UPI Wrong Transfer:UPI ಮೂಲಕ ಅಪರಿಚಿತರಿಗೆ ಹಣ ಹೋದರೆ ಏನು ಮಾಡಬೇಕು? ಸ್ಟೆಪ್-ಬೈ-ಸ್ಟೆಪ್ ಗೈಡ್-2026
UPI Wrong Transfer:ಅಪರಿಚಿತರಿಗೆ UPI ಮೂಲಕ ತಪ್ಪಾಗಿ ಹಣ ಕಳುಹಿಸಿದಿರಾ? ಹಣ ಮರಳಿ ಪಡೆಯಲು ಬ್ಯಾಂಕ್, UPI ಆಪ್ ಹಾಗೂ ಸೈಬರ್ ಕ್ರೈಂ ಮೂಲಕ ಕೈಗೊಳ್ಳಬೇಕಾದ ಕ್ರಮಗಳನ್ನು ಇಲ್ಲಿ ತಿಳಿದುಕೊಳ್ಳಿ.
ಅಪರಿಚಿತರಿಗೆ UPI ಮೂಲಕ ಹಣ ಕಳುಹಿಸಿದರೆ ಮರಳಿ ಪಡೆಯೋದು ಹೇಗೆ?
ಇಂದಿನ ದಿನಗಳಲ್ಲಿ UPI (Google Pay, PhonePe, Paytm, BHIM ಇತ್ಯಾದಿ) ಮೂಲಕ ಹಣ ಕಳುಹಿಸುವುದು ಬಹಳ ಸುಲಭ. ಆದರೆ ಒಂದು ಸಣ್ಣ ತಪ್ಪಿನಿಂದ ಅಪರಿಚಿತ ವ್ಯಕ್ತಿಗೆ ಹಣ ಹೋಗಿಬಿಟ್ಟರೆ ಅದನ್ನು ಮರಳಿ ಪಡೆಯುವುದು ಅಷ್ಟು ಸುಲಭವಲ್ಲ. ಹಾಗಾದರೆ ಏನು ಮಾಡಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ.
UPI ಮೂಲಕ ತಪ್ಪಾಗಿ ಹಣ ಕಳುಹಿಸಿದರೆ ಬ್ಯಾಂಕ್ ಜವಾಬ್ದಾರಿ ಏನು?
UPI ಮೂಲಕ ತಪ್ಪಾಗಿ ಹಣ ಕಳುಹಿಸಿದರೆ ಬ್ಯಾಂಕ್ ಅಥವಾ UPI ಅಪ್ ನೇರವಾಗಿ ಜವಾಬ್ದಾರರಾಗಿರುವುದಿಲ್ಲ.
ಯಾಕೆಂದರೆ, ಹಣ ಕಳುಹಿಸುವ ಮೊದಲು ಬಳಕೆದಾರನೇ ವಿವರಗಳನ್ನು ದೃಢೀಕರಿಸುತ್ತಾನೆ.
ತಕ್ಷಣ ಮಾಡಬೇಕಾದ ಮುಖ್ಯ ಕೆಲಸಗಳು:
1. ನಿಮ್ಮ UPI ಅಪ್‌ನಲ್ಲಿ ದೂರು ದಾಖಲು ಮಾಡಿ
▪️ಹಣ ತಪ್ಪಾಗಿ ಹೋಗಿದೆ ಎಂದು ತಿಳಿದ ಕೂಡಲೇ:
▪️ನಿಮ್ಮ UPI ಅಪ್ ತೆರೆಯಿರಿ
▪️Help / Support / Raise a Complaint ಆಯ್ಕೆಮಾಡಿ
▪️“Wrong Transfer” / “Sent to Wrong Person” ಎಂಬ ದೂರು ದಾಖಲಿಸಿ
ತಡಮಾಡದೆ ದೂರು ಕೊಟ್ಟರೆ ಹಣ ವಾಪಸ್ಸು ಬರುವ ಸಾಧ್ಯತೆ ಹೆಚ್ಚು.:
2. ನಿಮ್ಮ ಬ್ಯಾಂಕ್ ಮೂಲಕ ವಿನಂತಿ ಹೋಗುತ್ತದೆ.
▪️ನೀವು ದೂರು ದಾಖಲಿಸಿದ ನಂತರ:
▪️ನಿಮ್ಮ ಬ್ಯಾಂಕ್ ತಪ್ಪಾಗಿ ಹಣ ಹೋದ ಬ್ಯಾಂಕ್‌ಗೆ ವಿನಂತಿ ಕಳುಹಿಸುತ್ತದೆ
▪️ಆ ಬ್ಯಾಂಕ್ ಹಣ ಪಡೆದ ವ್ಯಕ್ತಿಯನ್ನು ಸಂಪರ್ಕಿಸುತ್ತದೆ
3. ಹಣ ಪಡೆದ ವ್ಯಕ್ತಿಯ ಸಹಮತಿ ಅಗತ್ಯ:
ಹಣ ಪಡೆದ ವ್ಯಕ್ತಿ ಸಹಮತ ನೀಡಿದರೆ,
▪️3 ರಿಂದ 7 ಕೆಲಸದ ದಿನಗಳಲ್ಲಿ ಹಣ ನಿಮ್ಮ ಖಾತೆಗೆ ಹಿಂತಿರುಗಬಹುದು
ಆ ವ್ಯಕ್ತಿ ನಿರಾಕರಿಸಿದರೆ,
▪️ಬ್ಯಾಂಕ್ ಯಾವುದೇ ಬಲವಂತ ಮಾಡಲಾಗುವುದಿಲ್ಲ
ಹಣ ಮರಳಿಸಲು ನಿರಾಕರಿಸಿದರೆ ಏನು ಮಾಡಬಹುದು?
4. ಪೊಲೀಸ್ ದೂರು ನೀಡುವ ಆಯ್ಕೆ:
ಹಣ ಪಡೆದ ವ್ಯಕ್ತಿ ಹಣ ಮರಳಿಸಲು ಒಪ್ಪದಿದ್ದರೆ:
▪️ನೀವು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು (FIR) ನೀಡಬಹುದು
▪️Cyber Crime Portalಲ್ಲೂ ದೂರು ದಾಖಲಿಸಬಹುದು
ಆದರೆ, ಇದರಿಂದ ಹಣ ಸಿಗುವ ಖಾತರಿ ಇರುವುದಿಲ್ಲ.
ಮುಖ್ಯ ಎಚ್ಚರಿಕೆಗಳು (Very Important Tips)
▪️ಹಣ ಕಳುಹಿಸುವ ಮೊದಲು UPI ID / Mobile Number / Name ಚೆಕ್ ಮಾಡಿ
▪️ದೊಡ್ಡ ಮೊತ್ತ ಕಳಿಸುವ ಮುನ್ನ ₹1 ಅಥವಾ ₹10 test payment ಮಾಡಿ
▪️ಅಪರಿಚಿತರಿಗೆ ಬಂದ request ಅನ್ನು ಒಪ್ಪಿಕೊಳ್ಳಬೇಡಿ
▪️Screen share / OTP share ಎಂದಿಗೂ ಮಾಡಬೇಡಿ
UPI ಮೂಲಕ ತಪ್ಪಾಗಿ ಹಣ ಕಳುಹಿಸಿದರೆ ಅದನ್ನು ಮರಳಿ ಪಡೆಯುವುದು ಪೂರ್ಣವಾಗಿ ಹಣ ಪಡೆದ ವ್ಯಕ್ತಿಯ ಸಹಮತದ ಮೇಲೆ ಅವಲಂಬಿತವಾಗಿದೆ.
ಆದುದರಿಂದ ಯಾರಿಗಾದರೂ ಹಣ ಕಳಿಸುವ ಮೊದಲು ಎಚ್ಚರಿಕೆ ಅತ್ಯಗತ್ಯ.



