Sri S. Nijalingappa nidhi Scholarship 2025–26:ಪ್ರಾಥಮಿಕ ಶಾಲಾ ಶಿಕ್ಷಕರ ಮಕ್ಕಳಿಗೆ ಶ್ರೀ ಎಸ್. ನಿಜಲಿಂಗಪ್ಪ ನಿಧಿ ಶಿಷ್ಯವೇತನ 2025-26 – ಸಂಪೂರ್ಣ ಮಾಹಿತಿ
Sri S. Nijalingappa nidhi Scholarship 2025–26:ಶ್ರೀ ಎಸ್. ನಿಜಲಿಂಗಪ್ಪ ನಿಧಿ ಶಿಷ್ಯವೇತನ 2025–26 ಕುರಿತು ಅಧಿಕೃತ ಮಾಹಿತಿ. ಅರ್ಜಿ ಸಲ್ಲಿಸುವ ವಿಧಾನ, ಅರ್ಹತಾ ಮಾನದಂಡಗಳು ಮತ್ತು ಮುಖ್ಯ ದಿನಾಂಕಗಳು ಇಲ್ಲಿ ಲಭ್ಯ.
ಸನ್ ೨೦೨೪-೨೫ ನೇ ಸಾಲಿನಲ್ಲಿ ಸ್ನಾತಕ ಪದವಿಯ ವಿವಿಧ ಕೋರ್ಸುಗಳಿಗೆ ಅಧ್ಯಯನ ಮಾಡುತ್ತಿರುವ (ಹಳೆಯ) ಮುಂಬೈ ಕರ್ನಾಟಕದ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಾಥಮಿಕ ಶಾಲಾ ಶಿಕ್ಷಕರ ಮಕ್ಕಳಿಗೆ (ಕಲಾ, ವಾಣಿಜ್ಯ, ಮತ್ತು ವಿಜ್ಞಾನ ಪದವಿಯನ್ನು ಕರ್ನಾಟಕ ವಿಶ್ವವಿದ್ಯಾಲಯದ ಅಧೀನ/ಸಂಯೋಜಿತ ಮಹಾವಿದ್ಯಾಲಯದಲ್ಲಿ ಓದುತ್ತಿರುವ ಹಾಗೂ ತಾಂತ್ರಿಕ, ವೈದ್ಯಕೀಯ, ಆಯುರ್ವೇದ ಪದವಿಯನ್ನು
ಕರ್ನಾಟಕ ರಾಜ್ಯದ ಯಾವುದೇ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ) ಪ್ರತಿಭೆಯ ಆಧಾರದ ಮೇರೆಗೆ ಈ ಕೆಳಗೆ ಹೇಳಿದಂತೆ ಶ್ರೀ ಎಸ್. ನಿಜಲಿಂಗಪ್ಪ ನಿಧಿ ಶಿಷ್ಯವೇತನವನ್ನು ಪ್ರದಾನ ಮಾಡುವ ಸೌಲಭ್ಯದ ಕುರಿತು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಮುಂಬೈ ಕರ್ನಾಟಕ ಜಿಲ್ಲೆಗಳ ವ್ಯಾಪ್ತಿಯ ಧಾರವಾಡ, ಹಾವೇರಿ, ಗದಗ, ಕಾರವಾರ, ಬೆಳಗಾವಿ, ಬಾಗಲಕೋಟ ಹಾಗೂ ಬಿಜಾಪೂರ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಾಥಮಿಕ ಶಾಲಾ ಶಿಕ್ಷಕರ ಮಕ್ಕಳು ಈ ಶಿಷ್ಯವೇತನಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. (ಕರಾರು ೧ (ಅ) ಮತ್ತು (ಬ) ದಂತೆ)

ಕರಾರುಗಳು ಈ ಕೆಳಗಿನಂತಿವೆ:
ಮುಂಬೈ ಕರ್ನಾಟಕದ ಪ್ರಾಥಮಿಕ ಶಾಲಾ ಶಿಕ್ಷಕರ ಮಕ್ಕಳು ಮಾರ್ಚ-2025 ರಲ್ಲಿ ಪಿಯುಸಿ (ಕಲಾ/ವಾಣಿಜ್ಯ/ವಿಜ್ಞಾನ) ದ್ವಿತೀಯ ವರ್ಗದ (PUC 2nd Year) ಪರೀಕ್ಷೆಯನ್ನು ಪ್ರಥಮ ಪ್ರಯತ್ನದಲ್ಲಿ (1″ attempt ) ಪಾಸಾಗಿ 2025-26ನೇ ಸಾಲಿನಲ್ಲಿ ಈ ಕೆಳಕಾಣಿಸಿ ತಿಳಿಸಿದ ಪದವಿಗಳಲ್ಲಿ ಓದುತ್ತಿರಬೇಕು.
ಅ) ಕರ್ನಾಟಕ ವಿಶ್ವವಿದ್ಯಾಲಯದ ಸಂಯೋಜಿತ ಯಾವುದೇ ಮಹಾವಿದ್ಯಾಲಯಗಳಲ್ಲಿ (ಕ.ವಿ.ವಿ. ಸಂಯೋಜನಾ ವ್ಯಾಪ್ತಿಗೆ ಒಳಪಡುವ ಜಿಲ್ಲೆಗಳು: ಧಾರವಾಡ, ಗದಗ, ಹಾಗೂ ಕಾರವಾರ) ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಷಯಗಳಲ್ಲಿ (ನಿಖಾಯ) ಪದವಿ ವರ್ಗಕ್ಕೆ ಪ್ರವೇಶ ಪಡೆದು. ಓದುತ್ತಿರಬೇಕು.
ಬ) ಕರ್ನಾಟಕ ರಾಜ್ಯದ ವೈದ್ಯಕೀಯ/ತಾಂತ್ರಿಕ ವಿಶ್ವವಿದ್ಯಾಲಯಗಳ ಅಧೀನದಲ್ಲಿ ಬರುವ ವಿವಿಧ ವೈದ್ಯಕೀಯ/ತಾಂತ್ರಿಕ ಮಹಾವಿದ್ಯಾಲಯಗಳಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ವೈದ್ಯಕೀಯ ಪದವಿ/ತಾಂತ್ರಿಕ ಪದವಿಗಳಲ್ಲಿ ಪ್ರವೇಶ ಪಡೆದು ಓದುತ್ತಿರಬೇಕು. (ವೈದ್ಯಕೀಯ ಪದವಿಗಳಲ್ಲಿ ಎಂ.ಬಿ.ಬಿ.ಎಸ್. ಮತ್ತು ಬಿ.ಎ.ಎಂ.ಎಸ್. ಪದವಿಗಳೆಂದು ಪರಿಗಣಿಸತಕ್ಕದ್ದು).
2.ಈ ಶಿಷ್ಯವೇತನಗಳನ್ನು ಸ್ನಾತಕ ಪದವಿಯ ಪ್ರಥಮ ವರ್ಷದಿಂದ (ಪಿ.ಯು.ಸಿ ದ್ವಿತೀಯ ವರ್ಷದ ಅಂಕಪಟ್ಟಿ ಪರಿಶೀಲಿಸಿ) ನೀಡಲಾಗುವದು ಮತ್ತು ವಿದ್ಯಾರ್ಥಿ/ ವಿದ್ಯಾರ್ಥಿನಿಯರ ತೃಪ್ತಿಕರವಾದ ಅಧ್ಯಯನವನ್ನು ಪರಿಗಣಿಸಿ ವರ್ಷದಿಂದ ವರ್ಷಕ್ಕೆ (ಗೊತ್ತುಪಡಿಸಿದ ಅವಧಿಗೆ) ವಿಸ್ತರಿಸಿ ಪಾವತಿಸುವ ಕ್ರಮ ಜರುಗಿಸಲಾಗುವದು.
3. ಅರ್ಜಿ:-
(ಅ) ಈ ಪ್ರಕಟಣೆಯೊಂದಿಗೆ ಲಗತ್ತಿಸಿದ ಅರ್ಜಿ ನಮೂನೆಯಲ್ಲಿಯೇ ಮಾಹಿತಿ ತುಂಬಿ, ಪ್ರಾಚಾರ್ಯರ ಮುಖಾಂತರ ಸಲ್ಲಿಸತಕ್ಕದ್ದು.
(ಬ) ಅರ್ಜಿಯನ್ನು ದಿನಾಂಕ: 20-02-2026 ರೊಳಗಾಗಿ ಶಿಷ್ಯವೇತನ ವಿಭಾಗ, ಕ.ವಿ.ವಿ. ಧಾರವಾಡಕ್ಕೆ ಸಲ್ಲಿಸತಕ್ಕದ್ದು.
(ಕ) ಅರ್ಜಿ ಜೊತೆಗೆ ಕೇಳಲಾದ ಎಲ್ಲ ದಾಖಲಾತಿಗಳನ್ನು ಅಗತ್ಯವಾಗಿ ಲಗತ್ತಿಸತಕ್ಕದ್ದು.(ಅಪೂರ್ಣ ಅರ್ಜಿಗಳನ್ನು ಪರಿಗಣಿಸಲಾಗುವದಿಲ್ಲ ಮತ್ತು ಈ ದಿಸೆಯಲ್ಲಿ ಪತ್ರ ವ್ಯವಹಾರಕ್ಕೆ ಅವಕಾಶವಿಲ್ಲ.)
(ಡ) ಅರ್ಹತೆಯ ಆಧಾರದ ಮೇಲೆ ಶಿಷ್ಯವೇತನ ಮಂಜೂರಾತಿ ಮಾಡಲಾಗುವುದು. ಅರ್ಜಿ ನಮೂನೆಯನ್ನು (Application Form)ವಿಶ್ವವಿದ್ಯಾಲಯದ ಅಂತರ್ಜಾಲ www.kud.ac.in ನಲ್ಲಿ ಪಡೆಯಬಹುದು. ಕಾರಣ, ಸಂಬಂಧಿಸಿದ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬೇಕೆಂದು ತಿಳಿಯಪಡಿಸಲಾಗಿದೆ.

CLICK HERE TO DOWNLOAD NOTIFICATION


