Free Ai course for teachers: ಗ್ರಾಮೀಣ ಶಿಕ್ಷಕರಿಗೆ ಉಚಿತ ಎಐ ಕೋರ್ಸ್ 1ರಿಂದ 12ನೇ ತರಗತಿ ಬೋಧಕರಿಗೆ ಸುವರ್ಣ ಅವಕಾಶ
Free Ai course: ಗ್ರಾಮೀಣ ಶಿಕ್ಷಕರಿಗೆ ಉಚಿತ ಎಐ ಕೋರ್ಸ್ 1ರಿಂದ 12ನೇ ತರಗತಿ ಬೋಧಕರಿಗೆ ಸುವರ್ಣ ಅವಕಾಶ: ಗ್ರಾಮೀಣ ಪ್ರದೇಶದ 1ರಿಂದ 12ನೇ ತರಗತಿ ಶಿಕ್ಷಕರಿಗೆ ಉಚಿತ AI ಕೋರ್ಸ್ ಸುವರ್ಣ ಅವಕಾಶ. ಕೃತಕ ಬುದ್ಧಿಮತ್ತೆ ಮೂಲಕ ಬೋಧನಾ ಕೌಶಲ್ಯ ಹೆಚ್ಚಿಸಿಕೊಳ್ಳಲು ಈಗಲೇ ನೋಂದಣಿ ಮಾಡಿ.
ಐಐಟಿ ಮದ್ರಾಸ್ನ ಪ್ರವರ್ತಕ್ ಟೆಕ್ನಾಲಜೀಸ್ ಫೌಂಡೇಷನ್ ಭಾರತದಾದ್ಯಂತ ಗ್ರಾಮೀಣ ಶಾಲಾ ಶಿಕ್ಷಕರಿಗೆ ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರದಲ್ಲಿ ಉಚಿತ ತರಬೇತಿಯನ್ನು ನೀಡಲಿದೆ. ಇದಕ್ಕಾಗಿ ಕೇಂದ್ರ ಶಿಕ್ಷಣ ಸಚಿವಾಲಯದ ಸ್ವಯಂ ಪ್ಲಸ್ ಯೋಜನೆಯೊಂದಿಗೆ ಸಹಭಾಗಿತ್ವವನ್ನು ಹೊಂದಿದೆ. ಆಕಾಂಕ್ಷಿಗಳಿಗೆ ವಿವಿಧ ಕೋರ್ಸ್ ಗಳನ್ನು ಯಾವುದೇ ವೆಚ್ಚವಿಲ್ಲದೆ ಬೋಧಿಸಲಾಗುತ್ತಿದೆ.
ಫೆ.5ರಿಂದ ಆನ್ಲೈನ್ ಕೋರ್ಸ್ಗಳ ಬೋಧನೆ ಆರಂಭವಾಗಲಿದೆ ಎಂದು ತಿಳಿಸಲಾಗಿದೆ. ‘ಶಿಕ್ಷಕರಿಗಾಗಿ ಎಐ -ಕೆ12 ಶಿಕ್ಷಕರು’ (1ರಿಂದ 12ನೇ ತರಗತಿಯವರಿಗೆ) ಪ್ರಮಾಣಪತ್ರದ ಕೋರ್ಸ್ ಇದಾಗಿದ್ದು, ತರಗತಿಯ ಬೋಧನೆ ಮತ್ತು ಕಲಿಕೆಯಲ್ಲಿ ಎಐ ಅನ್ನು ಸಂಯೋಜಿಸಲು ಶಿಕ್ಷಕರನ್ನು ಅಗತ್ಯ ಕೌಶಲಗಳೊಂದಿಗೆ ಸಜ್ಜುಗೊಳಿಸಲಿದೆ.
ಆನ್ಲೈನ್ ಮೂಲಕ ಈ ಕೋರ್ಸ್ಗೆ ನೋಂದಾಯಿಸಿಕೊಳ್ಳಲು ಜ.31 ಕೊನೆಯ ದಿನಾಂಕವಾಗಿದೆ.
ಈ ಕೋರ್ಸ್ ಉದ್ದೇಶವೇನು?:
ಶಾಲೆಗಳು ಮತ್ತು ಕಾಲೇಜುಗಳಲ್ಲಿ ತಂತ್ರಜ್ಞಾನದ ಸಮಗ್ರ ಮತ್ತು ಜವಾಬ್ದಾರಿಯುತ ಬಳಕೆಯನ್ನು ಖಚಿತಪಡಿಸಿಕೊಳ್ಳುವುದು. ಇದಕ್ಕಾಗಿ ಕಲಿಕೆಯ ಫಲಿತಾಂಶಗಳನ್ನು ಹೆಚ್ಚಿಸಲು ಎಐ ಪರಿಕರಗಳು ಮತ್ತು ವಿಧಾನಗಳನ್ನು ಶಿಕ್ಷಕರು ಹೆಚ್ಚಿನ ವಿಶ್ವಾಸದಿಂದ ಅಳವಡಿಸಿಕೊಳ್ಳಲು ಸಹಾಯ ಮಾಡಲು ಈ 40 ತಾಸುಗಳ ಕೋರ್ಸ್ ವಿನ್ಯಾಸಗೊಳಿಸಲಾಗಿದೆ ಎಂದು ಫೌಂಡೇಷನ್ ತಿಳಿಸಿದೆ.
ಕೋರ್ಸ್ನ ಸ್ವರೂಪ:
▪️ಗ್ರಾಮೀಣ ಶಿಕ್ಷಕರಿಗಾಗಿ ವಿನ್ಯಾಸ
▪️ಆನ್ಲೈನ್ ಮೂಲಕ ಬೋಧನೆ
▪️40 ತಾಸುಗಳ ಕಲಿಕಾ ಅವಧಿ
▪️ಕೋರ್ಸ್ ಬಳಿಕ ಪ್ರಮಾಣಪತ್ರ
▪️ಉಚಿತ ನೋಂದಣಿ ಅವಕಾಶ
ಈ ಕೋರ್ಸ್ ಏನೆಲ್ಲ ವಿಷಯ ಒಳಗೊಂಡಿದೆ?
▪️ಜನರೇಟಿವ್ ಎಐ ಟೂಲ್ಸ್
▪️ಪ್ರಾಂಪ್ಟ್ ಇಂಜಿನಿಯರಿಂಗ್
▪️ಗೇಮಿಫಿಕೇಷನ್
▪️ಸ್ಟೋರಿ ಟೆಲ್ಲಿಂಗ್
▪️ಎಐ ಬೇಸ್ಟ್ ಲೆಸನ್ ಪ್ಲಾನಿಂಗ್
▪️ಎಆರ್/ವಿಆರ್, ವಿಶ್ವಲೈಜೇಷನ್
▪️ಎಐ ಎನೇಬಲ್ಡ್ ಅಸೆಸ್ಮೆಂಟ್ ಮೆಥಡ್ಸ್
▪️ಆನ್ಲೈನ್ ಟೀಚಿಂಗ್ ಪ್ಲಾಟ್ಫಾರ್ಮ್ಸ್
ಈ ಕೋರ್ಸ್ ಯಾಕೆ ಮುಖ್ಯ?
ಕೃತಕ ಬುದ್ಧಿಮತ್ತೆಯು ಶಿಕ್ಷಣದ ಭವಿಷ್ಯವನ್ನು ವೇಗವಾಗಿ ಮರುರೂಪಿಸುತ್ತಿದೆ.
ಈ ಕೋರ್ಸ್ ಮೂಲಕ ತರಗತಿಯ ಪರಿಣಾಮಕಾರಿತ್ವ ಮತ್ತು ವಿದ್ಯಾರ್ಥಿಗಳ ತೊಡಗಿಸಿಕೊಳ್ಳುವಿಕೆಯನ್ನು ಹೆಚ್ಚಿಸುವ ಪ್ರಾಯೋಗಿಕ ಎಐ ಪರಿಕರಗಳು ಮತ್ತು ಶಿಕ್ಷಣ ತಂತ್ರಗಳೊಂದಿಗೆ ಶಿಕ್ಷಕರನ್ನು ಸಬಲೀಕರಣಗೊಳಿಸುವ ಗುರಿಯನ್ನು ನಾವು ಹೊಂದಿದ್ದೇವೆ ಎಂದು ಐಐಟಿ ಮದ್ರಾಸ್ ಪ್ರವರ್ತಕ್ ಟೆಕ್ನಾಲಜೀಸ್ ಫೌಂಡೇಷನ್ನ ಮುಖ್ಯ ಜ್ಞಾನಾಧಿಕಾರಿ ಬಾಲಮುರಳಿ ಶಂಕರ್ ಹೇಳಿದ್ದಾರೆ. ಜತೆಗೆ, ಇಂತಹ ಉಪಕ್ರಮಗಳ ಅಗತ್ಯವನ್ನು ಪ್ರಸ್ತಾಪಿಸಿದ್ದಾರೆ.
ಈ ಕೋರ್ಸ್ ಶಿಕ್ಷಕರು ಭವಿಷ್ಯಕ್ಕೆ ಸಿದ್ಧರಾಗಲು ಮತ್ತು ಎಐಯನ್ನು ಜವಾಬ್ದಾರಿಯುತವಾಗಿ ಅಳವಡಿಸಿಕೊಳ್ಳುವಲ್ಲಿ ವಿಶ್ವಾಸ ಹೊಂದಲು ಸಹಾಯ ಮಾಡುತ್ತದೆ ಎಮದು ತಿಳಿಸಿದ್ದಾರೆ.
ಈ ಕೋರ್ಸ್ ಗ್ರಾಮೀಣ ಶಾಲೆಗಳ ಶಿಕ್ಷಕರನ್ನು ಗುರಿಯಾಗಿಸಿಕೊಂಡಿದ್ದು, ಇಂಗ್ಲಿಷ್ ಭಾಷೆಯಲ್ಲಿ ಕಲಿಸಲಾಗುತ್ತದೆ. ಕಲಿಕೆ ನಂತರದ ಮೌಲ್ಯಮಾಪನವು ವರ್ಚುವಲ್ ಹಾಗೂ ನಿಯಂತ್ರಿತ ಪರೀಕ್ಷಾ ಸ್ವರೂಪದ್ದಾಗಿರುತ್ತದೆ.
ತರಬೇತಿಯನ್ನು ಪೂರ್ಣಗೊಳಿಸುವ ಗ್ರಾಮೀಣ ಶಾಲೆಗಳ ಮೊದಲ 500 ಶಿಕ್ಷಕರಿಗೆ ಪ್ರಮಾಣಪತ್ರದ ಶುಲ್ಕವನ್ನು ಮನ್ನಾ ಮಾಡಲಾಗುತ್ತದೆ ಎಂದು ಮಾಹಿತಿ ನೀಡಲಾಗಿದೆ.



