Setubandha Initiative Launched for Classes 1–10 in 2026–27: 1ರಿಂದ 10ನೇ ತರಗತಿ ಮಕ್ಕಳಿಗೆ ಗುಣಮಟ್ಟದ ಕಲಿಕೆ| 2026-27ರಲ್ಲಿ ಸೇತುಬಂಧ ಉಪಕ್ರಮ ಅನುಷ್ಠಾನ
Setubandha Initiative Launched for Classes 1–10 in 2026–27: 2026-27 ನೇ ಶೈಕ್ಷಣಿಕ ಸಾಲಿನಲ್ಲಿ ರಾಜ್ಯ ಪಠ್ಯಕ್ರಮದ ಶಾಲೆಗಳ 1ರಿಂದ 10ನೇ ತರಗತಿ ವಿದ್ಯಾರ್ಥಿಗಳ ಕಲಿಕಾ ಅಂತರವನ್ನು ಕಡಿಮೆ ಮಾಡಿ ಮೂಲಭೂತ ಕಲಿಕೆಯನ್ನು ಬಲಪಡಿಸುವ ಉದ್ದೇಶದಿಂದ ‘ಸೇತುಬಂಧ’ ಉಪಕ್ರಮ ಜಾರಿಗೊಳ್ಳುತ್ತಿದೆ. ಇದರ ಪ್ರಮುಖ ಉದ್ದೇಶಗಳು, ಅನುಷ್ಠಾನ ವಿಧಾನ ಹಾಗೂ ವಿದ್ಯಾರ್ಥಿಗಳಿಗೆ ಆಗುವ ಪ್ರಯೋಜನಗಳ ಕುರಿತು ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯಿರಿ.
ವಿಷಯಕ್ಕೆ ಸಂಬಂಧಿಸಿದಂತೆ, 2026-27ನೇ ಸಾಲಿನಲ್ಲಿ ಶೈಕ್ಷಣಿಕ ಚಟುವಟಿಕೆಗಳ ಸಂಬಂಧ ವಾರ್ಷಿಕ ಕ್ರಿಯಾ ಯೋಜನೆಯನ್ನು ಉಲ್ಲೇಖ-1ರ ಸುತ್ತೋಲೆಯಂತೆ ಹೊರಡಿಸಲಾಗಿದೆ. ಅದರಂತೆ, ಶಾಲೆಗಳು 29-05-2026 ರಂದು ಪ್ರಾರಂಭೋತ್ಸವದೊಂದಿಗೆ ಆರಂಭವಾಗಲಿವೆ. ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ ಶಾಲೆಗಳಲ್ಲಿ ಸೇತುಬಂಧ ಉಪಕ್ರಮವನ್ನು ಅನುಷ್ಠಾನಿಸಬೇಕಾಗಿದೆ. ವಿದ್ಯಾರ್ಥಿಗಳ ವಯೋಮಾನ ಮತ್ತು ತರಗತಿಗೆ ಅನುಗುಣವಾಗಿ, ಕಲಿಕಾಫಲಗಳ ಆಧಾರದ ಮೇಲೆ ಕಲಿಕಾ ಮಟ್ಟವನ್ನು ಗುರುತಿಸಿ, ಕಲಿಕಾ ಅಂತರದ ನಡುವೆ ಸಹ ಸಂಬಂಧ ಕಲ್ಪಿಸಿ, ಮುಂದಿನ ಕಲಿಕೆಗೆ ಸಿದ್ಧಗೊಳಿಸುವುದು ಸೇತುಬಂಧ ಉಪಕ್ರಮದ ಮೂಲ ಉದ್ದೇಶವಾಗಿದೆ. ಅದರಂತೆ, ಸದರಿ ಉಪಕ್ರಮವನ್ನು ತರಗತಿಗಳಲ್ಲಿ ಉತ್ತಮವಾಗಿ ಅನುಷ್ಠಾನಿಸಲು ಶಾಲಾ ಹಂತದಲ್ಲಿ ಕೈಗೊಳ್ಳಬಹುದಾದ ಕಾರ್ಯತಂತ್ರಗಳು ಕೆಳಕಂಡಂತಿವೆ.
ಸೇತುಬಂಧ ಉಪಕ್ರಮದ ಅನುಷ್ಠಾನ ಕಾರ್ಯತಂತ್ರಗಳು:
2026-27ನೇ ಶೈಕ್ಷಣಿಕ ಸಾಲಿಗೆ ಕನ್ನಡ ಮತ್ತು ಉರ್ದು ಮಾಧ್ಯಮದ ನಲಿ-ಕಲಿಯ 01ನೇ ತರಗತಿಗೆ ವಿದ್ಯಾ ಪ್ರವೇಶ ಹಾಗೂ 02 ಮತ್ತು 03ನೇ ತರಗತಿಗಳಿಗೆ ಸೇತುಬಂಧ ಚಟುವಟಿಕೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ, ಸಮಗ್ರ ಶಿಕ್ಷಣ ಕರ್ನಾಟಕದ ವತಿಯಿಂದ ಹೊರಡಿಸುವ ಸುತ್ತೋಲೆಯನ್ನು ಅನುಸರಿಸುವುದು.
▪️ಕಲಿ-ನಲಿಯ 1ನೇ ತರಗತಿಗೆ ಶಾಲಾ ಪ್ರಾರಂಭದ ಮೊದಲ 30 ದಿನಗಳ ವಿದ್ಯಾಪ್ರವೇಶ ಹಾಗೂ 2 ರಿಂದ 10ನೇ ತರಗತಿಗಳಿಗೆ ಮೊದಲ 15 ದಿನಗಳ ಸೇತುಬಂಧ ಉಪಕ್ರಮವನ್ನು ಅನುಷ್ಠಾನ ಮಾಡಲು ನಿಗದಿಪಡಿಸಲಾಗಿದ್ದು ಅದರಂತೆ ಕ್ರಮವಹಿಸುವುದು.
▪️ದ್ವಿಭಾಷಾ (Bilingual) ಪಠ್ಯಕ್ರಮ ಅನುಸರಿಸುತ್ತಿರುವ ಶಾಲೆಗಳಿಗೆ 01 ರಿಂದ 5ನೇ ತರಗತಿಗಳಿಗೆ 30 ದಿನಗಳ Transition Period ಸಂಬಂಧಿತ ಚಟುವಟಿಕೆಗಳನ್ನು ಈ ಕಛೇರಿಯಿಂದ ಹೊರಡಿಸುವ ಸುತ್ತೋಲೆಯಂತೆ ಕ್ರಮವಹಿಸುವುದು.
▪️ಉಳಿದಂತೆ 4 ರಿಂದ 10ನೇ ತರಗತಿಗಳವರೆಗೆ 15 ದಿನಗಳ ಸೇತುಬಂಧ ಉಪಕ್ರಮವನ್ನು ಆಯೋಜಿಸುವುದು.
▪️ನೈದಾನಿಕ ಅವಲೋಕನ ಪರೀಕ್ಷೆಯು (Diagnostic Test) ಎರಡು ಸ್ವರೂಪದ ಪ್ರಶ್ನೆಗಳನ್ನು ಹೊಂದಿರಬೇಕು. ಶೇ.40 FLN, ಶೇ.60 ಹಿಂದಿನ ತರಗತಿಗನುಗುಣವಾಗಿ ಗಳಿಸಬೇಕಾದ ಅಪೇಕ್ಷಿತ ಕಲಿಕಾ ಫಲಗಳನ್ನಾಧರಿಸಿದ ಪ್ರಶ್ನೆಗಳು.
▪️4 ರಿಂದ 10ನೇ ತರಗತಿಗಳ FLN ಮತ್ತು ಅಪೇಕ್ಷಿತ ಕಲಿಕಾಫಲಗಳ ಪಟ್ಟಿಯನ್ನು ಇದರೊಂದಿಗೆ ಅನುಬಂಧಿಸಿದೆ. ಅನುಬಂಧ-1.
▪️ಲಗತ್ತಿಸಿರುವ ಅನುಬಂಧದಲ್ಲಿ FLN ಸಂಬಂಧಿತ ಕಲಿಕಾ ಫಲಗಳು ಹಾಗೂ ತರಗತಿವಾರು ಅಪೇಕ್ಷಿತ ಕಲಿಕಾ ಫಲಗಳನ್ನು ನೀಡಲಾಗಿದ್ದು, ಶಿಕ್ಷಕರು ತಮ್ಮ ತರಗತಿಯ ಪರಿಸರಕ್ಕೆ ಅನುಗುಣವಾಗಿ ಸೇತುಬಂಧ ಉಪಕ್ರಮವನ್ನು ಆಯೋಜಿಸುವುದು. (ಪೂರ್ವಪರೀಕ್ಷೆ- ಪರಿಹಾರ ಬೋಧನೆ- ಸಾಫಲ್ಯ ಪರೀಕ್ಷೆ)
▪️ಪೂರ್ವ ಪರೀಕ್ಷೆ ಹಾಗೂ ಸಾಫಲ್ಯ ಪರೀಕ್ಷೆಗಳನ್ನು ನಡೆಸಲು FLN ಗೆ 4 ಪ್ರಶ್ನೆಗಳು ಮತ್ತು ತರಗತಿ ಮತ್ತು ವಿಷಯವಾರು ಅಪೇಕ್ಷಿತ ಕಲಿಕಾ ಫಲಗಳಿಗೆ 6 ಪ್ರಶ್ನೆಗಳು, ಒಟ್ಟು 10 ಪ್ರಶ್ನೆಗಳ ಪ್ರಶ್ನೆ ಪತ್ರಿಕೆಗಳನ್ನು ಸಿದ್ದಪಡಿಸುವುದು.
▪️ಕಲಿಕಾ ಫಲಗಳ ಗಳಿಕೆಯನ್ನು ದೃಢೀಕರಿಸಲು ಹೆಚ್ಚಿನ ಪ್ರಶ್ನೆಗಳ ಅವಶ್ಯಕತೆಯಿದ್ದಲ್ಲಿ ಪ್ರಶ್ನೆಗಳನ್ನು ಮೌಖಿಕವಾಗಿ ಕೇಳುವುದು.
▪️ಪೂರ್ವಪರೀಕ್ಷೆಯ ಉತ್ತರಗಳನ್ನು ಮೌಲ್ಯಮಾಪನ ಮಾಡುವಾಗ ಪ್ರಶ್ನಾವಾರು ಮೌಲ್ಯಮಾಪನ ಮಾಡುವುದು. ಪೂರ್ಣಪ್ರಮಾಣದಲ್ಲಿ ಉತ್ತರಿಸಿದಲ್ಲಿ ‘A’ ಎಂದು, ಅಪೂರ್ಣ/ಭಾಗಶಃ ಉತ್ತರವಿದ್ದಲ್ಲಿ ‘B’ ಎಂದು ಗುರುತಿಸಿ ಶಾಲಾ ಶೈಕ್ಷಣಿಕ ಯೋಜನೆಯಲ್ಲಿ (SAP) ದಾಖಲಿಸುವುದು.
▪️2026-27ನೇ ಸಾಲಿಗೆ ಶಾಲಾ ಶೈಕ್ಷಣಿಕ ಯೋಜನೆಯ ನಮೂನೆಗಳನ್ನು ಪರಿಷ್ಕರಿಸಲಾಗಿದ್ದು, ಅದರಂತೆ ಕ್ರಮವಹಿಸುವುದು ಪರಿಷ್ಕೃತ SAP ಅನುಬಂಧಿಸಿದೆ.
▪️4 ರಿಂದ 10ನೇ ತರಗತಿಯವರೆಗೆ ಪ್ರಶ್ನೆಪತ್ರಿಕೆಯ 1 ರಿಂದ 4ನೇ ಪ್ರಶ್ನೆಗಳಲ್ಲಿ ‘B’ grade ಪಡದಿರುವ ವಿದ್ಯಾರ್ಥಿಗಳನ್ನು FLN ಸಾಧಿಸದೇ ಇರುವ ವಿದ್ಯಾರ್ಥಿಗಳು ಎಂದು ಗುರುತಿಸಿಕೊಳ್ಳುವುದು. ಪ್ರಶ್ನೆಪತ್ರಿಕೆಯ
▪️5 ರಿಂದ 10ನೇ ಪ್ರಶ್ನೆಗಳಲ್ಲಿ ‘B’ grade ಪಡೆದಿರುವ ವಿದ್ಯಾರ್ಥಿಗಳನ್ನು ಅಪೇಕ್ಷಿತ ಕಲಿಕಾ ಫಲಗಳನ್ನು ಸಾಧಿಸದೇ, ಕಲಿಕಾ ಅಂತರ ಇರುವ ವಿದ್ಯಾರ್ಥಿಗಳು ಎಂದು ಗುರುತಿಸಿಕೊಳ್ಳುವುದು.
▪️ಮೌಲ್ಯಮಾಪನವನ್ನು ಆಧರಿಸಿ ವಿದ್ಯಾರ್ಥಿಗಳ ಕಲಿಕೆಯನ್ನು FUN ಪ್ರಗತಿ ಮತ್ತು ಅಪೇಕ್ಷಿತ ಕಲಿಕಾ ಫಲಗಳ ಕಲಿಕೆಯನ್ನು SAP ನಮೂನೆ-44 ಮತ್ತು 48 ನಲ್ಲಿ ದಾಖಲಿಸುವುದು. ‘B’ grade ಪಡೆದಿರುವ ವಿದ್ಯಾರ್ಥಿಗಳ ಮಾಹಿತಿಯನ್ನು SAP ನಮೂನೆ-5A ಮತ್ತು 58 ನಲ್ಲಿ ದಾಖಲಿಸುವುದು. FLN ಮತ್ತು ಅಪೇಕ್ಷಿತ ಕಲಿಕಾ ಫಲಗಳಿಗೆ ಅನುಗುಣವಾಗಿ ಚಟುವಟಿಕೆಗಳನ್ನು ಪ್ರತ್ಯೇಕವಾಗಿ ರೂಪಿಸಿಕೊಂಡು ‘B’ grade ಪಡೆದಿರುವ ವಿದ್ಯಾರ್ಥಿಗಳಿಗೆ ಪರಿಹಾರ ಬೋಧನೆಯನ್ನು ಕೈಗೊಳ್ಳುವುದು.
▪️1 ರಿಂದ 10ನೇ ತರಗತಿಗಳವರೆಗೆ DSERT website ನಲ್ಲಿ ಲಭ್ಯವಿರುವ ತರಗತಿವಾರು ಮತ್ತು ವಿಷಯವಾರು ಕಲಿಕಾ ಸಾಮಾಗ್ರಿಗಳಾದ ಸೇತುಬಂಧ ಸಾಹಿತ್ಯ (ಕನ್ನಡ ಮತ್ತು ಆಂಗ್ಲ ಮಾಧ್ಯಮ ಹಾಗೂ ಪ್ರಥಮ ಭಾಷೆಗಳಾದ ಉರ್ದು, ಮರಾಠಿ, ತೆಲುಗು ಮತ್ತು ತಮಿಳು), ಕಲಿಕಾ ಚೇತರಿಕೆ, ಕಲಿಕಾ ಬಲವರ್ಧನೆ ಮತ್ತು ಕಲಿಕಾ ಫಲಾಧಾರಿತ ಪ್ರಶ್ನೆಕೋಠಿಯ ಚಟುವಟಿಕೆಗಳನ್ನು ಬಳಸಿಕೊಂಡು ಮತ್ತು ತಮ್ಮ ಹಂತದಲ್ಲಿ ಸ್ಥಳೀಯ ಸನ್ನಿವೇಶಕ್ಕೆ ಹಾಗೂ ಅಪೇಕ್ಷಿತ ಕಲಿಕಾ ಫಲಗಳಿಗೆ ಅನುಗುಣವಾಗಿ ಚಟುವಟಿಕೆಗಳನ್ನು ರೂಪಿಸಿಕೊಂಡು ಸೇತುಬಂಧ ಉಪಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಿಸಲು ಕ್ರಮವಹಿಸುವುದು.
▪️ವಿದ್ಯಾರ್ಥಿಗಳ ಕಲಿಕಾ ಅನುಭವಗಳನ್ನು ಆಧರಿಸಿ ರಸಪ್ರಶ್ನೆ, ಲಿಖಿತ ಮತ್ತು ಮೌಖಿಕ ಪ್ರಶೋತ್ತರ, ಸರಳ ಯೋಜನೆಗಳು, ಸರಳ ಚಟುವಟಿಕೆಗಳು, ಸಂಭಾಷಣೆ, ಅಭ್ಯಾಸ ಹಾಳೆಗಳು, ಗೃಹ ಪಾಠ ಮತ್ತು ಇನ್ನಿತರ ಚಟುವಟಿಕೆಗಳನ್ನು ಮೌಲ್ಯಮಾಪನ ಮಾಡುವುದು.
▪️ಪರಿಹಾರ ಬೋಧನೆಯ ನಂತರ ನಿಗಧಿಪಡಿಸಿದ ಕಲಿಕಾ ಫಲಗಳಿಗನುಗುಣವಾಗಿ ಸಾಫಲ್ಯ ಪರೀಕ್ಷೆಯನ್ನು ಕೈಗೊಂಡು, ಅದರ ಮೌಲ್ಯಮಾಪನವನ್ನು ಆಧರಿಸಿ ವಿದ್ಯಾರ್ಥಿಗಳ ಕಲಿಕೆಯನ್ನು ಪೂರ್ವಪರೀಕ್ಷೆಯಲ್ಲಿ ಗುರುತಿಸಿದಂತೆ ‘A’ ಮತ್ತು ‘B’ ಎಂದು ಗುರುತಿಸಿ SAP ನಮೂನೆ-4A ಮತ್ತು 48 ನಲ್ಲಿ ದಾಖಲಿಸುವುದು.
▪️ಹೀಗೆ ಗುರುತಿಸಿದ ವಿದ್ಯಾರ್ಥಿಗಳ FLN ಮತ್ತು ಅಪೇಕ್ಷಿತ ಕಲಿಕಾ ಫಲಗಳ ಗಳಿಕೆಯ ಮಾಹಿತಿಯನ್ನು SATS ನಲ್ಲಿ ಲಭ್ಯವಿರುವ ಪ್ರತ್ಯೇಕ ಮಾಡ್ಯೂಲ್ಗಳಲ್ಲಿ ದಾಖಲಿಸುವುದು.
▪️FLN ಮತ್ತು ಅಪೇಕ್ಷಿತ ಕಲಿಕಾ ಫಲಗಳನ್ನು ಸಾಧಿಸದಿರುವ ವಿದ್ಯಾರ್ಥಿಗಳ ಕಲಿಕಾ ಪ್ರಗತಿಯನ್ನು ನಿರಂತರವಾಗಿ ಅನುಪಾಲನೆ ಮಾಡುವುದು, ಬುನಾದಿ ಸಾಕ್ಷರತೆ ಮತ್ತು ಸಂಖ್ಯಾಜ್ಞಾನ ಸಾಧನೆಯನ್ನು (FLN) ಪ್ರತಿ ತರಗತಿಗೆ ಪ್ರತ್ಯೇಕವಾಗಿ ಶೈಕ್ಷಣಿಕ ವರ್ಷದ ಪ್ರಾರಂಭದಿಂದ ಅಂತ್ಯದವರೆಗೆ ಪ್ರತಿ ತಿಂಗಳು ಮೌಲ್ಯಾಂಕನ ಮಾಡಿ ದಾಖಲಿಸುವುದು ಮತ್ತು SATS ನಲ್ಲಿಯೂ ಇಂದೀಕರಿಸುವುದು.
▪️ಅಪೇಕ್ಷಿತ ಕಲಿಕಾ ಫಲಗಳನ್ನು ಸಾಧಿಸದೇ ಇರುವ ವಿದ್ಯಾರ್ಥಿಗಳಿಗೆ ಪರಿಹಾರ ಕ್ರಮಗಳನ್ನು ಕೈಗೊಂಡು ಸೆಪ್ಟೆಂಬರ್ ಅಂತ್ಯ ಮತ್ತು ಡಿಸೆಂಬರ್ ಅಂತ್ಯಕ್ಕೆ ಮೌಲ್ಯಾಂಕನ ಮಾಡಿ ಶಾಲಾ ಶೈಕ್ಷಣಿಕ ಯೋಜನೆಯಲ್ಲಿ (SAP) ದಾಖಲಿಸುವುದು ಮತ್ತು SATS ನಲ್ಲಿಯೂ ಇಂದೀಕರಿಸುವುದು.
▪️ವಿದ್ಯಾರ್ಥಿಗಳ ಪ್ರಗತಿಯನ್ನಾಧರಿಸಿ ಶಾಲಾ ಶೈಕ್ಷಣಿಕ ಯೋಜನೆಯನ್ನು (SAP) ಸಿದ್ಧಪಡಿಸಿ ಪ್ರತಿ ಮಗುವಿನ ಕಲಿಕಾ ಪ್ರಗತಿಗೆ ನಿರಂತರ ಅನುಪಾಲನೆ ಮಾಡುವುದು.
ಸೇತುಬಂಧ ಉಪಕ್ರಮದ ಅವಧಿ ಮುಗಿದ ನಂತರವೂ, ವಿದ್ಯಾರ್ಥಿಗಳಲ್ಲಿ ಬುನಾದಿ ಸಾಮರ್ಥ್ಯಗಳು ಹಾಗೂ ತರಗತಿಗನುಗುಣವಾಗಿ ಗಳಿಸಬೇಕಾದ ಕಲಿಕಾ ಫಲಗಳು ಗಳಿಕೆಯಾಗದಿದ್ದಲ್ಲಿ ಆಯಾ ವಿಷಯದಲ್ಲಿ ಪೂರ್ವ ಸಿದ್ಧತಾ ಚಟುವಟಿಕೆಗಳ ನಿರ್ವಹಣೆ ಮತ್ತು ಪುನರ್ಬಲನ/ ಪುನರಾವರ್ತನೆಯ ಸಮಯದಲ್ಲಿ ವಿಶೇಷ ಆದ್ಯತೆ ನೀಡಿ ಕಲಿಕೆಯನ್ನು ಅನುಕೂಲಿಸುವ ಮೂಲಕ ಹಾಗೂ ಪೋಷಕರ ಸಹಕಾರದಿಂದ ಎಲ್ಲಾ ವಿದ್ಯಾರ್ಥಿಗಳು ನಿಗಧಿತ ಕಲಿಕಾ ಫಲಗಳನ್ನು ಸಾಧಿಸಲು ಕ್ರಮವಹಿಸುವುದು ಹಾಗೂ ಸಾಧಿಸಿರುವ ಬಗ್ಗೆ ಖಾತ್ರಿಪಡಿಸಿಕೊಳ್ಳುವುದು.
ಮೇಲ್ವಿಚಾರಣೆ ಮತ್ತು ಉಸ್ತುವಾರಿ ಅಧಿಕಾರಿಗಳ ಜವಾಬ್ದಾರಿಗಳು:
▪️2026-27ನೇ ಸಾಲಿಗೆ ಪರಿಷ್ಕೃತವಾದ SAP ಮತ್ತು FLN ಹಾಗೂ ಅಪೇಕ್ಷಿತ ಕಲಿಕಾ ಫಲಗಳ ಪಟ್ಟಿಯನ್ನು ನೀಡಲಾಗುತ್ತಿದೆ. ಶಾಲಾ ಶಿಕ್ಷಕರಿಗೆ ಸದರಿ ಮಾಹಿತಿಯನ್ನು ಕಡ್ಡಾಯವಾಗಿ ಹಂಚಿಕೊಳ್ಳುವುದು ಹಾಗೂ ಅನುಷ್ಠಾನ ಮಾಡಲು ಕ್ರಮವಹಿಸುವುದು.
▪️ಜಿಲ್ಲಾ ಹಂತದಲ್ಲಿ ಉಪನಿರ್ದೇಶಕರು ಆಡಳಿತ ಮತ್ತು ಅಭಿವೃದ್ಧಿ ರವರು ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಉಸ್ತುವಾರಿ ಅಧಿಕಾರಿಗಳ ಸಭೆ ನಡೆಸಿ ಸೇತುಬಂಧ ಉಪಕ್ರಮದ ಸುತ್ತೋಲೆಯ ಅನುಷ್ಠಾನಾತ್ಮಕ ಕ್ರಮಗಳ ಬಗ್ಗೆ, ಚರ್ಚಿಸಿ ಅನುಪಾಲನೆಗೆ ಜಿಲ್ಲೆ, ತಾಲ್ಲೂಕು, ಕ್ಲಸ್ಟರ್ ಹಂತದಲ್ಲಿ ನೋಡಲ್ ಅಧಿಕಾರಿಗಳನ್ನು (FLN ಮತ್ತು ಸೇತುಬಂಧ) ನಿಯೋಜಿಸಿ ಸೂಕ್ತ ಜವಾಬ್ದಾರಿಯನ್ನು ನಿಗದಿಪಡಿಸುವುದು.
▪️ಜಿಲ್ಲಾ ಮತ್ತು ತಾಲ್ಲೂಕು ಹಂತದ ಅಧಿಕಾರಿಗಳಿಗೆ ಶಾಲೆಗಳನ್ನು ಹಂಚಿಕೆ ಮಾಡಿ, ಅದರಂತೆ ಶಾಲೆಗಳಿಗೆ ಭೇಟಿ ನೀಡಿ ಅನುಷ್ಠಾನ ಸಂಬಂಧ ಪರಿಶೀಲಿಸಿ, ಸೂಕ್ತ ಮಾರ್ಗದರ್ಶನ ನೀಡುವುದು, ಸೇತುಬಂಧ ಉಪಕ್ರಮದ ಭೇಟಿ ನಮೂನೆ ಲಗತ್ತಿಸಿದೆ.
▪️ಜಿಲ್ಲಾ ಮತ್ತು ತಾಲ್ಲೂಕು ಹಂತದ ಎಲ್ಲಾ ಶಿಕ್ಷಕರು ಸೇತುಬಂಧ ಸಾಹಿತ್ಯ ಬಳಸುತ್ತಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳುವುದು ಮತ್ತು ಶಾಲಾ ಶೈಕ್ಷಣಿಕ ಯೋಜನೆ (SAP) ರೂಪಿಸಲು ಅಗತ್ಯ ಮಾರ್ಗದರ್ಶನ ನೀಡಿ ಅನುಪಾಲನೆ ಮಾಡುವುದು.
▪️ಕ್ಲಸ್ಟರ್ ಹಂತದಲ್ಲಿ CRP ರವರು ತಮ್ಮ ವ್ಯಾಪ್ತಿಯ ಎಲ್ಲಾ ಶಾಲೆಗಳಲ್ಲಿ ಸದರಿ ಉಪಕ್ರಮ ಉತ್ತಮವಾಗಿ ನಡೆಯುತ್ತಿರುವ ಬಗ್ಗೆ, ನಿರಂತರ ಅನುಪಾಲನೆಯೊಂದಿಗೆ ಖಾತ್ರಿ ಪಡಿಸಿಕೊಂಡು, ಸೇತುಬಂಧ ಮತ್ತು FLN ಪ್ರಗತಿಯನ್ನು SATS ನಲ್ಲಿ ನಿಗದಿತ ಅವಧಿಯಲ್ಲಿ ಇಂದೀಕರಿಸಲು ಕ್ರಮವಹಿಸುವುದು
▪️ವಿದ್ಯಾರ್ಥಿಗಳ ಕಲಿಕಾ ಪ್ರಗತಿಯನ್ನು ಅವಶ್ಯಕತೆಗನುಗುಣವಾಗಿ ಕೃತಿ ಸಂಪುಟದಲ್ಲಿ ದಾಖಲಿಸುವುದು.
ಜಿಲ್ಲಾ ನೋಡಲ್ ಅಧಿಕಾರಿಗಳು ಶಾಲಾ ಭೇಟಿ ಹಾಗೂ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಸೇತುಬಂಧ ಉಪಕ್ರಮ ಅನುಷ್ಠಾನದ ಪ್ರಗತಿ ಪರಿಶೀಲನೆ ಮಾಡಿ, ಜಿಲ್ಲಾ ಹಂತದಲ್ಲಿ ಪ್ರಗತಿ
ದಾಖಲೆಯನ್ನು ನಿರ್ವಹಿಸುವುದು. ಉಪ ನಿರ್ದೇಶಕರು ಆಡಳಿತ ಮತ್ತು ಅಭಿವೃದ್ಧಿ ಇವರು ತಮ್ಮ ಜಿಲ್ಲೆಯ ಪ್ರತಿ ವಿದ್ಯಾರ್ಥಿ FLN ಕಲಿಕಾ ಫಲಗಳು ಹಾಗೂ ಆಯಾ ತರಗತಿಯ ನಿರ್ದಿಷ್ಟ ಕಲಿಕಾ ಫಲಗಳನ್ನು ಗಳಿಸುವಂತೆ ಶಾಲಾ ಹಂತದಲ್ಲಿ ಕ್ರಮವಹಿಸುತ್ತಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳುವುದು.
ಸೇತುಬಂಧ ಉಪಕ್ರಮದ ಪುಗತಿಯನ್ನು ಕ್ಲಸ್ಟರ್, ಬ್ಲಾಕ್ ಮತ್ತು ಜಿಲ್ಲಾ ಹಂತದಲ್ಲಿ ಪರಿಶೀಲಿಸಿ. ವರದಿಯನ್ನು DSERT ಕಛೇರಿಗೆ ಸಲ್ಲಿಸುವುದು ಹಾಗೂ ಈ ವರದಿಯನ್ನು ಆಧರಿಸಿ ಮುಂದಿನ ಶೈಕ್ಷಣಿಕ ಅಭಿವೃದ್ಧಿಗೆ ಅಗತ್ಯ ಕ್ರಮವಹಿಸುವುದು.

CLICK HERE TO DOWNLOAD CIRCULAR
CLICK HERE -BRIDGE COURSE QUESTION PAPERS
CLIK HERE– BRIDGE COURSE CIRCULAR 2026-27
CLICK HERE– WISE LEARNING OUTCOMES
CLICK HERE -DSERT BRIDGE COURSE VISITING FORMAT
CLICK HERE- FOR ALL MATERIALS RELATED TO BRIDGE COURSE 2026-27


