Karnataka FLN 2026-27: ಶಾಲಾ ವಿದ್ಯಾರ್ಥಿಗಳ ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಜ್ಞಾನಕ್ಕೆ ವಿಶೇಷ ಒತ್ತು

Karnataka FLN 2026-27: ಶಾಲಾ ವಿದ್ಯಾರ್ಥಿಗಳ ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಜ್ಞಾನಕ್ಕೆ ವಿಶೇಷ ಒತ್ತು

Karnataka FLN 2026-27: ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಅಭ್ಯಾಸ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳು 2026-27 ರ ವೇಳೆಗೆ ಆರಂಭಿಕ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ (FLN) ಪ್ರಾವೀಣ್ಯತೆಯನ್ನು ಪಡೆಯುವ ಧೈಯವನ್ನು ಉಲ್ಲೇಖ 1 ರ ಪತ್ರದಲ್ಲಿ ಈಗಾಗಲೇ ತಿಳಿಸಲಾಗಿರುತ್ತದೆ. ಅದರಂತೆ ರಾಜ್ಯದ ಎಲ್ಲಾ ಡಯಟ್‌ಗಳು FUN ಸಾಧನೆಗಾಗಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಿ ಎಲ್ಲಾ ವಿದ್ಯಾರ್ಥಿಗಳು FLN ಸಾಧಿಸಲು ಅಗತ್ಯ ಮಾರ್ಗದರ್ಶನ ಮತ್ತು ಬೆಂಬಲ ವ್ಯವಸ್ಥೆಯನ್ನು ನೀಡುವ ಮೂಲಕ ಕ್ರಮವಹಿಸಲಾಗುತ್ತಿದೆ.

ಈ ನಿಟ್ಟಿನಲ್ಲಿ ಕಳೆದ 2-3 ವರ್ಷಗಳಿಂದ ನಿರಂತರವಾಗಿ ಕ್ರಮವಹಿಸಿ ಪುಗತಿ ಸಾಧನೆಯಾಗದಿರುವುದನ್ನು ಗಮನಿಸಲಾಗಿದೆ.ಆದ್ದರಿಂದ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಆರಂಭಿಕ ಸಾಧಿಸುತ್ತಿದ್ದರೂ ನಿರೀಕ್ಷಿತ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ(FLN)ವನ್ನು ಸಾಧಿಸುವ ಮೂಲ ಉದ್ದೇಶದಿಂದ ಶಾಲಾ ಹಂತದಿಂದ ಜಿಲ್ಲಾ ಹಂತದವರೆಗೆ ಕೈಗೊಳ್ಳಬಹುದಾದ ಕಾರ್ಯತಂತ್ರಗಳನ್ನು ರೂಪಿಸಲಾಗಿದೆ. FLN ಕಾರ್ಯಕ್ರಮವನ್ನು ಅನುಷ್ಠಾನಿಸಲು ಕೈಗೊಳ್ಳಬೇಕಾದ ಅಗತ್ಯ ಕ್ರಮಗಳು ಮತ್ತು ಕಾರ್ಯತಂತ್ರಗಳು ಈ ಕೆಳಗಿನಂತಿವೆ.

ಆರಂಭಿಕ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ(FLN) ಸಾಧನೆಗೆ ವಿದ್ಯಾರ್ಥಿಗಳನ್ನು ಗುರುತಿಸುವುದು:

ಸುತ್ತೋಲೆ 2 ರಂತೆ ಈಗಾಗಲೇ ಜೂನ್ ಮಾಹೆಯಲ್ಲಿ 4 ರಿಂದ 10 ನೇ ತರಗತಿಗಳವರೆಗೆ 15. ದಿನಗಳು ಸೇತುಬಂಧ ಕಾರ್ಯಕ್ರಮವನ್ನು ಆಯೋಜಿಸಿ ಶೇ.40 FLN ಮತ್ತು ಶೇ.60 ಪೂರ್ವಾಪೇಕ್ಷಿತ ಕಲಿಕಾಫಲಗಳನ್ನು ಆಧರಿಸಿ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಿ ನೈದಾನಿಕ ಪರೀಕ್ಷೆ, ಪರಿಹಾರ ಬೋಧನೆ ಮತ್ತು ಸಾಫಲ್ಯ ಪರೀಕ್ಷೆಗಳನ್ನು ನಡೆಸಲಾಗಿದೆ.

ಸೇತುಬಂಧ ಕಾರ್ಯಕ್ರಮದ ಅನುಷ್ಠಾನಕ್ಕಾಗಿ ನೀಡಲಾಗಿರುವ ತರಗತಿವಾರು ಕಲಿಕಾಫಲಗಳ ಪಟ್ಟಿಯಲ್ಲಿ ಪ್ರತಿ ತರಗತಿಯ ಪ್ರಥಮ ಭಾಷೆ, ದ್ವಿತೀಯ ಭಾಷೆ ಮತ್ತು ಗಣಿತ ವಿಷಯಗಳ ಪ್ರಾರಂಭದ 04 ಕಲಿಕಾಫಲಗಳನ್ನು FLN ಕಲಿಕಾಫಲಗಳೆಂದು ಗುರುತಿಸಲಾಗಿದೆ. ಗುರುತಿಸಲಾಗಿರುವ ಕಲಿಕಾ ಫಲಗಳ ಪಟ್ಟಿಯನ್ನು ಅನುಬಂಧ – 1 ರಲ್ಲಿ ಲಗತ್ತಿಸಿದೆ.

▪️ಸಾಫಲ್ಯ ಪರೀಕ್ಷೆಯ ನಂತರ 4 ರಿಂದ 10 ನೇ ತರಗತಿಗಳಲ್ಲಿ FUN ಕಲಿಕಾ ಫಲ ಆಧಾರಿತ ಪ್ರಶ್ನೆಗಳಿಗೆ ಉತ್ತರಿಸದಿರುವ ವಿದ್ಯಾರ್ಥಿಗಳನ್ನು FLN ಸಾಧಿಸದ ವಿದ್ಯಾರ್ಥಿಗಳಂದು ಗುರುತಿಸಬೇಕು.

▪️ಆರಂಭಿಕ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ(FLN) ಸಾಧನೆಗೆ ಕಾರ್ಯತಂತ್ರಗಳು.

▪️4 ರಿಂದ 10 ನೇ ತರಗತಿಯವರೆಗೆ ಪ್ರಥಮ ಭಾಷೆ ದ್ವಿತೀಯ ಭಾಷೆ ಮತ್ತು ಗಣಿತ ವಿಷಯಗಳಿಗೆ ಒಂದೇ ಕಲಿಕಾ ಫಲಗಳನ್ನು ನೀಡಲಾಗಿದೆ. ಈ ಕಲಿಕಾ ಫಲಗಳಿಗೆ ತರಗತಿಗೆ ಅನುಗುಣವಾಗಿ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಿ ಮೌಲ್ಯಮಾಪನ ಮಾಡಿ FUN ಸಾಧನೆಗೆ ಕ್ರಮವಹಿಸುವುದು.

▪️FLN ಸಾಧನೆಯನ್ನು ಶಾಲಾ ಹಂತದಿಂದ ಜಿಲ್ಲಾ ಹಂತದವರೆಗೆ ‘ಪ್ರಥಮ ಆಧ್ಯತಾ ವಿಷಯವಾಗಿ ಪರಿಗಣಿಸಿ ಪ್ರತಿ ಹಂತದಲ್ಲಿಯೂ ಕೈಗೊಳ್ಳಬಹುದಾದ ಕಾರ್ಯತಂತ್ರಗಳು ಈ ಕೆಳಗಿನಂತಿವೆ.

ಮುಖ್ಯ ಶಿಕ್ಷಕರ ಜವಾಬ್ದಾರಿಗಳು:-

▪️ಜೂನ್ ಮಾಹೆಯಲ್ಲಿ ಸೇತುಬಂಧ ಕಾರ್ಯಕ್ರಮದ ನಂತರ FLN ಕಲಿಕಾ ಫಲಗಳನ್ನು ಸಾಧಿಸಬೇಕಾಗಿರುವ ವಿದ್ಯಾರ್ಥಿಗಳನ್ನು ಗುರುತಿಸಿಕೊಳ್ಳುವುದು.

▪️ಶಿಕ್ಷಕರ ಸಭೆ ನಡೆಸಿ FLN ಸಾಧನೆಗೆ ಶೈಕ್ಷಣಿಕ ವರ್ಷದಲ್ಲಿ ನಿರಂತರವಾಗಿ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳನ್ನು ಒಳಗೊಂಡ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುವುದು.

▪️ಪರಿಹಾರ ಬೋಧನೆಯಲ್ಲಿ ಪ್ರತಿ ಕಲಿಕಾ ಫಲಗಳಿಗೆ ಸೂಕ್ತವಾದ ಚಟುವಟಿಕೆಗಳನ್ನು ರೂಪಿಸಿಕೊಂಡು FLN ಸಾಧಿಸಿದ ಪ್ರತಿ ವಿದ್ಯಾರ್ಥಿಯ ವೈಯಕ್ತಿಕ ಕಲಿಕಾ ಮಟ್ಟವನ್ನು ಗುರುತಿಸಿ ಅದಕ್ಕೆ ಅನುಗುಣವಾದ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿ, ನಿರ್ದಿಷ್ಟ ಕಲಿಕಾ ಫಲಗಳನ್ನು ಸಾಧಿಸುವಂತೆ ಕ್ರಮವಹಿಸಿ, ಸಾಧಿಸಿರುವ ಬಗ್ಗೆ ಖಚಿತಪಡಿಸಿಕೊಳ್ಳುವುದು.

▪️FLN ಸಾಧನೆ ಕೇವಲ ಭಾಷೆ ಮತ್ತು ಗಣಿತ ವಿಷಯಗಳಿಗೆ ಮಾತ್ರ ಸಂಬಂಧಿಸಿರುವುದಿಲ್ಲ.

▪️ಬದಲಾಗಿ ವಿದ್ಯಾರ್ಥಿಗಳ ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ ಸಾಮರ್ಥ್ಯಕ್ಕೆ ಸಂಬಂಧಿಸಿರುವುದರಿಂದ ಈ ಅಂಶವನ್ನು ಎಲ್ಲ ಶಿಕ್ಷಕರಿಗೂ ಮನವರಿಕೆ ಮಾಡಿ, ಎಲ್ಲಾ ಶಿಕ್ಷಕರನ್ನು ತೊಡಗಿಸಿಕೊಂಡು FLN ಸಾಧನೆಗೆ ಕ್ರಮವಹಿಸುವುದು.

▪️ಅನುಬಂಧ 1 ರಲ್ಲಿ ಲಗತ್ತಿಸಿರುವ ಕಲಿಕಾ ಫಲಗಳನ್ನು ಆಧರಿಸಿ 4 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ತರಗತಿಗೆ ಅನುಗುಣವಾದ ಪ್ರಶ್ನೆ ಪತ್ರಿಕೆಯನ್ನು ಸಿದ್ಧಪಡಿಸಿ, ಪ್ರತಿ ಮಾಹೆಯ ಅಂತ್ಯದಲ್ಲಿ ಮೌಲ್ಯಮಾಪನ ನಡೆಸುವುದು.

▪️SATS ತಂತ್ರಾಂಶದಲ್ಲಿ ಪ್ರತಿ ಮಾಹೆಯ ಅಂತ್ಯದಲ್ಲಿ ವಿದ್ಯಾರ್ಥಿಗಳ FLN ಸಾಧನೆಯ ಮಾಹಿತಿಯನ್ನು ಇಂದೀಕರಿಸುವುದು.

▪️ಫೆಬ್ರವರಿ ಅಂತ್ಯದಲ್ಲಿ ತರಗತಿಗೆ ಅನುಗುಣವಾದ FLN ಕಲಿಕಾ ಫಲಗಳನ್ನು ಸಾಧಿಸಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳುವುದು.

ಕ್ಲಸ್ಟರ್ ಹಂತದ ಜವಾಬ್ದಾರಿಗಳು:

FLN ಗೆ ಸಂಬಂಧಿಸಿದಂತೆ ಕ್ಲಸ್ಟರ್ ಮಟ್ಟದಲ್ಲಿ ಕ್ಲಸ್ಟರ್ ವ್ಯಾಪ್ತಿಯ ಎಲ್ಲಾ ಶಾಲೆಗಳಲ್ಲಿ FLN ಸಾಧಿಸಿರುವ /ಸಾಧಿಸದಿರುವ ವಿದ್ಯಾರ್ಥಿಗಳ ಸಂಖ್ಯೆ ಶಾಲಾ ಹಂತದಲ್ಲಿ ಸಿದ್ಧಪಡಿಸಿರುವ ಕ್ರಿಯಾ ಯೋಜನೆ, ಶಾಲಾ ವಾರ್ಷಿಕ ಯೋಜನೆ /ಪಂಚಾಂಗದಲ್ಲಿ FLN ಸಂಬಂಧಿತ ಅಂಶಗಳನ್ನು ಅಳವಡಿಸಿರುವ ಮಾಹಿತಿಗಳು ಒಳಗೊಂಡಂತೆ ಕ್ರಿಯಾ ಯೋಜನೆಯನ್ನು ಸಿದ್ದಪಡಿಸುವುದು.

▪️2026-27 ನೇ ಸಾಲಿಗೆ ಪರಿಷ್ಕೃತವಾದ ಅನುಬಂಧ -1 ರಲ್ಲಿ ಲಗತ್ರಿಸಿರುವ FLN ಕಲಿಕಾ ಫಲಗಳ ಪಟ್ಟಿಯ ಮಾಹಿತಿಯನ್ನು ಶಾಲೆಗಳಿಗೆ ಹಂಚಿಕೊಳ್ಳುವುದು ಹಾಗೂ ಅನುಷ್ಠಾನಿಸಲು ಕ್ರಮವಹಿಸುವುದು.

▪️FLN ಕಲಿಕಾ ಫಲಗಳನ್ನು ಸಾಧಿಸಲು ಕೈಗೊಳ್ಳಬೇಕಾದ ಶೈಕ್ಷಣಿಕ ಚಟುವಟಿಕೆಗಳು ಮತ್ತು FLN ಕಲಿಕಾ ಫಲಗಳನ್ನು ದೈನಂದಿನ ಪಾಠದೊಂದಿಗೆ ಸಂಯೋಜಿಸಿ ಈ ಕುರಿತು ಶಾಲಾ ಭೇಟಿ ಸಂದರ್ಭದಲ್ಲಿ ಶಿಕ್ಷಕರಿಗೆ ಮಾರ್ಗದರ್ಶನ ನೀಡುವುದು.

▪️ಪ್ರತಿ ಮಾಹೆಯ 2ನೇ ಶನಿವಾರದಂದು ಶಾಲಾ ಅವಧಿಯ ನಂತರ ಮುಖ್ಯ ಶಿಕ್ಷಕರ ಸಭೆಯನ್ನು ನಡೆಸಿ FLN ಸಾಧನೆಯ ಅನುಪಾಲನೆ ಮಾಡುವುದರೊಂದಿಗೆ ಮುಖ್ಯ ಶಿಕ್ಷಕರು, ಶಿಕ್ಷಕರುಗಳಿಗೆ ಈ ಸಂಬಂಧ ಇರಬಹುದಾದ ಗೊಂದಲ ಹಾಗೂ ಅವುಗಳ ಪರಿಹಾರ ಕ್ರಮಗಳ ಬಗ್ಗೆ ಚರ್ಚಿಸುವುದು.

▪️FLN ಸಾಧನೆಗೆ ಸಂಬಂಧಿಸಿದಂತೆ, ಕಸ್ಮರ್ ಸಂಪನ್ಮೂಲ ತಂಡವನ್ನು ರಚಿಸಿ, ಕ್ಲಸ್ಟರ್ ಹಂತದಲ್ಲಿ ಅಗತ್ಯ ಮಾರ್ಗದರ್ಶನವನ್ನು ಒದಗಿಸುವುದು.

▪️SATS ತಂತ್ರಾಂಶದಲ್ಲಿ ನಿಖರವಾಗಿ FLN ಪ್ರಗತಿಯನ್ನು ದಾಖಲಿಸಿರುವ ಬಗ್ಗೆ ಖಾತ್ರಿಪಡಿಸಿಕೊಂಡು, ಶಾಲೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ FLN ಪುಗತಿಯನ್ನು ಖಚಿತಪಡಿಸಿಕೊಳ್ಳುವುದು.

ತಾಲೂಕು ಮಟ್ಟದ ಅಧಿಕಾರಿಗಳ ಜವಾಬ್ದಾರಿಗಳು (BEO, BRC, ECO, BRP):-

▪️ತಾಲ್ಲೂಕು ಹಂತದಲ್ಲಿ FLN ನೋಡಲ್ ಅಧಿಕಾರಿಗಳನ್ನು ನೇಮಕ ಮಾಡುವುದು.

▪️ತಾಲ್ಲೂಕು ಹಂತದಲ್ಲಿ FLN ಸಾಧಿಸಿರುವ/ಸಾಧಿಸದಿರುವ ವಿದ್ಯಾರ್ಥಿಗಳ ಸಂಖ್ಯೆ ಮತ್ತು ಸಾಧನೆಗೆ ಅಗತ್ಯವಾದ ಕಾರ್ಯತಂತ್ರಗಳನ್ನು ಒಳಗೊಂಡ. ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುವುದು,

▪️ತಾಲ್ಲೂಕು ಮಟ್ಟದಲ್ಲಿ ಬ್ಲಾಕ್ ರಿಸೋರ್ಸ್ ಗ್ರೂಪ್ (BRG) ರಚಿಸಿ ಪ್ರತಿ ಮಾಹೆಯಲ್ಲಿ ಸಭೆ ನಡೆಸಿ FLN ಪುಗತಿಯನ್ನು ಮತ್ತು ಶಿಕ್ಷಕರ ಸವಾಲುಗಳನ್ನು ಗುರುತಿಸಿ ಪರಿಹರಿಸಲು ಹಾಗೂ ಫಲಿತಾಂಶ ವಿಶ್ಲೇಷಣೆ ಮಾಡಲು ಕಾರ್ಯಪ್ರವೃತ್ತರಾಗುವುದು.

▪️ತಾಲ್ಲೂಕು ವ್ಯಾಪ್ತಿಯಲ್ಲಿ FLN ಸಾಧಿಸಿರುವ / ಸಾಧಿಸದಿರುವ ವಿದ್ಯಾರ್ಥಿಗಳ ನಿಖರ ಮಾಹಿತಿಯನ್ನು ಕ್ರೂಢೀಕರಿಸಿ, ಮುಖ್ಯ ಶಿಕ್ಷಕರ ಸಭೆಗಳಲ್ಲಿ FLN ಪ್ರಗತಿ ಪರಿಶೀಲನೆಯನ್ನು ಪ್ರಮುಖ ಆಧ್ಯತಾ ವಿಷಯವಾಗಿ ಚರ್ಚಿಸುವುದು.

▪️ಕ್ಲಸ್ಟರ್ ಮತ್ತು ಹೋಬಳಿ ಹಂತದಲ್ಲಿ FLN ಗೆ ಸಂಬಂಧಿಸಿದ ಯಶೋಗಾಥೆ ಹಾಗೂ ನಾವಿನ್ಯಯುತ ಅಭ್ಯಾಸಗಳನ್ನು ಸಂಗ್ರಹಿಸಿ, ಪ್ರಚುರಪಡಿಸಿ ಎಲ್ಲರಿಗೂ ಪ್ರೇರಣೆ ಒದಗಿಸುವುದು.

▪️FLN ಸಾಧಿಸಿದ ಶಾಲೆ ಮತ್ತು ಕ್ಲಸ್ಟರ್ ಗಳನ್ನು ಗುರುತಿಸಿ ಪ್ರಶಂಸಿಸುವುದು ಹಾಗೂ ನಿರೀಕ್ಷಿತ ಪ್ರಗತಿ ಸಾಧಿಸದಿರುವ ಶಾಲೆ ಮತ್ತು ಕ್ಲಸ್ಟರ್ ಗಳನ್ನು ತಾಲ್ಲೂಕು ಹಂತದ ಅಧಿಕಾರಿಗಳಿಗೆ ಹಂಚಿಕೆ ಮಾಡಿ ನಿಯಮಿತ ಭೇಟಿ ನೀಡುವ ಮೂಲಕ ಅಗತ್ಯ ಮಾರ್ಗದರ್ಶನ ಮತ್ತು ಬೆಂಬಲ ವ್ಯವಸ್ಥೆಯನ್ನು ಒದಗಿಸುವುದು.

▪️SATS ತಂತ್ರಾಂಶದಲ್ಲಿ ಇಂದೀಕರಿಸಿದ ಮಾಹಿತಿಯನ್ನು ತಾಲ್ಲೂಕು ಹಂತದಲ್ಲಿ ಅವಲೋಕಿಸಿ, ವಿಶ್ಲೇಷಿಸಿ ಅನುಷ್ಠಾನಾಧಿಕಾರಿಗಳು, FUN ಸಾಧನೆಗೆ ಅಗತ್ಯ ಕ್ರಮ ವಹಿಸುವಂತೆ ಮಾರ್ಗದರ್ಶನ ನೀಡುವುದು.

▪️FLN ಸಾಧಿಸದಿರುವ ವಿದ್ಯಾರ್ಥಿಗಳ ಕಲಿಕಾ ಪ್ರಗತಿಯನ್ನು ನಿರಂತರವಾಗಿ ಅನುಪಾಲನೆ ಮಾಡುವುದು. FLN ಸಾಧನೆಗೆ ಪ್ರತಿ ತರಗತಿಗೆ ಪ್ರತ್ಯೇಕವಾಗಿ ಶೈಕ್ಷಣಿಕ ವರ್ಷದ ಪ್ರಾರಂಭದಿಂದ ಅಂತ್ಯದವರೆಗೆ ಪ್ರತಿ ತಿಂಗಳು ಮೌಲ್ಯಾಂಕನ ಮಾಡಿ ದಾಖಲಿಸುವುದು.

ಜಿಲ್ಲಾ ಮಟ್ಟದ ಅಧಿಕಾರಿಗಳ ಜವಾಬ್ದಾರಿಗಳು:

▪️ಜಿಲ್ಲಾ ಹಂತದಲ್ಲಿ ಉಪ ನಿರ್ದೇಶಕರು (ಆಡಳಿತ) ಮತ್ತು (ಅಭಿವೃದ್ಧಿ) ಇವರು ವಿವಿಧ ಹಂತದ ಅನುಷ್ಠಾನಾಧಿಕಾರಿಗಳ ಸಭೆ ನಡೆಸಿ, FLN ಸಾಧನೆಗೆ ಅಗತ್ಯ ಕಾರ್ಯತಂತ್ರಗಳನ್ನು ಚರ್ಚಿಸುವುದು. ಜಿಲ್ಲೆ, ತಾಲ್ಲೂಕು ಮತ್ತು ಕ್ಲಸ್ಟರ್ ಹಂತದಲ್ಲಿ FLN ನೋಡಲ್ ಅಧಿಕಾರಿಗಳನ್ನು ನಿಯೋಜಿಸಲು ಅಗತ್ಯ ಕ್ರಮವಹಿಸುವುದು.

▪️ಜಿಲ್ಲಾ ಹಂತದಲ್ಲಿ ತಾಲ್ಲೂಕುವಾರು FLN ಸಾಧಿಸಿರುವ/ಸಾಧಿಸದಿರುವ ವಿದ್ಯಾರ್ಥಿಗಳ ಸಂಖ್ಯೆ ಮತ್ತು ಸಾಧನೆಗೆ ಅಗತ್ಯವಾದ ಕಾರ್ಯತಂತ್ರಗಳನ್ನು ಒಳಗೊಂಡ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುವುದು.

▪️ಡಯಟ್‌ಗಳ FLN ನೋಡಲ್ ಅಧಿಕಾರಿಗಳು ನಿಯಮಿತವಾಗಿ ಗೂಗಲ್ ಸಭೆಯನ್ನು ಅಯೋಜಿಸಿ FLN ಪ್ರಗತಿ ಪರಿಶೀಲನೆ ನಡೆಸಿ ಅಗತ್ಯ ಮಾರ್ಗದರ್ಶನವನ್ನು ಒದಗಿಸುವುದು.

▪️ವಿವಿಧ ಹಂತದ ಅನುಷ್ಠಾನಾಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ FLN ಸಾಧನೆಗೆ ಸಂಬಂಧಿಸಿದಂತೆ ಸೂಕ್ತ ಮಾರ್ಗದರ್ಶನ ಮತ್ತು ಬೆಂಬಲವನ್ನು ನೀಡುವುದು.

▪️FLN ಪ್ರಗತಿಯನ್ನು ವಿವಿಧ ಹಂತಗಳಲ್ಲಿ SATS ತಂತ್ರಾಂಶನಲ್ಲಿ ನಿಗಧಿತ ಅವಧಿಯೊಳಗೆ ಇಂದೀಕರಿಸಲು ಅಗತ್ಯ ಕ್ರಮವಹಿಸುವುದು.

▪️ಜಿಲ್ಲೆಯಲ್ಲಿ FLN ಸಾಧನೆಯಲ್ಲಿ ಹಿಂದುಳಿದಿರುವ ತಾಲ್ಲೂಕುಗಳನ್ನು ಗುರುತಿಸಿ, ಅನುಷ್ಠಾನಾಧಿಕಾರಿಗಳು ಮಾರ್ಗದರ್ಶನವನ್ನು ಒದಗಿಸಲು ವಿಶೇಷ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುವುದು. ಶಾಲೆಗಳಿಗೆ ನಿಯಮಿತ ಭೇಟಿ ನೀಡಿ ಅಗತ್ಯ

▪️ಡಯಟ್ ವತಿಯಿಂದ FLN ಆಧಾರಿತ ವಿಚಾರ ಸಂಕೀರ್ಣ, ಆನ್‌ಲೈನ್ ಸಭೆಗಳು ಇತ್ಯಾದಿಗಳ ಮೂಲಕ ಮಾರ್ಗದರ್ಶನ ಮತ್ತು ಬೆಂಬಲ ವ್ಯವಸ್ಥೆಯನ್ನು ಒದಗಿಸುವುದು.

▪️ಡಯಟ್ ಹಂತದಲ್ಲಿ ಡಿಜಿಟಲ್ ಸಂಪನ್ಮೂಲಗಳನ್ನು ಸಿದ್ಧಪಡಿಸಿ, ಅವುಗಳ ಬಳಕೆಗೆ ಪೂರಕ ಬೆಂಬಲ ವ್ಯವಸ್ಥೆಯನ್ನು ರೂಪಿಸುವುದು.

▪️ವಿವಿಧ ಹಂತಗಳಲ್ಲಿ SATS ತಂತ್ರಾಂಶದಲ್ಲಿ FLN ಪ್ರಗತಿ ವರದಿಯನ್ನು ಇಂಧೀಕರಿಸಿರುವ ಬಗ್ಗೆ, ಖಚಿತಪಡಿಸಿಕೊಂಡು, ವಿಶ್ಲೇಷಿಸಿ, ಜಿಲ್ಲಾ ಹಂತದ ಸಭೆಗಳಲ್ಲಿ ಪ್ರಗತಿ ಪರಿಶೀಲನೆಯನ್ನು ನಡೆಸಿ ಅಗತ್ಯ ಮಾರ್ಗದರ್ಶನ ಒದಗಿಸುವುದು:

▪️ಶೇ.100 ರಷ್ಟು FLN ಸಾಧಿಸಿದ ಶಾಲೆಗಳನ್ನು ಗುರುತಿಸಿ ಅಂತಹ ಶಾಲೆಗಳಿಗೆ ಜಿಲ್ಲಾ ಹಂತದಲ್ಲಿ “FLN ಸಾಧಿಸಿದ ಶಾಲೆ” ಎಂದು ಘೋಷಿಸಿ ಪ್ರಮಾಣಪತ್ರವನ್ನು ನೀಡುವುದು.

▪️FLN ಪ್ರಗತಿಯನ್ನು ಶಾಲಾ ‘ಹಂತದಿಂದ ಜಿಲ್ಲಾ ಹಂತದವರೆಗೆ ಪರಿಶೀಲಿಸಿ, ವರದಿಯನ್ನು DSERT ಕಛೇರಿಗೆ ಸಲ್ಲಿಸುವುದು.

ರಾಜ್ಯ ಹಂತದ ಅಧಿಕಾರಿಗಳ ಜವಾಬ್ದಾರಿಗಳು:

▪️ರಾಜ್ಯ ಹಂತದಲ್ಲಿ FLN ನೋಡಲ್ ಅಧಿಕಾರಿಗಳನ್ನು ನೇಮಕ ಮಾಡುವುದು.

▪️ಜಿಲ್ಲೆಗಳಿಗೆ ರಾಜ್ಯ ಕಛೇರಿಯಿಂದ FLN ಸಾಧನೆಗೆ ಸಂಬಂಧಿಸಿದಂತೆ ಅಗತ್ಯ ಮಾರ್ಗದ್ರಶನ ಮತ್ತು ಬೆಂಬಲವನ್ನು ಒದಗಿಸುವುದು.

▪️ಜಿಲ್ಲಾ FLN ನೋಡಲ್ ಅಧಿಕಾರಿಗಳಿಗೆ ಗೂಗಲ್ ಸಭೆಯನ್ನು ಆಯೋಜಿಸಿ ಪ್ರಗತಿ ಪರಿಶೀಲನ ನಡೆಸುವುದು.

▪️ಪ್ರತಿ ಮಾಹೆಯಲ್ಲಿ FLN ಪುಗತಿ ವರದಿಯನ್ನು ಜಿಲ್ಲೆಗಳಿಂದ ಪಡೆದು ವಿಶ್ಲೇಷಿಸಿ ಅನುಪಾಲನೆ ಮಾಡುವುದು.

▪️SATS ತಂತ್ರಾಂಶದಲ್ಲಿ ಎಲ್ಲಾ ಜಿಲ್ಲೆಗಳು FUN ಮಾಹಿತಿಯನ್ನು ಇಂದೀಕರಿಸಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳುವುದು.

▪️ಈ ಮೇಲಿನಂತೆ ವಿವಿಧ ಹಂತದ ಅನುಷ್ಠಾನಾಧಿಕಾರಿಗಳು, FLN ಸಾಧನೆಗೆ ಅಗತ್ಯ ಕ್ರಮವಹಿಸಲು ಈ ಮೂಲಕ ತಿಳಿಸಿದೆ.

FLN

CLICK HERE – DOWNLOAD

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!