Notional Increment:ಕಾಲ್ಪನಿಕ ವೇತನ ಬಡ್ತಿಗೆ ಬಂದಿಸಿದಂತೆ ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ ಪ್ರಕಟ-2026

Notional Increment:ಕಾಲ್ಪನಿಕ ವೇತನ ಬಡ್ತಿಗೆ ಬಂದಿಸಿದಂತೆ ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ ಪ್ರಕಟ-2026

Notional Increment:ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಯ ನಿಯಮ 51(1) ರ ಪ್ರಕಾರ, ವಾರ್ಷಿಕ ವೇತನ ಬಡ್ತಿಯು, “ಅದನ್ನು ಗಳಿಸಿದ ದಿನದ ಮರುದಿನದಿಂದ” ಪ್ರಾಪ್ತವಾಗುತ್ತದೆ. ಇದರಿಂದಾಗಿ, ಒಂದು ವರ್ಷದ ಅರ್ಹತಾದಾಯಕ ಸೇವೆಯನ್ನು ತೃಪ್ತಿಕರವಾಗಿ ಪೂರ್ಣಗೊಳಿಸಿ ವಾರ್ಷಿಕ ವೇತನ ಬಡ್ತಿ ದಿನಾಂಕದ ಹಿಂದಿನ ದಿನ ನಿವೃತ್ತಿ ಹೊಂದುವ ನೌಕರರು, ಕೇವಲ ಒಂದು ದಿನದ ತಾಂತ್ರಿಕತೆಯ ಆಧಾರದ ಮೇಲೆ ತಾವು ಗಳಿಸಿದ ಕೊನೆಯ ವಾರ್ಷಿಕ ವೇತನ ಬಡ್ತಿಯ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುವುದಿಲ್ಲ; ಇದು ಅವರ ಪಿಂಚಣಿ ಲೆಕ್ಕಾಚಾರವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ.

ಮಾನ್ಯ ಸರ್ವೋಚ್ಚ ನ್ಯಾಯಾಲಯವು ಕೆ.ಪಿ.ಟಿ.ಸಿ.ಎಲ್. ವಿರುದ್ಧ ಸಿ. ಪಿ. ಮುಂದಿನಮನಿ ಪ್ರಕರಣದಲ್ಲಿ (ದಿನಾಂಕ: 11.4.2023) ಹಾಗೂ ಭಾರತ ಸರ್ಕಾರ ವಿರುದ್ಧ ಎಂ. ಸಿದ್ದರಾಜು ಪ್ರಕರಣದಲ್ಲಿ, ವಾರ್ಷಿಕ ವೇತನ ಬಡ್ತಿಯು ಒಂದು ವರ್ಷದ ತೃಪ್ತಿಕರ ಸೇವೆಯನ್ನು ಸಲ್ಲಿಸಿದ್ದಕ್ಕಾಗಿ ‘ಗಳಿಸಲ್ಪಡುತ್ತದೆ ಎಂದೂ, ಬಡ್ತಿ ಪ್ರಾಪ್ತವಾಗುವ ದಿನದಂದು ಸೇವೆಯಲ್ಲಿ ಇಲ್ಲ ಎಂಬ ಕಾರಣಕ್ಕೆ ಅದನ್ನು ನಿರಾಕರಿಸುವುದು ಸರಿಯಲ್ಲ ಎಂದೂ ಸ್ಪಷ್ಟಪಡಿಸಿದೆ. ಸದರಿ ತೀರ್ಪಿನ ಮರುಪರಿಶೀಲನಾ ಅರ್ಜಿಯು ದಿನಾಂಕ: 18.12.2024 ರಂದು ವಜಾಗೊಂಡಿದ್ದು, ದಿನಾಂಕ: 6.9.2024 ರ ಮಧ್ಯಂತರ ಆದೇಶದ ನಿರ್ದೇಶನಗಳನ್ನು ಅಂತಿಮಗೊಳಿಸಿದ ಮಾನ್ಯ ಸರ್ವೋಚ್ಚ ನ್ಯಾಯಾಲಯದ ದಿನಾಂಕ: 20.2.2025 ರ ಅಂತಿಮ ಆದೇಶದ (M.A. Diary No. 2400/2024) ಮೂಲಕ ಈ ವಿಷಯವು ಅಂತಿಮವಾಗಿ ಇತ್ಯರ್ಥಗೊಂಡಿರುತ್ತದೆ.

ಮೇಲ್ಕಂಡ ತೀರ್ಪುಗಳ ಹಿನ್ನೆಲೆಯಲ್ಲಿ ಭಾರತ ಸರ್ಕಾರವು ತನ್ನ ಅಧಿಕೃತ ಜ್ಞಾಪನ ದಿನಾಂಕ:

20.05.2025 ರ ಮೂಲಕ, 30ನೇ ಜೂನ್/31ನೇ ಡಿಸೆಂಬರ್‌ರಂದು ನಿವೃತ್ತರಾಗುವ ತನ್ನ ನೌಕರರಿಗೆ ಕೇವಲ ಪಿಂಚಣಿ ಲೆಕ್ಕಾಚಾರದ ಉದ್ದೇಶಕ್ಕಾಗಿ ಒಂದು ಕಾಲ್ಪನಿಕ ವಾರ್ಷಿಕ ವೇತನ ಬಡ್ತಿಯನ್ನು ಮಂಜೂರು ಮಾಡಿದೆ.

ರಾಜ್ಯ ಮಟ್ಟದಲ್ಲಿ, ಮಾನ್ಯ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯು ಅರ್ಜಿ ಸಂಖ್ಯೆ 3113/2024 ರಲ್ಲಿ [ಶ್ರೀ ಕೆ. ಸಿದ್ದರಾಜು, ತಹಸೀಲ್ದಾರ್ (ನಿವೃತ್ತು] ದಿನಾಂಕ: 20.11.2024 ರ ಆದೇಶದ ಮೂಲಕ, ‘ಕೇವಲ ಪಿಂಚಣಿ ಲೆಕ್ಕಾಚಾರದ ಉದ್ದೇಶಕ್ಕಾಗಿ ಒಂದು ಕಾಲ್ಪನಿಕ ವಾರ್ಷಿಕ ವೇತನ ಬಡ್ತಿಯನ್ನು ಮಂಜೂರು ಮಾಡುವಂತೆ ನಿರ್ದೇಶಿಸಿರುತ್ತದೆ.

20.05.2025 ರ ಮೂಲಕ, 30ನೇ ಜೂನ್/31ನೇ ಡಿಸೆಂಬರ್‌ರಂದು ನಿವೃತ್ತರಾಗುವ ತನ್ನ ನೌಕರರಿಗೆ ಕೇವಲ ಪಿಂಚಣಿ ಲೆಕ್ಕಾಚಾರದ ಉದ್ದೇಶಕ್ಕಾಗಿ ಒಂದು ಕಾಲ್ಪನಿಕ ವಾರ್ಷಿಕ ವೇತನ ಬಡ್ತಿಯನ್ನು ಮಂಜೂರು ಮಾಡಿದೆ.

ರಾಜ್ಯ ಮಟ್ಟದಲ್ಲಿ, ಮಾನ್ಯ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯು ಅರ್ಜಿ ಸಂಖ್ಯೆ 3113/2024 ರಲ್ಲಿ ಶ್ರೀ ಕೆ. ಸಿದ್ದರಾಜು, ತಹಸೀಲ್ದಾರ್ (ನಿವೃತ್ತು] ದಿನಾಂಕ: 20.11.2024 ರ ಆದೇಶದ ಮೂಲಕ, ‘ಕೇವಲ ಪಿಂಚಣಿ ಲೆಕ್ಕಾಚಾರದ ಉದ್ದೇಶಕ್ಕಾಗಿ ಒಂದು ಕಾಲ್ಪನಿಕ ವಾರ್ಷಿಕ ವೇತನ ಬಡ್ತಿಯನ್ನು ಮಂಜೂರು ಮಾಡುವಂತೆ ನಿರ್ದೇಶಿಸಿರುತ್ತದೆ.

ಮಾನ್ಯ ಸರ್ವೋಚ್ಚ ನ್ಯಾಯಾಲಯವು ಅಭಿಪ್ರಾಯ ಪಟ್ಟಿರುವಂತೆ, ಒಂದೇ ಯೋಜನೆಯಡಿ ಬರುವ ಪಿಂಚಣಿದಾರರು ಏಕರೂಪದ ವರ್ಗವಾಗಿದ್ದು, ಕೇವಲ ನಿವೃತ್ತಿ ದಿನಾಂಕದ ಆಧಾರದ ಮೇಲೆ ಸಮಾನ ಸ್ಥಿತಿಯ ನಿವೃತ್ತರನ್ನು ವಿಭಜಿಸಿ ಕೆಲವರಿಗೆ ಸೌಲಭ್ಯ ನೀಡಿ ಉಳಿದವರಿಗೆ ನಿರಾಕರಿಸುವುದು ಸಂವಿಧಾನದ ಅನುಚ್ಛೇದ 14ಕ್ಕೆ ವಿರುದ್ಧವಾಗುತ್ತದೆ; ಆದಾಗ್ಯೂ, ಇಂತಹ ಸೌಲಭ್ಯವನ್ನು ನಿಗದಿತ ದಿನಾಂಕದಿಂದ ಭವಿಷ್ಣಾನ್ವಯವಾಗಿ ಮಾತ್ರ (ಹಿಂದಿನ ಅವಧಿಯ ಬಾಕಿ ಇಲ್ಲದೆ) ನೀಡುವುದು ಸಿಂಧುವಾಗಿರುತ್ತದೆ. ಈ ತತ್ವದ ಅನುಸಾರ, ಪ್ರಸ್ತುತ ಸೌಲಭ್ಯವನ್ನು ನಿವೃತ್ತಿ ದಿನಾಂಕದ ಯಾವುದೇ ‘ಕಟ್-ಆಫ್ ಇಲ್ಲದೆ ಸಮಾನ ಸ್ಥಿತಿಯಲ್ಲಿರುವ ಎಲ್ಲಾ ನಿವೃತ್ತರಿಗೆ ವಿಸ್ತರಿಸಲು ಉದ್ದೇಶಿಸಲಾಗಿದ್ದು, ಅದರ ಆರ್ಥಿಕ ಪರಿಣಾಮವನ್ನು ಭವಿಷ್ಯಾನ್ವಯಕ್ಕೆ ಸೀಮಿತಗೊಳಿಸಲಾಗಿದೆ.

ಮಾನ್ಯ ಸರ್ವೋಚ್ಚ ನ್ಯಾಯಾಲಯದ ಮೇಲ್ಕಂಡ ಆದೇಶಗಳು ಈ ವಿಷಯದಲ್ಲಿ ಮಾರ್ಗದರ್ಶಿ ತತ್ವಗಳಾಗಿದ್ದು, ಸದರಿ ತೀರ್ಪುಗಳ ವ್ಯಾಪ್ತಿಯಡಿ ರಾಜ್ಯ ಸರ್ಕಾರವು ತನ್ನದೇ ಆದ ನೀತಿಯನ್ನು ಈ ಕೆಳಕಂಡಂತೆ ರೂಪಿಸಿ ಆದೇಶಿಸಿದೆ.

ಸರ್ಕಾರಿ ಆದೇಶ ಸಂಖ್ಯೆ: ಆಇ 3 ಎಸ್‌ಆರ್‌ಎಸ್ 2026. ಬೆಂಗಳೂರು, ದಿನಾಂಕ:04-06-2026

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ವಾರ್ಷಿಕ ವೇತನ ಬಡ್ತಿಗೆ ಅಗತ್ಯವಾದ ಒಂದು ವರ್ಷದ ಅರ್ಹತಾದಾಯಕ ಸೇವೆಯನ್ನು ತೃಪ್ತಿಕರವಾಗಿ ಪೂರ್ಣಗೊಳಿಸಿ, ಅಂತಹ ವಾರ್ಷಿಕ ವೇತನ ಬಡ್ತಿಯನ್ನು ಗಳಿಸಿದ ದಿನಾಂಕದಂದು ವಯೋನಿವೃತ್ತಿ ಅಥವಾ ಸ್ವಯಂನಿವೃತ್ತಿ ಹೊಂದುವ ರಾಜ್ಯ ಸರ್ಕಾರಿ ನೌಕರರಿಗೆ, ಅವರ ಮಾಸಿಕ ಪಿಂಚಣಿಯನ್ನು ನಿಗಧಿಪಡಿಸುವ ಉದ್ದೇಶಕ್ಕಾಗಿ ಮಾತ್ರ ಒಂದು ವಾರ್ಷಿಕ ವೇತನ ಬಡ್ತಿಯನ್ನು ಕಾಲ್ಪನಿಕವಾಗಿ (notional) ಮಂಜೂರು ಮಾಡಲು ಈ ಕೆಳಕಂಡ ಷರತ್ತುಗಳಿಗೊಳಪಟ್ಟು ಆದೇಶಿಸಿದೆ;

i. ಆರ್ಥಿಕ ಪ್ರಯೋಜನವು ಈ ಆದೇಶದ ದಿನಾಂಕದಿಂದ ಭವಿಷ್ಯವರ್ತಿಯಾಗಿ ಲಭ್ಯವಾಗತಕ್ಕದ್ದು.

ii. ಸದರಿ ಕಾಲ್ಪನಿಕ ವಾರ್ಷಿಕ ವೇತನ ಬಡ್ತಿಯನ್ನು ನೌಕರನು ಕೊನೆಯದಾಗಿ ಪಡೆದ ವೇತನಕ್ಕೆ ಸೇರಿಸಿ, ಕೇವಲ ಮಾಸಿಕ ಪಿಂಚಣಿ ಲೆಕ್ಕಾಚಾರದ ಉದ್ದೇಶಕ್ಕಾಗಿ ಮಾತ್ರ ಪರಿಗಣಿಸತಕ್ಕದ್ದು. ಇದನ್ನು ನಿವೃತ್ತಿ ಉಪಧನ (D.C.R.G.), ಪರಿವರ್ತಿತ ಪಿಂಚಣಿ (Commutation), ಗಳಿಕೆ ರಜೆ ನಗದೀಕರಣ ಸೇರಿದಂತೆ ಬೇರೆ ಯಾವುದೇ ನಿವೃತ್ತಿ/ಸೇವಾಂತ್ಯ ಸೌಲಭ್ಯಗಳ ಲೆಕ್ಕಾಚಾರಕ್ಕೆ ಪರಿಗಣಿಸುವಂತಿಲ್ಲ. ಸದರಿ ಸೌಲಭ್ಯಗಳನ್ನು ನೌಕರನು ವಾಸ್ತವವಾಗಿ ಪಡೆದ ಅಂತಿಮ ವೇತನದ ಆಧಾರದ ಮೇಲೆಯೇ ಲೆಕ್ಕ ಹಾಕತೆಕ್ಕದ್ದು.

i. ಸ್ಥಗಿತ ವೇತನ ಬಡ್ತಿ (Stagnation Increment) ಸ್ವಯಂಚಾಲಿತವಾಗಿ ಪ್ರಾಪ್ತವಾಗದೆ, ಪ್ರತಿ ಬಾರಿಯೂ ಪ್ರತ್ಯೇಕ ಕಾರ್ಯಕಾರಿ ಆದೇಶದ ಮೂಲಕ ಮಂಜೂರಾಗುವುದರಿಂದ ಹಾಗೂ ಈ ವೇತನ ಬಡ್ತಿಗೆ ನಿಗದಿತವಾದ ‘ಗಳಿಸಿದ ದಿನಾಂಕ ಇಲ್ಲದಿರುವುದರಿಂದ, ಈ ಆದೇಶದ ವ್ಯಾಪ್ತಿಯಿಂದ ಸ್ಥಗಿತ ವೇತನ ಬಡ್ತಿಯನ್ನು ಹೊರತುಪಡಿಸಲಾಗಿದೆ. ಈ ಸೌಲಭ್ಯವು ಕರ್ನಾಟಕ ನಾಗರಿಕ ಸೇವಾ  ನಿಯಮಾವಳಿಯ ನಿಯಮ 51 ರ ಅಡಿಯ ಸಾಮಾನ್ಯ ವಾರ್ಷಿಕ ವೇತನ ಬಡ್ತಿಗೆ ಮಾತ್ರ ಸೀಮಿತವಾಗಿರುತ್ತದೆ.

iv. ಈ ಆದೇಶದ ಸೌಲಭವನ್ನು ಪಡೆಯಲರ್ಹ ಪಿಂಚಣಿದಾರರಿಗೆ ಮತ್ತು ಅಂತಹ ಪಿಂಚಣಿದಾರರು ಮೃತಪಟ್ಟಿದ್ದಲ್ಲಿ ಅವರ ಕುಟುಂಬ ಪಿಂಚಣಿದಾರರಿಗೆ ಭವಿಷ್ಯವರ್ತಿಯಾಗಿ ಮಾತ್ರ ಮಂಜೂರು ಮಾಡತಕ್ಕದ್ದು. ಈ ಆದೇಶದಡಿಯಲ್ಲಿ ಯಾವುದೇ ವೇತನ ಬಾಕಿ ಅಥವಾ ಪಿಂಚಣಿ ಅಥವಾ ಕುಟುಂಬ ಪಿಂಚಣಿ ಬಾಕಿಯನ್ನು ಪಾವತಿಸಲು ಅವಕಾಶವಿಲ್ಲ.

v. ಸೇವೆಯಲ್ಲಿರುವಾಗಲೇ ಮೃತಪಟ್ಟ ಪ್ರಕರಣಗಳನ್ನು ‘ನಿವೃತ್ತಿ’ ಎಂದು ಪರಿಗಣಿಸಲಾಗುವುದಿಲ್ಲವಾದ್ದರಿಂದ ಅಂತಹ ಪ್ರಕರಣಗಳಿಗೆ ಮತ್ತು ಕಡ್ಡಾಯ ನಿವೃತ್ತಿಗೊಳಿಸುವ ದಂಡನೆಯನ್ನು ವಿಧಿಸಿದ ಪ್ರಕರಣಗಳಿಗೆ ಈ ಆದೇಶ ಅನ್ವಯಿಸುವುದಿಲ್ಲ.

vi. ಮಾನ್ಯ ನ್ಯಾಯಾಲಯ/ನ್ಯಾಯಮಂಡಳಿಯ ನಿರ್ದಿಷ್ಟ ಆದೇಶಗಳಿರುವ ಪ್ರಕರಣಗಳಲ್ಲಿ, ಆಯಾ ಆದೇಶದ ದಿನಾಂಕದಿಂದ ಜಾರಿಗೆ ಬರುವಂತೆ, ಈ ಆದೇಶದ ಕಾಲ್ಪನಿಕ ವೇತನ ಬಡ್ತಿಯನ್ನು ಮಾಸಿಕ ನಿವೃತ್ತಿ ವೇತನಕ್ಕಾಗಿ ಮಾತ್ರ ಮಂಜೂರು ಮಾಡತಕ್ಕದ್ದು.

vii. ಪಿಂಚಣಿ ಮಂಜೂರಾತಿ ಪ್ರಾಧಿಕಾರಗಳು ಮತ್ತು ಮಹಾಲೇಖಪಾಲರ ಕಚೇರಿಯು ಇದಕ್ಕನುಗುಣವಾಗಿ ಕ್ರಮ ಕೈಗೊಳ್ಳತಕ್ಕದ್ದು. ಈ ಬಾಬಿನ ವೆಚ್ಚವನ್ನು ಸಂಬಂಧಪಟ್ಟ ಪಿಂಚಣಿ ಲೆಕ್ಕಶೀರ್ಷಿಕೆಯಡಿ ಭರಿಸತಕ್ಕದ್ದು.

ಈ ಕಾಲ್ಪನಿಕ ವೇತನ ಬಡ್ತಿ ಮಂಜೂರಾತಿ ಕುರಿತು ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗೆ ಸೂಕ್ತ ತಿದ್ದುಪಡಿಯನ್ನು ಪ್ರತ್ಯೇಕವಾಗಿ ಹೊರಡಿಸಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

Notional Increment (ಕಾಲ್ಪನಿಕ ವಾರ್ಷಿಕ ವೇತನ ಬಡ್ತಿ) ನೀಡುವ ಉದ್ದೇಶವೇನು?

 

Notional Increment ನೀಡುವ ಮುಖ್ಯ ಉದ್ದೇಶವೆಂದರೆ, ಒಂದು ವರ್ಷ ಪೂರ್ತಿ ಸೇವೆ ಸಲ್ಲಿಸಿರುವ ಸರ್ಕಾರಿ ನೌಕರರು ವಾರ್ಷಿಕ ವೇತನ ಬಡ್ತಿ ದೊರೆಯುವ ದಿನಾಂಕದ ಒಂದು ದಿನ ಮುಂಚಿತವಾಗಿ ನಿವೃತ್ತಿಯಾಗಿದ್ದರೂ, ಅವರ ಸೇವೆಯನ್ನು ಪರಿಗಣಿಸಿ ನ್ಯಾಯಸಮ್ಮತ ಪ್ರಯೋಜನವನ್ನು ನೀಡುವುದು.

ಪ್ರಮುಖ ಉದ್ದೇಶಗಳು:

✅ ಸೇವೆಗೆ ನ್ಯಾಯ ಒದಗಿಸುವುದು – ನೌಕರರು ಪೂರ್ಣ ವರ್ಷ ಸೇವೆ ಸಲ್ಲಿಸಿದ್ದರಿಂದ ಅವರ ಪರಿಶ್ರಮವನ್ನು ಗುರುತಿಸುವುದು.

✅ ಪಿಂಚಣಿ ಲಾಭ ಹೆಚ್ಚಿಸುವುದು – ಕಾಲ್ಪನಿಕ ವೇತನ ಬಡ್ತಿಯನ್ನು ಗಣನೆಗೆ ತೆಗೆದುಕೊಂಡು ಪಿಂಚಣಿ, ಕುಟುಂಬ ಪಿಂಚಣಿ ಹಾಗೂ ನಿವೃತ್ತಿ ಸೌಲಭ್ಯಗಳನ್ನು ಮರು ಲೆಕ್ಕ ಹಾಕಬಹುದು.

✅ ಅಸಮಾನತೆಯನ್ನು ನಿವಾರಿಸುವುದು – ವೇತನ ಬಡ್ತಿ ದಿನಾಂಕದ ಒಂದು ದಿನದ ಅಂತರದಿಂದ ನೌಕರರು ಆರ್ಥಿಕ ನಷ್ಟ ಅನುಭವಿಸದಂತೆ ನೋಡಿಕೊಳ್ಳುವುದು.

✅ ನ್ಯಾಯಾಲಯಗಳ ತೀರ್ಪುಗಳ ಅನುಷ್ಠಾನ – ವಿವಿಧ ನ್ಯಾಯಾಲಯಗಳು, ವಿಶೇಷವಾಗಿ Supreme Court of India ನೀಡಿದ ತೀರ್ಪುಗಳ ಹಿನ್ನೆಲೆಯಲ್ಲಿ ಅರ್ಹ ನೌಕರರಿಗೆ ಈ ಸೌಲಭ್ಯವನ್ನು ಕಲ್ಪಿಸಲಾಗಿದೆ.

 

ಉದಾಹರಣೆ:

ಒಬ್ಬ ನೌಕರರ ವಾರ್ಷಿಕ ವೇತನ ಬಡ್ತಿ ದಿನಾಂಕ 1 ಜುಲೈ ಆಗಿದ್ದರೆ, ಅವರು 30 ಜೂನ್ ರಂದು ನಿವೃತ್ತರಾಗುತ್ತಾರೆ. ಅವರು ಪೂರ್ಣ ಒಂದು ವರ್ಷ ಸೇವೆ ಸಲ್ಲಿಸಿದ್ದರೂ ಸಾಮಾನ್ಯವಾಗಿ ಬಡ್ತಿ ಸಿಗುವುದಿಲ್ಲ. ಇಂತಹ ಸಂದರ್ಭಗಳಲ್ಲಿ 1 ಜುಲೈಯ ಬಡ್ತಿಯನ್ನು ಕಾಲ್ಪನಿಕವಾಗಿ (Notional) ಮಂಜೂರು ಮಾಡಿ, ಅದರ ಆಧಾರದ ಮೇಲೆ ಪಿಂಚಣಿ ಮತ್ತು ಇತರೆ ನಿವೃತ್ತಿ ಸೌಲಭ್ಯಗಳನ್ನು ಲೆಕ್ಕ ಹಾಕಲಾಗುತ್ತದೆ.

Notional Increment ನ ಉದ್ದೇಶ ನಿವೃತ್ತಿ ದಿನಾಂಕದ ಕಾರಣದಿಂದ ಉಂಟಾಗುವ ಅನ್ಯಾಯವನ್ನು ತಡೆಯುವುದು ಮತ್ತು ಪೂರ್ಣ ವರ್ಷದ ಸೇವೆಗೆ ತಕ್ಕ ಆರ್ಥಿಕ ಪ್ರಯೋಜನವನ್ನು ಒದಗಿಸುವುದಾಗಿದೆ.

 

CLICK HERE TO DOWNLOAD ORDER

ಸರ್ಕಾರಿ ಯೋಜನೆಗಳು, ಸರ್ಕಾರಿ ಉದ್ಯೋಗಗಳು, ಖಾಸಗಿ ಕಂಪನಿ ಉದ್ಯೋಗಗಳ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್‌ಗೆ ಸೇರಿ.
WhatsApp Group Join Now
Telegram Group Join Now

Author: mastermitra

Leave a Reply

Your email address will not be published. Required fields are marked *