History Notes-01: ಭಾರತ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ
History notes-01 : ಭಾರತ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ
(ಮೂರು ಅಂಕದ ಪ್ರಶ್ನೆಗಳು)
ಪ್ರಶ್ನೆ 1. 1857 ರ ದಂಗಗೆ ಕಾರಣವಾದ ರಾಜಕೀಯ ಅಂಶಗಳಾವುವು ? ಅಥವಾ 1857 ರ ದಂಗಗೆ ರಾಜಕೀಯ ಕಾರಣಗಳಾವುವು ?
▪️ಲಾರ್ಡ ಡಾಲ್ ಹೌಸಿಯು ಜಾರಿಗೆ ತಂದ ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯನ್ವಯ ಹಲವು ರಾಜ್ಯಗಳನ್ನು ವಶಪಡಿಸಿಕೊಂಡಿದ್ದು
▪️ಡಾಲ್ ಹೌಸಿಯು ತಂಜಾವೂರು & ಕರ್ನಾಟಕ ನವಾಬರಿಗಿದ್ದ ರಾಜ ಪದವಿಗಳನ್ನು ರದ್ದು ಪಡಿಸಿದ್ದು
▪️ಮೊಘಲ್ ಚಕ್ರವರ್ತಿ, ಔದ್ನ ನವಾಬ ಮೊದಲಾದ ರಾಜರುಗಳನ್ನು ಅಧಿಕಾರದಿಂದ ಪದಚ್ಯುತಗೊಳಿಸಿದ್ದು,
▪️ಮೊಘಲ್ & ಔದ್ನ ಸೈನ್ಯದಲ್ಲಿ ಲಕ್ಷಾಂತರ ಸೈನಿಕರು ನಿರುದ್ಯೋಗಿಗಳಾಗಿದ್ದು
ಪ್ರಶ್ನೆ 2. ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯಿಂದಾದ ಪರಿಣಾಮಗಳು ಯಾವುವು ವಿಶ್ಲೇಷಿಸಿ.
▪️ಈ ನೀತಿಯನ್ನು ಇಂಗ್ಲೀಷರ ಕಾಲದಲ್ಲಿ ಲಾರ್ಡ ಡಾಲ್ ಹೌಸಿಯು ಜಾರಿಗೆ ತಂದಿದ್ದನು.
▪️ಯಾವುದೇ ದೇಶೀಯ ಸಂಸ್ಥಾನದ ರಾಜನು ತನಗೆ ಮಕ್ಕಳಿಲ್ಲದಿದ್ದರೆ ರಾಜ್ಯವನ್ನು ದತ್ತು ಮಕ್ಕಳಿಗೆ ನೀಡುವಂತಿರಲಿಲ್ಲ. ಇದರಿಂದಾಗಿ ಆ ಸಂಸ್ಥಾನವು ಸಹಜವಾಗಿ ಬ್ರಿಟಿಷರ ವಶವಾಗುತ್ತಿದ್ದವು.
▪️ಈ ನೀತಿಯಿಂದಾಗಿ ಸತಾರ, ಜೈಪುರ, ಝಾನ್ಸಿ, ಉದಯಪುರ ಮೊದಲಾದ ಸಂಸ್ಥಾನಗಳು ಬ್ರಿಟಿಷರ ವಶವಾದವು.
▪️ಮೊಘಲ್ ಚಕ್ರವರ್ತಿ ಔದನ ನವಾಬ ಮೊದಲಾದ ರಾಜರುಗಳಿಗೆ ಮಕ್ಕಳಿಲ್ಲದ ಕಾರಣ ಇಂಗ್ಲೀಷರು ಇವರನ್ನು ಅಧಿಕಾರದಿಂದ ಪದಚ್ಯುತ್ ಗೋಳಿಸಿದರು.
▪️ಪರಿಣಾಮವಾಗಿ ಇವರನ್ನು ಅವಲಂಬಿಸಿದ್ದ ಲಕ್ಷಾಂತರ ಸೈನಿಕರು ನಿರುದ್ಯೋಗಿಗಳಾದರು.
▪️ಇದು ಬ್ರಿಟಿಷರ ವಿರುದ್ಧದ 1857 ರ ಪ್ರತಿಭಟನೆಗೆ ರಾಜಕೀಯ ಕಾರಣವಾಗಿ ಪ್ರೇರಕವಾಯಿತು.
ಪ್ರಶ್ನೆ 3. 1857 ರ ದಂಗೆಗೆ ಆರ್ಥಿಕ ಬದಲಾವಣೆಗಳು ಹೇಗೆ ಕಾರಣವಾದವು? ಅಥವಾ 1857 ರ ದಂಗೆಯ ಆರ್ಥಿಕ ಕಾರಣಗಳಾವುವು ?
▪️ಇಂಗ್ಲೆಂಡಿನಲ್ಲಾದ ಕೈಗಾರಿಕಾ ಕ್ರಾಂತಿಯ ಪರಿಣಾಮವಾಗಿ ಕರಕುಶಲತೆ & ದೇಶೀಯ ಕೈಗಾರಿಕೆಗಳು ಕ್ಷೀಣಿಸಿದವು.
▪️ಇಂಗ್ಲೆಂಡ್ ವ್ಯಾಪಾರಿ ರಾಷ್ಟ್ರವಾಗಿರದೆ ಕೈಗಾರಿಕೆಗಳ ಕಾರ್ಯಾಗಾರವಾಯಿತು.
▪️ಭಾರತದಲ್ಲಿದ್ದಂತಹ ಕರಕುಶಲಕಾರರು ನಿರುದ್ಯೋಗಿಗಳಾದರು.
▪️ಬಟ್ಟೆ & ಉಣ್ಣೆ ಕೈಗಾರಿಕೆಗಳು ಅವನತಿ ಹೊಂದಿ ನೇಕಾರಿಕೆ ವೃತ್ತಿಯವರು ಉದ್ಯೋಗ ಕಳೆದುಕೊಂಡರು.
▪️ಗೃಹ ಕೈಗಾರಿಕೆಗಳು ಇದೇ ಬಗೆಯ ತೀವ್ರ ಆರ್ಥಿಕ ನಷ್ಟ ಅನುಭವಿಸಿ ಶಿಥಿಲಗೊಂಡವು.
▪️ಭಾರತದ ವಸ್ತುಗಳನ್ನು ಇಂಗ್ಲೆಂಡಿನಲ್ಲಿ ಮಾರಲು ಇಂಗ್ಲೀಷರು ದುಬಾರಿ ಸುಂಕವನ್ನು ಹೇರಿದರು.
▪️ಜಮೀನ್ದಾರರು ಕೃಷಿಕರನ್ನು ಶೋಷಿಸುತ್ತಿದ್ದರು.
▪️ಇನಾಂ ಆಯೋಗ ನೇಮಿಸಿ ಇನಾಂ ಭೂಮಿಯನ್ನು ವಾಪಸ್ಸು ಪಡೆಯಲಾಯಿತು. ಇದರಿಂದಾಗಿ ಕೃಷಿಕರು ತೀವ್ರವಾಗಿ ಅವಮಾನ & ಆರ್ಥಿಕ ಸಂಕಷ್ಟ ಎದುರಿಸಿದರು.
ಪ್ರಶ್ನೆ 4. ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಆಡಳಿತಾತ್ಮಕ ಕಾರಣಗಳು ಹೇಗೆ ನಾಂದಿಯಾಯಿತು.?
▪️ಇಂಗ್ಲಿಷರು ಹೊಸ ನಾಗರಿಕ & ಅಪರಾಧ ಕಾಯ್ದೆಗಳನ್ನು ಜಾರಿಗೆ ತಂದರು
▪️ಕಾನೂನಿನಲ್ಲಿ ಪಕ್ಷಪಾತ & ಭಾರತೀಯರಿಗೆ ಪ್ರತ್ಯೇಕ ನಿಯಮಗಳು ಅನ್ವಯವಾಗುತ್ತಿದ್ದವು.
▪️ಆಂಗ್ಲ ಭಾಷೆಯು ನ್ಯಾಯಾಲಯದ ಭಾಷೆಯಾಯಿತು.
▪️ಇಂಗ್ಲೀಷ್ ನ್ಯಾಯಾಧಿಶರು ಬಹುತೇಕವಾಗಿ ಇಂಗ್ಲೀಷರ ಪರವಾಗಿ ನ್ಯಾಯ ನೀಡುತ್ತಿದ್ದರು.
▪️ಹೊಸ ಕಾನೂನಿನ ಆಶಯಗಳು ಜನರಿಗೆ ಅರಿವಾಗಲಿಲ್ಲ.
Also read: Deepika Higher Education Scholarship 2026: Eligibility, Application Process & Benefits
ಪ್ರಶ್ನೆ 5. 1857 ರ ದಂಗೆಗೆ ಸೈನಿಕ ಕಾರಣಗಳಾವುವು ?
▪️ಬ್ರಿಟಿಷರ ಸೈನ್ಯದಲ್ಲಿ ಭಾರತೀಯ ಸಿಪಾಯಿಗಳ ಸ್ಥಿತಿ ಗಂಭಿರವಾಗಿತ್ತು.
▪️ಆಂಗ್ಲ ಸೈನಿಕರಿಗಿದ್ದ ಸ್ಥಾನಮಾನ ವೇತನ, ಬಡ್ತಿ ಅವಕಾಶಗಳು ಭಾರತೀಯ ಸಿಪಾಯಿಗಳಿಗೆ ಇರಲಿಲ್ಲ
▪️ಭಾರತೀಯ ಸೈನಿಕರನ್ನು ಸಾಗರೋತ್ತರ ಸೇವೆಗೆ ಒತ್ತಾಯಿಸುತ್ತಿದ್ದು ಧಾರ್ಮಿಕವಾಗಿ ಸೈನಿಕರನ್ನು ಪ್ರಚೋದಿಸಿತು.
▪️ಭಾರತೀಯ ಸೈನಿಕರಿಗೆ ಕೆಳಹುದ್ದೆ ನೀಡಿದರು.
ಪ್ರಶ್ನೆ 6. ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ತತ್ ಕ್ಷಣದ ಕಾರಣಗಳಾವುವು?
▪️ಇಂಗ್ಲೀಷ್ ಸೇನೆಯಲ್ಲಿದ್ದ ಹೆಚ್ಚಿನ ಪ್ರಮಾಣದ ಭಾರತೀಯ ಸಿಪಾಯಿಗಳು ತಾವೆಲ್ಲರೂ ಒಂದಾಗಿ ಹೋರಾಡಿದರೆ ಇಂಗ್ಲೀಷರನ್ನು ಭಾರತದಿಂದ ಓಡಿಸಬಹುದು ಎಂಬ ಆತ್ಮ ವಿಶ್ವಾಸಹೊಂದಿದ್ದರು.
▪️ಈ ಸನ್ನಿವೇಶದಲ್ಲಿ ಸೈನಿಕರಿಗೆ ರಾಯಲ್ ಎನ್ ಫೀಲ್ಡ್ ಎಂಬ ನವೀನ ಬಂದೂಕಗಳನ್ನು ನೀಡುತ್ತಿದ್ದರು. ಬಂದೂಕುಗಳಿಗೆ ಉಪಯೋಗಿಸುತ್ತಿದ್ದ ತುಪಾಕಿಗಳಿಗೆ ಹಂದಿ & ಹಸುವಿನ ಕಬ್ಬನ್ನು ಸವರಿದ್ದಾರೆಂಬ ವದಂತಿ ಹಬ್ಬಿತ್ತು.
▪️ಹಿಂದೂಗಳಿಗೆ ಹಸು ಪವಿತ್ರವಾದರೆ, ಮುಸ್ಲಿಮರಿಗೆ ಹಂದಿ ನಿಷೇದವಾಗಿತ್ತು.
▪️ಬ್ಯಾರಕ್ ಪುರದಲ್ಲಿ ಸೈನಿಕರಿಗೆ ತುಪಾಕಿಯನ್ನು ಹಲ್ಲಿನಿಂದ ಕಚ್ಚಿ ತೆಗೆಯುವಂತೆ ಇಂಗ್ಲೀಷರು ಆದೇಶಿಸಿದಾಗ ಇದನ್ನು ಸೈನಿಕರು ತಿರಸ್ಕರಿಸಿ ಬಂಡಾಯವೆದ್ದರು.
▪️ಇದೇ ಸಂದರ್ಭದಲ್ಲಿ ಮಂಗಲಪಾಂಡೆ ಎಂಬ ಸೈನಿಕನು ಬ್ರಿಟಿಷರ ಸೈನ್ಯದನ್ನಿಕಾರಿಯೊಬ್ಬನನ್ನು ಕೊಂದನು
▪️ಇದರ ಪರಿಣಾಮವಾಗಿ ಮಂಗಲಪಾಮಡೆಯನ್ನು ಬಂಧಿಸಿ ಗಲ್ಲಿಗೇರಿಸಲಾಯಿತು.
▪️ಇದರಿಂದ ಭಾರತದ ಎಲ್ಲ ಸೈನಿಕರು ಬ್ರಿಟಿಷರ ಮೇಲೆ ಯುದ್ಧ ಸಾರಿದರು.
ಪ್ರಶ್ನೆ 7. 1857ರ ದಂಗೆಯ ವಿಫಲತೆಗೆ ಕಾರಣಗಳನ್ನು ಪಟ್ಟಿ ಮಾಡಿ
▪️ಇದು ಇಡೀ ಭಾರತವನ್ನು ವ್ಯಾಪಿಸಿದ ದಂಗೆಯಾಗಿರಲಿಲ್ಲ
▪️ಇದು ದೇಶದ ಬಿಡುಗಡೆಗಾಗಿ ನಡೆದದ್ದಕ್ಕಿಂತ ಅವರ ಸ್ವಹಿತಾಸಕ್ತಿ ಹಾಗೂ ಹಕ್ಕುಗಳಿಗಾಗಿ ನಡೆದಿತ್ತು.
▪️ಇದು ಯೋಜಿತ ದಂಗೆಯಾಗಿರದೆ ಅನಿರೀಕ್ಷಿತ ಕಾರಣಗಳಿಂದ ಪ್ರೇರೇಪಿತವಾಗಿತ್ತು.
▪️ಬ್ರಿಟಿಷ್ ಸೈನಿಕರಲ್ಲಿದ್ದ ಒಗ್ಗಟ್ಟಿದ್ದರೆ ಭಾರತೀಯ ಸೈನಿಕರಲ್ಲಿ ಭಿನ್ನತೆ ಇತ್ತು.
▪️ದಂಗೆಗೆ ಸೂಕ್ತ ಮಾರ್ಗದರ್ಶನ & ವ್ಯವಸ್ಥಿತ ಸಂಘಟನೆಯ ಕೊರತೆ ಇತ್ತು.
▪️ಯುದ್ಧ ತಂತ್ರ, ಸೈನಿಕ ಪರಿಣಿತಿ, ಸೂಕ್ತ ಸೇನಾ ನಾಯಕತ್ವ & ಶಿಸ್ತಿನ ಕೊರತೆ ಇತ್ತು.
▪️ಹೋರಾಟಗಾರರಲ್ಲಿ ನಿಶ್ಚಿತ ಗುರಿ ಇರಲಿಲ್ಲ.
▪️ಹಲವಾರು ದೇಶೀಯ ಸಂಸ್ಥಾನಗಳ ರಾಜರುಗಳು ಬ್ರಿಟಿಷರಿಗೆ ತೋರಿದ ನಿಷ್ಠೆಯಿಂದಾಗಿ ಸಿಪಾಯಿಗಳಿಗೆ ಬೆಂಬಲ ನೀಡಲಿಲ್ಲ.
▪️ಸಿಪಾಯಿಗಳು ಮಾಡಿದಂತಹ ಲೂಟಿ, ದರೋಡೆ, ಮೊದಲಾದ ಗಂಭೀರವಾದ ತಪ್ಪುಗಳಿಂದಾಗಿ ಜನರ ವಿಶ್ವಾಸ ಕಳೆದುಕೊಂಡರು.
ಪ್ರಶ್ನೆ 8. 1858 ರ ಬ್ರಿಟನ್ ರಾಣಿಯ ಘೋಷಣೆಯಲ್ಲಿದ್ದ ಅಂಶಗಳಾವುವು?
▪️ಕಂಪನಿಯು ದೇಶೀ ರಾಜರೊಂದಿಗೆ ಒಪ್ಪಂದಗಳನ್ನು ಅಂಗೀಕರಿಸಲಾಯಿತು.
▪️ಪ್ರಾದೇಶಿಕ ವಿಸ್ತರಣೆಯ ಅಪೇಕ್ಷೆಯನ್ನು ಕೈಬಿಡುವುದು
▪️ಭಾರತೀಯರಿಗೆ ಸುಭದ್ರ ಸರ್ಕಾರವನ್ನು ನೀಡುವುದು.
▪️ಕಾನೂನಿನ ಮುಂದೆ ಸಮಾನತೆ
▪️ಧಾರ್ಮಿಕ ಸಹಿಷ್ಣತೆಯೊಂದಿಗೆ ಧಾರ್ಮಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವಂತಿಲ್ಲ.
ಪ್ರಶ್ನೆ 9. 1858 ರ ದಂಗೆಯ ಪರೀಣಾಮಗಳಾವುವು ?
▪️ಈಸ್ಟ ಇಂಡಿಯಾ ಕಂಪನಿಯ ಆಡಳಿತ ಕೊನೆಗೊಂಡು ಬ್ರಿಟನ್ ಸಾಮ್ರಾಜ್ಯಗೆ ಆಡಳಿತ ವರ್ಗಾವಣೆಗೊಂಡಿತು.
▪️ಭಾರತದ ವ್ಯವಹಾರವನ್ನು ಬ್ರಿಟಿಷ್ ಪಾರ್ಲಿಮೆಂಟಿನ ಭಾರತದ ವ್ಯವಹಾರಗಳ ಕಾರ್ಯದರ್ಶಿಗೆ ಒಪ್ಪಿಸಲಾಯಿತು.
▪️ಭಾರತೀಯರಿಗೆ ಹಲವಾರು ಸೌಲಭ್ಯಗಳಿರುವ ರಾಣಿಯ ಘೋಷಣೆಯನ್ನು 1858ರಲ್ಲಿ ಹೊರಡಿಸಿದರು.
▪️ಭಾರತೀಯರ ಪ್ರೀತಿ, ಬೆಂಬಲ, ವಿಶ್ವಾಸವಿಲ್ಲದರೆ ನಾವು ಶಾಂತಿಯಿಂದ ಆಳ್ವಿಕೆ ಮಾಡಲು ಸಾಧ್ಯವಿಲ್ಲವೆಂಬುದನ್ನು ಬ್ರಿಟಿಷರು ಅರಿತರು.
▪️ಇದು ಭಾರತೀಯರ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ದಿಕ್ಕೂಚಿಯನ್ನು ನೀಡಿತು.
▪️ಭಾರತೀಯರು ಇನ್ನು ಮುಂದೆ ಹೋರಾಟದ ಪರ್ಯಾಯ ಮಾರ್ಗವನ್ನು ಹುಡುಕಿಕೊಳ್ಳುವ ಅನಿವಾರ್ಯತೆ ಕಂಡುಕೊಂಡರು.



