VB-G RAM G: ಉದ್ಯೋಗ ಖಾತರಿ 125 ದಿನಕ್ಕೆ ಹೆಚ್ಚಳ

VB-G RAM G: ಉದ್ಯೋಗ ಖಾತರಿ 125 ದಿನಕ್ಕೆ ಹೆಚ್ಚಳ

 

VB-G RAM G: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಹೆಸರನ್ನು ದಿ ವಿಕಸಿತ ಗ್ಯಾರಂಟಿ ಫಾರ್ ರೋಜಗಾರ್ ಆಂಡ್ ಅಜೀವಿಕಾ ಮಿಷನ್ (ಗ್ರಾಮೀಣ) ಎಂದು ಮರುನಾಮಕರಣ ಮಾಡಿದ್ದು, ಇನ್ನು ಮೂರೇ ದಿನ ಉಳಿದಿರುವ ಸಂಸತ್ ಚಳಿಗಾಲದ ಅಧಿವೇಶನದಲ್ಲಿ ಮಸೂದೆ ಮಂಡನೆ ಆಗಲಿದೆ.

ದಿ ವಿಕಸಿತ ಗ್ಯಾರಂಟಿ ಫಾರ್ ರೋಜಗಾರ್ ಆಂಡ್ ಅಜೀವಿಕಾ ಮಿಷನ್ (ಗ್ರಾಮೀಣ) ಸಂಕ್ಷಿಪ್ತವಾಗಿ ‘ವಿಬಿ ಜಿ ರಾಮ್ ಜಿ’ ಎಂದು ಕರೆಯಲಾಗುತ್ತದೆ. ಈ ಮಸೂದೆಯು 2047ರ ವಿಕಸಿತ ಭಾರತದ ದೃಷ್ಟಿಕೋನ ಪೂರೈಸುವ ಗುರಿ ಹೊಂದಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಈ ಮಸೂದೆಯಿಂದ ಯಾವೆಲ್ಲಾ ಬದಲಾವಣೆ ಆಗಲಿದೆ. ಅಸಲಿಗೆ ಯೋಜನೆ ಆರಂಭವಾಗಿದ್ದು ಯಾವಾಗ? ಇದರ ಉದ್ದೇಶವೇನು?

ಹೆಸರು ಮಾತ್ರ ಬದಲಲ್ಲ, ಉದ್ಯೋಗ ಖಾತರಿ ದಿನಗಳೂ ಹೆಚ್ಚಳ

ಉದ್ಯೋಗ ಖಾತರಿ 125 ದಿನಕ್ಕೆ ಹೆಚ್ಚಳ:

ನರೇಗಾ ಯೋಜನೆ ಆರಂಭವಾದಾಗ ಗ್ರಾಮೀಣ ಪ್ರದೇಶಗಳಲ್ಲಿ 100 ದಿನಗಳ ಉದ್ಯೋಗ ಖಾತರಿಯನ್ನು ಪಡಿಸಲಾಗಿತ್ತು. ಇದೀಗ ಹೊಸ ಮಸೂದೆಯಲ್ಲಿ 100 ದಿನಗಳಿಂದ 125 ದಿನಕ್ಕೆ ಉದ್ಯೋಗ ಖಾತರಿಯನ್ನು ಹೆಚ್ಚಿಸಲಾಗಿದೆ. ಕೆಲಸ ಪೂರ್ಣಗೊಂಡ ವಾರ ಅಥವಾ 15 ದಿನಗಳಲ್ಲಿ ಕೂಲಿ ಪಾವತಿ ಭರವಸೆ ನೀಡಲಾಗಿದೆ. ಗಡುವಿನೊಳಗೆ ಪಾವತಿಸದಿದ್ದರೆ ನಿರುದ್ಯೋಗ ಭತ್ಯೆಯನ್ನೂ ನೀಡಲಾಗುತ್ತದೆ ಮಾಡಲಾಗುತ್ತದೆ. ಇದರಿಂದ ಗ್ರಾಮೀಣ ಪ್ರದೇಶದ ಕಾರ್ಮಿಕರಿಗೆ ಭಾರೀ ಅನುಕೂಲ ಆಗಲಿದೆ ಎಂದು ಎಂದು ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ.

ಇನ್ನುಂದೆ ಯೋಜನೆಗೆ ರಾಜ್ಯವೂ ದುಡ್ಡು ಕೊಡ್ಬೇಕು.



ಹೆಸರು ಮಾತ್ರ ಬದಲಲ್ಲ, ಉದ್ಯೋಗ ಖಾತರಿ ದಿನಗಳೂ ಹೆಚ್ಚಳ:

ಹೊಸ ಮಸೂದೆ ಅಡಿಯಲ್ಲಿ ನರೇಗಾ ಯೋಜನೆಯ ಹೆಸರು ಬದಲಾವಣೆ ಜತೆಗೆ ಹಲವಾರು ಮಹತ್ವದ ಬದಲಾವಣೆಯನ್ನೂ ತರಲಾಗಿದೆ. ಅದರಲ್ಲಿ ಈ ಮೊದಲು ನರೇಗಾ ಯೋಜನೆಯಲ್ಲಿ ಕೌಶಲ್ಯರಹಿತ ಕಾರ್ಮಿಕರ ಕೂಲಿ ವೆಚ್ಚವನ್ನು ಸಂಪೂರ್ಣವಾಗಿ ಕೇಂದ್ರ ಸರ್ಕಾರವೇ ಭರಿಸುತ್ತಿತ್ತು. ಇದೀಗ ಹೊಸ ಮಸೂದೆ ಪ್ರಕಾರ ರಾಜ್ಯ ಸರ್ಕಾರಗಳು ವೇಜ್ ಬಿಲ್ ಹೊಣೆ ಹೊರಬೇಕಾಗುತ್ತದೆ. ಪ್ರಸ್ತಾವಿತ ಮಸೂದೆಯ ಪ್ರಕಾರ, ಉತ್ತರ ಭಾರತ ರಾಜ್ಯಗಳು, ಹಿಮಾಲಯ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು 90:10 ಅನುಪಾತದಲ್ಲಿ ವೇಜ್ ಬಿಲ್ ಹಣ ಹಂಚಿಕೊಳ್ಳಬೇಕು. ಇನ್ನುಳಿದ ರಾಜ್ಯಗಳು 60:40 ಅನುಪಾತದಲ್ಲಿ ಸಮಗ್ರ ವೆಚ್ಚ ಭರಿಸಬೇಕು ಎಂದು ಸೂಚಿಸಲಾಗಿದೆ. ವಾರ್ಷಿಕವಾಗಿ ಪ್ರಸ್ತಾಪಿತ ..! ಲಕ್ಷ ಕೋಟಿ ರೂ. ವೆಚ್ಚದಲ್ಲಿ ಕೇಂದ್ರ ಸರ್ಕಾರ 95 ಸಾವಿರ ಕೋಟಿ ರೂ. ಒದಗಿಸುತ್ತದೆ.

ಕೃಷಿ ಸೀಸನ್‌ನಲ್ಲಿ ಕಂ ದಿನ ಬ್ರೇಕ್

ಹೊಸ ಮಸೂದೆಯಲ್ಲಿ ಗ್ರಾಮೀಣ ಕೆಲಸವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಲಾಗಿದೆ.

ನೀರಿನ ಭದ್ರತೆ, ಗ್ರಾಮೀಣ ಮೂಲಸೌಕರ್ಯ, ಜೀವನೋಪಾಯ ಮೂಲಸೌಕರ್ಯ ಮತ್ತು ವಿಪತ್ತಿ ಎಂದು ಕರೆಯಲಾಗುತ್ತದೆ. ಇನ್ನು ಇದೇ ಮೊದಲ ಬಾರಿಗೆ ಉದ್ಯೋಗ ಖಾತರಿ ಯೋಜನೆಗೆ ಕಾಲೋಚಿತ ವಿರಾಮ ನೀಡಲು ಸರ್ಕಾರ ಪ್ರಸ್ತಾಪಿಸಿದೆ. ಕೃಷಿ ಕಾಲ ಇದ್ದಾಗ 60 ದಿನಗಳ ಕಾಲ ವಿರಾಮ ನೀಡಲು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ. ಆರ್ಥಿಕ ವರ್ಷದಲ್ಲಿ ಆಯಾ ರಾಜ್ಯಗಳು ಕೃಷಿ ಸೀಸನ್‌ನಲ್ಲಿ 60 ದಿನಗಳನ್ನು ಗುರುತಿಸಬೇಕು ಆ ಮೂಲಕ ಉದ್ಯೋಗ ಖಾತರಿ ಯೋಜನೆಗೆ ವಿರಾಮ ನೀಡಬೇಕು. ಇದರಿಂದ ಕೃಷಿ ಕೆಲಸಕ್ಕೂ ಕಾರ್ಮಿಕರು ಲಭ್ಯವಿರುವಂತೆ ಮಾಡಬೇಕು ಎಂದು ತಿಳಿಸಲಾಗಿದೆ.

ನರೇಗಾ ಯೋಜನೆ ಉದ್ದೇಶಗಳು:

ಈ ಯೋಜನೆ ಅಡಿಯಲ್ಲಿ ಪ್ರತಿಯೊಬ್ಬರಿಗೂ ಉದ್ಯೋಗ ಕಲ್ಪಿಸುವುದು.

ಇದು ನೈಸರ್ಗಿಕ ಸಂಪನ್ಮೂಲಗಳ ಪುನನಿರ್ಮಿಸಲು, ಗ್ರಾಮೀಣ ಜೀವನೋಪಾಯ ಮತ್ತು ಆಸ್ತಿಗಳ ಸೃಷ್ಟಿಸುವ ಗುರಿ ಹೊಂದಿದೆ.

ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಪ್ರತಿ ಕುಟಂಬದ ಒಬ್ಬ ಸದಸ್ಯನಿಗೆ 100 ದಿನಗಳ ಉದ್ಯೋಗ ಒದಗಿಸುವುದು.

ಏನಿದು ನರೇಗಾ ಯೋಜನೆ?

2005ರಲ್ಲಿ ಆರಂಭವಾದ ನರೇಗಾ ಯೋಜನೆಯನ್ನು 2009 ಅಕ್ಟೋಬರ್ 2ರಂದು ಅಂದಿನ ಯುಪಿಎ ಸರ್ಕಾರ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಎಂದು ಮರುನಾಮಕಣ ಮಾಡಿತು. ಈ ಯೋಜನೆಯ ಮೂಲಕ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಪ್ರತಿಯೊಂದು ಮನೆಯ ವ್ಯಕ್ತಿಯೊಬ್ಬನಿಗೆ 100 ದಿನಗಳ ಕಾಲ ಉದ್ಯೋಗ ಖಾತರಿ ನೀಡುವದಾಗಿತ್ತು.

ಏನೇನು ಬದಲಾವಣೆ?

VB-G RAM G

 

VB-G RAM G

 

CLICK HERE TO MORE INFORMATION

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

You cannot copy content of this page

error: Content is protected !!
Scroll to Top