ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ಆರ್ಥಿಕ ಪರಿಣಾಮಗಳು ನೋಟ್ಸ್-01
ನೋಟ್ಸ್-01: ಭಾರತವು ಬ್ರಿಟಿಷ್ ವಸಾಹತು ನೆಲೆಯಾಗಿ ಪರಿವರ್ತನೆಗೊಂಡ ಹಂತಗಳು:
ಈಸ್ಟ್ ಇಂಡಿಯಾ ಕಂಪನಿಯು 1757ರ ಪ್ಲಾಸಿ ಕದನದ ಜಯದ ನಂತರ ಬಂಗಾಳದಲ್ಲಿ ತನ್ನ ಪ್ರಾಬಲ್ಯವನ್ನು ಸ್ಥಾಪಿಸಿಕೊಳ್ಳುವುದರ ಮೂಲಕ ಭಾರತವನ್ನು ಸಾಹತು ನೆಲೆಯನ್ನಾಗಿ ಸಿಕೊಂಡಿತು. ಹಾಗೆಯೇ ಬ್ರಿಟನ್ನಿನ ಸಾಮಾಜಿಕ ಆರ್ಥಿಕ ಸಂಸ್ಥೆಗಳು ಮತ್ತು ಆಧುನಿಕವಾದ ತಾಂತ್ರಿಕಜ್ಞಾನ ವಸಾಹತುವಿನ ಮೇಲೆ ಹಿಡಿತ ಸಾಧಿಸಲು ಕಾರಣವಾದವು ಈಸ್ಟ್ ಇಂಡಿಯಾ ಕಂಪನಿಯು ಸಹ ಪ್ರಪಂಚದ ಇತರ ಬಂಡವಾಳ ಏಕಸ್ವಾಮ್ಯದ ಸಂಸ್ಥೆಗಳಂತೆ ವಿದೇಶಗಳಲ್ಲಿ ದೊರೆಯುವ ವಸ್ತುಗಳಿಂದ ಅಧಿಕ ಲಾಭ ಪಡೆಯುವ ಉದ್ದೇಶ ಹೊಂದಿತ್ತು. ಆದ್ದರಿಂದ ಇಂಗ್ಲೆಂಡ್ ಮತ್ತು ಇತರ ಯೂರೋಪಿಯನ್ ದೇಶಗಳಲ್ಲಿ ಬೇಡಿಕೆ ಇರುವ ವಸ್ತುಗಳ ದೊರೆಯುವಿಕೆಯ ಮೇಲೆ ಹತೋಟಿ ಹೊಂದಲು ಅನೇಕ ವಿಧಾನಗಳನ್ನು ಅಳವಡಿಸಿಕೊಂಡಿತು. ಮೊದಲು ತನ್ನ ನೌಕಾ ಶಕ್ತಿಯನ್ನು ಕರಾವಳಿಗುಂಟ ಬಲಗೊಳಿಸಿ, ಪ್ಲಾಸಿ ಕದನದ ನಂತರ ಬಂಗಾಳ, ಬಿಹಾರ್ ಮತ್ತು ಒರಿಸ್ಸಾ, ಪ್ರಾಂತ್ಯಗಳನ್ನು ತನ್ನ ಹತೋಟಿಗೆ ಪಡೆದು ಅಲ್ಲಿನ ಸ್ಥಳೀಯ ನವಾಬರು, ಜಮೀನ್ದಾರರು ಮತ್ತಿತರ ಮುಖ್ಯಸ್ಥರ ಬಳಿಯಿದ್ದ ಸಂಪತ್ತನ್ನು ದೋಚಿತು. ಇದರ ಪರಿಣಾಮವೆಂದರೆ ಪ್ಲಾಸಿ ಕದನಕ್ಕಿಂತ ಮೊದಲು ಬ್ರಿಟನ್ ಭಾರತ ದೇಶದೊಂದಿಗೆ ವ್ಯಾಪಾರ ಮಾಡಲು ಚಿನ್ನ ಬೆಳ್ಳಿಯಂತಹ ಅಮೂಲ್ಯ ಲೋಹಗಳನ್ನು ಉಪಯೋಗಿಸುತ್ತಿತ್ತು. ಆದರೆ 1757ರ ನಂತರ ಈ ಲೋಹಗಳನ್ನು ಉಪಯೋಗಿಸದೆ ಕಂಪನಿಯ ವರ್ತಕರು ಭಾರತೀಯ ಉತ್ಪಾದಕರ ಮೇಲೆ ನೀತಿನಿಯಮಗಳನ್ನು ಹೇರಲಾರಂಭಿಸಿದರು. ಹೀಗಾಗಿ ಪ್ರತಿವರ್ಷ ಭಾರತದ ಸಂಪತ್ತು ಇಂಗ್ಲೆಂಡ್ಗೆ ಹರಿದು ಇಂಗ್ಲೆಂಡ್ ಶ್ರೀಮಂತವಾಯಿತು. ವಸಾಹತುವಿನ ಪ್ರಮುಖ ಸಿದ್ಧಾಂತ ಆರ್ಥಿಕ ಸುಲಿಗೆ, ಆರ್ಥಿಕ ಸುಲಿಗೆಯನ್ನು ವ್ಯವಸ್ಥಿತವಾಗಿ ಮುಂದುವರಿಸಲು ರಾಜಕೀಯ ನಿಯಂತ್ರಣವು ಅವಶ್ಯಕವಾದುದರಿಂದ ಬ್ರಿಟಿಷರು ಸಾಮ್ರಾಜ್ಯವನ್ನು ಸ್ಥಾಪನೆ ಮಾಡಿದರು. ಆರ್.ಪಿ. ದತ್‌ರವರು ತಮ್ಮ ಅಮೂಲ್ಯ ಕೃತಿ “ಇಂಡಿಯಾ ಟುಡೆ” ಗ್ರಂಥದಲ್ಲಿ ಕಾರ್ಲ್ ಮಾರ್ಕ್ಸ್ ರವರ ಮೂರು ಹಂತದ ಬ್ರಿಟಿಷ್ ವಸಾಹತು ನೀತಿ ಮತ್ತು ಆರ್ಥಿಕ ಶೋಷಣೆಯ ಅಂಶವನ್ನು ವಿಮರ್ಶಾತ್ಮಕವಾಗಿ ಚರ್ಚಿಸಿ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಮೊದಲ ಹಂತವು 1757 ರಿಂದ 1813ರ ವರೆಗಿನ ವ್ಯಾಪಾರಿ ಪ್ರವೃತ್ತಿಯ ಹಂತ. ಈ ಹಂತದಲ್ಲಿ ಈಸ್ಟ್ ಇಂಡಿಯಾ ಕಂಪನಿಯು ಇಂಗ್ಲೆಂಡ್ ಮತ್ತು ಯೂರೋಪಿನ ದೇಶಗಳಿಗೆ ರಫ್ತಾಗುವ ಸಿದ್ಧವಸ್ತುಗಳ ಬೆಲೆಯನ್ನು ಸಂಪೂರ್ಣವಾಗಿ ಇಳಿಸಿ ಭಾರತದ ವ್ಯಾಪಾರದ ಮೇಲೆ ತನ್ನ ಹತೋಟಿ ಪಡೆದು ಭಾರತದ ಸಂಪತ್ತನ್ನು ನೇರವಾಗಿ ಸೂರೆಗೈದಿತು. ಈ ಹಂತದಲ್ಲಿ ಬಂಗಾಳ ಮತ್ತಿತರ ಪ್ರಾಂತ್ಯಗಳ ಆದಾಯದ ಹೆಚ್ಚಿನ ಭಾಗವನ್ನು ಭಾರತದ ಸಿದ್ಧವಸ್ತುಗಳನ್ನು ಕೊಂಡು ಇಂಗ್ಲೆಂಡ್ಗೆ ರಫ್ತು ಮಾಡಲು ಉಪಯೋಗಿಸಿತು. ಎರಡನೇ ಹಂತವು ಇಂಗ್ಲೆಂಡ್‌ನ ಕೈಗಾರಿಕಾ ಕ್ರಾಂತಿಯ ಪರಿಣಾಮವಾಗಿ 1813 ರಿಂದ 1858ರ ವರೆಗೆ ಅನುಸರಿಸಿದ ಮುಕ್ತ ವ್ಯಾಪಾರ ನೀತಿ. ಈ ಹಂತದಲ್ಲಿ ಬ್ರಿಟನ್ನಿನ ಕೈಗಾರಿಕೆಗಳಲ್ಲಿ ಸಿದ್ದಗೊಂಡ ವಸ್ತುಗಳ ವ್ಯಾಪಾರ ಮಾರುಕಟ್ಟೆಯಾಗಿ ಭಾರತವು ಬದಲಾಯಿತು. ಹಾಗೆಯೇ ಇಂಗ್ಲೆಂಡಿನ ಕೈಗಾರಿಕೆಗೆ ಅವಶ್ಯಕವಾದ ಕಚ್ಚಾವಸ್ತುಗಳ ಪೂರೈಕೆಯ ದೇಶವಾಯಿತು. ಈ ಹಂತದಲ್ಲಿ ಬ್ರಿಟನ್ ಯಾವ ರೀತಿ ಶೋಷಣೆಗೆ ಈಡುಮಾಡಿತೆಂದರೆ ಶತಮಾನಗಳಿಂದ ಭಾರತವು ಪ್ರಪಂಚಕ್ಕೆಲ್ಲಾ ಹತ್ತಿಯ ಮತ್ತಿತರ ಸಿದ್ಧ ವಸ್ತುಗಳನ್ನು ರಫ್ತು ಮಾಡುತ್ತಿದ್ದುದು 1850ರ ವೇಳೆಗೆ ಬ್ರಿಟನ್ನಿನ ಸಿದ್ಧ ವಸ್ತುಗಳ / ಭಾಗವನ್ನು ಆಮದು ಮಾಡಿಕೊಳ್ಳುವಂತಾಯಿತು.
1813 ರಿಂದ ಕಂಪನಿಯು ಭಾರತದೊಂದಿಗಿನ ವ್ಯಾಪಾರಕ್ಕೆ ನಿರ್ಬಂಧ ವಿಧಿಸಿತು. ಮತ್ತು 1833ರಲ್ಲಿ ಕಂಪನಿಯು ಭಾರತದೊಂದಿಗಿನ ವ್ಯಾಪಾರಿ ಚಟುವಟಿಕೆಗಳ ಮೇಲೆ ಸಂಪೂರ್ಣ ತಡೆ ಹಾಕಿತು. ನಂತರ ಭಾರತವು ಬ್ರಿಟನ್ನಿನ ವ್ಯಾಪಾರಿಗಳು ಮತ್ತು ಕೈಗಾರಿಕಾ ಬಂಡವಾಳ ವರ್ಗದ ಶೋಷಣೆಗೆ ತರಯಲ್ಪಟ್ಟಿತು. ಈ ವರ್ಗವು ಕಚ್ಚಾ ವಸ್ತುಗಳನ್ನು ಕೊಂಡು ಹೋಗಿ ಸಿದ್ಧ ವಸ್ತುಗಳನ್ನು ಭಾರತದ ಮಾರುಕಟ್ಟೆಗೆ ಬಿಟ್ಟಿತು ಮತ್ತು ಈ ವರ್ಗವು ತನ್ನ ಬ್ರಿಟನ್ನಿನ ಕೈಗಾರಿಕಾ ಕಾರ್ಮಿಕರಿಗೆ ಅವಶ್ಯಕವಾದ ಆಹಾರ ಪದಾರ್ಥಗಳನ್ನು ಕೊಂಡೊಯ್ಯಲು ಪ್ರಾರಂಭಿಸಿತು. ಈ ಕಾರಣದಿಂದ 19ನೇ ಶತಮಾನದಲ್ಲಿ ಕ್ರಾಮಗಳು ಸಂಭವಿಸಿ ಸುಮಾರು 20 ದಶಲಕ್ಷ ಜನರ ಸಾವು ನೋವಿಗೆ ಕಾರಣವಾಯಿತು. 1860ರ ನಂತರದ ಮೂರನೇ ಹಂತದ ಬ್ರಿಟಿಷ್ ವಸಾಹತು ನೀತಿಯನ್ನು ಆರ್ಥಿಕ ಬಂಡವಾಳ ಹೂಡುವಿಕೆ ಎಂದು ಕರೆಯುತ್ತಾರೆ. 1857ರ ದಂಗೆಯಲ್ಲಿ ಭಾರತೀಯರು ಅದರಲ್ಲೂ ರೈತ ವರ್ಗವು ತೋರಿಸಿದ ವಿರೋಧವು ಬ್ರಿಟನ್‌ನ ವಸಾಹತು ನೀತಿಗಳ ವಿರುದ್ಧವೇ ಆಗಿತ್ತು. ದಂಗೆಯ ನಂತರ ಬ್ರಿಟಿಷರಿಗೂ ಮತ್ತು ಭಾರತೀಯರಿಗೂ ಸಂಘರ್ಷ ಪ್ರಾರಂಭವಾಯಿತು. ಆದ್ದರಿಂದ ಭಾರತೀಯರ ವ್ಯಾಪಾರ ಮತ್ತು ಸಾಮಾಜಿಕ ಅವಶ್ಯಕತೆಗಳಾದ ರಸ್ತೆ ಮತ್ತು ರೈಲ್ವೆ, ಅಂಚೆ ಮತ್ತು ತಂತಿ, ಬ್ಯಾಂಕ್ ಮತ್ತಿ ತರ ಸಂಸ್ಥೆಗಳು ಅಭಿವೃದ್ಧಿಗೊಂಡವು ಈ ಕ್ರಮಗಳು ಬ್ರಿಟನ್ನಿನ ಬಂಡವಾಳಸ್ಥರಿಗೆ ಭಾರತದಲ್ಲಿ ಬಂಡವಾಳ ಹೂಡಲು ಪ್ರೋತ್ಸಾಹ ದೊರೆಯಿತು. ಈ ಬಂಡವಾಳದ ಪರಿಣಾಮವಾಗಿ ಭಾರತದ ಸಾಲವು ಪ್ರತಿವರ್ಷ ಹೆಚ್ಚುತ್ತಾ ಹೋಯಿತು. ಹೀಗೆ ಭಾರತದ ಬಂಡವಾಳ ಮತ್ತು ಕೈಗಾರಿಕಾ ಬೆಳವಣಿಗೆಯ ಬಗ್ಗೆ ಹತೋಟಿ ಹೊಂದಿರಲು “ನಿರ್ವಾಹಕ ಮಂಡಳಿ” ವ್ಯವಸ್ಥೆಯನ್ನು ಜಾರಿಗೆ ತಂದರು. ಹೀಗೆ ಈ ಮೂರನೇ ಹಂತದಲ್ಲಿ ಭಾರತವು ಬ್ರಿಟನ್ ನ ನಿಜವಾದ ವಸಾಹತು ದೇಶವಾಯಿತು.
ದೇಶೀಯ ವ್ಯಾಪಾರ ಮತ್ತು ವಾಣಿಜ್ಯಗಳ ಅವನತಿ:
ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು 1600 ರಿಂದ 1757ರ ವರೆಗೆ ಒಂದು ವಾಣಿಜ್ಯ ಸಂಸ್ಥೆಯಾಗಿ ವಸ್ತುಗಳನ್ನು ಮತ್ತು ಅಮೂಲ್ಯ ಲೋಹಗಳನ್ನು ಭಾರತಕ್ಕೆ ತಂದು ಅದಕ್ಕೆ ಪರಿವರ್ತನೆಯಾಗಿ ಭಾರತದ ವಸ್ತುಗಳಾದ ಬಟ್ಟೆ ಮತ್ತು ಸಾಂಬಾರ ಪದಾರ್ಥಗಳನ್ನು ಕೊಂಡು ಹೊರದೇಶದಲ್ಲಿ ಮಾರಾಟ ಮಾಡುತ್ತಿತ್ತು. ಕಂಪನಿಯ ಪ್ರಮುಖ ಆದಾಯದ ಮೂಲವೆಂದರೆ ಭಾರತೀಯ ವಸ್ತುಗಳಾಗಿದ್ದವು. ಹೀಗಾಗಿ ಬ್ರಿಟನ್ ಮತ್ತಿತರ ದೇಶಗಳಲ್ಲಿ ಭಾರತೀಯ ವಸ್ತುಗಳಿಗೆ ಮಾರುಕಟ್ಟೆ ಸ್ಥಾಪಿಸಿಕೊಂಡಿತು. ಆದ ಕಾರಣ ಭಾರತೀಯ ವಸ್ತುಗಳ ರಫ್ತನ್ನು ಹೆಚ್ಚಿಸಿತು ಮತ್ತು ಉತ್ಪಾದನೆಗೆ ಪ್ರೋತ್ಸಾಹ ನೀಡಿತು. ಇದೇ ಕಾರಣದಿಂದ ಭಾರತೀಯ ರಾಜರು ಇಂಗ್ಲಿಷರ ವ್ಯಾಪಾರಕ್ಕೆ ಪ್ರೋತ್ಸಾಸ ನೀಡಿದರು. ಆದರೆ ಮೊದಲಿನಿಂದ ಬ್ರಿಟನ್ನಿನ ಉತ್ಪಾದಕರಲ್ಲಿ ಭಾರತೀಯ ಬಟ್ಟೆಯು ಬ್ರಿಟನ್‌ನಲ್ಲಿ ಪ್ರಸಿದ್ಧಿಯಾದುದನ್ನು ಕಂಡು ಈರ್ಷೆ ಉಂಟಾಗಿತ್ತು. ರಾಬಿನ್ ಸನ್ ಕ್ರೂಸೊ ಕಾದಂಬರಿಯ ಕರ್ತೃ ಈ ರೀತಿಯಾಗಿ ಆಪಾದನೆ ಮಾಡಿದ್ದಾನೆ, “ಭಾರತೀಯ ಬಟ್ಟೆಗಳು ನಮ್ಮ ಮನೆಯ ಎಲ್ಲವನ್ನೂ ಆಕ್ರಮಿಸಿವೆ, ಪರದೆಗಳು ಪೀಠೋಪಕರಣಗಳ ಹೊದಿಕೆಗಳು, ಕೊನೆಗೆ ಹಾಸಿಗೆಯ ಬಟ್ಟೆಯೂ ಭಾರತದ ಕ್ಯಾಲಿಕೋವೆ ಆಗಿದೆ. ಬ್ರಿಟ್ನುನ ಉತ್ಪಾದಕರು ಸರ್ಕಾರದ ಮೇಲೆ ಒತ್ತಡ ತಂದು ಭಾರತೀಯ ವಸ್ತುಗಳ ಮೇಲೆ ನಿರ್ಬಂಧ ಮತ್ತು ನಿಷೇಧವನ್ನು ತಂದರು. 1720 ರಿಂದ ಭಾರತದ ಹತ್ತಿ ಬಟ್ಟೆಯನ್ನು ತೊಡುವುದಾಗಲಿ ಅಥವಾ ಉಪಯೋಗಿಸುವುದನ್ನು ಕಾನೂು ಮೂಲಕ ನಿಷೇಧಿಸಿತು. 1760ರಲ್ಲಿ ಒಬ್ಬ ಸ್ತ್ರೀಯು ಈ ಕಾನೂನು ಮೀರಿ ಭಾರತದ ಕರವಸ್ತ್ರವನ್ನು ಹೊಂದಿದ್ದ 200 ಪೌಂಡ್‌ಗಳ ದಂಡ ವಿಧಿಸಿತು. ಇದರ ಜೊತೆಗೆ ಭಾರತೀಯ ಬಟ್ಟೆಯ ಮೇಲೆ ಅಧಿಕ ತೆರಿಗೆ ವಿಧಿಸಿತು ಹಾಲೆಂಡ್ ದೇಶವನ್ನು ಹೊರತುಪಡಿಸಿ ಇತರ ಎಲ್ಲಾ ಯೂರೋಪಿಯನ್ ದೇಶಗಳು ಭಾರತೀಯ ಬಟ್ಟೆನ ಮೇಲೆ ಅಧಿಕ ಸುಂಕ ವಿಧಿಸಿದವು. ಈ ಎಲ್ಲ ಕಾನೂನು ಕ್ರಮಗಳಿದ್ದರೂ ಭಾರತದ ಹತ್ತಿ ಉದ್ಯಮದ ವಸ್ತುಗಳಿಗೆ 18ನೇ ಶತಮಾನದ ಮಧ್ಯದವರೆಗೂ ಬೇಡಿಕೆ ಇತ್ತು. ಆದರೆ ನಂತರ ಬ್ರಿಟನ್ನಿನ ಬಟ್ಟೆ ಉದ್ಯಮವು ಆರ್ಥ ತಾಂತ್ರಿಕ ಜ್ಞಾನವನ್ನುಪಯೋಗಿಸಿ ಬಟ್ಟೆ ಉತ್ಪನ್ನ ಹೆಚ್ಚಿಸಿತು ಹಾಗೂ ಇಂಗ್ಲೆಂಡ್‌ನಲ್ಲಿ ವೇಷಭೂಷಣವಲ್ಲಾರ ತತ್‌ಕ್ಷಣದ ಬದಲಾವಣೆ ಮತ್ತು ಹಗುರವಾದ ಹತ್ತಿ ಬಟ್ಟೆಯ ಬದಲು ಉಣ್ಣೆಯ ಬಟ್ಟೆಯನ್ನು ತೊಡುವಂತಾಯ ಸಹ ಭಾರತೀಯ ವಸ್ತುಗಳಿಗೆ ಬೇಡಿಕೆ ಕಡಿಮೆಯಾಯಿತೆಂದೇಳಬಹುದು.
ಭಾರತೀಯ ವಸ್ತುಗಳು 1750-51ರಲ್ಲಿ 1.5 ದಶಲಕ್ಷ ಪೌಂಡ್ ರಫ್ತು ಇದ್ದದ್ದು, 1797-98ರಲ್ಲಿ 5l ದಶಲಕ್ಷ ಪೌಂಡ್‌ಗೆ ಹೆಚ್ಚಿತು. ಆದರೆ ಕಂಪನಿಯು ತಾನು ಬಂಗಾಳದಲ್ಲಿ ಹೊಂದಿದ್ದ ರಾಜಕೀಯ ಅಧಿಕಾರವನ್ನುಪಯೋಗಿಸಿ ಬಂಗಾಳದ ನೇಯ್ಕೆಗಾರರು ಬಲವಂತವಾಗಿ ತಮ್ಮ ಉತ್ಪಾದನೆಗಳನ್ನು ಕಡಿಮೆ ವಸ್ ಮತ್ತು ಕೆಲವು ವೇಳೆ ನಷ್ಟ ಮಾಡಿಕೊಂಡು ಮಾರುವಂತಹ ಷರತ್ತುಗಳನ್ನು ವಿಧಿಸಿತು. ಅನೇಕ ನೇಯ್ದೆಗಾರನ ಕಂಪನಿಗೆ ಕಡಿಮೆ ಕೂಲಿಗೆ ದುಡಿಯುವಂತೆ ಬಲಾತ್ಕರಿಸಲಾಯಿತು ಮತ್ತು ಭಾರತದ ವರ್ತಕರಲ್ಲಿ ಅವರು ದುಡಿಯು ನಿರ್ಬಂಧ ವಿಧಿಸಿತು. ಬಂಗಾಳ ಕರಕುಶಲಗಾರರಿಗೆ ಹೆಚ್ಚಿನ ವೇತನ ನೀಡುತ್ತಿದ್ದ ಭಾರತೀಯ ಮತ್ತು ವಿಚವರ್ತಕರ ಪೈಪೋಟಿಯನ್ನು ಸಂಪೂರ್ಣವಾಗಿ ನಿವಾರಿಸಿತು. ಕಂಪನಿಯ ಉದ್ಯೋಗಿಗಳು ಕಚ್ಚಾ ಹತ್ತಿಯ ವ್ಯಾಪಾರದ ಮೇಲೆ ಏಕಸ್ವಾಮ್ಯ ಹೊಂದಿದ್ದು ಬಂಗಾಳದ ನೇಯ್ದೆಗಾರರು ಹತ್ತಿಗೆ ಹೆಚ್ಚಿನ ಬೆಲೆ ಕೊಡುವಂತೆ ಮಾಡಿದರು.
ಕೊನೆಗೆ ಭಾರತವು ಸಿದ್ಧವಸ್ತುಗಳನ್ನು ರಫ್ತು ಮಾಡುವ ಬದಲು ಕಚ್ಚಾ ವಸ್ತುಗಳಾದ ಹತ್ತಿ, ರೇಷ್ಮೆ ಮತ್ತಿತರ ವಸ್ತುಗಳನ್ನು ಬ್ರಿಟನ್ ಕೈಗಾರಿಕೆಗೆ ಕಳುಹಿಸುವಂತಾಯಿತು. ಹಾಗೆಯೇ ಇಂಟೇಶನ್ ವಸ್ತುಗಳಾದ ಇಂಡಿಗೊ ಮತ್ತು ಟೀ ಜೊತೆಗೆ ಇಂಗ್ಲೆಂಡ್‌ಗೆ ಕೊರೆತೆಯಿದ್ದ ಆಹಾರ ಧಾನ್ಯಗಳನ್ನು ಕಳುಹಿಸುತ್ತಿತ್ತು. 1856ರಲ್ಲಿ ಭಾರತ 4,300,000 ಪೌಂಡ್ ಕಚ್ಚಾ ಹತ್ತಿ ಮತ್ತು ಕೇವಲ 8,10,000 ಪೌಂಡ್ ಹತ್ತಿಯ ಸಿದ್ಧವಸ್ತುಗಳನ್ನು, 2,900,000 ಪೌಂಡ್ ಆಹಾರ ಧಾನ್ಯಗಳು, 1,730,000 ಪೌಂಡ್ ಮೌಲ್ಯದ ಇಂಡಿಗೊ ಮತ್ತು 770,000 ಪೌಂಡ್ ಕಚ್ಚಾ, ರೇಷ್ಮೆಯನ್ನು ರಫ್ತು ಮಾಡಿತು. ಬ್ರಿಟನ್ ಇಂಡಿಯಾದಲ್ಲಿ ದೊರೆಯುವ ಅಫೀಮನ್ನು ಚೀನಾ ಸರ್ಕಾರವು ನಿಷೇಧಿಸಿದ್ದರೂ ಮಾರಾಟ ಮಾಡಿ ಅಧಿಕ ಲಾಭ ಸಂಪಾದಿಸುತ್ತಿತ್ತು, ಆದರೆ ಬ್ರಿಟನ್ ಅಫೀಮಿನ ದುಷ್ಪರಿಣಾಮಗಳನ್ನು ಮನಗಂಡು ತನ್ನ ದೇಶಕ್ಕೆ ಮಾತ್ರ ನಿಷೇಧ ವಿಧಿಸಿತ್ತು. 19ನೇ ಶತಮಾನದ ಕೊನೆಯ ವೇಳೆಗೆ ಭಾರತದ ಪ್ರಮುಖ ರವು ವಸ್ತುಗಳೆಂದರೆ ಕಚ್ಚಾ ಹತ್ತಿ, ಸೆಣಬು, ರೇಷ್ಮೆ, ಎಣ್ಣೆ ಕಾಳುಗಳು, ಗೋಧಿ, ಚರ್ಮ, ಇಂಡಿಗೊ ಮತ್ತು ಟೀ.
ರೈತ ವಿರೋಧಿ ಕೃಷಿ ನೀತಿ:
ವಸಾಹತು ಪುರ್ವ ಭಾರತವು ಕೃಷಿಯಾಧಾರಿತ ಆರ್ಥಿಕತೆಯನ್ನೊಂದಿದ್ದು, ಬಹುಪಾಲು ಜನರ ಉದ್ಯೋಗವೂ ಆಗಿತ್ತು ಮತ್ತು ಕೈಗಾರಿಕೆಗಳಾದ ಹತ್ತಿ ಕೈಗಾರಿಕೆ, ಸಕ್ಕರೆ, ಎಣ್ಣೆ ಮುಂತಾದ ಕೈಗಾರಿಕೆಗಳು ಕೃಷಿಯನ್ನವಲಂಭಿಸಿದ್ದವು.
ಆದರೆ ಬ್ರಿಟಿಷರು ತಮ್ಮ ಆಡಳಿತದಲ್ಲಿ ತಂದ ಭೂ ಒಡೆತನ, ಭೂಕಂದಾಯ ವಿಧಿಸುವಿಕೆ ಮತ್ತು ವಸೂಲಾತಿಯ ಬಗ್ಗೆ ಕೈಗೊಂಡ ಕ್ರಮಗಳು ಹಿಂದಿನ ಭಾರತದ ಕೃಷಿ ವ್ಯವಸ್ಥೆಯಾದ ಗ್ರಾಮೀಣ ಸ್ವಾವಲಂಬನೆಯ ತತ್ವವನ್ನೇ ನಾಶಮಾಡಿತು. ಬ್ರಿಟಿಷ್ ಕಂಪನಿಯು ಭಾರತೀಯ ಕರಕುಶಲ ವಸ್ತುಗಳು ಮತ್ತಿತರ ವಸ್ತುಗಳನ್ನು ವಿದೇಶಗಳಿಗೆ ರಫ್ತು ಮಾಡಲು ಮತ್ತು ಭಾರತವನ್ನು ಸಂಪೂರ್ಣವಾಗಿ ಜಯಿಸಲು ಬೇಕಾಗುವ ವೆಚ್ಚಕ್ಕೆ ಭಾರತದ ಭೂಕಂದಾಯವನ್ನೇ ಅವಲಂಭಿಸಿತ್ತು. ಹಾಗೆಯೇ ಭಾರತದಲ್ಲಿ ನೇಮಿತರಾದ ಬ್ರಿಟಿಷ್ ಅಧಿಕಾರಿಗಳು, ಸೈನಿಕರು ಮುಂತಾದ ವರ್ಗಕ್ಕೆ ಹೆಚ್ಚಿನ ವೇತನ ನೀಡಲು, ವಸಾಹತುವಿನ ಎಲ್ಲ ಹಂತದ ಆಡಳಿತ ವ್ಯವಸ್ಥೆಗೆ ಬೇಕಾದ ಹಣಕ್ಕೆ ಭೂ ಕಂದಾಯವನ್ನೇ ಅವಲಂಭಿಸಿತ್ತು. ಇದರರ್ಥ ಭಾರತೀಯ ರೈತರ ಮೇಲೆ ಅಧಿಕ ತೆರಿಗೆಯ ಹೊರೆ ವಿಧಿಸಿದುದೇ ಆಗಿತ್ತು. 1813ರ * ವರೆಗೆ ಆದ ಆಡಳಿತಾತ್ಮಕ ಮತ್ತು ನ್ಯಾಯಾಂಗ ವ್ಯವಸ್ಥೆಯ ಬದಲಾವಣೆಗಳು ಸಹ ಭೂಕಂದಾಯ ಹೆಚ್ಚಿಸುವ ಉದ್ದೇಶವನ್ನೇ ಹೊಂದಿದ್ದವು. ಹೀಗೆ ಬ್ರಿಟಿಷರ ವ್ಯಾಪಾರಕ್ಕೆ ಬಂಡವಾಳವನ್ನು, ಆಡಳಿತಾತ್ಮಕ ವೆಚ್ಚವನ್ನು ಮತ್ತು ಬ್ರಿಟಿಷರ ವಿಸ್ತರಣಾ ನೀತಿಗೆ ಅವಶ್ಯಕ ಸಂಪತ್ತು ಭಾರತೀಯ ರೈತರಿಂದ ಬರುತ್ತಿತ್ತು. ಹೀಗೆ ಬ್ರಿಟಿಷರು ಭೂಕಂದಾಯವನ್ನು ಹೇರಳವಾಗಿ ಹೆಚ್ಚಿಸದಿದ್ದರೆ ವಿಶಾಲ ಭಾರತವನ್ನು ಗೆಲ್ಲಲಾಗುತ್ತಿರಲಿಲ್ಲ. ಭಾರತದ ರಾಜ್ಯಗಳು ಹಿಂದಿನಿಂದಲೂ ಭೂಕಂದಾಯವನ್ನೇ ಹೆಚ್ಚು ಅವಲಂಭಿಸಿ ಅದೇ ಅದಾಯದ ಮೂಲವಾಗಿದ್ದು ಅದನ್ನು ನೇರವಾಗಿ ಸರ್ಕಾರಿ ಅಧಿಕಾರಿಗಳಿಂದ ಅಥವಾ ಮಧ್ಯವರ್ತಿಗಳಾದ ಜಮೀನ್ದಾರರು ಮುಂತಾದ ಮಧ್ಯವರ್ತಿಗಳ ಮೂಲಕ ರೈತರಿಂದ ವಸೂಲಿ ಮಾಡಿ ಅದರಲ್ಲಿ ಸ್ವಲ್ಪ ಭಾಗವನ್ನು ಮಧ್ಯವರ್ತಿಗಳಿಗೆ ಕಮೀಷನ್ ನೀಡುತ್ತಿದ್ದರು. ಈ ಮಧ್ಯವರ್ತಿಗಳು ಪ್ರಮುಖವಾಗಿ ಕಂದಾಯ ವಸೂಲಿಗಾರರಾಗಿದ್ದರೂ ಕೆಲವು ವೇಳೆ ಸ್ವಂತ ಜಮೀನನ್ನು ಅದೇ ವ್ಯಾಪ್ತಿಯಲ್ಲಿ ಉಳ್ಳವರಾಗಿದ್ದರು.
1765ರಲ್ಲಿ ಈಸ್ಟ್ ಇಂಡಿಯಾ ಕಂಪನಿಯು ಬಂಗಾಳ, ಬಿಹಾರ ಮತ್ತು ಒರಿಸ್ಸಾಗಳ ದಿವಾನಿ ಅಥವಾ ಕಂದಾಯದ ಹತೋಟಿಯನ್ನು ಹೊಂದಿತು. ಆ ಪ್ರಾಂತ್ಯದಲ್ಲಿ ಮೊದಲಿನ ಪದ್ಧತಿಯನ್ನೇ ಉಳಿಸಿಕೊಳ್ಳಲು ಪ್ರಯತ್ನಿಸಿತು. ಏಕೆಂದರೆ ಹಳೇ ಪದ್ಧತಿಯಿಂದ ಕಂದಾಯ ಸಂಗ್ರಹಣೆಯು 1722ರಲ್ಲಿ 1,42,90,000 ರೂ. ಇದ್ದುದು 1764ರಲ್ಲಿ 1,81,80,000 ರೂಗಳಿಗೆ ಹೆಚ್ಚಿತು ಮತ್ತು 1771ರಲ್ಲಿ 2,34,000,00 ರೂಗೆ ಹೆಚ್ಚಿತು. ಹೀಗೆ ಕಂದಾಯವು ಹಳೆಯ ಪದ್ಧತಿಯಿಂದ ಹೆಚ್ಚಿದರೂ ವಾರನ್ ಹೇಸ್ಟಿಂಗ್ಸ್‌ನು ಹರಾಜಿನ ಮೂಲಕ ಹೆಚ್ಚು ಕಂದಾಯದ ಮೊತ್ತಕ್ಕೆ ಹರಾಜು ಕೂಗಿದವರಿಗೆ ಕೊಡುವ ಪದ್ಧತಿ ಜಾರಿಗೆ ತಂದ. ಆದರೆ ಈ ಪದ್ಧತಿಯು ಯಶಸ್ವಿಯಾಗಲಿಲ್ಲ. ಹರಾಜಿನಲ್ಲಿ ಜಮೀನ್ದಾರರು ಹೆಚ್ಚು ಮೊತ್ತದ ಕಂದಾಯ ಕೊಡಲು ಒಪ್ಪಿದರೂ ಮತ್ತು ಪರಸ್ಪರ ಪೈಪೋಟಿಯಿಂದ ಹರಾಜಿನ ವೇಳೆ ಜಮೀನ್ದಾರು ಹೆಚ್ಚು ಕಂದಾಯಕ್ಕೆ ಒಪ್ಪಿ ನಂತರ ವಸೂಲಿಯಲ್ಲಿ ವಿಫಲರಾಗುತ್ತಿದ್ದರು. ಹೀಗೆ ಕಂದಾಯದ ಪ್ರಮಾಣವು ಏರುಪೇರಾಗುತ್ತಿತ್ತು ಮತ್ತು ನಿಗಧಿಯುತ ಕಂದಾಯ ಬರುತ್ತಿರಲಿಲ್ಲ. ಹೀಗೆ ಬ್ರಿಟಿಷರು ಆಗಾಗ್ಗೆ ಕಂದಾಯ ವ್ಯವಸ್ಥೆಯನ್ನು ಬದಲಾಯಿಸುತ್ತಿದ್ದರಿಂದ ರೈತ ಮತ್ತು ಜಮೀನ್ದಾರರು ಮುಂದಿನ ವರ್ಷದ ಸರ್ಕಾರದ ನೀತಿಯ ಬಗ್ಗೆ ಅನುಮಾನಪಟ್ಟು ಸಾಗುವಳಿಯ ಅಭಿವೃದ್ಧಿಗೆ ಗಮನ ಕೊಡುತ್ತಿರಲಿಲ್ಲ.
ಬ್ರಿಟಿಷರ ಭೂ ಕಂದಾಯ ನೀತಿಯಿಂದಾದ ದುಷ್ಪರಿಣಾಮಗಳು
ಈ ಹೊಸ ಒಪ್ಪಂದಗಳಿಂದ ಬಂದ ಜಮೀನ್ದಾರರು ಕಂದಾಯ ವಸೂಲಿಗೆ ಗಮನ ಕೊಟ್ಟರೇ ಹೊರತು ಕೃಷಿಯ ಬ್ರಿಟಿಷ್ ಕಂದಾಯ ಪದ್ಧತಿಯು ಭಾರತೀಯ ರೈತರ ಆರ್ಥಿಕತೆಯ ಮೇಲೆ ಅನರ್ಥವನ್ನುಂಟು ಮಾಡಿತು.
ಈ ಜಮೀನ್ದಾರರು ಸರ್ಕಾರಕ್ಕೆ ನಿಗಧಿಯಾದ ಕಂದಾಯದ ಮೊತ್ತವನ್ನು ಕೊಡುವ ಒಪ್ಪಂದ ಮಾಡಿಕೊಂಡು ಅಭಿವೃದ್ಧಿಗೆ ಗಮನ ಕೊಡಲಿಲ್ಲ ಮತ್ತು ವಿದೇಶಿ ಶಕ್ತಿಯೊಂದಿಗೆ ಮಧ್ಯವರ್ತಿಗಳಾಗಿ ಕಾರ್ಯ ನಿರ್ವಹಿಸುವಂತಾದರು “ರಾಜಕೀಯವಾಗಿ ಅದಕ್ಷರಾದ ಮತ್ತು ಆರ್ಥಿಕವಾಗಿ ಅಬಲರಾದ ರೈತರಿಂದ ತಮಗೆ ಬೇಕಾದಷ್ಟನ್ನು ಪಡೆಯುವ ಪಕ್ಕನ್ನು ಪಡೆದುಕೊಂಡರು.’ ಈ ಹೊಸ ಒಪ್ಪಂದದ ಒತ್ತಡವು ಹಳೆಯ ಗ್ರಾಮದ ರಾಜಕೀಯ, ಸಾಮಾಜಿಕ, ಆರ್ಥಿಕ ಪರಿಸ್ಥಿತಿಯನ್ನು ಮುರಿದಂತಾಯಿತು. ಹೊಸ ಸಾಮಾಜಿಕ ವರ್ಗಗಳಾದ ಭೂ ಒಡೆಯರು, ವರ್ತಕರು, ಹಣ ಲೇವಾದೇವಿಗಾರರು ಪ್ರಮುಖ ಸ್ನಾನವನ್ನು ಪಡೆದರು. ಮತ್ತೊಂದು ಕಡೆ ಸಾಗುವಳಿದಾರರು, ಕರಕುಶಲಗಾರರು
ಮತ್ತಿತರ ಗ್ರಾಮದ ವೃತ್ತಿಗಾರರು ಹೊಸ ವ್ಯವಸ್ಥೆಯಿಂದ ಉಂಟಾದ ಪೈಪೋಟಿಯಿಂದ ಮೂಲೆಗುಂಪಾದರು. ಇದೆಲ್ಲ ದರ ಪರಿಣಾಮವಾಗಿ ಭೂರಹಿತ ಶ್ರಮಿಕ ವರ್ಗವು ಬೆಳವಣಿಗೆಗೊಂಡಿತು. ಬ್ರಿಟಿಷ್ ಕಂದಾಯ ಪದ್ದತಿಯು ಕೃಷಿಯನ್ನು ವಾಣಿಜ್ಯಕರಣಗೊಳಿಸಿತು.
ಹೆಚ್ಚಿನ ಕಂದಾಯ ವಿಧಿಸುವಿಕೆಯು ಕೃಷಿಯ ಬೆಳವಣಿಗೆಯನ್ನು ಕುಂಠಿತಗೊಳಿಸಿತು ಮತ್ತು ಸಾಗುವಳಿದಾರ ವರ್ಗವನ್ನು ಬಡತನಕ್ಕೆ ದೂಡಿತು. ಕೃಷಿಯ ಮೇಲಾದ ದುಷ್ಪರಿಣಾಮವು ಗ್ರಾಮೀಣ ಸಾಲ, ಕಾಮ, ರೋಗರುಜಿನ ಮತ್ತು ನಿರುದ್ಯೋಗ ಸೃಷ್ಟಿಗೆ ಕಾರಣವಾದವು. ಕೃಷಿಯು ವಾಣಿಜ್ಯಕರಣಗೊಂಡಿದ್ದರಿಂದ ರೈತರು ವಾಣಿಜ್ಯ ಬೆಳೆಗಳಾದ ಪ್ರಾರಂಭಿಸಿದರು. ಈ ವಾಣಿಜ್ಯ ಬೆಳೆಗಳನ್ನು ಮಾರಾಟಮಾಡಲು ಮಧ್ಯವರ್ತಿಗಳು ಹುಟ್ಟಿಕೊಂಡರು. ಈ ರೈತರ ಹತ್ತಿ, ಸೆಣಬು, ಗೋಧಿ, ಕಬ್ಬು, ಎಣ್ಣೆ ಕಾಳುಗಳು, ಇಂಡಿಗೊ, ಅಫೀಮು ಮುಂತಾದವನ್ನು ಬೆಳೆಯಲು ಬಡತನದ ಉಪಯೋಗ ಪಡೆದು ಸಾಲ ನೀಡಿ ಉತ್ಪಾದನೆಗೊಂಡ ಬೆಳೆಯನ್ನು ಕಡಿಮೆ ಬೆಲೆಗೆ ಪಡೆಯುವಂತಾರ ಮಧ್ಯವರ್ತಿಗಳು ಆರ್ಥಿಕವಾಗಿ ಅಭಿವೃದ್ಧಿಯಾಗಲು ಕಾರಣವಾಯಿತು.
ಗ್ರಾಮೀಣ ಸಾಲ:
ಮೇಲ್ಕಂಡ ಸಮಸ್ಯೆಗಳಿಂದ ರೈತನು ಪಾರಾಗಲು ಸಾಲಮಾಡಿದ. ಆದರೆ ಅದನ್ನು ಹಿಂತಿರುಗಿಸಲು ವಿಫಲನಾದಾಗ ಸಾಲಗಾರನಾದ. 1880ರ ನಂತರ ಗ್ರಾಮೀಣ ಸಾಲವು ರೇಖಾಗಣಿತದ ಮಾದರಿಯಲ್ಲಿ ಹೆಚ್ಚಿತು. ಭೂ ಒಡೆತನ ಹೊಂದಿದ್ದ ಭಾಗದ ರೈತರು ಸಾಲದಲ್ಲಿ ಮುಳುಗಿದ್ದರು ಮತ್ತು ಅದೇ ಮೊತ್ತದ ಜನ ಸಾಲವನ್ನು ಹಿಂತಿರುಗಿಸಲಾರದ ಮಟ್ಟ ತಲುಪಿದ್ದರು. ಈ ಗ್ರಾಮೀಣ ಸಾಲದ ಬೆಳವಣಿಗೆಗೆ ಪ್ರಮುಖ ಕಾರಣವೆಂದರೆ ಶೇ. 75 ಭಾಗದ ರೈತರು ತಮ್ಮ ಜೀವನಾವಶ್ಯಕ ಆಹಾರವನ್ನು ತಮ್ಮ ಭೂಮಿಯಲ್ಲಿ ಬೆಳೆಯುತ್ತಿರಲಿಲ್ಲ. 1929ರ ವಿಶ್ವದ ಆರ್ಥಿಕ ಮುಗ್ಗಟ್ಟು ಭಾರತೀಯ ರೈತ ವರ್ಗವನ್ನು ಬಹಳ ಕ್ರೂರವಾಗಿ ಶಿಕ್ಷಿಸಿತು. ಬೆಲೆಗಳು ಪೂರ್ಣ ಇಳಿದಿದ್ದರಿಂದ ರೈತನ ಉತ್ಪಾದನೆಗೆ ಬೆಲೆ ಸಿಗಲಿಲ್ಲ. ಕೇಂದ್ರೀಯ ಬ್ಯಾಂಕಿಂಗ್ ವಿಚಾರಣಾ ಸಮಿತಿ 1931ರಲ್ಲಿ ಇಂಡಿಯಾದ ಪ್ರಾಂತ್ಯಗಳ ಒಟ್ಟು ಕೃಷಿಸಾಲ ಸುಮಾರು 900 ಕೋಟಿ ರೂ.ಗಳೆಂದು ವರದಿ ಮಾಡಿತ್ತು. ಆದರೆ 1936ರ ಕೊನೆಯ ವೇಳೆಗೆ ಆ ಸಂಖ್ಯೆ 1,800 ಕೋಟಿ ಮುಟ್ಟಿತು. ಹೆಚ್ಚಿನ ಬಡ್ಡಿಗೆ ಪಡೆದ ಈ ಗ್ರಾಮೀಣ ಸಾಲದ ಪೈಕಿ ಹೆಚ್ಚಿನ ಭಾಗ ಅನುತ್ಪಾದಕ ಸಾಲವಾಗಿತ್ತು. ಸರ್ಕಾರ ಸಮಸ್ಯೆಯನ್ನೆದುರಿಸಲು ಆಗಾಗ್ಗೆ ಕೆಲವು ಕ್ರಮಗಳನ್ನು ಕೈಗೊಂಡಿತು. 1918ರಲ್ಲಿ ಕ್ರೋಡೀಕರಿಸಲಾದ ಮತ್ತು ತಿದ್ದುಪಡಿಮಾಡಲಾದ ಕುಸಿದ ಬಡ್ಡಿ ಪದ್ಧತಿ ಸಾಲಗಳ ಕಾಯ್ದೆ ನ್ಯಾಯಬದ್ಧವಾಗಿ ವಸೂಲಿ ಮಾಡಬಹುದಾದ ಗರಿಷ್ಠ ಬಡ್ಡಿ ಮೊಗಲಗನ್ನು ನಿಗಧಿಪಡಿಸಲು ಪ್ರಯತ್ನಿಸಿತು. ಕೃಷಿಗೆ ಸಂಬಂಧಿಸಿದ ರಾಯಲ್ ಆಯೋಗವು ಸಾಲ ನೀಡುವುದನ್ನು ನಿಯಂತ್ರಿಸಲು ಶಿಫಾರಸು ಮಾಡಿತು. ಕೆಲವು ಪ್ರಾಂತೀಯ ಬ್ಯಾಂಕಿಂಗ್ ಸಮಿತಿಗಳು ಸಾಲ ನೀಡುವವರಿಗೆ ರಹದಾರಿ ಪದ್ಧತಿ ಜಾರಿಗೆ ತರಲು ಶಿಫಾರಸು ಮಾಡಿದವು. ಭೂ ವರ್ಗಾವಣೆಯನ್ನು ಸೀಮಿತಗೊಳಿಸಲು ಭೂ ಪರಾಧೀನ ಕಾಯ್ದೆ ಗಳನ್ನು ಮಾಡಲಾಯಿತು. ಉದಾಹರಣೆಗೆ ಪಂಜಾಬಿನ ಭೂ ಪರಾಧೀನ ಕಾಯ್ದೆ (1900). ಕೃಷಿ ಮಾಡದ ವರ್ಗಗಳವರು ಕೃಷಿಕರಿಂದ ಜಮೀನು ಕೊಳ್ಳುವುದನ್ನು ಅಥವಾ ಇಪ್ಪತ್ತು ವರ್ಷಗಳಿಗಿಂತ ಹೆಚ್ಚಿನ ಅವಧಿಗೆ ಗುತ್ತಿಗೆ ಪಡೆಯುವುದನ್ನು ನಿಷೇಧಿಸಿತು.
ಆದರೂ ಗ್ರಾಮ ಪೀಡಿತ ಪ್ರದೇಶಗಳಲ್ಲಿ ಸರ್ಕಾರವು ತೋರಿದ ಕಂದಾಯ ವಿನಾಯಿತಿ ಕಡಿಮೆ ಪ್ರಮಾಣದ್ದಾಗಿತ್ತು. ಜಮೀನ್ದಾರಿ ಪದ್ಧತಿ ಇದ್ದ ಕಡೆ ಕಂದಾಯ ಸಲ್ಲಿಸಲು ಆಗದ ರೈತರು ಜಮೀನ್ದಾರರ ಕಿರುಕುಳ ತಾಳಲಾರದೆ ಸಾಲಗಾರರ ಬಳಿ ಸಾಲ ಮಾಡಿದರು. ಸಾಲವನ್ನು ತೀರಿಸಲಾಗದಿದ್ದಾಗ ಹೆಚ್ಚಿನ ಪ್ರಮಾಣದ ಭೂಮಿಯು ರೈತನ ಒಡೆತನದಿಂದ ಲೇವಾದೇವಿಗಾರನಿಗೆ ಬದಲಾಯಿತು. ಲೇವಾದೇವಿಗಾರರು ಬಡ್ಡಿಯ ದರವನ್ನು ಶೇ. 12 ರಿಂದ ಊಹಿಸಲಾಗದಂಥ ಶೇ. 200 ರಿಂದ 300ಕ್ಕೆ ಏರಿಸಿದರು. ರೈತರ ಅಜ್ಞಾನವನ್ನು ಉಪಯೋಗಿಸಿಕೊಂಡು ಮೋಸದ ಕಾಗದ ಪತ್ರಗಳಿಗೆ ಸಹಿ ಪಡೆದು ಭೂಮಿಯನ್ನು ಕಸಿದುಕೊಂಡರು. ನ್ಯಾಯಾಲಯದಲ್ಲಿ ಹೆಚ್ಚಿನ ಹಣ ಖರ್ಚಾಗುತ್ತಿದ್ದುದರಿಂದ ರೈತರು ದೂರವಿರುವಂತಾಯಿತು. ಸರ್ ಡೇನಿಯಲ್ ಹ್ಯಾಮಿಲ್ಟನ್ ಅಭಿಪ್ರಾಯದಂತೆ ‘ಸಂಪೂರ್ಣ ದೇಶವು ಮಹಾಜನಗಳ ಕಪಿಮುಷ್ಟಿಯಲ್ಲಿದೆ. ಈ ಸಾಲವು ರೈತನನ್ನು ಗುಲಾಮಗಿರಿಗೆ ಇಳಿಸುತ್ತದೆ” ಎಂದಿದ್ದಾರೆ. ಈ ಗ್ರಾಮೀಣ ಸಾಲದಿಂದ ರೈತನನ್ನು ಪಾರು ಮಾಡಲು ಸರ್ಕಾರವು ಅನೇಕ ಗ್ರಾಮೀಣ ಪುನರಚನಾ ಕಾರ್ಯಗಳನ್ನು ಕೈಗೊಂಡು 1935-36ರಲ್ಲಿ 2 ಕೋಟಿ ವ್ಯಯಮಾಡಿತು. ಆದರೆ ರೈತ ಸಾಲದಿಂದ ಮುಕ್ತನಾಗಲಿಲ್ಲ.
ಕ್ಷಾಮಗಳು:
ಕ್ಷಾಮವೆಂದರೆ ‘ಸಮಾಜದಲ್ಲಿ ವಾಸಿಸುವ ಮಾನವನಿಗೆ ಬೇಕಾದ ಅಗತ್ಯ ವಸ್ತುಗಳ ಅಭಾವವಿದ್ದು ಅಥವಾ ಪೂರೈಕೆಯಲ್ಲಿ ಕೊರತೆ ಕಂಡು ಬಂದಾಗ ಕ್ಷಾಮ ಪರಿಸ್ಥಿತಿ ಉದ್ಭವಿಸುತ್ತದೆ.” ಕೇವಲ ಪ್ರಾಕೃತಿಕ ಕಾರಣಗಳಿಂದಲೇ ಇಮ ಉಂಟಾಗಲಾರದು. ಮಳೆ ಬಾರದೇ ಬೆಳೆನಾಶವಾಗಿ, ಅತಿವೃಷ್ಟಿಯಿಂದಾಗಿಯೂ, ಅಭಾವ ಪರಿಸ್ಥಿತಿಯುಂಟಾಗಿ ಕ್ರಮ ಉಂಟಾಗಬಹುದು. ಮತ್ತೆ ಕೆಲವೊಮ್ಮೆ ಮಾನವ ನಿರ್ಮಿತ ಕಾರಣಗಳಿಂದಲೂ ಕ್ಷಾಮ ಬರುವುದುಂಟು. ಆಡಳಿತದಲ್ಲಿ ನಿರ್ಲಕ್ಷತೆ, ಸರ್ಕಾರದ ಆಡಳಿತ ಯಂತ್ರದಲ್ಲಿ ನಿಷ್ಕ್ರಿಯತೆ, ಅದಕ್ಕಾಗಿ ಸರ್ಕಾರ ಸೂಕ್ತ ಪರಿಹಾರ ಕ್ರಮ ಕೈಗೊಳ್ಳದಿರುವುದು, ಆಹಾರ ಧಾನ್ಯವನ್ನು ದಲ್ಲಾಳಿಗಳು ಅಥವಾ ಇತರ ದಗಾಕೋರರು ಬಚ್ಚಿಡುವುದು, ಸರಿಯಾದ ವಿತರಣಾ ವ್ಯವಸ್ಥೆಯ ಕೊರತೆಯಿರುವುದು, ಅದಕ್ಕಿಂತ ಹೆಚ್ಚಾಗಿ ಲಾಭಗಳಿಸುವ ಮನೋಭಾವ ಈ ಮಾನವ ನಿರಿತ ಕಾರಣಗಳಿಂದಲೂ ಕ್ಷಾಮ ಸಂಭವಿಸಬಹುದು. ಬ್ರಿಟಿಷರು ಭಾರತವನ್ನು ತಮ್ಮ ವಸಾಹತುವಾಗಿ ಇಟ್ಟುಕೊಂಡು ಆಳಿದರೂ ಭಾರತದ ಅಭಿವೃದ್ಧಿಗೆ ಶ್ರಮಿಸಲಿಲ್ಲ. ಇದು ಭಾರತದ ಅಭಿವೃದ್ಧಿಗೆ ಅಂದರೆ ಆರ್ಥಿಕ ನೀತಿಗೆ ಮಾರಕವಾಯಿತು. ಬ್ರಿಟಿಷರು ಭಾರತಕ್ಕೆ ಬರುವುದಕ್ಕಿಂತ ಮುನ್ನ ಅಂದರೆ ದೆಹಲಿ ಸುಲ್ತಾನರ ಕಾಲದಲ್ಲಿಯೂ ಕ್ರಮ ಸಂಭವಿಸಿದವು. ಆದರೆ ಕ್ಷಾಮ ಬಂದಾಗ ಮಹಮ್ಮದ್ ಬಿನ್ ತೊಘಲಕನೂ ಸಾಕಷ್ಟು ಪರಿಹಾರ ಕಾರ್ಯ ಕೈಗೊಂಡನು. ಅದೇ ರೀತಿ ಮೊಗಲ್ ಅರಸರು ಕ್ರಾಮ ಬಂದಾಗ ಜನರಿಗೆ ಆಹಾರ, ವಸತಿ, ಉದ್ಯೋಗ ಕಲ್ಪಿಸಿ ಸೂಕ್ತ ಪರಿಹಾರ ಕ್ರಮ ಕೈಗೊಂಡಿದ್ದುದನ್ನು ಬ್ರಿಟಿಷ್ ಅಧಿಕಾರಿಗಳೇ ಪ್ರಶಂಸಿಸಿದ್ದಾರೆ. ಈಸ್ಟ್ ಇಂಡಿಯಾ ಕಂಪನಿಯ ಅಳ್ವಿಕೆಯ ನೂರು ವರ್ಷಗಳ ಅವಧಿಯಲ್ಲಿ ಭಾರತದಲ್ಲಿ 12 ಕ್ಷಾಮಗಳು, 4 ಅಭಾವ ಪರಿಸ್ಥಿತಿಗಳು ಸಂಭವಿಸಿದುದನ್ನು ಕಾಣುತ್ತೇವೆ. ಅವುಗಳಲ್ಲಿ ಮುಖ್ಯವಾದವುಗಳೆಂದರೆ,
ಲಾರ್ಡ್ ಎಲ್ಲೆನ್ ಬರೋನ ಅಧಿಕಾರವಧಿಯಲ್ಲಿ ಎರಡು ಭೀಕರ ಕ್ಷಾಮಗಳು ತಲೆದೋರಿದವು. 1866ರ ಒರಿಸ್ಸಾದ ಕ್ಷಾಮವು ಭೀಕರ ರೂಪವನ್ನು ತಾಳಿದಾಗ ಬಂಗಾಳದಲ್ಲಿ ಲೆಫ್ಟಿನೆಂಟ್ ಗವರ್ನರ್ ಆಗಿದ್ದ ಸರ್‌ಸೆನೆಟ್ ಬೆಡನ್ ಜನರಿಗೆ ಬರಗಾಲದ ಅಪಾಯವೇನು ಇಲ್ಲವೆಂದು ತಿಳಿಸಿದನು. ಆದರೆ ಕ್ರಾಮಗಳ ಜೊತೆಯಲ್ಲಿಯೇ ಅನೇಕ ಪ್ರವಾಹಗಳು ಉಂಟಾಗಿ ಅನೇಕ ಜನ ಮರಣಹೊಂದಿ, ರೈತರು ತಮ್ಮ ಜಮೀನನ್ನು ಕಳೆದುಕೊಂಡು ನಿರ್ಗತಿಕರಾದರು. ಅಂದಿನ ಒರಿಸ್ಸಾದಲ್ಲುಂಟಾದ ಕಾಮದ ಬಗ್ಗೆ ಲಾರೆನ್ಸ್ ಈ ರೀತಿ ಅಭಿಪ್ರಾಯಪಟ್ಟಿದ್ದಾನೆ.
“ಜನರು ಆಹಾರ ವಸತಿಯಿಲ್ಲದೇ ಬಹಳ ಕಷ್ಟಪಟ್ಟರು. ಅನಾವೃಷ್ಟಿಯು ಬಿಟ್ಟಿದ್ದನ್ನು ಪ್ರವಾಹಗಳು ಕೊಚ್ಚಿಕೊಂಡು ಹೋದವು.” ಇದೇ ರೀತಿ ಬುಂದೇಲ್‌ಖಂಡ ಮತ್ತು ರಾಜಪುಟಾಣದಲ್ಲಿ 1868-69ರಲ್ಲಿ ಕ್ಷಾಮ ಉಂಟಾಯಿತು.”
ರೈತರಂತೂ ಬಹಳ ಕಷ್ಟ ನಷ್ಟ ಅನುಭವಿಸಿದರು. ಆದರೆ ಒರಿಸ್ಸಾದಲ್ಲಿ ಸಂಭವಿಸಿದ ಕ್ಷಾಮದ ಅರಿವನ್ನು ತಿಳಿದಿದ್ದ ಲಾರ್ಡ್ ಎಲ್ಲೆನ್ ಬರೋ ಮುಂಜಾಗ್ರತೆ ವಹಿಸಿದನು. ಆದರೆ ಸರ್ ಜಾರ್ಜ್ ಕ್ಯಾಂಪ್‌ಬೆಲ್ ಪ್ರಕಾರ ’19ನೇ ಶತಮಾನದ ಭೀಕರ ಕಾಮದಲ್ಲಿ ಎಲ್ಲೆಲ್ಲಿಯೂ ಹೆಣಗಳು, ಅಸ್ಥಿ ಪಂಜರಗಳನ್ನು ಕಂಡು ನನಗೆ ದಿಗ್ಧಮೆಯಾಯಿತು” ಬೊಂಬಾಯಿ, ಮೈಸೂರು ರಾಜ್ಯಗಳಲ್ಲಿ ಕ್ಷಾಮ ಉಲ್ಬಣಗೊಳಿಸಿತು. ಇದರ ಹಿಂದೆಯೇ ವಿಷಮಶೀತಜ್ಞರ, ಕಾಲರಾ, ಎಂದಿದ್ದಾನೆ. 1876-80ರಲ್ಲಿ ಲಾರ್ಡ್ ಲಿಟ್ಟನ್ ವೈಸ್‌ರಾಯ್ ಆಗಿದ್ದ ಕಾಲದಲ್ಲಿ ಮದ್ರಾಸ್, ಹೈದರಾಬಾದ್, ಪ್ಲೇಗು ಬಂದಿತು. ಇದೇ ಸಮಯದಲ್ಲಿ ಮಧ್ಯ ಭಾರತ ಹಾಗೂ ಪಂಜಾಬಿನ ಕೆಲವು ಭಾಗಗಳಲ್ಲಿ ಕಾಮ ಆವರಿಸಿತು. ಒಟ್ಟಿನಲ್ಲಿ ಈ ಎಲ್ಲಾ ಪ್ರದೇಶಗಳಿಂದ 10 ಲಕ್ಷಕ್ಕೂ ಹೆಚ್ಚು ಮಂದಿ ಸತ್ತರು. ಬ್ರಿಟಿಷರಿಗೆ ಬರುತ್ತಿದ್ದ ಎರಡು ಕೋಟಿ ಕಂದಾಯದ ಹಣ ನಿಂತುಹೋಯಿತು. ಭಾರತದಲ್ಲಿ ಪರಿಹಾರದ ತತ್ವ ಮತ್ತು ಶ್ರಮವನ್ನು ನಿಶ್ಚಿತವಾದ ಆಧಾರದ ಮೇಲೆ ಕೈಗೊಳ್ಳದಿದ್ದುದರಿಂದ ಪರಿಸ್ಥಿತಿ ಚಿಂತಾಜನಕವಾಗಿತ್ತು. ಹೆಚ್ಚು ಸಂಖ್ಯೆಯಲ್ಲಿ ಸಾವುನೋವುಗಳು ಸಂಭವಿಸಿದವು. ಇಂತಹ ಸಮಯದಲ್ಲಿಯೂ ದೆಹಲಿಯಲ್ಲಿ ದರ್ಬಾರನ್ನು ಏರ್ಪಡಿಸಿಕೊಂಡ ಬ್ರಿಟಿಷ್ ಅಧಿಕಾರಿಗಳು 1877ರ ಮೊದಲನೆ ದಿನ ವಿಕ್ಟೋರಿಯಾ ಮಹಾರಾಣಿ ಭಾರತದ ಚಕ್ರವರ್ತಿನಿ ಎಂಬುದಾಗಿ ಘೋಷಿ, ಐಷಾರಾಮವಾಗಿದ್ದರು.
2ನೇ ಲಾರ್ಡ್ ಎಲ್ಲೆನ್ ಬರೋ ವೈಸ್‌ರಾಯಿಯಾಗಿ ಪದವಿ ಸ್ವೀಕರಿಸಿದ ಮರು ವರ್ಷವೇ 1896ರಲ್ಲಿ ಮಳೆ ಬೀಳದೇ ಅನಾವೃಷ್ಠಿಯುಂಟಾಗಿ ಪಂಜಾಬ್, ರಾಜಸ್ತಾನ, ಆಯೋಧ್ಯೆ, ಬಿಹಾರ, ಬಂಗಾಳ, ಬೊಂಬಾಯಿ, ಮದ್ರಾಸ್‌ಗಳಲ್ಲಿ ಕ್ಷಾಮ ತಲೆದೋರಿ ಸುಮಾರು 7 ಲಕ್ಷ ಜನ ಬ್ರಿಟಿಷ್ ಭಾರತದಲ್ಲಿ ಮೃತರಾದರು. ಸುಮಾರು 140 ಲಕ್ಷದಷ್ಟು ಜನರು ಸಂಸ್ಥಾನ ರಾಜರುಗಳ ಆಶ್ರಯವನ್ನು ಪಡೆದರು. ಇಷ್ಟೆಲ್ಲದರ ಜೊತೆಗೆ 1896ರಲ್ಲಿ ಬೊಂಬಾಯಿಯಲ್ಲಿ ಪ್ಲೇಗು ಕಾಣಿಸಿಕೊಂಡಿತು. 1897ರಲ್ಲಿ ಪೂನಾದಲ್ಲಿ ಸಿಟ್ಟಿಗೆದ್ದ ಜನತೆ ಇಬ್ಬರು ಬ್ರಿಟಿಷ್ ಅಧಿಕಾರಿಗಳನ್ನು ಕೊಂದರು. ನಂತರ ಬೊಂಬಾಯಿಯಲ್ಲಿ ಜನತೆ ಬ್ರಿಟಿಷ್ ಆಡಳಿತದ ವಿರುದ್ಧ ದಂಗೆಯೆದ್ದರು. ನಂತರ ಭಾರತದ ವೈಸ್‌ರಾಯ್ ಆಗಿ ಬಂದ ಲಾರ್ಡ್ ಕರ್ಜನ್ (1899-1905) ಭಾರತದಲ್ಲಿನ ಮುಂದುವರಿದ ಕಾಮ, ಪ್ಲೇಗು, ರೋಗರುಜಿನಗಳ ವಿರುದ್ಧ ಹೋರಾಡಬೇಕಾಯಿತು. ಈ ಕಾಮವೂ ಹಿಂದಿನ ಕಾಮವನ್ನೇ ಹಿಂಬಾಲಿಸಿ ಬಂದಿತ್ತಾದರೂ ಭಾರತ ಭೀಕರವಾದ ಕಾಲರಾ, ಮಲೇರಿಯಾದ ದವಡೆಗೆ ಸಿಲುಕಿತು. ಪಶ್ಚಿಮ ಭಾರತ ಮತ್ತು ದಕ್ಷಿಣ ಭಾರತ ಇವುಗಳು ಸಹ ಕ್ಷಾಮಕ್ಕೆ ಬಲಿಯಾದವು. ಈ ಪರಿಸ್ಥಿತಿಯು ಉಪವಾಸದಿಂದ ನರಳುತ್ತಿದ್ದ ಜನರ ಸಂಕಷ್ಟಗಳನ್ನು ತೀವ್ರಗೊಳಿಸಿತು. ಸುಮಾರು 4,75,000 ಚದರ ಮೈಲು ಪ್ರದೇಶದಲ್ಲಿ ಅಭಾವ ಪರಿಸ್ಥಿತಿ ಹರಡಿ ಸುಮಾರು 6 ಕೋಟಿ ಜನರು ಸಂಕಷ್ಟದಲ್ಲಿ ಸಿಲುಕಿಕೊಂಡರು. ಸುಮಾರು 10 ಲಕ್ಷ ಜನ ಮರಣ ಹೊಂದಿದರು. ಕಾನ್‌ಪುರದಲ್ಲಿ ಗಲಭೆ ಸಂಭವಿಸಿ ಸಾವಿಗೆ ತುತ್ತಾದವರ ಸಂಖ್ಯೆ 400ಕ್ಕೂ ಮೀರಿತ್ತೆಂದು ಅಂದಾಜು ಮಾಡಲಾಗಿದೆ. ಈ ಮೇಲಿನ ಎಲ್ಲಾ ಕಾಮಗಳು ಬ್ರಿಟಿಷ್ ಆಡಳಿತದ ನಿಷ್ಕ್ರಿಯತೆಯಿಂದಾಗಿ ಸಂಭಿವಿಸಿದರೂ, ಬಹುಪಾಲು ಕಾರಣ ಪ್ರಕೃತಿಗೆ ಸೇರಿದ್ದಿತೆನ್ನಬಹುದು. ಆದರೆ 1767 ರಿಂದ 1770ರ ಅವಧಿಯಲ್ಲಿ ಸಂಭವಿಸಿದ ಕ್ಷಾಮಕ್ಕೆ ಬ್ರಿಟಿಷರು ಅನುಸರಿಸಿದ ನೀತಿಯೇ ಬಹುಪಾಲು ಕಾರಣವೆನ್ನಬಹುದು.
ವಾರನ್ ಹೇಸ್ಟಿಂಗ್ಸ್ ಭಾರತದ ಗವರ್ನರ್ ಆಗಿದ್ದ 1767-70ರ ಅವಧಿಯಲ್ಲಿ ಬಂಗಾಳ ಮತ್ತು ಭಾರತದ ಬಹು ಭಾಗದಲ್ಲಿ ಕ್ಷಾಮ ಸಂಭವಿಸಿತು. ಇಂಗ್ಲೆಂಡಿನಲ್ಲಿ ಕೈಗಾರಿಕಾ ಕ್ರಾಂತಿಯಲ್ಲುಂಟ • ಬೆಳವಣಿಗೆಯಿಂದ ಇಂಗ್ಲೆಂಡ್ ಅತ್ಯಧಿಕ ಪ್ರಮಾಣದಲ್ಲಿ ಕಾರ್ಮಿಕರನ್ನು ನೇಮಿಸಿಕೊಳ್ಳತೊಡಗಿತು. ಇದರಿಂದ ಇಂಗ್ಲೆಂಡ್‌ನ ಕಾರ್ಮಿಕರಿಗೆ ಬೇಕಾದ ಅಪಾರ ಆಹಾರ ಪದಾರ್ಥವನ್ನು ಪೂರೈಸಲು ತೊಡಗಿದರು. ಇದರಿಂದ ಭಾರತದ ಜನತೆ ಆಹಾರದ ಅಭಾವಕ್ಕೆ ಸಿಲುಕಿ ಇನ್ನಿತರ ಕಾಯಿಲೆಯಿಂದ ಬಳಲಿತು. ಬಂಗಾಳದ ಸುಮಾರು / ಭಾಗದ ಜನಸಂಖ್ಯೆ ಅಂದರೆ ಹೆಚ್ಚು ಕಡಿಮೆ ಒಂದು ಕೋಟಿ ಜನ ಮರಣ ಹೊಂದಿದರು, ಬಹುಭಾಗದ ಭೂಮಿ ಪಾಳುಬಿದ್ದಿತು. 1770ರಲ್ಲಿ ಕಂಪನಿಯ ಸೇವಕನೊಬ್ಬ “ಕಡುಬಡತನದ ದೃಶ್ಯ ಇನ್ನೂ ಮುಂದುವರೆಯುತ್ತದೆ. ಅದರ ವರ್ಣನೆಯನ್ನು ಕೇಳಿದರೆ ಮಾನವ ಜನಾಂಗ ತಲ್ಲಣಿಸುವುದು ಸತ್ಯ” ಎಂದು ತಿಳಿಸಿದ್ದಾನೆ.


