Samagra Shikshana Karnataka:ಜನವರಿ–ಮಾರ್ಚ್ 2026ರ ಮೂರು ತಿಂಗಳ ವೇತನ ಅನುದಾನ ಬಿಡುಗಡೆ ಆದೇಶ
Samagra Shikshana Karnataka: ಮೇಲೆ ಓದಲಾದ ಕ್ರಮಾಂಕ (1) ರ ಸರ್ಕಾರದ ಅಧಿಕೃತ ಜ್ಞಾಪನದಲ್ಲಿ ಕಾಲಕಾಲಕ್ಕೆ ಜಾರಿಯಲ್ಲಿರುವ ಮಿತವ್ಯಯದ ಸೂಚನೆಗಳನ್ನು ಮತ್ತು ಸಾಮಾನ್ಯ ಆರ್ಥಿಕ ಅಧಿಕಾರ ಪ್ರತ್ಯಾಯೋಜನೆಗಳನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ವಿಧಾನ ಮಂಡಲವು ಅನುಮೋದಿಸಿರುವ ಕರ್ನಾಟಕ ಧನವಿನಿಯೋಗ (ಲೇಖಾನುದಾನ) ವಿಧೇಯಕದನ್ವಯ 2025-26ನೇ ಸಾಲಿನ ವಿವಿಧ ಯೋಜನೆ/ಕಾರ್ಯಕ್ರಮಗಳಿಗೆ ದಿನಾಂಕ: 1ನೇ ಏಪ್ರಿಲ್ 2025 ರಿಂದ ದಿನಾಂಕ: 31ನೇ ಮಾರ್ಚ್ 2026ರ ಅವಧಿಯ ವೆಚ್ಚವನ್ನು ಭರಿಸಲು ಇಲಾಖಾ ಮುಖ್ಯಸ್ಥರು ಮತ್ತು ಅಂದಾಜು ಅಧಿಕಾರಿಗಳಿಗೆ ಅಧಿಕಾರ ನೀಡಲಾಗಿರುತ್ತದೆ.
ಮೇಲೆ ಓದಲಾದ ಕ್ರಮಾಂಕ (2)ರ 2025-26ನೇ ಸಾಲಿನಲ್ಲಿ ಪಂಚಾಯತ್‌ಗಳಿಗೆ ಒದಗಿಸಿರುವ ಆಯವ್ಯಯದ ವಿವರಗಳಿಗೆ (ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ ಪಂಚಾಯತಿ ಕಾರ್ಯಕ್ರಮಗಳಿಗೆ)
ಸಂಬಂಧಿಸಿದ ಸಂಪುಟ-1,2,3 &4 ರಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆ ಅಡಿಯಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ/ಶಿಕ್ಷಕರ ವೇತನ ಪಾವತಿಸಲು ಕೆಳಕಂಡಂತೆ ಅನುದಾನವನ್ನು ನಿಗದಿಪಡಿಸಲಾಗಿದೆ.

ಮೇಲೆ ಓದಲಾದ ಕ್ರಮಾಂಕ (3) ರ ಸರ್ಕಾರದ ಆದೇಶದಲ್ಲಿ 2025-26ನೇ ಆರ್ಥಿಕ ವರ್ಷದ ಮೊದಲನೇ ತ್ರೈಮಾಸಿಕ ಅವಧಿಗೆ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆ ಅಡಿಯಲ್ಲಿ ಜಿಲ್ಲಾ ವಲಯದ ಲೆಕ್ಕ ಶೀರ್ಷಿಕೆ 2202-00-102-0-20 (2202-02-196-1-03) ໖ .264.99 ಲಕ್ಷಗಳು ಹಾಗೂ ತಾಲ್ಲೂಕು ವಲಯದ ಲೆಕ್ಕ ಶೀರ್ಷಿಕೆ:2202-00-101-0-19 (2202-01-197-1-02) ಅಡಿಯಲ್ಲಿ ರೂ.54192.56 ಲಕ್ಷಗಳು ಸೇರಿದಂತೆ ಒಟ್ಟಾರೆ ರೂ.54457.55 ಲಕ್ಷಗಳನ್ನು ಹಾಗೂ ಹೆಚ್ಚುವರಿಯಾಗಿ ರೂ.1012.77 ಲಕ್ಷಗಳನ್ನು ಬಿಡುಗಡೆ ಮಾಡಿ ಆದೇಶಿಸಲಾಗಿರುತ್ತದೆ.
ಮೇಲೆ ಓದಲಾದ ಕ್ರಮಾಂಕ (4) ರ ಸರ್ಕಾರದ ಆದೇಶದಲ್ಲಿ 2025-26ನೇ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕ ಅವಧಿಗೆ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆ ಅಡಿಯಲ್ಲಿ ಜಿಲ್ಲಾ ವಲಯದ ಲೆಕ್ಕ ಶೀರ್ಷಿಕೆ:2202-00-102-0-20 (2202-02-196-1-03) ಅಡಿಯಲ್ಲಿ ರೂ.264.99 ಲಕ್ಷಗಳು ಹಾಗೂ ತಾಲ್ಲೂಕು ವಲಯದ ಲೆಕ್ಕ ಶೀರ್ಷಿಕೆ:2202-00-101-0-19 (2202-01-197-1-02) ಅಡಿಯಲ್ಲಿ ₹53179.79 ಲಕ್ಷಗಳು ಸೇರಿದಂತೆ ಒಟ್ಟಾರೆ ₹53444.78 ಲಕ್ಷಗಳನ್ನು ಬಿಡುಗಡೆ ಮಾಡಿ ಆದೇಶಿಸಲಾಗಿರುತ್ತದೆ.
ಮೇಲೆ ಓದಲಾದ ಕ್ರಮಾಂಕ (5) ರ ಸರ್ಕಾರದ ಆದೇಶದಲ್ಲಿ, ಕೋಲಾರ, ಬಳ್ಳಾರಿ, ಬೀದರ್, ರಾಮನಗರ ಮತ್ತು ಗದಗ ಜಿಲ್ಲೆಗಳಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ ಕಾರ್ಯಕ್ರಮದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ/ಸಿಬ್ಬಂದಿಗಳ ವೇತನ ವೆಚ್ಚಕ್ಕಾಗಿ ರೂ.105.08 ಲಕ್ಷಗಳ ಅನುದಾನವನ್ನು ಪುನರ್ವಿನಿಯೋಗದ ಮೂಲಕ ಕೆಳಕಂಡಂತೆ ಒದಗಿಸಲಾಗಿದೆ.

ಮೇಲೆ ಓದಲಾದ ಕ್ರಮಾಂಕ (6) ರ ಸರ್ಕಾರದ ಆದೇಶದಲ್ಲಿ, 2025-26ನೇ ಆರ್ಥಿಕ ವರ್ಷದಲ್ಲಿ ಅಕ್ಟೋಬರ್-2025 ರಿಂದ ಡಿಸೆಂಬರ್-2025ರ ಅವಧಿಯ ಮೂರು ತಿಂಗಳ ಅನುದಾನವನ್ನು ಬಿಡುಗಡೆಗೊಳಿಸಲು ಆಡಳಿತ ಇಲಾಖೆಗಳ ಅಪರ ಮುಖ್ಯ ಕಾರ್ಯದರ್ಶಿ/ಪ್ರಧಾನ ಕಾರ್ಯದರ್ಶಿ/ ಕಾರ್ಯದರ್ಶಿಯವರಿಗೆ ಆರ್ಥಿಕ ಅಧಿಕಾರ ಪ್ರತ್ಯಾಯೋಜನೆ ಮಾಡಿ ಆದೇಶಿಸಲಾಗಿರುತ್ತದೆ.
ಮೇಲೆ ಓದಲಾದ ಕ್ರಮಾಂಕ (7) ರ ಸರ್ಕಾರದ ಆದೇಶದಲ್ಲಿ, 2025-26ನೇ ಆರ್ಥಿಕ ವರ್ಷದ ಮೂರನೇ ತ್ರೈಮಾಸಿಕ ಅವಧಿಗೆ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆ ಅಡಿಯಲ್ಲಿ ಜಿಲ್ಲಾ ವಲಯದ ಲೆಕ್ಕ ಶೀರ್ಷಿಕೆ 2202-00-102-0-20 (2202-02-196-1-03) ಅಡಿಯಲ್ಲಿ ರೂ.343.80 ಲಕ್ಷಗಳು ಹಾಗೂ ತಾಲ್ಲೂಕು ವಲಯದ ಲೆಕ್ಕ ಶೀರ್ಷಿಕೆ:2202-00-101-0-19 (2202-01-197-1-02) ಅಡಿಯಲ್ಲಿ ₹54192.56 ಲಕ್ಷಗಳು ಸೇರಿದಂತೆ ಒಟ್ಟಾರೆ ₹54536.36 ಲಕ್ಷಗಳನ್ನು ಬಿಡುಗಡೆ ಮಾಡಿ ಆದೇಶಿಸಲಾಗಿರುತ್ತದೆ.
ಮೇಲೆ ಓದಲಾದ ಕ್ರಮಾಂಕ (8) ರ ಸರ್ಕಾರದ ಆದೇಶದಲ್ಲಿ 2025-26ನೇ ಆರ್ಥಿಕ ವರ್ಷದಲ್ಲಿ ಜನವರಿ-2026 ರಿಂದ ಮಾರ್ಚ್-2026 ಅವಧಿಯ ಮೂರು ತಿಂಗಳ ಅನುದಾನವನ್ನು ಬಿಡುಗಡೆಗೊಳಿಸಲು ಆಡಳಿತ ಇಲಾಖೆಗಳ ಅವರ ಮುಖ್ಯ ಕಾರ್ಯದರ್ಶಿ/ ಪ್ರಧಾನ ಕಾರ್ಯದರ್ಶಿ/ಕಾರ್ಯದರ್ಶಿಯವರಿಗೆ ಆರ್ಥಿಕ ಅಧಿಕಾರ ಪ್ರತ್ಯಾಯೋಜನೆ ಮಾಡಿ ಆದೇಶಿಸಲಾಗಿರುತ್ತದೆ.
ಮೇಲೆ ಓದಲಾದ ಕ್ರಮಾಂಕ (9) ರಲ್ಲಿ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ, ಬೆಂಗಳೂರು ಇವರ ಏಕ ಕಡತದಲ್ಲಿ 2025-26ನೇ ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕ ಅವಧಿಗೆ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆ ಅಡಿಯಲ್ಲಿ ಜಿಲ್ಲಾ ವಲಯದ ಲೆಕ್ಕ ಶೀರ್ಷಿಕೆ 2202-00-102-0-20 (2202-02-196-1-03) ಅಡಿಯಲ್ಲಿ ₹291.27 ಲಕ್ಷಗಳು ಹಾಗೂ ತಾಲೂಕು ವಲಯದ ಲೆಕ್ಕ ಶೀರ್ಷಿಕೆ 2202-00-101-0-19 (2202-01-197-1-02) ಅಡಿಯಲ್ಲಿ ರೂ.54192.59 ಲಕ್ಷಗಳು ಸೇರಿದಂತೆ ಒಟ್ಟಾರೆ ರೂ.54483.86 ಲಕ್ಷಗಳನ್ನು ಬಿಡುಗಡೆ ಮಾಡುವಂತೆ ಕೋರಲಾಗಿದೆ.
ಮೇಲ್ಕಂಡ ಪ್ರಸ್ತಾವನೆಯಲ್ಲಿ ವಿವರಿಸಲಾದ ಅಂಶಗಳನ್ನು ಸರ್ಕಾರವು ಕೂಲಂಕಷವಾಗಿ ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ: ಇಪಿ 88 ಯೋಯೋಕ 2025 ಬೆಂಗಳೂರು ದಿನಾಂಕ:12.01.2026
2025-26ನೇ ಸಾಲಿನ ಆಯವ್ಯಯದಲ್ಲಿ, ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆ ಅಡಿಯಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ/ಶಿಕ್ಷಕರ ವೇತನ ಬಾಬಿನಡಿಯಲ್ಲಿ ನಿಗದಿಪಡಿಸಿರುವ ಅನುದಾನದಲ್ಲಿ ಈ ಕೆಳಕಂಡಂತೆ ಲೆಕ್ಕ ಶೀರ್ಷಿಕೆವಾರು ಜನವರಿ-2026 ರಿಂದ ಮಾರ್ಚ್-2026 ರ ಅವಧಿಯ 3 ತಿಂಗಳ ಅನುದಾನ ರೂ.54483.86 ಲಕ್ಷಗಳನ್ನು ರಾಜ್ಯ ಯೋಜನಾ ನಿರ್ದೇಶಕರು ಸಮಗ್ರ ಶಿಕ್ಷಣ ಕರ್ನಾಟಕ ಬೆಂಗಳೂರು ಇವರಿಗೆ ಬಿಡುಗಡೆ ಮಾಡಿ ನಿಯಮಾನುಸಾರ ವೆಚ್ಚ ಭರಿಸಲು, ಅನುಮತಿ ನೀಡಿ ಆದೇಶಿಸಿದೆ.

ರಾಜ್ಯ ಯೋಜನಾ ನಿರ್ದೇಶಕರು ಸಮಗ್ರ ಶಿಕ್ಷಣ ಕರ್ನಾಟಕ ಬೆಂಗಳೂರು ಇವರು ಪಾಲಿಸಬೇಕಾದ ಷರತ್ತು ಮತ್ತು ನಿಬಂಧನೆಗಳು:
1. ಸದರಿ ಮೊತ್ತವನ್ನು ಜಿಲ್ಲಾವಾರು/ತಾಲ್ಲೂಕುವಾರು ಹಂಚಿಕೆಮಾಡಿ ಮರು ಬಿಡುಗಡೆ ಮಾಡಲು ಮತ್ತು ಖಜಾನೆಯಲ್ಲಿ ಅಪ್ಲೋಡ್ ಮಾಡಲು ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ, ಬೆಂಗಳೂರು ಇವರಿಗೆ ಅನುಮತಿ ನೀಡಿದೆ.
2. ಇನ್ನು ಮುಂದೆ ಪ್ರತಿ ತಿಂಗಳ 5ನೇ ತಾರೀಖಿನೊಳಗಾಗಿ ಅರ್ಹತೆಗೆ ಅನುಗುಣವಾಗಿ ವೇತನವನ್ನು ಸಂಬಂಧಿಸಿದ ಡಿ.ಡಿ.ಓ ಗಳು ಬಿಡುಗಡೆಗೊಳಿಸಿರುವುದನ್ನು ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ, ಬೆಂಗಳೂರು, ಇವರು ಖಚಿತಪಡಿಸಿಕೊಳ್ಳತಕ್ಕದ್ದು.
3. ಇಲಾಖಾ ಮುಖ್ಯಸ್ಥರು ಅರ್ಹತೆಗೆ ಅನುಗುಣವಾಗಿ ವೇತನ ಬಿಡುಗಡೆ ಮಾಡುವಲ್ಲಿ ಯಾವುದೇ ವಿಳಂಬವಾದರೆ ಸಂಬಂಧಿಸಿದ ಡಿ.ಡಿ.ಓ ಗಳನ್ನ ನೇರ ಹೊಣೆಗಾರರನ್ನಾಗಿ ಮಾಡತಕ್ಕದ್ದು ಮತ್ತು ಕೆ.ಸಿ.ಎಸ್.ಆರ್ (ಸಿ.ಸಿ.ಎ) ನಿಯಮಗಳ ಪ್ರಕಾರ ಕ್ರಮಕೈಗೊಳ್ಳತಕ್ಕದ್ದು.
4. ಅರ್ಹತೆಗೆ ಅನುಗುಣವಾಗಿ ವೇತನ ಪಾವತಿಯನ್ನು ಖಚಿತಪಡಿಸಿಕೊಳ್ಳಲು ಪ್ರತಿ ತಿಂಗಳು 10ನೇ ತಾರೀಖಿನೊಳಗೆ ಎಲ್ಲಾ ಡಿ.ಡಿ.ಓ ಗಳೊಂದಿಗೆ ವಿಡಿಯೋ ಕಾನ್ಸರೆನ್ಸ್ (VC) ಅನ್ನು ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ, ಬೆಂಗಳೂರು, ಇವರು ನಡೆಸತಕ್ಕದ್ದು. ವೇತನ ಪಾವತಿಗೆ ವಿಳಂಬವಾದ ಸಂದರ್ಭದಲ್ಲಿ ಕೆ.ಸಿ.ಎಸ್.ಆರ್ (ಸಿ.ಸಿ.ಎ) ನಿಯಮಗಳಂತೆ ಶಿಸ್ತು ಕ್ರಮಕೈಗೊಳ್ಳತಕ್ಕದ್ದು.
5. ಪ್ರತಿ ತಿಂಗಳು 12ನೇ ತಾರೀಖು ಅಥವಾ ಎಂ.ಪಿಕ್ ಸಭೆ, ಇವುಗಳಲ್ಲಿ ಯಾವುದು ಮೊದಲೋ ಆ ದಿನಾಂಕದೊಳಗಾಗಿ ವೇತನ ಬಳಕೆ ಪ್ರಮಾಣ ಪತ್ರವನ್ನು ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ, ಬೆಂಗಳೂರು, ಇವರು ನಿಗದಿತ ನಮೂನೆಯಲ್ಲಿ ಪಡೆಯತಕ್ಕದ್ದು ಹಾಗೂ ಸರ್ಕಾರಕ್ಕೆ ಸಲ್ಲಿಸತಕ್ಕದ್ದು.
6. ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದ ಯಾವುದೇ ಇತರೆ ಯೋಜನೆಯ ನಿಧಿ/ಅನುದಾನದೊಂದಿಗೆ ಈ ಸಂಬಂಳದ ಪಾವತಿಯಲ್ಲಿ ಯಾವುದೇ ಪುನಾರವರ್ತನೆ ಇಲ್ಲವೆಂದು ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ, ಬೆಂಗಳೂರು, ಇವರು ಖಚಿತಪಡಿಸಿಕೊಳ್ಳತಕ್ಕದ್ದು ಮತ್ತು ಒದಗಿಸಲಾದ ಅನುದಾನವನ್ನು ಯಾವ ಉದ್ದೇಶಕ್ಕಾಗಿ ಒದಗಿಸಲಾಗಿದೆಯೋ ಅದೇ ಉದ್ದೇಶಕ್ಕಾಗಿ ಬಳಸತಕ್ಕದ್ದು, ಇತರೆ ಯಾವುದೇ ಉದ್ದೇಶಕ್ಕಾಗಿ ಬಳಸತಕ್ಕದ್ದಲ್ಲ.
7. ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯ ಅಡಿಯಲ್ಲಿ ಕೇಂದ್ರದ ಪಾಲಿನ ಅನುದಾನದ ಬಿಡುಗಡೆಗಾಗಿ, ಕೇಂದ್ರ ಸರ್ಕಾರದೊಂದಿಗೆ ಪತ್ರ ವ್ಯವಹಾರ ನಡೆಸಿ ಅನುದಾನವನ್ನು ಶೀಘ್ರವಾಗಿ ಪಡೆಯಲು ಕ್ರಮವಹಿಸತಕ್ಕದ್ದು.
8. ಬಿಡುಗಡೆ ಮಾಡಲಾಗಿರುವ ಅನುದಾನದ ಬಳಕೆಯ ಬಗ್ಗೆ ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ, ಬೆಂಗಳೂರು, ಇವರು ನಿಯಮಾನುಸಾರ ಲೆಕ್ಕ ಪತ್ರಗಳನ್ನು ಇಡತಕ್ಕದ್ದು.
9. ಒದಗಿಸಲಾದ ಅನುದಾನದಲ್ಲಿ ಪ್ರಸಕ್ತ ಆರ್ಥಿಕ ಸಾಲಿನ ವೇತನ ವೆಚ್ಚಗಳನ್ನು ಮಾತ್ರ ಭರಿಸತಕ್ಕದ್ದು, ಯಾವುದೇ ಕಾರಣಕ್ಕೂ ಹಿಂದಿನ ಆರ್ಥಿಕ ಸಾಲಿನ ವೇತನ ವೆಚ್ಚಗಳನ್ನು ಭರಿಸತಕ್ಕದ್ದಲ್ಲ.
10. ಪ್ರಸ್ತುತ ಮೂರನೇ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆಗೊಳಿಸಲಾಗಿದ್ದು, ನಾಲ್ಕನೇ ತ್ರೈಮಾಸಿಕ ಕಂತಿನ ಅನುದಾನ ಬಿಡುಗಡೆಗೂ ಮುನ್ನ ಕಡ್ಡಾಯವಾಗಿ ಇಲಾಖಾ ಮುಖ್ಯಸ್ಥರು ಉಪಯೋಗಿತಾ ಪ್ರಮಾಣ ಪತ್ರ (Utilisation Certificate), ಅನುದಾನ ಬಳಕೆಯ ವಿವರ ಮತ್ತು ಬೇಡಿಕೆ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸತಕ್ಕದ್ದು, ತಪ್ಪಿದಲ್ಲಿ ಅನುದಾನ ಬಿಡುಗಡೆಗೊಳಿಸಲಾಗುವುದಿಲ್ಲ.
11. ಸಮಗ್ರ ಶಿಕ್ಷಣ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಹೊರಡಿಸುವ ಜ್ಞಾಪನಾ ಹಾಗೂ ಸದರಿ ಆದೇಶ ಪ್ರತಿಯನ್ನು ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ, ಬೆಂಗಳೂರು, ಇವರು ತಮ್ಮ ಇಲಾಖಾ ವೆಬ್‌ಸೈಟ್‌ನಲ್ಲಿ ಕಡ್ಡಾಯವಾಗಿ ಪ್ರಕಟಿಸುವುದು.
12. ಮೇಲ್ಕಂಡಂತೆ ಬಿಡುಗಡೆಗೊಳಿಸಿರುವ ಅನುದಾನದ ಅಡಿಯಲ್ಲಿ ಭರಿಸಲಾಗುವ ವೆಚ್ಚದ ವಿವರಗಳನ್ನು ಪ್ರತಿ ಮಾಹೆ ಅವಲೋಕನ ತಂತ್ರಾಂಶದಲ್ಲಿ (ಹೊಸ ಡಿಸಿಷನ್ ಸಪೋರ್ಟಿಂಗ್ ಸಿಸ್ಟಂ) ಅಂಕಿ ಅಂಶಗಳನ್ನು ಇಂದೀಕರಿಸತಕ್ಕದ್ದು.
ಈ ಆದೇಶವನ್ನು ಆರ್ಥಿಕ ಇಲಾಖೆಯ ಆದೇಶ ಸಂಖ್ಯೆ; ಎಫ್‌ಡಿ 04 ಟಿಎಫ್‌ಪಿ 2025, ದಿನಾಂಕ:01.01.2026 ರಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಪ್ರತ್ಯಾಯೋಜಿಸಿರುವ ಅಧಿಕಾರದನ್ವಯ ಹೊರಡಿಸಲಾಗಿದೆ.


