Deepika Higher Education Scholarship-2026: ಯಾರು ಅರ್ಜಿ ಸಲ್ಲಿಸಬಹುದು? ಸಂಪೂರ್ಣ ಮಾಹಿತಿ ಇಲ್ಲಿದೆ

Deepika Higher Education Scholarship-2026: ಯಾರು ಅರ್ಜಿ ಸಲ್ಲಿಸಬಹುದು? ಸಂಪೂರ್ಣ ಮಾಹಿತಿ ಇಲ್ಲಿದೆ

 

Deepika Higher Education Scholarship-2026: 2025-26ನೇ ಸಾಲಿನಿಂದ ಅಜೀಂ ಪ್ರೇಂಜಿ ಫೌಂಡೇಷನ್ ಸಹಯೋಗದಲ್ಲಿ ಇಲಾಖೆಯಿಂದ ನೂತನವಾಗಿ ಜಾರಿಗೊಂಡಿರುವ “ದೀಪಿಕಾ” ವಿದ್ಯಾರ್ಥಿವೇತನ ಯೋಜನೆಯಡಿಯಲ್ಲಿ ಅಜೀಂ ಪ್ರೇಂಜೀ ವಿದ್ಯಾರ್ಥಿವೇತನ ಮತ್ತು ಪೂರಕ ವಿದ್ಯಾರ್ಥಿವೇತನಕ್ಕಾಗಿ 2ನೇ ಹಂತದಲ್ಲಿ (Round-2) ಅರ್ಜಿ ಸಲ್ಲಿಕೆಗೆ ಆಹ್ವಾನಿಸಿರುವ ಕುರಿತು.

ಉನ್ನತ ಶಿಕ್ಷಣ ಇಲಾಖೆ ಮತ್ತು ಅಜೀಂ ಪ್ರೇಂಜೀ ಫೌಂಡೇಷನ್ ಸಹಯೋಗದಲ್ಲಿ ರಾಜ್ಯದಲ್ಲಿ ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡಿ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆದಿರುವ ಅರ್ಹ ಹೆಣ್ಣು ಮಕ್ಕಳಿಗೆ ವಾರ್ಷಿಕ ರೂ.30,000/-ಗಳ ವಿದ್ಯಾರ್ಥಿವೇತನ ನೀಡುವ ಮೂಲಕ ಆರ್ಥಿಕ ಸಬಲೀಕರಣಗೊಳಿಸುವ ಉದ್ದೇಶದಿಂದ 2025-26 ನೇ ಸಾಲಿನಿಂದ “ದೀಪಿಕಾ” ಹೆಸರಿನಲ್ಲಿ “ಅಜೀಂ ಪ್ರೇಂಜೀ ವಿದ್ಯಾರ್ಥಿವೇತನ ಮತ್ತು ಪೂರಕ ವಿದ್ಯಾರ್ಥಿವೇತನ” ವನ್ನು ಜಾರಿಗೊಳಸಲಾಗಿರುತ್ತದೆ.

ಇದಕ್ಕೆ ಸಂಬಂಧಿಸಿದಂತೆ, ಸರ್ಕಾರಿ ಶಾಲೆ ಮತ್ತು ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡಿ 2025-26 ನೇ ಸಾಲಿಗೆ ವಿವಿಧ ಪ್ರಥಮ ಪದವಿಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿನಿಯರು ಅಜೀಂ ಪ್ರೇಂಜೀ ವಿದ್ಯಾರ್ಥಿವೇತನಕ್ಕಾಗಿ ಮೊದಲನೇ ಹಂತದಲ್ಲಿ ಅರ್ಜಿ ಸಲ್ಲಿಸುವ ಅವಧಿಯನ್ನು ದಿನಾಂಕ:30.09.2025ರವರೆಗೆ ನೀಡಲಾಗಿತ್ತು. ಪ್ರಸ್ತುತ, ಎರಡನೇ ಹಂತದಲ್ಲಿ (Round-2) ವಿದ್ಯಾರ್ಥಿವೇತನಕ್ಕೆ ದಿನಾಂಕ: 10.01.2026 ರಿಂದ 31.01.2026 ರವರೆಗೆ ಅರ್ಜಿ ಸಲ್ಲಿಸಲು ಆಹ್ವಾನಿಸಲಾಗಿದೆ. ಅರ್ಹ ವಿದ್ಯಾರ್ಥಿನಿಯರು ಈ ಮುಂದಿನ ಲಿಂಕ್ https://azimpremjifoundation.org/ಮೂಲಕ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.

ಸದರಿ ಯೋಜನೆಗೆ ಸಂಬಂಧಿಸಿದಂತೆ ಅರ್ಹತೆಗಳು ಮತ್ತು ಮಾರ್ಗ ಸೂಚಿಗಳನ್ನು ಈ ಕೆಳಗೆ ನೀಡಲಾಗಿದೆ.

ಅರ್ಜಿ ಸಲ್ಲಿಸಲು ವಿದ್ಯಾರ್ಥಿನಿಯರು ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು.



1. 10 ಮತ್ತು 12ನೇ ತರಗತಿಗಳನ್ನು (State/ICSE/ISE/CBSE) ಕಡ್ಡಾಯವಾಗಿ ಸರ್ಕಾರಿ ಶಾಲೆ ಮತ್ತು ಸರ್ಕಾರಿ ಕಾಲೇಜಿನಲ್ಲಿ ಅಭ್ಯಾಸ ಮಾಡಿರಬೇಕು.

2. 2025-26ನೇ ಶೈಕ್ಷಣಿಕ ಸಾಲಿನಲ್ಲಿ ಇಲಾಖಾ ವ್ಯಾಪ್ತಿಯ ಸರ್ಕಾರಿ ಮತ್ತು ಖಾಸಗಿ ಅನುದಾನಿತ ಪದವಿ ಕಾಲೇಜುಗಳಲ್ಲಿ ರೆಗ್ಯುಲರ್ ಪದವಿ ಕೋರ್ಸ್ ಗಳಿಗೆ ಪ್ರವೇಶ ಪಡೆದಿರಬೇಕು.

3. ಈಗಾಗಲೇ ಪದವಿ/ಡಿಪ್ಲೊಮಾ ಕೋರ್ಸುಗಳನ್ನು ಪೂರ್ಣಗೊಳಿಸಿ 2025-26ನೇ ಸಾಲಿನಲ್ಲಿ ಎರಡನೇ/ಹೆಚ್ಚಿನ ಪದವಿ/ಡಿಪ್ಲೊಮಾ ಕೋರ್ಸುಗಳಿಗೆ ಪ್ರವೇಶಾತಿ ಪಡೆದಿರುವ ವಿದ್ಯಾರ್ಥಿನಿಯರು ಅರ್ಹರಿರುವುದಿಲ್ಲ.

ವಿದ್ಯಾರ್ಥಿನಿಯರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಈ ಕೆಳಕಂಡ ಮಾರ್ಗಸೂಚಿಗಳನ್ನು ಅನುಸರಿಸಲು ಸೂಚಿಸಲಾಗಿದೆ.

ವಿದ್ಯಾರ್ಥಿನಿಯರ ನೊಂದಣಿ:


ಭಾಗ -01

1. ಮೊಬೈಲ್ ಸಂಖ್ಯೆ (OTP ಆಧಾರಿತ ಪರಿಶೀಲನೆ)

2. ಮೊಬೈಲ್ ಸಂಖ್ಯೆ (OTP ಆಧಾರಿತ ಪರಿಶೀಲನೆ)

3. ಪೂರ್ಣ ಹೆಸರು (10ನೇ ತರಗತಿಯ ಅಂಕಪಟ್ಟಿಯಲ್ಲಿ ಇರುವಂತೆ)

4. 10 ನೇ ತರಗತಿಯನ್ನು ಪೂರ್ಣಗೊಳಿಸಿದ ಜಿಲ್ಲೆ ಮತ್ತು ರಾಜ್ಯದ ಹೆಸರು (ಅಂಕ ಪಟ್ಟಿಯಲ್ಲಿರುವಂತೆ).

5. ಆಧಾ‌ರ್ ಸಂಖ್ಯೆ ನಮೂದಿಸುವುದು ಮತ್ತು ದೃಢೀಕರಿಸುವುದು

6. ಪಾಸ್ ವರ್ಡ್ ಸೃಜನೆ ಮತ್ತು ದೃಢೀಕರಿಸುವುದು

7. ನೊಂದಣಿಯನ್ನು ಪೂರ್ಣಗೊಳಿಸಿದ ನಂತರ ಅರ್ಜಿದಾರರು ತಮ್ಮ User ID ಯನ್ನು ಅವರ ಮೊಬೈಲ್ ನಲ್ಲಿ ಸ್ವೀಕರಿಸುತ್ತಾರೆ.

8. ನಂತರ ಅರ್ಜಿ ಸಲ್ಲಿಸಲು User ID and Password ನೊಂದಿಗೆ ಲಾಗಿನ್ ಮಾಡುವುದು.

ಭಾಗ-02:

1. ಪಾಸ್ ಪೋರ್ಟ್ ಅಳತೆಯ ಛಾಯಚಿತ್ರ
2. ಸಹಿ ಆಧಾರ ಕಾರ್ಡ್

ಅರ್ಜಿ ಸಲ್ಲಿಕೆಗೆ (ಅಗತ್ಯವಿರುವ ದಾಖಲೆಗಳು)


1. ಪಾಸ್ ಪೋರ್ಟ್ ಅಳತೆಯ ಛಾಯಚಿತ್ರ
2. ಸಹಿ ಆಧಾರ ಕಾರ್ಡ್

4. ಬ್ಯಾಂಕ್ ವಿವರಗಳು
5. 10 ನೇ ತರಗತಿಯ ಅಂಕಪಟ್ಟಿ
6. 12 ನೇ ತರಗತಿಯ ಅಂಕಪಟ್ಟಿ
7. ಕಾಲೇಜು ಪ್ರವೇಶ ಪುರಾವೆ

ಸದರಿ ಯೋಜನೆಗೆ ಸಂಬಂಧಿಸಿದಂತೆ, ಇಲಾಖೆಯು ಸಲ್ಲಿಸುವ ವಿಡಿಯೋಗಳು, ಕರಪತ್ರಗಳು ಹಾಗೂ ಇತರೆ ಸಾಮಗ್ರಿಗಳನ್ನು ಬಳಸಿ ಕಾಲೇಜುಗಳ ಹಂತದಲ್ಲಿ ಪ್ರಚಾರ ಕೈಗೊಳ್ಳಲು ಹಾಗೂ ಈಗಾಗಲೇ ಕಾಲೇಜುಗಳ ಹಂತದಲ್ಲಿ ವಿದ್ಯಾರ್ಥಿವೇತನಕ್ಕೆ ನೇಮಕಗೊಂಡಿರುವ ಸಮನ್ವಯಾಧಿಕಾರಿಯನ್ನೇ ಸದರಿ ಯೋಜನೆಗೂ ನೇಮಿಸಿ, ಅರ್ಹರಿರುವ ಎಲ್ಲಾ ವಿದ್ಯಾರ್ಥಿನಿಯರು ಕಡ್ಡಾಯವಾಗಿ ಅರ್ಜಿ ಸಲ್ಲಿಸಲು ಸೂಕ್ತ ಕ್ರಮ ವಹಿಸಲು ಸೂಚಿಸಲಾಗಿದೆ.

ಕಾಲೇಜು ಹಂತದಲ್ಲಿ ಅರ್ಹ ವಿದ್ಯಾರ್ಥಿನಿಯರು ಅರ್ಜಿಗಳನ್ನು ಸಲ್ಲಿಸಲು ಕಾಲೇಜಿನ ಪ್ರಾಂಶುಪಾಲರು KIOSK ಸೌಲಭ್ಯವನ್ನು (Computer, Internet, Scanner, Printer & Operator)

ರೂಪುರೇಷೆಗಳು:


*ಪ್ರತಿ ವರ್ಷ ರೂ.30,000/- ವಿದ್ಯಾರ್ಥಿವೇತನ
*ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ
*ಕೋರ್ಸ್ ಅವಧಿಯುದ್ದಕ್ಕೂ ಲಭ್ಯತೆ
*ವಿದ್ಯಾರ್ಥಿನಿಯರಿಗೆ ಆರ್ಥಿಕ *ಬೆಂಬಲ-ಸಾಮಾಜಿಕ ನ್ಯಾಯ
*ವಿದ್ಯಾರ್ಥಿನಿಯರ ಸಬಲೀಕರಣ

ಅರ್ಹತೆಗಳು:

* ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ 10 ಮತ್ತು 12ನೇ ತರಗತಿ (State/ICSE/ISC/CBSE) ವ್ಯಾಸಂಗ ಪೂರೈಸಿರಬೇಕು
*2025-26ನೇ ಸಾಲಿನಲ್ಲಿ ಸರ್ಕಾರಿ/ಖಾಸಗಿ ಅನುದಾನಿತ/ಖಾಸಗಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ರೆಗ್ಯುಲ‌ರ್ ಸಾಮಾನ್ಯ ಪದವಿ/ವೃತ್ತಿಪರ ಪದವಿ/ ಇತರ ಪದವಿ/ ಡಿಪ್ಲೊಮಾ ಕೋರ್ಸ್‌ಗಳಿಗೆ ಪ್ರವೇಶಾತಿ ಪಡೆದಿರಬೇಕು

ಅಜೀಂ ಪ್ರೇಮ್‌ಜಿ ಸ್ಕಾಲರ್‌ಶಿಪ್:

ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು:


1. ಅಜೀಂ ಪ್ರೇಮ್‌ಜಿ ಸ್ಕಾಲರ್‌ಶಿಪ್‌ನ ಉದ್ದೇಶವೇನು?

ಅಜೀಂ ಪ್ರೇಮ್‌ಜಿ ಸ್ಕಾಲರ್‌ಶಿಪ್‌ನ ಉದ್ದೇಶವು ಅವಕಾಶವಂಚಿತ ಹಿನ್ನೆಲೆಗಳುಳ್ಳ ವಿದ್ಯಾರ್ಥಿನಿಯರಿಗೆ ತಮ್ಮ ಕಾಲೇಜು ಶಿಕ್ಷಣವನ್ನು ಮುಂದುವರಿಸಲು ನೆರವು ನೀಡುವುದಾಗಿದೆ. ಈ ಉಪಕ್ರಮವು ಭಾರತದಲ್ಲಿ ಶಿಕ್ಷಣದ ಗುಣಮಟ್ಟ ಮತ್ತು ಸಮಾನತೆಯನ್ನು ಸುಧಾರಿಸುವ ಅಜೀಂ ಪ್ರೇಮ್‌ಜಿ ಫೌಂಡೇಷನ್‌ನ ಒಟ್ಟಾರೆ ಬದ್ಧತೆಯ ಭಾಗವಾಗಿದೆ.

2. ಅಜೀಂ ಪ್ರೇಮ್‌ಜಿ ಸ್ಕಾಲರ್‌ಶಿಪ್‌ಗೆ 2025-26ರಲ್ಲಿ ಯಾರು ಅರ್ಹರು?

ಈ ಕೆಳಗಿನ ಅರ್ಹತೆಗಳನ್ನು ಹೊಂದಿರುವ ವಿದ್ಯಾರ್ಥಿನಿಯರು ಅರ್ಜಿ ಸಲ್ಲಿಸಬಹುದು:

10 ಮತ್ತು 12 – ಈ ಎರಡೂ ತರಗತಿಗಳನ್ನು ಅರ್ಹ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇರುವ ಸರ್ಕಾರಿ ಶಾಲೆ ಅಥವಾ ಕಾಲೇಜುಗಳಲ್ಲಿ ಒಬ್ಬ ಸಾಮಾನ್ಯ ವಿದ್ಯಾರ್ಥಿಯಾಗಿ ಓದಿ, ತೇರ್ಗಡೆ ಹೊಂದಿರಬೇಕು.

ಅರ್ಜಿ ಸಲ್ಲಿಸುವ ಸಮಯದಲ್ಲಿ, ಸರ್ಕಾರಿ ಅಥವಾ ಪ್ರತಿಷ್ಠಿತ, ಮಾನ್ಯತೆ ಪಡೆದ ಖಾಸಗಿ ಕಾಲೇಜು ಅಥವಾ ವಿಶ್ವವಿದ್ಯಾಲಯದ ಪದವಿ ಕಾರ್ಯಕ್ರಮ ಅಥವಾ ಡಿಪ್ಲೊಮಾ ಕೋರ್ಸಿನ (2 ರಿಂದ 5 ವರ್ಷಗಳ ಅವಧಿಯ ಕಾರ್ಯಕ್ರಮಗಳು) ಮೊದಲ ವರ್ಷಕ್ಕೆ (ಶೈಕ್ಷಣಿಕ ವರ್ಷ 2025-26) ಸಾಮಾನ್ಯ ವಿದ್ಯಾರ್ಥಿಯಾಗಿ ಪ್ರವೇಶ ಪಡೆದಿರಬೇಕು. ಇದು ಅರ್ಜಿದಾರರ ಮೊದಲ ಪದವಿ ಅಥವಾ ಡಿಪ್ಲೊಮ ಆಗಿರಬೇಕು.

ಈ ಕೆಳಗಿನ ಸಂದರ್ಭಗಳಲ್ಲಿ ನಿಮ್ಮನ್ನು ಸ್ಕಾಲರ್‌ಷಿಪ್‌ಗೆ ಪರಿಗಣಿಸಲಾಗುವುದಿಲ್ಲ:

ನೀವು 2025-26 ಶೈಕ್ಷಣಿಕ ವರ್ಷಕ್ಕೆ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಯಾವುದೇ ಕಾರ್ಯಕ್ರಮದಲ್ಲಿ ಪ್ರವೇಶ ಪಡೆದಿದ್ದೀರ.

ನೀವು ವಿಪ್ರೋದ ಸ್ಕಾಲರ್‌ಶಿಪ್‌ಗಳನ್ನು (ಉದಾ. ಸಂತೂರ್ ಸ್ಕಾಲರ್‌ಶಿಪ್) ಪಡೆಯುತ್ತಿದ್ದೀರ.

3. 2025-26ರಲ್ಲಿ ಯಾವ ರಾಜ್ಯಗಳು ಅಥವಾ ಕೇಂದ್ರಾಡಳಿತ ಪ್ರದೇಶಗಳು ಅರ್ಹತೆ ಪಡೆದಿವೆ?

10 ಮತ್ತು 12 ಈ ಎರಡೂ ತರಗತಿಗಳನ್ನು ಅರ್ಹ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇರುವ ಸರ್ಕಾರಿ ಶಾಲೆ ಅಥವಾ ಕಾಲೇಜುಗಳಲ್ಲಿ ಒಬ್ಬ ಸಾಮಾನ್ಯ

ವಿದ್ಯಾರ್ಥಿಯಾಗಿ ಓದಿ, ತೇರ್ಗಡೆ ಹೊಂದಿರುವ ಎಲ್ಲ ವಿದ್ಯಾರ್ಥಿನಿಯರೂ ಅರ್ಹರು.

(1) ಅರುಣಾಚಲ ಪ್ರದೇಶ, (2) ಅಸ್ಸಾಂ, (3) ಬಿಹಾರ, (4) ಛತ್ತೀಸ್‌ಗಢ, (5) ಜಾರ್ಖಂಡ್, (6) ಕರ್ನಾಟಕ, (7) ಮಧ್ಯಪ್ರದೇಶ, (8) ಮಣಿಪುರ, (9) ಮೇಘಾಲಯ, (10) ಮಿಜೋರಾಂ, (11) ನಾಗಾಲ್ಯಾಂಡ್, (12) ಒಡಿಶಾ, (13) ರಾಜಸ್ಥಾನ. (14) ಸಿಕ್ಕಿಂ, (15) ತೆಲಂಗಾಣ, (16) ತ್ರಿಪುರ, (17) ಉತ್ತರ ಪ್ರದೇಶ, (18) ಉತ್ತರಾಖಂಡ ಮತ್ತು (19) ಪುದುಚೇರಿ.

4. ನಾನು ದೂರ ಶಿಕ್ಷಣದಲ್ಲಿ (distance learning) ನನ್ನ ಪದವಿ/ಡಿಪ್ಲೊಮ ಅನ್ನು ಮಾಡುತ್ತಿದ್ದರೆ, ಸ್ಕಾಲರ್‌ಷಿಪ್‌ಗೆ ಅರ್ಹಳೇ?

ಇಲ್ಲ. ಅರ್ಜಿ ಸಲ್ಲಿಸುವ ಸಮಯದಲ್ಲಿ, ನೀವು ಶೈಕ್ಷಣಿಕ ವರ್ಷ 2025-26ರಲ್ಲಿ ಪದವಿ ಅಥವಾ ಡಿಪ್ಲೊಮಾ ಕಾರ್ಯಕ್ರಮದ ಮೊದಲ ವರ್ಷಕ್ಕೆ ಸಾಮಾನ್ಯ ವಿದ್ಯಾರ್ಥಿಯಾಗಿ ಪ್ರವೇಶ ಪಡೆದಿರಬೇಕು. ನೀವು ಪ್ರವೇಶ ಪಡೆದಿರುವ ಕಾಲೇಜು ಸರ್ಕಾರಿ ಅಥವಾ ಖಾಸಗಿ ಆಗಿರಬಹುದು. ಆದರೆ ಅದು ಪ್ರತಿಷ್ಠಿತ, ಮಾನ್ಯತೆ ಪಡೆದ ಖಾಸಗಿ ಕಾಲೇಜುಅಥವಾ ವಿಶ್ವವಿದ್ಯಾಲಯ ಆಗಿರಬೇಕು. ನೀವು ಪ್ರವೇಶ ಪಡೆದಿರುವ ಕಾಲೇಜು ಭಾರತದಲ್ಲಿ ಎಲ್ಲಿ ಬೇಕಾದರೂ ಇರಬಹುದು. ನೀವು ಪ್ರವೇಶ ಪಡೆದಿರುವ ಪದವಿ ಅಥವಾ ಡಿಪ್ಲೊಮಾ ಕಾರ್ಯಕ್ರಮದ ಅವಧಿಯು 2-5 ವರ್ಷಗಳಾಗಿರಬೇಕು. ಇದು ನಿಮ್ಮ ಮೊದಲ ಪದವಿ ಅಥವಾ ಡಿಪ್ಲೊಮಾ ಆಗಿರಬೇಕು.

5. ನಾನು ನನ್ನ ಪದವಿ/ಡಿಪ್ಲೊಮದ ಎರಡು, ಮೂರು, ನಾಲ್ಕು ಅಥವಾ ಐದನೇ ವರ್ಷದಲ್ಲಿ ಓದುತ್ತಿದ್ದರೆ, ಸ್ಕಾಲರ್‌ಷಿಪ್‌ ಅರ್ಹಳೇ?

ಇಲ್ಲ. ಅರ್ಜಿ ಸಲ್ಲಿಸುವ ಸಮಯದಲ್ಲಿ, ಭಾರತದ ಯಾವುದೇ ಸರ್ಕಾರಿ ಅಥವಾ ಪ್ರತಿಷ್ಠಿತ, ಮಾನ್ಯತೆ ಪಡೆದ ಖಾಸಗಿ ಕಾಲೇಜು ಅಥವಾ ವಿಶ್ವವಿದ್ಯಾಲಯದ ಪದವಿ ಕಾರ್ಯಕ್ರಮ ಅಥವಾ ಡಿಪ್ಲೊಮಾ ಕೋರ್ಸಿನ (2 ರಿಂದ 5 ವರ್ಷಗಳ ಅವಧಿಯ ಕಾರ್ಯಕ್ರಮಗಳು) ಮೊದಲ ವರ್ಷಕ್ಕೆ (ಶೈಕ್ಷಣಿಕ ವರ್ಷ 2025-26) ಸಾಮಾನ್ಯ ವಿದ್ಯಾರ್ಥಿಯಾಗಿ ಪ್ರವೇಶ ಪಡೆದಿರಬೇಕು. ಇದು ಅರ್ಜಿದಾರರ ಮೊದಲ ಪದವಿ ಅಥವಾ ಡಿಪ್ಲೊಮ ಆಗಿರಬೇಕು.

6. ಅಜೀಂ ಪ್ರೇಮ್‌ಜಿ ಸ್ಕಾಲರ್‌ಶಿಪ್ ಅನ್ನು ಮೆರಿಟ್ ಆಧಾರದ ಮೇಲೆ ನೀಡಲಾಗುವುದೇ?

ಇಲ್ಲ, ಸ್ಕಾಲರ್‌ಶಿಪ್ ಅನ್ನು ಮೆರಿಟ್ ಆಧಾರದ ಮೇಲೆ ನೀಡುವುದಿಲ್ಲ; ಆದಾಗ್ಯೂ, ಪ್ರಶ್ನೆ 2 ರಲ್ಲಿ ನಿರ್ದಿಷ್ಟಪಡಿಸಿದ ಇತರ ಅರ್ಹತಾ ಮಾನದಂಡಗಳನ್ನು ನೀವು ಪೂರೈಸಬೇಕು.

7. ಅಜೀಂ ಪ್ರೇಮ್‌ಜಿ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಲು ವಯಸ್ಸಿನ ಮಿತಿ ಇದೆಯೇ?

ಇಲ್ಲ, ವಯಸ್ಸಿನ ಮಿತಿಯಿಲ್ಲ; ಅದಾಗ್ಯೂ, ಪ್ರಶ್ನೆ 3 ರಲ್ಲಿ ನಿರ್ದಿಷ್ಟಪಡಿಸಿದ ಇತರ ಅರ್ಹತಾ ಮಾನದಂಡಗಳನ್ನು ನೀವು ಪೂರೈಸಬೇಕು.

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ:31-01-2026

Deepika Higher Education Scholarship

CLICK HERE TO DOWNLOAD NOTIFICATION

CLICK HERE TO ONLINE APPLICATION

 

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

You cannot copy content of this page

error: Content is protected !!
Scroll to Top