Karnataka Arogya Sanjeevini Scheme: HRMS ತಂತ್ರಾಂಶದಲ್ಲಿ ಅಧಿಕಾರಿ/ನೌಕರರ ವಿವರಗಳನ್ನು ನಮೂದಿಸುವ ಕುರಿತು ಸಂಪೂರ್ಣ ಮಾಹಿತಿ-2026
Karnataka Arogya Sanjeevini Scheme: ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ಒಳಪಟ್ಟಿರುವ ಅಧಿಕಾರಿ/ನೌಕರರ ವಿವರಗಳನ್ನು HRMS ತಂತ್ರಾಂಶದಲ್ಲಿ ನಮೂದಿಸುವ ಬಗ್ಗೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಅವರ ಕುಟುಂಬದ ಅವಲಂಬಿತ ಅರ್ಹ ಸದಸ್ಯರಿಗೆ ನಗದುರಹಿತ ವೈದ್ಯಕೀಯ ಚಿಕಿತ್ಸೆಗಳನ್ನು ಒದಗಿಸಲು ರಾಜ್ಯ ಸರ್ಕಾರವು ದಿನಾಂಕ:01-10-2025 ರಿಂದ ಜಾರಿಗೆ ತಂದಿರುವ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ (KASS) ಒಳಪಡಲು ಅಥವಾ ಒಳಪಡದೇ ಇರಲು (Opt-in, Opt-Out) ಲಿಖಿತ ಅಭಿಮತವನ್ನು ದಿನಾಂಕ:25.11.2025ರೊಗಳಗೆ ಸಂಬಂಧಪಟ್ಟ ಡಿ.ಡಿ.ಓ.ಗಳಿಗೆ ಸಲ್ಲಿಸಲು ಕಾಲಾವಕಾಶವನ್ನು ನೀಡಿದೆ,
ಸದರಿ ದಿನಾಂಕದೊಳಗೆ ಈ ಯೋಜನೆಗೆ ಒಳಪಡದೇ ಇರಲು ಲಿಖಿತವಾಗಿ ಇಚ್ಛೆ ವ್ಯಕ್ತಪಡಿಸದ ನೌಕರರು ಯೋಜನೆಗೆ ಒಳಪಡುವರೆಂದು (Opt-in by default) ಪರಿಗಣಿಸಲಾಗುವುದೆಂದು ದಿನಾಂಕ 03.11.2025ರ ಸರ್ಕಾರಿ ಆದೇಶದಲ್ಲಿ ತಿಳಿಸಿ, ಈ ಸಂಬಂಧ ನೀಡಬೇಕಾದ ಮಾಹಿತಿ/ನಮೂನೆಯನ್ನು ದಿನಾಂಕ:09.03.2023ರ ಸರ್ಕಾರಿ ಆದೇಶದಲ್ಲಿ ನಿಗದಿಪಡಿಸಿದೆ.
ರಾಜ್ಯದ ಎಲ್ಲಾ ಸರ್ಕಾರಿ ನೌಕರರ ದತ್ತಾಂಶ ಸಂಗ್ರಹಣೆಯ ಉದ್ದೇಶದಿಂದ, ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ (KASS) ಒಳಪಡುವ ಅಥವಾ ಒಳಪಡದಿರುವ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಕುಟುಂಬದ ಅರ್ಹ ಸದಸ್ಯರ ವಿವರಗಳನ್ನು ಸಂಬಂಧಪಟ್ಟ ಡಿಡಿಓ ಗಳು HRMS ತಂತ್ರಾಂಶದಲ್ಲಿ ನಮೂದಿಸಲು ಅವಕಾಶವನ್ನು ಕಲ್ಪಿಸಲಾಗಿರುತ್ತದೆ.
ಈ ರೀತಿ ವಿವರಗಳನ್ನು ನಮೂದಿಸಿರುವುದರಿಂದ Opt-in ಆದ ಸರ್ಕಾರಿ ನೌಕರರಿಗೆ KASS ID ಹಾಗೂ ಅವರ ಕುಟುಂಬದ ಪ್ರತಿ ಅರ್ಹ ಸದಸ್ಯರಿಗೆ Unique Dependant ID ಸೃಜನೆಗೊಳ್ಳುವುದರಿಂದ ಫಲಾನುಭವಿಯ ಗುರುತಿಸುವಿಕೆಗೆ ಮತ್ತು KASS ಯೋಜನೆಯಡಿಯಲ್ಲಿ ನೋಂದಾಯಿತ ಪಡೆದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಅನುಕೂಲವಾಗುತ್ತದೆ.
ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಗೆ ಒಟ್ಟು 3,76,955 ನೌಕರರು opt-in ಆಗಿದ್ದು 23,081 ನೌಕರರು Opt-out ಆಗಿರುತ್ತಾರೆ.
Opt-in ಆಗಿರುವ ಸರ್ಕಾರಿ ನೌಕರರ ಪೈಕಿ 1,79,339 ನೌಕರರ ಮತ್ತು ಅವರ ಅವಲಂಬಿತರ ವಿವರಗಳನ್ನು ಮಾತ್ರ HRMS ತಂತ್ರಾಂಶದಲ್ಲಿ ನೋಂದಾವಣೆ ಆಗಿದ್ದು, ಇನ್ನುಳಿದ 1,97,616 ನೌಕರರು ಮತ್ತು ಅವರ ಅವಲಂಬಿತ ಕುಟುಂಬ ಅರ್ಹ ಸದಸ್ಯರ ವಿವರಗಳನ್ನು ನಮೂದು ಮಾಡುವುದು ಬಾಕಿ ಉಳಿದಿರುತ್ತದೆ.
ಇದರಿಂದಾಗಿ, KASS ಯೋಜನೆಯಡಿಯಲ್ಲಿ ನೋಂದಾಯಿತ ಪಡೆದ ಆಸ್ಪತ್ರೆಗಳಲ್ಲಿ ನಗದು ರಹಿತ ಚಿಕಿತ್ಸೆ ಪಡೆಯುವುದಕ್ಕೆ ಅನಾನುಕೂಲವಾಗುತ್ತಿರುವ ಅಂಶವು ಸರ್ಕಾರದ ಗಮನಕ್ಕೆ ಬಂದಿರುತ್ತದೆ.
KASS ಯೋಜನೆಗೆ ಒಳಪಟ್ಟಿರುವ ಸರ್ಕಾರಿ ನೌಕರರ ಪೈಕಿ ಈಗಾಗಲೇ HRMS ತಂತ್ರಾಂಶದಲ್ಲಿ ವಿವರಗಳನ್ನು ನಮೂದಿಸಿರುವ ಸರ್ಕಾರಿ ನೌಕರರನ್ನು ಹೊರತುಪಡಿಸಿ, ಇನ್ನುಳಿದ 1,97,616 ಸರ್ಕಾರಿ ನೌಕರರ ಹಾಗೂ ಅವರ ಅವಲಂಬಿತ ಕುಟುಂಬದ ಅರ್ಹ ಸದಸ್ಯರ ವಿವರಗಳನ್ನು HRMS ತಂತ್ರಾಂಶದಲ್ಲಿ ದಿನಾಂಕ: 15.07.2026ರೊಳಗೆ ತಪ್ಪದೇ ನಮೂದಿಸಲು ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟ ಎಲ್ಲಾ DDO ಗಳಿಗೆ ಸೂಚಿಸಿದೆ.
ಈ ಕುರಿತು ಮೇಲಿನಂತೆ ಸುತ್ತೋಲೆ ಹೊರಡಿಸಲಾಗಿದೆ.
