AISSEE 2026: ಸೈನಿಕ ಶಾಲಾ ಪ್ರವೇಶ ಪರೀಕ್ಷೆ ಉತ್ತರ ಕೀ ಬಿಡುಗಡೆ
AISSEE 2026– ಸೈನಿಕ ಶಾಲಾ ಪ್ರವೇಶ ಪರೀಕ್ಷೆ ಉತ್ತರ ಕೀ ಬಿಡುಗಡೆ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ
(NTA) ಅಖಿಲ ಭಾರತ ಸೈನಿಕ್ ಶಾಲಾ ಪ್ರವೇಶ ಪರೀಕ್ಷೆ (AISSEE) 2026ರ ತಾತ್ಕಾಲಿಕ ಉತ್ತರ ಕೀಯನ್ನು ಅಧಿಕೃತ . ವೆಬ್ಸೈಟ್ನಲ್ಲಿ ಬಿಡುಗಡೆ ಮಾಡಿದೆ.
ದೇಶಾದ್ಯಂತ ಪರೀಕ್ಷೆಯನ್ನು ಜ. 18ರಂದು 464 ಪರೀಕ್ಷಾ ಕೇಂದ್ರಗಳಲ್ಲಿ ಪೆನ್ನು ಮತ್ತು ಕಾಗದದ ವಿಧಾನದಲ್ಲಿ ನಡೆಸಲಾಯಿತು.
ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಈಗ
ಬಿಡುಗಡೆಯಾದ ಉತ್ತರ ಕೀಯೊಂದಿಗೆ ತಮ್ಮ
ಉತ್ತರ ಪತ್ರಿಕೆಗಳನ್ನು ಪರಿಶೀಲಿಸಬಹುದು.
ಆ ಮೂಲಕ ತಮ್ಮ ಸಂಭಾವ್ಯ ಅಂಕಗಳನ್ನು
ಅಂದಾಜು ಮಾಡಬಹುದಾಗಿದೆ.
ಪ್ರಶ್ನೆಗೆ ಉತ್ತರಕ್ಕೆ ಆಕ್ಷೇಪಣೆಗಳನ್ನು ಹೊಂದಿದ್ದರೆ, ಪ್ರತಿ ಪ್ರಶ್ನೆಗೆ 200/- ರೂ. ಮರುಪಾವತಿಸಲಾಗದ ಶುಲ್ಕವನ್ನು ಪಾವತಿಸುವ ಮೂಲಕ ಆನ್ಲೈನ್ನಲ್ಲಿ ಅದನ್ನು ಪ್ರಶ್ನಿಸಬಹುದು. ಎಲ್ಲ ಆಕ್ಷೇಪಣೆಗಳನ್ನು ಪರಿಶೀಲಿಸಿದ ನಂತರ ಅಂತಿಮ ಉತರ ಕೀಲಿಯನ್ನು ಬಿಡುಗಡೆ ಮಾಡಲಾಗುತ್ತದೆ.
ಆಕ್ಷೇಪಣೆಗೆ ನಿಯಮಗಳ ಅರ್ಥೈಸುವಿಕೆ:
▪️ ಸಂಸ್ಕರಣಾ ಶುಲ್ಕವನ್ನು ಸ್ವೀಕರಿಸದೆ ಆಕ್ಷೇಪಣೆಯನ್ನು ಪರಿಗಣಿಸಲಾಗುವುದಿಲ್ಲ.
▪️ ಅಭ್ಯರ್ಥಿಗಳು ಎತ್ತಿರುವ ಆಕ್ಷೇಪಣೆಗಳನ್ನು ವಿಷಯ ತಜ್ಞರ ಸಮಿತಿಯು ಪರಿಶೀಲಿಸುತ್ತದೆ.
▪️ ಪರಿಷ್ಕೃತ ಅಂತಿಮ ಉತ್ತರ ಕೀಲಿಯ ಆಧಾರದ ಮೇಲೆ ಮಾತ್ರ ಫಲಿತಾಂಶವನ್ನು ಸಿದ್ಧಪಡಿಸಲಾಗುತ್ತದೆ.
▪️ ಅಭ್ಯರ್ಥಿಗಳಿಗೆ ಅವರ ಆಕ್ಷೇಪಣೆಯನ್ನು ಸ್ವೀಕರಿಸಿದ ಅಥವಾ ತಿರಸ್ಕರಿಸಿದ ಬಗ್ಗೆ ಪ್ರತ್ಯೇಕವಾಗಿ ತಿಳಿಸಲಾಗುವುದಿಲ್ಲ.
▪️ ಆಕ್ಷೇಪಣೆಯ ನಂತರ ನೀಡಲಾಗುವ ಅಂತಿಮ ಉತ್ತರದ ಕೀಲಿ ಮಾತ್ರ ಮಾನ್ಯ.
▪️ ಫಲಿತಾಂಶ ಪ್ರಕಟವಾದ ನಂತರ ಉತ್ತರ ಕೀಲಿಯ ಕುರಿತು ಯಾವುದೇ ದೂರನ್ನು ಸ್ವೀಕರಿಸಲಾಗುವುದಿಲ್ಲ.
OMR ಬಗ್ಗೆ ಆಕ್ಷೇಪಣೆ ಸಲ್ಲಿಸುವ ವಿಧಾನ:
▪️ಅಭ್ಯರ್ಥಿಗಳು OMR ಗ್ರೇಡಿಂಗ್ನಿಂದ ತೃಪ್ತರಾಗದಿದ್ದರೆ, ಪ್ರತಿ ಪ್ರಶ್ನೆಗೆ 100/- ರೂ. ಶುಲ್ಕವನ್ನು ಪಾವತಿಸುವ ಮೂಲಕ ಆಕ್ಷೇಪಣೆ ಸಲ್ಲಿಸಬಹುದು.
▪️ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಪಾವತಿ ಮಾಡಬಹುದು.
▪️ ಎನ್ಟಿಎ ತನ್ನ ದಾಖಲೆಗಳ ವಿರುದ್ಧ ಆಕ್ಷೇಪಣೆಗಳನ್ನು ಪರಿಶೀಲಿಸುತ್ತದೆ. ಆಕ್ಷೇಪಣೆ ಸರಿಯಾಗಿದೆ ಎಂದು ಕಂಡುಬಂದಲ್ಲಿ, ಸಂಬಂಧಿತ ಡೇಟಾವನ್ನು ನವೀಕರಿಸಲಾಗುತ್ತದೆ.
ಆಕ್ಷೇಪಣೆಗೆ ಅಧಿಕೃತ ವೆಬ್ ಸೈಟ್ exams. nta.nic.in/sainik-school-society ಅನ್ನು ಸಂಪರ್ಕಿಸಿರಿ. ಎನ್ಟಿಎ ಸಹಾಯವಾಣಿ ಸಂಖ್ಯೆ 011-69227700 ಅಥವಾ 011-40759000 ಗೇ ಕರೆ ಮಾಡಬಹುದು ಅಥವಾ aissee@nta.ac.inಗೆ ಇಮೇಲ್ ಮೂಲಕವೂ ತಿಳಿಸಬಹುದು.



