Kannada Janapada Story-05 : ದಡ್ಡನ ಕಥೆ

Kannada Janapada Story-05 : ದಡ್ಡನ ಕಥೆ

 

Kannada Janapada Story-05 : ದಡ್ಡನ ಕಥೆ: ಒಂದೂರಿನಲ್ಲಿ ಒಬ್ಬ ಮುದುಕಿಗೊಬ್ಬ ಮಗ. ಆದ್ರೆ ಸುದ್ದ ದಡ್ಡ. ದಡ್ಡನಾದ್ರೆ ಈಗಲೂ ಅಷ್ಟೆ ನೋಡಿ, ದಡ್ಡನಾಗಿರತಕ್ಕಂತೋರಿಗೆ ಹತ್ತಿರದಲ್ಲಿ ಯಾರು ಹೆಣ್ ಕೊಡೋದಿಲ್ಲ. ಅಂತೋರಿಗೆ ದೂರದ ಪ್ರದೇಶದಿಂದ ಹೆಣ್ ತಂದು ಲಗ್ನ ಮಾಡೋಕು. ಇವ್ರ ವಿಚಾರ ಗೊತ್ತಿರೊದಿಲ್ಲ. ಹಾಗೆ ದೂರಿಂದ ಹೆಣ್ ತಾರೆ.

ಹಾಗೆ ಆ ಮುಲ್ಕಿ ದೂರದ ಪ್ರದೇಶದಿಂದ ಹೆಣ್ ತಂದು ಲಗ್ನ ಮಾಡಿದ್ದು. ಆದ್ರೆ ಹಣ್ಣು ಹಣ್ ಮುದ್ದಿಯಾದ್ದರಿಂದ ಆ ಹೆಣ್ಣನ್ನ ಇವರ ಮನೆಯಲ್ಲಿ ಬಿಟ್ಟಿತ್ತು. ಇನ್ನು ಶಾಸ್ತ್ರ ಸಂಬಂಧ ಮುಗಿದಿರಲಿಲ್ಲ. ಆದ್ರೆ ಹಣ್ ಹಣ್ ಮುದ್ದಿಯಾದ್ದರಿಂದ ಮನಿಯಾಗಿತ್ತು. ‘ಅಮ್ಮಾ.’ ‘ಏನಪ್ಪಾ?’ “ಅತ್ತೆನ್ನು ಮಾವನ್ನು ನೋಡೇಕಲ್ಲ” ‘ಅಯ್ಯೋ ಹೋಗಪ್ಪ ಯಾರು ಬ್ಯಾಡಾಂತಾರೆ, ಹೋಗಿ ನೋಡ್ಕಂಬಾ ಹೋಗು.”

ಅತ್ತೆ ಊರಿಗೆ ಹೋದ. ಮುಂಗಾರು ಕಾಲ. ಜ್ವಾಳ ಬಂದಿರದು. ಕಿಚಡಿ ರೊಟ್ಟಿ ಮಾಡಿ ಕಾಯಾಲು ಕಾಸಿದ್ರು. ಸರಿ ಇನ್ನ ಚಿಕ್ಕ ಮಾವನ ಮಕ್ಕು ದೊಡ್ಡ ಮಾವನ ಮಕ್ಕು ಇದ್ರಲ್ಲ. ಮಾವ ಬಂದ ಮಾವ ಬಂದ ಅಂದ್ರು.

ಎಲ್ಲಾರು ಹೋಗಿ ಕುತಕಂಡ್ರು. ಇನ್ನು ಅಷ್ಟಕ್ಕೆ ಅಡ್ಡೆ ಯು ಆಗಿತ್ತಲ್ಲ? ಕಿಚಡಿ ರೊಟ್ಟಿ ಮಾಡಿ ಹಾಕಿದ್ರು. ಇನ್ನ ಅವರೆಲ್ಲ ಏಳೋ ಒಬ್ಬ ಊಟುಕ್ ಕೂರಾಕ್ ಆಗುತ್ತೆಯೇ ? ಎಲ್ಲಾರು ಕುತಗಳಪಾ ಅಂದ. ಕುತಗಂಡ್ರು. ಈ ಕಿಚಡಿ ರೊಟ್ಟಿ ಹಕ್ಕೆಂದ್ ಕಾಯಾಲು ಬಿಟಗಂದ್ ಬಾಯಿದಾರಂತೆ. ನೋಡ್ತಾ ನಾನು ಬಂದುದೆ ಎಂತದೊ ಮಾಡಿಬಿಟ್ಟು ದಾರಲ್ಲ. ನನ್ನತ್ರ ಬಂದ್ ಕೂಟ್ಟೆ ಒಲ್ಲೆ ಅಷ್ಟೆಕೂಂತ ತಿರಾನ ಮಾಡ್ಕಂಡಿದ್ದಲ್ಲ? ಹಂಗೆ ಇವನ್ನತ್ರಕ್ ಬಂದ್ ಕೂಟ್ಟೆ ಒಲ್ಲೆ ಅಂದ.

‘ಯಾಕಪ್ಪಾ ಒಲ್ಲೇಂತಿ? ಒಸಿ ಅನ್ನನರ ಇಕ್ಕಿಸ್ಕೆಂದು ಉಣ್ಣಪ್ಪ’. ಹೂಂ ಹುಂ ಬಿಲ್‌ಕುಲ್ ನಾನು ಮುಟ್ಟೋದೇ ಇಲ್ಲ ಹಾಗೆ ಅಂತ ಹೇಳಿದ್ರು ಸುಮ್ಮೆ ಬಿಡ್ಡಾಗಲ ಅಂದು ಒಂದಷ್ಟೇ ಕಿಚಡಿ ರೊಟ್ಟಿ ಕಾಯಾಲು ಬಿಟ್ರು.

ಇನ್ನ ಹಾಕಿದ್ರಲ ಒಂಚೂರು ಇನ್ನು ಸುಮ್ನರ ಕುತಗಂಡ್ಲಿಲ್ಲ. ಅದಂಚೂರು ವರಳಿಸಿ ಬಾಯಿಗೆ ಮಡಿದ್ದ. ಬಾಳ ರುಚಿಯಾತು. ನಾನು ಆಗ ಒಲ್ಲೆಂದೆನೆ ಇಕ್ಕಿಂದ್ರೆ ನಾಚೆ ಆಯ್ತದೆ. ಬಿಟ್ರೆ ಇಂತ ಪದಾರ್ಥ ಬಿಟ್ಟೇಕಲ್ಲ. ಆಗದುಲ್ಲ. ನಮ್ಮೂರಿಗಾದ್ರು ಹೋಗಿ ಮಾಡ್ಲೆ ಬಿಡೋಕೂಂತೇಳಿ ಹೋಗಿದ್ದೆ ಮನಿಕ್ಕಂಬುಟ್ಟ.

ಕೋಳಿ ಕೂಗೊ ಹೊತ್ತೆ ಎದ್ದ. ಇದ ನೆನ್ನಂದ್ ಹೋಗೋಕಲ್ಲ ದಾರಿಲೋಗ್ತಾ ಕಿಚಡಿ ಕಿಚಡಿ ಕಿಚಡಿ ಕಿಚಡಿ ಅಂಡ್ಕೊಂಡೇ ಹೋಗ್ತಿದ್ದಂತೆ. ಗದ್ದೆ ಬದ ಕಾವಲೆ. ಕಾಲುವೆ ದಾಟ ಬೇಕಾದ್ರೆ ಕಿಚಡಿ ಅನ್ನುದ ಬಿಟ್ಟಿಟ್ಟ. ಪಚಡಿ ಪಚಡಿ ಪಚಡಿ ಅದ್ಯಂದೆ ಹೋಗ್ತಾಯಿದ್ದ. ಊರಿನತ್ರ ಪಕ್ಕದಲ್ಲಿ ಒಂದು ದೊಡ್ಡ ಹಳ್ಳ, ಆ ಪಕ್ಕದಲ್ಲಿ ನಿಂತಗಂದ್ ಇಳಿಬೇಕು. ಅಲ್ಲೊಬ್ಬ ಅದೇ ಊರಿನ ಬೆಸ್ತ ಮೀನು ಹಿಡಿಯೋದಿಕ್ ಬಂದಿದಾನೆ.

ಈ ಬಟ್ಟೆ ಬರೆ ಎತ್ಕಳದಲ್ಲಿ ಅದ್ದು ಮತ್ತೆ ಬಿಟ್ಟ. ಮತ್ತೆ ಬಿಟ್ಟು ನೀರಲ್ಲಿ ತಡಕಾಡ್ತ ಇದ್ದನಂತೆ. ಈ ಬೆಸ್ತನಿಗೆ ಗೊತ್ತಿತ್ತೆಲ್ಲ ಇವನು ಸುದ್ದ ದಡ್ಡ ಅನ್ನೋದು. ಇವನೇನೊ ಕಳಕಂಡ್ ತಡಗ್ತಾ ಇದಾನೆ; ನಾ ತಡಕಿದ್ರೆ ನನಗೆ ಸಿಕ್ಕಿಂತ ಬಲೆ ಅಲ್ಲಿ ಬಿಟ್ಟ. ಇನ್ನು ಬಂದ ತಡಕಾಕೆ. ತಡಗ್ತಾ ಇದ್ದಾಗ ಹೂಸಬಿಟ್ಟ. ‘ಏನೋ ಕಿಚಡಿಗಬ್ ರೊಟ್ಟಿ ತಿಂದಂಗ್ ಉಚಿಯಲ್ಲೊಂದ ಅಂ…… ಸಿಕ್ಕು ಕಣಪ್ಪಾಂತ ಹೊಡಿತಾನೆ ಓಟ.

ಇನ್ನಿಗೇನ್ ಸಿಕ್ಕಿದ್ದೀಯಂತ ಇವು ಓಡ್ತಾನೆ “ಏಲ್ಲಾ ಸಿಕ್ಕಿದ್ದು? ” ಏ ನಮ್ಮತ್ತೆ ಮನೇಲಿ ಕಿಚಡಿ ರೊಟ್ಟಿ ಮಾಡಿ ಹಾಕಿದ್ರು. ಅದೇಳಾಕ್ ಬರಿಲ್ಲ. ಅದ್ಯೆ ನಿಂತಗಂದಲ್ಲಿ ತಡಕ್ಕಾಯಿದ್ದೆ ಅದಕ್ಕೋಸ್ಕರ” ಅಂದ ಅಯ್ಯೋ ದಡ್ಡ ಸೂಳೆ ಮಗನೆ ಇಷ್ಟಕ್ಕೆ ಎಷ್ಟೇ ಮೀನ್ ಹಿಡಿತಿದ್ದೆಲ್ಲೊ ಹಾಗಂತೇಳಿ ಹಿಂದುಕ್ ಹೋಗಿಬಿಟ್ಟ.

ಮನಿಗೆ ಬಂದ. ಮನಿಗೆ ಬಂದ್ರಲ್ಲಿ ಅದು ಮರ, ಹೆಂಡ್ತಿದ್ದು. ‘ಲೇ’ ಅಂದ. ಏನ್ರಿ? ಅಂದಳು. ಅದು ಮಾಡೇಂದ. ಅದು ಮಾಡೊಂದ್ರೆ, ಇದು ಉಪ್ಪಿಟ್ ಮಾಡ್ಲ. ಬ್ಯಾಡ. ವಡೆ ಕಜ್ಜಾಯ ಮಾಡ? ಬ್ಯಾಡ, ಕೋಡಳೆ ಮಾಡ್ಲೆ? ಬ್ಯಾಡ. ಅಯ್ಯೋ ನಮ್ಮತ್ತೆ ನಮ್ಮ ತಂದೆತಾಯಿಗಳು ಬಂದ್ರೆ ಏನಂದ್ಯಂದಾರು.

ಏನುಕ್ಕ ಬ್ಯಾಡ ಬ್ಯಾಡ ಅಂದ್ರೆ ನಾನೇನು ಮಾಡ್ಲಿ? ಏ ಅದ್ದಾಡೆ ಮಾಡಕಿಲ್ವೆನೆ ನೀನು ಅಂತ ಹೆಂಡ್ತಿಗೆ ತಟಾತಟ್ಟೆ ನಾಲೈದು ಏಟ್ಟು ಹೊಡ್ಡ. ಅವಳು ಅಳ್ತಾ ಕೂಗಿಕೊಂಡ್ಲು. ತಾಯಿ ಬಂದು “ಯಾಕವ್ವಾ…. ತಂದೆ ತಾಯಿಗಳು ಬಿಟ್ ಬಂದಿರೊ ಹುಡ್ಗ ಯಾಕೆ ಹೊಡಿತಿಯಪ್ಪಾ ? ಅದ್ದಾಡೂಂದ್ರೆ ಮಾಡಾಕಿಲ್ಲವಲ್ಲ ವ್ವಾ; ‘ಅದುಂದ್ರೇನು ‘ ರೊಟ್ಯಾ? “ಇಲ್ಲಾ ಒಂದ್ ಗೇಣು ಸಿಗ್ತದೆ. ಏನು ಕಿಚಡಿರೊಟ್ಟಿನಪ್ಪಾ ? ‘ಹುಂ ಹುಂ’ ‘ಅಯ್ಯೋ ದಡ್ಡ ಸೂಳೆ ಮಗನೆ. ಹಂಗಂದುದ್ರೆ ಅವಾಗ್ಲೆ ಮಾಡಿ ನೀಡ್ತಿದ್ದಲ್ಲಪ ಅಂದು ಕಿಚಡಿ ರೊಟ್ಟಿ ಮಾಡಿ ಹಾಕಿದ್ರು. ಅವತ್ತೆ ಒಳ್ಳೆ ಶುಭದಿನವಾದ್ದರಿಂದ ಹೆಣ್ಣಿನೋರು ಬಂದ್ರು.

ಅಮ್ಮಾ ಹೆಣ್ಮಗುವನ್ನು ಕರಂದ್ ಹೋಗಾಕ್ ಬಂದುದೇವಿ. ನಿಮ್ಮ ಮಗನ್ನ ನಾಳೆ ಸಾಯಿಂಕಾಲ ಬರಾಕ್ ಹೇಳಿ ಬಿಡ್ರಮ್ಮ. ಆಗ್ಲಿಂತೇಳಿ ಹೆಣ್ಮಗಳನ್ನ ಕಲ್ಕಂದ್ ಹೋದ್ರು.

ಇನ್ನು ಎಲ್ಲೋ ಹೋಗಿದ್ದೋನು ಬಂದ “ನೋಡಪ್ಪಾ ನಿಮ್ಮ ಮಾವಾರು ಶಾಸ್ರೋಕ್ತವಾಗಿ ಕರಿಯಾಕ್ ಬಂದ್ರು. ಹೋಗು. ಹೋಗಿ ಮದ್ದು ನಿನ್ನ ಬಟ್ಟೆ ಬರಿಗಳ ಸೆಳಕಂದ್ ಬಾರಪ್ಪಾ” ಅಂತೇಳಿದ್ದು ತಾಯಿ. “ಐಯ್ ನಾನು ಖಂಡಿತವಾಗಿಯು ಹೋಗುವುದಿಲ್ಲ.” ಯಾಕಪ್ಪ ಹೋಗದಿಲ್ಲ ಅಂತೀಯೆ ?” “ಶಾಸ್ಕೋಕ್ತವಾಗಿ ಹೋಗೋಕು.

ಯಾಕುಯಿಲ್ಲ ನೋಡವ್ವಾ ನಾ ಕಿಚಡಿ ರೊಟ್ಟಿ ಸಿಟ್ಟಿನ ಬಾಗೆ ಅವಳ ಹಿಡ್ಕಂಡ್ ಹೊಟ್ಟೆ ಬಿಟ್ಟಿದೀನಿ. ಅವಳು ಅವಳ ಅಣ್ಣಂದಿರ ಮುಂದೆ ಹೇಳ್ಕೊಂಡು ನಕ್ಕಾಳೆ.

ಅದ್ರಿಂದ ನಾನು ಹೋಗೋದಿಲ್ಲ.” “ಹಾಗಲ್ಲಪ್ಪಾ… ಹುಚ್ಚ. ಶಾಸ್ರೋಕ್ತವಾಗಿ ಹೋಗಬೇಕು. ನೋಡಪ್ಪಾ ನಿನಿಗೆ ಮೂರು ಬುದ್ವಂತೆ ಮಾತ್ ಹೇಳಿಕೊಡ್ತೀನಿ. ಹಾಗಾದ್ರೆ ಮೂರ್ ಬುದ್ವಂ ಮಾತ್ ಹೇಳಿಕೊಡ್ತಾಳೆ ನಮ್ಮ ವ್ವಾಂದು ಹೋದ, ಬಟ್ಟೆ ಬರೆ ಸೆಳ್ಳಂದ್ ಬಂದ. ಎಲ್ಲಮ್ಮ ಹೇಳಮ್ಮ ನನಿಗೆ ಮೂರ ಬುದ್ವಂತೈ ಮಾತ್ ಹೇಳೇನಿ ಅಂದಿಲ್ಲ ಅಂದ.

Janapada


ದೂರದ ದೇಶದಲ್ಲಿ ಹೆಣ್ ತಂದಿರೋದು. ನಿಮ್ಮತ್ತೆ ನಿಮ್ಮಾವ ಬಂದು ಮಾತಾಡ್ತಿದ್ರೆ ಬಾಯ್ತುಂಬ ಮಾತಾಡಪ್ಪ ಚೌಕಾಸೀಲಿ ಮಾತಾಡಬ್ಯಾಡ ? ಇನ್ನೊಂದು ಮಗು, ಆದ್ರೆ ನೀನು ಕಾಡದಾರೀಲಿ ಹೋಗಬ್ಯಾಡಪ್ಪಾ ಊರೂರ್ ಮ್ಯಾಲಾಸಿ ಹೋಗಪ್ಪ, ಆಮ್ಯಾಲೆ ಕತ್ತೆ ಆದ ಪಕ್ಷದಲ್ಲಿ ದೀಪ ಎಲ್ಲಿ ಕಾಣ್ಯದೊ ಮಗ ಅಲ್ಲಿ ತಂಗಿದ್‌ಬಿಡು ಅಂದಳು.

ಹೋದ. ಇನ್ನು ತಾಯಿ ಹೇಳಿದ್ದ ಹಂಗೆ ಹೋದ. ಹೋಗ್ತಾಯಿರುವಾಗ ಎಷ್ಟೋ ಊರು ಸಿಕ್ಕುತ್ತೆ. ಹಿಂಗೇ ಹೋಗ್ವಾಗ ಒಂದೂರು. ಆ ಊರಿನ ಕಡೆಮನೆ ಹತ್ತ ಕೋದೋನೆ ಏನ್ಮಾಡ್ತಾ ಇದಾನೆ ಮನೆಮ್ಯಾಕೆ ಹತ್ತ ತಾ ಇದಾನೆ. ಆ ಮನೆ ಯಜಮಾನ ಈಚೆ ಬಂದು ಅರೆ ಇವನ್ಯಾಕೆ ಹತ್ತತಾ ಇದಾನೆ. “ಏ ಯಾಕ್ ಹತ್ತತ್ತಿಯಯ್ಯ?” ”ಏ ಹೋಗಯ್ಯ ನಮ್ಮವ್ವ ಊರಿನ ಮ್ಯಾಲಾಸಿ ಹೋಗೊಂದಾಳೆ, ಇಳೆ ಬಂದ.

” “ಓಹೊ ದಡ್ಡ. ಮನೆಮ್ಯಾಲೆ ಹತ್ತಿ ಹಾರಿ ನೆಗ್ಸ್ ನೆಗ್ಗ ಹಾರಿ ಹೋಗೊಂತಲ್ಲೊ ಹೇಳಿರೋದು. ದಾರೀಲಿ ನಡ್ಕಂಡ್ ಹೋಗೂಂತ ಬಾಪ್ಪಾ ಇಲ್ಲಿ ಹೋಗು, ಇಳೆ ಬಿಟ್ಟ. ಹೊಂಟಬಿಟ್ಟ.

ಅತ್ತೆ ಊರಿಗೆ ಹೋಗಿದಾನೆ. ಅತ್ತೆ ಮನೆ ಮುಂದೆ ಒಂದ್ ಕೈಗಲ್ ಮಾರು ದೂರದಲ್ಲಿ ಹುಲ್ಲು ಕೊಪ್ಪಲು ನ್ಯಾರಕ್ಕೆ ಅಲ್ಲಿಗೆ ಬಂದ. ಅದ್ರು ಮ್ಯಾಲೆ ಮಕ್ಕಂಬುಟ. ಸರಿ ಇವ್ರು ಏನೋ ದೂರದ ಪ್ರದೇಶ ಹೆಚ್ಚು ಕಮ್ಮಿ ಆಗಿದ್ದಕೊಂದು ಉಂಡು ಮಲಗಿದ್ರು. ಇನ್ನು ಬೆಳಗಿನವರು ಕೂತ್ ಬಿಟ್ಟ. ಇನ್ನು ಬೆಳಿಗ್ಗೆ ಕೋಳಿ ಕೂಗತ್ತೆ ಎದ್ದು ಈಕೆ ಹೆಂಡ್ತಿ ಕೋಳಿ ಬಿಡಾನಂತ ಕೊಹ್ಲಿಗೆ ಹೋಗಿದಾಳೆ. ಇನ್ನು ಏನ್ ಕೂತುಬಿಟ್ಟಿದಾನೆ. ಯಾಕಿಲ್ಲಿ ಬಂದ್ ಕೂತಿದಾರೆ? ಹಾಗೇಂತ ಮನಿಗೆ ಬಂದ್ಲು. ಅಣ್ಣಂದ್ರಿದ್ರಲ್ಲ? ಅಣ್ಣ ನಿಮ್ಮ ಬಾವಾರು ಬಂದು ಯಾಕೊ ಕೊಪ್ಪಲ್ಲೆ ಕೂತಿದಾರೆ. ಹೋಗ್ರಣ್ಣ ಕಲ್ಕಂಬರಿ.

ಸರಿ ಬಂದ್ರು. ನಮ್ಮವ್ವ ಬಾಯ್ತುಂಬ ಮಾತಾಡು ಅಂದಿದ್ದಲ್ಲ? ಬಾಯಿ ತುಂಬಾಂದ್ರೆ ಯಾವು ? ಕಡಬೂಂತ ಹೇಳೋಕು ಅಂತ ಯೋಚೆ ಮಾಡ್ಕಂದ್ ಕುತಗಂಡ. ಮಾವ? ಬಂದು “ಯಾವಾಗ ಬಂದ್ಯಪ್ಪ”? “ಕಡಬು” ಅಂದ ಅಳಿಯಾರಿದ್ದೋರು, ಇಲ್ಯಾಕ್ ಕುಂತಿದೆ ಮಾವ, “ಕಡಬು” ಅಂದ. “ಎಷ್ಟರಲ್ಲಿ ಬಂದೆ ಮಾವ,” ಕಡಬು’. ಓ ಇವನಿಗೇನೂ ಕಡಬಿನ ಪಿಚಾಚಿ ಹಿಡ್ಡೆ ಬಿಟ್ಟಿದೇಂತೇಳಿ, ಆ ಕಡೆ ಒಬ್ರು ಈ ಕಡೆ ಒಬ್ರು ಕೈಕೊಟ್ಟಿದ್ರು, ಒಳಗೆ ತಗಂಡೋಗಿ ಕುಂದುರಿದ್ರು. ‘ಅಮ್ಮಾ ನಿಮ್ಮ ಅಳಿಮೈಯನಿಗೆ ಏನೋ ಕಡಬಿನ ಪಿಚಾಚಿ ಹಿಡ್ಸ್ ಬಿಟ್ಟಿದೆ. ಒದೆಲ್ಡ್ ಕಡ್ಡು ಮಾಡ್ಯಾಕು.

ನಾವು ಕೆಲ್ಸ ವಗೈರೆ ಮುಗೆಸ್ಕಂದ್ ಬಂದ್ಬುಡ್ತೀವಿ ಅಂತ ಹೇಳಿಹೋದ್ರು. ಏಟೆಯಾದ್ರು ಅತ್ತೆಗೆ ಅಳಿಮೈಯಾಂದ್ರೆ ಆಸೆಯಲ್ಲಾ. ಆಗ್ಲೆ ಅಕ್ಕಿ ನೆನೆಹಾಕಿ ಒಂದಿಪ್ಟ್ ಕಾಯಿ ತುದ್ದಾಕಿ, ಹಿಂದೆಡೆ ನೀರು ಸೇದಿ ಕೊಡಾನಾಂತ ಬಾವಿಹತ್ರ ಬಂದ್ಲು. ಇವನು ಸುಮ್ನ ರ ಕುತಗಂದ್ಲು ಲ. ಒಳಕಲ್ ಮುಂದೆ ಕೂತಿಲ್ಲ. ಒಂದಿಷ್ ಅಕ್ಕಿ ತಕ್ಕಂದುದ್ದೆ ಬಾಯಿಗೆ ಹಕ್ಕಂಬುಟ. ಆಕೆ ಬಂದು ಕೂಟ್ಟೆ ಬಾಯಿ ಬಿಟ್‌ಬುಟ್ಟ.

ಮತೆ ಹಂಗೆ ಮುಚ್ಚೆಂಬುಟ್ಟ. ಈ ಒಣಅಕ್ಕಿ ಅಲ್ಲಿ ಅಳ್ಳೆಕಂಬುಟ್ಟು, ಬಾಯಿಬಿಟ್ರೆ ಹೆಂಗ್ ಕಾಣ್ಯವಲ ಅಂತೇಳಿ ಇವನು ಇನ್ನು ಬಂದಾಬಸ್ತಾಗಿ ಹಿಡ್ಕಂಬುಟ. ಒಣಅಕ್ಕಿ ಗದ್ದ ಹಿಡ್ಕಂಬುಟ್ಟುತು. ಯಮ್ಮೇನ್ಮಾಡಿಬಿಟ್ಟು, ಪಕ್ಕದ ಮನೇಲಿ “ಯಕ್ಕ ನನ್ನ ಅಳಿಮೈಯಂದ್ ಗದ್ದ ಹಿಡ್ಕಂಡದೆ ಕಣಿ. ನನ್ ಅಳಿಮೈಯಂದ್ ಗದ್ದ ಹಿಡ್ಕಂಡತೆ ಕಣಿ ಅಂದ್ಲು. ಅಲ್ಲೊಬ್ಬ ಶಾಸ್ತ್ರಗಾರ. ಅಣ್ಣ ನನ್ ಅಳಿಮೈಯನ ನೀನು ಮಾತಾಡ್ಲಿ ಬಿಟ್ರೆ ನಿನಿಗೆ ಮುವತ್ ರೂಪಾಯಿ ಕೊಟ್ ಬಿಡ್ತನಪ್ಪಾ ಅಂದು ಕರಂದ್ ಬಂದ್ಲು.

ಬಂದ್ ನೋಡ್ಡ. ಒಂದ್ ಸ್ವಲ್ಪ ಕಿಲಾಡಿಗಂಡ ಅನ್ನು. “ಎಲ್ಲಿ ನೀವು ಕದಹಕ್ಕೆಂದ್ ಹೊರಟಬಿಡಿ ನೀವೆಲ್ಲ” ಅಂದ. ಎಲ್ಲಾರು ಆಚೆ ಕಳಿಸಿಬಿಟ್ಟ. “ಲೋ ಕೊಬರಿ ತುರ್ ಕೊಡ್ತಾ ? ನೀ ಹೇಳಾಕಿಲ್ಲಾಂದ್ರೆ ನಾನು ಹೋಗ್ತಿನ್ ನೋಡಪಾ. ನನಿಗೆ ನೀನು ಹೇಳಬ್ಯಾಡ. ನಿನಿಗೆ ನಾನು ಹೇಳೋದಿಲ್ಲ ಅಂದ. ‘ಈ ಬರೆ ಅಕ್ಕಿ ತಿಂದುಕ್ಕೆ ನನಿಗೆ ಮುವತ್ ರೂಪಾಯಿ ಕೊಡೋಕಾಗಿದೆ. ಹುಂ ನಿಂದ ನಾನ್ ಹೇಳಕಿಲ್ಲ. ನಂದ್ ನೀನು ಹೇಳಬ್ಯಾಡ” ಅಂದ. ಓಹೊ ಆಗ್ಲಿ ‘ಅಂದ್ರೆ ನಿಮ್ಮತ್ತೆ ನಿಮ್ಮಾವ ಬಂದು ಕಂಡ್ ಗಿಂಡ್ ಮಾತಾಡ್ತಿದ್ರೆ ಜೋರಾಗಿ ಮಾತಾಡ್ತಿಯಲ್ಲ? “ಓಹ್ ಜೋರಾಗಿ ಮಾತಾಡೇನಿ”. ಸರಿ ಆ ಮಂತ್ರ ಅಂದ ಈ ಮಂತ್ರ ಅಂದ. ಕದತಗದ. ಮಾತಾಡ್ತಿದ್ರು. ಚನ್ನಾಗೆ ಮಾತಾಡ್ಡ, ಚನ್ನಾಗಿ ಮಾತಾಡಿದಮ್ಯಾಲೆ, ಇವಿಗೆ ಮುವತ್ ರೂಪಾಯಿ ಕೊಟ್ ಕಳಿಸಿಬಿಟ್ರು.

ಇನ್ನ ಆ ಮುದ್ದಿ ಮಾಡ್ಲಾರೂಂತೇಳಿ ಶಾಸ್ತ್ರ ಸಂಬಂಧ ಮುಗಿಸಿಬಿಟ್ಟು ಕಳಿಸಿದ್ದು ಬೆಳಗ್ಗೆ ಗಂಡಹೆಂಡೇರ್ ಇಬ್ರಾಳು. ಇವತ್ತಿನ್ ದಿವಸ ಒಂದ್ ಹೆಣ್ ಮಗುವನ್ನು ಗಂಡನ ಮನಿಗೆ ಕಳ್ಳದೊಂದ್ರೆ ಸುಮೆ ಆತ? ಇನ್ನು ಆಗಂದೇಲೆ ಕಳಿಸ್ಟೇಕು. ಆಗ ಅದು ಇದು ಅಡ್ಡೆ ಉಪ್ಪಾರ ಮಾಡಿ, ವಣ ಕಜ್ಜಾಯ ಮಾಡಿ ಜನ ಕಳ್ಳಕ್ಕೆ ಹನ್ನೆಲ್ಡ್ ಗಂಟೆ ಆಗೋಯ್ತು. ಮಗಳ ಶೃಂಗಾರ ಮಾಡಿದ್ರು. ಅವಾಗ ಅತ್ತೆ ಏನ್ಮಾಡಿದ್ದು? ಅಳಿಮೈನಿಗೆ ಪ್ರೀತಿಗೋಸ್ಕರವಾಗಿ ತಿನ್ನಂತೇಳಿ, ಇಷ್ ವಡೆ ಕೊಟ್ಟಂತೆ. ಆಮ್ಯಾಲೆ ಇಬ್ರುನ್ನು ಕಟ್ಟಿದ್ರು.

ಇನ್ನು ತಿಂತಾ, ಇವನಿಗೇನಾತು? ಹೆಣ್ಣಿ ಮ್ಯಾಲೆ ಆಸೆ ಬರುಲ್ಲ. ವಡೆ ಕೊಟ್ಟಿದ್ದಲ ಅತ್ತೆ ಅದ ತಿಂದ್ಯಂತ ಹೊಂಟ್ ಬಿಟ್ಟ. ಆಕೆ ಹೆಂಡ್ತಿ ಹಿಂದಗಡೆ ಓಡ್ತಾ ಓಡ್ತಾ ಹೊಂಟು. ಹಣೆಮ್ಯಾಲೆ ಕುಂಕೃ ಇಟ್ಟಿದ್ದಾ? ಅದು ಬಿಸಿಲಿಗೆ ಬೆವತುಬಿಟ್ಟು ಮಖತುಂಬ ಆಯ್ತು. ಓಡ್ತಾ ಓಡ್ತಾ ಅರ್ಧ ದಾರಿಗೆ ತೀರೊಯ್ತು ವಡೆ. ಹಿಂದುಕ್ ತಿರುಗಿ ನೋಡ್ಡ, ಮುಖ ತುಂಬ ಆಯ್ತಾ? ಅನ್ನು ಓಹೋ ನಮ್ಮಾವ ನನ್ನಿಂದ್ ಟ್ಲಿ ಯಾವೋ ಪಿಚಾಚಿ ಕಳಿಸಿಬಿಟ್ಟಿದಾನೆಂದು ಹೊಡಿತಾನೆ ಓಟ.

ಅಲ್ಲೊಬ್ಬ ಸಾಬ್ರವನು ಕುದ್ರೆ ಮ್ಯಾಲೆ ಕುತಗಂದ್ ಹೋಗುದ್ದ. ಲೇ ಸಾಬ್ರೆ ನಿಲ್ಲು ಅಂದ. “ಏನಪ್ಪ?” “ಇಗೋ ನೋಡು. ಕುದ್ರೆ ನನಿಗೆ ಕೊಡು, ಅಗೋ ಅಲ್ಲಿ ಬಾಯಿದೆಯಲ್ಲಿ ಪಿಚಾಚಿ, ಅನ್ನ ಕಯ್ಯಂದ್ ಹೊಂಟೋಗು.'” ಕುದ್ರೆ ಇವಿಗೆ ಕೊಟ್ ಬಿಟ್ಟ. ಆ ಹೆಣ್‌ಮಗಳ ಕರಕಂದ್ ಹೊಂಟ. “ಲೋ ಅಣ್ಣಾ ಹ್ಯಾಗೋ ಹತ್ತದು ?'” “ಲೋ ಒಂದಿಷ್ಟು ದೂರ ಹಿಂದೆಡೆ ನಡಕಂಡೋಗಿ ನೆಗಿಯೋ ಆಚೆ. ಒನ್ಸ್ ದೂರ ಹಿಡಕಂಡೋಗಿ ಹಿಂದಗಡೆ ನೆಗಿಯಾಕ್ ಹೋದ. ಪಟ್ಟಂತ ಒದೀತು. ಅಯ್ಯೋ ಕೊಟ್ನಲ್ಲಪ್ಪ ನನಿಗೆ ಏಟು. ಹಾಗೇಂತೇಳಿ ಮುಂದುಕೊಂಟ.

ಅಲ್ಲೊಬ್ಬ ಠಗರಿನೋನಿದ್ದ. ಲೋ ಮಗ ಈ ಕುದ್ರೆ ನೀನೆ ತಗೊ, ಆ ಠಗರು ನನಿಗೆ ಕೊಟ್‌ ಬಿಟು. ನಾನೂರು ರೂಪಾಯಿ ಕುದ್ರೆಗು ನಲ್ವತ್ ರೂಪಾಯಿ ಠಗರಿಗು ಒಂದೆಯಾ ? ಠಗರ ಅಬ್ಬಿಗೆ ಕೊಟ್ಟಿಟ್ಟ, ಕುದ್ರೆ ಇನ್ನು ಹಿಡ್ಕಂಡ. “ಹ್ಯಾಗೊ ಮಗ ಕರೆಯೋದು ? ” ಅಣ್ಣಾ ದಿಣ್ಣೆ ಮ್ಯಾಲೆ ಠಗರು ನಿಲ್ಲು. ಹಳ್ಳದಲ್ಲಿ ನೀನಿಂತಗಂಡು ನಡೀಮಗ ಅನ್ನು, ಹಂಗೆ ಅಂದ. ಅಂದುದ್ದೆ ಸೈ ಗುದ್ದಿ ಬಿಡ್ತು.

ಮುಂದುಕೊಲ್ಲ. ಅಲ್ಲೊಬ್ಬ ಹಲಸಿನ ಹಣ್ ಮಾಲ್ಕಂದ್ ಬಾಯಿದ್ದ. “ಲೋ’ ಅಣ್ಣಾ, ಈ ಠಗರ ನೀ ತಗೋ, ಆ ಹಲಸಿನ ಹಣ್ಣು ನನಿಗೆ ಕೊಡು ಅಂದ. ನಾಲ್ಕಾಣಿ ಹಲಸಿನ ಹಣ್ಣಿಗು ನಲವತ್ತು ರೂಪಾಯಿ ಠಗರಿಗು ಒಂದೆಯ ? ಹಲಸ್ನಣ್ ಇವಿಗೆ ಕೊಟ್ಟ. ಠಗರ ಅನ್ನು ಮಡಿಡ್ಕಂಡ. ಹ್ಯಾಗೋ ಹಲಸ್ನಣ್ ಹೊತ್ಕನದು ? ಇನ್ನೊಂದು ಸ್ವಲ್ಪ ತೊಟ್ ಮುದ್ದು ತಲೆ ಮ್ಯಾಲೆ ಮಡಿಕ್ಕ ಮಗ ಅಂದ. ತೊಟ್ ಮುದ್ದು ತಲೆಮ್ಯಾಲೆ ಮಡಿಕ್ಕಂಡ. ಅಂಟಲ್ವೆ? ಅಂಟಸ್ಕಂದ್‌ಬುಡು.

ಊರಿಗೆ ಬಂದ. ನೆನಿಬಾರೋನು ಇದ್ದಲ್ಲ? ‘ಲೋ ಅಣ್ಣಾ ನನ್ ತಲೆನ ಚೌರ ಮಾಡಿಬಿಡೊ. ಹಲಸ್ನಣ್ಣ ನೀ ತಗಳೋ. ತಲೆನೆಲ್ಲ ಚೌರ ಮಾಡಿಬಿಟ್ಟ. ಹಲಸ್ನಣ್ಣ ಇವು ತಗಂದ.

ಮನಿಗೆ ಬಂದ. “ಏನಪ್ಪಾ?” “ಏನವ್ವಾ? ಹೀಗಿಗಾಗೋಯ್ತು ಕಣವ್ವಾ”? ಲೋ, ಇಂತ ಕೆಲ್ಸ ಮಾಡಿಬಿಟ್ಟೆನೋ. ನಾನೇನ್ ಮಾಡ್ಲಿ? ದೂರದ ಪ್ರದೇಶದಲ್ಲಿ ಹೆಣ್‌ ತಂದು ಲಗ್ನ ಮಾಡಿದ್ರೆ ಇಂತ ಕೆಲ್ಸ ಮಾಡಿಬಿಟ್ಟಿಲ್ಲ. ಆಗಲಿ ಬಾಯಿಲ್ಲಿ. ಈಗೆಲ್ಲ ಕೆಲಸದ ಕಾಲ. ಯಾರು ಸೌದೆ ಸೊಪ್ಪು ಹೊಡಿಯಾಕ್ ಬಂದುಲ್ಲ. ಇಲ್ಲೆ ಹತ್ತಿರದಲ್ಲೋಗಿ ಒಂದ್ ಹೆಣ್ ನೋಡ್ಕಂದ್ ಬತ್ತೇನಿ. ನಮ್ಮ ದೊಡ್ಡದಾದ ಆಲಮರಕ್ಕೋಗಿ ಒಂದ್ ಕೊನೆ ಕಡ್ಯಾಂಬಾಪ್ಪಾಂತೇಳಿ ಮಗನಿಗೆ ಹೇಳಿಬಿಟ್ಟು, ಊಟುಕ್ ಕೊಟ್ಟು ಊಟ ಮಾಡ್ಲಿ, ಅವುನ್ನ ಮರ ಕಡಿಯಾಕ್ ಕಳ್ಳಿ, ಈಯಮ್ಮ ಹೆಣ್ ನೋಡ್ಕಂಬರಾಕ ಹೊರೋದ್ಲು.

ಇನ್ನೇನ್ ಮಾಡಿಬಿಟ್ಟ. ಮರದಮೇಲೆ ಮ್ಯಾಲಕ್ ಹತ್ತಿ ಬುಡ ಕಡಿತಾಯಿದ್ದ. ಎಲ್ಲಾರು ಕೆಳಗೆ ನಿತಗಂದೆ ಬುಡಕಡುದ್ರೆ, ಇನ್ನು ಮರದ ಮ್ಯಾಲೆ ನಿತಗಂದ್ ಬುಡ ಕಡಿತಾಯಿದ್ದ. ಕಡಿತಾಯಿದ್ರೆ ಅದೆ ಊರಿನೋರು ಮೂರುಜನ ಹೋಗ್ತಾ “ನೋಡು ಈ ದಡ್ಡ ಸೂಳೆಮಗನ್ನ ಮರದಮ್ಯಾಲೆ ನಿತಗಂಡ್ ಬುಡ ಕಡಿತಾನಲ್ಲ ಸಾಯಾಕಿಲ್ವ?’ ಇದು ಕೇಳಲ್ಲ ಬಂದುದ್ದೆ ಮೂರ್ ಜನಾನು ಅಡ್ಡ ಹಾಕ್ತ, ಏನೋ ಏಕೋ ? ಏನು ಇಲ್ಲಿ ನಾ ಸಾಯ್ತನಿ ಅಂದ್ರಲ್ಲ. ಯಾವಾಗ ಸಾಯ್ತಿನಿ ಹೇಳಿಬಿಟ್ಟೋಗಿ’. ‘ಏ ಹುಚ್ಚ ನಾವೇನು ಬ್ರಹ್ಮಾಂತ ತಿಳ್ಕೊಂಬುಟ್ಟಿನೊ ? ದಡ್ಡ, ಮರದ ಮೇಲೆ ನಿತಗಂದ್ ಬುಡ ಕಡಿತಾರೆನೋ ? ‘ ಅದೆಲ್ಲಾ ಆಗಾಕಿಲ್ಲ.

ನಾನ್ಯಾವಾಗ ಸಾಯ್ತಿನಿ ಹೇಳಿಬಿಟ್ಟೋಗ್ರಿ. ಇವು ಯಾವೊ ಒಂದು ಕಾರ್ಯಾಂತಕ್ಕಾಗಿ ಅರ್ಜೆಂಟ್ ಹೊಂಟುದ್ರು. ‘ಲೋ ಹೋಗೋ ನಿನ್ನ ಮೂಗು ಚೊಟ್ಟಾದ್ದಿನ ಸಾಯ್ತಿ’ ಅಂದ್ರು, ಬಂದ್ಬುಟ್ಟ. ಶಿವಕ್ಕ ನನ್ ಮೂಗು ಚೊಟ್ಟಾಗೈತೆನೊ ನೋಡು. ನಂಜಣ್ಣ ನನ್ ಮೂಗು ಚೊಟ್ಟಾಗಿದೆಯೇನೊ ನೋಡು. ಅಲ್ಲೊಬ್ಬ ಸಿಟ್‌ ಬಂದು ಹುಂ ಕಣೋ ಚೊಟ್ಟಾಗತೆ ಅಂದ್ಬುಟ್ಟ. ಬಂದುದ್ದೆ ಕದಹಾಕಿತ್ತಲ್ಲ? ಲೇ ಕದ ನಮ್ ತಾಯಿ ಬಂದ ಕೂಟ್ಟೆ, ನಿನ್ ಮಗನ ಮೂಗು ಚೊಟ್ಟಾಗೆದೆ ಅಂತ ಹೇಳಿಬಿಡು. ನಿನ್ನ ಮಗ ಕಾಡಿಗೆ ಸಾಯಕೋದಾಂತ ಹೇಳಿಬಿಡಲೆ ಕದಾಂತ ಹೇಳ. ಕಾಡಿಗೋಗಿ ಆಳುದ್ದ ಗುಂಡಿ ತಕ್ಕಂಡ್ ಹುಡ್ಕೊಂಡ.

ಆ ಕಾಡ್ಲೆ ಜೇನು ಬಿಟ್ಟೋದಿಕ್ಕೆ ಇಬ್ರಾಳ್ ಬಂದುದ್ರು. ಒಂದು ಮೂರಗಡಿಗೆ ಜೇನು ಬಿಚ್ಚಿದಾರೆ. ಆಲೆ ಪಶ್ಚಿಮಾಂಬುಧಿಯಲ್ಲಿ ಮುಳುಗೋ ಟೈಮು. ಮೂರಡ್ಡೆ ಬಿಚ್ಚಿ ಬಿಟ್ರಲ್ಲ. ಇನ್ನೊಂದ್ ಗಡಿಗೆ ಹೊಡ್ಕೊಳೋರಿದ್ರೆ ಕೂಲಿಕೊಟ್ ಕರೆಂದ್ ಹೊಂಟೋದೆವಲ್ಲ ಅಂತ ಬಂದುದಾರೆ. ಇನ್ನು ಗುಂಡಿ ಹೊಡ್ಕಂಡ್ ಹೊಡ್ಕೊಂಡಿದಾನೆ. ‘ಲೋ ಯಾಕೋ ಹೂಂದೀಯ ?’ ‘ಲೇ ಹೋಗಯ್ಯ, ಸಾಯಾಕ್ಕೆ ಹೂಡ್ಕೊಂಡಿದೇನಿ’, ‘ಎಲ ಇವ ಏನಂದೆ ಸಾಯಾಕೆ, ಏ ಅಣ್ಣ ಇಲ್ಲೆ ಹತ್ರ ಊರು ನಮ್ಮು.

ಮೂರ್ ಗಡಿಗೆ ಜೇನು ಇಳಿದೇವಿ. ನೀನೊಂದ್ ಗಡಿಗೆ ಹೊತ್ಕಂದ್ ಬರೇಕಲ್ಲ? ಎಷ್ಟೆ ದುಡ್ಜ್ ಕೇಳಿದ್ರು ಕೊಡ್ತೀವಿ’. ‘ಎಷ್ಟೋ ಕೊಡ್ತೀರಿ?’ ‘ಎರಡಾಣಿ ಕೊಡ್ತೀವಿ’, ‘ಕೊಡಿ ಮತ್ತೆ’. ಎರಡಾಣೆ ಇಸ್ಕಂಡಿದಾನೆ. ಒಂದು ಗಡಿಗೆ ಜೇನು ಹೊಡ್ಕೊಂಡಿದಾನೆ. ಅವು ಮುಂದೆ ಹೋಗ್ತಾ ಅವ್ರ. ಹಿಂದೆ ಹೋಗ್ತಾ ಎಡಗೈಲಿ ಗಡಿಗೆ ಹಿಡ್ಕಂಡು, ಬಲಗೈಲಿ ಎರಡಾಣಿ ಹಿಡ್ಕಂಡು, ಇವು ಎರಡಾಣಿ ಕೊಟ್ಟವೆ ಇದರಲ್ಲೊಂದು ಠಗರು ತರೇನಿ, ಅದುನ್ ಸಾಕೇನಿ, ಅದು ಇಷ್ಟಪ್ಪ ಆಗದೆ, ಅಂದ. ಎರಡೂ ಕೈಬಿಟ್ಟ.

ಅದು ದೊಪ್ಪೆಂತ ಬಿದ್ದು ಒಡೋಯ್ತು. ಇನ್ನೇನ್ ಮಾಡ್ತಾರೆ ಅವ್ರು? ಒಂದೊಂದ್ ಒದೆ ಕೊಟ್ ಬುಟ್ ಹೋದ್ರು. ಅದೇ ಟೈಮ್ನಲ್ಲಿ ಇಬ್ರಾಳು ಕಳ್ಳನಕ್ಕೆ ಬಾ ಅವೆ. ಇನ್ನು ಸ್ವಲ್ಪ ಆಳು ಬಲವಾಗಿದ್ದ. ಅಣ್ಣಾ ಇವನ್ನ ನಮ್ಮ ಜೊತೆಗೆ ಕರ೦ದೋದ್ರೆ ಬಾರಾದ್ದ ಹೊರುಷೋದಲ್ಲಣ್ಣ ಅಂತೇಳಿಬಿಟ್ಟು ಮಾತಾಡ್ಕಂಡ್ ಬಾಯಿದ್ರು. ಇನ್ನಿಗೆ ಕೇಳಿಬಿಡು. ಅವು ‘ಏನಣ್ಣ ಕಾನಕ್ ಬಯ?, ‘ಓ ಬರೇನಿ’.

ಸರಿ ಹೋದ್ರು. ಒಂದ್ ಮನಿಗೆ ನುಗ್ಗಿ ಬಿಟ್ರು. ಅವ್ರಲ್ಲ ಪೆಟ್ಟೆ ಗಿಟ್ಟೆ ನೋಡಿದ್ರೆ ಇನ್ನೇನ್ ಮಾಡ್ಡ? ರಾಗಿಕಲ್ಲು ಎತ್ತಿದ. ಅದೇನಂತ ಬಾರ ಇದ್ದುಲ್ಲ. ಹಸಿಕಲ್ಲು ಎತ್ತಿದ, ಭಾರಾಗಿತ್ತು. ಇವು ಹೊತ್ಕಂಡ್ ಕೆಂಬಾರಗುಂಡಿಗೆ ಹಾಕಿದ್ರು. ಇನ್ನು ಹಸಿಕಲ್ ಹೊತ್ಕಂಡ್ ಬಂದ್ ಗುಂಡಿಗೆ ಹಾಕ್ಷ. ಅಯ್ಯೋ ನಿನ್ ಓಸ್ ಅಡ್ಡ ಇದ್ಯಾಕ್ಷ ಈ ಹಸಿಕಲ್ ಹೊತ್ಕಂದ್ ಬಂದಿದ್ದೀಯ ? ನಿವೇನಪ್ಪ ಮಾತಾಡ್ಕಂದ್ ಬಂದಿದ್ದು ? ಬಾರಾದ್ ಹೊರಾಕ್ ಸರಿಗಟ್ಟೆ ಅಂತಲ್ವೇನಪ್ಪಾ ? ರಾಗಿಕಲ್ ಎತ್ತಿದೆ ಬಾರಾಗಿರುಲ್ಲ.

ಹಸಿಕಲ್ ಎತ್ತಿದೆ ಬಾರಾಗಿತ್ತಪ್ಪ ಎತ್ಕಂದ್ ತಗಂದ್ ಬಂದೆ. ಅಯ್ಯೋ ದಡ್ಡ ಹಾಗಲ್ಲ ಕಣೋ. ಬಾರವಾದ ಪದಾರ್ಥವಾಗಿರತಕ್ಕಂತ ಕಬ್ಬಿಣದ ಪೆಟ್ಟಿಗೆ ಇಂತದು ತರಬೇಕು. ಓಹೋ ಹಾಗೋ ನಡ್ರಿ ಇನ್ನೊಂದು ಊರಿಗೆ ಹೋಗಿ ಕಳ್ಳನ ಮಾಡ್ಕಂಡೆ ಸುತ ತಗಂಡೇ ಬರಬೇಕು.

ಇನ್ನೊಂದೂರಲ್ಲಿ ಅವತ್ತಿನ ದಿವಸ ಹಬ್ಬ. ಒಬ್ಬು ಮುದುಕಿ ಮನೇಲಿ ಒಲೆಮ್ಯಾಲೆ ಬೇಯ್ತಾಯಿದೆ. ‘ನಾವು ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡ್ಕಂಡ್ ಬಂದ್ಬವಿ ಹಾಗೇಂತೇಳಿ ಹೊದ್ಯೋಗಿ ಬಿಟ್ಟಿದಾರೆ ಮನೆಯೋರು. ಈ ಮುದ್ದಿಗೆ ಹಂಗೆ ನಿದ್ದೆ ಬಂದಿದೆ. ಮಲಗಿ ಬಿಟ್ಟಿದೆ. ಸರಿ ಒಲೆಮ್ಯಾಲೆ ಪಾಯಸ ಕುದಿತಾ ಐತೆ. ಇವರು ಮೂ‌ರ್ ಜನಾನು ಅದೆ ಮನೆಗೆ ನುಗ್ಗಿದ್ರು.

ಇವೆಲ್ಲ ಪೆಟ್ಟೆ ಗಿಟ್ಟೆ ನೋಡ್ತಾಯಿದ್ರೆ, ಇನ್ನು ಪಾಯಸ ಕುದಿತಾ ಇದ್ದುದ್ ನೋಡಿ ಏ ಬರೊ ಇಲ್ಲಿ. ಪಾಯಸ ಕುಡದ್‌ಬಿಟ್ ಕಳ್ಳನ ಮಾಡ್ಕಂದ್ ಹೋಗಾನ. ಆಗ್ಲಪ್ಪಾಂದ್ಯಂಡ್ ಬಂದ್ ಕುಂತ್ಕಂದ್ರು. ಅವರಿಗು ಎಲೆಹಾಕ್ಷ. ತನಿಗು ಒಂದು ಎಲೆ ಹಕ್ಕೆಂದ. ಸರಿ ಅವನಿಗು ಒಂದ್ ಸೌಟ್ ಹಾಕ್ಷ, ತನಿಗು ಒಂದ್ ಸೌಟ್ ಹಕ್ಕೆಂದ, ಪಾಪ ಎಷ್ಟು ಅಸ್ವಾಗಿ ಮನಿಗಿದಾಳೋ ಮುಷ್ಕಂತ ಎತ್ತಿ ಅವಜ್ಜಿ ಬೆನ್ನಿನ ಮ್ಯಾಲೆ ಕವುಚಿಬಿಟ್ಟ. ಸುಡೊ ಪಾಯಸಲ್ವ ?ಯಪ್ಪಾಂದ್ಲು. ಆ ಮೂಲೆಗೆ ಒಬ್ಬನೋದ.

ಈ ಮೂಲೆಗೆ ಒಬ್ಬನೋದ. ಸರಿ ಅನ್ನೋರು ಇತ್ತೋರೆಲ್ಲ ಬಂದ್ ತುಂಲ್ಕಂಡ್ರು. ಏ… ಏನಜ್ಜಿ ಏನಜ್ಜಿ ಅಂದ್ರು. ಅಪ್ಪಾ ಹಾಗೆ ಪಾಯಸ ಕುದುಸ್ಕೊಂಡ್ ಮನಗಿದ್ದೆ. ಯಾರೋ ಎತ್ತಿ ಬೆನ್ನಿನಮ್ಯಾಲೆ ಬಿಟ್‌ ಬಿಟ್ರು. ಆ ಭಗವಂತನಿಗೆ ಗೊತ್ ಕಣಪ್ಪಾಂತ ಕೈ ಮುಗದ್ದಂತೆ. ಇವನು ಅದೆಗತೆ ಕುಂತುದ್ದಲ್ಲ. ಏ ಹಾಕಿ ಬಿಡೇನೋಡು. ನನ್ನೊಬ್ಬ ತೋರುಸ್ತಿಯಾ ? ಅಂದ. ‘ಅವಾಗ ಅವರಿಬ್ರಾಳ ತಗಂದೋಗಿ ಸ್ಟೇಷನ್ನಿಗೆ ಬಿಟ್ ಬಿಟ್ರು. ಇವನ್ನ ಸುದ್ದ ದಡ್ಡಾಂತ ಬಿಟ್ ಬಿಟ್ರಂತೆ.

 

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

You cannot copy content of this page

error: Content is protected !!
Scroll to Top