KRIES 2026 Application Process: ವಸತಿ ಶಾಲೆಗಳ 6ನೇ ತರಗತಿ ಪ್ರವೇಶ 2026| ಆನ್‌ಲೈನ್ ಅರ್ಜಿಗೆ 07.02.2026ರವರೆಗೆ ಅವಕಾಶ
KRIES 2026 Application Process: 2026ನೇ ಸಾಲಿನ ವಸತಿ ಶಾಲೆಗಳ 6ನೇ ತರಗತಿ ಪ್ರವೇಶಾತಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು 07.02.2026ರವರೆಗೆ ಅವಕಾಶ ವಿಸ್ತರಿಸಲಾಗಿದೆ. ಅರ್ಜಿ ವಿಧಾನ ಮತ್ತು ಮುಖ್ಯ ಸೂಚನೆಗಳು ಇಲ್ಲಿದೆ.
2026ನೇ ಸಾಲಿನ ವಸತಿ ಶಾಲೆಗಳ 6ನೇ ತರಗತಿಗಳ ಪ್ರವೇಶಾತಿಗೆ ಆನ್‌ಲೈನ್ ಮುಖಾಂತರ ಹತ್ತಿರದ ವಸತಿ ಶಾಲೆ/ ಕಾಲೇಜುಗಳ ಮೂಲಕ ಅರ್ಜಿ ಸಲ್ಲಿಸಲು ದಿನಾಂಕ 07.02.2026ರವರೆಗೆ ವಿಸ್ತರಿಸಲಾಗಿದೆ.
ಪರಿಶಿಷ್ಟ ಜಾತಿಗೆ ಸೇರಿದ ಒಳಮೀಸಲಾತಿ ಕಲ್ಪಿಸಿರುವ ಪ್ರವರ್ಗ A, ಪ್ರವರ್ಗ B, ಪ್ರವರ್ಗ C ವರ್ಗೀಕರಣ ಮಾಡಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ಒಳಮೀಸಲಾತಿ ವಿವರಗಳನ್ನು ತಮ್ಮ ಜಾತಿ ಪ್ರಮಾಣ ಪತ್ರದಲ್ಲಿ ಮುದ್ರಿತವಾಗಿರುವ ಆರ್‌ಡಿ ಸಂಖ್ಯೆಯನ್ನು ಆನ್‌ಲೈನ್ ಅರ್ಜಿಯಲ್ಲಿ ಕಡ್ಡಾಯವಾಗಿ ಮೇಲೆ ತಿಳಿಸಿರುವ ಕೊನೆಯ ದಿನಾಂಕದೊಳಗೆ ನಮೂದಿಸಿ, ಅರ್ಜಿಯನ್ನು ಸಲ್ಲಿಸತಕ್ಕದ್ದು.
ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ಮೀಸಲಾತಿ ಮತ್ತು ಇತರೆ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ನಮೂದಿಸಲು ಸೂಚಿಸಿದೆ.



