Samagra Shikshana Karnataka: 3862 ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ರೂಮ್ ಸ್ಥಾಪನೆಗೆ ಆಡಳಿತಾತ್ಮಕ ಅನುಮೋದನೆ

Samagra Shikshana Karnataka: 3862 ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ರೂಮ್ ಸ್ಥಾಪನೆಗೆ ಆಡಳಿತಾತ್ಮಕ ಅನುಮೋದನೆ

 

Samagra Shikshana Karnataka: ಸಮಗ್ರ ಶಿಕ್ಷಣ ಕರ್ನಾಟಕದಡಿ 2022-23 ರಿಂದ 2025-26ರ ಅವಧಿಯಲ್ಲಿ ರಾಜ್ಯದ 3862 ಪ್ರಾಥಮಿಕ, ಪ್ರೌಢ ಮತ್ತು ಕೆ.ಜಿ.ಬಿ.ವಿ. ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ರೂಮ್ ಸ್ಥಾಪನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಪ್ರಸ್ತಾವನೆ:

ಮೇಲೆ ಓದಲಾದ ಕ್ರಮಾಂಕ (1)ರಲ್ಲಿನ 2022-23ನೇ ಸಾಲಿನ ಸಮಗ್ರ ಶಿಕ್ಷಣ ಕರ್ನಾಟಕದ ವಾರ್ಷಿಕ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿರುವ ಯೋಜನಾ ಅನುಮೋದನಾ ಮಂಡಳಿ (PAB)ಯ ದಿನಾಂಕ: 09.05.2022ರ ಸಭೆಯಲ್ಲಿ 1631 ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಘಟಕ ವೆಚ್ಚ ರೂ. 2.4 ಲಕ್ಷದಂತೆ ಒಟ್ಟು ವೆಚ್ಚ ರೂ.3914.40ಲಕ್ಷಗಳಲ್ಲಿ ಸ್ಮಾರ್ಟ್ ಕ್ಲಾಸ್ ಸ್ಥಾಪಿಸಲು ಅನುಮೋದನೆ ನೀಡಲಾಗಿರುತ್ತದೆ.

ಮೇಲೆ ಓದಲಾದ ಕ್ರಮಾಂಕ (2)ರಲ್ಲಿನ 2024-25ನೇ ಸಾಲಿನ ಸಮಗ್ರ ಶಿಕ್ಷಣ ಕರ್ನಾಟಕದ ವಾರ್ಷಿಕ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿರುವ ಪೂರಕ ಯೋಜನಾ ಅನುಮೋದನಾ ಮಂಡಳಿ (PAB)ಯ ದಿನಾಂಕ: 12.08.2025ರ ಸಭೆಯಲ್ಲಿ 95 ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯಗಳಲ್ಲಿ ಘಟಕ ವೆಚ್ಚ ರೂ. 1.2 ಲಕ್ಷದಂತೆ ಒಟ್ಟು ವೆಚ್ಚ ರೂ.114.00 ಲಕ್ಷಗಳಲ್ಲಿ ಸ್ಮಾರ್ಟ್ ಕ್ಲಾಸ್ ಸ್ಥಾಪಿಸಲು ಅನುಮೋದನೆ ನೀಡಲಾಗಿರುತ್ತದೆ.

ಮೇಲೆ ಓದಲಾದ ಕ್ರಮಾಂಕ (3)ರಲ್ಲಿನ 2025-26ನೇ ಸಾಲಿನ ಸಮಗ್ರ ಶಿಕ್ಷಣ ಕರ್ನಾಟಕದ ವಾರ್ಷಿಕ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿರುವ ಯೋಜನಾ ಅನುಮೋದನಾ ಮಂಡಳಿ (PAB)ಯ ದಿನಾಂಕ: 26.03.2025ರ ಸಭೆಯಲ್ಲಿ 1326 ಹಿರಿಯ ಪ್ರಾಥಮಿಕ ಶಾಲೆಗಳು ಹಾಗೂ 651 ಪ್ರೌಢ/ಉನ್ನತ ಪ್ರೌಢ ಶಾಳೆಗಲು ಸೇರಿದಂತೆ ಒಟ್ಟು 1977 ಶಾಲೆಗಳಲ್ಲಿ ಘಟಕ ವೆಚ್ಚ ರೂ.2.4 ಲಕ್ಷದಂತೆ ಒಟ್ಟು ವೆಚ್ಚ ರೂ.4744.80 ಲಕ್ಷಗಳಲ್ಲಿ ಸ್ಮಾರ್ಟ್ ಕ್ಲಾಸ್ ಸ್ಥಾಪಿಸಲು ಅನುಮೋದನೆ ನೀಡಲಾಗಿರುತ್ತದೆ.

ಮೇಲೆ ಓದಲಾದ ಕ್ರಮಾಂಕ (4)ರಲ್ಲಿನ 2025-26ನೇ ಸಾಲಿನ ಸಮಗ್ರ ಶಿಕ್ಷಣ ಕರ್ನಾಟಕದ ವಾರ್ಷಿಕ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿರುವ ಪೂರಕ ಯೋಜನಾ ಅನುಮೋದನಾ ಮಂಡಳಿ (PAB)ಯ ದಿನಾಂಕ: 28.05.2025ರ ಸಭೆಯಲ್ಲಿ 159 ಪ್ರೌಢ/ಉನ್ನತ ಪ್ರೌಢ ಶಾಲೆಗಳಲ್ಲಿ ಘಟಕ ವೆಚ್ಚ ರೂ.2.4 ಲಕ್ಷದಂತೆ ಒಟ್ಟು ವೆಚ್ಚ ರೂ.381.6 ಲಕ್ಷಗಳಲ್ಲಿ ಸ್ಮಾರ್ಟ್ ಕ್ಲಾಸ್ ಸ್ಥಾಪಿಸಲು ಅನುಮೋದನೆ ನೀಡಲಾಗಿರುತ್ತದೆ.

ಮೇಲೆ ಓದಲಾದ ಕ್ರಮಾಂಕ (5)ರಲ್ಲಿ ರಾಜ್ಯ ಯೋಜನಾ ನಿರ್ದೇಶಕರು ಸಮಗ್ರ ಶಿಕ್ಷಣ ಕರ್ನಾಟಕ ಇವರಿಂದ ಸ್ವೀಕೃತವಾದ ಪ್ರಸ್ತಾವನೆಯಲ್ಲಿ 2022-23, 2024-25 ಹಾಗೂ 2025-26ನೇ ಸಾಲಿನ ಸಮಗ್ರ ಶಿಕ್ಷಣ ಕರ್ನಾಟಕದ ವಾರ್ಷಿಕ ಕ್ರಿಯಾ ಯೋಜನೆಗೆ PAB ಸಭೆಯ ಅನುಮೋದನೆಯಂತೆ ಒಟ್ಟು 3862 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳು, ಪ್ರೌಢ ಶಾಲೆಗಳು ಮತ್ತು KGBV ಶಾಲೆಗಳಲ್ಲಿ ICT & Digital Initiatives ಚಟುವಟಿಕೆಯಡಿಯಲ್ಲಿ ಒಟ್ಟು ರೂ. 9154.80 ಲಕ್ಷ ಮೊತ್ತದಲ್ಲಿ ಸ್ಮಾರ್ಟ್ ಕ್ಲಾಸ್ ರೂಮ್ ಯೋಜನೆ ಅನುಷ್ಠಾನಗೊಳಿಸಲು ಸರ್ಕಾರದ ಅನುಮೋದನೆ ಕೋರಲಾಗಿರುತ್ತದೆ.

ಮುಂದುವರೆದು ದಿನಾಂಕ 16.09.2025ರಂದು ಹಾಗೂ 06.01.2026ರಂದು ನಡೆದ TAP ಸಭೆಯಲ್ಲಿ ಸ್ಮಾರ್ಟ್ ಕ್ಲಾಸ್‌ಗೆ ಅಗತ್ಯವಿರುವ ಉಪಕರಣಗಳಿಗೆ ಸಂಬಂಧಿಸಿದಂತೆ ರಾಜ್ಯ ಯೋಜನಾ ನಿರ್ದೇಶಕರು ಸಮಗ್ರ ಶಿಕ್ಷಣ ಕರ್ನಾಟಕ ಇವರ ಪ್ರಸ್ತಾವನೆಯಲ್ಲಿ ಸಲ್ಲಿಸಿರುವ ತಾಂತ್ರಿಕ ನಿರ್ದಿಷ್ಟತೆಯಂತೆ ಅನುಮೋದನೆ ನೀಡಲಾಗಿದೆ ಎಂದು ತಿಳಿಸಲಾಗಿದೆ.

ಪ್ರಸ್ತಾವನೆಯಲ್ಲಿ ವಿವರಿಸಿದ ಅಂಶಗಳನ್ನು ಕೆಳಗಿನಂತೆ ಕೋಷ್ಠಿಕರಿಸಲಾಗಿದೆ.

ಪ್ರಸ್ತಾವನೆಯಲ್ಲಿ ವಿವರಿಸಿದ ಘಟಕ ವೆಚ್ಚ ಹಾಗೂ ಯೋಜನೆಯ ಒಟ್ಟು ವೆಚ್ಚದ ಮಾಹಿತಿಯನ್ನು ಕೆಳಗಿನಂತೆ ಕೋಷ್ಠಿಕರಿಸಲಾಗಿದೆ.

ಪ್ರಾಥಮಿಕ ಶಾಲೆಗಳು (ಎಂಟನೇ ತರಗತಿವರೆಗಿನ) ಪ್ರತಿ ಶಾಲೆಗೆ ರೂ.2.40 ಲಕ್ಷ ಘಟಕ ವೆಚ್ಚ ಪ್ರೌಢ/ ಉನ್ನತ ಪ್ರೌಢ – ಪ್ರತಿ ಶಾಲೆಗೆ ರೂ.2.40 ಲಕ್ಷ ಘಟಕ ವೆಚ್ಚ

ಕೆ.ಜಿ.ಬಿ.ವಿ. – ಪ್ರತಿ ಶಾಲೆಗೆ ರೂ 1.20 ಲಕ್ಷ ಘಟಕ ವೆಚ್ಚ

2022-23ನೇ ಸಾಲಿನಲ್ಲಿ 1631 ಶಾಲೆಗಳಿಗೆ ಅನುಮೋದನೆಯಾದ ಮೊತ್ತ ರೂ. 3914,40 ಲಕ್ಷಗಳನ್ನು ಅನುದಾನ ಕೊರತೆಯ ಕಾರಣ 2023-24 ನೇ ಸಾಲಿನ ಮೊತ್ತವನ್ನು Committed Expenditure ನಡಿ ಕಾಯ್ದಿರಿಸಲಾಯಿತು. ಆದ್ದರಿಂದ ಇದುವರೆಗೆ ಯಾವುದೇ ಖರೀದಿ ಪ್ರಕ್ರಿಯೆಯಾಗಿರುವುದಿಲ್ಲ ಎಂದು ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ.

2024-25ನೇ ಸಾಲಿಗೆ ಸಂಬಂಧಿಸಿದಂತೆ ಕೆ.ಜಿ.ಬಿ.ಎ ಶಾಲೆಗಳಿಗೆ ಪೂರಕ ಬಜೆಟ್ (Supplementary Budget) ನಲ್ಲಿ ದಿನಾಂಕ: 12.08.2025 ರಂದು PAB ಯಿಂದ ಅನುಮೋದನೆ ಪಡೆಯಲಾಯಿತು. ಆದ್ದರಿಂದ 2024-25 ಸಾಲಿನ ಅನುಮೋದನೆಯಾಗಿರುವ ಕಾರ್ಯಕ್ರಮವನ್ನು 2025-26ನೇ ಸಾಲಿನಲ್ಲಿ ಅನುಷ್ಠಾನ ಗೊಳಿಸಬೇಕಾಗಿರುತ್ತದೆ ಎಂದು ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ.

ಈ ಹಿನ್ನೆಲೆಯಲ್ಲಿ 2022-23, 2024-25 ಹಾಗೂ 2025-26 ಅವಧಿಯಲ್ಲಿ ಅನುಮೋದನೆಗೊಂಡಿರುವ ಒಟ್ಟು 3862 ಶಾಲೆಗಳಲ್ಲಿ 2025-26ನೇ ವರ್ಷದಲ್ಲಿ ಒಟ್ಟು ರೂ.9154.80 ಲಕ್ಷಗಳಲ್ಲಿ ಸ್ಮಾರ್ಟ್ ತರಗತಿಗಳನ್ನು ಸ್ಥಾಪಿಸಲು ಸರ್ಕಾರದ ಅನುಮೋದನೆ ಕೋರಲಾಗಿದೆ.

ಮುಂದುವರೆದು Manual On Financial Management And Procurement For Samagra Shiksha ರಲ್ಲಿನ ಮಾರ್ಗಸೂಚಿಗಳನ್ವಯ ಕಂಪ್ಯೂಟರ್‌ಗಳು, ಐಸಿಟಿ ಉಪಕರಣಗಳು ಸೇರಿದಂತೆ ಇನ್ನಿತರೆ ಸಾಮೂಹಿಕ ಶೈಕ್ಷಣಿಕ ವಸ್ತುಗಳ ಖರೀದಿಯನ್ನು ರಾಜ್ಯ ಯೋಜನಾ ನಿರ್ದೇಶಕರ ಕಛೇರಿಯಿಂದ ರಾಜ್ಯ ಮಟ್ಟದಲ್ಲಿ ನಿರ್ವಹಿಸಬಹುದಾಗಿರುತ್ತದೆ ಎಂದು ತಿಳಿಸಲಾಗಿದೆ.

ಆದ್ದರಿಂದ ಸದರಿ ಯೋಜನೆಯನ್ನು ರಾಜ್ಯ ಹಂತದಲ್ಲಿ ಟೆಂಡರ್ ಆಹ್ವಾನಿಸುವ ಮೂಲಕ ಅನುಷ್ಠಾನಗೊಳಿಸಲು ಅನುಮತಿ ನೀಡುವಂತೆ ಕೋರಲಾಗಿರುತ್ತದೆ.

ಮೇಲೆ ಓದಲಾದ ಕ್ರಮಾಂಕ (6)ರಲ್ಲಿ ರಾಜ್ಯ ಯೋಜನಾ ನಿರ್ದೇಶಕರು ಸಮಗ್ರ ಶಿಕ್ಷಣ ಕರ್ನಾಟಕ, ಬೆಂಗಳೂರು ಇವರು ಫಲಾನುಭವಿ ಶಾಲೆಗಳ ಪಟ್ಟಿಯನ್ನು ಸಲ್ಲಿಸಿರುತ್ತಾರೆ ಹಾಗೂ ಸದರಿ ಶಾಲೆಗಳು ಈ ಹಿಂದಿನ ವರ್ಷಗಳಲ್ಲಿ ಸದರಿ ಚಟುವಟಿಕೆಯಡಿ ಪುನರಾವರ್ತನೆ ಆಗಿರುವುದಿಲ್ಲ ಎಂದು ದೃಢೀಕರಿಸಿರುತ್ತಾರೆ.

ಪ್ರಸ್ತಾವನೆಯಲ್ಲಿನ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಈ ಕೆಳಕಂಡಂತೆ ಆದೇಶಿಸಿದೆ.

ಸರ್ಕಾರದ ಆದೇಶ ಸಂಖ್ಯೆ: ಇಪಿ 345 ಯೋಸಕ 2025, ಬೆಂಗಳೂರು ದಿನಾಂಕ:02.02.2026

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, 2022-23, 2024-25 ಹಾಗೂ 2025-26ನೇ ಸಾಲಿನ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯಡಿ ಅನುಮೋದನೆಯಂತೆ ಅನುಬಂಧ-1, 2. 3. 4 ಹಾಗೂ 5ರಲ್ಲಿ ಪಟ್ಟಿ ಮಾಡಲಾದ ಒಟ್ಟು 3862 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳು, ಪ್ರೌಢ ಶಾಲೆಗಳು ಮತ್ತು ಕೆ.ಜಿ.ಬಿ.ವಿ ಶಾಲೆಗಳಲ್ಲಿ ICT & Digital Initiatives ಚಟುವಟಿಕೆಯಡಿಯಲ್ಲಿ ಒದಗಿಸಲಾದ ಒಟ್ಟು ರೂ. 9154.80 ಲಕ್ಷ ಅಂದಾಜು ವೆಚ್ಚದಲ್ಲಿ ಸ್ಮಾರ್ಟ್ ಕ್ಲಾಸ್‌ರೂಮ್ ಯೋಜನೆಯನ್ನು

ಈ ಕೆಳಗಿನ ಕೋಷ್ಟಕದಲ್ಲಿ ವಿವರಿಸಿರುವಂತೆ ಅನುಷ್ಠಾನಗೊಳಿಸಲು ಹಾಗೂ ಸದರಿ ಯೋಜನೆಯಡಿ ಅಗತ್ಯವಿರುವ ಉಪಕರಣಗಳನ್ನು ಕೆ.ಟಿ.ಪಿ.ಪಿ ಕಾಯ್ದೆ ಮತ್ತು ಅದರಡಿ ರೂಪಿಸಲಾದ ನಿಯಮಗಳನುಸಾರ ಪಾರದರ್ಶಕವಾಗಿ

ರಾಜ್ಯ ಮಟ್ಟದಲ್ಲಿ ಕೇಂದ್ರೀಕೃತ ಟೆಂಡರ್ ಮೂಲಕ ಖರೀದಿಸಿ ಫಲಾನುಭವಿ ಶಾಲೆಗಳಿಗೆ ನಿಯಮಗಳಂತೆ ಸರಬರಾಜು ಮಾಡಲು ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ, ಬೆಂಗಳೂರು, ಇವರಿಗೆ ಕೆಳಗಿನ ಷರತ್ತುಗಳು ಹಾಗೂ ನಿಬಂಧನೆಗಳ ಪಾಲನೆಗೆ ಒಳಪಟ್ಟು ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶಿಸಲಾಗಿದೆ.

ಈ ಕಾರ್ಯಕ್ರಮಕ್ಕೆ ಅಗತ್ಯವಿರುವ ವೆಚ್ಚವನ್ನು ಕೇಂದ್ರ ಪುರಸ್ಕೃತ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಡಿ ICT & Digital Initiatives ರಡಿ ಒದಗಿಸಲಾದ ಅನುದಾನದಿಂದ ಭರಿಸತಕ್ಕದ್ದು.

ಕಾರ್ಯಕ್ರಮದ ಅನುಷ್ಠಾನಕ್ಕೆ ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ ಬೆಂಗಳೂರು ಇವರು ಪಾಲಿಸಬೇಕಾದ ಷರತ್ತುಗಳು ಹಾಗೂ ನಿಬಂಧನೆಗಳು:

1. ಸದರಿ ಕಾರ್ಯಕ್ರಮವನ್ನು ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ ಬೆಂಗಳೂರು ಇವರು ಅನುಷ್ಠಾನಾಧಿಕಾರಿಯಾಗಿ ನಿರ್ವಹಿಸತಕ್ಕದ್ದು.

2. ಫಲಾನುಭವಿ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ಒದಗಿಸಲು ಅವಶ್ಯವಿರುವ ಉಪಕರಣ/ಪರಿಕರಗಳನ್ನು ದಿನಾಂಕ:16.09.2025 ಹಾಗೂ 06.01.2026ರ ತಾಂತ್ರಿಕ ಸಲಹಾ ಸಮಿತಿ (TAP) ಸಭೆಯಲ್ಲಿ ಅನುಮೋದನೆಗೊಂಡಿರುವ ತಾಂತ್ರಿಕ ನಿರ್ದಿಷ್ಟತೆಗಳಂತೆ ಅಥವಾ ಇದೇ ಉಪಕರಣ/ಪರಿಕರಗಳಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ(ಇ-ಆಡಳಿತ)ಯಿಂದ ಹೊರಡಿಸುವ

ಮಾದರಿ ತಾಂತ್ರಿಕ ವಿಶಿಷ್ಟ್ಯತೆಗಳ (Model Technical Specifications) ಆದೇಶದಲ್ಲಿ ನೀಡಲಾಗಿರುವ ಉಪಕರಣ/ಪರಿಕರಗಳಲ್ಲಿ ಯಾವುದು ಉನ್ನತವಿದೆಯೋ ಅದೇ ಉನ್ನತ ತಾಂತ್ರಿಕ ನಿರ್ದಿಷ್ಟತೆಗಳ ಉಪಕರಣ/ಪರಿಕರಗಳನ್ನು ಖರೀದಿಸತಕ್ಕದ್ದು.

3. ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ, ಬೆಂಗಳೂರು ಇವರು ಸದರಿ ಯೋಜನೆಗೆ ಒದಗಿಸಲಾದ ಅನುದಾನದ ಮಿತಿಯೊಳಗೆ ಹಾಗೂ ಯಾವುದೇ ಹೆಚ್ಚುವರಿ ಅನುದಾನ ಕೋರದಂತೆ 2025-26ನೇ ಆರ್ಥಿಕ ಸಾಲಿನ ಅಂತ್ಯದೊಳಗೆ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ-1999 ಮತ್ತು ಅದರಡಿಯಲ್ಲಿ ಹೊರಡಿಸಲಾದ ನಿಯಮಗಳನ್ನು ಚಾಚೂತಪ್ಪದೇ ಪಾಲಿಸುವ ಮೂಲಕ ಪಾರದರ್ಶಕ ಟೆಂಡರ್ ಕರೆದು ಕಡ್ಡಾಯವಾಗಿ ಹಾಗೂ ಕಟ್ಟುನಿಟ್ಟಾಗಿ ಪಾಲಿಸಿ ಅನುಷ್ಠಾನಗೊಳಿಸತಕ್ಕದ್ದು, ಯಾವುದೇ ಕಾರಣಕ್ಕೂ ಒದಗಿಸಲಾದ ಅನುದಾನ ವ್ಯಪಗತವಾಗದಂತೆ ಕ್ರಮವಹಿಸತಕ್ಕದ್ದು,

4. ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ, ಬೆಂಗಳೂರು ಇವರು ಸ್ಮಾರ್ಟ್ ಕ್ಲಾಸ್‌ರೂಮ್ ಯೋಜನೆಯನ್ನು ಅನುಷ್ಠಾನಗೊಳಿಸಲು ಹಾಗೂ ಸದರಿ ಯೋಜನೆಯಡಿ ಅಗತ್ಯವಿರುವ ಉಪಕರಣಗಳನ್ನು ರಾಜ್ಯ ಮಟ್ಟದಲ್ಲಿ ಕೇಂದ್ರೀಕೃತ ಟೆಂಡರ್ ಮೂಲಕ ಖರೀದಿಸುವ ಪ್ರಕ್ರಿಯೆಯಲ್ಲಿ ಕೇಂದ್ರ ಸರ್ಕಾರದ ಶಿಕ್ಷಣ ಮಂತ್ರಾಲಯದಿಂದ ಹೊರಡಿಸಲಾದ Manual on Financial Management & Procurement For Samagra Shiksha 2 ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು.

5. ಕಾರ್ಯಕ್ರಮದ ಅನುಷ್ಠಾನಕ್ಕೆ ಅನುಮೋದನೆಗೊಂಡಿರುವ ಶಾಲೆಗಳ ಪಟ್ಟಿಯಲ್ಲಿ ಯಾವುದೇ ಕಾರಣಕ್ಕಾಗಿ ಬದಲಾವಣೆ ಅಗತ್ಯವಿದ್ದಲ್ಲಿ ಸೂಕ್ತ ಕಾರಣಗಳೊಂದಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸತಕ್ಕದ್ದು.

6. ಬಿಡುಗಡೆ ಮಾಡಲಾದ ಅನುದಾನದ ಬಳಕೆಯ ಬಗ್ಗೆ ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ, ಬೆಂಗಳೂರು ಇವರು ನಿಯಮಾನುಸಾರ ಸೂಕ್ತ ಲೆಕ್ಕ ಪತ್ರಗಳನ್ನು ಇಡತಕ್ಕದ್ದು ಹಾಗೂ ಸಂಬಂಧಿತವಾಗಿ ಅನುದಾನ ಬಳಕೆ ಪ್ರಮಾಣ ಪತ್ರವನ್ನು ಸರ್ಕಾರಕ್ಕೆ ಸಲ್ಲಿಸತಕ್ಕದ್ದು.

7. ಒದಗಿಸಲಾದ ಅನುದಾನವನ್ನು ಯಾವ ಉದ್ದೇಶಕ್ಕಾಗಿ ಒದಗಿಸಲಾಗಿದೆಯೋ ಅದೇ ಉದ್ದೇಶಕ್ಕೆ ಬಳಸತಕ್ಕದ್ದು, ಇತರೇ ಯಾವುದೇ ಉದ್ದೇಶಕ್ಕಾಗಿ ಬಳಸತಕ್ಕದ್ದಲ್ಲ.

8. ಸದರಿ ಕಾರ್ಯಕ್ರಮದಡಿ ಆಯ್ಕೆ ಮಾಡಲಾದ ಶಾಲೆಗಳಿಗಳಲಿ ಸ್ಮಾರ್ಟ್ ಕ್ಲಾಸ್‌ರೂಮ್ ಅನುಷ್ಠಾನಗೊಳಿಸುವ ಕಾರ್ಯಕ್ರಮವು ಇತರೆ ಯಾವುದೇ ಯೋಜನೆ ಅಂದರೆ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ, ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ ಇವರೊಂದಿಗೆ ಮಾಡಿಕೊಂಡಿರುವ

Rotary International CSR MoU, ಇತರೆ ಯಾವುದೇ CSR ಅನುದಾನ. ZP/TP ಅನುದಾನ. CEPMIZ, KKRDB ಅಥವಾ ಇತರೆ ಯೋಜನೆಯಡಿ ಪುನರಾವರ್ತನೆಯಾಗದಂತೆ ಕ್ರಮವಹಿಸತಕ್ಕದ್ದು, ಈ ಕಾರ್ಯಕ್ರಮದ ಅನುಷ್ಠಾನದಲ್ಲಿ ಯಾವುದೇ ಪುನರಾವರ್ತನೆ ಕಂಡುಬಂದಲ್ಲಿ ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ, ಬೆಂಗಳೂರು ಇವರನ್ನು ನೇರವಾಗಿ ಹೊಣೆಗಾರರನ್ನಾಗಿ ಮಾಡಲಾಗುವುದು.

9. ಈ ಸರ್ಕಾರದ ಆದೇಶ, DISE ಕೋಡ್ ಸಹಿತ ಆಯ್ಕೆಯಾಗಿರುವ ಫಲಾನುಭವಿ ಶಾಲೆಗಳ ಜಿಲ್ಲಾವಾರು, ತಾಲ್ಲೂಕುವಾರು ವಿವರ, ಉಪಕರಣಗಳ ಅನುಮೋದಿತ ತಾಂತ್ರಿಕ ನಿರ್ದಿಷ್ಟತೆಯ ವಿವರ ಮತ್ತು ಈ ಸಂಬಂಧ ಹೊರಡಿಸಲಾಗುವ ಎಲ್ಲಾ ಆದೇಶಗಳು ಮತ್ತು ಸುತ್ತೋಲೆಗಳನ್ನು ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು,ಜಿಲ್ಲಾ ಪಂಚಾಯತ್ ಮತ್ತು ನಿರ್ದೇಶಕರು, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಇವರು ಇಲಾಖಾ ಜಾಲತಾಣದಲ್ಲಿ ಕಡ್ಡಾಯವಾಗಿ ಅಳವಡಿಸತಕ್ಕದ್ದು,

10.DISE ಕೋಡ್ ಸಹಿತ ಆಯ್ಕೆಯಾಗಿರುವ ಫಲಾನುಭವಿ ಶಾಲೆಗಳ ವಿವರ, ಉಪಕರಣಗಳ ಅನುಮೋದಿತ ತಾಂತ್ರಿಕ ನಿರ್ದಿಷ್ಟತೆಯ ವಿವರಗಳು ಎಲ್ಲಾ ಜಿಲ್ಲಾ ಉಪನಿರ್ದೇಶಕರು(ಆಡಳಿತ), ಉಪನಿರ್ದೇಶಕರು(ಅಭಿವೃದ್ಧಿ), ಕ್ಷೇತ್ರಶಿಕ್ಷಣಾಧಿಕಾರಿಗಳು ಮತ್ತು ಸಂಬಂಧಿಸಿದ ಶಾಲಾ ಮುಖ್ಯಸ್ಥರು ಹೊಂದಿರತಕ್ಕದ್ದು.

11. ಬಿಡುಗಡೆಯಾದ ಅನುದಾನದ ಬಳಕೆ ಹಾಗೂ ಶಾಲಾ ಡೈಸ್ ಕೋಡ್ ಶಾಲಾವಾರು ಈ ಯೋಜನೆಯ ಭೌತಿಕ ಮತ್ತು ಆರ್ಥಿಕ ಪ್ರಗತಿಯನ್ನು ಕಡ್ಡಾಯವಾಗಿ ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ಮತ್ತು ನಿರ್ದೇಶಕರು, ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ ಇವರು ಇಲಾಖಾ ಜಾಲತಾಣದಲ್ಲಿ ಕಡ್ಡಾಯವಾಗಿ ಅಳವಡಿಸತಕ್ಕದ್ದು.

12.ಈ ಕಾರ್ಯಕ್ರಮದ ಅನುಷ್ಠಾನಕ್ಕಾಗಿ ಆರ್ಥಿಕ ಮತ್ತು ಭೌತಿಕ ಗುರಿಗಳನ್ನು ನಿಗದಿಪಡಿಸತಕ್ಕದ್ದು ಹಾಗೂ ಅದರನ್ವಯ ಭರಿಸಲಾಗುವ ವೆಚ್ಚದ ವಿವರಗಳನ್ನು ಪ್ರತಿ ಮಾಹೆ ಹೊಸ ಡಿಜಿಟಲ್ ಸಪೋರ್ಟ್ ಸಿಸ್ಟಂ (ಅವಲೋಕನ) ತಂತ್ರಾಂಶದಲ್ಲಿ ಇಂದೀಕರಿಸತಕ್ಕದ್ದು. ಸದರಿ ಕಾರ್ಯಕ್ರಮದ ಪ್ರಗತಿಯ ವರದಿಯನ್ನು ತ್ರೈಮಾಸಿಕವಾರು ಸರ್ಕಾರಕ್ಕೆ ಸಲ್ಲಿಸತಕ್ಕದ್ದು.

13.ಈ ಆದೇಶವನ್ನು ಹಾಗೂ ಸಮಗ್ರ ಶಿಕ್ಷಣ ಕರ್ನಾಟಕ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕಾಲಕಾಲಕ್ಕೆ ಹೊರಡಿಸಲಾಗುವ ಎಲ್ಲಾ ಆದೇಶಗಳನ್ನು ಹಾಗೂ ಪ್ರತಿ ಮಾಹೆ DISE ಕೋಡವಾರು ಶಾಲಾವಾರು, ಐಟಂವಾರು ವೆಚ್ಚ ಮಾಡಲಾದ ಅನುದಾನದ ವಿವರಗಳಿಗೆ ಸಂಬಂಧಿಸಿದಂತೆ ಆರ್ಥಿಕ ಮತ್ತು ಭೌತಿಕ ಪ್ರಗತಿಯ ವರದಿಗಳನ್ನು ಸಮಗ್ರ ಶಿಕ್ಷಣ ಕರ್ನಾಟಕ ಕಾರ್ಯಕ್ರಮದ ಪ್ರಾಜೆಕ್ ಮಾನಿಟರಿಂಗ್ ಸಿಸ್ಟಮ್ (ಪ್ರಬಂಧ ಹಾಗೂ ವಿದ್ಯಾವಾಹಿನಿ) ನಲ್ಲಿ ರಾಜ್ಯ ಯೋಜನಾ ನಿರ್ದೇಶಕರು ಇಂದೀಕರಿಸತಕ್ಕದ್ದು

ಹಾಗೂ ಸಮಗ್ರ ಶಿಕ್ಷಣ ಕರ್ನಾಟಕ ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸತಕ್ಕದ್ದು ಹಾಗೂ ವಾರ್ಷಿಕ ಪ್ರಗತಿ ವರದಿಗಳನ್ನು ಆರ್ಥಿಕ ವರ್ಷ ಅಂತ್ಯಗೊಂಡ ಒಂದು ತಿಂಗಳೊಳಗಾಗಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸತಕ್ಕದ್ದು.

14.ವಾರ್ಷಿಕ ಲೆಕ್ಕ ಪತ್ರಗಳ ವರದಿ ಹಾಗೂ ಚಾರ್ಟಡ್್ರ ಅಕೌಂಟೆಂಟ್‌ಗಳಿಂದ ದೃಢೀಕರಿಸಲಾದ ಬಳಕೆ ಪ್ರಮಾಣ ಪತ್ರವನ್ನು ಆರ್ಥಿಕ ವರ್ಷ ಅಂತ್ಯಗೊಂಡ ಒಂಬತ್ತು ತಿಂಗಳೊಳಗಾಗಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸತಕ್ಕದ್ದು.

15.ಸಮಗ್ರ ಶಿಕ್ಷಣ ಕರ್ನಾಟಕ ಕಾರ್ಯಕ್ರಮದ ಅನುಷ್ಠಾನವನ್ನು ಯಾವುದೇ ಇತರೆ ಸಂಸ್ಥೆಗೆ ವಹಿಸತಕ್ಕದ್ದಲ್ಲ.

16. ಎಲ್ಲಾ ಶಾಲೆಗಳಿಗೆ ನಿಗದಿಪಡಿಸಿದ ತಾಂತ್ರಿಕ ನಿರ್ದಿಷ್ಟತೆಯ ಉತ್ತಮ ಗುಣಮಟ್ಟದ ಉಪಕರಣ/ಪರಿಕರಗಳು ಸರಬರಾಜಾಗಿರುವ ಸಂಬಂಧ ಬಾಹ್ಯ ಸಂಸ್ಥೆಯ ಪರಿಶೀಲನಾ ತೃಪ್ತಿಕರ ವರದಿ (3rd Party Inspection report) ಸಲ್ಲಿಕೆಯಾದ ನಂತರವೇ ಸರಬರಾಜು ಮಾಡಿದ ಸಂಸ್ಥೆಗೆ ಹಣ ಪಾವತಿಗೆ ಕ್ರಮವಹಿಸತಕ್ಕದ್ದು.

ಈ ಆದೇಶವನ್ನು ಸಚಿವ ಸಂಪುಟದ ಪ್ರಕರಣ ಸಂಖ್ಯೆ ಸಿ:62/2026, ದಿನಾಂಕ:22.01.2026ರಲ್ಲಿ ನೀಡಿರುವ ಅನುಮೋದನೆ ಮೇರೆಗೆ ಹಾಗೂ ಸರ್ಕಾರದ ಆದೇಶ ಸಂಖ್ಯೆ ಆಇ 04 ಟಿಎಫ್‌ಪಿ 2025, ದಿನಾಂಕ:01.01.2026ರಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಪ್ರತ್ಯಾಯೋಜಿಸಿದ ಅಧಿಕಾರದನ್ವಯ ಹೊರಡಿಸಲಾಗಿದೆ.

Samagra Shikshana Karnataka

 

CLICK HERE TO DOWNLOAD ORDER

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

You cannot copy content of this page

error: Content is protected !!
Scroll to Top