Ration card Recent news: ಏ.1 ರಿಂದ ‘ರೇಷನ್ ಕಾರ್ಡ್ ಹೊಸ ನಿಯಮಗಳು ಜಾರಿ|ಈ ತಪ್ಪು ಮಾಡಿದ್ರೆ ನಿಮ್ಮ ಹೆಸರು ಡಿಲೀಟ್

Ration card Recent news: ಏ.1 ರಿಂದ ‘ರೇಷನ್ ಕಾರ್ಡ್ ಹೊಸ ನಿಯಮಗಳು ಜಾರಿ|ಈ ತಪ್ಪು ಮಾಡಿದ್ರೆ ನಿಮ್ಮ ಹೆಸರು ಡಿಲೀಟ್

 

Ration card Recent news: 2026ರ ಏಪ್ರಿಲ್ 1ರಿಂದ ಪಡಿತರ ಚೀಟಿಗಳಿಗೆ ಸಂಬಂಧಿಸಿದ ಹೊಸ ನಿಯಮಗಳು ಜಾರಿಗೆ ಬರಲಿವೆ. ಅನರ್ಹ ಫಲಾನುಭವಿಗಳನ್ನು ಪಟ್ಟಿಯಿಂದ ತೆಗೆದುಹಾಕುವುದು ಮತ್ತು ಪಾರದರ್ಶಕತೆ ಹೆಚ್ಚಿಸುವುದು ಈ ಬದಲಾವಣೆಗಳ ಉದ್ದೇಶ.

Ration card: ನೀವು ಸಮಯಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳದಿದ್ದರೆ, ನಿಮ್ಮ ಹೆಸರು ಫಲಾನುಭವಿಗಳ ಪಟ್ಟಿಯಿಂದ ತೆಗೆದುಹಾಕಲ್ಪಡುವ ಸಾಧ್ಯತೆ ಇದೆ.

ಇ-ಕೆವೈಸಿ ಕಡ್ಡಾಯ:

ಸರ್ಕಾರ ಇ-ಕೆವೈಸಿ ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಿದೆ. ಕೆವೈಸಿ ಪೂರ್ಣಗೊಳ್ಳದಿದ್ದರೆ ಮಾರ್ಚ್ 1ರಿಂದ ಪಡಿತರ ಲಭ್ಯವಿರುವುದಿಲ್ಲ. ಹೊಸ ಕಾರ್ಡ್‌ಗೆ ಅರ್ಜಿ ಸಲ್ಲಿಸುವವರಿಗೆ ವರ್ಷಕ್ಕೆ ₹1.20 ಲಕ್ಷದವರೆಗೆ ಆದಾಯ ಹೊಂದಿರಬೇಕು.

ಇ-ಕೆವೈಸಿ ಕೊನೆಯ ದಿನಾಂಕ: ಫೆಬ್ರವರಿ 28, 2026

ಹೇಗೆ ಮಾಡುವುದು?:

ನಿಮ್ಮ ಸಮೀಪದ ಪಡಿತರ ಅಂಗಡಿಗೆ ಭೇಟಿ ನೀಡಿ ಬೆರಳಚ್ಚು ಮೂಲಕ ದೃಢೀಕರಣ ಮಾಡಬಹುದು. ಅಥವಾ Mera Ration App ಮೂಲಕ ಮುಖ ಗುರುತು ಬಳಸಿ ಮನೆಯಿಂದಲೇ KYC ಪೂರ್ಣಗೊಳಿಸಬಹುದು.

ಮಹಿಳಾ ಸಬಲೀಕರಣಕ್ಕೆ ಒತ್ತು:

ಕುಟು೦ಬದಲ್ಲಿ 18 ವರ್ಷ ಮೇಲ್ಪಟ್ಟ ಹಿರಿಯ ಮಹಿಳೆಯೇ ಕಾರ್ಡ್‌ನ ಮುಖ್ಯಸ್ಥೆಯಾಗಬೇಕು.

ಮಹಿಳೆ ಇಲ್ಲದಿದ್ದರೆ ಮಾತ್ರ ಪುರುಷರನ್ನು ಮುಖ್ಯಸ್ಥರನ್ನಾಗಿ ನೇಮಿಸಲಾಗುತ್ತದೆ. 2026ರ ನಿಯಮಗಳ ಪ್ರಕಾರ ಫಲಾನುಭವಿಗಳು 3 ತಿಂಗಳ ಪಡಿತರವನ್ನು ಒಂದೇ ಬಾರಿ ಸಂಗ್ರಹಿಸಿಕೊಳ್ಳುವ ಅವಕಾಶ ಪಡೆಯಲಿದ್ದಾರೆ. ಇದು ಸಮಯ ಉಳಿಸುವ ಜೊತೆಗೆ ಅನಾವಶ್ಯಕ ಪ್ರಯಾಣವನ್ನು ಕಡಿಮೆ ಮಾಡಲಿದೆ.

ಸಂಪೂರ್ಣ ಡಿಜಿಟಲ್ ನೋಂದಣಿ:

-ಸರ್ಕಾರಿ ಕಚೇರಿಗಳ ಸುತ್ತಲೂ ಅಲೆದಾಡುವ ಅವಶ್ಯಕತೆ ಇಲ್ಲ.

-ಹೊಸ ಪಡಿತರ ಚೀಟಿಗಳಿಗೆ ಅರ್ಜಿ ಆನೈನ್ ಮೂಲಕ ಮಾತ್ರ ಸ್ವೀಕರಿಸಲಾಗುತ್ತದೆ.

-ಅರ್ಜಿ ಸಲ್ಲಿಸಿದ ನಂತರ ಆಹಾರ ಸರಬರಾಜು ಅಧಿಕಾರಿ ಮನೆಗೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸುತ್ತಾರೆ.

-ಎಲ್ಲವೂ ಸರಿಯಾಗಿದ್ದರೆ ಮಾತ್ರ ಕಾರ್ಡ್ ಅನುಮೋದನೆ.

ಈ ನಾಲ್ಕು ಕಾರಣಗಳಿಗೆ ನಿಮ್ಮ ಹೆಸರು ರದ್ದಾಗಬಹುದು!

-ಕುಟುಂಬದ ಯಾರಾದರೂ ಆದಾಯ ತೆರಿಗೆ ಪಾವತಿಸಿದರೆ

-ಟ್ರ್ಯಾಕ್ಟ‌ರ್ ಹೊರತುಪಡಿಸಿ ನಾಲ್ಕು ಚಕ್ರದ ವಾಹನ ಹೊಂದಿದ್ದರೆ

-ಕಳೆದ 3 ತಿಂಗಳು ಪಡಿತರ ಸಂಗ್ರಹಿಸದಿದ್ದರೆ

-ಸದಸ್ಯರ ಮರಣ/ಮದುವೆಯ ನಂತರವೂ ಹೆಸರು ಕಾರ್ಡ್‌ನಲ್ಲಿ ಉಳಿದಿದ್ದರೆ

 

ಪಡಿತರ ಅಕ್ಕಿ ಮಾರಾಟ ಮಾಡಿದರೆ ಕಾರ್ಡ್ ತಕ್ಷಣ ಅಮಾನತು; ಸರ್ಕಾರದ ಖಡಕ್ ಎಚ್ಚರಿಕೆ:

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (NFSA) ಅಡಿಯಲ್ಲಿ ಬಡ ಕುಟುಂಬಗಳಿಗೆ ನೀಡುವ ಪಡಿತರ ಅಕ್ಕಿಯನ್ನು ಮಾರಾಟ ಮಾಡುವುದು ಅಥವಾ ಅಕ್ರಮವಾಗಿ ಸಂಗ್ರಹಿಸುವುದು ಶಿಕ್ಷಾರ್ಹ ಅಪರಾಧ ಎಂದು ಸರ್ಕಾರ ಕಠಿಣ ಎಚ್ಚರಿಕೆ ನೀಡಿದೆ.

ಅಕ್ಕಿ ಮಾರಾಟ ಸಾಬೀತಾದರೆ, ಪಡಿತರ ಚೀಟಿಯನ್ನು ಕನಿಷ್ಠ 6 ತಿಂಗಳ ಕಾಲ ಅಮಾನತುಗೊಳಿಸಲಾಗುವುದು.

ಮಾರಾಟ ಮಾಡಿದ ಅಕ್ಕಿಯ ಪ್ರಮಾಣಕ್ಕೆ ಮುಕ್ತ ಮಾರುಕಟ್ಟೆ ದರದಲ್ಲಿ ದಂಡ ವಿಧಿಸಲಾಗುವುದು. ಅಕ್ರಮ ದೊಡ್ಡ ಮಟ್ಟದಲ್ಲಿದ್ದರೆ ಕ್ರಿಮಿನಲ್ ಪ್ರಕರಣ ದಾಖಲಾಗುವ ಸಾಧ್ಯತೆಯೂ ಇದೆ.

Ration card Recent news
ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

You cannot copy content of this page

error: Content is protected !!
Scroll to Top