Pariksha Pe Charcha CONTEST 2026: ಪರೀಕ್ಷಾ ಪೆ ಚರ್ಚಾ-2026 ಕಾರ್ಯಕ್ರಮದ ನೇರ ಪ್ರಸಾರವನ್ನು ತಪ್ಪದೇ ವೀಕ್ಷಿಸಿ

Charcha CONTEST 2026: ಪರೀಕ್ಷಾ ಪೆ ಚರ್ಚಾ-2026 ಕಾರ್ಯಕ್ರಮದ ನೇರ ಪ್ರಸಾರವನ್ನು ವೀಕ್ಷಿಸುವ ಕುರಿತು.

 

Pariksha Pe Charcha Contest 2026 ಕಾರ್ಯಕ್ರಮದ ನೇರ ಪ್ರಸಾರವನ್ನು ಯಾವ ದಿನ, ಯಾವ ಸಮಯದಲ್ಲಿ ಮತ್ತು ಯಾವ ಚಾನೆಲ್/ಪ್ಲಾಟ್‌ಫಾರ್ಮ್‌ನಲ್ಲಿ ವೀಕ್ಷಿಸಬಹುದು ಎಂಬ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಿ.

ಮೇಲ್ಕಂಡ ವಿಷಯ ಮತ್ತು ಉಲ್ಲೇಖಕ್ಕೆ ಸಂಬಂಧಿಸಿದಂತೆ. ಶಿಕ್ಷಣ ಸಚಿವಾಲಯ ಮತ್ತು ಸಾಕ್ಷರತಾ ಇಲಾಖೆ, ನವದೆಹಲಿ “ಪರೀಕ್ಷಾ ಪೇ ಚರ್ಚಾ”ದ 2026 9ನೇ ಆವೃತ್ತಿಯ ಕಾರ್ಯಕ್ರಮವು ದಿನಾಂಕ 06/02/2026ರಂದು ಬೆಳಿಗ್ಗೆ 10.00 ಗಂಟೆಗೆ ನವದೆಹಲಿಯ ಭಾರತ್ ಮಂಟಪದಲ್ಲಿ (ಟೌನ್ ಹಾಲ್ ರೂಪದಲ್ಲಿ) ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಮಾನ್ಯ ಪ್ರಧಾನ ಮಂತ್ರಿಯವರು ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರೊಂದಿಗೆ ವಿದ್ಯಾರ್ಥಿಗಳಲ್ಲಿರುವ “ಪರೀಕ್ಷೆಯ ಒತ್ತಡವನ್ನು” ಕಡಿಮೆ ಮಾಡುವ ಕುರಿತು ನೇರವಾಗಿ ಸಂವಹನ ನಡೆಸುವರು.

ಶಾಲೆಗಳಲ್ಲಿ ಮಕ್ಕಳು ಕಾರ್ಯಕ್ರಮವನ್ನು ವೀಕ್ಷಿಸಲು ಕೈಗೊಳ್ಳಬೇಕಾದ ಕ್ರಮಗಳು:

1) ಎಲ್ಲಾ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಕ್ರಮ ವೀಕ್ಷಿಸಲು ಅನುವು ಮಾಡಿಕೊಡುವುದು.

2) ಶಾಲೆಯಲ್ಲಿರುವ ಟಿ.ವಿ./ಕಂಪ್ಯೂಟರ್/ಲ್ಯಾಪ್ಟಾಪ್/ಶಿಕ್ಷಕರ ಮೊಬೈಲ್ ಇತ್ಯಾದಿ ಮಾಧ್ಯಮಗಳ ಮೂಲಕ ವಿದ್ಯಾರ್ಥಿಗಳಿಗೆ ವೀಕ್ಷಣೆಗೆ ಅವಕಾಶ ಮಾಡಿಕೊಡುವುದು.

3) ಶಾಲೆಯಲ್ಲಿ ವಿದ್ಯುತ್ ಸಂರ್ಪ, ಅಂತರ್‌ಜಾಲದ ವ್ಯವಸ್ಥೆ, ಟಿ.ವಿ., ಕಂಪ್ಯೂಟರ್, ಲ್ಯಾಪ್ಟಾಪ್, ಮೊಬೈಲ್ ವ್ಯವಸ್ಥೆ ಇಲ್ಲದಿದ್ದಲ್ಲಿ ರೇಡಿಯೋ ಮೂಲಕವಾದರೂ ಕಾರ್ಯಕ್ರಮ ಕೇಳಲು ವ್ಯವಸ್ಥೆ ಮಾಡುವುದು.

ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳು ತಮ್ಮ ವ್ಯಾಪ್ತಿಯ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲಾ ಕಾಲೇಜುಗಳ ಮುಖ್ಯಸ್ಥರಿಗೆ ಕಾರ್ಯಕ್ರಮದ ಬಗ್ಗೆ ಮಾಹಿತಿ ಒದಗಿಸಿ ಎಲ್ಲಾ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಕಾರ್ಯಕ್ರಮವನ್ನು ವೀಕ್ಷಿಸುವಂತೆ ಕ್ರಮವಹಿಸಲು ತಿಳಿಸಿದೆ. ಹಾಗೂ ಕಾರ್ಯಕ್ರಮ ವೀಕ್ಷಣೆಯ ಫೋಟೋ ಸಹಿತ ಕ್ರೂಢೀಕೃತ ವರದಿಯನ್ನು ಈ ಕಛೇರಿಗೆ ಸಲ್ಲಿಸಲು ಸೂಚಿಸಿದೆ. ಲಿಂಕ್‌ನ್ನು ಶೀಘ್ರವಾಗಿ ನೀಡಲಾಗುವುದು. ಎಂದು  ತಿಳಿಸಲಾಗಿದೆ.

Pariksha Pe Charcha Contest 2026

 

CLICK HERE TO WATCH PROGRAM

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

You cannot copy content of this page

error: Content is protected !!
Scroll to Top