Inter-caste marriage: ರಾಜ್ಯ ಸರ್ಕಾರದಿಂದ ಅಂತರ್ಜಾತಿ ವಿವಾಹ ನೆರವು ಯೋಜನೆಯಡಿ ಆರ್ಥಿಕ ಸಹಾಯ-2025
Inter-caste marriage: ಜಾತಿ ಆಧಾರಿತ ಭೇದಭಾವವನ್ನು ನಿವಾರಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ಜಾರಿಗೊಳಿಸಿರುವ ಅಂತರ್ಜಾತಿ ವಿವಾಹ ಪ್ರೋತ್ಸಾಹ ಯೋಜನೆ ಸಮಾಜದಲ್ಲಿ ಸಮಾನತೆ ಮತ್ತು ಸೌಹಾರ್ದತೆಯನ್ನು ಉತ್ತೇಜಿಸುವ ಪ್ರಮುಖ ಕಲ್ಯಾಣ ಯೋಜನೆಯಾಗಿದೆ. ಯೋಜನೆಯನ್ನು ರಾಜ್ಯ ಸರ್ಕಾರವು 2015 ರಿಂದ ಜಾರಿಗೊಳಿಸಿದೆ. ಈ ಯೋಜನೆಯಡಿ ರಾಜ್ಯ ಸರ್ಕಾರ ವರ ಹಾಗೂ ವಧುವಿಗೆ ಆರ್ಥಿಕ ನೆರವು ನೀಡುತ್ತದೆ.
ಆರ್ಥಿಕ ನೆರವಿನ ಪ್ರಮಾಣ
ಅಂತರ್ಜಾತಿ ವಿವಾಹ ನೆರವು ಯೋಜನೆಯಡಿ, ಅರ್ಹ ದಂಪತಿಗಳಿಗೆ ಸರ್ಕಾರ ಆರ್ಥಿಕ ಸಹಾಯ ನೀಡುತ್ತಿದೆ.
ಯೋಜನೆಯ ಪ್ರಕಾರ, ವರನಿಗೆ 2.50 ಲಕ್ಷ ರೂಪಾಯಿ ಹಾಗೂ ವಧುವಿಗೆ 3 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡಲಾಗುತ್ತದೆ. ಈ ಯೋಜನೆಗೆ ಅರ್ಹರಾಗಲು ದಂಪತಿಗಳಲ್ಲಿ ಕನಿಷ್ಠ ಒಬ್ಬರು ಪರಿಶಿಷ್ಟ ಜಾತಿಗೆ ಸೇರಿರಬೇಕು ಎಂಬುದು ಕಡ್ಡಾಯವಾಗಿದೆ.
ಅರ್ಜಿದಾರರ ಬ್ಯಾಂಕ್ ಖಾತೆಗೆ ಸಹಾಯಧನದ ಮೊತ್ತವನ್ನು ಸರ್ಕಾರ ನೇರವಾಗಿ ಜಮಾ ಮಾಡುತ್ತದೆ.
ಯೋಜನೆಯ ಷರತ್ತು
ಈ ಯೋಜನೆಯಡಿ ಪರಿಶಿಷ್ಟ ಜಾತಿಗೆ ಸೇರಿದ ಕರ್ನಾಟಕದ ನಿವಾಸಿಯು ಪರಿಶಿಷ್ಟ ಜಾತಿಯಲ್ಲದ ಹಿಂದೂ ವ್ಯಕ್ತಿಯನ್ನು ವಿವಾಹವಾಗಿದ್ದರೆ ಮಾತ್ರ ಆರ್ಥಿಕ ನೆರವು ಲಭ್ಯವಾಗುತ್ತದೆ. ಮದುವೆಯಾದ ದಂಪತಿಗಳ ವಾರ್ಷಿಕ ಆದಾಯ 5 ಲಕ್ಷ ರೂಪಾಯಿಗಿಂತ ಹೆಚ್ಚಿರಬಾರದು ಎಂಬ ಷರತ್ತು ವಿಧಿಸಲಾಗಿದೆ. 01 ಏಪ್ರಿಲ್ 2018ರ ನಂತರ ನಡೆದ ವಿವಾಹಗಳು ಮಾತ್ರ ಈ ಯೋಜನೆಯಡಿ ಸಹಾಯಕ್ಕೆ ಅರ್ಹವಾಗಿರುತ್ತವೆ. ಮದುವೆಯಾದ ದಿನಾಂಕದಿಂದ ಒಂದು ವರ್ಷದೊಳಗೆ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿದ್ದು, ಒಂದು ವರ್ಷದ ನಂತರ ಸಲ್ಲಿಸಲಾದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ದಾಖಲೆಗಳ ವಿವರ
ಯೋಜನೆಯಡಿ ಅರ್ಜಿ ಸಲ್ಲಿಸಲು ಮದುವೆ ಪ್ರಮಾಣಪತ್ರ ಕಡ್ಡಾಯವಾಗಿದ್ದು, ಅರ್ಹ ದಂಪತಿಗಳು ಆನ್‌ಲೈನ್ ಮೂಲಕ ಅಂತರ್ಜಾತಿ ವಿವಾಹ ಸಹಾಯ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಅರ್ಜಿಗೆ ಅಗತ್ಯವಿರುವ ದಾಖಲೆಗಳಲ್ಲಿ ಕರ್ನಾಟಕ ನಿವಾಸ ಪ್ರಮಾಣ, ವಧು ಮತ್ತು ವರನ ಆಧಾರ್ ಕಾರ್ಡ್, ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣಪತ್ರ, ಬ್ಯಾಂಕ್ ಖಾತೆ ವಿವರಗಳು, ಮದುವೆಯ ಫೋಟೋ, ಮದುವೆ ಪ್ರಮಾಣಪತ್ರ, ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ ಪ್ರಮುಖವಾಗಿದೆ.
ಅರ್ಜಿ ಸಲ್ಲಿಸುವ ವಿಧಾನ
ಅರ್ಜಿದಾರರು ಆಧಾರ್ ಸಂಖ್ಯೆಯ ಮೂಲಕ ನೋಂದಣಿ ಮಾಡಿಕೊಂಡು, ವೈಯಕ್ತಿಕ ಹಾಗೂ ಮದುವೆ ಸ೦ಬ೦ಧಿತ ವಿವರಗಳನ್ನು ಅರ್ಜಿ ನಮೂನೆಯಲ್ಲಿ ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಸಲ್ಲಿಸಬೇಕಾಗುತ್ತದೆ. ಅರ್ಜಿ ಸಲ್ಲಿಸಿದ ನಂತರ ಸ್ವೀಕೃತಿ ರಶೀದಿಯನ್ನು ಮುದ್ರಿಸಿ ಭವಿಷ್ಯದ ಉಲ್ಲೇಖಕ್ಕಾಗಿ ಸಂರಕ್ಷಿಸಿಕೊಳ್ಳಲು ಸೂಚಿಸಲಾಗಿದೆ.
ಸ೦ಬ೦ಧಪಟ್ಟ ಅಧಿಕಾರಿಗಳಿಂದ ದಾಖಲೆಗಳ ಪರಿಶೀಲನೆಯ ನಂತರ, ಅರ್ಜಿದಾರರ ಬ್ಯಾಂಕ್ ಖಾತೆಗೆ ಸಹಾಯಧನದ ಅರ್ಧ ಮೊತ್ತವನ್ನು ನೇರವಾಗಿ ಜಮಾ ಮಾಡಲಾಗುತ್ತದೆ. ಉಳಿದ ಅರ್ಧ ಮೊತ್ತವನ್ನು ದಂಪತಿಗಳ ಜಂಟಿ ಖಾತೆಯಲ್ಲಿ ಎಫ್‌ಡಿ ರೂಪದಲ್ಲಿ ಠೇವಣಿ ಇಡಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.
ಕರ್ನಾಟಕ ಸರ್ಕಾರದ ಅಂತರ್-ಜಾತಿ ವಿವಾಹ ಪ್ರೋತ್ಸಾಹಧನ ಯೋಜನೆ – ಅರ್ಹ ದಂಪತಿಗಳಿಗೆ ₹5.5 ಲಕ್ಷ ಆರ್ಥಿಕ ನೆರವು
ಸಾಮಾಜಿಕ ಸಮಾನತೆ ಹಾಗೂ ಜಾತಿ ವೈಷಮ್ಯ ನಿವಾರಣೆಗೆ ಉತ್ತೇಜನ ನೀಡುವ ಉದ್ದೇಶದಿಂದ, ಕರ್ನಾಟಕ ಸರ್ಕಾರವು ಅಂತರ್-ಜಾತಿ ಜೋಡಿ ವಿವಾಹ ಸಹಾಯ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ಅರ್ಹ ದಂಪತಿಗಳಿಗೆ ಒಟ್ಟು ₹5.5 ಲಕ್ಷ ಆರ್ಥಿಕ ಪ್ರೋತ್ಸಾಹಧನವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ.
ಯೋಜನೆಯ ಪ್ರಮುಖ ವಿವರಗಳು:
ಈ ಯೋಜನೆಯಡಿ ನೀಡಲಾಗುವ ನೆರವಿನ ಸಂಪೂರ್ಣ ವಿವರಗಳು ಈ ಕೆಳಗಿನಂತಿವೆ:
ಒಟ್ಟು ಮೊತ್ತ: ₹5.5 ಲಕ್ಷ
ವಿತರಣಾ ವಿಧಾನ: ನೇರ ಬ್ಯಾಂಕ್ ಜಮೆ (DBT)
ವಧುವಿಗೆ: ₹3 ಲಕ್ಷ
₹1.5 ಲಕ್ಷ ನಗದು
₹1.5 ಲಕ್ಷ ಠೇವಣಿ
ವರನಿಗೆ: ₹2.5 ಲಕ್ಷ
₹1.25 ಲಕ್ಷ ನಗದು
₹1.25 ಲಕ್ಷ ಠೇವಣಿ
ಅರ್ಹತಾ ಮಾನದಂಡಗಳು
ಈ ಯೋಜನೆಯ ಪ್ರಯೋಜನ ಪಡೆಯಲು ದಂಪತಿಗಳು ಕೆಳಕಂಡ ಅರ್ಹತೆಗಳನ್ನು ಪೂರೈಸಿರಬೇಕು:
ಜಾತಿ: ದಂಪತಿಯಲ್ಲಿ ಕನಿಷ್ಠ ಒಬ್ಬರು ಪರಿಶಿಷ್ಟ ಜಾತಿ (SC) ಅಥವಾ ಪರಿಶಿಷ್ಟ ಪಂಗಡ (ST) ಸಮುದಾಯದವರಾಗಿರಬೇಕು
ಧರ್ಮ: ಇಬ್ಬರೂ ಹಿಂದೂ ಧರ್ಮಕ್ಕೆ ಸೇರಿರಬೇಕು
ನಿವಾಸ: ಇಬ್ಬರೂ ಕರ್ನಾಟಕ ರಾಜ್ಯದ ನಿವಾಸಿಗಳಾಗಿರಬೇಕು
ಆದಾಯ: ದಂಪತಿಯ ಒಟ್ಟು ವಾರ್ಷಿಕ ಕುಟುಂಬ ಆದಾಯ ₹5 ಲಕ್ಷಕ್ಕಿಂತ ಕಡಿಮೆ ಇರಬೇಕು
ವಿವಾಹ ಅವಧಿ: ವಿವಾಹವು 2019ರ ನಂತರ ನಡೆದಿರಬೇಕು
ಅರ್ಜಿಯ ಕಾಲಾವಧಿ: ವಿವಾಹದ ದಿನಾಂಕದಿಂದ 18 ತಿಂಗಳೊಳಗೆ ಅರ್ಜಿ ಸಲ್ಲಿಸಬೇಕು.
ಅಗತ್ಯ ದಾಖಲೆಗಳು
ಅರ್ಜಿಯೊಂದಿಗೆ ಕೆಳಗಿನ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯ:
▪️ವಿವಾಹ ನೋಂದಣಿ ಪ್ರಮಾಣಪತ್ರ
▪️ಆಧಾರ್ ಕಾರ್ಡ್ (ವಧು ಮತ್ತು ವರ)
▪️ಜಾತಿ ಪ್ರಮಾಣಪತ್ರ
▪️ಆದಾಯ ಪ್ರಮಾಣಪತ್ರ
▪️ಬ್ಯಾಂಕ್ ಖಾತೆ ವಿವರಗಳು
▪️ನಿವಾಸ ಪುರಾವೆ
▪️ಮದುವೆಯ ಫೋಟೋ
ಅರ್ಜಿ ಸಲ್ಲಿಸುವ ವಿಧಾನ:
ಈ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸಂಪೂರ್ಣವಾಗಿ ಆನ್‌ಲೈನ್ ಮೂಲಕ ನಡೆಯುತ್ತದೆ:
1. ಹಂತ 1: ಕರ್ನಾಟಕ ಸಮಾಜ ಕಲ್ಯಾಣ ಇಲಾಖೆಯ ವಿವಾಹಕ್ಕೆ ಪ್ರೋತ್ಸಾಹಧನ ಪೋರ್ಟಲ್‌ಗೆ ಭೇಟಿ ನೀಡಿ
2. ಹಂತ 2: “ಅಂತರ್-ಜಾತಿ ವಿವಾಹಕ್ಕೆ ಪ್ರೋತ್ಸಾಹಧನ” ಯೋಜನೆಯನ್ನು ಆಯ್ಕೆಮಾಡಿ
3. ಹಂತ 3: ಆನ್‌ಲೈನ್ ಅರ್ಜಿ ಫಾರ್ಮ್ ಅನ್ನು ಸರಿಯಾಗಿ ಭರ್ತಿ ಮಾಡಿ
4. ಹಂತ 4: ಅಗತ್ಯ ದಾಖಲೆಗಳ ಸ್ಕ್ಯಾನ್ ಪ್ರತಿಗಳನ್ನು ಅಪ್ಲೋಡ್ ಮಾಡಿ
ಗಮನಿಸಬೇಕಾದ ಮುಖ್ಯ ಅಂಶಗಳು
ಒಟ್ಟು ಪ್ರೋತ್ಸಾಹಧನದಲ್ಲಿ 50% ನಗದಾಗಿ ನೀಡಲಾಗುತ್ತದೆ
ಉಳಿದ 50% ಮೊತ್ತವನ್ನು ಮೂರು ವರ್ಷಗಳ ಅವಧಿಗೆ ಠೇವಣಿಯಾಗಿ ಇಡಲಾಗುತ್ತದೆ
ಪರಿಶಿಷ್ಟ ಜಾತಿ/ಪಂಗಡದ ಒಳಪಂಗಡಗಳ ನಡುವಿನ ವಿವಾಹಗಳಿಗೆ (Intra-caste) ₹2 ಲಕ್ಷ ಸಹಾಯಧನ ಲಭ್ಯ
ಸಾಮೂಹಿಕ ವಿವಾಹ ಕಾರ್ಯಕ್ರಮದ ಮೂಲಕ ಮದುವೆಯಾದವರಿಗೆ ₹50,000 ಪ್ರೋತ್ಸಾಹಧನ ನೀಡಲಾಗುತ್ತದೆ.
ಮಹತ್ವದ ಮಾಹಿತಿ
ಈ ಯೋಜನೆ ಕರ್ನಾಟಕ ರಾಜ್ಯದ ನಿವಾಸಿಗಳಿಗೆ ಮಾತ್ರ ಅನ್ವಯಿಸುತ್ತದೆ. ಇತರ ರಾಜ್ಯಗಳಾದ ಮಹಾರಾಷ್ಟ್ರ, ಕೇರಳ, ಉತ್ತರ ಪ್ರದೇಶ ಮೊದಲಾದವುಗಳಲ್ಲಿ ಅಂತರ್ಜಾತಿ ವಿವಾಹಕ್ಕೆ ವಿಭಿನ್ನ ನಿಯಮಗಳು ಹಾಗೂ ಮೊತ್ತದ ಯೋಜನೆಗಳು ಜಾರಿಯಲ್ಲಿವೆ.
ಹೆಚ್ಚಿನ ಮಾಹಿತಿಗಾಗಿ ನಿಮ್ಮ ಜಿಲ್ಲಾ ಸಮಾಜ ಕಲ್ಯಾಣ ಕಾರ್ಯಾಲಯ ಅಥವಾ ಸಮಾಜ ಕಲ್ಯಾಣ ಇಲಾಖೆಯನ್ನು ಸಂಪರ್ಕಿಸುವುದು ಒಳಿತು.



