Police Inspector Transfer Karnataka 2026: 49 ಇನ್‌ಸ್ಪೆಕ್ಟರ್‌ಗಳಿಗೆ ಸ್ಥಳ ನಿಯುಕ್ತಿ ಆದೇಶ

Police Inspector Transfer Karnataka 2026: 49 ಇನ್‌ಸ್ಪೆಕ್ಟರ್‌ಗಳಿಗೆ ಸ್ಥಳ ನಿಯುಕ್ತಿ ಆದೇಶ

Police Inspector Transfer Karnataka 2026: ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ 49 ಪೊಲೀಸ್ ಇನ್‌ಸ್ಪೆಕ್ಟರ್‌ಗಳ ಸ್ಥಳ ನಿಯುಕ್ತಿ. 01-10-2026ರ ಪೊಲೀಸ್ ಸಿಬ್ಬಂದಿ ಮಂಡಳಿ ನಿರ್ಣಯದಂತೆ ವಿವಿಧ ಜಿಲ್ಲೆ ಹಾಗೂ ಪೊಲೀಸ್ ಘಟಕಗಳಿಗೆ ವರ್ಗಾವಣೆ ಆದೇಶ.

ಅಕ್ಟೋಬರ್ 1, 2026: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಪೊಲೀಸ್ ಇನ್‌ಸ್ಪೆಕ್ಟರ್ (ಸಿವಿಲ್) ವೃಂದದ ಅಧಿಕಾರಿಗಳ ಸ್ಥಳ ನಿಯುಕ್ತಿಗೆ ಸಂಬಂಧಿಸಿದಂತೆ ಮಹತ್ವದ ಆದೇಶ ಹೊರಡಿಸಲಾಗಿದೆ. ಪೊಲೀಸ್ ಸಿಬ್ಬಂದಿ ಮಂಡಳಿಯ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಒಟ್ಟು 49 ಪೊಲೀಸ್ ಇನ್‌ಸ್ಪೆಕ್ಟರ್‌ಗಳನ್ನು ವಿವಿಧ ಪೊಲೀಸ್ ಠಾಣೆಗಳು, ವಿಭಾಗಗಳು ಹಾಗೂ ಘಟಕಗಳಿಗೆ ಸ್ಥಳ ನಿಯುಕ್ತಿಗೊಳಿಸಲಾಗಿದೆ.

ಡೈರೆಕ್ಟರ್ ಜನರಲ್ ಮತ್ತು ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್‌ರವರ ಕಛೇರಿ, ಕರ್ನಾಟಕ ರಾಜ್ಯ, ಬೆಂಗಳೂರು–560 001 ವತಿಯಿಂದ 01.10.2026ರಂದು ಈ ಆದೇಶ ಹೊರಡಿಸಲಾಗಿದೆ.

ಆದೇಶದ ವಿವರ

ಉಲ್ಲೇಖ: ಪೊಲೀಸ್ ಸಿಬ್ಬಂದಿ ಮಂಡಳಿಯ ನಡವಳಿ ದಿನಾಂಕ: 01.10.2026

ಉಲ್ಲೇಖಿತ ದಿನಾಂಕದಂದು ನಡೆದ ಪೊಲೀಸ್ ಸಿಬ್ಬಂದಿ ಮಂಡಳಿ ಸಭೆಯ ನಿರ್ಣಯದಂತೆ, ಆಡಳಿತಾತ್ಮಕ ಹಿತದೃಷ್ಟಿಯಿಂದ ಕೆಳಕಂಡ ಪೊಲೀಸ್ ಇನ್‌ಸ್ಪೆಕ್ಟರ್ (ಸಿವಿಲ್) ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅವರ ಹೆಸರಿನ ಮುಂದೆ ನಮೂದಿಸಿರುವ ಸ್ಥಳಗಳಿಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಲಾಗಿದೆ.

ಪೊಲೀಸ್ ಇನ್‌ಸ್ಪೆಕ್ಟರ್‌ಗಳ ಸ್ಥಳ ನಿಯುಕ್ತಿ ಪಟ್ಟಿ

ಅಧಿಕಾರಿಯ ಹೆಸರು ಎಲ್ಲಿಂದ ಎಲ್ಲಿಗೆ
ಮಂಜುನಾಥ ಸೈಬರ್ ಕ್ರೈಂ ಪೊ.ಠಾಣೆ, ಶಿವಮೊಗ್ಗ ತುಂಗಾನಗರ ಪೊ.ಠಾಣೆ, ಶಿವಮೊಗ್ಗ
ಗುರುರಾಜ್ ಕೆ.ಟಿ ತುಂಗಾನಗರ ಪೊ.ಠಾಣೆ, ಶಿವಮೊಗ್ಗ ಕರ್ನಾಟಕ ಲೋಕಾಯುಕ್ತ
ಚಂದ್ರಶೇಖರ ಕೆ.ಎನ್ ಕರ್ನಾಟಕ ಲೋಕಾಯುಕ್ತ ಹಿರಿಯೂರು ಗ್ರಾಮಾಂತರ ಪೊ.ಠಾಣೆ, ಚಿತ್ರದುರ್ಗ
ಓಂಪ್ರಕಾಶಗೌಡ ಬಿ ಮಾಸ್ತಿ ಪೊ.ಠಾಣೆ, ಕೋಲಾರ ರಾಜ್ಯ ಗುಪ್ತವಾರ್ತೆ
ಶಿವರಾಜ್ ಎಸ್. ಇಂಗಳೆ ಮಹಿಳಾ ಪೊ.ಠಾಣೆ, ಕೊಪ್ಪಳ ಕನಕಗಿರಿ ಪೊ.ಠಾಣೆ, ಕೊಪ್ಪಳ
ಮಧು ಟಿ.ಎಸ್ ಆಂತರಿಕ ಭದ್ರತಾ ವಿಭಾಗ ಕಡೂರು ವೃತ್ತ, ಚಿಕ್ಕಮಗಳೂರು
ರಫೀಕ್ ಎಂ ಕಡೂರು ವೃತ್ತ, ಚಿಕ್ಕಮಗಳೂರು ಪೊಲೀಸ್ ತರಬೇತಿ ಶಾಲೆ, ಕಡೂರು
ಶಿವಪ್ರಸಾದ್ ವಿ ಪೊಲೀಸ್ ತರಬೇತಿ ಶಾಲೆ, ಕಡೂರು ಕರ್ನಾಟಕ ಲೋಕಾಯುಕ್ತ
ಉಮೇಶ್ ಕುಮಾರ್ ಎಸ್.ಎಂ ಸೈಬರ್ ಕ್ರೈಂ, ಸಿ.ಒ.ಡಿ., ಬೆಂಗಳೂರು ಯಲಹಂಕ ನ್ಯೂಟೌನ್, ಬೆಂಗಳೂರು
ಸುರೇಶ್ ಎಸ್ ಬೆಸ್ಕಾಂ ಜಾಗೃತ ದಳ, ಕೋಲಾರ ಕೆ.ಆರ್.ಪುರಂ, ಬೆಂಗಳೂರು
ರಾಮಮೂರ್ತಿ ಬಿ ಕೆ.ಆರ್.ಪುರಂ, ಬೆಂಗಳೂರು ಕರ್ನಾಟಕ ಲೋಕಾಯುಕ್ತ
ವೆಂಕಟೇಶ್ ಆರ್ ಕರ್ನಾಟಕ ಲೋಕಾಯುಕ್ತ (ಎಸ್.ಐ.ಟಿ) ವಿ.ವಿ.ಪುರಂ, ಮೈಸೂರು
ವಿವೇಕಾನಂದ ವಿ.ವಿ.ಪುರಂ, ಮೈಸೂರು ಕರ್ನಾಟಕ ಲೋಕಾಯುಕ್ತ
ಮರುಳಸಿದ್ದಪ್ಪ ಆರ್. ದೊಡ್ಡಬಸಪ್ಪ ಕರ್ನಾಟಕ ಲೋಕಾಯುಕ್ತ ಹರಿಹರ ಟೌನ್, ದಾವಣಗೆರೆ
ಅಂಜನಪ್ಪ ಕೆ.ಎಸ್ ಕರ್ನಾಟಕ ಲೋಕಾಯುಕ್ತ ಮುಳಬಾಗಿಲು ವೃತ್ತ, ಕೋಲಾರ
ಕುಸುಮಾಧರ ಕೆ ಸಿ.ಎಸ್.ಪಿ ಕುಮಟಾ, ಉತ್ತರ ಕನ್ನಡ
ಯೋಗೇಶ್ ಕೆ.ಎಂ ಕುಮಟಾ, ಉತ್ತರ ಕನ್ನಡ ಕರ್ನಾಟಕ ಲೋಕಾಯುಕ್ತ
ಮಲ್ಲಿಕಾರ್ಜುನ ಆರ್. ಯಾತನೂರು ಜೆಸ್ಕಾಂ ಜಾಗೃತ ದಳ, ಬೀದರ್ ಬೀದರ್ ನ್ಯೂಟೌನ್, ಬೀದರ್
ವಿಜಯಕುಮಾರ್ ಬೀದರ್ ನ್ಯೂಟೌನ್, ಬೀದರ್ ಪಿ.ಟಿ.ಸಿ., ನಾಗೇನಹಳ್ಳಿ, ಕಲಬುರಗಿ
ಸುರೇಶ್ ಹೆಚ್. ಯಳ್ಳೂರು ಹೆಸ್ಕಾಂ ಜಾಗೃತ ದಳ, ಗದಗ ಆಜಾದ್‌ನಗರ, ದಾವಣಗೆರೆ
ವಾಹಿದ್ ಹುಸೇನ್ ಕೊತ್ವಾಲ್ ಪಿ.ಟಿ.ಸಿ., ನಾಗೇನಹಳ್ಳಿ, ಕಲಬುರಗಿ ಗಾಂಧಿಚೌಕ್, ವಿಜಯಪುರ
ಪ್ರದೀಪ್ ವೈ. ತಳಕೇರಿ ಗಾಂಧಿಚೌಕ್, ವಿಜಯಪುರ ಕರ್ನಾಟಕ ಲೋಕಾಯುಕ್ತ
ರಮೇಶ್ ಬಸಪ್ಪ ಗೋಕಾಕ್ ಪೊಲೀಸ್ ತರಬೇತಿ ಶಾಲೆ, ಧಾರವಾಡ ಕಾರವಾರ ಗ್ರಾಮಾಂತರ, ಉತ್ತರ ಕನ್ನಡ
ಉಳಿವಪ್ಪ ಹೆಚ್. ಸಾತೇನಹಳ್ಳಿ ಕಾರವಾರ ಗ್ರಾಮಾಂತರ, ಉತ್ತರ ಕನ್ನಡ ಕರ್ನಾಟಕ ಲೋಕಾಯುಕ್ತ
ಅಮರೇಶ್ ಹುಬ್ಬಳ್ಳಿ ಕರ್ನಾಟಕ ಲೋಕಾಯುಕ್ತ ಟಿ.ಬಿ. ಡ್ಯಾಂ ವೃತ್ತ, ವಿಜಯನಗರ
ಮಹಮ್ಮದ್ ಗೌಸ್ ಟಿ.ಬಿ. ಡ್ಯಾಂ ವೃತ್ತ, ವಿಜಯನಗರ ಕರ್ನಾಟಕ ಲೋಕಾಯುಕ್ತ
ಮಂಜು ಎಸ್.ಎಸ್ ಕರ್ನಾಟಕ ಲೋಕಾಯುಕ್ತ ಸಿ.ಸಿ.ಬಿ., ಬೆಂಗಳೂರು
ಮಹಾದೇವಯ್ಯ ಎಸ್ ಸಿ.ಸಿ.ಬಿ., ಬೆಂಗಳೂರು ಸಿ.ಸಿ.ಬಿ., ಬೆಂಗಳೂರು (ಮುಂದುವರಿಕೆ)
ಸಿದ್ರಾಯ್ ಬಾಳೋರ್ಗಿ ಕರ್ನಾಟಕ ಲೋಕಾಯುಕ್ತ ಸುರಪುರ ಟೌನ್, ಯಾದಗಿರಿ
ಉಮೇಶ್ ಎಂ ಸುರಪುರ ಟೌನ್, ಯಾದಗಿರಿ ರಾಜ್ಯ ಗುಪ್ತವಾರ್ತೆ
ಮಾರುತಿ ಎಸ್. ಗುಳ್ಳಾರಿ ಸಿ.ಸಿ.ಬಿ., ಹುಬ್ಬಳ್ಳಿ-ಧಾರವಾಡ ಕರ್ನಾಟಕ ಲೋಕಾಯುಕ್ತ
ಪ್ರಮೋದ್ ಕುಮಾರ್ ಸಿ.ಐ.ಡಿ. ಟಿ.ಟಿ & ಆರ್.ಎಸ್.ಐ, ಬೆಂಗಳೂರು
ಮಂಜೇಗೌಡ ಎ.ಜಿ ಟಿ.ಟಿ & ಆರ್.ಎಸ್.ಐ, ಬೆಂಗಳೂರು ಕರ್ನಾಟಕ ಲೋಕಾಯುಕ್ತ
ಅನಿಲ್ ಕುಮಾರ್ ಪಿ.ಎನ್ ವಿ.ವಿ.ಐ.ಪಿ. ಭದ್ರತೆ, ಬೆಂಗಳೂರು ಮಾಜಿ ಪ್ರಧಾನ ಮಂತ್ರಿಗಳ ಭದ್ರತೆ, ಬೆಂಗಳೂರು
ನಾಗರಾಜ್ ಎ.ಡಿ ಮಾಜಿ ಪ್ರಧಾನ ಮಂತ್ರಿಗಳ ಭದ್ರತೆ, ಬೆಂಗಳೂರು ಡಿ.ಸಿ.ಆರ್.ಬಿ., ಚಿಕ್ಕಬಳ್ಳಾಪುರ
ಸಂದೀಪ್ ಪಿ. ಕೌರಿ ಡಿ.ಸಿ.ಆರ್.ಬಿ., ಚಿಕ್ಕಬಳ್ಳಾಪುರ ಕರ್ನಾಟಕ ಲೋಕಾಯುಕ್ತ (ಎಸ್.ಐ.ಟಿ)
ರಮೇಶ್ ಕುಲಕರ್ಣಿ ಮಹಿಳಾ ಪೊ.ಠಾಣೆ, ಬಳ್ಳಾರಿ ಕರ್ನಾಟಕ ಲೋಕಾಯುಕ್ತ
ದೇವೇಂದ್ರಪ್ಪ ಕೆ.ಎಸ್ ಸಿ.ಸಿ.ಬಿ., ಬೆಂಗಳೂರು ರಾಜ್ಯ ಗುಪ್ತವಾರ್ತೆ
ಸತೀಶ್ ಡಿ ಸೈಬರ್ ಕ್ರೈಂ, ಹಾಸನ ಹಾಸನ ಗ್ರಾಮಾಂತರ
ಜೈಪಾಲ್ ಎ. ಪಾಟೀಲ್ ಕರ್ನಾಟಕ ಲೋಕಾಯುಕ್ತ ಪೊಲೀಸ್ ತರಬೇತಿ ಶಾಲೆ, ಧಾರವಾಡ
ಶಿವಶರಣ ಎಂ. ಅವಜಿ ಬೆಳ್ತಂಗಡಿ ಪೊ.ಠಾಣೆ ಹೆಸ್ಕಾಂ ಜಾಗೃತ ದಳ, ಬಾಗಲಕೋಟೆ
ಶೀಲಾ ಕೆ ಸಿ.ಐ.ಡಿ. ಪೊಲೀಸ್ ತರಬೇತಿ ಶಾಲೆ, ಥಣಿಸಂದ್ರ
ರೇವತಿ ಎನ್ ಕರ್ನಾಟಕ ಲೋಕಾಯುಕ್ತ ಸಿ.ಎಸ್.ಪಿ. (ಕರಾವಳಿ ಕಾವಲು ಪಡೆ)
ಉದಯರವಿ ನಿಂಗಪ್ಪ ರಾಜ್ಯ ಗುಪ್ತವಾರ್ತೆ ಡಿ.ಎಸ್.ಬಿ., ರಾಯಚೂರು
ರಾಮಪ್ಪ ಜಲಗೇರಿ ಡಿ.ಎಸ್.ಬಿ., ರಾಯಚೂರು ರಾಜ್ಯ ಗುಪ್ತವಾರ್ತೆ
ಭವ್ಯ ಡಿ.ಎಂ ನಗರ ವಿಶೇಷ ಶಾಖೆ, ಬೆಂಗಳೂರು ಆಂತರಿಕ ಭದ್ರತಾ ವಿಭಾಗ
ಮುದ್ದುರಾಜು ವೈ ಕರ್ನಾಟಕ ಲೋಕಾಯುಕ್ತ ರಾಜ್ಯ ಗುಪ್ತವಾರ್ತೆ
ಚನ್ನಯ್ಯ ಹಿರೇಮಠ್ ಕರ್ನಾಟಕ ಲೋಕಾಯುಕ್ತ ಡಿ.ಎಸ್.ಬಿ., ಉತ್ತರ ಕನ್ನಡ
ವಸಂತ್ ಎಸ್.ಹೆಚ್ ಕರ್ನಾಟಕ ಲೋಕಾಯುಕ್ತ ಡಿ.ಎಸ್.ಬಿ., ಚಾಮರಾಜನಗರ

 

ಸೇರುವಿಕೆ ಕಾಲ ಬಳಸುವಂತಿಲ್ಲ

ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಿರುವಂತೆ, ಸಂಬಂಧಪಟ್ಟ ಘಟಕಾಧಿಕಾರಿಗಳು ಮೇಲ್ಕಂಡ ಅಧಿಕಾರಿಗಳನ್ನು ಹಾಲಿ ಕರ್ತವ್ಯದಿಂದ ಬಿಡುಗಡೆಗೊಳಿಸಬೇಕು. ಯಾವುದೇ ಸೇರುವಿಕೆ ಕಾಲವನ್ನು ಉಪಯೋಗಿಸಿಕೊಳ್ಳದೆ, ನಿಯುಕ್ತಿಗೊಳಿಸಲಾದ ಸ್ಥಳದಲ್ಲಿ ಕೂಡಲೇ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಬೇಕು.

ಅಧಿಕಾರಿಗಳು ಕರ್ತವ್ಯದಿಂದ ಬಿಡುಗಡೆಯಾದ ಹಾಗೂ ನೂತನ ಸ್ಥಳದಲ್ಲಿ ವರದಿ ಮಾಡಿಕೊಂಡಿರುವ ಬಗ್ಗೆ ಪಾಲನಾ ವರದಿಯನ್ನು ಪೊಲೀಸ್ ಪ್ರಧಾನ ಕಛೇರಿಗೆ ಸಲ್ಲಿಸುವಂತೆ ಸೂಚಿಸಲಾಗಿದೆ.

ಸ್ಥಳ ನಿಯುಕ್ತಿಯಾಗದ ಪಿಐಗಳಿಗೆ ಸೂಚನೆ

ಸದರಿ ಆದೇಶದಲ್ಲಿ ಸ್ಥಳ ನಿಯುಕ್ತಿಗೊಳಿಸದೆ ಇರುವ ಪಿ.ಐ. (ಸಿವಿಲ್) ವೃಂದದ ಅಧಿಕಾರಿಗಳು, ಮುಂದಿನ ಸ್ಥಳ ನಿಯುಕ್ತಿಗಾಗಿ ಪೊಲೀಸ್ ಪ್ರಧಾನ ಕಛೇರಿಯಲ್ಲಿ ವರದಿ ಮಾಡಿಕೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಆದೇಶದ ಮುಖ್ಯಾಂಶಗಳು

  • ಆದೇಶ ದಿನಾಂಕ: 01-10-2026
  • ಉಲ್ಲೇಖ: ಪೊಲೀಸ್ ಸಿಬ್ಬಂದಿ ಮಂಡಳಿಯ ನಡವಳಿ, 01-10-2026
  • ವೃಂದ: ಪೊಲೀಸ್ ಇನ್‌ಸ್ಪೆಕ್ಟರ್ (ಸಿವಿಲ್)
  • ಸ್ಥಳ ನಿಯುಕ್ತಿ: 49 ಅಧಿಕಾರಿಗಳು
  • ಜಾರಿಗೆ: ತಕ್ಷಣದಿಂದ
  • ಸೇರುವಿಕೆ ಕಾಲ: ಉಪಯೋಗಿಸಿಕೊಳ್ಳುವಂತಿಲ್ಲ
  • ಅನುಮೋದನೆ: ಡಿಜಿಪಿ ಮತ್ತು ಐಜಿಪಿ

ಡಿಜಿಪಿ ಮತ್ತು ಐಜಿಪಿ ರವರಿಂದ ಅನುಮೋದಿಸಲ್ಪಟ್ಟಿರುವ ಈ ಆದೇಶದಂತೆ, ಸಂಬಂಧಪಟ್ಟ ಅಧಿಕಾರಿಗಳು ನೂತನ ಸ್ಥಳಗಳಲ್ಲಿ ತಕ್ಷಣ ಕರ್ತವ್ಯಕ್ಕೆ ಹಾಜರಾಗಬೇಕಾಗಿದೆ.

Police Inspector Transfer Karnataka

CLICK HERE – DOWNLOAD

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Leave a Comment

You cannot copy content of this page

error: Content is protected !!