KAAMS Attendance: ಆನ್ಲೈನ್ ಹಾಜರಾತಿ ಕಡ್ಡಾಯ: ಶಿಕ್ಷಕರಿಗೆ ಮುಖ್ಯ ಸೂಚನೆಗಳು-2026

KAAMS Attendance ಆನ್ಲೈನ್ ಹಾಜರಾತಿ ಕಡ್ಡಾಯ: ಶಿಕ್ಷಕರಿಗೆ ಮುಖ್ಯ ಸೂಚನೆಗಳು-2026

KAAMS Attendance-2026: ಆನ್ಲೈನ್ ಹಾಜರಾತಿ ಕಡ್ಡಾಯ: ಶಿಕ್ಷಕರಿಗೆ ಮುಖ್ಯ ಸೂಚನೆಗಳು

KAAMS Attendance:  ಆನ್ಲೈನ್ ಹಾಜರಾತಿ ಕಡ್ಡಾಯ: ರಾಜ್ಯದ ಎಲ್ಲಾ ಶಿಕ್ಷಕರಿಗೂ ಈಗ KAAMS ಆಪ್ ಮೂಲಕ ಆನ್ಲೈನ್ ಹಾಜರಾತಿ ಕಡ್ಡಾಯಗೊಳಿಸಲಾಗಿದೆ. ಶಿಕ್ಷಣ ಇಲಾಖೆ ನೀಡಿರುವ ಹೊಸ ಮಾರ್ಗಸೂಚಿಗಳ ಪ್ರಕಾರ ಪ್ರತಿಯೊಬ್ಬ ಶಿಕ್ಷಕರೂ ಸಮಯಕ್ಕೆ ಸರಿಯಾಗಿ Check-in ಹಾಗೂ Check-out ಮಾಡಬೇಕಾಗಿದೆ. ಈ ಕುರಿತು ಇಲಾಖೆಯಿಂದ ನೀಡಿರುವ ಪ್ರಮುಖ ಸೂಚನೆಗಳು ಕೆಳಗಿನಂತಿವೆ.

ಶಿಕ್ಷಕರಿಗೆ ನೀಡಿರುವ ಪ್ರಮುಖ ಸೂಚನೆಗಳು

1. KAAMS ನಲ್ಲಿ ಕಡ್ಡಾಯ ನೋಂದಣಿ

ಯಾವ ಶಿಕ್ಷಕರು ಇನ್ನೂ KAAMS ಆಪ್‌ನಲ್ಲಿ ರಿಜಿಸ್ಟರ್ ಆಗಿಲ್ಲವೋ ಅವರು ಕಡ್ಡಾಯವಾಗಿ ನಾಳೆಯೊಳಗೆ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಬೇಕು.

2. ತಾಂತ್ರಿಕ ಸಮಸ್ಯೆಯಿಂದ ರಿಜಿಸ್ಟರ್ ಆಗದಿದ್ದರೆ

ತಾಂತ್ರಿಕ ಕಾರಣಗಳಿಂದ ನೋಂದಣಿ ಆಗದೇ ಇರುವ ಶಿಕ್ಷಕರು ತಮ್ಮ ಮಾಹಿತಿಯನ್ನು ತಾಲ್ಲೂಕು ನೋಡೆಲ್ ಅಧಿಕಾರಿಗಳಿಗೆ ಸಲ್ಲಿಸಬೇಕು.

3. ಹೊಸ Time Slab ಅನುಸರಣೆ

ಹೊಸ ಸಮಯದ ಪ್ರಕಾರ ಶಿಕ್ಷಕರು ತಮ್ಮ Time Slab ಅನ್ನು ಅಪ್‌ಡೇಟ್ ಮಾಡಿಕೊಳ್ಳಬೇಕು.

  • ಸೋಮವಾರದಿಂದ ಶುಕ್ರವಾರ: ಬೆಳಿಗ್ಗೆ 9:45 ರಿಂದ ಸಂಜೆ 4:30
  • ಶನಿವಾರ: ಬೆಳಿಗ್ಗೆ 7:30 ರಿಂದ ಮಧ್ಯಾಹ್ನ 12:00

4. Time Slab ಅಪ್‌ಡೇಟ್ ಆಗದಿದ್ದರೆ

ಯಾವುದೇ ಕಾರಣದಿಂದ ಹೊಸ Time Slab ಅಪ್‌ಡೇಟ್ ಮಾಡಲು ಸಾಧ್ಯವಾಗದಿದ್ದರೆ ಹಳೆಯ Time Slab ಅನುಗುಣವಾಗಿ Check-in ಮತ್ತು Check-out ಮಾಡಬೇಕು.

5. OOD ಕಡ್ಡಾಯ

OOD (Out of Duty) ಇದ್ದಲ್ಲಿ ಅದನ್ನು ಕಡ್ಡಾಯವಾಗಿ ನಮೂದಿಸಿ ನಂತರ Check-in ಮತ್ತು Check-out ಮಾಡಬೇಕು.

6. ರಜೆ ಸೌಲಭ್ಯ

KAAMS ಆಪ್‌ನಲ್ಲಿ ರಜೆ ಹಾಕಲು ಅವಕಾಶ ಕಲ್ಪಿಸಲಾಗಿದೆ.

7. ಶಾಲಾ ಕಾರ್ಯಕ್ಕಾಗಿ ಹೊರಗೆ ಹೋದರೆ

ಬ್ಯಾಂಕ್ ಅಥವಾ BEO ಕಚೇರಿ ಸೇರಿದಂತೆ ಶಾಲಾ ಕಾರ್ಯ ನಿಮಿತ್ತ ಹೊರಗೆ ಹೋದರೆ Movement Register ನಲ್ಲಿ ಕಡ್ಡಾಯವಾಗಿ ನಮೂದಿಸಬೇಕು.

8. ಉರ್ದು ಮಾಧ್ಯಮ ಶಾಲೆಗಳ ಸೂಚನೆ

ಉರ್ದು ಮಾಧ್ಯಮ ಶಾಲೆಯ ಶಿಕ್ಷಕರು ಇಲಾಖೆ ನಿಗದಿಪಡಿಸಿದ Time Slab ಅನ್ನು ಕಡ್ಡಾಯವಾಗಿ ಅನುಸರಿಸಬೇಕು.

9. Time Slab ಬದಲಾವಣೆ ಮಿತಿ

ಒಂದು ದಿನದಲ್ಲಿ ಒಂದೇ ಬಾರಿ ಮಾತ್ರ Time Slab ಬದಲಾಯಿಸಲು ಅವಕಾಶ ನೀಡಲಾಗಿದೆ.

10. ನೆಟ್ವರ್ಕ್ ಸಮಸ್ಯೆ ಇದ್ದರೆ

ಇಂಟರ್ನೆಟ್ ಸಂಪರ್ಕ ಇಲ್ಲದಿದ್ದಲ್ಲಿ Offline Mode ಮೂಲಕ ಆಪ್‌ನಲ್ಲಿಯೇ ಹಾಜರಾತಿ ದಾಖಲಿಸಲು ಅವಕಾಶವಿದೆ.

11. Location ಹೊಂದಾಣಿಕೆ ಸಮಸ್ಯೆ

Latitude ಹಾಗೂ Longitude ಹೊಂದಾಣಿಕೆ ಆಗದಿದ್ದರೆ “Out of Area” ಎಂದು ತೋರಿಸಬಹುದು. ಇಂತಹ ಸಂದರ್ಭದಲ್ಲಿ OOD ನಮೂದಿಸಿ Check-in ಮತ್ತು Check-out ಮಾಡಬೇಕು.

ಗಮನಿಸಿ: ನೀವು OOD ಹಾಕಿರುವ ಸ್ಥಳದ ಮಾಹಿತಿಯು Database ನಲ್ಲಿ ಸೇವ್ ಆಗಿರುತ್ತದೆ.

12. ನಿಯೋಜನೆ ಶಾಲೆಯ ಶಿಕ್ಷಕರಿಗೆ ಸೂಚನೆ

ಮಾತೃ ಶಾಲೆಯಿಂದ ಬೇರೆ ಶಾಲೆಗೆ ನಿಯೋಜನೆಗೊಂಡಿರುವ ಶಿಕ್ಷಕರು ಪ್ರತಿದಿನ OOD ನಮೂದಿಸಿ Check-in ಮತ್ತು Check-out ಮಾಡಬೇಕು.

ಗಮನಿಸಿ: ನಿಯೋಜಿತ ಶಾಲೆಯ Location ಮಾಹಿತಿಯೂ Database ನಲ್ಲಿ ದಾಖಲಾಗಿರುತ್ತದೆ.

13. ತಾಂತ್ರಿಕ ಸಮಸ್ಯೆಗಳ ಪರಿಹಾರ

ಯಾವುದೇ ತಾಂತ್ರಿಕ ಸಮಸ್ಯೆಗಳು ಉಂಟಾದಲ್ಲಿ ನಿಮ್ಮ ತಾಲೂಕಿನ ನೋಡೆಲ್ ಅಧಿಕಾರಿಯನ್ನು ಸಂಪರ್ಕಿಸಬೇಕು.

ಅಂತಿಮ ಮಾತು

KAAMS ಆನ್ಲೈನ್ ಹಾಜರಾತಿ ವ್ಯವಸ್ಥೆ ಶಿಕ್ಷಕರ ಹಾಜರಾತಿಯನ್ನು ಪಾರದರ್ಶಕ ಹಾಗೂ ಸುಲಭವಾಗಿ ನಿರ್ವಹಿಸಲು ಜಾರಿಗೆ ತರಲಾಗಿದೆ. ಆದ್ದರಿಂದ ಎಲ್ಲಾ ಶಿಕ್ಷಕರೂ ಇಲಾಖೆಯ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಸಮಯಕ್ಕೆ ಸರಿಯಾಗಿ ಹಾಜರಾತಿ ದಾಖಲಿಸುವುದು ಅಗತ್ಯವಾಗಿದೆ.

KAAMS Attendance

KAAMS App ಬಳಕೆ ಬಗ್ಗೆ ಮಹತ್ವದ ವಿಡಿಯೋ

👇👇👇👇👇

 

METHOD OF SUBMITTING ATTENDANCE THROUGH OFFLINE MODE

👇👇👇👇

 

Update Your KAAMS App

👇👇👇👇👇

https://play.google.com/store/apps/details?id=com.kams

ಅಪ್ಡೇಟ್ ಮಾಹಿತಿಗಾಗಿ 

www.mastermitra.in

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Author: mastermitra

Leave a Reply

Your email address will not be published. Required fields are marked *