M.Pharm and Pharm.D Admission 2025-26 Notification Released- ಎಂ-ಫಾರ್ಮಾ ಮತ್ತು ಫಾರ್ಮಾ-ಡಿ ಪ್ರವೇಶ ಅಧಿಸೂಚನೆ ಬಿಡುಗಡೆ

M.Pharm & Pharm.D Admission 2025-26 Notification Released- ಎಂ-ಫಾರ್ಮಾ ಮತ್ತು ಫಾರ್ಮಾ-ಡಿ ಪ್ರವೇಶ ಅಧಿಸೂಚನೆ ಬಿಡುಗಡೆ

 

M.Pharm & Pharm.D Admission 2025-26 Notification Released– 2025-26ನೇ ಶೈಕ್ಷಣಿಕ ಸಾಲಿಗೆ ಎಂ-ಫಾರ್ಮಾ ಹಾಗೂ ಫಾರ್ಮಾ-ಡಿ ಪ್ರವೇಶಕ್ಕೆ ಅಧಿಸೂಚನೆ ಬಿಡುಗಡೆ. ಆನ್‌ಲೈನ್ ಅರ್ಜಿ, ದಿನಾಂಕಗಳು ಮತ್ತು ವಿವರಗಳು ಇಲ್ಲಿವೆ.

ಎಂ-ಫಾರ್ಮ ಮತ್ತು ಫಾರ್ಮ-ಡಿ (ಪೋಸ್ಟ್ ಬ್ಯಾಕುಲರೇಟ್) ಪ್ರವೇಶಾತಿ – 2025-26

2025ನೇ ಸಾಲಿನ ಪ್ರಥಮ ಎಂ-ಫಾರ್ಮಸಿ ಕೋರ್ಸುಗಳ ಪ್ರವೇಶಕ್ಕೆ ರ್ಯಾಂಕ್ ಪಟ್ಟಿಯನ್ನು ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಸರ್ಕಾರವು ನೀಡಿರುವ ಸೀಟ್ ಮ್ಯಾಟ್ರಿಕ್ಸ್ ಅನ್ನು 02-02-2026 ಸಹ ಪ್ರಕಟಿಸಲಾಗಿದೆ.

ಅಭ್ಯರ್ಥಿಗಳು ಆನ್‌ಲೈನ್ ಅರ್ಜಿಯಲ್ಲಿ ದಾಖಲಿಸಿರುವ ಮಾಹಿತಿಯನ್ನು ಆಧರಿಸಿ ಸಿದ್ದಪಡಿಸಿರುವ ವೆರಿಫಿಕೇಷನ್ ಸ್ಲಿಪ್ ನ್ನು ದಿನಾಂಕ:05-02-2026 ರಿಂದ 09-02-2026 ರ ಬೆಳಿಗ್ಗೆ 10.00 ಗಂಟೆಯವರೆಗೆ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ನಿಗದಿತ ಲಿಂಕ್ ಅನ್ನು ಆಯ್ಕೆ ಮಾಡಿ ವೆರಿಫಿಕೆಶನ್ ಸ್ಲಿಪ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.

ಆನ್‌ಲೈನ್ ಅರ್ಜಿ ಸಲ್ಲಿಸುವ ಸಮಯದಲ್ಲಿ ಪರಿಶಿಷ್ಟ ಜಾತಿ (SC) ಮೀಸಲಾತಿ ಕೋರಿರುವ ಅಭ್ಯರ್ಥಿಗಳು, (SC-A, SC-B, SC-C) ಒಳಮೀಸಲಾತಿಗೆ ಸಂಬಂಧಿಸಿದಂತೆ, ಸರ್ಕಾರದ ಆದೇಶದ ಅನ್ವಯ SC-A, SC-B, SC-C ಒಳಮೀಸಲಾತಿಯನ್ನು ನಮೂದಿಸಿ ಮತ್ತು ಜಾತಿಪ್ರಮಾಣ ಪತ್ರದ RD No ನಮೂದಿಸಿ ವೆರಿಫಿಕೆಷನ್ ಸ್ಲಿಪ್‌ಡೌನ್ ಲೋಡ್ ಮಾಡಿಕೊಳ್ಳತಕ್ಕದು.

ಅರ್ಹ ಅಭ್ಯರ್ಥಿಗಳು ದಿನಾಂಕ:07-02-2026 ರಿಂದ 10-02-2026ರ ಬೆಳಿಗ್ಗೆ 11.00 ಗಂಟೆಗೆ ವರೆಗೆ ಇಚ್ಛೆಗಳನ್ನು / ಆಪ್ಷನ್ ಗಳನ್ನು ಆದ್ಯತಾ ಕ್ರಮದಲ್ಲಿ ನಮೂದಿಸಬಹುದಾಗಿದೆ.

ಅಭ್ಯರ್ಥಿಗಳು ಅರ್ಜಿಯಲ್ಲಿ ದಾಖಲಿಸಿರುವ ವಿವರಗಳಂತೆ ವೆರಿಫಿಕೇಷನ್ ಸ್ಲಿಪ್‌ನಲ್ಲಿ ನಮೂದಿಸಿರುವ ಮತ್ತು ಅಗತ್ಯವಿರುವ ಎಲ್ಲಾ ಪ್ರಮಾಣ ಪತ್ರಗಳು, ದಾಖಲೆಗಳು, ಅಂಕಪಟ್ಟಿಗಳು ಮುಂತಾದವು ಹಾಗು ವ್ಯಾಸಂಗ ಪ್ರಮಾಣ ಪತ್ರಗಳು (ಬಿಇಒ ಸಹಿ ಮಾಡಿರುವ), ಮೀಸಲಾತಿ ಪ್ರಮಾಣ ಪತ್ರಗಳನ್ನು / ಕಡ್ಡಾಯವಾಗಿ ಸಿದ್ದಪಡಿಸಿ ಇಟ್ಟುಕೊಂಡು ಸೀಟು ಹಂಚಿಕೆಯಾದ ನಂತರ ಕಾಲೇಜಿನಲ್ಲಿ ಪ್ರವೇಶ ಪಡೆಯುವ ಸಂದರ್ಭದಲ್ಲಿ ಸಲ್ಲಿಸತಕ್ಕದ್ದು.

ಅರ್ಜಿಯಲ್ಲಿನ ಮಾಹಿತಿಗಳು ತಪ್ಪಾಗಿದ್ದಲ್ಲಿ ಅಥವಾ ಸೀಟು ಪಡೆಯಲು ಅರ್ಹತೆ ಇಲ್ಲದಿದ್ದರೂ ಸುಳ್ಳು ಮಾಹಿತಿ ನೀಡಿ ಪ್ರವೇಶ ಪಡೆದಿದ್ದಲ್ಲಿ ಅಭ್ಯರ್ಥಿಗಳೇ ನೇರವಾಗಿ ಹೊಣೆಗಾರರಾಗುತ್ತಾರೆ ಮತ್ತು ಅಂತಹ ಪ್ರವೇಶಗಳನ್ನು ಯಾವುದೇ ಸಂದರ್ಭದಲ್ಲಿ ರದ್ದು ಪಡಿಸಲಾಗುವುದು.

ಅಭ್ಯರ್ಥಿಗೆ ಕಾಲೇಜಿನಲ್ಲಿ ಪ್ರವೇಶಾತಿ ನೀಡುವ ಮುನ್ನ ವೆರಿಫಿಕೇಶನ್ ಸ್ಲಿಪ್ ಅನುಸಾರ ಅಭ್ಯರ್ಥಿಯ ಅರ್ಹತಾ ಮಾನದಂಡಗಳನ್ನು ಮತ್ತು ಮೂಲ ದಾಖಲೆಗಳನ್ನು ಪರಿಶೀಲಿಸಬೇಕು ಮತ್ತು ಎಲ್ಲಾ ಮೂಲ ದಾಖಲೆಗಳನ್ನು ಪಡೆಯಬೇಕು. ನಿಗದಿತ ಶುಲ್ಕವನ್ನು ಆಯಾ ಕಾಲೇಜಿನಲ್ಲಿ ಪ್ರವೇಶಾತಿ ಪಡೆಯುವ ಸಂದರ್ಭದಲ್ಲಿ ಪಾವತಿಸಬೇಕು.

ಆಪ್ಷನ್ ಎಂಟ್ರಿ ಮತ್ತು ಸೀಟು ಹಂಚಿಕೆ ಪ್ರಕ್ರಿಯೆಯ ವೇಳಾ ಪಟ್ಟಿ ಈ ಕೆಳಗಿನಂತಿದೆ.

Pharm


CLICK HERE TO DOWNLOAD NOTIFICATION

M.PHARMA AND PHARMACY FEE STRUCTURE

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

You cannot copy content of this page

error: Content is protected !!
Scroll to Top