Court orders are also Laws- ನ್ಯಾಯಾಲಯದ ಆದೇಶಗಳೂ ಕಾನೂನುಗಳಾಗುತ್ತವೆ -ಮಾಹಿತಿ-01

Court orders are also Laws- ನ್ಯಾಯಾಲಯದ ಆದೇಶಗಳೂ ಕಾನೂನುಗಳಾಗುತ್ತವೆ -ಮಾಹಿತಿ-01

 

Court orders are also Laws: ಈ ಸಂದರ್ಭದಲ್ಲಿ ಗಮನದಲ್ಲಿ ಇಡಬೇಕಾದ ಮಹತ್ವದ ಅಂಶವೇನೆಂದರೆ ನ್ಯಾಯಾಲಯಗಳ ಆದೇಶಗಳು ಕಾನೂನುಗಳೇ ಎಂದು ತಿಳಿಯಬೇಕು. ಸಂವಿಧಾನದ ವಿಧಿ 141 ರ ಪ್ರಕಾರ ರಾಷ್ಟ್ರದ ಸವೋಚ್ಛ ನ್ಯಾಯಾಲಯದ ಆದೇಶವು ರಾಷ್ಟ್ರದ ಎಲ್ಲ ನ್ಯಾಯಾಲಯಗಳು ಅನುಸರಿಸಲ್ಪಡಲೇಬೇಕಾದ ಕಡ್ಡಾಯವಾದ ವ್ಯವಧಾನವಾಗುತ್ತದೆ The law laid down by the Supreme Court is binding on all, not withstanding the fact that it is against the State or Private property and that is binding on even those who were not parties before the court (M/s Shenoy & Co., Bangalore Vs. Commercial Tax Officer, Circle -2, Bangalore (AIR 1985 SC 621-626; 1983 (1) ΚΑNT LJ 135).

ಉಚ್ಚ ನ್ಯಾಯಾಲಯವೂ ಕೂಡ ಆದೇಶವೊಂದರಲ್ಲಿ (Nagappa Vs. State of Karnataka ILR 1986-3093) ಘನ ನ್ಯಾಯಾಲಯದಲ್ಲಿ ಮುಕ್ತಾಯಗೊಂಡಿರುವ ಪ್ರಕರಣವೊಂದರಲ್ಲಿ ನೀಡಬೇಕಾದ ಸವಲತ್ತುಗಳ ಬಗ್ಗೆ ಅನುಸರಿಸಬೇಕಾದ ವಿಧಿ ವಿಧಾನಗಳ ಕುರಿತಾಗಿ ಸ್ಪಷ್ಟತೆಯನ್ನು ನೀಡಿದ್ದಾಗ, ಅದರಂತೆ ಎಲ್ಲ ಪ್ರಾಧಿಕಾರಗಳು ಘನ ನ್ಯಾಯಾಲಯದ ಆದೇಶದಲ್ಲಿನ ತತ್ವಗಳನ್ನು ಅನುಸರಿಸಲೇಬೇಕು. ಯಾವ ಕಾರಣಕ್ಕೂ ಮುಕ್ತಾಯಗೊಂಡ ಪ್ರಕರಣದಲ್ಲಿನ ಅರ್ಜಿದಾರನು ಇದ್ದ ಸಂದರ್ಭದಲ್ಲಿ ಇರುವ ಇತರ ನೌಕರನನ್ನು ನ್ಯಾಯಾಲಯಕ್ಕೆ ಹೋಗಿ ಪರಿಹಾರ ತೆಗೆದುಕೊಂಡು ಬಾ ಎಂದು ದೂಡಲು ಸಾಧ್ಯವಿಲ್ಲ. (it is indeed the duty of the authorities to extend the benefit of the concluded decision of this court to all other similar cases). ಆದ್ದರಿಂದ, ಸರ್ವೋಚ್ಚ ನ್ಯಾಯಾಲಯದ ಹಾಗು ರಾಜ್ಯದ ಉಚ್ಚ ನ್ಯಾಯಾಲಯದ ಆದೇಶವನ್ನು ಪ್ರಾಧಿಕಾರಗಳೂ ಕೂಡ ಅನುಸರಿಸತಕ್ಕದ್ದಾಗಿದೆ. ಅನ್ಯ ರಾಜ್ಯದ ಉಚ್ಚ ನ್ಯಾಯಾಲಯಗಳ ಆದೇಶಗಳು ನಮ್ಮ ಪ್ರಾಧಿಕಾರಗಳಿಗೆ ಮಾರ್ಗ ಸೂಚಿಗಳಾಗುತ್ತವೆ.

ಆಡಳಿತ ನ್ಯಾಯಮಂಡಳಿಗಳ ಆದೇಶಗಳು ಆಯಾ ರಾಜ್ಯಗಳಲ್ಲಿ ಅನುಸರಿಸಲ್ಪಡಲೇಬೇಕಾದ ಕಾನೂನುಗಳಾಗುತ್ತವೆ ಹಾಗು ಅನ್ಯ ರಾಜ್ಯಗಳಲ್ಲಿ ಅವುಗಳು ಮಾರ್ಗಸೂಚಿಗಳಾಗುತ್ತವೆ. ಆಡಳಿತ ನ್ಯಾಯಮಂಡಳಿಗಳು ಉಚ್ಚ ನ್ಯಾಯಾಲಯದ ಸರಿಸಮಾನ ನ್ಯಾಯಪೀಠವೆಂದು ತಿಳಿಯಬಹುದು.

ಆದರೆ, ಸರ್ವೋಚ್ಛ ನ್ಯಾಯಾಲಯದ ಮುಂದೆ ಬಂದ  Chandra Kumar Vs. Union of India (JT 1997 (3) SC 589-decided on 18.03.1987) ಪ್ರಕರಣದಲ್ಲಿನ ಆದೇಶದಂತೆ ಆಡಳಿತ ಮಂಡಳಿಯ ತೀರ್ಮಾನಗಳು ಆಯಾ ರಾಜ್ಯದ ಉಚ್ಚ ನ್ಯಾಯಾಲಯದ ವಿಭಾಗೀಯ ಪೀಠದಲ್ಲಿ ಪರಿಶೀಲನೆಗಾಗಿ ಬರಬಹುದಾಗಿದೆ.

ನ್ಯಾಯಾಲಯದ ಆದೇಶಗಳನ್ನು ಪಾಲಿಸಲೇಬೇಕೆಂಬ ಸಂದರ್ಭಗಳು:-

The decisions of the Courts necessarily to be implemented in the following cases:-

ಕೆಳ ನ್ಯಾಯಾಲಯ ನೀಡಿದ ಆದೇಶವನ್ನು ಯಥಾವತ್ತಾಗಿ ಪಾಲಿಸಲೇಬೇಕು. ನ್ಯಾಯಾಲಯದ ಆದೇಶವು ಪ್ರಾಧಿಕಾರಕ್ಕೆ ಹಿತ ವೆನಿಸದಿದ್ದಲ್ಲಿ ಕಾನೂನು ಇಲಾಖೆಯಿಂದ ಅಭಿಪ್ರಾಯ ಪಡೆಯುವುದು.ಮೇಲಿನ ನ್ಯಾಯಾಲಯದಲ್ಲಿ ಅಪೀಲನ್ನು ಸಲ್ಲಿಸಿ ತಡೆಯಾಜ್ಞೆ ತರಿಸಿಕೊಳ್ಳುವುದು. ತಡೆಯಾಜ್ಞೆ ಇಲ್ಲದೇ ಹೋದಲ್ಲಿ ನ್ಯಾಯಾಲಯದ ಆದೇಶವನ್ನು ಮೇಲಿನ ನ್ಯಾಯಾಲಯ ಎತ್ತಿ ಹಿಡಿಯುವತನಕ ಅಥವಾ ತಿರಸ್ಕರಿಸುವ ತನಕ ಪಾಲಿಸತಕ್ಕದ್ದು. ಅವಶ್ಯವೆನಿಸಿದಲ್ಲಿ ಕೆಳ ನ್ಯಾಯಾಲಯದ ಆದೇಶದ ಪರಿಪಾಲನೆ ಮಾಡುವ ಆದೇಶದಲ್ಲಿ ಮೇಲಿನ ನ್ಯಾಯಾಲಯದಲ್ಲಿ ಸಲ್ಲಿಸಲ್ಪಟ್ಟಿರುವ ಆಪಿಲು ಇತ್ಯರ್ಥವಾಗುವುದನ್ನು ಕಾಯ್ದಿರಿಸಿ ಹೊರಡಿಸಲಾಗಿದೆ ಎಂದು ಪಾಲಿಸಬಹುದು.

ನ್ಯಾಯಾಲಯದ ಆದೇಶದ ಪರಿಪಾಲನೆ ಕೈಗೊಳ್ಳಬೇಕಾಗಿಲ್ಲ ಎನ್ನುವ ಸಂದರ್ಭಗಳು.

The order of the Court need not be complied with in following circumstance.

1) ನ್ಯಾಯಾಲಯವೇ ನೀಡಿರುವ ಆದೇಶದಲ್ಲಿ ಆ ಆದೇಶವು ಆ ಪ್ರಕರಣಕ್ಕೆ ಮಾತ್ರ ಅನ್ವಯಿಸುತ್ತದೆ ಎಂದು ಹಾಗು ಈ ಆದೇಶದ ನಿರ್ದೆಶನಗಳನ್ನು ಪೂರ್ವಬಾವಿ ಆದೇಶವೆಂದು (Precedent) ಇತರ ಪ್ರಕರಣಗಳಿಗೆ ಅನ್ವಯಿಸತಕ್ಕದ್ದಲ್ಲವೆಂದು ಹೇಳಿದಾಗ ಇತರ ಪ್ರಕರಣಗಳಿಗೆ ಅದನ್ನು ಅನುಸರಿಸತಕ್ಕದ್ದಲ್ಲ.

2) ನ್ಯಾಯಾಲಯದ ಆದೇಶವನ್ನು ಪ್ರಾಧಿಕಾರವು ಜಾರಿ ಮಾಡಲು ಆದೇಶದ ಅರ್ಥವನ್ನು ತಿಳಿಯಲು ಸಾಧ್ಯವಾಗದೇ ಹೋದಲ್ಲಿ ಅಪಾರ್ಥ ಮಾಡಿ ಜಾರಿ ಮಾಡತಕ್ಕದ್ದಲ್ಲ (ಅದೇ ನ್ಯಾಯಾಲಯಕ್ಕೆ ಮೊರೆ ಹೋಗಿ ವಿಶ್ಲೇಷಣೆಯನ್ನು ಕೋರಬಹುದು).

3) ಒಂದು ನ್ಯಾಯಾಲಯದಲ್ಲಿ ನೀಡಿದ ಆದೇಶಕ್ಕೆ ವಿರುದ್ಧವಾಗಿ ಮೊದಲೇ ಆ ರಾಜ್ಯದ ಉಚ್ಚನ್ಯಾಯಾಲಯದಲ್ಲಿ ಅಥವಾ ರಾಷ್ಟ್ರದ ಸರ್ವೋಚ್ಛ ನ್ಯಾಯಾಲಯದಲ್ಲಿ ಅದೇ ರೀತಿಯ ಸಂದರ್ಭದಲ್ಲಿ ಬೇರೊಂದು ರೀತಿಯಲ್ಲಿ ತೀರ್ಮಾನ ಇದ್ದಲ್ಲಿ ಕೂಡಲೆ ಮೇಲಿನ ನ್ಯಾಯಾಲಯಕ್ಕೆ ಅಪೀಲು ಸಲ್ಲಿಸತಕ್ಕದ್ದು. ಅಲ್ಲಿಯ ತನಕ ಕೆಳ ನ್ಯಾಯಾಲಯದ ಆದೇಶವನ್ನು ತಡೆ ಹಿಡಿದಿರಬಹುದು.

4) ನ್ಯಾಯಾಲಯ ಒಂದು ವಿಷಯದಲ್ಲಿ ಆದೇಶವಿತ್ತಿದ್ದಾಗ ಆ ಆದೇಶದಿಂದ ಅತೃಪ್ತನಾದ ನೌಕರನು ಮೇಲಿನ ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತಂದಲ್ಲಿ ಕೆಳ ನ್ಯಾಯಾಲಯದ ಆದೇಶವನ್ನು ಜಾರಿ ಮಾಡತಕ್ಕದ್ದಲ್ಲ.

5) ಕೆಲವೊಮ್ಮೆ ನೌಕರನು ಪ್ರಾಧಿಕಾರದಲ್ಲಿ ಬೇಡಿದ ಡಿದ ವಿಷಯಕ್ಕೆ ಪರಿಹಾರವು ಪ್ರಾಧಿಕಾರದಿಂದ ನಿರಾಕರಣೆಯಾದಾಗ, ನ್ಯಾಯಾಲಯವು ಅರ್ಜಿದಾರನ ಕೋರಿಕೆಯನ್ನು ಪರಿಶೀಲಿಸತಕ್ಕದ್ದು ಎಂದು ಆದೇಶವಿತ್ತಾಗ ಅರ್ಜಿದಾರನು ಪ್ರಾಧಿಕಾರಕ್ಕೆ ಸಲ್ಲಿಸಿದ ವಿಷಯವನ್ನು ಮಂಜೂರು ಮಾಡತಕ್ಕದ್ದೆಂದೇ ತಿಳಿಯಬಾರದು. ನಿಯಮಾನುಸಾರ ನೌಕರನ ಕೋರಿಕೆಯನ್ನು ಪರಿಶೀಲಿಸಿ, ನೌಕರನು ಬೇಡಿರುವ ಸವಲತ್ತನ್ನು ನಿಯಮಗಳಲ್ಲಿ ನೀಡಲು ಪರಿಮಿತಿ ಇದ್ದಲ್ಲಿ ನೀಡಬಹುದು. ಇಲ್ಲದಿದ್ದಲ್ಲಿ ತಿರಸ್ಕರಿಸಲೂಬಹುದು.

ನ್ಯಾಯಾಲಯದ ಆದೇಶಗಳನ್ನು ಸ್ವೀಕರಿಸಿದ್ದಾಗ್ಯೂ ಪ್ರಾಧಿಕಾರವು ಆ ಬಗ್ಗೆ ಏನೂ ನಿರ್ಧಾರವನ್ನುಕೈಗೊಳ್ಳದೆ, ನ್ಯಾಯಾಲಯಗಳ ನಿಂದನೆಗೆ ಗುರಿಯಾಗಬಾರದು. ಪರಿಣಾಮವಾಗಿ ದಂಡನೆ ಅಥವಾ ಶಿಕ್ಷೆಯು ಸಾಧ್ಯ.

Court orders
ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

You cannot copy content of this page

error: Content is protected !!
Scroll to Top