PM KISAN NEW LIST: 22 ಸಾವಿರಕ್ಕೂ ಹೆಚ್ಚು ಫಲಾನುಭವಿಗಳ ಹೆಸರು ಸೇರ್ಪಡೆ| ಈ ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಿ
PM KISAN NEW LIST: ಶೀಘ್ರವೇ ಪಿಎಂ ಕಿಸಾನ್ ಹಣ ಬಿಡುಗಡೆ: ಸಚಿವ
ರಾಜ್ಯದ ಸಹಸ್ರಾರು ರೈತರಿಗೆ ಪಿಎಂ-ಕಿಸಾನ್ ಯೋಜನೆಯಡಿ ಬಾಕಿ ಉಳಿದಿದ್ದ ಹಣವನ್ನು ಬಿಡುಗಡೆ ಮಾಡುವಂತೆ ಕೃಷಿ ಸಚಿವ ಚಲುವರಾಯಸ್ವಾಮಿ ಮಾಡಿದ್ದ ಮನವಿಗೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ.
ಚಲುವರಾಯಸ್ವಾಮಿ ಅವರು 2025ರ ಡಿಸೆಂಬರ್ 17ರಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪತ್ರ ಬರೆದು, ತಾಂತ್ರಿಕ ಕಾರಣಗಳಿಂದ ರಾಜ್ಯದ ಸುಮಾರು 30 ಸಾವಿರಕ್ಕೂ ಹೆಚ್ಚು ಅರ್ಹ ರೈತರು ಯೋಜನೆಯ ಲಾಭದಿಂದ ವಂಚಿತರಾಗುತ್ತಿರುವುದನ್ನು ಗಮನಕ್ಕೆ ತಂದಿದ್ದರು.
ಕಳೆದ ವಾರ ನಡೆದ ಅಂತಾರಾಷ್ಟ್ರೀಯ ವಾಣಿಜ್ಯ ಮೇಳಕ್ಕೆ ಕೇಂದ್ರ ಸಚಿವರು ಆಗಮಿಸಿದ್ದ ಸಂದರ್ಭದಲ್ಲಿಯೂ ಈ ವಿಚಾರವನ್ನು ಪ್ರಸ್ತಾಪಿಸಿ, ಮನವಿ ಮಾಡಿದ್ದರು.
ಇದಕ್ಕೆ ಪೂರಕವಾಗಿ ಸ್ಪಂದಿಸಿರುವ ಶಿವರಾಜ್ ಸಿಂಗ್ ಚೌಹಾಣ್, ರಾಜ್ಯ ಸರ್ಕಾರ ನೀಡಿರುವ ದೃಢೀಕರಣದ ಆಧಾರದ ಮೇಲೆ ಈಗಾಗಲೇ 22 ಸಾವಿರಕ್ಕೂ ಹೆಚ್ಚು ಫಲಾನುಭವಿಗಳನ್ನು 22ನೇ ಕಂತಿನ ಪಾವತಿ ಪಟ್ಟಿಯಲ್ಲಿ ಸೇರಿಸಲಾಗಿದ್ದು, ಶೀಘ್ರದಲ್ಲೇ ಅವರಿಗೆ ಹಣ ಬಿಡುಗಡೆಯಾಗಲಿದೆ ಎಂದಿದ್ದಾರೆ.
ರಾಜ್ಯದ ರೈತರ ಹಿತದೃಷ್ಟಿಯಿಂದ ನಾವು ಸಲ್ಲಿಸಿದ ಮನವಿಯನ್ನು ಪುರಸ್ಕರಿಸಿ, ತಾಂತ್ರಿಕ ಅಡೆತಡೆಗಳನ್ನು ನಿವಾರಿಸಿ ರೈತರಿಗೆ ನ್ಯಾಯ ಒದಗಿಸಿದ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ರಾಜ್ಯ ಸರ್ಕಾರದ ಪರವಾಗಿ ಹೃತೂರ್ವಕ ಧನ್ಯವಾದ ಗಳನ್ನು ಅರ್ಪಿಸುತ್ತೇನೆ ಎಂದಿದ್ದಾರೆ.
ಪಿಎಂ ಕಿಸಾನ್ ಸಮ್ಮಾನ್ ನಿಧಿ (PM-KISAN) ಫಲಾನುಭವಿಗಳ ಹೆಸರನ್ನು ಚೆಕ್ ಮಾಡುವ ವಿಧಾನ.
ವಿಧಾನ 1: ಅಧಿಕೃತ ವೆಬ್‌ಸೈಟ್ ಮೂಲಕ
1. ಬ್ರೌಸರ್‌ನಲ್ಲಿ pmkisan.gov.in ತೆರೆಯಿರಿ
2. ಹೋಮ್‌ಪೇಜ್‌ನಲ್ಲಿ Farmers Corner ಆಯ್ಕೆಮಾಡಿ
3. Beneficiary List ಮೇಲೆ ಕ್ಲಿಕ್ ಮಾಡಿ
4. ನಿಮ್ಮ State, District, Sub-District, Block, Village ಆಯ್ಕೆಮಾಡಿ
5. Get Report ಕ್ಲಿಕ್ ಮಾಡಿದರೆ ನಿಮ್ಮ ಗ್ರಾಮದ ಫಲಾನುಭವಿಗಳ ಪಟ್ಟಿ ಬರುತ್ತದೆ
6. ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎಂದು ಪರಿಶೀಲಿಸಿ
ವಿಧಾನ 2: Beneficiary Status (ವೈಯಕ್ತಿಕ ಸ್ಥಿತಿ)
1. Farmers Corner → Beneficiary Status ಕ್ಲಿಕ್ ಮಾಡಿ
2. Aadhaar Number / Account Number / Mobile Number ಯಾವುದಾದರೂ ನಮೂದಿಸಿ
3. Get Data ಕ್ಲಿಕ್ ಮಾಡಿ
4. ನಿಮ್ಮ ಕಂತಿನ ಸ್ಥಿತಿ (₹2000) ಕಾಣಿಸುತ್ತದೆ
ಉಪಯುಕ್ತ ಮಾಹಿತಿ:
ಹೆಸರು ಕಾಣಿಸದಿದ್ದರೆ: eKYC ಪೂರ್ಣಗೊಂಡಿದೆಯೇ ಎಂದು ಪರಿಶೀಲಿಸಿ
ಬ್ಯಾಂಕ್ ಖಾತೆ Aadhaar-ಲಿಂಕ್ ಆಗಿರಬೇಕು
ಸಮಸ್ಯೆಯಿದ್ದರೆ ಸ್ಥಳೀಯ ಕೃಷಿ ಇಲಾಖೆ / CSC ಕೇಂದ್ರ ಸಂಪರ್ಕಿಸಿ
ಈ ಯೋಜನೆಯನ್ನು Ministry of Agriculture and Farmers Welfare ನಿರ್ವಹಿಸುತ್ತದೆ



