Kannada Story-02 ಗುಲಗಂಜಿ ಮಾದೇವಿ
Kannada Story-02 ಗುಲಗಂಜಿ ಮಾದೇವಿ: ಸಿಮೊಗ್ಗ ದಂತದೊಂದು ಪಟ್ಟ. ಆ ಪಟ್ಟದಾಗೊಬ್ಬ ರಾಜ. ಆ ರಾಜಗೆ ಇಬ್ಬಾರು ಗಂಡಕ್ಕಿದ್ರು. ಹೆಣ್ಮಕ್ಕಿಲ್ಲ. ಗಂಡಕ್ಟಿಬ್ರು ಪ್ರಾಬಲ್ಯಕ್ಕೆ ಬಂದ್ರು. ಸಾಲಿಗೆ ಹಾಕಿದ್ರು. ಸಾಲಿಗೆ ಹಾಕಿದಾಗ ಭರ್ತಿ ವಿದ್ಯಾ ಹತ್ತಿ ಬಿಡ್ತು ಇದ್ರಿಗೆ. ಆವಾಗ ಅವರ ಹೊಡಿಯೋದು ಇವರ ಹೊಡಿಯೋದು, ಕಿತಾಪತಿ ಮಾಡೋರು. ಕೇಳಿದ ಪ್ರಶ್ನೆಗೆ ಉತ್ರ ಹೇಳೋರು. ಬರು ದೊವೈ ಮೂಗುಹಿಡ್ಡು ಕಪಾಳಕ್ಕೆ ಹೊಡೋರು ಮೇಷ್ಟ್ರು. ಆವಾಗ ಹುಡುಗ್ರು ಒಂದಿನ ಹೊಡಿಸ್ಟೆಂದ್ರು, ಎಲ್ಡ್ ದಿನ ಹೊಡಿಸ್ಸೆಂದ್ರು, ಮೂರೆ ದಿನಕ್ಕೆ ತಿರುಗಿ ಬಿದ್ರು. ‘ಏ ಅಕ್ಕತಂಗೇರಿಲ್ಲದ ಹಾಟ್ಕಳ್ಳ ನನ್ ಮಕೃ, ಅಕ್ಕ ತಂಗೇರಿಲ್ಲದ ಸೂಳೆಮಕೃ. ನಿಮ್ಮ ಹೊಟ್ಯಾಗು ಅಕ್ಕ ತಂಗೆರಿದ್ದು ದ್ರೆ ನನ್ಯಾಕ್ ಹೊಡಿತಿದ್ರಿ’ ಅಂತ ಬೈದುವು.
ಆವಾಗ ಆದ್ರೇನ್ಮಾಡಿದ್ರು? ಬಂದ್ರು ಮನಿಗೆ ಪಿರ್ಯಾದಿ ತಗಂದು. ‘ಅಪಾ… ನನಿಗೆ ಹಿಂಗ್ ಬೈದ್ರು, ಹಂಗ್ ಬೈದ್ರು. ನಾನು ಸಾಲೆ ಓದದುಲ್ಲ. ಬೈಯಿಸ್ಟಂದ್ ಸಾಲೆ ಓದ್ದಕ? ‘ಅಂತ ಅವ್ರಪ್ಪಂತಾಕೆ. ‘ಅಯ್ಯೋ ನನ್ನಕೃ ನಮಿಗೆ ಹೆಣ್ಣಕ್ಕಿದ್ದುದ್ದು ಖರೆ. ಅವು ಅನ್ನದು ಖರೆ. ಮತ್ತೆ ನಿಮಗೆ ಬ್ಯಾರೆ ಸಾಲೆಗುಡೆ ಕಟ್ಟಿ, ಬ್ಯಾರೆ ಮೇಸ್ಟು ತಂದು ಓದುಸ್ತೇನಿ, ಬಿಡದುಲ್ಲ. ರಾಜ ನಾನು. ನನ್ನ ಮಕ್ಕನ್ನ ದಡ್ರನ್ ಮಾಡದುಲ್ಲ, ಅಂತಂದು ಬ್ಯಾರೆ ಮೇಸ್ಟುನ್ ತಂದು, ಸಾಲೆಗುಡೆ ಕಟ್ಟಿ ಇಬ್ರನ್ನು ಬೇರೆನೆ ಓದ್ದಿದ.
ಇದ್ಯ ಬುದ್ದಿ ಎಲ್ಲ ಕಲ್ಲು. ‘ಅಪ್ಪಾ ಯಾಕೊ ನನಿಗೆ ಓದಂಗಾಗಿಲ್ಲ. ಓದಿ ಓದಿ ಯಾಕೊ ಬೇಜಾರಾಗಿಬಿಡು. ನಮಿಗೆ ಮನುಷ್ಯಾಗೊಂದೊಂದ್ ಸಾವ್ರ ದುಡ್ಡು ಕೊಡು. ನಾವು ಮೂಡ ಮಾಲ್ಲಾಡಕೆ ಯಾಪಾಕ್ಕೆ ಹೊಗೇವಿ’ ಅಂದ್ರು. ಅಯ್ಯೋ ನನ್ಮಕೃ ನಿಮಗೆ ಯಾಪಾರ ಮಾಡೋದು ಗೊತ್ತಾ ? ಯಾತುಗೆ ಬೇಕು ನಿಮಗೆ? ಇನ್ನೊಂದಿಷ್ಟು ಓದಿ ನೀವೇನಾರ ಒಂದ್ ನೌಕ್ರೆ ತಗಂದ್ರೆ ನಮ್ಮ ಕಣ್ಣೆದ್ರಿಗೆ ಇರಿರಪಾ…. ಯಾಪಾರ ಸಾಪಾರ ಬ್ಯಾಡ’ ಅಂತ ತಂದೆ ತಾಯಿ ಬಾಳ ಹೇಳಿದ್ರು. ಅವು ಕೇಳ್ಳಿಲ್ಲ. ಅಮ್ಯಾಗೆ ನಿಮಿಗಿಷ್ಟ ತಿಳಂಗ್ ಮಾಡ್ಕಳ್ಪ’ ಅಂದು ಒಂದ್ ಸೆರಗಿನಾಗೆ ರೊಟ್ಟಿ, ಒಂದ್ ಸೆರಗಿನಾಗೆ ಮುತ್ತು, ಒಂದ್ ಸೆರಗಿನಾಗೆ ಎಲೆ ಅಡಿಕೆ ಕಟ್ಟಿದ್ರು – ಹೆಂಗುಸ್ರು. ತಮ್ಮ ಪದ್ಧತಿ ಇರತಲ ಹಂಗೆ ಎಲ್ಲ ಮಾಡಿ ಆಶಿರ್ವಾದ ಮಾಡಿದ್ರು. ಮನುಷ್ಯಾಗೊಂದೊಂದ್ ಸಾವ್ರ ರೂಪಾಯಿ ಕೊಟ್ರು. ಮನುಷ್ಯಾ ಗೊಂದೊಂದ್ ಕುದ್ರೆ ಕೊಟ್ರು. ಬಟ್ಟೆ, ಬರೆ ಹಕ್ಕೆಂದ್ರು. ಹೋದ್ರು ಮೂಡ ಮಲ್ಲಾಡ ಯಾಪಾರೆ.
ಮಾರ ಮಾರ ಕೊಡ್ತ ತಗಂತ ಒಬ್ಬೊಬ್ರಿಗೊಂದೊಂದ್ ಸಾವ್ರ ರೂಪಾಯಿ ಉಳೀತು. ಅಷ್ಟಕ್ಕೆ ಒಂದ್ ವಾರಾಗಿತ್ತು. ತಿರುಗಿ ಬಂದ್ರು. ಬಂದು ‘ಅಪ್ಪಾ ನಿನ್ ರೂಪಾಯಿ ನೀನ್ ತಗಳಪ್ಪಾ, ನೀನ್ ಕೊಟ್ಟೋವ’ – ಅಂತ ತಲಾಗೊಂದೊಂದ್ ಸಾವ್ರ ತಂದು ತಂದೆ ಕೈಯಾಗೆ ಕೊಟ್ರು. ಲಾಭ ತಾವಿಟ್ಕಂದ್ರು. ಒಂದ್ ವಾರಿದ್ರು. ಆಮ್ಯಾಲೆ ‘ಅಪ್ಪಾ ನಾವ್ ಮತ್ತೆ ಹೋಗ್ತಿವಿ ಯಾಪಾರಕ್ಕೆ, ನಮಗೆ ಆಶಿರ್ವಾದ ಮಾಡ್ರಪಾ’ ಅಂದ್ರು. ತಂದೆ ತಾಯಿ ಆಶಿರ್ವಾದ ತಗಂದ್ರು. ಮತ್ತೆ ಹೋಗಿ ಬಿಟ್ರು ಯಾಪಾರೆ.
ಮತ್ತೆ ಹಿಂದೆ ಹೆಂಗೆ ಯಾಪಾರ ಮಾಡ್ಕಂತ ಮಾಡ್ಕಂತ ಹೋಗಿದ್ರೂ, ಹಂಗೆ ಮಾಡ್ಕಂತ ಮಾಡ್ಕಂತ ಹೋದ್ರು. ಹೋದಾಗ ಮತ್ತು ಹಂಗೆ ಲಾಭಾ ಬಂತು. ಸಾವ್ರ ಸಾವ್ರ ರೂಪಾಯಿ ಉಳೀತು. ಅಪಟಿಗಂತು ತಮ್ಮ ಅಪ್ಪ ಕೊಟ್ಟಿದ್ದ ಹಂಗೆ ಓಗ್ಸ್ ಕೊಟ್ಟಿವಿ, ಇಪಟಗೇನ್ಮಾಡನ ? ನಮಿಗೆನ್ ಮನಿಯಾಗೆ ಬೇಕಾದೋಟ್ ಬಿದ್ದತೆ. ಬಾ ಅಂತಂದು ಶಿಕಾರಿಪುರದಂತ ಪ್ಯಾಟಿಗೋಗಿ, ತಮ್ಮ ನೀ ಆಚೆ ಪೇಟ್ಯಾಗೆ ಬಾ, ನಾ ಈಚೆ ಪ್ಯಾಟ್ಯಾಗೆ ಬತ್ತೇನಿ. ನನಿಗೆ ಕಣ್ಣಿಗೆ ನೆಟ್ಟದ್ದ ನಾ ತಗಂತೀನಿ ಅವೆ. ನಿನಗೆ ಕಣ್ಣಿಗೆ ನೆಟ್ಟದ್ದು ನೀತಗ ಹೋಗಾನ ಮನಿಗೆ ಅಂತಂದು ಬಂದ್ರು. ತಮ್ಮ ಅಚೇಲಿ ಪ್ಯಾಟ್ಯಾಗೆ ಬಂದ. ಅಣ್ಣ ಈಚೇಲಿ ಈ ಪ್ಯಾಟ್ಯಾಗೆ ಬಂದ. ತಮ್ಮ ಹೂವ್ ತಗಂದ, ಹಣ್ ತಗಂದ, ಸೀರೆ ತಗಂದ. ಕುಬುಸ ತಗಂದ. ಎಲ್ಲ ತಗಂದ, ಅಣ್ಣ ಈ ಪ್ಯಾಟ್ಯಾಗೆ ಬತ್ತುದ್ದಲ್ಲ ಅಲ್ಲಿ ಒಂದು ಮುದ್ದಿ ಪುಟ್ಯಾಗೆ ಗುಲಗಂಜಿ ಇಟ್ಕಂಡ್ ಕುಂತುತ್ತು. ಆವಾಗ ಇವು – ‘ಅಜ್ಜಿ ಅವು ಯಾತುಗೆ ಬಾವಜ್ಜಿ ಗುಲಗಂಜಿ ? ‘ ಅಂತ ಕೇಳ. ಅದ್ರೆ ಆ ಅಜ್ಜಿ
‘ಇವ ಹೆಣ್ಣಕ್ಕಿಲ್ಲೋರು ತಗಂದೋಗಿ ಇದುನ್ನ ಒಷ್ಟು ನಡೆ-ನುಡಿಯಿಂದಾನ ಮನೆ ಮಾರು ಬಂದು, ಇವುನ್ನ ಸಲ್ಲಿಸಿದ್ರೆ ಗುಲಗಂಜಿ ಮಾದೇವಿಯಂತ ಹೆಣ್ಮಗಳು ಹುಟ್ಕಳಪ್ಪ. ಅದಕಾಗಿ ಎಲ್ಲಾರು ತಗಂದೋಕ್ತಾರೆ. ಅದ್ಯೆ ಇಟ್ಕಂದು ಮಾರಾಯಿದೇನಿ, ಅಂತು ಮುಲ್ಕಿ.
“ನನಿಗು ಅಕ್ಕ ತಂಗೇರಿಲ್ಲಲ ಏನ್ಮಾಡದು? ಏನರ ಹಣ್ಣು ಹಂಷ್ಣು ಒಯ್ದೆ, ತಿಂದ್ ಹಾಕ್ತವಿ. ಸೀರೆ ಕುಬಸ ಒಮ್ಮೆ ಹರೋಕ್ತಾವೆ. ತಂಗಿದೊಂದ್ ಬೆಲೆ ಉಳಿತತೀಂದು “ಏನಾಕತಜ್ಜಿ ಇದಕ್ಕೆ ಬೆಲೆ ?” ಅಂದ.
41
‘ತಮ್ಮ ಇದುಕೊಂದ್ ಸಾವ್ರ ರೂಪಾಯಿ ಅಕತೆ ನೋಡು’ ಅಂತು ಅಜ್ಜಿ. ಸಾವ್ರ ರೂಪಾಯಿ ಲಾಭ ಬಂದುದ್ದಿಲ್ಲ? ಅದುನ್ ಕೊಟ್ಟು ತಗಂದ ಗುಲಗಂಜೀನ. ತಗಂದ್ ಬಂದು, ಬಸ್ಸ್ಟಾಂಡಿಗೆ ಕೂಡ್ಯಂದ್ರು. ನೀನೇನ್ ತಂದೆ ತಮ ಅಂತ ಇನ್ನು ಕೇಳ. ನೀನೇನ್ ತಂದೆ ಅಣ್ಣ ಅಂತ ಅನ್ನು ಕೇಳ. ಹಿಂಗಿಂಗೇಂತ ಮಾತಾಡ್ಕಂದ್ರು. ‘ನಡಿ ಹೋಗಾನ. ಮನಿಗೋಗಿ ಅವ್ವಗೆ ಕೊಟ್ಬಿಡಾನ. ನಮಿಗೆ ಗುಲಗಂಜಿ ಮಾದೇವಿ ತಂಗಿ ಹುತ್ತಾಳಂತೆ, ಹೋಗಾನ ನಡಿ’ ಅಂದು ಕುದ್ರೆ ಹತ್ಯೆಂದು ಬಂದ್ರು.
ಕುದ್ರೆ ಹತ್ತೆಂದ್ ಬರತ್ತೆ ಅಯ್ಯೋ ನನ್ ಮಕ್ಕು ಬಂದ್ರೂಂತ ಕುಷಿಯಾತು ತಂದೆ ತಾಯಿಗೆ, ಅವರ ಆನಂದೈಶ್ವರ್ಯದಿಂದ ಬರಮಾಡ್ಕೊಂಡ್ರು. ಆವಾಗ ಅಣ್ಣ ಅವರವ್ವಗೆ ‘ಅವ್ವಾ ಈತರ ಹಿಂಗ್ ಗುಲಗಂಜಿ ತಂದುದೇವಿ. ನೀ ಈ ಈ ತರ ಮಾಡೋಕೂಂತ ಹೇಳಿದ. ಆವಾಗ ಗೌಡೇರ ಹಚ್ಚಿ ಮನೆಮಾರು ಬಳ್ಳಿ ಎಲ್ಲ ಮಾಡಿದ್ರು. ಎಲ್ಲ ಆದಮ್ಯಾಲೆ ಅವರವ್ವ ಸಲ್ಲಿಸಿದ್ದು, ಇವು ತಾಯಿಗೆ ಗುಲಗಂಜಿ ಕೊಟ್ಟೋರೆ ಹೋಗಿಬಿಟ್ಟು ಮತ್ತೆ ಮಾಡ ಮಲ್ಲಾಡ ಯಾಪಾರೆ – ಕುದ್ರೆ ಹತ್ತೆಂದು.
ಈಕೆ ಇಲ್ಲಿ ಸಲ್ಲಿಸಿದ್ದೆ ಸೈ ನೀರ್ ನಿಂತು, ಅವ್ವಗೆ. ನೀರ್ ನಿಂತು, ಒಂದಿನ ಅನ್ನೋದು ಒಂತಿಂಗು, ಎಲ್ಡ್ ದಿನ ಅನ್ನೋದು ಎಲ್ಡ್ ತಿಂಗು, ಹಿಂಗ್ ಒಂಬತ್ ದಿನ ಅನ್ನೋದು ಒಂಬತ್ ತಿಂಗಳು ತುಂಬಿ- ಈಕೆ ಜನಕಲ್ಲಾದ್ದು ಹೆಣ್ಮಗಳ, ಮತ್ತೆ ‘ಗುಲಗಂಜಿ ಮಾದೇವಿ’ ಅಂತಲೆ ಹೆಸಿಡಬೇಕಾತು. ಆವಾಗ ಬಾಳ ದೊಡ್ಡಕೆ ಖರ್ಚಿಟ್ಕಂದು, ನನ್ಮಕ್ಕು ಬಲ್ಲಲಾ, ಈಗ ಇಲ್ಲಿದ್ದು ದ್ರೆ ಎಷ್ಟೇ ಹರುಷ ಪಡ್ತಿದ್ರೂ ಎನೊ ಅಂದ್ಯಂದ್ರು. ಎಲ್ಲ ಜನ ಕೂಡಿಸೆಂದು ದೊಡ್ಡ ಕಿಟಗಂದು ನಾಮಕರಣ ಮಾಡಿದ್ರು. ಚಂದಾಗ ಸಾಕಾಕತ್ತಿದ್ರು.
ಆಕಿ ಐದಾರು ವರ್ಷದಕಿ ಆದ್ದು. ಸಾಲಿಗಾಕಿದ್ರು. ಸಾಲಿಗಾಕಿದ್ರೆ ಇಕೆನು ಹಂಗೆ ಮಾಡಾಕತ್ತಿದ್ದು, ಹೆಣ್ ಹುಡ್ರಿಗೆ ಬಂಧಾನನ. ಹೊಡಿಯದು, ಜಿಗಟದು, ಮೂಗಿಡ್ಡು ಕಪಾಳಕೆ ಹೊಡಿಯದು ಹಿಂಗೆ ಮಾಡ್ತಾಯಿದ್ದು. ಹೆಣ್ಣು ಹುಡು ನೋಡಮುಟ ನೋಡಿ ‘ಏ ಕರಿಗ್ಯಾಲ ಲೌಡಿ-ಅಣ್ಣಾರು ಇಬ್ಬಾರು ಕಾಮಣ್ಣ ಭೀಮಣ್ಣ ಆಗಿದ್ರು. ಕರಿಗ್ಯಾಲ ಲೌಡಿ ಹೊಟ್ಯಾಗೆ ಮೂಡಿದ್ದೆ ಸೈ ಎತ್ತಾಗೆ ಹೋದ್ರೆ ಏನೊ ದಿಕ್ಕತ್ತೆ ಹೋದ್ರು. ಇವು ಹಂಗ್ ಹೊಡಿಯಾಕ್ ಬಂದಾಳೆ-ಹಿಂಗ್ ಹೊಡಿಯಾಕ್ ಬಂದಾಳೆ. ಹೋಗ್ ಹೋಗ್ ನೀ ನಮ್ಮ ಸಾಲಿಗೆ ಬರಬ್ಯಾಡ. ನಮ್ಮಣ್ಣಾರು ನಿಮ್ಮಣ್ಣಾರಂಗೆ ಹೋದಾರು ಅಂದ್ರು. ಒಂದಿನ ಬೈಸ್ಥೆಂದೂ ಎಲ್ಡ್ ದಿನ ಬೈಸ್ಥೆಂದೂ ಮೂರೆ ದಿನ ಪಿರ್ಯಾದಿ ತಂದ್ಲು ಅವ್ರಪ್ಪಂತಾಕೆ. ಆವಾಗ ಅವ್ರಪ್ಪ ‘ಅವ್ವ ತಾಯಿ ಹಾಗಿರದು ಖರೆ, ಅವರು ಬೈಯದು ಕರೆ. ಬೈದ್ರು ಬೈಯ್ದವ್ವ, ಬಾ. ನಿಮ್ಮ ಅಣ್ಣಾರಿಗೆ ಕಟ್ಟಿದ ಸಾಲೆ ಗುಡಿ ಐತಲ ಅಲ್ಲಿ, ನಿಮ್ಮಣ್ಣಾರಿಗೆ ಓದ್ದಿದ ಮೇಸ್ಟು ಆದಾರೆ.
ಓದಕಾದ್ರೆ ಓದು, ಓದಲುದ್ರೆ ಇರುವಂತೆ ಬಾ’ ಅಂತಂದು ಮತ್ತೆ ಆಕೆನ್ನ ಅವರ ಅಣ್ಣಾರಂಗ ಆಕೆನ್ನು ಓಬ್ಲಾಕ್ ಹಾಕಿದ್ರು.
ಒಂದೀಟ್ ಹಿಂಗೆ ತಿಳಿಯಂಗಾಗಮುಟ ಓದಿದ್ದು, ಆಕಿಗೇನ್ ದೇವ್ರು ಬುದ್ದಿ ಕೊಟ್ಟೂ ಏನೊ ಅವರಪ್ಪಗೆ ಕೇಳಿದ್ದು –
‘ಅಪ್ಪಾ ನಮ್ಮ ಅಣ್ಣಾರ ತರುದ್ರೆ ನಾನು ಹುಟ್ಟಿದ ಫಲ ಏನು ? ನಾನು ಹೋಕೇನಿ ನನಿಗೆ ಗಂಡ್ಲಿನ ಡ್ರಸ್ ಕೊಟ್ಟಿಡು. ನಾ ಹೋಗಿ ಬರೇನಿ’- ಅನ್ನತೆ,
‘ಅವ್ವಾ ಬ್ಯಾಡ ನನ್ಮಗಳೇ. ಅಲ್ಲಿ ಹೆಣ್ ಮಕ್ಕೊಂದ್ರೆ ಭಾಗ್ಯವು, ನಿನ್ ಬಿಡದುಲ್ಲ. ನೀನ್ ಬೇಕಾದಂತ ಗಂಡು ರೂಪೀಲಿ ಹೋಗು. ನಿನ್ನ ಏನಾರ ಮಾಡಿಬಿಡ್ತಾರೆ. ಬ್ಯಾಡವ್ವಾ” ಅಂತ ಭಾರಿ ತರವಾಗಿ ಹೇಳಿದ್ರು ಕೇಳ್ಳಿಲ್ಲ.
ಅವಾಗ ಅವರಪ್ಪನ ಡ್ರೆಸ್ ಹಕ್ಕಿಂದೂ, ಅವ್ರ ಅಣ್ಣಾರಂಗೆ ಕುದ್ರೆ ಹತ್ತೆಂದೂ ಪೇಟ ಕಟ್ಟೆಂದ್ ಹೊಂಟು, ಅವರಣ್ಣಾರು ಹೋದ ದಿಕ್ಕ ಹಿಡಿದು.
ಹೋದ್ಲು ಹೋದ್ಲು ಹೋದ್ಲು. ಹೋಗಿ ಅವರಣ್ಣಾರು ಹೋಗಿದ್ದ ಅಡಗೋಲಜ್ಜಿ ಮನಿಗೆ ಇಕೆನು ಹೋದ್ಲು. ಹೋದ್ರೆ ಅಲ್ಲಿ ಏನಾಗೇತಪಾಂದ್ರೆ, ಅಲ್ಲೊಬ್ಬ ಪದ್ಮಾವತಿ ಸೂಳಿದ್ದು ಆ ಪಟ್ಟ ದಾಗೆ. ಆ ಪದ್ಮಾವತಿ ಸೂಳೆ ಏನ್ಮಾಡಿದಾಳೆ? ಬಾಗಲಾಗೊಂದ್ ನಗಾರಿ ಇಟ್ಟುದ್ದು. ಯಾಕೊ ನಗಾರಿ ಐತಿ, ಅಂದು ಹುಡ್ರು ಇದ್ದಾವಲ ಕಿತಾಪತಿವು ಆ ನಗಾರಿಗೆ ಹೊಲ್ಡ್ ಬಿಡೋವು. ಹಂಗ್ ಹೊಡ್ ಕೂಡ್ಲೆ ಅವರ ಹಿಡ್ಡದು, ಪಗಡಿ ಆಡಾಕ್ ಕುಂದರಿ ಗೆನದು ಸೋಲ್ಪದು, ಹೂವಿನ ಗಿಡುಕೆ ನೀರ್ ಹೊಯ್ಕಕ್ ಹಟ್ಟೋದು, ಈ ತರ ಮಾಡಾಕ್ ಹತ್ತಿದ್ದು. ಹಿಂಗೆ ಸೋತ ಎಷ್ಟೋ ಸಾವ್ರಾರು ಜನ ಮೂಗಿಗೆ ಕವಡೆ ಕಟ್ಟೆಂದ್ ಹೂವಿನ ಗಿಡಕೆ ನೀರು ಹೊಯ್ಯರು ಹಿತ್ತಾಗೆ. ಆಕೆ ಹಂಗೆ ಮಾಡ್ಕಂತ ಇದ್ದು. ಆ ಕುದ್ರೆ ಅವ್ರ ಅಣ್ಣಾರೋವು. ಆ ಅಡುಗೋಲಜ್ಜಿ ಮನಿ ಯಾಗೆ ಇದ್ದು ಅವ್ರಣ್ಣಾರು ಸೋತು ಹೂವಿನ ಗಿಡುಕೆ ನೀರು ಹೊಯ್ತಾರೆ. ಎಲ್ಲಿಂದ ಬಾರೆ ?
‘ಅಜ್ಜಿ ನಿಮ್ಮನ್ಯಾಗೆ ಒಂದೆಂಟ್ ದಿವೃ ಇರೇನಿ ಇಲ್ಲೇಯ. ನನಿಗೊಂದಿಷ್ ಅನ್ನ ಅದು ಮಾಡಿ ಇಕ್ಕಜ್ಜಿ, ನಾನು ಬಾಳ ದೂರಿಂದ ಬಂದೇನಿ. ಇವು ಯಾರವಜ್ಜಿ ಕುದ್ರಿ ?’
‘ಅಯ್ಯೋ, ಯಾವ ದೊರೆ ಮಕ್ಕೋ, ಯಾವ ಪಾನಿ ಮಕ್ಕೋ ಏನೊ. ಎಷ್ಟೇ ಚನ್ನಗಿದ್ರು. ನಾನು ಹೇಳೆ. ಆ ಕರಿಗ್ಯಾಲ ಲೌಡಿ ಮನಿಗೆ ಹೋಗಬ್ಯಾಡೀಂತ. ಇವ್ರು ಹೋಗಿ ಸೋತು ಮೂಗಿಗೆ ಕವಡೆ ಕಟ್ಟೆಂದ್ ನೀರು ಹೊಯ್ತಾರೆ. ಅವಳ ಸುದ್ದಿ ತಗಿಬ್ಯಾಡ ಬಾ ನನ ಮಗನೆ ಅನ್ನ ಮಾಡಿ ನೀಡ್ತೀನಿ ಸುಖವಾಗಿ ಉಂಡ್ಕಂಡಿರು, ನಿನಿಗೆ ಬೇಜಾರಾದಮ್ಯಾಲೆ ಹೊಗಿವಂತಿ’ ಆಂತ ಬಾರಿ ತರವಾಗಿ ಹೇಳು ಆವಜ್ಜಿ, ‘ಅಲ್ಲಜ್ಜಿ! ಹೇಳು ಏನ್ ಮಾಡ್ತಾಳೆ ಆಕಿ ನೋಡಾನ? ಅಲ್ಲ ಆಕೆ ಹೆಂಗ ಸೋಲಾಳಜ್ಜಿ-‘ ಅಂತ ಎಲ್ಲ ಕೇಳಿದ್ದು. ಆಕೆಎಲ್ಡ್ ಇಲಿ ಹಿಡ್ಕಂಡು ವಡ್ಡಾಗ ಕಟಿಗೆಂದಾಳೆ. ಒಂದ್ ಬೆಕ್ಕ ಸಾಕೆಂದಾಳೆ. ಸೋತ್ತು ಅಂದಾಗ ಇಲಿ ಕೊಳ್ಳದ್ದು ಬಿಡ್ತಾಳೆ. ತಲೆಮ್ಯಾಗೆ ದೀಪ ಇಟ್ಟಿದ್ದಾಳೆ. ಬೆಕ್ಕಿನ ಕೊಳ್ಳದ್ದಾಗ ಬೆಕ್ಕು ಹಣತೆ ಕೆಡವಿ ಇಲಿ ಹಿಡಿಲಿಕ್ ಹೋಗಿಬಿಡ್ತತೆ. ಹೋತಲೆ ಈಕೆ ಏನೇನೋ ಮಾಡಿ ತಿರುವಿ ಹೊಳ್ಳಿ ಗೆದ್ದೆ ಗೆದ್ದೆ ಅನ್ನಂಗ್ ಮಾಡಿ ಹಿಂಗಾಡ್ತಾಳ್ ನನ್ ಮಗನೆ’ ಅಂತ ಎಲ್ಲ ಹೇಳು. “ನನಿಗು ಒಂದ್ ಬೆಕ್ ಇಡ್ಕೊಡು. ನಾನು ಹೋಕೇನಿ ನೋಡಾನ ಎನ್ಮಾಡ್ತಾಳೆ ಆಕೆ” ಅಂದು ಅವಜ್ಜಿಯಿಂದ ಎಲ್ಲ ಕೇಲ್ಕಂದ್ದು, ಬಂದ್ಲು.
ಕೂಟೆ. ಬಂದು ನಗಾರೆ ಒಡಕನಮುಟ ಹಕ್ಕಿದ್ದು. ಪದ್ಮಾವತಿ ಸೂಳೆ ಹಿಡಿಸಿದ್ದು ಅಳಮಕೃ
‘ಯಾಕೆ ಹಿಡಿತೀರಿ ನಾನೇನು ಎಲ್ಲು ಹೋಗದುಲ್ಲ. ವಲ್ಕರ ಹಾರಿ ಹೋಕೇನ ? ಸುತ್ತ ಮುತ್ತ ಮುಗಿಲೈತೆ. ಹಾರಿ ಹೋಗದುಲ್ಲ. ಕುಂತ್ಕಂತೇನಿ ಇಲ್ಲೇಯ, ಅಂದಳು
ಈ ಊರ ರಾಜ, ಪಾನಿ ಊರಗೌಡ್ರು, ಬುದ್ವಂತ್ರು, ಎಲ್ಲರು ನಾಕ್ ಜನ ಸೇಕು. ಅದ್ರು ಮ್ಯಾಗೆ ನಾನು ಕುಂದ್ರುತೆನಿ ಪಗಡೆ ಆಡಾಕೆ ಅಂದ್ಲು. ಅವಾಗ ಕದ್ದು ಸೂಳೆ ನಾನೆಂಗಿದ್ರು ಗೆನಿ, ಏನರ ಮಾಡ್ಲಿ ಇನ್ನು ಅಂತ ಆಕಿಗೆ ಗೊತ್ತು. ಈಕೆ ಹೆಂಗ್ಲನ್ನ ಗೆಂಡು ಅಂತಲೆ ಮಾಡ್ಕಂದಾಳೆ. ಆಮ್ಯಾಗೆ ರಾಜ, ಪರಾನಿ, ಗೌಡ್ರು, ಬುದ್ವಂತ್ರು ನಾಕ್ ಜನ ಸೇ ದ್ರು; ‘ಒಂದಾಟೆ ಎಲ್ಲಾಟೈ ಗೆದ್ದೆ ಅಂದ್ರೆ ನಾನು ಕೇಳಕಿ ಅಲ್ಲ. ಆಕಿನು ಹತ್ತಾಟ ಆಡ್ಲಿ. ನಾನು ಹತ್ತಾಟ ಆಡೇನಿ. ಆಕೆ ಸೋತರೆ ಹಂಗೆ ಉಟ್ಟ ಬಟ್ಯಾಗೆ ಮನೆಬಿಟ್ಟು ಹೋಗಬೇಕು. ನಾನು ಸೋತೇಂದ್ರೆ ಮೂಗಿಗೆ ಕಾವಡೆ ಕಳ್ಕೊಂಡು ನೀರು ಹೊಯ್ತಿನಿ – ಸಾಯೋತನಕ. ಅಂತಂದು ಓಷ್ಟು ಮಾತು ಮುಗಿಸ್ಕಂದ್ಲು ನಾಕ್ ಜನದಾಗೆ. ಆಮ್ಯಾಲೆ ಆಡಾಕೆ ಕುತ್ಕಂದ್ರು. ಈಕೆ ಮುಂದೆ ಬಿಳ್ಕೊಟ್ಟು, ನೋಡ್ಕಂದೋ ಆಕೆ ಆಡೋ ಆಟನ. ಆದ್ರುಮಾಗೆ ಇಕೆನ್ಮಾಡೆದ್ದು ಗುಲಗಂಜಿ ಮಾದೇವಿ? ಈಕೆ ಆಟ ಈಕೆ ಬಿಟ್ ಕೊಡ್ಲಿಲ್ಲ. ಈಕೆನೆ ಗೆದ್ದು ಗೆದ್ದು ಗೆದ್ದು ಮುಂದುವರ್ ಬಿಟ್ಟು. ಈ ಪದ್ಮಾವತಿ ಸೂಳೆ ಆಟ ಮುಂದುವರಿಯದೆ ಆಗ್ಗಾಗ ಓಷ್ಟು ಇದ್ರಲ ರಾಜ ಪಾನಿ, ಗೌಡ್ರು ಬುದ್ವಂತ್ರು? ಆಕೆನ್ನ ಹಂಗೆ ಉಟ್ಟ ಬಟ್ಯಾಗೆ ಮನೆ ಬಿಟ್ ಕಟ್ಟಿದ್ರು.
ಆಮ್ಯಾಲೆ ಮೂಗಿಗೆ ಕವಡೆ ಕಟ್ಟೆಂದ್ ನೀರು ಹೊಯೋರೆಲ್ಲ ಸೆರನಿಂದ ಬಿಡ್ಡಿದ್ದು. ಬಿಡ್ಲಿ ಒಷ್ಟರು ಅವರವರ ಮನಿಗವರ ಕಟ್ಟಿದ್ದು. ಈಕೆ ಸೂಳೆ ಎಲ್ಲ ಬಾಳ ಮುರು ಹಕ್ಕೆಂದುದ್ದು. ಮನೆ ತುಂಬಿ ಗಿಜಿ ಗಿಜಿ ಅನ್ನೋದು.
ಇವು ಪಾನಿ ರಾಜ ಇಕೆನ್ನೋಡಿ ಪಾನಿ ಈಕೆ ಹೆಂಗು ಅಂತನ್ನನು. ರಾಜ ‘ಏ ನಮ್ಮಂಗೆ ಬಟ್ಟೆ ಹಕ್ಕೆಂದ್ ಓಡ್ತಾಡ್ತಾನೆ, ಹೆಂಗಾಗಿದ್ರೆ ಹಿಂಗ್ ಓಡಾಡುದ್ದ ಗಂಡು ಬಿಡಲೇ’ ಅಂತ ಇಬ್ರಾಳಿಗು ವಾದಾಟ ಬಿತ್ತು. ಹೆಂಗೊಂತ ಪರಾನಿ. ಗಂಡೂಂತ ರಾಜ. ಕೊನಿಗೆ ಪಾನಿ ‘ಒಂದ್ ಕೆಲ್ಸ ಮಾಡಾನ. ಆಕೆ ಮನಿಗೆ ಊಟುಕೆ ಹೋಗಾನ. ಗಂಡ್ಡಿನ ಕೈಯಾಳ ಅಡಿಗೆ ಹೆಂಗಿರತೆ. ಹೆಂಗಿನ ಕೈಯಾಳ ಅಡಿಗೆ ಹೆಂಗಿರತೆ ಗೊತ್ತಾಕತಲ್ಲ. ಊಟುಕೆ ಬತ್ತೇವೀಂತ ಹೇಳಾನ. ಹೆಂಗಾಡ್ತಾಳೊ ನೋಡಾನ’- ಅಂದ್ಯಂದ್ರು.
ಗುಲಗಂಜಿ ಮಾದೇವಿ ಒಂದ್ ಗಿಣಿ ಸಾಕ್ಕೊಂದ್ಲು. ಅದು ರಾಜ ಪಾನಿ ಮಾತಾಡಿದ್ದ ಕೇಳಿಬಂದು ಅಕ್ಕ ಹಿಂಗೇ ಮಾತಾಡಿದ್ರು ಕಣೆ. ಹಿಂಗೇ ಬಿಟ್ಟು ಹ್ಯಾಂಗ್ ಮಾಡಾನೆ ಅಂತ ಎಲ್ಲ ತಂದ್ ಹೇಳದು. ಹೂಂ ಬಲ್ಲಿ ಬಿಡು ಅಂದು ಗೌಡೇರಕೂಟೆ ಮನೆಮಾರು ಎಲ್ಲ ಬಳಸಿ ಬೆಳ್ಳಾನ್ ಬೆಳಕತನಕ ಎಲ್ಲ ಅಡಿಗೆ ಮಾಡಿದ್ದು. ನಾನಾ ಚಂದವಾದ ಅಡಿಗೆ ಮಾಡಿ ಅವರ ಕರೆಕಟ್ಟಿದ್ದು. ಬಂದು ಕುತಗಂದ್ರು. ಅವಾಗ ಈಕೇನಾಡಿದ್ದು – ಒಂದ್ ಅಡ್ಡೆಲ್ಲಿ ಹಕ್ಕೆಂದು ಗಂಡಾಗಿದ್ದಲ ‘ನನಿಗೆ ಯೋನ ಹೆಂಡ್ರದಾರಿ. ಅವರೆಲ್ಲ ನಿಮ್ಮ ಉಪಚಾರ ಮಾಡ್ತಾರ್ರಿ. ನನಿಗೆ ಬಾಳ ನಿಸ್ತು ಕಾಗಿ ಬಿಟ್ಟತೆ ನೀರಡೀಕೆ. ಭಾರಿ ಭೇದಿ ಆಗಾಕತ್ತೇತಿ ಬೆಳತನಕ. ನಿಮಕೂಟೆ ಮಾತಾಡಾಕು ಶಕ್ತಿಲ್ಲ. ನಾನು ಹೊರಗಡೆ ಹೋಗಿ ಬರೇನ್ರಿ. ನಮ್ಮ ಹೆಂಡ್ರದಾರೆ ಯೋಳನ ಅವರೆಲ್ಲ ಮಾಡ್ತಾರೆ. ನೀವೇನ್ಬೇಜಾರ ತಿಳ್ಳಬೇಡ್ರಿ. ಅಂದು ಬಾಗಲಾಗಾಸಿಹೋಗಿ ಹಿತ್ತ ಗಾಸಿ ಒಳ್ಳೆ ಸೀರೆ ಉಟ್ಟು ಬಂದ್ಲು. ಬಂದು ಯೋಳ್ ತರದ ಅಡಿಗೆ ಮಾಡಿದ್ದು. ಎಲ್ಲಾರಿಗು ಊಟುಕ್ ನೀಡಿದ್ದು. ತೀರಿದ್ದು. ಇವು ಊಟ ಮುಗಿಯತ್ತೆ ಹೆಂಗೋಗಾದ್ದೂ ಅಡೋಲ್ಲಿ ಹಕ್ಕೆಂದು ಚೆಂಬ್ ತಗಂದು ಹಂಗೆ ಬಾಗಲಾಗಾಸಿ ಬಂದುಬಂದ್ಲು. ಅಯ್ಯೋ ನನಿಗೆ ಬಾಳ ನಿಸ್ತು ಕಾಗಿ ಬಿಟ್ಟು ತ್ರಿ. ನಮ್ಮ ಹೆಂಡ್ರು ಚನ್ನಾಗೆ ಮಾಡಿದ್ರೇ ಅಡಿಗೆನ ? ಅಡಿಗೆಂಗಿತ್ರಿ ಪಾಡಿತ್ತಾ ? ನಿಮ್ಮ ಸಹಬಾಜಿ ಕುತಗಂದ್ ಊಟ ಮಾಡಾಕ್ ಆಗ್ಲಿಲ್ಲ ನೋಡು ನನಕೈಲಿ. ನನಿಗೆ ದೇವ್ರು ಎಷ್ಟೇ ತೊಂದರೆ ಕೊಟ್ ಬಿಟ್ಟ ಅಂತವ ಬಂದು ಕುತಗಂದೊ ಅವರಾಕೆ. ಆಕೆ ಮಾಡಿದ್ದೆಲ್ಲ ಪರಾನಿಗೆ ಗೊತ್ತು. ರಾಜುಗೆ ಗೊತ್ತಿಲ್ಲ. ಪಾನಿ ಹಲ್ತಾನೆ ಹೆಂಗೂಂತ. ಒಪ್ಪಕೊಲ್ಲ ರಾಜ.
ಆವಾಗ ಮನಿಗೆ ಬಂದ್ರು. ಏನಂತಾನೆ ಪರಾನಿ? ‘ಏ ಹೆಂಗಾದ್ರೆ ಅಂಜಾಳೆ, ಗಂಡ್ತಾದ್ರೆ ನಮ್ಮ ಸಹಬಾಜಿ ಕುತಗಂದ್ ಊಟ ಮಾಡ್ತಾಳೆ. ನಮ್ಮ ನಿಗೆ ಕರಸಾನ ಹೆಂಗ್ ಮೈ ತೊಳಿತಾಳೆ, ಹೆಂಗ್ ಇದ್ದಾಳೆ ನೋಡಾನ’. ಪಾನಿ ಹಿಂಗ್ ಕುಳಿವಿಟ್ಟ.
ಇದೆಲ್ಲ ಆ ಗಿಣಿ ಕೇಳ್ಳೆಂದು ಗುಲಗಂಜಿ ಮಾದೇವಿತಾಕೆ ಬಂದು ಹೇಳು, ಅಕ್ಕ ಹಿಂಗಿಗ್ ಮಾತಾಡಿದ್ರು ಕಣೆ. ಹೆಂಗ್ ಮಾಡಾನೆ ನಾವೂಂತ. ಅವಾಗ ಈಕೆ ‘ಹೋಗಾನ ಸುಮ್ಮಿರು ನಾನೇನರ ಪ್ಲಾನ್ ಹಾಕ್ತಿನಿ’ ಅಂದ್ಲು.
ಆವಾಗ ಒಂಡೆಲ್ಡ್ ದಿವಸ ಬಿಟ್ಟು ಕರೆಕಳ್ಳಿದ್ರು. ‘ಆಗ್ಲಿ ಬರೇವಿ’ ಅಂತ ಹೋದ್ಲು. ಅಯ್ಯೋ ಇರ್ಲಿ ಹೊಟ್ಟುವು ಸತಿಯಾಗೇಲ. ನಿಮ್ಮ ಸಹಬಾಜಿನೆ ಕುಂತಗಂದ್ ಊಟ ಮಾಡ್ತೀನಿ. ಆದ್ರೆ ಮೈಮಾತ್ರ ತೊಳೆಯೋದಿಲ್ಲ’ ಅಂತಂದು ತಪ್ಪಿಸ್ಸೆಂದೊ. ಅವಾಗ ಅವರ ಸಹಬಾಜಿ ಕುತಗಂದ್ ಊಟ ಮಾಡಿದ್ದು, ಎದ್ ಬಂದ್ಲು ಮನಿಗೆ. ಇವು ಕಳಿಸ್ಥೆಂತಬಂದ್ರು. ಆಕೆ ಹೋದಮ್ಯಾಗೆ ಪಾನಿ ಏನಂದ ‘ಏ ಮಳ್ ರಾಜ ಮಳೆ ರಾಜ ನೀನು ಆಕೆ ಗಂಡ್ ರೂಪ ಹಕ್ಕೆಂದ್ ಹೀಗ್ತಾಡ್ತಾಳೆ. ಈಕೇನ್ನ ಏನರ ಮಾಡಿ ನೀನು ಲಗ್ನಾಗ್ಲೆ ಬೇಕು’ ಅಂತಂದ. ಹಿಂಗೆ ಕಣ್ಣಿಟ್ ಬಿಟ್ರು. ಪಾನಿ ಮತ್ತೊಂದು ಪ್ಲಾನ್ ಹಾಕ್ಷ.
ಈ ಗಿಣಿ ಅದ್ದೆಲ್ಲ ಕೇಳ್ಕೊಂದ್ ಬಂದು ಗುಲಗಂಜಿ ಮಾದೇವಿತಾಕೆ ಹೇಳು. ‘ಅಕ್ಕಾ పింగా ಮಾತಾಡ್ತಿದ್ರು ಕಣೇ, ಈ ಊರುಂದ ಕೆರೆ ಐತಲ? ಆ ಕೆರಿಗೆ ಕರಕಂದ್ ಹೋಕಾರಂತೆ. ಕೆರಿಗೆ ಕರಕಂದೋಗಿ ಕುದುರೆ ಮ್ಯಾಲೆ ಕೂಡ್ಲಿ ಮೂರ್ಸುತ್ತು ಕೆರೆ ಸುತ್ತಿಸಿ ಬಿಟ್ರೆ ಸುಖವಾಗಿ ಯೋಳ್ ವರ್ಷದ್ದಾದ್ರು ಮೈನೆರಿತತೆ. ಹನ್ನೆಲ್ಡ್ ವಷ್ದ್ದಾದ್ರು ಮೃನೆರಿತತೆ, ಆವಾಗ ಗೊತ್ತಾಕತೆ. ‘ಹಂಗಾಡನೆ ನಡಿಅಂತ ರಾಜ ಪರಾನಿ, ಇಬ್ಬಾರು ಮಾತಾಡ್ತಿದ್ರು. ಹೆಂಗ್ಲಾ ಡಾನಕ್ಕ?’ ಅಂತ ಗಿಣಿ ಕೇಳು. ‘ಹೆಂಗ್ಲಾಡನೆ?’ ಅಂತ ಈಕೆನೆ ಕೇಳಿದ್ದು, ‘ಅಕ್ಕ ನನಿಗೆ ಹಣ್ಣು ಹಂಪ್ಪು ಎಲ್ಲ ತಿನಿಸ್ಬಿಡು ಭರ್ತಿ. ಇಸ್ತ್ರಿ ಮಾಡಿದ ಬಟ್ಟೆ ಹಕ್ಕೆಂದ್ ನೀ ಕುದ್ರೆಮ್ಯಾಲೆ ಕುತಗಂದ್ ಮುಂದೆ ಬರಿಯಲ ನಿನ್ ಬಟ್ಟೆ ಮ್ಯಾಲೆ ಸ್ವಲ್ಪ ಹೇತಂಗ್ಲಾಡಿ ರಾಜ ಪಾನಿ ಬಟ್ಟೆ ಪೂರಾ ಮುಳುಗಿಸಿ ಬಿಡ್ತೀನಿ, ಮುಂದುಕ್ ಹೋಗುಲ್ಲಂಗೆ. ಹಂಗೆ ಹಿಂದುಕ್ ತಿರುಗಿ ಬರಂಲ್ಮಾಡಿ ಬಡ್ತೀನಿ” – ಅಂತ ಹೇಳು ಗಿಣಿ.
ಅವಾಗ ಮೂವರು ಜತಿಯಾಗಿ ಹೊಂಟ್ರಲ್ಲ ಬಟ್ಟೆ ಹಕ್ಕೆಂದು, ಹೊಕುದ್ದಂಗೆ ಏನ್ಮಾಡ್ತೀಗಿಣಿ? ಕೆರೆ ಇನ್ನೊಂದು ಸ್ವಲ್ಪ ದೂರ ಐತಿ ಅಂದಾಗ ಆಕೆ ಮೈಮ್ಯಾಲೆ ಸ್ವಲ್ಪ ಹೇಲ್ತು. ಅವರಿಗೆ ಬ್ರಾಳ ಮುಖಮುಸ್ಲಿ ಬಟ್ಟೆ ಎಲ್ಲ ನೆನೆಸ್ಬಿಡು. ‘ತೂ…., ಎಂತಾ ಅನಿಷ್ಟದ ಕೇರಿಗೆ ಕರಕಂದ್ ಬಂದ್ರಿ ನನ್ನ ? ಇಸ್ತ್ರಿ ಮಾಡಿದ ಬಟ್ಟೆ ಹಕ್ಕೆಂದ್ ಬಂದುದ್ದೆ. ತೂ… ತೂ.. ಎಷ್ಟೇ ಅಪಮಾನ ಮಾಡಿದ್ರಿ. ತಗಿ ನಾ ಬರದುಲ್ಲ ಈ ಕೇರಿಗೆ, ಅಂತಂದು ಹಿಂದುಕ್ ತಿರುಗಿಸಿ ಬಿಟ್ಟು ಕುದುರೇನ. ಅವರು ನರಿನಾತಾಕ್ಕಿ ಎಷ್ಟೊತ್ತಿಗೆ ಮನಿಗೋಗಿ ಬಟ್ಟೆ ಬಿಚ್ಚೆ ನೊ ಅನ್ನಂಗಾಗಿ ಬಿಟ್ಟಿತ್ತು.
ಆವಾಗ ಬಂದು ಬಟ್ಟೆ ಬಿಟ್ಟುಳು. ‘ಅಕ್ಕಾ ಈ ಊರು ಸವಾಸ ಸಾಕು. ಏನರ ಪ್ಲಾನಾಕಿ ಜಾಗ ಬಿಟ್ ಬಿಡಾನ. ಹೋಗಿಬಿಡಾನ. ಊರಾಗಿರೋರು ಎಷ್ಟೋ ನೆಲಹತ್ತಿದಾರೊ ಏನ್ನತಿಯೋ, ನಾವು ಇದ್ದಾಗೆ ಬಂದೋರು ಇದ್ದಾಗೆ ಆಗಿಬಿಟ್ಟಿವಿ. ಇನ್ನ ಸಾಕು. ಈ ಪಾನಿ ಕಣ್ಣಿಟ್ ಬಿಟ್ಟ. ಬಿಡದುಲ್ಲ. ‘ಬ್ಯಾಡ ಜಾಗ ಬಿಡಾನ’ ಅಂತ ಗಿಣಿ ಹೇಳಿಕೊಡು. ಆಗ್ಲಿಂತ ಹೊಂಡ್ತಾಳೆ.
ಬೆಳ್ಳನ ಬೆಳತನಕ ಹೊಳೆ ಅನ್ನದು ತುಂಬಿ ಹರಿತಿದೆ. ಆಚೆಕೆ ಹೋಗಂಗಿಲ್ಲ. ಏನ್ಮಾಡ ಕಾತು ಅಂತ ಚಿಂತೆ ಮಾಡಿದ್ದು. ಕೊನಿಗೆ ಗಂಗಾದೇವಿ ಬೇಡ್ಕಂದೂ ‘ಅತ್ತೋಳೆ ಅತ್ತಾಗಿ ಇನ್ನೊಳೆ ಇತ್ತಾಗಿ ದಾರಿ ಬಿಡು. ನಾನು ಆಚೆ ಕಡಿಕೆ ಹೋಗುಮುಟ’ ಅಂತ ಬೇಡ್ಕಂದ್ಲು. ನೆನೆಅಕ್ಕಿ, ನೆನೆಗಡಲೆ, ಬಾಳೆಹಣ್ಣು, ಕಾಯಿ, ಹೊಸಬಟ್ಟೆ, ನಾನಾ ಚಂದದ ಅಡಿಗೆ ಮಾಡ್ಕಂದ್ ಬಿದ್ ಬೇಡ್ಕಂದ್ಲು ಗಂಗವ್ವಗೆ ಬೆಳತನಕ.
‘ನಾ ಬಂದ್ ಬಾಳಾಂದ್ರೆ ಬಾಳ ದಿನ್ಸಾತು. ನಮ್ಮ ತಂದೆ ತಾಯಿ ಎಷ್ಟು ನಮ್ಮಡೆ ಯೋಚನೆ ಹಚ್ಚೆಂದಾರೊ ಏನೊ. ನಾವು ಮತ್ ಬರೇ ಊರಕಡೀಕ್ ಹೋಗಿ – ಅಂತ. ಹೋಗೋದು ಎಲ್ಡ್ ದಿನ ಇದ್ದಂಗೆ ರಾಜ ಪರಾನಿಗೆ ಹೇಳಾಕ್ ಹತ್ತಿದ್ದು. ಅವಾಗ ಪಾನಿ ಕಣ್ ಕುಕ್ಕನು ಹೂಕಾಳೆ ಕಣ್ತಪ್ಪಿಸೆಂದೂಂತ. ‘ಹೋಗಿ ಬಲ್ಲಿ ಬಿಡೊ ಹೋಗಿಬಲ್ಲಿ ನಮ್ಮ ಮಕ್ಕಿಂದ್ದಂಗೆ” ಅಂತೇಳಿ ರಾಜ.
ಇವರು ಎಲ್ಲ ಕೆಲಸ ಮಾಡ್ಕಂದ್ ಬೆಳತನಕಾನ ಹೊಸಬಟ್ಟೆ ಎಲ್ಲ ತಗಂದ್ ಹೊಂಟ್ರು. ಕಳಿಗ್ಗೆಂತ ಹೋಗ ಬೇಕಾತಲ ಗೆಣಕಾರು ಅಂದಾಗ, ರಾಜ ಪಾನಿ ಬಂದ್ರು. ಇಕೆ ಹೊಂಟು ಮುಂದೆ ಅವರಷ್ಕಾರ ಕುದ್ರೆ ಬಿಟ್ಟು, ಕುದ್ರೆ ಓಡಿದ್ದು, ಅವಳಣ್ಣಾರು ಅಷ್ಟತೆ ಉಸೂರಂದ್ಯಂತ ಅವ್ರಲ್ಲಿ ಮದುವ್ಯಾಗಿದ್ದು. ಇಕೆ ನಮ್ಮ ತಂಗಿ ಬಿಡಿಸಿದ್ದೂಂತ ಅಣ್ಣಾರಿಗೆ ಗೊತ್ತಿಲ್ಲ. ಇದ್ರೆ ನಮ್ಮಣ್ಣಾರು ಅನ್ನೋದು ಇಕಿಗು ಗೊತ್ತಿಲ್ಲ. ಅವ್ರು ಯಾಪಾರಕ್ಕೆ ಹೋದಾಗ ಇಕಿ ಇನ್ನು ಹುಟ್ಟಿದ್ದೆಯಿಲ್ಲ.
ಇವು ರಾಜ ಪಾನಿ ಗುಲಗಂಜಿ ಮಾದೇವಿನ ಕಳಿಸ್ಥೆಂತ ಹೊಳೆ ತನಕಬಂದ್ರು. ಅತ್ತ ಹೊಳೆ ಅತ್ತಾತು. ಇತ್ತ ಹೊಳೆ ಇತ್ತಾತು. ಆಕೆ ಆಚೆಕಡೆ ಹೋಗತ್ತು ಕೂಡಿಕೆಂದ್ ಬಿಡು ಹೊಳೆ. ಅಲ್ಲಿಗೆ ಬರಾಕೆ ದಾರಿಲ್ಲೋತು. ಆಕೆ ಪೀತಾಂಬ್ರ ಸೀರೆ ಉಟಗಂದ್ ಹೊಳೆ ಪೂಜಾಳೆ ಆಚೇಲಿ. ಇವ್ರು ಇಚೇಲಿಂದ ನೋಡ್ತಾರೆ. ‘ಅಯ್ಯೋ ಮಳ್ ರಾಜ ನೋಡು. ಎಷ್ಟೋ ಪ್ಲಾನಾಕಿದ್ದು. ಗಣ್ಣು ಗಣ್ಣು ಅಂತಿದ್ಯಲ್ಲ ನೋಡು ಮಳ್ ರಾಜ’, ಅಂತ ಇಬ್ಬಾರು ಜಗಳ ಮಾಡ್ತಾರೆ. ಅವಾಗ ಏನಂದ ರಾಜ ಇಚೇಲಿಂದ ‘ಏ ನಿನ್ನ ಊರಿಗೆ ಬಂದು ನಿನ್ನೆ ಮದುವ್ಯಾಗಿ ನಿನ್ನ ಇಡುವರೆ ತಿನ್ನು ದ್ರೆ ಪದ್ಮಾವತಿ ಸೂಳೆ ಪಟ್ಟದ ರಾಜಾಂತ ನನ್ನ ಕರಿಬ್ಯಾಡ್’ ಅಂತಂದ. ‘ಹಂಗೆ ಆಗ್ಲಿ ಬರಿ. ನನ್ನ ಇಡುವರೆ ತಿನ್ವಂತ್ರಿ. ಇವತ್ರಿಗೆಂಟ್ ದಿನಕೆ ಹೊಳೆ ಇಳಿತತೆ ಬರ್ರಿ ಮದುವ್ಯಾಗುಂತ್ರಿ’ ಅಂತಂದ್ಲು. ‘ಆಗಲಿ ನನಿಗು ನಿನಿಗು ಮಾಲಿದ್ರೆ ಯಾಕಾಗ್ಬಾರದು ಅಂದು ಹೋದ್ರು – ಹಿಂದುಕ್ ತಿರುಗಿ. ಇಕೆ ಹಾದ್ಯಾಗೆ ಯಾರ್ಯಾರ ತೊಂದ್ರೆ ಮಾಡ್ಯಾರು ಅಂದು ಮೊದ್ಲು ಹೆಂಗ್ ಗಂಡುಸ್ರ ಡ್ರಸ್ ಹಕ್ಕೆಂದುದೊ ಹಂಗೆ ಹಕ್ಕೆಂದ್ ಪೇಟ ಕಟಿಗೆಂದ್ ಬಂದು ಅವ್ರಪ್ಪನೂರಿಗೆ ಅಯ್ಯೋ ಗುಲಗಂಜಿ ಮಾದೇವಕ್ಕ ಬಂದಾತೇಂತ ಜನ ಕೂಡಿಬಿಡು. ಅಪರೂಪಕೇಂದ್ರ ಜನ ಸೇರದು ಜಾಸ್ತಿಯಲ ಹಂಗೆ. ಹನ್ನೆಲ್ಡ್ ವರ್ಷಾಗೇತಿ ತಂದೆ ತಾಯಿ ಎಲ್ಲಾರು ಮಖ ನೋಡ್ಲಿ ಹಂಗೆ ಮನಿಗೆ ಹೋಗ್ಯಾರೂಂದು ಇಕೆ ಗುಡಿಯಾಗದಾಳೆ. ಆವಾಗ ಆಕೆ ಅಣ್ಣಾರು ಅಣ್ಣಾರ ಹೆಂಡ್ರು ಎಲ್ಲು ಆರತಿ ಅಕ್ಕಸ್ತಿ ಎಲ್ಲ ತಂಗದು, ಎಣ್ಣೆ ತಗಂದು ಬಂದ್ರು.
ಹನ್ನೆಲ್ಡ್ ವರ್ಷಾಗೇತಿ ಮುಖ ನೋಡಿ, ಈಗ ಹಂಗೆ ನೋಡ್ತಾರು ಅಂದು ಮೊದ್ಲು ಎಡ್ಯಾಗೆ ಮುಖ ನೋಡಿ ಆಮ್ಯಾಲೆ ಆಕೆನ್ನ ಕರಕಂದು ಅನಂದೈಶ್ಚರ್ಯದಿಂದ ಬಂದ್ರು ಅಪ್ಪನ ಮನಿಗೆ. ಬಂದು ಎಂಟ್ ದಿನಾತು ಅವಾಗೊಂದಿನ ಅವ್ರಪ್ಪಗೆ ಹೇಳ್ತಾಳೆ : ‘ಹೀಗೆ ಪದ್ಮಾವತಿ ಸೂಳೆ ಪಟ್ಟದ ರಾಜ ನನ್ ಮದುವ್ಯಾಗಾಕೆ ಬತ್ತಾನೆ. ಕೊಡದುಲ್ಲ ಅನಬ್ಯಾಡ .ಕೊಟ್ಟು ನನ್ನು ಮದುವೆ ಮಾಡ್ರಿ ಅಂತ ಹೇಳಿದ್ದು.
ಆವಾಗ ಹೊಳೆ ಇಳೀತು. ಪದ್ದಾನಿ ರಾಜನ್ನ ಕರಕಂಡ್ ಬಂದ. ‘ಅಯ್ಯೋ ಯಾಕ್ರಿ ಅತ್ತು ಸೀಮಿಂದ ಇತ್ತು ಸೀಮಿಗೆ ಬಂದ್ ಬಿಟ್ರಿ ರ್ಬ ಕುತಗಳ್ಳಿ’ ಅಂತಂದು ಮನ್ನಣೆ ಮಾಡಿದ್ರು. ಎಲ್ಲ ಊಟ ಉಪ್ಪಾರ ತೀರಿಸ್ಕೊಂಡ್ರು. ವಿಚಾರ ತಕ್ಕಂದ್ರು. ನಿಮ್ಮನ್ನಾಗೆ ಕನ್ಯ ಐತಿ. ಕನ್ನಿಗೆ ಹಿಂಗ್ ಗಂಡೈತೇಂತ. ಹಂಗೆ ಆಗ್ಲಪಾ ನಿಮ್ಮಂತೋರು ಬಂದ್ರೆ ನಾವ್ಯಾಕ್ ಕೊಡ್ತಾರು ? ನಿಮ್ಮಂತ ರಾಜಿಗೆ ಇಲ್ಲ ಅನ್ನಕ್ಕಾದೀತ? ಕೊಟ್ ಮಾಡೇವೀಂತ ಮಾತುಕತೆ ಮುಗಸಿದ್ರು. ಎಲ್ಲಾ ಆತು. ಇವತ್ತಿಗೆ ಎಂಟ್ ದಿವಸಕೆ ಲಗ್ನ ಅನ್ನಂಗೆ ಮಾಡ್ಕಂಡ್ರು. ಅಪಾ ಅಲ್ಲಿ ಅಷ್ಟಮಿತಿ ಮೀರಿ ಬಂದುದೇವಿ ನಾನು, ಅವು ಹಿಂಗಾಂಗೆಲ್ಲ ಅಂದದಾರೆ. ನಾನು ಮಾತು ಕೊಡೋದೇನೊ ಕೊಟ್ಟೆ. ಅತು. ಈಗ ಇಷ್ಟು ಒಷ್ಟು ಕರಿಯೊ ಸಾಮಾನನ ತರಬೇಕ್ ನೀನು ಅಂದ್ಲು. ಕಡ್ಲೆ, ಹಸೆಕಡ್ಲೆ ಹಿಟ್ಟು, ಉದ್ದಿನ ಹಿಟ್ಟು ಎಲ್ಲ ತರಿಸಿದ್ದು. ತತ್ನಿ ಆಕೆ ಎಷ್ಟದಾಳೊ ಅಷ್ಟೆ ಎತ್ರದ ಒಂದ್ ಗೊಂಬೆ ಮಾಡಿದ್ದು. ಗೊಂಬೆ ಮಾಡಿ ಎಣ್ಯಾಗೆ ಹಾಕಿ ಕರುದ್ದು.
ಅನಂದೈಶ್ವರ್ಯದಿಂದ ಬಾನೆ ಗಂಡು, ದಾಳುದಂಡು ಹೊಡಕಂಡು ಮದುವೀಗೆ. ಇವರು ಒಬ್ಬ ಮಗಳು ಅಪರೂಪಕೆ ಹುಟ್ಟಿದಾಳೆ ಅಂದು ಬಾಳ ದೊಡ್ಡಾಕ್ ಖರ್ಚಿಟ್ಟು ಮದುವೆ ಮಾಡಿದ್ರು. ಮದುವೆ ಮಾಡಿ ಎಲ್ಲ ಆತು. ಕರ್ ಕಳ್ಳಿದ್ರು ಕಾರ್ಯ ಮಾಡಿ ಕೊಡ್ಡಕಾತಲ ಹದ್ಮಾರು ದಿವೃಕ್ಕೆ? ಎಲ್ಲ ಓಜೆ ಮಾಡ್ಕಂದ್ರು, ಅಬ್ಬಿಗೇನು ಎನರ ಮಾಡಿ ಆಕೆನ್ನ ತಿನ್ನಬೇಕೂಂತ. ಕಾರ್ಯಮಾಡಿ ಕೊಡುವಾಗ ಮತ್ತೆ ದೊಡ್ಡ ಕಿಟ್ಟು ಜನಜಾತ್ರಿಗೆಲ್ಲ ಉಣಿಸಿದ್ರು. ಆಮ್ಯಾಲೆ ಇಕೆ ಕೈಯಾಗೆ ಎಲೆ ಅಡಿಕೆ ಕೊಟ್ಟು ಕಳಿಸಿದ್ರು. ಹೋಗವ್ವ ಮಂಚದ ಮ್ಯಾಗೆ ಮನಗೂಂತ ಕ್ವಾಣಿಗೆ. ಆಕಿಗೆ ಗೊತ್ತಿಲ್ಲ – ಇಡುವರೆ ತಿಂತಾನೆ ನನ್ನಾಂತ. ಆಕೆ ಆ ತನ್ನ ಗೊಂಬೆಯ ಮಂಚದ ಮ್ಯಾಗಿಟ್ಟು ಶಾಲುಹೊದಿಸಿ ತಾನು ಮಂಚದಡೇಲಿ ಕುತಗಂದ್ಲು ನೋಡಾನ ಏನ್ಮಾಡ್ತಾನೇಂತ. ಆವಾಗ ಇವು ಹೋದೋನೆ ಎಲೆ ಅಡಿಕೆನು ನೋಡ್ಲಿಲ್ಲ ಗೊಂಬೆ ಅನ್ನದು ನೋಡ್ಲಿಲ್ಲ ಮನಸ್ಸು ಅನ್ನದು ನೋಡಿಲ್ಲ. ಕಾಲಕಡಿಂದ ಕರಂಕುರುಂ ತಿನ್ನಾಕ್ ಹತ್ತಿದ. ಪಾಡಾಗ ಕರುದ್ಧ ರುಚಿಯಾತು. ಅಯ್ಯೋ ಇದು ಹೆಣ್ಣೆ ಇಷ್ಟು ರುಚಿ, ಇದ್ರು ಕುಟಾಗೆ ಬಾಳೇವ್ ಮಾಡಿದ್ರೆ ಇನ್ನೆಷ್ಟು ನನಿಗೆ ಹಿತ ಇತ್ತೊ. ಆಗ್ಲೆ ಮೊಣಕಾಲ ಮುಟ ತಿಂದ್ಯಂತ ತಿಂದ್ಯಂತ ಬಂದಾನೆ. ಆವಾಗ ಯೋಚನೆ ಮಾಡ್ತಾನೆ ಕುತಗಂದು. ಆಗ ಈಕೆ ‘ಮಳ್ರಾಜೆ ಮನಸ್ಸು ಮನಸ್ರ ತಿನ್ನದು ಬದ್ದ. ನೀನು ಹೇಳಿದ್ದೆಲ ನಿನ್ ತಿಂತೇನೀಂತ ಅದ್ರೆ ಹಿಂಗ್ ಮಾಡಿದ್ದೆ. ಮನಸ್ಸಿಗೆ ಮನುಸ್ರು ತಿಂದ್ರೆ ಪ್ರಪಂಚ ಉಳಿಯದುಂಟಾ’ ಅಂದು ಗಂಡ ಹೇಂಡ್ತಿ ಒಂದಾದ್ರು.

ಬೆಳಕರಿಯತ್ತು ಇವು ಬೇಕಾದ್ರೆ ಕೊಟ್ಟು ಆನಂದೈಶ್ವರ್ಯದಿಂದ ಗಂಡನ ಮನಿಗೆ ಕಳಿಸಿ ಕೊಟ್ರು ಗುಲಗಂಜಿ ಮಾದೇವಿನ. ಇವರು ಗಂಡಕ್ಕಿಟ್ಕಂಡು ಸೊಸೇರು ಮಕ್ಕಳ ಇಟ್ಕಂಡು ಅವರು ಸುಖಾಗಿ ಅಲ್ಲಿ ಐದಾರಪ ಸಿಮೊಗ್ಗದ ಪ್ಯಾಟ್ಯಾಗೆ. ನಾವಿಲ್ಲ ದೇವಿ.


