Government Servants : ಸರ್ಕಾರಿ ನೌಕರರು – ಸರ್ಕಾರ ನಡುವಿನ ಸಂಬಂಧ
Government Servants: ಸರ್ಕಾರಿ ನೌಕರರು ಸರ್ಕಾರದ ಆಡಳಿತ ಯಂತ್ರದ ಬೆನ್ನೆಲುಬಾಗಿದ್ದಾರೆ. ವಾಸ್ತವವಾಗಿ ಅವರು ಸರ್ಕಾರದ ಆಸ್ತಿಯೆನ್ನಿಸುತ್ತಾರೆ. ಇವರುಗಳು ಸರ್ಕಾರಕ್ಕೆ ತನ್ನ ನಿಷ್ಕಪಟ, ನಿಷ್ಕಳಂಕ ಹಾಗು ನಿಷ್ಠಾಪೂರ್ವ ಸೇವೆ ಸಲ್ಲಿಸತಕ್ಕದ್ದಾಗಿದೆ. ಹಾಗಾಗಿ, ನಮ್ಮ ಸಂವಿಧಾನದಲ್ಲಿ ಸರ್ಕಾರಿ ನೌಕರರುಗಳಿಗೆ ಪ್ರಾಶಸ್ತವಿದೆ. ಅವರಿಗೊಂದು ಅಂತಸ್ತು ಹಾಗು ಸ್ಥಾನಮಾನ ನೀಡಲಾಗಿದೆ. ಅವರ ನಿರಾಳ ಜೀವನಕ್ಕೂ ಅನುಕೂಲವಾಗುವಂತೆ ಸೌಕರ್ಯಗಳನ್ನ ಸರ್ಕಾರವು ಒದಗಿಸಲು ವಿಧಿವಿಧಾನಗಳನ್ನು ರೂಪಿಸಿದೆ.
ಸರ್ಕಾರಿ ನೌಕರರು ಹೀಗೆ ನಿಷ್ಕಪಟ, ನಿಷ್ಕಳಂಕ ಹಾಗೂ ನಿಷ್ಠಾಪೂರ್ವ ಸೇವೆ ಸಲ್ಲಿಸುವಾಗ ಅವರುಗಳು ಸೇವೆಯಲ್ಲಿ ಭದ್ರತೆ ಬಗ್ಗೆ ಆಶೋತ್ತರಗಳನ್ನು ಹೊಂದಿರುವುದು ಸಹಜವಾದ ವಿಷಯ. ಸ್ವಾತಂತ್ರ ಪೂರ್ವದ ಅವಧಿಯಲ್ಲಿ ಇದ್ದಂತಹ “ಬೇಕಾದಾಗ ನೇಮಕ ಮಾಡಿಕೊಂಡು ಬೇಡವೆನಿಸಿದಾಗ ಸೇವೆಯಿಂದ ಕಿತ್ತು ಹಾಕುವ” ವ್ಯವಧಾನಕ್ಕೆ ನಮ್ಮ ಸಂವಿಧಾನದಲ್ಲಿ ಅವಕಾಶ ಮಾಡಿಲ್ಲ. ಅವರ ಅನೂಚಾನ ಸೇವೆಗೆ ಭಯ ಭೀತಿಇಲ್ಲದ ವಾತಾವರಣವೂ ಕೂಡ ಅವಶ್ಯಕ. ಆದ್ದರಿಂದ ಸರ್ವೋಚ್ಛ ನ್ಯಾಯಾಲಯವು ಹೆಸರಾಂತ ಪ್ರಕರಣವೊಂದರಲ್ಲಿ ಈ ಕೆಳಗಿನಂತೆ ಆದೇಶ ಎತ್ತಿದೆ.
“in regard to honest, straight forward and efficient, permanent civil servant, it is of utmost importance even from point of view of the State that they should enjoy a sense of security which alone can make them independent and truly efficient”
(Motiram Deka Vs North Eastern Frontier Railway (AIR 1964 SC 600-611)
ಆದ್ದರಿಂದ, ಸಂವಿಧಾನದ ವಿಧಿ 309 ರ ಅಡಿಯಲ್ಲಿ ಸರ್ಕಾರಿ ನೌಕರರುಗಳಿಗೆ ಸೇವಾ ನಿಯಮಗಳನ್ನು ಸರ್ಕಾರವು ರಚಿಸಿ ಅವರುಗಳಿಗೆ ಸೇವಾ ಭದ್ರತೆಯನ್ನು ನೀಡಲಾಗಿದೆ. 건영 ನೌಕರರುಗಳು ಇಷ್ಟೆಲ್ಲಾ ಸೇವಾಭದ್ರತೆ ಮತ್ತು ಸೌಕರರ್ಯಗಳನ್ನು ಬಳಸಿಕೊಂಡಾಗ್ಯೂ ಅವರುಗಳ ನಡತೆಯಲ್ಲಿ ಪ್ರಶ್ನಿಸ ಬಹುದಾದಂತಹ ಘಟನೆಗಳನ್ನು ಕಂಡಲ್ಲಿ ಹಾಗೂ ಅಂತಹ ಘಟನೆಗಳು ಸರ್ಕಾರದ ಹಿತಕ್ಕೆ ಭಾದಕವಾಗುವಂತಿದ್ದಲ್ಲಿ ಅಂತಹ ನೌಕರರುಗಳನ್ನು ದಂಡಿಸಲೂ ಕೂಡ ಅದೇ ಸಂವಿಧಾನದ ವಿಧಿ 310 ಮತ್ತು 311 ರಲ್ಲಿ ವ್ಯವಧಾನಗಳನ್ನು ರೂಪಿಸಲಾಗಿದೆ.
ದುರ್ನಡತೆ ಎಂದರೇನು? ಅವುಗಳು ಯಾವುವು?. What is misconduct? What are they?.
ಹೀಗಾಗಿ, ಸರ್ಕಾರಿ ನೌಕರರುಗಳು ಎಸಗುವ ಸರ್ಕಾರಕ್ಕೆ ಹಿತವಲ್ಲದ ಹಾಗೂ ಮಾರಕವಾಗುವಂತಹ ಕೃತ್ಯಗಳನ್ನು/ತಪ್ಪುಗಳನ್ನು ದುರ್ನಡತೆಗಳೆಂದು ಹೇಳಲಾಗಿದೆ. ಸಂವಿಧಾನದ ವಿಧಿ 309 ರ ಅಡಿಯಲ್ಲಿ ಸರ್ಕಾರವು ನಡತೆ ನಿಯಾಮವಳಿಗಳನ್ನು ಜಾರಿ ಮಾಡಿದೆ. ಅದರಲ್ಲಿ, ಸರ್ಕಾರಿ ನೌಕರನ ಮೇಲೆ ಒಂದು ರೀತಿಯ ನಿಯಂತ್ರಣವನ್ನು ಸಾಧಿಸಲು ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಆ ಆತ ಸರ್ಕಾರಕ್ಕೆ © ಉತ್ತಮವಾಗಿ ನಡೆದುಕೊಂಡು, ದುಷ್ಕೃತ್ಯಗಳನ್ನು ಎಸಗದೆ, ತನಗೆ ಕೊಟ್ಟ ಜವಾಬ್ದಾರಿಯನ್ನು ವ್ಯವಸ್ಥಿತವಾಗಿ ಕೈಗೊಂಡು, ಸರ್ಕಾರದ ಹಿತವನ್ನು ಕಾಪಾಡಬೇಕಾಗಿದೆ.
ಸರ್ಕಾರಿ ನೌಕರರ ದುರ್ನಡತೆ ಯಾವುವು ಎಂಬ ಬಗ್ಗೆ ಕೆ.ಸಿ.ಎಸ್. ನಡತೆ ನಿಯಮಾವಳಿಗಳು, 1966 ಎಂಬುದರಲ್ಲಿ ಸಾಕಷ್ಟು ವಿವರಣೆಗಳಿವೆ. ಇತ್ತೀಚೆಗೆ ಇವುಗಳಿಗೆ ಸಾಕಷ್ಟು ತಿದ್ದುಪಡಿಯನ್ನು ಸರ್ಕಾರವು ತಂದಿದ್ದು ಇನ್ನೂ ಕೆಲವು ಕೃತ್ಯ/ತಪ್ಪುಗಳನ್ನು ದುರ್ನಡತೆಗಳೆಂದು ಸ್ಪಷ್ಟಪಡಿಸಿದೆ. ಈ ನಿಯಮದಲ್ಲಿ ಹೇಳಿರುವುದಕ್ಕೆ ವಿರೋಧವಾಗಿ ನೌಕರನು ನಡೆದುಕೊಂಡಲ್ಲಿ ಇಲಾಖಾ ವಿಚಾರಣೆಗಳು ಅನಿವಾರ್ಯ. ಈ ನೌಕರರುಗಳ ದುರ್ನಡತೆಗಳ ಬಗ್ಗೆ ರಾಷ್ಟ್ರದ ಸರ್ವೋಚ್ಛ ನ್ಯಾಯಾಲಯವು ಸ್ಪಷ್ಟವಾಗಿ (State of Punjab Vs Ram Singh (1993) 1 LLJ 218; 1992 AIR (SC) 2188) ລ ಪ್ರಕರಣದಲ್ಲಿ ಅರ್ಥಪೂರ್ಣವಾದ ಮಾರ್ಗದರ್ಶನ ನೀಡಿದೆ. ಯಾವ ಒಬ್ಬ ನೌಕರನು ದುರ್ನಡತೆ ಎಂಬ ಪದಕ್ಕೆ ಅರ್ಥ ಬರುವಂತೆ ಕೃತ್ಯಗಳನ್ನು ಎಸಗುತ್ತಾನೋ ಆಗ ಅವನ ಕೆಲಸ ಕಾರ್ಯಗಳಲ್ಲಿ ಶಿಸ್ತು ಇಲ್ಲದೆ ಹೋಗಿ ಜವಾಬ್ದಾರಿಯಲ್ಲಿ ತೊಡಕುಗಳು ಉಂಟಾಗುತ್ತವೆ. ನೈತಿಕತೆಗೆ ವಿರೋಧವಾದ, ತಪ್ಪು ನಡತೆಗಳ/ಕಾನೂನು/ಕಾಯ್ದೆ ಬಾಹಿರವಾದ ಕೃತ್ಯಗಳು ಸರ್ಕಾರ ಅನುಸರಿಸುವ ರೀತಿ ನೀತಿಗಳಿಗೆ ವಿರೋಧವಾದ ಮತ್ತು ನಡತೆ ನಿಯಮಾವಳಿಗಳಿಗೆ ವಿರೋಧವಾದ ಕೃತ್ಯಗಳು ಅವನಿಂದ ನಡೆಯಲ್ಪಡುತ್ತವೆ. ಅವನ್ನು ದುರ್ನಡತೆಗಳೆಂದು ಪ್ರಾಧಿಕಾರವು ಪರಿಗಣಿಸುತ್ತದೆ. ಅದೇ ಇಲಾಖಾ ವಿಚಾರಣೆಗೆ ದಾರಿ ಮಾಡಿಕೊಡುತ್ತದೆ. ಇಷ್ಟೆಲ್ಲಾ ವಿವರವನ್ನು ಸರ್ವೋಚ್ಛ ನ್ಯಾಯಾಲಯವು ದುರ್ನಡತೆ ಎಂಬ ಪದಕ್ಕೆ ಅರ್ಥವತ್ತಾಗಿ ವಿವರಣೆ ನೀಡಿದ್ದಲ್ಲೂ, ಕೆಲವು ಸಂದರ್ಭಗಳಲ್ಲಿ ನೌಕರನು ಕೈಗೊಂಡ ತೀರ್ಮಾನ ದುರ್ನಡತೆಗಳಾಗುವದಿಲ್ಲ ಎಂದು (P.H. Kalyani Vs. Air France (AIR-1963-SC-1756) ಎಂಬ ಪ್ರಕರಣದಲ್ಲಿ ಆದೇಶವಿತ್ತಿದೆ.
ಸರ್ಕಾರಿ ಗೃಹಗಳನ್ನು ವರ್ಗಾವಣೆ ಆದ ನಂತರ ಅಥವಾ ನಿವೃತ್ತಿ ಆದ ನಂತರ ತೆರವು ಮಾಡಿ ಕೊಡದೆ ಹೋದಲ್ಲಿ ದುರ್ನಡತೆಗಳಾಗುವದಿಲ್ಲ.(Satyaprakash Vs. Union of India (1991 DLJ ENG (194) CAT C.G.A.R.H). ಆ ನಿಯಮಗಳಲ್ಲಿ ಪರ್ಯಾಯವಾಗಿ ದಂಡಹಾಕುವ ಪರಿಮಿತಿ ಇದೆ. ನೌಕರನೊಬ್ಬ ಅತಿಯಾಗಿ ಸಾಲ ಸೋಲ ಮಾಡಿಕೊಂಡಿದ್ದನೆಂದು ಆತನನ್ನು ಪ್ರಾಧಿಕಾರವು ಸೇವೆಯಿಂದ ತೆಗೆದುಹಾಕಿತು. ನ್ಯಾಯಾಲಯವು ಅಂತಹ ಆದೇಶಗಳು ಕ್ರಮವಲ್ಲವೆಂದು ಹೇಳಿ ಅವನ ಗೃಹ ವಿಷಯಗಳಲ್ಲಿ ಇದ್ದಂತಹ ಅವನ ತಂದೆಯ ಕ್ಯಾನ್ಸರ್, ತಾಯಿಯ ಕ್ಷಯ ಮುಂತಾದ ಕಾರಣಗಳಿಂದಾಗಿ ಖರ್ಚು-ವೆಚ್ಚಗಳನ್ನು ಬರಿಸಲಾಗದೇ ಹೋಗಿದ್ದನ್ನು ಕಂಡುಕೊಂಡು ವಿಧಿಸಿದ ದಂಡನೆಯನ್ನು ಅನೂರ್ಜಿತಗೊಳಿಸಿತು.(Lakshmi Vilas Bank Ltd., Vs. Deputy ಯಾಂತ್ರಿಕವಾಗಿ ಗುರಿಯನ್ನು ಗೊತ್ತುಪಡಿಸತಕ್ಕದ್ದಲ್ಲ ಹಾಗೂ ಗುರಿಸಾಧಿಸಲಾಗದೇಹೋದ ನೌಕರನನ್ನು ದಂಡಿಸಲು ತರವಲ್ಲವೆಂದು ಆದೇಶವಿತ್ತಿದೆ (C.M. Cannan Vs. Secretary, Board of Revenue (1994) DLJ (Enquiries) 36 (Kerala-HC).
ಬಹುಪತ್ನಿತ್ವದಂತಹ ಪ್ರಕರಣಗಳು ದುರ್ನಡತೆಗಳೆಂದು ನೌಕರನ ಮೇಲೆ ಇಲಾಖೆಯಲ್ಲಿ ವಿಚಾರಣೆ ಸಲ್ಲದು (P.K. Nagaraj Vs. M.D (NEKRTC -ILR-2007-KAR-3243), ವರ್ಗಾವಣೆಗಳು ಸೇವೆಯಲ್ಲಿ ಹಾಸುಹೊಕ್ಕಾಗಿ/ಅವಿಭಾಜ್ಯವಾಗಿ ಇರುವ ಘಟನೆಗಳು. ವರ್ಗಾವಣೆ ಆದೇಶವನ್ನು ಪಾಲಿಸದೇ ಹೋದ ನೌಕರನನ್ನು ಇಲಾಖಾ ವಿಚಾರಣೆಯಲ್ಲಿ ದಂಡಿಸಬಹುದಾಗಿದೆ. ಕಾರಣ ಅದು ದುರ್ನಡತೆ. ವರ್ಗಾವಣೆ ಆದೇಶವನ್ನು ಪಾಲನೆ ಮಾಡದೆ ಕರ್ತವ್ಯದಿಂದ ಹೊರಗೆ ಉಳಿದಲ್ಲಿ ಅವನ ಗೈರು ಹಾಜರಿಗೆ ಕಾನೂನು ಮನ್ನಣೆ ನೀಡಿಲ್ಲ. ಆ ಕಾರಣವಾಗಿ ವೇತನವು ಆ ಅವಧಿಗೆ ಲಭ್ಯವಿಲ್ಲ. (State Bank of India Vs. Anjan Sanyal (2001-2-SCT-817(SC). ಶಾಸನಬದ್ಧ ಪ್ರಾಧಿಕಾರಿಗಳಾಗಿ ಆ ಕಾಯ್ದೆಗಳಲ್ಲಿ ದತ್ತಾವಾಗಿದ್ದ ಅಧಿಕಾರಗಳನ್ನು ಚಲಾಯಿಸಿ ಕೈಗೊಂಡ ನಿರ್ಣಯಗಳನ್ನು /ಆದೇಶಗಳನ್ನು ದುರ್ನಡತೆಯ ವ್ಯಾಪ್ತಿಗೆ ತರುವುದಕ್ಕೆ ಬರುವುದಿಲ್ಲ. ಕಾನೂನನ್ನು ತಪ್ಪಾಗಿ ಗ್ರಹಿಸಿ ಕೈಗೊಂಡ ನಿರ್ಣಯವು ವಿಚಾರಣೆಗೆ ಯೋಗ್ಯವಲ್ಲ. ಸರ್ವೋಚ್ಛ ನ್ಯಾಯಾಲಯವು ಇಂತಹ ಸಂದರ್ಭಗಳಲ್ಲಿ ಸ್ಪಷ್ಟವಾಗಿ ಆದೇಶ ನೀಡಿದೆ. ನಿರ್ಣಯಕೈಗೊಂಡ ಅಧಿಕಾರಿಯು ದುರುದ್ದೇಶದಿಂದ ಅಂತಹ ನಿರ್ಣಯಗಳನ್ನು ಅಥವಾ ಆದೇಶಗಳನ್ನು ಹೊರಡಿಸಿದ್ದಾನೆಂದು ಸಾಬೀತಾಗಿದ್ದ ಸಂದರ್ಭದಲ್ಲಿ ಮಾತ್ರ ಅಂತಹುಗಳನ್ನು ದುರ್ನಡತೆಗಳೆಂದು ಪರಿಗಣಿಸಿ ಶಿಸ್ತು ನಿಯಮದಡಿಯಲ್ಲಿ ದಂಡಿಸಬಹುದಾಗಿರುತ್ತದೆ ಎಂದು ಆದೇಶವಿತ್ತಿರುತ್ತದೆ.(Union of India Vs. A.N.Saxena (1992-(3)-SCC 124 and Union of India Vs. K.K. Dhawan (1993 (2) SCC 56; AIR 1993 SC 1478)). ಮುಂದುವರೆದು ಇದೇ ನ್ಯಾಯಾಲಯವು ಯಾವ ಕಾಯ್ದೆಯಡಿಯಲ್ಲಿ ಆ ನೌಕರನು ಅಂತಹ ಆದೇಶ/ನಿರ್ಣಯ ಕೈಗೊಂಡಿರುತ್ತಾನೋ ಅಂತಹ ಕಾಯ್ದೆಯಲ್ಲೇ ಮೇಲ್ಮನವಿ ಘಟ್ಟದಲ್ಲಿ ನೌಕರನ ಆದೇಶವನ್ನು ಬದಲಿಸಲು ಅವಕಾಶ ಇರುವಾಗ ನೌಕರನನ್ನು ದಂಡಿಸುವ ಪ್ರಶ್ನೆಯು ಉದ್ಭವಿಸುವುದಿಲ್ಲವೆಂದು ಆದೇಶವಿತ್ತಿರುತ್ತದೆ (Zunjaji Rao Bhaikaji Nagarkar Vs. Union of India (Jt/1999(5) SC 366).
ಯಾವ ಕಾಯಿದೆ ಅಡಿಯಲ್ಲಿ ನೌಕರನು ತನಗೆ ದತ್ತವಾದ ಅಧಿಕಾರವನ್ನು ಚಲಾಯಿಸುತ್ತಾನೊ ಅದೇ ಕಾಯಿದೆಯಲ್ಲಿ ನೌಕರನು ಸದುದ್ದೇಶದಿಂದ ನಿರ್ಣಯಗಳನ್ನು ಕೈಗೊಂಡ ಸಂದರ್ಭದಲ್ಲಿ ವಿಚಾರಣೆಯು ನೌಕರನ ಮೇಲೆ ಜಾರಿ ಮಾಡತಕ್ಕದ್ದಲ್ಲವೆಂದು : ರಕ್ಷಣೆಯನ್ನು (Protection exists) ನೀಡಲಾಗಿರುತ್ತದೆ.
ವಿಚಾರಣೆ ನಡೆಸಬಹುದಾದ ಪ್ರಸಂಗಗಳು ಯಾವುವು? What are those instances warranting inquiries?
ದಂಡನೆಗೆ ಅರ್ಹವಾದ ಪ್ರಕರಣಗಳು ಇವುಗಳೆಂದು ಸರ್ವೋಚ್ಚ ನ್ಯಾಯಾಲಯವು ಆದೇಶವಿತ್ತಿರುತ್ತದೆ.
(ಅ) ದೊಂಬಿ, ಗದ್ದಲ ಪ್ರಕರಣಗಳು ಹಾಗೂ ಅನ್ಯರನ್ನು ಬಂಧನದಲ್ಲಿಡುವುದು (Krishna Kali Tea Estate Vs. Akhilanchal Mazdoor Sangh & Another (2004 SCC (L&S) 1067).ದೂರುವುದು
(ಆ) ಅಸತ್ಯ ವಿಷಯಗಳಿಂದ ಮೇಲಧಿಕಾರಿಗಳ ಮೇಲೆ (Dhamapal Vs. National Eng. Ind. (2002 AIR (SC) 510).
(ಇ) ಮಹಿಳೆಯರ ಮೇಲೆ ಲೈಂಗಿಕ ಪೀಡನೆ (Apparel Export Promotion Council Vs. A.K. Chopra (1999 AIR (SC) 625)) and Vaishaka & Others Vs. State of Rajasthan (1997 (6) SCC 241)).
ನೌಕರನ ಮೇಲೆ ಶಿಸ್ತು ಪ್ರಾಧಿಕಾರವು ಕ್ರಮಕೈಗೊಳ್ಳುವುದರಲ್ಲಿ ಯಾವ ಬಾದಕಗಳು ಇರುವುದಿಲ್ಲ. ಆದರೆ, ಸಂದರ್ಭಗಳನ್ನು ಅರಿತು, ನಿಜಕ್ಕೂ ನೌಕರನು ಸರ್ಕಾರಕ್ಕೆ ಹಿತವಲ್ಲದ ರೀತಿಯಲ್ಲಿ ನಡೆದುಕೊಂಡಿರುತ್ತಾನೆಯೇ ಹಾಗೂ ದುರುದ್ದೇಶದಿಂದ ಕೃತ್ಯಗಳನ್ನು ಎಸಗಿರುತ್ತಾನೆಯೇ ಎಂಬುದನ್ನ ಮನದಟ್ಟುಮಾಡಿಕೊಂಡು ನಂತರ ವಿಚಾರಣೆಗಳನ್ನು ಆದೇಶಿಸುವುದು ಹಿತಕರ. ನೌಕರನ ಮೇಲೆ, ಅಧಿಕಾರ ಇದೆ ಎಂದು ನಿಯಮಾಧಿಕ್ಯವಾಗಿ/ಅಧಿಕಾರವಿಲ್ಲದೆ/ಹಾಗು ದುರಾಗ್ರಹದಿಂದ ವಿಚಾರಣೆಗಳನ್ನು ಆದೇಶ ಮಾಡಿದಲ್ಲಿ ನ್ಯಾಯಾಲಯಗಳಲ್ಲಿ ಪ್ರಕರಣಗಳು ಅನೂರ್ಜಿತವಾಗುತ್ತವೆ. ಸಂವಿಧಾನದ ವಿಧಿ 226-227 ರಲ್ಲಿ ಬಾದಿತ ವ್ಯಕ್ತಿಗೆ ನ್ಯಾಯಾಲಯವನ್ನು ಮೊರೆಹೋಗಲು ಅನಿರ್ಭಂದಿತ ಪೂರ್ಣ ಸ್ವಾತಂತ್ರ್ಯವಿರುವುದರಿಂದ ಆತನು ದಂಡನೆಗಳನ್ನು ‘ವಿಧಿಸಿದ್ದ ಪ್ರಾಧಿಕಾರದ ಆದೇಶಗಳನ್ನು ನ್ಯಾಯಾಲಯಗಳಲ್ಲಿ ಪ್ರಶ್ನೆ ಮಾಡೇ ಮಾಡುತ್ತಾನೆ.
ಕೆಲವೊಮ್ಮೆ ನ್ಯಾಯಾಲಯಗಳಲ್ಲಿ ಪ್ರಕರಣಗಳ ಇತ್ಯರ್ಥವು ನಿಧಾನವಾಗಬಹುದು. ಅವನ ಪರವಾಗಿ ಪ್ರಕರಣವು ನಿರ್ಧರಿಸಲ್ಪಟ್ಟು ಪರಿಹಾರವನ್ನು ಕೊಡಲು ನ್ಯಾಯಾಲಯವು ಆದೇಶವಿತ್ತಲ್ಲೂ ಕೂಡ ಆ ಮಧ್ಯದ ಅವಧಿಯಲ್ಲಿ ನೌಕರನು ಸಾಕಷ್ಟು ಮಾನಸಿಕ, ಆರ್ಥಿಕ ಹಾಗೂ ಅನಾರೋಗ್ಯದ ಆತಂಕಕ್ಕೆ ಒಳಗಾಗಿದ್ದನ್ನು ಸರಿಪಡಿಸಿಕೊಡಲು ಸಾಧ್ಯವಿಲ್ಲದಿರುವ ಕಾರಣವಾಗಿ ನೌಕರನ ಮೇಲೆ ವಿಚಾರಣೆಗಳನ್ನು ಜಾರಿ ಮಾಡುವಾಗ ಪ್ರಾಧಿಕಾರಗಳು ಕಾಯ್ದೆಗಳನ್ನು ಅರಿತು ನಿಯಮಗಳನ್ನು ತಿಳಿದು, ನೌಕರನ ಸಮಯಾ ಸಂದರ್ಭಗಳನ್ನು ವಿವೇಚಿಸಿ ಆದೇಶ ಹೊರಡಿಸುವುದು ಹಿತಕರ. ಅರ್ಥವಿಲ್ಲದ ಯಾಂತ್ರಿಕ ವಿಚಾರಣಾ ವ್ಯವಧಾನಗಳಿಗೆ ಬೆಲೆಯಿಲ್ಲ.
ಅವುಗಳು ನ್ಯಾಯಾಲಯದ ಮುಂದೆ ಉಳಿಯುವುದೂ ಇಲ್ಲ. ಆದ್ದರಿಂದ ಮುಂದಿನ ಪುಟಗಳಲ್ಲಿ ನೀಡಿರುವ ಬೇಕು ಬೇಡಗಳೆಂಬ (Dos and Donts) ವಿವರಗಳನ್ನು ತಿಳಿದು ಶಿಸ್ತು ಪ್ರಾಧಿಕಾರಗಳು ಇಲಾಖಾ ವಿಚಾರಣೆಗಳನ್ನು ನೌಕರನ ಮೇಲೆ ಕೈಗೊಂಡಲ್ಲಿ ಕ್ಷೇಮ. ಸಂವಿಧಾನ, ಕಾಯ್ದೆಗಳು, ನಿಯಮಗಳು ಹಾಗು ನ್ಯಾಯಾಲಯಗಳು, ನೌಕ ನೌಕರನಿಗೆ ನೀಡಿರುವ ರಕ್ಷಣೆಗಳಿಗೆ ವಿರೋಧವಾಗಿ ವಿಚಾರಣೆಗಳು ನಡೆದಲ್ಲಿ ಪ್ರಾಧಿಕಾರದ ಆದೇಶಗಳು ಊರ್ಜಿತವಾಗುವುದಿಲ್ಲ.
ಈ ಸಂದರ್ಭಗಳಲ್ಲಿ ವಿಚಾರಣೆಗಳನ್ನು ಕೈಗೊಳ್ಳತಕ್ಕದ್ದು:-Do hold the inquiries in the following circumstances:-
1) ನೌಕರನು ಅನಧಿಕೃತವಾಗಿ ಕರ್ತವ್ಯಕ್ಕೆ ಗೈರು ಹಾಜರಿಯಾದಾಗ
2) ನೌಕರನು ಆದಾಯಕ್ಕೆ ತಕ್ಕಂತೆ ಆಸ್ತಿಗಳಿಸಿದಾಗ
3) ನೌಕರನು ಲಂಚ ಋಷುವತ್ತುಗಳನ್ನು ಸ್ವೀಕರಿಸಿದಾಗ
4) ನೌಕರನು ಮುಷ್ಕರದಲ್ಲಿ ಭಾಗವಹಿಸಿದಾಗ
5) ನೌಕರನು ತನ್ನ ನಿರ್ಧಾರಗಳಿಂದ ಸರ್ಕಾರಕ್ಕೆ ಆರ್ಥಿಕ ನಷ್ಟವುಂಟುಮಾಡಿದಾಗ ಅಥವಾ ಸರ್ಕಾರದ ಹಣವನ್ನು ದುರುಪಯೋಗ ಮಾಡಿಕೊಂಡಾಗ ವಿಚಾರಣೆಗಳನ್ನು ಕೈಗೊಳ್ಳಬೇಕಿಲ್ಲದಿರುವ ಸಂದರ್ಭಗಳು:-
1) ಸರ್ಕಾರಿ ವಸತಿ ಗೃಹವನ್ನು ವರ್ಗಾವಣೆಯಾದ ಮೇಲೆ ಪರಿಮಿತಿಸಲ್ಪಟ್ಟ ಅವಧಿ ಮೀರಿ ಖಾಲಿ ಮಾಡದೇ ಹೋದಲ್ಲಿ, ಅಥವಾ ಉಪ ಬಾಡಿಗೆಗೆ
ನೀಡಿದಲ್ಲಿ ವಿಚಾರಣೆಯನ್ನು ಕೈಗೊಳ್ಳಬೇಕಿಲ್ಲ. ಕಾರಣ, ಆ ನಿಯಮದಲ್ಲೇ ದಂಡ ಹಾಕುವ ಪರಿಮಿತಿ ಇರುತ್ತದೆ.
2) ಮೇಲಧಿಕಾರಿಯ ಅನುಮತಿ ಇಲ್ಲದೆ ನೌಕರನಿಗೆ ಅವನ ನಾಗರಿಕ ಹಕ್ಕಿಗೆ ಚ್ಯುತಿ ಬಂದಾಗ ನ್ಯಾಯಾಲಯವನ್ನು ಮೊರೆಹೋದಲ್ಲಿ ವಿಚಾರಣೆಯನ್ನು ಕೈಗೊಳ್ಳಬೇಕಾಗಿಲ್ಲ. ಕಾರಣ ಸಂವಿಧಾನದ ವಿಧಿ 226 ರಲ್ಲಿ ಆತನಿಗೆ ಪರಿಮಿತಿಯೇ ನೀಡಲ್ಪಟ್ಟಿದೆ.
3) ಶಾಸನ ಬದ್ಧ ಅಧಿಕಾರ ಚಲಾಯಿಸಿ ಅವನ ವಿಚಕ್ಷಣತೆಗೆ ತೋಚಿದಂತೆ ಹಾಗು ಯಾವ ದುರುದ್ದೇಶವೂ ಇಲ್ಲದೆ ನಿರ್ಧಾರವನ್ನು ತೆಗೆದುಕೊಂಡಾಗ ವಿಚಾರಣೆಗಳನ್ನು ಕೈಗೊಳ್ಳಬೇಕಾಗಿಲ್ಲ.
4) ವೈದ್ಯಾಧಿಕಾರಿಯು ನೀಡಿದ ವೈದ್ಯಕೀಯ ಪ್ರಮಾಣ ಪತ್ರವನ್ನು ವೈದ್ಯಕೀಯ ಮಂಡಳಿಗೆ ಕಳುಹಿಸಿ ಆ ವೈದ್ಯಕೀಯ ಪ್ರಮಾಣ ಪತ್ರದ ಬಗ್ಗೆ ವೈದ್ಯಕೀಯ ಮಂಡಳಿಯಿಂದ ನೌಕರನು ನೀಡಲಾಗಿದ್ದ ಕಾರಣವು ಸುಳ್ಳೆಂದು ನಿರ್ಧಾರವಾಗದೆ, ನೌಕರನು ಸಲ್ಲಿಸಿದ ರಜೆ ಕೋರಿಕೆಯನ್ನು ತಿರಸ್ಕರಿಸಲು ಬರುವುದಿಲ್ಲ.
5) ಸರ್ಕಾರಕ್ಕೆ ಆರ್ಥಿಕ ಸಂಪನ್ಮೂಲ ಒದಗಿಸುವ ಇಲಾಖೆಗಳಲ್ಲಿ ತೆರಿಗೆ/ಕಂದಾಯಗಳನ್ನು ವಸೂಲು ಮಾಡಲು ನೌಕರನಿಗೆ ಒಂದು ಗುರಿಯನ್ನು ನಿಗಧಿ ಮಾಡಿದಾಗ್ಯೂ ಆತ ಆ ಗುರಿ ಮುಟ್ಟಲಿಲ್ಲವೆಂದು ವಿಚಾರಣೆಯನ್ನು ಕೈಗೊಳ್ಳತಕ್ಕದ್ದಲ್ಲ. ಕಾರಣವೇನೆಂದರೆ ಗೊತ್ತುಪಡಿಸಿದ ಗುರಿಯು ಸಾಧಿಸುವಂತಿರಬೇಕು. ವಾಸ್ತವ ಸ್ಥಿತಿಗತಿಗಳಿಗೆ ಅನುಗುಣವಾಗಿರಬೇಕು.



