತಿ ಇಲ್ಲದ ಅಧಿಕಾರಿಯು ಮಾಡಿರುವ ಅಮಾನತ್ತು ಆದೇಶವು ಊರ್ಜಿತವಾಗುವುದಿಲ್ಲ. ಅಧಿಕಾರ ವ್ಯಾಪ್ತಿ ಇಲ್ಲದ ಅಧಿಕಾರಿಯು ಅಮಾನತ್ತಿನ ಆದೇಶ ಹೊರಡಿಸಿ ನಂತರ ಅಧಿಕಾರ ವ್ಯಾಪ್ತಿ ಹೊಂದಿರುವ ಅಧಿಕಾರಿಯು ಅದನ್ನು ಊರ್ಜಿತ ಗೊಳಿಸಿ ಆದೇಶ ಹೊರಡಿಸುವಂತಿಲ್ಲ, ಆದರೆ ಅಧಿಕಾರ ವ್ಯಾಪ್ತಿ ಹೊಂದಿರುವ ಅಧಿಕಾರಿಯು ಹೊಸ ಆದೇಶದ ಮುಖಾಂತರ ಉತ್ತರಾನ್ವಯವಾಗಿ ಅಮಾನತ್ತಿನಲ್ಲಿಡಬಹುದು. ಇನಾಯತ್ತುಲ್ಲಾ ವಿರುದ್ಧ ಕನ್ನರೇಟರ್ ಆಫ್ ಫಾರೆಸ್ಟ್ 1982 (2) KLJ 432

19. ಅಮಾನತ್ತಿನಲ್ಲಿರುವಾಗ ಕಚೇರಿಗೆ ಹಾಜರಾಗಿ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡುವ ಷರತ್ತು ವಿಧಿಸಬಹುದೇ?

ಅಮಾನತ್ತಿನ ಅವಧಿಯಲ್ಲಿ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಲು ಕಚೇರಿಗೆ ಹಾಜರಾಗುವಂತೆ ಷರತ್ತನ್ನು ವಿಧಿಸುವಂತಿಲ್ಲ. ರುದ್ರಪ್ಪ ವಿರುದ್ದ ವಿಭಾಗೀಯ ಅರಣ್ಯ ಅಧಿಕಾರಿ 1975(1) ಕೆ.ಎಲ್.ಜೆ. ಸಂಕ್ಷಿಪ್ತ ಟಿಪ್ಪಣಿ ಪುಟ 3.

20. ಅಮಾನತ್ತಿನಲ್ಲಿಡುವ ಪೂರ್ವದಲ್ಲಿ ನೋಟೀಸು ನೀಡುವ ಅಗತ್ಯತೆ ಇದೆಯೇ?

ಅಮಾನತ್ತು ದಂಡನೆ ಆಗಿರುವುದಿಲ್ಲ. ಆದ್ದರಿಂದ ಅಮಾನತ್ತಿನಲ್ಲಿಡುವ ಪೂರ್ವದಲ್ಲಿ ಸರ್ಕಾರಿ ನೌಕರರಿಗೆ ಈ ಬಗ್ಗೆ ನೋಟೀಸು ನೀಡಿ ಅವರಿಂದ ಪ್ರತಿರಕ್ಷಣಾ ಹೇಳಿಕೆ ಪಡೆಯುವ ಅಗತ್ಯತೆ ಇಲ್ಲ. ಸುಂದರೇಶನ್ ವಿ.ವಿರುದ್ಧ ಸೂಪರಿಂಟೆಂಡೆಂಟ್ ಆಫ್ ಪೋಲೀಸ್ 1983 (2) KLJ ಪುಟ 523.

21. ಅಮಾನತ್ತಿನ ಅವಧಿಯ ಪರಿಗಣನೆಯನ್ನು ಯಾವ ನಿಯಮದಡಿ ನಿರ್ವಹಿಸಬೇಕು?

(1) ವಿಚಾರಣೆಯಲ್ಲಿ ಸರ್ಕಾರಿ ನೌಕರನನ್ನು ಆರೋಪಗಳಿಂದ ಮುಕ್ತ ಗೊಳಿಸಿದಲ್ಲಿ ಅಮಾನತ್ತಿನ ಅವಧಿಯಲ್ಲಿ ಸಾಮಾನ್ಯವಾಗಿ ಕರ್ತವ್ಯದ ಅವಧಿಯೆಂದು ಪರಿಗಣಿಸಬೇಕಾಗುತ್ತದೆ.ಆದರೆ ವಿಚಾರಣೆಯು ಅಂಥಹ ಸರ್ಕಾರಿ ನೌಕರನ ಅಸಹಕಾರದಿಂದ ಮುಂದುವರೆದಿದ್ದಲ್ಲಿ ಈ ಅವಧಿಯನ್ನು ರಜೆಯ ಲೆಕ್ಕದಲ್ಲಿ ಪರಿಗಣಿಸ ಬಹುದಾಗಿದೆ.

(2) ಅಮಾನತ್ತಿನಲ್ಲಿದ್ದ ಸರ್ಕಾರಿ ನೌಕರನು ಸ್ವ ಇಚ್ಛಾ ನಿವೃತ್ತ ಕೋರಿದ್ದು, ಅದನ್ನು ಅಂಗೀಕರಿಸಿ ವಿಚಾರಣೆಯನ್ನು ಕೈಬಿಟ್ಟಾಗ ಅಮಾನತ್ತಿನ ಅವಧಿಯನ್ನು ಕರ್ತವ್ಯದ ಅವಧಿಯೆಂದು ಪರಿಗಣಿಸ ಬೇಕಾಗುತ್ತದೆ. [ಆರ್.ಎಸ್.ನಾಯಕ್ ವಿರುದ್ಧ ಕರ್ನಾಟಕ ರಾಜ್ಯ 1982 (1) KLJ ಪುಟ 156]

(3) ಅಮಾನತ್ತಿನ ಅವಧಿಯನ್ನು ಪರಿಗಣಿಸಿ ಆದೇಶಿಸುವಾಗ ಕೆ.ಸಿ.ಎಸ್.ಆರ್. ನಿಯಮ 100ರನ್ವಯ ಕ್ರಮ ಜರುಗಿಸತಕ್ಕದ್ದು.

22. ಅಮಾನತ್ತಿನಲ್ಲಿದ್ದ ಸರ್ಕಾರಿ ನೌಕರನಿಗೆ ಮುಂಗಡಗಳನ್ನು ಮಂಜೂರು ಮಾಡಬಹುದೇ?

ಅಮಾನತ್ತಿನಲ್ಲಿರುವ ಸರ್ಕಾರಿ ನೌಕರನಿಗೆ ವಾಹನ ಮುಂಗಡವನ್ನು ಮಂಜೂರು ಮಾಡುವುದಿಲ್ಲ ಆದರೆ ಗೃಹ ನಿರ್ಮಾಣ / ಖರೀದಿ ಮುಂಗಡವನ್ನು ಮಂಜೂರು ಮಾಡಲು ಪರಿಗಣಿಸಬಹುದು.

23. ಅಮಾನತ್ತಿನ ಬಗ್ಗೆ ಮೇಲ್ಮನವಿಯನ್ನು ಯಾವ ನಿಯಮದಡಿ ಸಲ್ಲಿಸಬಹುದು?

(1) ಅಮಾನತ್ತು ದಂಡನೆಯಲ್ಲದಿದ್ದರೂ ಅಮಾನತ್ತಿಗೆ ಒಳಗಾದ ವ್ಯಕ್ತಿಗೆ ಆರ್ಥಿಕವಾಗಿ ತೊಂದರೆ ಉಂಟಾಗುವುದು. ಅಂದರೆ ಜೀವನಾಧಾರ ಭತ್ಯೆ ಮಾತ್ರ ಲಭ್ಯವಾ ಗುವುದು. ಸಾರ್ವಜನಿಕರಿಂದ ತಪ್ಪು ಅಭಿಪ್ರಾಯಕ್ಕೆ ಒಳಗಾಗುವುದರಿಂದ ಮಾನಸಿಕ ಒತ್ತಡ ಉಂಟಾಗುವುದು. ಇದು ಅಲ್ಲದೆ ತಾನು ನಿರ್ವಹಿಸಬೇಕಾದ ಅಧಿಕಾರ ಮತ್ತು ಕರ್ತವ್ಯಗಳಿಂದ ಅವರನ್ನು ವಂಚಿಸಿದಂತಾಗುವುದು.ಈ ಕಾರಣಗಳಿಂದ ಅಮಾನತ್ತುದಂಡನೆಯಲ್ಲದಿದ್ದರು ಅಮಾನತ್ತಿನ ಬಗ್ಗೆ ಮೇಲ್ಮನವಿ ಸಲ್ಲಿಸಲು 18ನೇ ನಿಯಮದ (1)ನೇ ಉಪ-ನಿಯಮದ (ಡಿ) ಖಂಡದಲ್ಲಿ ಉಪಬಂಧವನ್ನು ಕಲ್ಪಿಸಲಾಗಿದೆ. [Garika pati Veeraya Vs Subbaiah Chaudhary, AIR 1957 SC 540]

(2) 18ನೇ ನಿಯಮದ

(2)ನೇ ಉಪ-ನಿಯಮದನ್ವಯ (ಎ) ಮತ್ತು (ಬಿ)

ಸಮೂಹದ ಅಧಿಕಾರಿಗಳು ನೇಮಕಾತಿ ಪ್ರಾಧಿಕಾರಿಗಿಂತ ಕಡಿಮೆ ದರ್ಜೆಯ ಪ್ರಾಧಿಕಾರಿಯು ಅಮಾನತ್ತು ಆದೇಶ ಹೊರಡಿಸಿದಲ್ಲಿ ನೇಮಕಾತಿ ಪ್ರಾಧಿಕಾರಿಗೆ ಮೇಲ್ಮನವಿ ಸಲ್ಲಿಸಬಹುದು.

(3) ಶಿಸ್ತು ಪ್ರಾಧಿಕಾರಿಯು ಅಮಾನತ್ತಿನ ಆದೇಶವನ್ನು ಮಾಡಿದಲ್ಲಿ ಅಪೀಲು ಪ್ರಾಧಿಕಾರಿಗೆ ಮೇಲ್ಮನವಿಯನ್ನು ಸಲ್ಲಿಸಬಹುದು.

24. ಅಮಾನತ್ತಿನ ಅವಧಿಯಲ್ಲಿ ವಸೂಲಾತಿಗಳನ್ನು ಮಾಡಬಹುದೇ?

(1) ಈ ಕೆಳಗೆ ನಮೂದಿಸಿರುವ ವಸೂಲಾತಿಗಳನ್ನು ಕಡ್ಡಾಯವಾಗಿ ಮಾಡತಕ್ಕದ್ದು.
(ಎ) ಆದಾಯ ತೆರಿಗೆ
(ಬಿ) ಸರ್ಕಾರಿ ವಸತಿ ಗೃಹದ ಬಾಡಿಗೆ ಮತ್ತು ಸಂಬಂಧಿಸಿದ ವೆಚ್ಚಗಳು ಅಂದರೆ ವಿದ್ಯುಚ್ಛಕ್ತಿ, ನೀರು ಹಾಗೂ ಪೀಠೋಪಕರಣಗಳಿಗೆ ದರಗಳನ್ನು ವಿಧಿಸಿದ್ದರೆ
(ಸಿ) ಸಾಲಗಳು ಹಾಗೂ ಮುಂಗಡಗಳು
(ಡಿ) ಸಾಮೂಹಿಕ ವಿಮೆಯ ವಂತಿಗೆ

(2) ಇಚ್ಛಾನುಸಾರದ ವಸೂಲಾತಿಗಳು,-

(ಎ) ಅಂಚೆ ವಿಮೆಯ ಕಂತು

(ಬಿ) ಪತ್ತಿನ ಸಹಕಾರ ಸಂಘಗಳಿಗೆ ಸಲ್ಲಬೇಕಾದ ಮೊಬಲಗುಗಳು

(ಸಿ) ಸಾಮಾನ್ಯ ಭವಿಷ್ಯ ನಿಧಿ ಮುಂಗಡದ ಮರು ಪಾವತಿ ಕಂತು

(೩) ಅಮಾನತ್ತಿನ ಅವಧಿಯಲ್ಲಿ ಕಟಾವು ಮಾಡಬಾರದ ವಸೂಲಾತಿಗಳು,-

(ಎ) ಸಾಮಾನ್ಯ ಭವಿಷ್ಯ ನಿಧಿಗೆ ವಂತಿಗೆ
(ಬಿ) ನ್ಯಾಯಾಲಯದ ಜಪ್ತಿ ಆದೇಶದನ್ವಯ ವಸೂಲಾತಿಗಳು
(ಸಿ) ಸರ್ಕಾರಿ ನೌಕರನಿಂದ ಸರ್ಕಾರಕ್ಕೆ ಆದ ನಷ್ಟದ  ವಸೂಲಾತಿಗಳು.

25. ಅಮಾನತ್ತಿನ ಅವಧಿಯಲ್ಲಿ ಅಧೀನ ಅಧಿಕಾರಿ / ಸಿಬ್ಬಂದಿಯ ರಹಸ್ಯ ಕಾರ್ಯನಿರ್ವಹಣಾ ವರದಿಯನ್ನು ಬರೆಯಬಹುದೇ? ಅಮಾನತ್ತಿನಲ್ಲಿದ್ದ ಅಧಿಕಾರಿಯು ತಮ್ಮ ಅಧೀನ ಸಿಬ್ಬಂದಿಯವರ ರಹಸ್ಯ /ಕಾರ್ಯನಿರ್ವಹಣಾ ವರದಿಗಳನ್ನು ಬರೆಯುವಂತಿಲ್ಲ.

26. ಅಮಾನತ್ತಿನ ಅವಧಿಯಲ್ಲಿ ಜೀವನಾಧಾರ ಭತ್ಯೆ ನೀಡುವುದು ಕಡ್ಡಾಯವೇ?

ಅಮಾನತ್ತಿನ ಅವಧಿಯಲ್ಲಿ ಜೀವನಾಧಾರ ಭತ್ಯೆ ನೀಡುವುದು ಖಡ್ಡಾಯವಾಗಿದೆ. ಜೀವನಾಧಾರ ಭತ್ಯೆ ನೀಡದೆ ಇದ್ದುದರಿಂದ ವಿಚಾರಣೆಗೆ ಗೈರುಹಾಜರಾಗಿ, ಶಿಸ್ತು ಕ್ರಮಗಳು ದಂಡನೆಯಲ್ಲಿ ಮುಕ್ತಾಯವಾಗಿರುವುದನ್ನು ನ್ಯಾಯಾಲಯವು ಪರಿಗಣಿಸಿ, ವಿಚಾರಣೆಯನ್ನು ರದ್ದುಪಡಿಸಿದೆ. [Capt.M.Paul Anthony Vs Bharat Goid Mines Ltd. and another 1991 SCC (L&S) 810] ಅಮಾನತ್ತಿನ ಅವಧಿಯಲ್ಲಿನ ಪರಿಷ್ಕೃತ  ವೇತನ ಶ್ರೇಣಿ ಜಾರಿಗೆ ಬಂದಲ್ಲಿ ಅದರನ್ವಯ ಜೀವನಾಧಾರ ಭತ್ಯೆ ಪರಿಷ್ಕರಿಸಲು ಅರ್ಜಿ ಸಲ್ಲಿಸಬಹುದು [Summer Chand Khajuria Vs State and others, 1991(3) SLJ 168]

27. ದೀರ್ಘ ಅವಧಿಯ ಅಮಾನತ್ತನ್ನು ನ್ಯಾಯಾಲಯಗಳು ರದ್ದು ಪಡಿಸಿದೆ.-ಅಮಾನತ್ತನ್ನು ಯಾವುದೇ ಅವಧಿಗೆ ಸೀಮಿತಗೊಳಿಸದೆ ಮುಂದುವರೆಸವಂತಿಲ್ಲ ದೀಘ್ರ ಅವಧಿಯ ಅಮಾನತ್ತನ್ನು ನ್ಯಾಯಲಯಗಳು ರದ್ದು ಪಡಿಸಿವೆ [Kamal KishorePrasad Vs Union of India, 1990 (13) ATC 853 (CAT, New Delhi Branch)]

28. ಅಮಾನತ್ತಿನ ಬಗ್ಗೆ ಮಾರ್ಗಸೂಚಿಗಳು. ಅಮಾನತ್ತಿನ ಬಗ್ಗೆ ಸರ್ಕಾರವು ಕಾಲಾನುಕ್ರಮವಾಗಿ ಹೊರಡಿಸಿರುವ ಮಾರ್ಗಸೂಚಿಗಳು ಅಂದರೆ ಆದೇಶ/ಸುತ್ತೋಲೆ/ಜ್ಞಾಪನ ಇತ್ಯಾದಿಗಳು ಅಧಿಕೃತ https://dparar.karnataka.gov.in/en ವೆಬ್ಸೈಟ್ ನಲ್ಲಿ ಲಭ್ಯ ಇವೆ.

29. ಅಮಾನತ್ತಿನಲ್ಲಿ ಇಟ್ಟಿರುವ ಹಾಗೂ ಅಮಾನತ್ತನ್ನು ತೆರವುಗೊಳಿಸಿರುವ ಆದೇಶಗಳು.- ಸರ್ಕಾರಿ ಅಧಿಕಾರಿಗಳನ್ನು ಅಮಾನತ್ತಿನಲ್ಲಿಟ್ಟಿರುವ ಹಾಗೂ ಅಮಾನತ್ತು ತೆರವು ಗೊಳಿಸಿರುವ ಕೆಲವು ಆದೇಶಗಳ ಪ್ರತಿಗಳನ್ನು ಈ ಕೆಳಗೆ ಒದಗಿಸಲಾಗಿದೆ.

ಅಮಾನತ್ತಿನಲ್ಲಿಡುವ ಸಂದರ್ಭಗಳನ್ನು ಹಾಗೂ ಅಮಾನತ್ತು ತೆರವು ಗೊಳಿಸುವ ಸಂದರ್ಭಗಳನ್ನು ಅವುಗಳಲ್ಲಿ ವಿವರಿಸಲಾಗಿದೆ.

Necessity
ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

You cannot copy content of this page

error: Content is protected !!
Scroll to Top