Kannada Story-2025 ಏಡಿಕುಮಾರನ ಕಥೆ
Kannada Story-2025: ಚುಂಚನಗಿರಿ ಅಂತ ಒಂದು ಪಟ್ಟಣ. ಪಟ್ಟಣದೊಳಗೆ ಒಬ್ಬ ದೊರೆ. ಆ ದೊರೆಗೆ ಲಗ್ನವಾಗಿ ಹನ್ನೆರೆಡು ವರ್ಷ ಆಗಿತ್ತು. ಹನ್ನೆರಡು ವರ್ಷ ಆದ್ರೂ, ಆಯಪ್ಪನಿಗೆ ಒಂದೂನೂ ಮಕ್ಕಿರಲಿಲ್ಲ. ಮಕ್ಕಳಿಲ್ಲದಿದ್ದಾಗ, ಪಟ್ಟದ ಜನಗಳೆಲ್ಲ ಆ ದೊರೇನ ಆಡ್ಕೊಳ್ಳೋರು: “ಅಯ್ಯೋ ಈ ದೇಶಕ್ಕೆಲ್ಲಾನೂ ದೊರೆ. ಆದ್ರೆ ಮದ್ದೆ ಆಗಿ ಹನ್ನೆರಡು ವರ್ಷ ಆಯ್ತು. ಇನ್ನೂನು ಮಕ್ಕಳೇ ಆಗ್ಲಿಲ್ಲವಲ್ಲ” ಅಂತ ಎಲ್ಲಾ ತಾತ್ಸಾರ ಮಾಡೋರು. ಆದ್ರೆ ಆಯಪ್ಪ ಮನೆಗೆ ಬಂದು ಹೆಂಡ್ತಿ ಹತ್ತಿರ ಚಿಂತೆಮಾಡ್ಕೊಂಡು ಹೇಳಿದ್ರು: “ನಾವು ಈ ಪಟ್ಟಕ್ಕೆಲ್ಲ ದೊರೆ ಅನ್ನು ಕೊಂಡ್ಲಿಟ್ಟು ಲಗ್ನವಾಗಿ ಹನ್ನೆರಡು ವರ್ಷ ಆಯ್ತು. ಹನ್ನೆರಡು ವರ್ಷದಿಂದಾನೂ ನಮ್ಮ ಮಕ್ಕು ಸಂತಾನ ಇಲ್ಲವಲ್ಲ. ಇದಕ್ಕೆ ಏನ್ ದಾರಿ ಮಾಡುವಾ” ಅಂತ ಹೇಳದ್ರು. ಹೇಳಿದ್ರೆ ಆಯಮ್ಮ ಏನಂತು, “ನಾವು ಇಂಗೇನೇ ಇದ್ರೆ ಸರಿಹೋಗೋದಿಲ್ಲ.
ಯಾವುದಾದ್ರೂ ಒಂದು ಧರ್ಮಾತ್ಮ ಮಾಡಿ ನಾವ್ ಮಕ್ಕಳ ಫಲ ಪಡೀಬೇಕು ಕ” ಅಂತ ಆಯಮ್ಮ ಕೇಳಿಕೊಂಡು. ಇದಕ್ಕೆ ನಾವು ಏನು ಧರ್ಮಾತ್ಮ ಪಡೀಬೇಕೊ ಅಂತ ಆ ರಾಜ ಕೇಳಿದ. “ಈ ಚುಂಚನಗಿರಿ ಮಠದೊಳಗೆ ಒಂದು ಆಳುದ್ದ ದೊಡ್ಡದಾಗಿರೋ ಕೆರೆ ಕಟ್ಟಿಸಿಬಿಡಾನ. ಕೆರೆ ಕಟ್ಟಿಸ್ಟಿಟ್ಟು ಈ ಸುತ್ತಾಲೂ ಏಳು ಹಳ್ಳಿ ದನ ಕರುಗಳೆಲ್ಲ ನೀರು ಕುಡೀತವೆ. ಆ ಗೋವ್ ಗೊಳೆಲ್ಲ ನೀರು ಕುಡಿದು ಪುಣ್ಯ ಬಂದಾಗ, ಏನಾದರೂ ಭಗವಂತ, ಮಕ್ಕಳು ಸಂತಾನ ಕೊಡಬೋದು, ಒಂದು ಕೆರೆ ಕಟ್ಟಿಸ್ ಬುಡ್ರಿ” ಅಂತ ಹೆಂಡ್ತಿ ಹೇಳಿದ್ದು.
ಈ ರೀತಿ ಹೇಳಿದಾಗ ಆಯಪ್ಪ ಎಲ್ಲಾ ಕೂಲಿ ಜನಗಳಿಗೆ ಕಂಟ್ರಾಕ್ಟ್ ಕೊಟ್ಟು ಬುಟ್ಟು ದೊಡ್ಡದಾಗಿ ಕೆರೆ ಕಟ್ಟಿಸ್ ಬುಟ್ರು. ದೊಡ್ಡದೊಂದು ಕೆರೆ ಕಟ್ಟಿಸಿದ್ದೇಲೆ ಅದಕ್ಕೆ ಪುಣ್ಯಮಾಡ್ಲಿ ಗಂಗಮ್ಮ ನಮಾಡಿಸಿಬಿಟ್ರು. ಗಂಗಮ್ಮನ ಮಾಡಿದ್ದೇಲೆ ನಮ್ ಯಜಮಾನು ಯಾವ್ ರೀತಿ ಕೆರೆಕಟ್ಟಿದ್ದಾರೆ ಏನ್ಮಾಡಿದಾರೆ ಅಂತ ಆಯಮ್ಮ ಹೋಗಿ ನೋಡ್ಲೆ ಇಲ್ಲ. ಆದರೆ ಒಂದಾನೊಂದಿನದಲ್ಲಿ ಯೋಚನೆಮಾಡಿ ‘ನಮ್ ಯಜಮಾನರು ಇಷ್ಟು ದೊಡ್ಡ ಕೆರೆ ಕಟ್ಟಿಸಿದೀನಿ ಅಂತ ಹೇಳ್ತಾ ಇದ್ದಾರೆ; ನಾನ್ ಒಂದು ದಿನವಾದ್ರೂ ಹೋಗ್ ನೋಡ್ಕೊಂಡ್ ಬರಲಿಲ್ಲವಲ್ಲ. ಇನ್ನು ನನ್ನ ಮೈಮೇಗಳ ಬಟ್ಟೆಗಳನ್ನು ತೆಗೆದುಕೊಂಡು ಹೋಗಿ ಆ ಕೆರೆಯಾಗ್ ಒಕ್ಕೊಂಡು ಕೆರೆಯಾದ್ರೂ ನೋಡ್ಕೊಂಡ್ ಬರೋಣ’ ಅಂತ ಆಯಮ್ಮ ಬಟ್ಟೆಗಳನ್ನು ತುಂಬೊಂಡು ಕೆರೆಯತ್ರ ಹೋಯ್ತು.
ಕೆರೆಯತ್ರ ಹೋಗ್ತಾ ಇರಬೇಕಾದ್ರೆ, ಕೆರೆ ತುಂಬ ಗಂಗಮ್ಮ ತುಂಬಿ ತುಳುಕಾಡ್ತಾ ಇರುತ್ತಾಳೆ. ಈಯಮ್ಮ ಕೆರೆ ಏರಿ ಮೇಲೆ ಹೋಗ್ತಾ ಇದ್ದಾಳೆ. ಹೋಗ್ತಾ ಇರಬೇಕಾದ್ರೆ ಆ ಕೆರೆ ಒಳಗೆ ಇದ್ದು ದೊಂದು ಗರ್ಭಿಣಿ ಏಡಿಗಾಯಿ, ಆ ಕೆರೆ ಏರಿಮ್ಯಾಲೆ ಒಂದು ಕಲ್ಲಿನಮ್ಯಾಲೆ ಬಂದು ಕುಂತಿರುತ್ತೆ. ಆ ಏಡಿಕಾಯಿ ಕೆರೆಏರಿಮ್ಯಾಲೆ ಕುಳಿತಿರಬೇಕಾದ್ರೆ, ಆಯಮ್ಮ ಕಂಕೃಲ್ಲಿ ಬಟ್ಟೆ ಇರಿಕೊಂಡು ಚಿಂತೆಮಾಡ್ಕೊಂಡು ಹೋಗ್ತಾ ಇರುತ್ತೆ. ” ಅಯ್ಯೋ, ಪರಮಾತ್ಮ ನಮ್ಮ ಯಜಮಾನು ಈ ಕೆರೆ ಕಟ್ಟಿಸಿದ್ರು. ಈಗ್ಲಾದ್ರೂ ನಮಗೆ ಮಕ್ಯುಸಂತಾನ ಕೊಡ್ತೀಯಾ ಗಂಗಮ್ಮ ನೀನು? ಅಂತ ಚಿಂತೆ ಮಾಡ್ಕೊಂಡು ಕೆರೆ ಏರಿಮ್ಯಾಲೆ ಹೋಗಬೇಕಾದ್ರೆ, ಆ ಏಡಿಕಾಯ್ಗೆ ಈಯಮ್ಮನ್ ಚಿಂತೆ ಪ್ರೀತಿ ಆಯ್ತು. ಆ ಗರ್ಭಿಣಿ ಏಡಿಗಾಯಿ ಕಲ್ಲಿನಮೇಲ್ ಕುಕ್ಕೊಂಡು, ಏನು ಹೇಳುತ್ತಪ್ಪ ಅಂದ್ರೆ, ‘ಪರಮಾತ್ಮ ನನಗೆ ಕೊಟ್ಟಿರೋ ಸಂತಾನ, ಆಯಮ್ಮ ಚಿಂತೆ ಮಾಡ್ಕೊಂಡ್ ಹೋಗ್ತಾ ಇರೋಳಗಾದ್ರೂ ಕೊಡೋದ್ ಬೇಡ್ವ ಪರಮಾತ್ಮ'” ಅಂತ ಆ ಪರಮಾತ್ಮನಿಗೆ ಪ್ರಾರ್ಥನೆ ಮಾಡುತ್ತೆ ಏಡಿಗಾಯಿ, ಪ್ರಾರ್ಥನೆ ಮಾಡಬೇಕಾದ್ರೆ ಆ ಏಡಿಗಾಯಿ ಒಳಗಿರೋ ಗರ್ಭ ಹೋಗಿ ಆಯಮ್ಮನಿಗೆ ಗರ್ಭಆಕ್ಸಿಡುತ್ತೆ. ಆಯಮ್ಮ ಬಟ್ಟೆಗಳನ್ನು ಒಕ್ಕೊಂಡು ಮನೆಗೆ ಹೋದಳು, ಮನೆಗೆ ಹೋದ್ಮಲೆ ಆಯಮ್ಮನಿಗೆ ಅದೆ ಆಗಿ ನೀರು ನಿಂತು ನವನಾರು ಒಂಬತ್ತು ತಿಂಗಳು ತುಂಬಿದಾಗ ದೊರೆ ಬಹಳ ಸಂತೋಷವಾಗ್ತಾನೆ. ‘ಅಯ್ಯೋ ಹನ್ನೆರಡು ವರ್ಷವಾಯ್ತು ನಾನು ಲಗ್ನವಾಗಿ, ಈಗ ಕೆರೆಕಟ್ಟಿ ಗಂಗಮ್ಮನ ಮಾಡಿದ್ದೇಲೆ ದೇವರು ಕಣ್ಣಿಟ್ಟಿದ್ದಾನೆ. ಪರಮಾತ್ಮ, ಒಂದು ಸಂತಾನ
ಕೊಟ್ಟು ನನಗೆ ಮುಂದಕ್ಕೆ ಸಂತಾನ ಬೆಳಸಲಪ್ಪ” ಅಂತ ದೊರೆ ಹೆಂಡ್ತಿ ಸುಖ ಸಂತೋಷದೊಳಗಿದ್ದಾಳೆ.
ಇರಬೇಕಾದ್ರೆ, ಆಯಮ್ಮನಿಗೆ ನವನಾರ ಒಂಬತ್ತು ತಿಂಗಳು ತುಂಬಿ ಹೆರಿಗೆ ಆಗುತ್ತೆ. ಹೆರಿಗೆ ಆದಾಗ ಏಡಿಗಾಯಿ ಜನನವಾಗುತ್ತೆ. ಏಡಿಗಾಯಿ ಜನನವಾದಾಗ “ಅಯ್ಯೋ, ಪರಮಾತ್ಮ ಹನ್ನೆರಡು ವರ್ಷದಿಂದ ನಾನು ಮಕ್ಕಳಿಲ್ಲದೆ ಬೇಡಿದ್ದು, ಇಂತಾ ಪಟ್ಟ ಕೆಲ್ಲ ಅಪಕೀರ್ತಿ ಬರುವಂತ ಹೆಸರುವಾಸಿಕೆ ಕೊಟ್ಟು ಬಿಟ್ಟೆ. ಅದೇರೀತಿ ಇದ್ದ ರೂನೂ, ಆ ದೂರು ಒಮ್ಮೊಂಡಿದ್ರೂನೂ ಪರವಾಗಿರಲಿಲ್ಲ. ಈಗ ಈ ಕೆಟ್ಟ ಅಪಕೀರ್ತಿ ಹೊಡ್ಕೊಂಡು ನಾನು ಹೇಗಪ್ಪ ಈ ಧರೆಮೇಲೆ ಇರೋದು ?” ಅಂತ ಆ ದೊರೆಗೆ ಬಹಳ ಚಿಂತೆ ಬಂದ್ ಮಂಚದ ಮೇಲೆ ಮಕ್ಕಡೆ ಮಲಗಿದ್ದಾನೆ.
ಮಲಗಿದ್ದೇಕಾದ್ರೆ, ಆ ದೊರೆಗೆ ಒಬ್ಬ ಆಳ್ ಇದ್ದಾನೆ. ಆಳ್ ಇಲ್ಲೇಕಾದ್ರೆ ‘ಅಯ್ಯಾ ದೊರೆ ಆ ಪರಮಾತ್ಮ ಕೊಟ್ಟಿರೋದು. ಮುಂದೆ ಏನಾಗುತ್ತೆ ನೋಡಾನ ನೀನ್ ಯಾಕಪ್ಪ ಚಿಂತೆ ಮಾಡ್ಕೊಂಡ್ ಮಲಗಿದ್ದೀಯ ಎದ್ದೇಳು. ಮುಂದೆ ಏನ್ ನಡೀತದೊ ನೋಡೋಳನಾ’ ಅಂತ ಹೇಳಿ, ಆಳು ದೊರೆಗೆ ಬುದ್ದಿ ಹೇಳ್ತಾನೆ. ಹೇಳಬೇಕಾದ್ರೆ ಕೆಲವಾರು ದಿವೃ ಅಂಗೇ ಇದ್ದಾರೆ. ಇದ್ದಾಗ ಈ ಏಡ್ ಗಾಯ್ ಹುಟ್ಟಿದ ಮಗೀಗೆ ನಾಮಕರಣ ಮಾಡಬೇಕು. ನಾಮಕರಣ ಮಾಡಬೇಕಾದ್ರೆ, ‘ಪರಮಾತ್ಮ ನಾನ್ ಯಾವ ರೀತಿ ದೇಶಕ್ಕೆ, ಜನಕ್ಕೆ ತಿಳಿಸೋದೂ ? ಯಾವ ರೀತಿ ನಾವ್ ನಾಮಕರಣ ಮಾಡೋದು?” ಅಂತ ಹೇಳಿ ಚಿಂತೆ ಮಾಡಿ, ಆದರೂ ಆಗ್ಲಿ, ಇದೂ ಒಂದು ನಮ್ಮ ಹಣೇಬರಹ ಅಂದಿದ್ದೇ ದೇಶಕ್ಕೆಲ್ಲ ಟಾಂ ಟಾಂ ಹಾಕಿಸಿಬಿಟ್ರು. ದೊರೆ ಹೆಂಡ್ತಿಗೆ, ಹೊಟ್ಟೆ ಒಳಗೆ ಏಡಿಗಾಯಿ ಹುಟ್ಟಯ್ಕೆ ನಾಮಕರಣ ಮಾಡ್ಲಿ ಅಂತ ಎಲ್ಲಾರಿಗೂ ಹೇಳಿಬಿಟ್ರು. ಅವರಿಗೆ ಬೇಕು ಬೇಕಾದವು ಬಂದು “ಏಡ್ ಗಾಯ್” ಅಂತ ಹೆಸರಿಟ್ಟು ಬಿಟ್ರು. ಹೆಸರು ಇಟ್ಟು ಬಿಟ್ಟು ಕೆಲವಾರು ದಿವಸ ಒಂದು ಸಪರೇಟು ರೂಮ್ಮೊಳಗೆ ಏಡಿಗಾಯಿ ಮಡಗಿದ್ದರು. ಮಡಗಿರಬೇಕಾದ್ರೆ, ಆ ಏಡಿಗಾಯಿ ಸಪ್ಲಾಯ್ ಗೆ ಒಂದ್ ಆಳ್ ಇಡ್ಕೊಂಡಿದ್ದಾರೆ. ಬೆಳಗ್ಗೆ, ಸಾಯಂಕಾಲ ತಿಂಡಿ ತೊಗೊಂಡೋಗಿ ಆ ಏಡಿಗಾಯ್ಗೆ ಕೊಡೋದು. ಇಂಗೇ ಇರತಾ ಹನ್ನೆರುಡು ವರ್ಷ, ಹದಿನಾರು ವರ್ಷ ತುಂಬುತ್ತೆ. ಏಡಿಗಾಯಿಗೆ ಮದುವೆ ವಯಸ್ಸು ಬಂದ್ದಿಡುತ್ತೆ.
ಆ ರೂಮ್ ನೊಳಗೆ ರೂಮ್ನನ ತುಂಬಾನೂ ಆಗಿರುತ್ತದೆ. ರೂಮುನ ತುಂಬಾನೂ ಆಗಿರುತ್ತಲೆ, ಅಕ್ಕಪಕ್ಕದ ದನಕರುನ ಹುಡುಗರು ದಿವಸಾ ಬಂದು ಆ ಏಡಿಗಾಯಿ ನೋಡಿ ನೋಡಿ ಹೋಗ್ತಾ ಇರೋರು. ಇಂಗೇ ಹೋಗ್ತಾ ಇರಬೇಕಾದ್ರೆ. ಕೆಲವಾರು ದಿಬ್ಬದ ಮೇಲೆ ಈ ಹುಡುಗರು ಏನಂದೊ “ಅಯ್ಯೋ ಏಡ್ ರಾಜ, ನೀನ್ ಒಬ್ಬ ಮನ್ನಾ ಅಂತ ಹುಟ್ಟಿದ್ದೀಯ. ನೀನು ಹದಿನಾರು ವರ್ಷದ ಮಗನಾದರೂ ಸಹಿತ ನೀನ್ ಇಂಗೇ ಇದ್ದೀಯಲ್ಲಯ್ಯ; ನಿಮ್ ದೊರೆಗೆ ಏನಯ್ಯ ಕಮ್ಮಿ ಇರೋದು. ಎಲ್ಲಾದ್ರು ಒಂದು ಹೆಣ್ ತೊಗೊಂಡೊಂದು ಲಗ್ನ ಮಾಡು ಅಂತ ಹೇಳಯ್ಯ” ಅಂತ ಈ ದನಕರಿನ ಹುಡುಗರೆಲ್ಲಾ ಹೇಳಿದ್ರು. ಈ ಏಡಿಗೆ ಮನಸ್ಸಿಗೆ ಅದೇ ನಾಟಿಕೊಂಡ್ಡಿಟ್ಟು. “ಅಯ್ಯೋ ಇಲ್ಲಿ, ನಮ್ಮಪ್ಪಂಗೆ ಏನ್ ಕಮ್ಮಿ ಇರೋದು, ಹೇಳಾನ ಎಲ್ಲಾರೂ ಒಂದು ಹೆಣ್ ನೋಡಿ ನನಗೆ ಲಗ್ನ ಮಾಡಿಸಿ ಅಂತ.” ಈ ಏಡಿರಾಜ ಮನಸ್ಸಿಗೆ ತೊಗೊಂಡು, ಸಾಯಂಕಾಲ ಊಟ ತೊಗೊಂಡ್ ಬರೋದರೊಳಗಾಗಿ ಯೋಚನೆಮಾಡ್ಕೊಂಡು ಕುಂತಿತ್ತು.
ಆಳು ಊಟ ತಕ್ಕೊಂಡ್ ಬಂದ ರೂಮ್ ಗೆ. “ಅಯ್ಯಾ ನಮ್ಮನೇಲಿ ಇರೋ ಆಳೆ, ನಾನ್ ಊಟ ಮಾಡೋದಿಲ್ಲಪ್ಪ. ನಾನು ಹದಿನಾರು ವರ್ಷದ ಮಗನಾದೆ. ನನಗೆ ಲಗ್ನ ಬೇಕಯ್ಯ. ನಮ್ಮಪ್ಪಂಗೆ ಏನ್ ಕಮ್ಮಿ ಆಗಿರೋದು? ನಮ್ಮಪ್ಪಂಗೆ ಹೇಳಿ ಎಲ್ಲಾದ್ರೂ ಒಂದು ಹೆಣ್ ನೋಡಿ ಮದ್ವ ಮಾಡು ಅಂತ ಹೇಳಯ್ಯಾ”. “ಆಯ್ತಪ್ಪ ಏಡ್ ರಾಜು, ಊಟ ಮಾಡು. ನಾನ್ ಹೇಳೀನಿ. ನೀನ್ ಊಟ ಮಾಡಯ್ಯಾ.” “ಇಲ್ಲಯ್ಯ ನಾನ್ ಊಟ ಮಾಡಲ್ಲ, ನನಗೆ ಲಗ್ನ ಮಾಡ್ತೀನಿ ಅಂತ ನಮ್ ತಂದೆ ಭರವಸೆ ನೀಡೋವನ್ನೂ ನಾನ್ ಊಟ ಮಾಡಲ್ಲಯ್ಯ” ಅಂತ ಊಟ ಮಾಡ್ಲೆ ಇಲ್ಲ. ಆಳು ವಾಪಸು ದೊರೆ ಹತ್ರ ಹೋದ. “ಅಯ್ಯಾ ದೊರೆ ನಿನ್ನ ಮಗನಾದಂತ ಏಡ್ ರಾಜ ಊಟ ಮಾಡೋದಿಲ್ಲಂತಯ್ಯ. ಒಂದು ಹೆಣ್ ನೋಡಿ ಮದ್ದೆ ಮಾಡೋಕಂತೆ ಆಯಪ್ಪಂಗೆ. ಅಲ್ಲೀವರ್ಗೂ ಊಟ ಮಾಡಲ್ವಂತೆ” ಅಂತು ಆಳು ಹೇಳ್ತಿಟ್ಟ.” ಅಯ್ಯೋ ಇದರೊಳಗು ನಾನ್ ಕೆಟ್ಟನೇ. ಇಂಥಾ ದೊರೆ ಹೊಟ್ಟೆ ಒಳಗೆ ಇಂಥಾ ಮಗ ಹುಟ್ಟಿ, ಯಾರೂ ಇಂಥೋನಿಗೆ ಹೆಣ್ ಕೊಡ್ತಾರೆ ಹೇಳಿ ಈ ಏಡಿಗೆ? ನಾನು ಹೆಣ್ಣು ನೋಡೋಕೆ ಸಾಧ್ಯವಿಲ್ಲಯ್ಯ. ನನ್ ಕೈಲಾಗೋದಿಲ್ಲ.” “ಅಯ್ಯಾ ದೊರೆ ಅದಕ್ಕಾಕೆ ನೀನ್ ಚಿಂತೆ ಮಾಡ್ತೀಯ ? ಒಂದು ಮೊರ ಹೊನ್ನು ತುಂಬೊಡಯ್ಯ. ನಾನ್ ಎಲ್ಲಾದ್ರೂ ನಿನ್ನ ಮಗಂಗೆ ಹೆಣ್ ನೋಡ್ಕೊಂಬತ್ತೀನಿ. ಲಗ್ನ ಮಾಡಾನ” ಅಂತ ಈ ಆಳು ಹೇಳಿದ. “ಆಯ್ತಯ್ಯ ಒಂದು ಮೊರ ಇಲ್ಲದಿದ್ರೆ ಎರಡು ಮೊರ ಹೊನ್ನು ತುಂಬೊಡ್ತೀನಿ, ನೀನು ಎಲ್ಲಾದ್ರೂ ನನ್ ಮಗಂಗೆ ಹೆಣ್ಣು ಪತ್ತೆ ಮಾಡ್ಕೊಂಡು ಬರೇಕು” ಅಂತ ಹೇಳೇ ಬಿಟ್ಟ. ಒಂದು ಮೊರ ಹೊನ್ನು ತುಂಳ್ಕೊಟ್ಟ ದೊರೆ.
ಹೊನ್ನು ತುಂಡ್ಕೊಂಡು ಈ ಪಟ್ಟ ಪಟ್ಟಗಳಲ್ಲೆಲ್ಲ ಸಾರಿಕೊಂಡು ಹೊಡ್ಕೊಂಡು ಹೋಗ್ತಾ ಇದ್ದಾನೆ ಅಮ್ಮನೆ ಆಳು. ಹೋಗ್ತಾ ಇರಬೇಕಾದ್ರೆ ಮುಂದಿನ ಪಟ್ಟದೊಳಗೆ ಒಬ್ಬ ಬಾಳ ಬಡಸ್ತನ. ಆದ್ರೆ ಅವನಿಗೆ ಇಬ್ಬರು ಹೆಂಡ್ತಿದೀರು. ಮೊದಲೇ ಹೆಂಡ್ತಿಗೆ ಇಬ್ಬರು ಮಕ್ಕಳಿದ್ದಾರೆ. ಎರಡು ಹೆಣ್ಣು ಮಕ್ಕಳನ್ನು ಬಿಟ್ಟಿಟ್ಟು ಮೊದಲೇ ಹೆಂಡ್ತಿ ತೀರಿ ಹೋಗ್ಲಿಟ್ಟಿದ್ದಾಳೆ. ಇನ್ನೊಬ್ಬಮ್ಮನ ಮದ್ದೆ ಆಗಿ ಆಯಮ್ಮಂಗೂ ಒಂದು ಮಗಾ ಇರದೆ. ಈ ಮೂರು ಜನ ಮಕ್ಕು, ಒಬ್ಬು ಹೆಂಡ್ತಿನ ಸಾಕ್ಕೊಂಡು ಆ ಪಟ್ಟಣದಲ್ಲಿ ಒಬ್ಬ ಬಡವ ಇದ್ದಾನೆ. ಬೀದಿಬೀದಿ ಮುತ್ತು ರತ್ನ ಹೊಡ್ಕೊಂಡು ಸಾಕ್ಕೊಂಡು ಹೋಗ್ತಾ ಇರಬೇಕಾದ್ರೆ, ಆಯಮ್ಮ ಇದ್ದಾಳಲ್ಲ, ಆಯಪ್ಪನ ಕಿರೇಹೆಂಡ್ತಿ, ಆಯಮ್ಮ ಏನ್ ಹೇಳ್ತಾಳೆ ಒಳಗಡೆ ಯಜಮಾನ್ರಿಗೆ “ರೀ, ರೀ ನಿಮ್ಮ ಹಿರೇ ಹೆಂಡ್ತಿ ಮಕ್ಕಳು ಎರಡೂ ಹೆಣ್ಣಾಗಿಟ್ಟಿವೆ. ನಮ್ಮೆಲಿ ಮಧ್ಯೆ ಮಾಡೋಕೆ ಸಾಧ್ಯ ಇಲ್ಲ. ಸಾಕೋಕು ನಮಗೆ ಸಾಧ್ಯ ಇಲ್ಲ. ಯಾರೋ ಮಾರಾಯ ಒಂದು ಮೊರ ಹೊನ್ನು ತುಂಬೊಂಡು ಬಂದಿದಾನೆ. ಮಾಡ್ತೀರ ಅಂತ. ಆ ಹೊನ್ನು ಈಸ್ಕೊಂಬಿಟ್ಟು ಒಂದು ಮಗಾ ಕಳಿಸಿಬಿಡ್ರಿ” ಅಂತಾ ಆಯಮ್ಮ ಕಿರೇಹೆಂಡ್ತಿ ಹೇಳಿದ್ದು. ಹೇಳಿದಾಗ ” ಆಯ್ತು ಕಣೇ ಅದೂ ಒಳ್ಳೇದೇ. ಬೆಳಿಗ್ಗೆ ಎದ್ರೆ ನಮಗೆ ತಿನ್ನಾಕೆ ಅನ್ನ ಇಲ್ಲ, ಉಡೋಕೆ ಬಟ್ಟೆ ಇಲ್ಲ, ಒಂದು ಮಗ ಕಳಿಸಿಬಿಟ್ಟು, ಒಂದು ಮೊರ ಹೊನ್ನು ಈಸಿಕೊಂಡುಬಿಡಾನ ಕಣೇ, ಹೆಂಗೋ ನಾವ್ ತಿಂಡ್ಕೊಂಡು ಜೀವನ ಮಾಡಾನ ಅಂತ ಹೇಳಿ, ಸಾರಿಕೊಂಡು ಹೋಗ್ತಿದ್ದ ಆಳನ್ನು ಕರು ಈ ಹೆಣ್ ಮಗಾನ ಆಯಪ್ಪಂಗೆ ಕೊಟ್ಟು ಒಂದು ಮೊರ ಹೊನ್ನು ಈಸ್ಕೊಂಡುಬಿಟ್ಟು.
ಆಳುನ ಕೂಡ ಈ ಹೆಣ್ಣು ಮಗಾನ ಕಳಿಸಿಬಿಟ್ರು.. ಆಳು ಕಕ್ಕೊಂಡು ರಾಜನ ಪಟ್ಟಣಕ್ಕೆ ಬಂದ. ಬಂದ್ರೆ ಏಡ್ರಾಜಕುಮಾರ ರೂಮ್ನೊಳಗಿದ್ದಾನೆ. “ಆಯ್ತಯ್ಯ ಇಲ್ಲಿ, ಹೆಣ್ಣು ಮಗು. ನಾವ್ ಕಾಲದಿಂದ ಮಕ್ಕು ಕಂಡೋರಲ್ಲ. ನಮ್ಮಾವು ಇಲ್ಲ. ಹಲವಾರ ದಿವ್ವ ಆ ಮಗೂನ ದೊರೆನೂ ದೊರೆ ಹೆಂಡ್ತೀನೂ, ಸಾಕ್ತಾ ಇರಬೇಕಾದ್ರೆ, ಅಕ್ಕಪಕ್ಕ ದೋರೆ ಈ ಮಗ ಕಕ್ಕೊಂಡು ಬಂದಿರಾದು ಗೊತ್ತಿರದೆ. ಅಕ್ಕಪಕ್ಕದೋರು ಹೋಗಿ ಏನ್ ಹೇಳ್ತಾರೆ ಅಂದ್ರೆ “ಏಡ್ಕುಮಾರ. ನಿಮ್ಮ ತಂದೆ ನಿಮ್ಮ ಆಳ್ ಕಳಿಸಿ ಹೆಣ್ಣು ಹುಡುಕಿ ತಂದಿದಾನೆ ಕಣಯ್ಯ. ಯಾಕಯ್ಯಾ ಹೆಣ್ಣು ತಗೊಂಬಂದಿರಾದು ? ನಿಮ್ಮಪ್ಪ ಮಧ್ವ ಆಗಾಕೆ ತಂದಾ ? ಮುಂಚೆ ಮಧ್ವ ಮಾಡು ಅಂತ ಹೇಳಯ್ಯ” ಅಂತ ಅಕ್ಕಪಕ್ಕದವ್ರು ಹೇಳಿದ್ರು. ಆಳು ಊಟ ತಗೊಂಡ್ ಹೋದ ಏಡ್ ರಾಜಂಗೆ. “ಅಯ್ಯಾ ನೀನ್ ಹೆಣ್ ತೊಗೊಂದ್ಬಂದು ಎಷ್ಟು ದಿವೃ ಆಯ್ತು. ನಮ್ಮಪ್ಪನೇ ಮದ್ಯೆ ಮಾಡಿಕೊಳ್ಳಾಕೆ ಮಡಿಕ್ಕಂಡವಂತ ? ನನಗೆ ಲಗ್ನ ಮಾಡು ಅಂತ ಹೇಳಯ್ಯಾ. ನನಗೆ ಲಗ್ನ ಮಾಡೋ ಇದ್ರೆ ನಾನ್ ಊಟಮಾಡಲ್ಲ ಅಂತ ಹೇಳಯ್ಯ” ಅಂದ್ಬಟ್ಟ. “ಆಯ್ತಯ್ಯ ಏಡ್ರಾಜ, ಊಟಮಾಡು; ತಂದೆಯನ್ನಿಗೆ ಹೇಳಿ ಲಗ್ನ ಮಾಡ್ತೀವಯ್ಯ. ಹೆಣ್ ತಂದಿರೋದು ನಿನಗೇನೆ, ಊಟ ಮಾಡಯ್ಯಾ.” “ನನಗೆ ಸಾಯಂಕಾಲ ಮದುವೆ ಆಗ್ ಬುಡೋಕಪ್ಪ. ಅಲ್ಲೀವರ್ಗೂ ನಾನು ಊಟ ಮಾಡಲ್ಲ”. ಸರಿ, ಅವತ್ತು ಯಾರಿಗೂ ಜನಕ್ಕೆ ಹೇಳಕ್ಕೆ ಸಾಧ್ಯ ಇಲ್ಲ. ಏನಂತ ಹೇಳ್ತಾರೆ ? ಆಯಪ್ಪಂಗೆ ಏಡ್ ರಾಜಂಗೆ ಮದ್ಯೆ ಅಂತ ಹೇಳ್ತಾರೆ? ಸರಿ ಅರನೆ ಕ್ಲೀನ್ ಮಾಡ್ಕೊಂಡು ಅರನೆಯಾಗಿದ್ದುದೆ ಅಡುಗೂಟ ಮಾಡ್ಕಂಡ್ರು. ಅಡಗೂಟ ಮಾಡ್ಕೊಂಡು ಆಯಮ್ಮಂಗೆ ಸ್ನಾನ ಮಾಡಿಸಿದ್ರು, ವಡವೆ ವಸ್ತ್ರ ಧರಿಸಿದ್ರು. ಒಳ್ಳೆ ಬಟ್ಟೆ ಹೊಲಿಸಿದ್ರು. ಒಳ್ಳೆ ಊಟ ಮಾಡಿಸಿದ್ರು. ಊಟಮಾಡುಟ್ಟು ಸಾಯಂಕಾಲ ಆರು ಗಂಟೆ ಆಯ್ತು. ಏಳುಗಂಟೆ ಆಯ್ತು. ಆಮೇಲೆ ಆಯಮ್ಮ ನಗೆ ನೀನ್ ಅಚ್ಚುಕಟ್ಟಾಗಿ ಊಟಮಾಡಿಬಿಟ್ಟು, ನಿನ್ ಕೈಯಾಗ ಒಂದು ಚೊಂಬು ನೀರ್ ತಗೊಂಡು, ನೀನ್ ಆ ರೂಮ್ ಹತ್ತಿರ ನಡೆಯಮ್ಮ ಅಂತ ಹೇಳಿಟ್ಟು ಕರಕೊಂಡು ಹೊರಟ. ಆಯಪ್ಪ ಕರಕೊಂಡು ಹೋಗಿ ಆಯಮ್ಮನ್ ಒಳಗಡೆ ತಳ್ಳಿಟ್ಟು ಬಾಗ್ಲು ಹಾಕ್ಕೊಂಡು ಬಂದ್ಮಲೆ, ಆ ಏಡಿರಾಜ ಈಯಮ್ಮನ್ನ ‘ಆ’ ಅಂತ ನುಂಗ್ಟಟ್ಟ. ಸರಿ ನುಂಗಿದ್ದು ಆ ರೂಮಿನ ತುಂಬಕ್ಕೂನೂ ದಪ್ಪ ಆಕ್ಸಿಟ್ಟು. ಆ ರೂಮಿನ ತುಂಬಕ್ಕೂನೂ ಅಂಗೇ ಮಲಗೇ ಇತ್ತು. ಇನ್ನು ಕೆಲವಾರು ದಿವೃ ಕಳೀತಾ ಬಂತು. ಆಮೇಲೆ ಅಕ್ಕ ಪಕ್ಕದವು “ಏನಯ್ಯಾ ಏಡಿರಾಜ ಏನೋ ಒಂದು ಮುಂಚೆ ತಗೋ ಬಂದು ಮಾಡಿದ್ರು, ಅದೇನೋ ಅಣೇಬರಹ, ಎಲ್ಲಾ ಹೋಯ್ತು. ನಿಮ್ಮಪ್ಪಂಗೆ ಏನಯ್ಯಾ ಕಮ್ಮಿ ಆಗಿರೋದು ? ಇನ್ನೊಂದು ಹೆಣ್ಣು ತೊಗೊಬಂದು ಮದುವೆ ಮಾಡು ಅಂತ ಹೇಳಯ್ಯ” ಅಂದ್ರು. ಸರಿ, ಇನ್ನ ಮೂರು ದಿವಸಕ್ಕೆಲ್ಲ, “ಅಯ್ಯಾ ಆಳೇ ನನಗೆ ಊಟ ನೀನ್ಯಾಕಯ್ಯ ತಗೊಂಡಂದೆ ? ನಾನ ಊಟ ಮಾಡೋದಿಲ್ಲ. ಮತ್ತೆ ಏನ್ ನಮ್ಮಪ್ಪಂಗೆನು ಕಮ್ಮಿ ಆಗಿರೋದು ? ಇನ್ನೊಂದ್ ಹೆಣ್ ತೊಗೊಂಬಂದು ಮಧ್ವ ಮಾಡು ಅಂತ ಹೇಳಯ್ಯಾ” ಅಂತ ಏಡಿರಾಜ ಹೇಳ.
ಅದನ್ನ ಆಳ್ ತಗೊಂಡು ಹೋಗಿ ದೊರೆಗೆ ಹೇಳ. ದೊರೆ “ಅಯ್ಯೋ ಪರಮಾತ್ಮ ಈಗೊಂದು ಮೊರ ಹೊನ್ನು ಕಳಕೊಂಡುದ್ದು ಅಲ್ಲದಲೆ ಮತ್ತೆ ಇನ್ಯಾರಪ್ಪ ಹೆಣ್ಣು ಕೊಡ್ತಾರೆ ನಮಗೆ. ಏನಪ್ಪ ಮಾಡೋದು ?” ಅಂತ ಹೇಳಿ ಬಾಳ ಯೋಚನೆಮಾಡಿ ಮಂಚದ ಮೇಲೆ ಮಲಗಿದ್ದ. ಅಂಗಿರಬೇಕಾದ್ರೆ, ಈ ಆಳು “ಅಯ್ಯಾ ದೊರೆ ನೀನ್ ಮಲಗೋದುಬ್ಯಾಡ. ಮತ್ತಿನ್ನೊಂದ್ ಮೊರ ಹೊನ್ನು ತುಂಬ್ಳೆಡಯ್ಯ. ನಾನ್ ನೋಡ್ಕಂಡು ಇನ್ನ ಒಂದ್ ಹೆಣ್ ತಗೊಂಡು ಬತೀನಿ. ಆಮೇಲೆ ಮುಂದೆ ಏನಾಗುತ್ತೆ ನೋಡುವ” ಅಂತ ಹೇಳಿ ಇನ್ನೊಂದು ಮೊರ ಹೊನ್ನು ತುಂಬಿಸ್ಕೊಂಡು ಅದೇ ಊರಿನ ಮೇಲೆ ಸಾರಿಕೊಂಡು ಹೋಗ್ತಾ ಇದ್ದನು. ಹೋಗ್ತಾ ಇರಬೇಕಾದ್ರೆ ಆಯಮ್ಮ ಇನ್ನೊಂದು ಮಗು ಮಡಿಕ್ಕಂಡಿದ್ರಲ್ಲ ಹಿರೇಹೆಂಡ್ತಿ ಮಗೂನ ಆಯಮ್ಮನೆಯೇ “ರೀ ರೀ ಇನ್ನೊಂದು ಸಲಿ ಇನ್ನೊಂದು ಮೊರ ಹೊನ್ ಕೊಡ್ತೀನಿ ಅಂತ ಸಾಡ್ಕೊಂಡ್ ಬಾ ಅವೆ. ಈ ನಿಮ್ ಹಿರೇ ಹೆಂಡ್ತಿ ಮಗು ಇದೆಯಲ್ಲ ಅಷ್ಟೇ ಕೊಟ್ಟು ಬೆಡಾನ ಕ, ಮತ್ತೆ ಇನ್ನೊಂದ್ ಮೊರ ಹೊನ್ ಈಸಕೊಂಡು ಇನ್ನೊಂದಷ್ಟು ದಿವೃ ಹೊಟ್ಟೆ ತುಂಬಿಸ್ಕೊಳ್ಳಣ” ಅಂತ ಗಂಡ ಹೆಂಡ್ತಿ ಇಬ್ರೂ ಮಾತಾಡ್ಕಂಡ್ರು. ಆ ಇನ್ನೊಂದು ಮೊರ ಹೊನ್ನು ಈಸ್ಕೊಂಡು ಬಂದು ಮಗು ಕೊಟ್ಟಿದ್ರು. ಕೊಟ್ಟು ಬಿಟ್ರೆ, ಆ ಮಗೂನು ಕಕ್ಕೊಂಡು ಈ ಆಳು ದೊರೆ ಮನೆಗೆ ಬತ್ತಾನೆ. ಬಂದ್ರೆ, ಆ ಮಗೂನೂ ಒಂದು ರಾತ್ರಿ ಮಡಕೋತಾರೆ. ಮತ್ತೆ ಆ ವಿಷಯ ಏಡಿರಾಜನಿಗೆ ಗೊತ್ತಾಗಿ, ಆ ಏಡಿರಾಜ ‘ನಮಪ್ಪ ಮತ್ತಿನೊಂದ್ ಹೆಣ್ ತಗೊಂಡ್ ಬಂದ್ ಏನಕ್ ಮಡಂಡವೆ ? ಅಂತ ಆಳ್ ಕೈಲಿ ಹೇಳಿ ಕಳಿಸ್ತಾನೆ. ” ಆಯ್ಕೆಯ್ಯ ನಾಳೆ ಸಾಯಂಕಾಲ ನಾವ್ ಮದುವೆ ಮಾಡ್ತಿಡ್ತೀವಿ. ನೀನ್ ಏನು ಯೋಚೆ ಮಾಡೇಡ ಏಡ್ ರಾಜು. ಊಟಮಾಡಯ್ಯ.” ಊಟ ಮಾಡಿಸ್ಬಿಟ್ಟು ಹೋಗ್ತಾನೆ. ನಾಳೆ ರಾತ್ರೀಕೆ ಮತ್ತೆ ಅದೇನೇ ಅಡಿಗೂಟ ಏನ್ ಬೇಕ್ ಬೇಕಾದ್ದು ಮಾಡ್ಕೊಂಡು ಆಯಮ್ಮಂಗೆ “ಹೋಗವ್ವ ನೀನು, ಒಂದು ಚೊಂಬು ನೀರು ಹಿಡ್ಕೊಂಡು ಆ ರೂಮ್ ಗೆ ಹೋಗ್ತಿಡವ್ವ” ಅಂತ ಕಟ್ಟಿಕೊಡ್ತಾರೆ. ಕಳಿಸಿಕೊಟ್ರೆ, ಆಯಮ್ಮ ಒಂದು ಚೊಂಬು ಕೈಯೊಳಗೆ ನೀರು ಹಿಡ್ಕೊಂಡ್ ಆ ಏಡಿರಾಜ ಇರೋ ಬಾಗಿಲರೂಮಿಗೆ ಬಂದು ಬಾಳ ಚಿಂತೆ ಮಾಡ್ತಾಳೆ. “ಅಯ್ಯೋ ಈಯಪ್ಪಂಗೇ ನಮ್ಮಕ್ಕನ್ ತೊಗೊಂಡಂದಿದ್ದು, ಏನ್ ಮೃತ್ಯು ಹೊಂದಿದ್ದೋ ಗೊತ್ತಿಲ್ಲ. ಇದರೊಳಗೇನಿದೆಯೋ ಗೊತ್ತಿಲ್ಲ. ಇದರೊಳಗಡೆ ಹೋದ್ರೆ ಏನಾಗ್ತಿನೋ ಎತ್ತಾಡ್ತೀನೋ. ನಾನ್ ಹೋಗದ್ ಬೇಕಿಲ್ಲ. ಪರಮಾತ್ಮ,ನೀನ್ ಬೇಕಾದ್ಮಾಡ್ಲಿಡು’ ಅಂತ ಕಲ್ಲು ನೀರು ಕರಗೋಹೊತ್ನಲ್ಲಿ ದೊಡ್ಡದೊಂದು ಕಾಡಿರುತ್ತೆ. “ಆ ಕಾಡಿನೊಳಗೆ ಚುಂಚನಗಿರಿ ಬೆಟ್ಟದೊಳಗೆ ಹೋಗ್ತಾ ಇರುಬೇಕಾದ್ರೆ, ಚುಂಚನಗಿರಿ ಬೆಟ್ಟಕ್ಕೆ ಬಂದು ಒಂದು ನಡುಬೆಟ್ಟದೊಳೆ ಕುಂತವೆ. ಒಬ್ರೇನೇ ಕುಂತ್ಕಂಡಿದ್ರೆ, ಶಿವನಗೋಳ್ ಸೀತೆಗೋಳ್ ಮಾಡ್ತಾ ಇದ್ದಾಳೆ.’ “ಅಯ್ಯೋ ಪರಮಾತ್ಮ ನಾವು ನಮ್ ತಾಯಿಗೆ ಹುಟ್ಟಿದಾಗಲೆ ನಮ್ ತಾಯಿ ಮೃತವಾದಳು. ನಂ ಬಲತಾಯಿ ಈ ರೀತಿ ನಮಗೆ ಮಾಡಿದ್ರು. ನಮ್ಮಕ್ಕ ಏನಾದಳು.? ಇವತ್ತು ನನಗೆ ಈ ಕಾಡಿನಲ್ಲಿ ವನವಾಸ ಮಾಡೋದು ಸ್ಥಿತಿ ಬಂದೈತಲ್ಲ ಪರಮಾತ್ಮ” ಅಂತ ದಃಖಮಾಡ್ತಾ ಇರಬೇಕಾದ್ರೆ, ಪಾರ್ವತಿ ಪರಮೇಶ್ವರ ಇರವೆಂಬತ್ತು ಕೋಟಿಗೂ ಪಡಿಅಳ್ಕೊಂಡು ಮೇಲಿನ ಲೋಕದಲ್ಲಿ ಹೋಗ್ತಾ ಇದ್ದಾರೆ. ಹೋಗ್ತಾ ಇರಬೇಕಾದ್ರೆ ಪಾರ್ವತಿಗೆ ಈಯಮ್ಮನ ಶೋಕ ಕೇಳಿಸ್ಬಿಡುತ್ತೆ. “ಪರಮಾತ್ಮ, ಈ ನರಲೋಕದಲ್ಲಿ ಏನೋ ನರಸದ್ದು ಬಾ ಇದೆ. ಹೋಗಿ ಇದೇನು ಅಂತ ತಿಳ್ಕೊಂಡು ಮುಂದೋಗನ ನಡೀರಿ ಸ್ವಾಮಿ” ಅಂತ ಪಾರ್ವತಿ ಈಶ್ವರನಿಗೆ ಹೇಳ್ತಾಳೆ. ಹೇಳೋಕಾದ್ರೆ ಅಯ್ಯೋ ಹುಚ್ಚು ಮುಂಡೆ ಹೆಂಗಸ್ರನ್ನ ಎಲ್ಲೂ ನಾವು ಕಕ್ಕೊಂಡು ಹೋಗಾರದು. ಗಾಳಿನೊ, ಪೀಡೆನೊ, ಪಿಶಾಚಿನೊ. ಈ ನಡುರಾತ್ರಿಯೊಳಗೆ ಹೋಗೋದು ಸರಿಯಲ್ಲ. ನಡಿ, ನಾವು ಬಂದಿರೊ ಕಾರ್ಯ ಮುಗಿಸ್ಕೊಂಡ್ ಹೋಗಾನ” ಅಂತ ಈಶ್ವರ ಹೇಳಿದಾಗ, ”ಸ್ವಾಮಿ ನೀವು ಬಂದ್ರೆ ಬನ್ನಿ, ಬರದಿದ್ರೆ ನಿಮ್ಮ ಪಾದದ ಮೇಲೆ ನನ್ನ ನಾಲಗೆ ಇಡ್ಕೊಂಡು ನನ್ ಪ್ರಾಣ ಹತ ಮಾಡ್ಕೊತೀನಿ” ಅಂತ ಪಾರ್ವತಿ ಹೇಳಿದ್ರು. ” ಛೇ, ಹೆಂಗಸ್ರನ್ನ ಎಲ್ಲೂನೂ ಕಕ್ಕೊಂಡುಹೋಗಬಾರದ್ದು.” ಪಾರ್ವತಿ ಪರಮೇಶ್ವರ, ಆಯಮ್ಮ ಶೋಕ ಮಾಡ್ತಿರೋ ಹತ್ತಿರ ಬಂದ್ರೆ, “ಅಮ್ಮಾ, ಏನಮ್ಮಾ ನಿನ್ ಕಷ್ಟ? ಯಾಕಮ್ಮ ಇಷ್ಟೊಂದ್ ಶೋಕ ಮಾಡ್ತೀಯ.? ಯಾವೂರಮ್ಮ ? ಯಾವ ಪಟ್ಟಣವಮ್ಮ? ಅಂತ ಕೇಳೋಕಾದ್ರೆ, “ಅಪ್ಪ ನಾನು ಯಾರೂ ಇಲ್ಲದ ಪಾಪಿ ಪರದೇಶಿ. ಈ ರೀತಿ ನಂಗೆಲ್ಲ ಮಾಡಿಬಿಟ್ರು. ಈವತ್ತು ನಾನಿಲ್ಲಿ ಯಾವ ರೀತಿ ಏನಾಗೋದು ಅಂತ ನನಗೊಂದು ತಿಳುವಳಿಕೆ ಇಲ್ಲ. ಇಲ್ಲಿ ಬಂದು ಸೇರಿಬಿಟ್ಟಿದ್ದೀನಿ ಸ್ವಾಮಿ” ಅಂತ ಆಯಮ್ಮ ಹೇಳಿದಾಗ, ಏನಮ್ಮ ಆಯ್ತು ಅಂತ ಎಲ್ಲಾ ವಿಚಾರಣೆ ಮಾಡ್ತಾರೆ. ವಿಚಾರಣೆ ಮಾಡಿದಾಗ ಈರೀತಿ ”ನಂ ತಾಯಿ ಇರಲಿಲ್ಲ, ನಮ್ ತಂದೆ `ಇಂಗ್ಮಾಡ್ಡಿಟ್ರು. ಇಂಗ್ ತೊಗೊಂಬಂದು ನನ್ನ ಇಂಗೊಂದು ರೂಮಿಗೆ ಕಳಿಸಾಕೆ ಮಾಡಿದ್ರು. ನಮ್ಮಕ್ಕ ಒಬ್ಬಿಗೆ ಇಂಗೇ ಹತವಾಗೋಯ್ತು. ಈಗ ನಾನ್ ಏನಾಗ್ತಿನಿ ಅಂತ ನನಗೊತ್ತಿಲ್ಲ ಸ್ವಾಮಿ. ಭಯಮಾಡ್ಕೊಂಡು ನಾನ್ ಇಲ್ಲಿಗೆ ಬಂದ್ದಿಟ್ಟಿದ್ದೀನಿ” ಅಂತ ಹೇಳಿದಾಗ, “ಅಮ್ಮಾ, ಏನೂ ಇಲ್ಲ ಅದು. ಮುಂದೆ ನಿನಗೆ ಒಳ್ಳೇದೇ ಆಗುತ್ತೆ. ನೀನ್ ಆ ರೂಮಿಗೋಗಿ ಬಾಗ್ಲು ತೆಗೆದಾಗ ‘ಆ’ ಅಂತ ಬಂದ್ದಿಡುತ್ತೆ. ಒಂದ್ದಿಡಿ ಮರಳು ಎರಚಿಬಿಡು. ಆ ಮರಳು ಎರಚಿದೇಟಿಗೆ ಒಂದು ನಾಯಿಯಾಗಿ ತಕತಕ ಅಂತ ಕುಣಿದುಬಿಡುತ್ತೆ. ಈ ಇಜ್ಜಲು ಎಸೆದ್ದಿಡು. ಇಜ್ಜಲು ಎಸೆದಾಗ ಹದಿನಾರು ವರ್ಷ ಮಗಾ ಆಗ್ತಾನೆ. ಆವಾಗ ನೀವು ಕ್ಲೀನಾಗಿ ಬಾಳ್ಕೊಂಡ್ ಹೋಗ್ರಮ್ಮ” ಅಂತ ಹೇಳಿಬಿಟ್ಟು ಒಂದು ವರ ಇಟ್ಕಟ್ ಬಿಟ್ಟು ಪಾರ್ವತಿ ಪರಮೇಶ್ವರ ಮಾಯವಾಗಿಬಿಟ್ರು.
ಆ ಮಾತು ಕೇಳಿದ ಮ್ಯಾಲೆ ಮತ್ತೆ ಆ ರೂಮಿನತ್ರಕ್ಕೆ ಬಂದ್ರು. ಆ ರೂಮಿನತ್ರ ಬಂದಾಗ ಬಾಗ್ಲು ತೆಗೀತಾಳೆ. ಬಾಗ್ಲು ತೆಗೆದಾಗ ‘ಆ’ ಅಂತ ಬಂದ್ವಿಡ್ತದೆ, ಏಡಿಗಾಯಿ ನುಂಗಕೆ ಆಯಮ್ಮನ್ನ, ಅವಾಗ ಒಂದ್ದಿಡಿ ಮರಳ ಎಸೆದ್ಬಿಡ್ತಾಳೆ. ಒಂದ್ದಿಡಿ ಮರಳು ಎಸೆದಾಗ ಒಂದು ನಾಯಾಗಿ ಕುಣೀತಾ ಇರದೆ. ಕುಣೀತಾ ಇರಬೇಕಾದ್ರೆ ಒಂದ್ದಿಡಿ ಇಜ್ಜಲು ಎಸೀತಾಳೆ. ಇಜ್ಜಲು ಎಸೆದಾಗ ಹದಿನಾರು ವರ್ಷದ ಮಗ ಆಗ್ತಾನೆ. ಹದಿನಾರು ವರ್ಷದ ಮಗ ಆದ್ರೆ ಆಯಪ್ಪ ಹುಟ್ಟಿದ ನಿರ್ವಾಣಕ್ಕೆ ಇರುತ್ತಾರೆ. ಒಂದು ಮೂಲೇಲಿ ಆಯಮ್ಮ ಕುಳಿತಿದ್ದಾಳೆ. ಇನ್ನೊಂದು ಮೂಲೇಲಿ ಈಯಪ್ಪ ಕುಂತಿದ್ದಾನೆ.
ಸೂರ್ಯೋದಯ ಆಗೋವರ್ಗೂ ಇಬ್ಬರೂನೂ ಹಂಗೇ ಕುಂತಿದ್ದಾರೆ. ಕುಂತಿರಬೇಕಾದ್ರೆ ಈ ದೊರೆಗು, ದೊರೆ ಹೆಂಡ್ತಿಗೂ ಬೆಳಗಾನ ನಿದ್ದೆ ಬರೋದಿಲ್ಲ. ಬಾಳ ಚಿಂತೆ ಬಂದ್ದಿಡುತ್ತೆ ಅದ್ರಿಗೆ. “ಅಯ್ಯೋ ಪರಮಾತ್ಮ. ಮೊದಲನೇ ಒಂದು ಮಗು ತಂದು ಆ ರೀತಿ ಆಯ್ತು. ಈ ಮಗು ತಂದು ಏನಾಗಿದ್ಯೋ ಗೊತ್ತಿಲ್ಲ ಅಂತ. ಅಯ್ಯಾ ನಮ್ಮ ಮನೇಲಿರೋ ಆಳೇ, ಬಾರಪ್ಪ ಇಲ್ಲಿ. ಹೋಗಿ, ಆ ಮಗು ಏನಾಗಿದ್ಯೋ ನೋಡ್ಕೊಂಡ್ ಬಾ” ಅಂತ ಐದು ಗಂಟೆಗೆ ಎಬ್ಬರಿಸಿ ಆಯಪ್ಪನ ರೂಮಿನ ಹತ್ರ ಕಳಿಸ್ತಾನೆ. ಕಳಿದ್ದಾಗ ಆಯಪ್ಪ ಬಂದು ಬಾಗ್ಲು ತೆಗೆಯೋದಿಲ್ಲ. ಭಯಮಾಡ್ಕೊಂಡು ಒಂದು ಸೈಡನಲ್ಲಿ ಕಿಟಕಿ ಇರುತ್ತೆ. ಆ ಕಿಟಕಿಯಲ್ಲಿ ನೋಡ್ತಾನೆ. ಈಯಪ್ಪ ಹುಟ್ಟಿದ್ ನಿರ್ವಾಣ ಒಂದ್ ಮೂಲೇಲಿ ಕುಳಿತಿದ್ದಾನೆ. ಈರಮ್ಮ ಒಂದ್ ಮೂಲೇಲಿ ಕುಳಿತಿದ್ದಾಳೆ. ಆಯಪ್ಪ ಓಡಿ ಓಡಿ ಹೋಗ್ತಾ ಇದ್ದಾನೆ ದೊರೆ ಮನೆ ಹತ್ರುಕೆ. ಹೋಗಿ “ಅಯ್ಯಾ ದೊರೆ, ಒಳ್ಳೇ ಸುದ್ದಿ ಬಂತು. ನಿನಿಗೆ. ಹದಿನಾರು ವರ್ಷದ ಮಗ ಸುಂದರವಾದಂತ ಗಂಡಸಾಗುಟವೆ ಅಂತ ನನಗೆ ಮೋರ್ಚೆ ಬಡಿದ್ದಿಟ್ಟಿತ್ತು, ಕಿಟಕಿ ಒಳಗೆ ನೋಡಿ. ನಡೀರಿ ಸ್ವಾಮಿ. ಹೋಗಿ ಕಕ್ಕೊಂಡ್ ಬರಾನ ಅಂತ ಹೇಳಿ, ಆವಾಗ ಆ ದೊರೆ, ದೊರೆಹೆಂಡ್ತಿ, ಎಲ್ಲಾರು ಹೋಗಿ ಆ ರೂಮ್ ಬಾಗ್ಲು ತೆಗೆದು ನೋಡ್ಡಾಗ ಸುಂದರವಾದಂತ ಗಂಡಾಗಿದ್ದಾನೆ. ಆವಾಗ ಆ ಮಗುನ್ನೋವೆ ಆಯಮ್ಮನ್ನೂವೆ ಮನೆಗೆ ಕರೊಂಡು ಬಾರೆ. ಕಕ್ಕೊಂಡು ಬಂದಾಗ ಸುತ್ತಲ ದೇಶಕ್ಕೆಲ್ಲ ಟಾಂ ಟಾಂ ಹಾಕಿಸ್ತಾರೆ. ಈ ದೊರೆಗೆ ಹದಿನಾರು ವರ್ಷದ ಮಗ ಪ್ರತ್ಯಕ್ಷವಾಗಿದ್ದಾನೆ. ಈಗ ನಾಮಕರಣ ಮಾಡ್ತೀವಿ ಎಲ್ಲಾರು ಬನ್ನಿ ಅಂತ. ಸುತ್ತಮುತ್ತಲ ದೇಶಕ್ಕೆಲ್ಲ ಹೇಳಿ ಕರೆಸ್ಕೊಂಡು ದೊಡ್ಡದಾಗಿ ನಾಮಕರಣ ಮಾಡ್ತಾರೆ. ನಾಮಕರಣ ಮಾಡಿ “ಏಡಿಕುಮಾರ” ಅಂತ ಹೆಸರಿಟ್ಟು, ಆಯಮ್ಮನ್ನ ಆಯಪ್ಪನಿಗೆ ಲಗ್ನ ಮಾಡ್ಕೊಡ್ತಾರೆ.
ಲಗ್ನ ಮಾಡಿದ ಕೆಲವಾರು ದಿವೃ ಹಿಂಗೇ ಕಾಲ ಕಳೀತಾ ಇದ್ದಾರೆ. ಕೆಲವಾರು ದಿವೃ ಕಾಲ ಮಾಡಿದ್ದೇಲೆ ಈ ಬಲತಾಯಿ, ತಂದೆ ಇದ್ದಾರಲ್ಲ ಊರಲ್ಲಿ, ಆಯಪ್ಪಂಗೂ ಆಯಮ್ಮಂಗೂ ಗೊತ್ತಾಗಿದೆ. ನನ್ ಮಗಳು ಬದುಕಿದಾಳೆ, ಅಚ್ಚುಕಟ್ಟಾಗಿದಾಳೆ ಅನ್ನೋದು. ಅಕ್ಕಪಕ್ಕದವು ಹೇಳಿ, ಇರಲಿ ನನ್ ಮಗಳ ಎಷ್ಟು ದಿವೃ ಆಯ್ತು ಅವ್ರ ಮನೆಗೆ ಕಳ್ಳಿ, ಇವತ್ತಾದ್ರೂ ಹೋಗಿ ನನ್ ಮಗಳ ನೋಡ್ಕೊಂಬರಾನ ಅಂತೇಳಿ ಅವಳ ಬಲತಾಯಿ, ಮಗಳ ನೋಡಕೆ ಬಾಳೆ. ಎಷ್ಟು ದಿವೃ ಆಯ್ತು, ನಂ ತಾಯಿ ಬಂದ್ರು ಅಂತ ಇವೃಗೂನೂ ಒಂದು ಕರುಣ ಉಂಟಾಗ್ತದೆ. ಸುಖ ಸಂತೋಷದೊಳೆ ಬಂದಂತಾ ಈಯಮ್ಮಂಗೆ ಬೇಕ್ ಬೇಕಾದಂಥ ಅಡಿಗೂಟ ಮಾಡಿ, ಬಟ್ಟೆಬರೆ ತೊಗೊಬಂದು ಕೆಲವಾರು ದಿವ್ಯ ಆಯಮ್ಮನ್ನ ಇಟ್ಕಂತಾರೆ, ಮನೇನಲ್ಲಿ. ಕೆಲವಾರು ದಿವೃ ಇಟ್ಕಂಡ್ರೆ ಈಯಮ್ಮಂಗೆ ಒಂತರಾ ಕುತಾ ಬಂದ್ವಿಡ್ತದೆ. ಎಲೆ ಎಲೆ, ನಾನ್ ಒಂದು ಮೊರ ಹೊನ್ನ ಈಸ್ಕೊಂಡು ಈ ಮನೆಗೆ ನನ್ ಸವತಿ ಮಗ್ನನ್ ಕಳ್ಳಿ, ಎಷ್ಟು ಚೆನ್ನಾಗಿ ಬದಿಕ್ಕೊಂಡ್ಡಿಟ್ಟುಳು. ನನ್ಮಗಳನ್ ಕೊಟ್ಟಿದ್ರೆ ಹಿಂಗೇ ಬರೋಳೇನೋ, ಇವನ್ನ ಕೊಟ್ಟಿಬಿಟ್ನಲ್ಲ, ಅಂದಿದ್ದೇ ಆಯಮ್ಮಂಗೆ ಬಾಳ ಚಿಂತೆಗೆ ಬಂದ್ದಿತ್ತು. ಚಿಂತೆ ಬಂದ್ರೆ, ಇರಲಿ ಇದಕ್ಕೂ ಒಂದು ಯೋಚನೆ ಮಾಡಾನ ಅಂದ್ಕಂಡ್ಲು.
ಯೋಚೆ ಮಾಡ್ಕೊಂಡು ಆಯಮ್ಮ ಮನೇಗ್ ಬಂದ್ಬಟ್ಟುಳು. ಇತ್ತಾಗಿ ಏಡ್ಕುಮಾರನ ಹೆಂಡ್ತಿ ಗರ್ಭಿಣಿ ಆದ್ದು, ಗರ್ಭಿಣಿ ಆದಾಗ, ನವನಾರು ಒಂಬತ್ತು ತಿಂಗಳು ತುಂಬಾ ಬಂತು. ಈಯಮ್ಮಂಗೆ ಯಾರೋ ತಿಳುವಳಿಕೆ ಹೇಳಿದ್ರು. ಯಾರಿಗೆ? ಈ ಬಲತಾಯಿಗೆ. ಬಲತಾಯಿ ಮಕ್ಕು ಕಕ್ಕೊಂಡು ಬಂದು ಬಾಣಂತನ ಮಾಡೋಕು ಅಂತ ಹೇಳಿ ಆಯಮ್ಮ ಮಗಳನ್ ಕರಿಯೋಕ್ ಹೊಂಟು. “ಏನಮ್ಮಾ, ನಿಂ ತಾಯಿ ಕರೆಯೋಕೆ ಬಂದಿದಾರೆ. ಹೋಗೋ ಇಷ್ಟ ಇದ್ರೆ ಹೋಗಮ್ಮ. ನಿನಗೆ ಹೋಗೋ ಇಷ್ಟ ಇಲ್ಲದಿದ್ರೆ ಹೋಗೋಡಮ್ಮ, ನಾವೇ ಮಾಡ್ತೀವಿ” ಅಂತ ದೊರೆ, ದೊರೆಹೆಂಡ್ತಿ ಕುಂಡ್ರಿಸ್ಕೊಂಡು ಹೇಳಿದ್ರು. “ಅಯ್ಯೋ ನಾನು ಹೋಗ್ತಿದ್ರೆ, ನನ್ ಮಗಳಾಗಿದ್ರೆ ಬರಲಿಲ್ವಾ, ಬೇರೆಯವ್ರ ಮಗಳಾಗಿದ್ದಿಕ್ಕೆ ನಾನು ಕರೆದ್ರೂ ಬಲ್ಲಿಲ್ಲ ಅಂತ ಬೇಜಾರು ಮಾಡ್ಕೊತಾಳೆ ನಂ ತಾಯಿ. ಏನೇ ಕಷ್ಟ ಬರಲಪ್ಪ ನನಗೆ. ನಗ್ತಾ ನಗ್ತಾ ಕಳಿಸಿಕೊಡಿ. ಹೋಸ್ಪಿಟ್ ತೀನಿ ಬಾಣಂತನ ತೀರಿಸ್ಕೊಂಡು” ಅಂತ ಅತ್ತೆ ಮಾವಂಗೇಳಿದಳು. ಬೆಳಗ್ಗೆ ಅವಳಿಗೆ ಏನೇನು ಮಾಡೋಕೋ ಎಲ್ಲಾನೂ ಮಾಡಿ, ಬಟ್ಟೆ ಬರೆ ತಂದಿಟ್ಟು, ಅವರಿಗೆ ಅಡಿಗೂಟ ಮಾಡಿಕ್ಕಿ, ಕಳಿಸಿಕೊಟ್ರು.
ಕಳಿಸಿಕೊಟ್ರೆ, ಕಕ್ಕೊಂಡೋಗಿ ಕೆಲವಾರು ದಿವೃ ಮಡಿಕ್ಕಂಡಿದ್ದಾಳೆ. ಮಡಿಕ್ಕಂಡಿರಬೇಕಾದ್ರೆ, ಈಯಮ್ಮ ಯೋಚೆ ಮಾಡ್ತಾಳೆ. ಅಯ್ಯೋ ನನ್ ಮಗಳ ಕೊಟ್ಟಿದ್ರೆ ಹಿಂಗೇ ಬಡ್ತಿರೋಳಲ್ಲ ? ಇವಾಗ ಇದೇನಾರ ಒಂದು ಐಡಿಯಾ ಮಾಡಿ ಇವಳ ತೀರಿಪ್ಲೇಬೇಕು ಅನ್ನೋದೊಂದು ದುರ್ಯೋಚನೆ ಮಾಡ್ಲಿಟ್ಟುಳು. ಆಯಮ್ಮ೦ಗೊಬ್ಬು ಮಗಳಿದ್ದಾಳಲ್ಲ? ಆ ಮಗಳಿಗೆ ಹೇಳಿಕೊಡ್ತಾಳೆ. ಏನಂತ ಹೇಳ್ತಾಳಪ್ಪ ಅಂದ್ರೆ. “ಒಂದುಪಾಯ ಹೇಳು ನಿಮ್ಮಕ್ಕಂಗೆ ಅಕ್ಕ ನಿನ್ ಮೈಮೇಲಿರೋ ಬಟ್ಟೆ, ಒಡ್ವನೆಲ್ಲ ಕೊಡಕ್ಕಾ, ನಾನ್ ಹಾಕ್ಕಂತೀನಿ ಒಂದಿನ. ನನ್ ಮೈ ಮೇಲಿರೋ ಬಟ್ಟೆ ನೀನ್ ಹಾಕ್ಕಳಕ್ಕ. ನಾನೂ ಒಂದಿನ ಶೋಕಿಮಾಡ್ತೀನಿ ಅಂತ ಹೇಳಿ ಅವಳ ಬಟ್ಟೆನೆಲ್ಲ ನೀನ್ ಈಸಿ ಹಾಕ್ಕೊಂಡು ನೀರಿಗೋಗಾನ ನಡೆಯಕ್ಕಾ ಅಂತ ಒಂದು ಕಲ್ಯಾಣಿ ಹತ್ರಕ್ಕೆ ನೀರಿಗೆ ಕಕ್ಕೊ೦ಡು ಹೋಗಿ, ಆಯಮ್ಮನ್ನ ಕಲ್ಯಾಣಿ ಒಳಕ್ಕೆ ನೂಕ್ಟಿಟ್ಟು ನೀನು ಬಂದ್ದಿಡು” ಅಂತ ಮಗಳಿಗೆ ಹೇಳ್ಕೊಡ್ತಾಳೆ.
ಹೇಳಿಕೊಟ್ರೆ ಈಯಮ್ಮ ಅದೇ ರೀತಿ “ಅಕ್ಕಾ ನಿನ್ ಮೈಮೇಲೆ ಎಷ್ಟು ಚೆನ್ನಾಗಿದೆಯಕ್ಕಾ ಒಡವೆಗಳು. ನಿನ್ ಬಟ್ಟೆ ಒಡವೆನೆಲ್ಲ ನನಗೆ ಧರಿಸಕ್ಕ. ನನ್ ಬಟ್ಟೆ ನೀನ್ ಧರಿಸ್ಕೊಳಕ್ಕ. ನೋಡಕ್ಕ” ನಾನು ಎಷ್ಟು ಚೆನ್ನಾಗಿ ಕಾಣಿಸ್ತೀನಿ ಆವಾಗ ಅಂತ ಹೇಳಿ ಆಯಮ್ಮನ ಮೈಮೇಗಲ ಬಟ್ಟೆ, ಒಡ್ಡೆನೆಲ್ಲ ಇನ್ನು ತೊಳ್ಕೊಂಡು, ಅಕ್ಕಾ ಬೇಜಾರಾಗುತ್ತೆ ನೀನ್ ಬಂದ್ ದಿವೃದಿಂದಲೂ ಎಲ್ಲೂ ಹೊರಗಡೆ ತಿರುಗಾಡಕ್ಕಿಲ್ಲ. ಕಲ್ಯಾಣಿ ತಾಕ್ಕ ತಿರುಗಾಡ್ಕೊಂಡು ನೀರ ತಗೊಂಡು ಬರಾನ ನಡಿಯಕ್ಕಾ ಅಂತ ಹೇಳಿ, ಆಯಮ್ಮನ್ ಜೊತೆಯಲ್ಲಿ ಕರೊಂಡು ಹೋಗ್ತಾ ಇದ್ದಾಳೆ. ಹೋಗ್ತಾ ಇರಬೇಕಾದ್ರೆ, ಒಂದು ಕಲ್ಯಾಣಿ ತುಂಬಿರುತ್ತೆ. ಕಲ್ಯಾಣಿ ಹತ್ರಕ್ಕೆ ಹೋಗಿ, “ಅಕ್ಕಾ ನನ್ನ ಸೀರೆಯೆಲ್ಲ ನೀರಾಗ್ನಿಡ್ತದೆ. ನೀನ್ ನೀರು ಮಗದ್ ಕೊಡಕ್ಕ, ನಾನ್ ಮ್ಯಾಲಕ್ಕೆ ತಗೊಂಡು ಹೋಗ್ತಿನಿ” ಅಂತ ಹೇಳಿ ಆ ಬಿಮ್ಮನ್ಸ್ನ ಕಳಿಸಿ, ನೀರ್ ಮೊಗಿವಾಗ ನೂಕ್ಟಿಟ್ ಒಳಕ್ಕೆ, ಈಯಮ್ಮ ಬಿಂದಿಗೆ ತೊಗೊಂಡ್ ಬಂದ್ದಿಡ್ತಾಳೆ.
ಮನಗೆ ಬಂದ್ರೆ, ಅಲ್ಲಿಗೆ ಆಯಮ್ಮಂಗೆ ಹೆರಿಗೆ ಟೈಂ ತುಂಬಿರುತ್ತೆ. ಕಲ್ಯಾಣಿ ಒಳಗಡೆ ಹೋಗ್ತಿದ್ದಂಗೆ, ಒಳಗಡೆ ಎರಡು ಸರ್ಪಗಳಿರುತ್ತವೆ. ಸರ್ಪಗಳಿದ್ರೆ, ಈಯಮ್ಮನ್ ಅಂಗೆ ಕೈಲಿಡ್ಕೊಂಡು ಹೋಗಿಟ್ಟುವು. ಒಳಗಡೆ ಸರ್ಪಗಳಿಗೆ ಒಂದು ಮನೆ ಇರುತ್ತೆ. ಆ ಮನೆ ಒಳಗಡೆ ನಾವ್ಯಾತರ ನರ ಮನುಷ್ಯರ ವಾಸಮಾಡ್ಕೊಂಡಿದ್ದೀವಿ ಅದೇ ತರ ಆ ಸರ್ಪಗಳು ಆಯಮ್ಮನ್ ಇಡ್ಕೊಂಡಿತ್ತವೆ. ಇಟ್ಕಂಡಿರಬೇಕಾದ್ರೆ, ಈಯಮ್ಮ ಬಿಂದಿಗೆ ಎತ್ಕಂಡ್ ಮನೆಗೆ ಬಾಳೆ.
ಮನೆಗೆ ಬರೋದು ಅಲ್ಲಿಗೆ ಹೆರಿಗೆ ಟೈಂ ತಿಂಗಳು ಮುಗೀತಾ ಬಂತು. ಹೆರಿಗೆ ಟೈಂ ಮುಗಿದೋಯ್ತು. ಈ ತಿಂಗಳೇನೇ ಹೆರಿಗೆ ಆಗೋಗದೆ. ನಾವ್ ಹೋಗ್ಲಿಟ್ಟು ಮಗ ಬಾಣಂತಿ ನೋಡ್ಕಂಡ್ ಬರಾನ, ಅಂತ ಹೇಳಿಟ್ಟು ಅತ್ತೆ ಮಾವ ಮಗನನ್ನ ಕಳಿಸಿಕೊಡ್ತಾರೆ. ಬಂದ್ರೆ ಈಯಮ್ಮ ತೊಟ್ಟಲಿಗೆ ಗುಂಡಕಲ್ಲು ಹಾಕಿಬಿಟ್ಟು, ಮೇಲ್ ಬಟ್ಟೆ ಹೊದಿಸ್ಟಿಟ್ಟು, ತಲೆಗೆ ಬಟ್ಟೆ ಕಟ್ಟಿ ಬಿಟ್ಟು ಹಿಂದಗಡೆ ಕುಂಡರಿಸಿದ್ದಾಳೆ. ಕುಂಡ್ರಿಸಿರಬೇಕಾದ್ರೆ ಯಜಮಾನ ಬಾನೆ. ಬಂದ್ರೆ ಅತ್ತೆ ನೀರ್ ಕೊಡ್ತಾಳೆ. ಒಳಗಡೆ ಬಂದು ತೊಟ್ಟಿಲತ್ರ ಕೂತ್ಕತಾನೆ. ಕುಂತ್ಕಂಡಿರಬೇಕಾದ್ರೆ ಇವು ಮಾತಾಡೋದಿಲ್ಲ. ಸುಮೆ ಮಲಗಿದ್ದಾಳೆ. ಇನ್ನು ಕುಂತ್ಕಂಡು ತುಂಬಾ ಯೋಚನೆಮಾಡ್ತಾನೆ. ಅಯ್ಯೋ ನನ್ ಹೆಂಡ್ತಿ ಅಷ್ಟು ಪ್ರೀತಿಯೊಳಗೆ ಇದ್ದೋಳ್, ಈವತ್ತು ನಾನ್ ಇಷ್ಟು ದಿವೃಕ್ ಬಂದರೂನೂ ಏನು ಎಂತನೂ ಮಾತಾಡ್ತಿಲ್ಲವಲ್ಲ ಏನಿರಬಹುದು? ಏನೋ ಅಚಾತುರ ಆಗಿದೆ ? ಇವಳ್ ನನ್ನೆಂಡ್ತಿ ಅಲ್ಲ. ಹೆಂಡ್ತಿಯಾಗಿದ್ರೆ ನನ್ ಮಾತಾಡ್ತಿರೋಳು ಅಂದಿದ್ದೇ, ಕೂತ್ಕಂಡು ಯೋಚನೆ ಮಾಡಿದ. ಸರಿ, ಊಟಾನೂ ಮಾಡಲ್ಲ. ಏನು ಮಾಡಲ್ಲ. ಏನೋ ಅಚಾತುರ ಆಗಿದೆ. ನಾನ್ ವಾಪಾಸ್ ಹಿಂತಿರುಗಿ ಹೋಗ್ತಿಡೋಣ ಅಂತ ಹೇಳಿಬಿಟ್ಟು ಹೆಚ್ಚು ಕಮ್ಮಿ ಏನು ಮಾತಾಡೋದಿಲ್ಲ ಊರಿಗೆ ಹೊಂಟಿಡ್ತಾನೆ. ಊರಿಗೆ ಹೋದ್ರೆ ಅಲ್ಲವರ ತಾಯಿ ತಂದೆ ‘ಏಕಪ್ಪ ಇಷ್ಟು ಬೇಗ ಬಂದೆ? ಹೆರಿಗೆ ಆಗಿದೆಯೇನೋ ? ಚೆನ್ನಾಗಿದ್ದಾಳೇನೋ ? ನಿನ್ನ ಹೆಂಡತಿ ಹೆಂಗಿದ್ದಾಳೋ ? ಮಗು ಚೆನ್ನಾಗಿದೆಯೇನೋ ? ಅಂತ ಅಪೇಕ್ಷೆ ಪಟ್ಟು ಕೇಳ್ತಾ ಇದ್ದರೆ ಇನ್ನೇನೂ ಮಾತಾಡೋ ಮಂಚದ ಮೇಲೆ ಮಕ್ಕಡೆಯಾಗಿ ಮಲಗಿಬಿಡ್ತಾನೆ. ಏನೋ ಹೆಚ್ಚು ಕಮ್ಮಿ ಆಗ್ನಿಟ್ಟಿದೆ. ನಮ್ ಸೊಸೆಗೆ. ನನ್ನಗ ಏನೂ ಹೇಳಿಲ್ವಲ್ಲ, ನಾವಿಬ್ರೂ ಹೋಗ್ ನೋಡ್ಕೊಂಡು ಬಂದ್ಬುಡಾನ ನಡೀರಿ ಅಂತ ದೊರೆನೂ, ದೊರೆ ಹೆಂಡ್ತಿನೂ ಸೊಸೆ ಮನೆಗೆ ಬಂದ್ರೆ ಅಷ್ಟೋತ್ಸಾಗ್ಲೆ ಇವುಳು ತೊಟ್ರೊಳಗೆ ಇದ್ದ ಗುಂಡುಕಲ್ಲು ತಗದ್ ಹಾಕಬುಟ್ಟು, ಮಗು ತೀರಿಹೋಗಿ ಬಿಟ್ಟಿದೆ, ಬಾಣಂತಿಗೆ ಅಮ್ಮ ಎದ್ದು ಒಂದು ಕಣ್ಣು ಹೋಗಿಟ್ಟಿದೆ ಅಂತ ಹೇಳಿಬಿಟ್ಟು ತೊಟ್ಟು ತಗದು ಮಡಗಿಬಿಟ್ಟು ಕದೀನಿಂದ ಕುಂಡಿರಿಸಿದ್ದಾರೆ ಮಗಳ. ಸೊಸೇನ ನೋಡಾಕೆ ಅತ್ತೆ ಮಾವ ಬಂದ್ರು. ಬಂದ್ರೆ ಅತ್ತೇನೂ ಮಾತಾಡ್ನಲಿಲ್ಲ, ಮಾವನ್ನೂ ಮಾತಾಡಿಸಲಿಲ್ಲ. “ಅಯ್ಯೋ ನಮ್ ಸೊಸೆ ಅಷ್ಟು ಪ್ರೀತಿಲಿ ಇದ್ದಲ್ಲ. ಏನ್ ನಮ್ಮನ್ ಮಾತಾಡಲಿಲ್ಲವಲ್ಲ. ಕದೀನಿಂದಗಡೆನೇ ಮಲಗಿದ್ದಾಳಲ್ಲ, ಏನಿರಬಹುದು ? ಅಮ್ಮಾ ಏನಮ್ಮ, ಮಗು ಚೆನ್ನಾಗಿದ್ಯ, ನೀನ್ ಚೆನ್ನಾಗಿದ್ದೀಯೇನಮ್ಮ. ಅತ್ತೇ, ಮಗು ತೀರಿಹೋಗಿತ್ತು ಮೂರುದಿದ್ದ ಆಯ್ತು ಹೆರಿಗೆ ಆಗಿ. ನಿಮ್ ಮಗ ಬಂದಾಗ್ಲ ಮಗು ಇತ್ತು. ಆಮೇಲ್ ಮಗು ತೀರ್ ಹೋಗಿತ್ತು. ನನಗೆ ಅಮ್ಮ ಎದ್ದಿಟ್ಟಿದ್ದಾವೆ. ಕಣ್ಣು ಕಾಣಿಸೋದಿಲ್ಲ, ಮಲಗ್ನಿಟ್ಟಿದೀನಿ ಕಣತ್ತೆ ಅಂತ ಸೊಸೆ ಹೇಳ್ತಾಳೆ. ಆದರೆ ದನಿ ವಾತಾವರಣ ಅವರಿಗೆ ಗೊತ್ತಾಗ್ನಿಡುತ್ತೆ. ಇನ್ನು ಬ್ಯಾರೆಯೋಳು. ಏನೋ ಮಾಡಿಬಿಟ್ರು ಅಂಟ್ಕಂಡು “ನಾವು ಊರಿಗೆ ಹೋಗ್ತಿವಿ. ನಮ್ಮ ಸೊಸೇನ ನಮ್ಮ ಮನೆಗೆ ಕರೊಂಡು ಬಿಟ್ಟಿಟ್ಟು ಬರಬೇಕು ಕಣಮ್ಮ” ಅಂತ ಹೇಳಿಟ್ಟು ಅತ್ತೆ ಮಾವ ವಾಪಾಸ್ ಊರಿಗೆ ಹೋಗಿಬಿಟ್ರು.
ಬೆಳಗ್ಗೆಗೆ ಒಡವೆ ಹಾಕ್ಕೊಂಡು ಅದೇ ಸೀರೆ ಉಟ್ಕಂಡು ಮತ್ತೆ ಅವ್ರ ಮನೆಗೆ ಸೊಸೆ ಕರ್ಕೋಂಡ್ ಹೋಗ್ತಾ ಇದ್ದಾಳೆ, ಅವ್ರತಾಯಿ. ಕರ್ಸ್ಕೊಂಡ್ ಹೋಗ್ತಾ ಇದ್ರೆ, ಮನೆಗೆ ಹೋದ್ ತಕ್ಷಣ ಅಯ್ಯೋ ಪರಮಾತ್ಮ ನನ್ ಸೊಸೆ ಅಲ್ಲ ಇವು. ಈ ನನ್ನ ಸೊಸೆ ಹೋಗಬೇಕಾದ್ರೆ ಕೈಗಳಿಗೆಲ್ಲ ಒಂದೊಂದು ಗುರು ಕೊಟ್ ಬಿಟ್ಟು ಹೋಗಿದ್ದು. ಗಂಡನ ಕೈಗೆ ಒಂದು ಗುರುತು ಕೊಟ್ಟು ಹೋಗಿದ್ರು. ಸೊಸೆಯಾಗಿದ್ರೆ ಈವಾಗ ಕೊಟ್ಟಿರೋ ಗುರುತನ್ನು ಹೇಳ್ತಾಳೆ. ಇವಳ ಪರೀಕ್ಷೆ ಮಾಡಬೇಕು ಅಂತ ಹೇಳಿ ಇವ್ರ ಮೂರು ಜನಾನೂ ಮಾತಾಡ್ಕೊತಾರೆ. ಈಯಮ್ಮ ಹೋಗ್ತಿದ್ದಂಗೇನೇ ಅಡಿಗೆಮನೆ ಯಾವುದು ಅಂತ ಗೊತ್ತಿಲ್ಲ, ಬಚ್ಚಲುಮನೆ ಯಾವುದು ಅಂತಾನೂ ಗೊತ್ತಿಲ್ಲ. ಮಲಗೋ ಮನೆ ಯಾವುದು ಅನ್ನೋದು ಗೊತ್ತಿಲ್ಲ. ಸರಿ ಹೋದ್ಲು, ಎಲ್ಲೋ ಒಂತಾವು ಕುಂತ್ಕಂಡ್ಲು. ಅಮ್ಮ ನೀನು ನಮ್ಮ ಸೊಸೆ ಆದ್ರೆ ಅಡಿಗೆಮನೆ ಯಾವುದು ? ಅಡಿಗೆ ಮಾಡ್ ಹೋಗಮ್ಮ ಅಂದರು. ಇವಳ್ ಹೋಗ್ ಮಾಡಿದ್ ಜ್ಞಾಪಕ ಇದ್ದರಲ್ವೇ ಹೋಗ್ ಮಾಡೋದು? ಹೋಗ್ಲಿಲ್ಲ. ಅಮ್ಮ ಸ್ನಾನದ್ ಮನೆ ಎಲ್ಲಮ್ಮಾ? ನನಗೆ ಗೊತ್ತಿಲ್ಲ. ಆಯ್ತಮ್ಮ. ನೀನ್ ನಮ್ಮನೆ ಬಿಟ್ಟು ಬಾಣಂತನಕ್ಕೆ ನಿಮ್ಮನೆಗೆ ಹೋಗುವಾಗ ನನ್ ಕೈಯಲ್ಲಿ ನೀನೇನಮ್ಮ ಗುರು ಕೊಟ್ ಹೋಗಿದ್ದೆ ? ನಾನೇನೂ ಕೊಟ್ಟಿಲ್ಲ. ಸರಿ. ಅಮ್ಮ ನಮ್ಮಗನ ಕೈಯಲ್ಲೇನಮ್ಮ ಗುರು ಕೊಟ್ ಹೋಗಿದ್ದೆ ? ಅವರ ಕೈಗೂ ನಾನ್ ಏನು ಕೊಟ್ಟಿಲ್ಲ. ಹೌದೇನಮ್ಮಾ, ನೀನಿರು. ಸರಿ. ನೀವ್ ಕರೊಂಡು ಬಂದಿರೋರು ಬಿಟ್ಟಿಟ್ಟು ನಿಮ್ಮನೆಗೆ ನೀವು ಹೋಗ್ರವ್ವ. ನಮ್ಮ ಸೊಸೆ ನಾವು ಬಾಳಿಸ್ಕೋತೀವಿ ಅಂತ ಹೇಳಿಬಿಟ್ರು. ಅವ್ರ ತಂದೆ ತಾಯಿ ಅವರ ಮನೆಗೋದ್ರು. ಸೊಸೆ ಇವ್ರ ಮನೆಯೊಳಗೆ ಬಾಳ್ತಾ ಇದ್ದಾಳೆ.
ಬಾಳ್ತಾ ಇರಬೇಕಾದ್ರೆ, ಗಂಡನಿಗೆ ಚಿಂತೆ ಬಂದ್ಬಡು, ಪರಮಾತ್ಮ, ನನ್ ಹೆಂಡ್ತಿ ಎಲ್ಲವಳೇ ಅಂತ ಪತ್ತೆ ಮಾಡ್ಲೆಬೇಕು ನಾನು ಅಂದು. ಚುಂಚನಗಿರಿ ಪಟ್ಟಣದೊಳಗೆ ಒಬ್ಬ ಬಳೆಶೆಟ್ಟಿ. ಆ ಬಳೆಶೆಟೀನ ಮನೆ ಹತ್ರಕ್ಕೆ ಕರೆಸ್ಕೊಂತಾನೆ. ಕರೆಸಿಕೊಂಡ್ರೆ “ಅಯ್ಯಾ ಬಳೆಶೆಟ್ಟಿ ನೀನ್ ಈ ಸುತ್ತಲು ದೇಶಕ್ಕೆಲ್ಲ ಬಳೆ ತಗೊಂಡು ಹೋಗ್ತಿಯ ಮನೆಮನೆಗೆಲ್ಲ. ನನ್ನ ಹೆಂಡತಿ ನೀನ್ ನೋಡಿದ್ದೀಯ ಮುಂಚೇನೆ. ಎಲ್ಲಾದ್ರೂ ನನ್ ಹೆಂಡ್ತಿ ಇದ್ರೆ ವಸಿ ಪತ್ತೆ ಮಾಡ್ಕೊಂಡು ಬಾರಯ್ಯ” ಅಂತ ಆ ಬಳೆಶೆಟ್ಟಿಗೇಳಿದ. “ಆಯ್ತಯ್ಯ, ನಿನ್ ಹೆಂಡ್ತೀನ ಪತ್ತೆ ಮಾಡ್ಕೊಂಡ್ ಬಂದರೆ ನನಗೆ ಏನಯ್ಯಾ ಕೊಡ್ತೀಯ ನೀನು ?” ‘ಅಯ್ಯಾ ನೀನೇನಾದರೂ ಕೇಳು, ನಾನ್ ನಿನಗೆ ಕೊಡ್ತೀನಿ. ಆದ್ರೆ ನನ್ ಹೆಂಡ್ತೀನ ನೀನ್ ಪತ್ತೆ ಮಾಡ್ಕೊಂಡು ಬಾರಯ್ಯ” ಅಂತ ಹೇಳಿ ಆ ಬಳೆಶೆಟ್ಟಿಯನ್ನು ಕಳಿಸಿಕೊಟ್ಟ.
ಆಗ ಆ ಬಳೆಶೆಟ್ಟಿ ಹೊಸಳ್ಳಿ, ಚುಂಚನಕಪ್ಪೆ ಊರನಾಗೆ ಸಾರಿಕೊಂಡು ಹೋಗ್ತಾ ಇದ್ದಾನೆ. ಹೋಗ್ತಾ ಇರಬೇಕಾದ್ರೆ, ಈ ಬಳೆಗಳೆಲ್ಲ ತೊಡಿಸ್ಪಿಟ್ಟು, ಲಾಸ್ಟ್ಗೆ ಈ ಕಲ್ಯಾಣಿ ಏರಿಮ್ಯಾಗೆ ‘ಬಳೆ ಬಳೆ’ ಅಂಡ್ಕೊಂಡು ಸಾಕ್ಕೊಂಡು ಹೋಗ್ತಾ ಇದ್ದಾನೆ. ‘ಬಳೆ ಬಳೆ’ ಅಂಡ್ಕೊಂಡು ಹೋಗ್ತಾ ಇರಬೇಕಾದ್ರೆ ಈ ನಾಗರಾವು ಹೆಂಡ್ತಿಗೆ ಈ ಬಳೆಸಬ್ದ ಕೇಳಿಸಿಬಿಡುತ್ತೆ. “ಅಯ್ಯೋ ಪರಮಾತ್ಮ ನಮ್ಮಕ್ಕನ ಹೆರಿಗೆ ಆಗಿ ಮೂರು ತಿಂಗಳಾಯ್ತು. ಸೂತಕದ ಬಳೇ ತೆಗಿಸಿಲ್ಲವಲ್ಲ? ಬಳೆಶೆಟ್ಟಿ ಬಾರಯ್ಯ ಇಲ್ಲಿ. ಏನಾದ್ರೂ ಬಾಣಂತಿ ಬಳೆ ಇದ್ರೆ ತಾರಪ್ಪ ಬಳೆ ತೊಡಿಸ್ಪಿಟ್ಟು ಹೋಗು” ಅಂತ ಆ ನಾಗರಾಜ ಬಳೆಶೆಟೀನ ಕೂಗ್ತಾ ಇದ್ದಾನೆ. ಈ ಬಳೆಶೆಟ್ಟಿ ”ಅಯ್ಯೋ, ಪರಮಾತ್ಮ; ಈ ಕಲ್ಯಾಣಿ ತುಂಬಿದೆ. ಕಲ್ಯಾಣಿ ಒಳಗ್ದಾಸಿ ನಾನು ಹೆಂಗಯ್ಯಾ ಬರುವುದು ? ಸಾಧ್ಯವಿಲ್ಲಯ್ಯ. ಈಚೆ ಕಡೇಕೆ ಕಕ್ಕೊಂಡು ಬಂದ್ರೆ ನಾನು ಬಳೆಗಳ ತೊಡಿಸ್ತೀನಯ್ಯ. ಒಳಗಡೆ ನನಗೆ ಹೋಗಾಕೆ ಸಾಧ್ಯವಿಲ್ಲಯ್ಯ” ಅಂತ ಬಳೆಶೆಟ್ಟಿ ಹೇಳ್ತಾ ಇದ್ದಾನೆ. “ಅಯ್ಯಾ, ಈ ಕಲ್ಯಾಣಿ ಒಳಗೆ ನಿಂತ್ಕಂಡು ತಾಯಿತಂದೆಗೆ ಹುಟ್ಟಿದ್ರೆ ಈ ನೀರು ಎರಡು ಭಾಗವಾಗ್ಲಿ ಅಂತ ಶಾಪ ಇಟ್ಟಿಟ್ಟು ಒಳಗಡೆ ಬಾರಯ್ಯ ಬಳೆಶೆಟ್ಟಿ” ಅಂತ ನಾಗರಾಜ ಕರೀತಾ ಇದ್ದಾನೆ. ಆಗ ಈ ಬಳೆಶೆಟ್ಟಿ “ಅಯ್ಯಾ ಪರಮಾತ್ಮ ತಾಯಿತಂದೆಗೆ ನಾನು ಹುಟ್ಟಿದ್ರೆ ಈ ಕಲ್ಯಾಣಿ ನೀರು ಎರಡು ಭಾಗವಾಗ್ಲಿ” ಅಂತ ಕೈ ಮುಗ್ಗು ಬಿಟ್ಟು ಒಳಗಡೆ ಇಳೀತಾನೆ ಬಳೆಶೆಟ್ಟಿ, ನೀರು ಎರಡು ಭಾಗವಾಗಿ ನಾಗರಾಜನ ಮನೆಹತ್ರಕ್ಕೆ ಹೋದಾಗ, ಬಾಣಂತಿ ಸುತ್ತಾನೂ ಈ ಏಳುಕೆರೆ ಕಟ್ಟಿ, ಆ ಏಳುಕೆರೆಯಿಂದೀಚೆ ಕಡೀಕೆ ಬಾಣಂತಿ ಕೈ ಕೊಡ್ತಾಳೆ, ಬಳೆ ತೊಡಿಸೋಕೆ. ಅನ್ನು ಬಳೆಶೆಟ್ಟಿ ಆಗ ಬಳೆ ಇದ್ದಾವೆ, ಇದ್ರೂನು ನಾನು ಆ ಏಡಿಕುಮಾರನ್ನ ಕಂಡ್ ಬರಬೇಕಲ್ಲ ಇಲ್ಲಿಗೆ ಅಂತ ಒಂದು ಐಡಿಯಾ ಮಾಡ್ಕಂಡು, “ಅಮ್ಮಾ ನಿನ್ನ ಈಡ್ ನಾನ್ ತಂದಿಲ್ಲ. ಮುಗಿದ್ದೊಬ್ಬಿಟ್ಟಿದೆ. ನಾಳೆ ನಾನ್ ಈಡ್ ತಗೊಂಡದ್ದೀನಮ್ಮ. ಈಗ ತೊಡಿಸಕ್ಕಾಗಲ್ಲ” ಅಂತ ಹೇಳ್ತಾ ಇದ್ದಾನೆ ಬಳೆಶೆಟ್ಟಿ. ನಾಗರಾಜ ಏನು ಹೇಳುತ್ತಾನೆ? ಅಪ್ಪಾ ನಾಳೆ ನೀನು ಬಳೆ ತೊಗೊಂಡ್ ಬಾ. ಮುಂಚೆ ಬಂದು ನಮ್ಮಕ್ಕಯ್ಯಂಗೆ ಬಳೆ ತೊಡಿಸಿಬಿಟ್ಟು ನೀನು ಇನ್ನ ಮುಂದಕ್ಕೋಗಯ್ಯ ಅಂತ ಹೇಳಿ ನಾಗರಾಜ ಆಚೆ ಕಡೀಕೆ ಬಳೆಶೆಟೀನ ಕಳಿಸಿಕೊಟ್ಟಿದ್ದಾನೆ.”
ಕಳಿಸಿಕೊಟ್ಟಿದ್ರೆ ಬಳೆಶೆಟ್ಟಿ ಓಡಿ ಓಡಿ ಬಾ ಇದ್ದಾನೆ, ಏಡಿಕುಮಾರ ಮನೆಹತ್ರಕ್ಕೆ. ಏಡಿಕುಮಾರ ಮಂಚದ ಮೇಲೆ ಮಕ್ಕಡೆ ಚಿಂತೆ ಮಾಡ್ಕೊಂಡ್ ಮಲಿಗಿದ್ದಾನೆ. “ಅಯ್ಯಾ ಏಡ್ುಮಾರ, ಏನಯ್ಯ, ಯಾವದೇಶ ಸುತ್ತಿದ್ರೂ ನಿನ್ ಹೆಂಡ್ತಿ ಸಿಗಲಿಲ್ಲಯ್ಯ. ನಾನು ತಿರುಗಿ ತಿರುಗಿ ಸಾಕಾಯ್ತು ಕಣಯ್ಯಾ. ನಿನ್ ಹೆಂಡ್ತೀನೆ ನನಗೆ ಎಲ್ಲೂ ಸಿಗಲಿಲ್ಲಯ್ಯ. ಈಗ ಎಲ್ಲಾದ್ರೂವೆ ಹೋಗಿ ನೀನ್ ಬಳೆ ತಗೊಳ್ಳಯ್ಯ, ನಾನು ತಗೊಡ್ತೀನಿ, ಇಬ್ಬರೂನು ಹೋಗಾನ ನಡೆಯಯ್ಯಾ, ಅನ್ನೋದೊಂದು ಉಪಾಯ ಹೇಳ್ಕೊಂಡು ಏಡಿಕುಮಾರನೂ ಬಳೆ ತಗುಡ್ಕೊಂಡು, ಇವನೂ ಬಳೆ ತೆಗೆದುಕೊಂಡು ಹೊರಟ್ರು. ಬಳೆಶೆಟ್ಟಿ, ಈ ಕಲ್ಯಾಣಿ ಏರಿಮ್ಯಾಲೆ ಹೋಗಿ ‘ಬಳೆ ಬಳೆ’ ಅಂತ ಸಾರಾ ಇದ್ದಾನೆ. ಸಾಗ್ತಾ ಇರಬೇಕಾದ್ರೆ. ‘ಅಯ್ಯಾ ಬಾರಯ್ಯ ಬಳೆಶೆಟ್ಟಿ, ಬಾರಯ್ಯ ಬಾಣಂತಿಗೆ ಬಳೆತೊಡು’ ಅಂತ ಕೂಗ್ತಾ ಇದಾರೆ. ಇಬ್ಬರೂನೂ ಹೋಗ್ತಾರೆ. ಹೋದರೆ “ಅಯ್ಯಾ ಬಳೆಶೆಟ್ಟಿ ನಿನ್ನೆ ನೀನೊಬ್ಬೆ ಬಂದಿದ್ದೆ. ಇವತ್ತು ನಿನ್ ಜೊತೆಗೆ ಒಬ್ಬರನ್ನು ಕಕ್ಕೊಂಡು ಬಂದಿದ್ದೀಯಲ್ಲ ಏನಯ್ಯ ಇದು?” “ಅಯ್ಯ ನಮ್ ಸಂಗದೋರಯ್ಯ, ನಾವಿಬ್ರೂನೂ ಎಲ್ಲೋದ್ರು ಜೊತೇನಯ್ಯ. ನೆನ್ನೆ ಏನೋ ಹುಷಾರಿಲ್ಲ ಅಂತ ಬಂದಿಲ್ಲ. ಇವತ್ತು ಕಕ್ಕೊಂಡು ಬಂದಿದೀನಪ್ಪ” ಅಂತ ಹೇಳ್ತಾ ಇದ್ದಾನೆ, ಬಳಶೆಟ್ಟಿ, ಅದೇ ಟೈಂಗೆ ಈ ಮಗು ಅಳ್ತಾ ಇದೆ ತೊಟ್ಟುಲ್ನಲ್ಲಿರೋದು. ತೊಟ್ಟಿಲ್ ಮಗು ಅಳಬೇಕಾದ್ರೆ, ಆಯಮ್ಮ ಏನ್ ಹಾಡು ಹೇಳ್ಕೊಂಡು ಮಗಾ ತೂಗ್ತಾ ಇದ್ದಾಳಂದ್ರೆ ” ಅಯ್ಯಾ ದೊರೆ ಮೊಮ್ಮಗನೆ, ಏಡಿಕುಮಾರನ ಮಗನೇ, ನಾಗರಾಜನ ಭಾವಮೈದನ, ನೀನು ಮಲಿಕ್ಕಳ್ಳಯ್ಯ” ಅಂತ ಹಾಡೇಳ್ಕೊಂಡು ತೊಟ್ಟಿಲು ತೂಗ್ತಾ ಇದ್ದಾಳೆ.
ತೊಟ್ಟಿಲ್ ತೂಗ್ತಾ ಇರಬೇಕಾದ್ರೆ. ಈಯಮ್ಮ ಹಾಡೋ ಹಾಡು ಈ ವಿಡಿಕುಮಾರನಿಗೆ ಕೇಳಿಸಿ ಬಿಡು. “ಅಯ್ಯಾ ಪರಮಾತ್ಮ, ಇಷ್ಟೇ ನನ್ ಹೆಂಡ್ತಿ. ಇನ್ನೆಲ್ಲೂ ಇಲ್ಲ. ನಾನೇ ಏಡಿಕುಮಾರ, ದೊರೆ ಮಗ. ನಾಗರಾಜನ ಭಾವಮೈದನ ಅಂದ್ರೆ ಈಯಪ್ಪ ಸಾಕ್ಕೊಂಡಿರೋ ಈ ರೀತಿ ಹೇಳ್ತಾ ಇರೋದು. ಇಲ್ಲೇ ನನ್ ಹೆಂಡ್ತಿ ಇರೋದು. ಈ ಜಾಗಬಿಟ್ಟು ನಾನ್ ಎಲ್ಲೂ ಹೋಗಾಕೆ ಸಾಧ್ಯವಿಲ್ಲ” ಅಂತ ಕುಳಿದ್ದಾಗ ಅದೇ ಮತ್ತೆ ಏಳರೆ ಬಿಟ್ಟು ಏಳುಕೆರೆಯಿಂದೀಚೆಗೆ ಕೈ ಕೊಟ್ಟಿದ್ದಾಳೆ ಬಾಣಿ. ಕೊಟ್ಟಿರಬೇಕಾದ್ರೆ, ಈಯಪ್ಪನ್ನೆ ಕುಂಡ್ರಿಸಿದ್ದಾನೆ ಬಳೆಶೆಟ್ಟಿ, ಗಂಡನ್ನ, ಗಂಡನೇ ಬಳೆ ತೊಡಿಸ್ತಾ ಇದ್ದಾನೆ. ಬಳೆ ತೊಡ್ಲಿ ಆದ ಮೇಲೆ ಏಳ ಕೆರೆಯಿಂದೀಚೆ ಕಡೀಕೆ ಅವ್ವ ಕೊರಳೊಳಗೆ ಇರೋ ಮಾಂಗಲ್ಯ ಈ ವೇಳೆಗೆ ಪ್ರಕಾಶಮಾನವಾಗಿ ಹೊಳೀತಾ ಇದೆ. ಹೊಳೀತಾ ಇರಬೇಕಾದ್ರೆ ದುಃಖ ಮಾಡ್ತಾ ಇದ್ದಾನೆ.
ದುಃಖ ಮಾಡ್ಕೊಂಡ್ ಬಳೆ ತೊಡಿಸಬೇಕಾದ್ರೆ ಈ ನಾಗರಾಜ ಎರಡೂವೆ ನಿಂತಿದ್ದರಲ್ಲ, “ಅಯ್ಯಾ ಬಳೆಶೆಟ್ಟಿ, ಏನಿದ್ರೂ ಹೇಳಯ್ಯ ನಮ್ ಹತ್ರ, ನಾವ್ ನಿವಾರಣೆ ಮಾಡ್ತೀವಿ” ಅಂತ ಕೇಳ್ತಾ ಇದಾರೆ. “ಅಯ್ಯೋ ಏನೂ ಇಲ್ಲಪ್ಪ. ಈಯಮ್ಮ ನನ್ ಹೆಂಡ್ತಿ. ಇವಳ್ ಬಲತಾಯಿ ನನಗೆ ಮೋಸಮಾಡಿಟ್ಟು. ಆದರೆ ಇಲ್ಲಿ ಬಂದ್ ಯಾವ ರೀತಿ ಸೇರಿದ್ರು ಅಂತ ನನಗೊಂದು ವಿಚಾರಣೆ ಕೊಡಬೇಕಪ್ಪ” ಅಂತ ಕೇಳ್ತಾಗ, “ಅಯ್ಯಾ ಅದಕ್ಕೆ ನೀನ್ ಯಾಕೆ ಚಿಂತೆಮಾಡ್ತೀಯ,? ನಿನ್ ಹೆಂಡ್ತಿನ ನಿನ್ ಮನೆಗೆ ಕಕ್ಕೊಂಡು ಹೋಗಿ ನೀನ್ ವಿಚಾರಣೆ ಮಾಡಿಕೊಳ್ಳಿವಂತೆ. ಈಗಾದ್ರೆ ನಮ್ಮ ತಂಗಿ ಕಣಯ್ಯ ಅವು. ಇಲ್ಲೀವರ್ಗೂನೂ ಸಾಕಿದೀವಿ. ಮೂರು ತಿಂಗಳು ಬಾಣಂತನ ಮಾಡಿದೀವಿ. ಆದ್ರೆ ನಿಮ್ಮ ಮಗು ತಗೊಂಡೋಗಿ ನಾಮಕರಣ ಮಾಡಿ ಮತ್ತೆ ನೀವ್ ಬದಿಕೋ ಹೋಗ್ರಪ್ಪ, ಮತ್ತೆ ನಾವ್ ಯಾವದೂ ಇದನ್ನ ವಿಚಾರಣೆ ಮಾಡಲ್ಲಯ್ಯ” ಅಂತ ಹೇಳಿಬಿಟ್ಟು ಆಯಮ್ಮಂಗೆ ಏಳ್ ದೇವಗನ್ನೇರಿಗೆ ಕರಿ ಬೇಕ್ ಬೇಕಾದಂಥ ಅಡಿಗೆ ಊಟ ಮಾಡ್ಲಿ, ಬಟ್ಟೆ ತಂದುಡ್ಲಿ, ಮಗೀಗೆ ಏನೇನೊ ತಂದಿಟ್ಟು ಆಯಪ್ಪನ್ ಜೊತೆ ಕಳಿಸಿಕೊಡ್ತಾರೆ.
ಕಳಿಸಿಕೊಟ್ರೆ ಆಯಪ್ಪ ಮಗ ಹೆಂಡ್ತಿ ಕಕ್ಕೊ೦ಡು ಮನೆಗೆ ಬತ್ತಾನೆ. ಮನೆಗೆ ಬಂದಾಗ ಅತ್ತೆ ಮಾವನ ಎರಡ್ ಕಣ್ಣು ಕಾಣಿಸದಂಗೆ ಆಗಿದ್ದಾವೆ. ಅವರಿಬ್ರುಗೂನೂ ಕಾಣದಂಗಾಗಿದ್ದಾಗ, ಸೊಸೆ ಮನೆಗೆ ಹೋಗಿದ್ದಕ್ಕೆ ಎಲ್ಲಾರಿಗೂ ಕಣ್ ಬರವೆ. ಕಣ್ ಬಂದಾಗ ಅಪ್ಪ ನಮ್ ಸೊಸೆ ಕರ್ಕೊಂಡ್ ಬಂದ್ ಬಿಟ್ಟೇನಪ್ಪ. ಇವಳು ಯಾರೋ ನಾವ್ ಪರೀಕ್ಷೆ ಮಾಡಬೇಕ್ಕಣಪ್ಪ ಅಂತ ಹೇಳಿ, ಅಯಮ್ಮನಿಗೆ “ಅಮ್ಮಾ ನೀನು ಹೋಗಬೇಕಾದ್ರೆ ನಿನ್ ಗಂಡನಿಗೆ ಏನಮ್ಮಾ ಕೊಟ್ಟು ಹೋಗಿದ್ದೆ ಗುರುತು?” ಅಂದಾಗ, ನಾನ್ ಬಾಣಂತನಕ್ಕೆ ಹೋಗಬೇಕಾದ್ರೆ ನನ್ ಯಜಮಾನ್ರಿಗೆ “ಮುದ್ರೆಉಂಗುರ” ಕೊಟ್ಟು ಹೋಗಿದ್ದೆ ಅತ್ತೆ. ಅದು ಸರಿ. ನನಗೇನಮ್ಮ ನೀನ್ ಕೊಟ್ಟು ಹೋಗಿದ್ದೆ ಗುರು ? ಅತ್ತೆ, ನಿಮಗೆ ಒಂದ್ ಬಾಚಣಿಗೆ, ಸೀರಣಿಗೆ ಗುರು ಕೊಟ್ಟೋಗಿದ್ದೆ ಅತ್ತೆ. ಇನ್ನೇನಿಲ್ಲ. ಆಯ್ತಮ್ಮ. ನೀನ್ ನಮ್ ಸೊಸೆ ಹೊರತು ಬೇರೆಯವಳೇನಲ್ಲ ಅಂತ ಹೇಳಿಬಿಟ್ಟು, ಈಯಮ್ಮ ಇದ್ದಾಳಲ್ಲ ಸುಳ್ ಹೇಳ್ಕೊಂಡು ಬಂದವು, ಅವನ ಸಿಗದು ಊರ್ ಮುಂದಕ್ಕೆ ತೋರಣ ಕಟ್ಟಿ, ಮತ್ತೆ ಈ ಹುಟ್ಟಿದ ಮಗೀಗೆ ನಾಮಕರಣ ಮಾಡಿ ಅಚ್ಚುಕಟ್ಟಾಗಿ ಬಾಳ್ ಕೊಂಡು ಹೋಗ್ತಾ ಇದ್ದಾರಪ್ಪ.



