UDISE+ Code Linking for KPS Schools: ಘಟಕ ಶಾಲೆಗಳ ಕೋಡ್ ಸಂಯೋಜನೆಗೆ ಮಾರ್ಗದರ್ಶಿ
UDISE+ Code Linking for KPS Schools: ಕರ್ನಾಟಕದಲ್ಲಿ ಸುಮಾರು 47,493 ಸರ್ಕಾರಿ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಿವೆ. ಇವುಗಳಲ್ಲಿ 19,603 ಪ್ರಾಥಮಿಕ ಶಾಲೆಗಳು, 21,676 ಹಿರಿಯ ಪ್ರಾಥಮಿಕ ಶಾಲೆಗಳು, 4,895 ಪ್ರೌಢಶಾಲೆಗಳು ಮತ್ತು 1,319 ಪದವಿಪೂರ್ವ ಕಾಲೇಜುಗಳಿರುತ್ತವೆ.
ಕರ್ನಾಟಕವು ನಾಲ್ಕು ಹಂತದ ಔಪಚಾರಿಕ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಹೊಂದಿದೆ. 1 ರಿಂದ 5 ನೇ ತರಗತಿಯವರೆಗೆ ಕಿರಿಯ ಪ್ರಾಥಮಿಕ ಶಿಕ್ಷಣ, 6 ರಿಂದ 7 ಅಥವಾ 8 ನೇ ತರಗತಿಯವರೆಗೆ ಹಿರಿಯ ಪ್ರಾಥಮಿಕ ಶಿಕ್ಷಣ, 8 ಅಥವಾ 9 ರಿಂದ 10 ನೇ ತರಗತಿಯವರೆಗೆ ಪ್ರೌಢ ಶಿಕ್ಷಣ ಮತ್ತು 11 ಮತ್ತು 12 ನೇ ತರಗತಿಯವರೆಗೆ ಪದವಿ ಪೂರ್ವ ಶಿಕ್ಷಣ. ಔಪಚಾರಿಕ ಶಾಲಾ ಶಿಕ್ಷಣವನ್ನು ನಾಲ್ಕು ಹಂತಗಳಲ್ಲಿ ಮತ್ತು ಮೂರು ಆಡಳಿತಾತ್ಮಕ ಮತ್ತು ಶೈಕ್ಷಣಿಕ ರಚನೆಗಳಲ್ಲಿ ವಿಭಜಿಸಿರುವುದು ದಾಖಲಾತಿ, ವಿದ್ಯಾರ್ಥಿಗಳ ಶಿಕ್ಷಣದ ಮುಂದುವರಿಕೆ ಮತ್ತು ಶಿಕ್ಷಣದ ಗುಣಮಟ್ಟದ ಮೇಲೆ ಈ ಕೆಳಗಿನ ಪ್ರತಿಕೂಲ ಪರಿಣಾಮವನ್ನು ಬೀರಿದೆ.
L ವಿದ್ಯಾರ್ಥಿಗಳು ಪ್ರತಿ ಹಂತದಲ್ಲಿ ಅಂದರೆ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ಹಂತದಲ್ಲಿ ಔಪಚಾರಿಕ ಪ್ರವೇಶವನ್ನು ಪಡೆಯಬೇಕಾಗಿರುತ್ತದೆ. ಇಂತಹ ಪರಿವರ್ತನೆಯ ಹಂತದಲ್ಲಿ ವಿದ್ಯಾರ್ಥಿಗಳು ಮುಂದಿನ ಹಂತಕ್ಕೆ ದಾಖಲಾಗದೆ ಶಾಲೆಯಿಂದ ಹೊರಗುಳಿಯುವ ಸಾಧ್ಯತೆ ಇರುತ್ತದೆ.
ಈ ರೀತಿಯ ವಿಭಜನೆಯಿಂದ ಕಲಿಕಾ ಫಲಗಳ ಸಾಧನೆಯಲ್ಲಿ ಅಂತರ ಮತ್ತು ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ಪರೀಕ್ಷಾ ಶೇಕಡಾವಾರು ಉತ್ತೀರ್ಣತೆಯಲ್ಲಿ ಕುಸಿತ ಕಂಡು ಬರುತ್ತಿದೆ.
ಪ್ರತಿ ಹಂತದಲ್ಲಿ ಶಾಲೆಯಲ್ಲಿ ಲಭ್ಯವಿರುವ ಮಾನವ ಸಂಪನ್ಮೂಲ, ಮೂಲಭೂತ ಸೌಕರ್ಯ ಮತ್ತು ಕಲಿಕಾ ಸೌಕರ್ಯಗಳ ಸಮರ್ಪಕ ಬಳಕೆ ಆಗದೇ ಇರುವುದು.
ಪ್ರಸ್ತುತ ಒಟ್ಟು ದಾಖಲಾತಿ ಅನುಪಾತ (Gross Enrolment Ratio) ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಶೇ. 98.65, ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಶೇ. 99.79 ಮತ್ತು ಪ್ರೌಢಶಾಲೆಗೆ ಸಂಬಂಧಿಸಿದಂತೆ ಶೇ. 96.08 ಇರುತ್ತದೆ. ಶಾಲೆಯಿಂದ ಹೊರಗುಳಿಯುವ ವಿದ್ಯಾರ್ಥಿಗಳ ದರ (Drop out rate) ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಶೇ. 2.50, ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಶೇ.2.91 ಮತ್ತು ಪ್ರೌಢಶಾಲೆಗೆ ಸಂಬಂಧಿಸಿದಂತೆ ಶೇ.22.88 ಇರುತ್ತದೆ. ಪ್ರಾಥಮಿಕ ಹಂತದಿಂದ ಪ್ರೌಢಶಾಲಾ ಹಂತಕ್ಕೆ ಮುಂದುವರೆಯುವ ವಿದ್ಯಾರ್ಥಿಗಳ ದಾಖಲಾತಿಯಲ್ಲಿ ಗಣನೀಯವಾಗಿ ಇಳಿಕೆ ಆಗುತ್ತಿರುವುದನ್ನು ಗಮನಿಸಲಾಗಿದೆ. ಶಾಲೆಯಿಂದ ಹೊರಗುಳಿಯುವ ವಿದ್ಯಾರ್ಥಿಗಳ ದರ (Drop out rate)ವನ್ನು ಕಡಿಮೆ ಮಾಡಲು ಒಂದೇ ಆವರಣದಲ್ಲಿ ಪ್ರಾಥಮಿಕ ತರಗತಿಗಳಿಂದ ಪದವಿಪೂರ್ವ ತರಗತಿಗಳವರೆಗೆ ಶಿಕ್ಷಣ ನೀಡಲು ಅವಕಾಶ ಕಲ್ಪಿಸುವುದು ಸೂಕ್ತ ಪರಿಹಾರವಾಗಿರುತ್ತದೆ.
ಕರ್ನಾಟಕ ಸರ್ಕಾರವು ಪ್ರತಿ ಮಗುವು ಶಾಲೆಯಲ್ಲಿ ಮತ್ತು ಉತ್ತಮ ಕಲಿಕೆಯೊಂದಿಗೆ ಎಂಬ ಘೋಷಣಾ ನೀತಿಯನ್ನು ಅಳವಡಿಸಿಕೊಂಡಿದ್ದು, ಪ್ರತಿ ಮಗುವಿಗೂ ಶಿಕ್ಷಣ ಹಕ್ಕು ಕಾಯ್ದೆ ಅನ್ವಯ ಗುಣಮಟ್ಟದ ಶಿಕ್ಷಣ ನೀಡುವ ಜವಾಬ್ದಾರಿಯನ್ನು ಹೊಂದಿರುತ್ತದೆ. ವಿದ್ಯಾರ್ಥಿಗಳು ಉತ್ತಮವಾಗಿ ಕಲಿಯಲು ಸಹಕರಿಸುವಂತೆ ಬೋಧನಾ ಪದ್ಧತಿಯನ್ನು ಸುಧಾರಿಸಲು ಕ್ರಮ ಕೈಗೊಳ್ಳಬೇಕಾಗಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಕರು, ಭೌತಿಕ ಸಂಪನ್ಮೂಲ ಮತ್ತು ಕಲಿಕಾ ಸಂಪನ್ಮೂಲಗಳ ಬಳಕೆಯ ಸಮರ್ಪಕತೆಗಳನ್ನು ಸುಧಾರಿಸಲು ಕ್ರಮ ತೆಗೆದುಕೊಳ್ಳಬೇಕಾಗಿದೆ. ಈ ಹಿನ್ನೆಲೆಯಲ್ಲಿ ಒಂದೇ ಭೌಗೋಳಿಕ ಸ್ಥಳದಲ್ಲಿ ಅಸ್ತಿತ್ವದಲ್ಲಿರುವ ಪ್ರಾಥಮಿಕ, ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜುಗಳನ್ನು ಒಂದುಗೂಡಿಸಿ ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ ಉನ್ನತೀಕರಿಸಲು ಅನುಮೋದನೆ ನೀಡಲಾಗಿದೆ.
ರಾಜ್ಯದಲ್ಲಿ 2018 ರಿಂದ 2025 ರವರೆಗೆ ಉತ್ತಮ ಕಲಿಕೆ ಉಜ್ವಲ ಭವಿಷ್ಯ ಎಂಬ ಘೋಷ ವಾಕ್ಯದಡಿ ಒಂದೇ ಆವರಣದಲ್ಲಿರುವ ಸರ್ಕಾರಿ ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ಕಾಲೇಜನ್ನು ಒಗ್ಗೂಡಿಸಿ ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ ಉನ್ನತೀಕರಿಸಿ ಆದೇಶಿಸಲಾಗಿದೆ. ಈ ರೀತಿಯಾಗಿ ಕಾರ್ಯನಿರ್ವಹಿಸುತ್ತಿರುವ 309 ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಆಡಳಿತಾತ್ಮಕ ಕಾರಣಗಳಿಂದ ಒಂದೇ ಆವರಣದಲ್ಲಿರುವ ಅಥವಾ ಒಂದೇ ನಿರ್ವಹಣೆಯ ಅಡಿಯಲ್ಲಿ ಇರುವ ಘಟಕಗಳಿಗೆ (ಪ್ರಾಥಮಿಕ/ಪ್ರೌಢ/ಪದವಿಪೂರ್ವ ವಿಭಾಗ) ವಿಭಿನ್ನ DISE (UDISE++) ಕೋಡ್ ಗಳು ನೀಡಲಾಗಿದೆ. ಪ್ರಸ್ತುತ ಪ್ರಾಥಮಿಕ ಶಾಲಾ ಸಿಬ್ಬಂದಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪ್ರೌಢ ಶಾಲಾ ಸಿಬ್ಬಂದಿಗೆ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರು, ಪದವಿಪೂರ್ವ ಕಾಲೇಜಿನ ಸಿಬ್ಬಂದಿಗಳಿಗೆ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರು, ವೇತನ ಬಟವಾಡೆ ಅಧಿಕಾರಿಗಳಾಗಿರುತ್ತಾರೆ. ಇದರಿಂದಾಗಿ ವಿದ್ಯಾರ್ಥಿಗಳ ದಾಖಲೆಗಳು, ಶಿಕ್ಷಕರ ನಿಯೋಜನೆ, ಅನುದಾನ ಬಳಕೆ, ಮೂಲಸೌಕರ್ಯ ಮತ್ತು ಕಲಿಕಾ ಸೌಕರ್ಯಗಳ ಲಭ್ಯತೆ ಮತ್ತು ಬಳಕೆ, ಶಾಲಾಭಿವೃದ್ಧಿ ಯೋಜನೆಗಳ ಅನುಷ್ಠಾನ, ಶೈಕ್ಷಣಿಕ ಮತ್ತು ಆಡಳಿತಾತ್ಮಕ ಚಟುವಟಿಕೆಗಳ ಮೇಲ್ವಿಚಾರಣೆಯಲ್ಲಿ ಅಡಚಣೆಗಳು ಉಂಟಾಗುತ್ತಿದೆ.
ಮೇಲೆ ಓದಲಾದ ಕ್ರಮಾಂಕ (1) ರ ಆದೇಶದಲ್ಲಿ 176 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಕ್ರಮಾಂಕ (2) ರ ಆದೇಶದಲ್ಲಿ ರಾಜ್ಯಾದ್ಯಂತ 100 ಕೆ.ಪಿ.ಎಸ್ ಶಾಲೆಗಳನ್ನು ಕ್ರಮಾಂಕ (3) ರ ಪತ್ರದಲ್ಲಿ 01 ಕರ್ನಾಟಕ ಪಬ್ಲಿಕ್ ಶಾಲೆಯನ್ನು ಕ್ರಮಾಂಕ (4) ರ ಆದೇಶದಲ್ಲಿ 05 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಕ್ರಮಾಂಕ (5) ರ ಆದೇಶದಲ್ಲಿ 02 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಕ್ರಮಾಂಕ (6) ರಲ್ಲಿ 01 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಕ್ರಮಾಂಕ (7) ರ ಆದೇಶದಲ್ಲಿ 01 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಕ್ರಮಾಂಕ (8) ರ ಆದೇಶದಲ್ಲಿ 22 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಕ್ರಮಾಂಕ (9) ರ ಆದೇಶದಲ್ಲಿ 01 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಕ್ರಮಾಂಕ (11) ರ ಆದೇಶದಲ್ಲಿ 01 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಒಟ್ಟು 310 ಕೆ.ಪಿ.ಎಸ್ ಶಾಲೆಗಳನ್ನು ಸ್ಥಾಪಿಸಲಾಗಿದೆ.
ಮೇಲೆ ಓದಲಾದ ಕ್ರಮಾಂಕ(10) ರ ಆದೇಶದಲ್ಲಿ ಬೆಂಗಳೂರು ನಗರ ವ್ಯಾಪ್ತಿಯ 04 ಬಿಬಿಎಂಪಿ ಶಾಲೆಗಳು ಮತ್ತು ಶಾಲಾ ಶಿಕ್ಷಣ ಇಲಾಖೆ ವ್ಯಾಪ್ತಿಯ 16 ಶಾಲೆಗಳು ಸೇರಿದಂತೆ ಒಟ್ಟಾರೆ 20 ಶಾಲೆಗಳನ್ನು ಬೆಂಗಳೂರು ಪಬ್ಲಿಕ್ ಶಾಲೆ ಗಳನ್ನಾಗಿ ಅಭಿವೃದ್ಧಿಪಡಿಸಲು ಆದೇಶಿಸಲಾಗಿದೆ. ಸದರಿ 16 ಶಾಲೆಗಳಲ್ಲಿ 04 ಶಾಲೆಗಳು ಈಗಾಗಲೇ ಅನುಮೋದನೆಗೊಂಡಿರುವ ಕೆಪಿಎಸ್ ಶಾಲೆಗಳ ಪಟ್ಟಿಯಲ್ಲಿ ಸೇರಿರುತ್ತವೆ.
ಕರ್ನಾಟಕ ಪಬ್ಲಿಕ್ ಶಾಲೆಗಳು (ಕೆ.ಪಿ.ಎಸ್) ಗುಣಮಟ್ಟದ ಸಾರ್ವಜನಿಕ ಶಿಕ್ಷಣಕ್ಕಾಗಿ ಒಂದು ಅಭೂತಪೂರ್ವ ಬದಲಾವಣೆಯ ಚೌಕಟ್ಟನ್ನು ಒದಗಿಸುತ್ತವೆ. ಕರ್ನಾಟಕ ಸರ್ಕಾರವು ವಿದ್ಯಾರ್ಥಿಗಳ ಗುಣಮಟ್ಟದ ಕಲಿಕೆ ಮತ್ತು ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಳಕ್ಕೆ ಆರಂಭಿಸಿದ ಒಂದು ಸುಧಾರಣಾತ್ಮಕ ಕಾರ್ಯತಂತ್ರವೇ ಕೆ.ಪಿ.ಎಸ್ ಆಗಿವೆ. ಈ ಮಾದರಿಯು ಒಂದೇ ಸೂರಿನಡಿಯಲ್ಲಿ (ಕ್ಯಾಂಪಸ್ನಲ್ಲಿ) ಶಾಲಾಪೂರ್ವ ತರಗತಿಗಳಿಂದ (LKG ಯಿಂದ) 12ನೇ ತರಗತಿಯವರೆಗಿನ 11 ಪಿಯುಸಿ) ಶಿಕ್ಷಣವನ್ನು ಒದಗಿಸುತ್ತದೆ. ಇದು ಕಲಿಕೆಯ ಗುಣಮಟ್ಟವನ್ನು ಉತ್ತಮಪಡಿಸಲು ಉತ್ತೇಜಿಸುತ್ತದೆ. ಅಲ್ಲದೇ ಪ್ರಾಥಮಿಕ, ಮಾಧ್ಯಮಿಕ ಮತ್ತು ಪಿಯುಸಿ ಹಂತಗಳಲ್ಲಿ ದಾಖಲಾತಿ ಹಂತದಲ್ಲಿ ಸೋರುವಿಕೆ/ ಶಾಲೆ ಬಿಡುವಿಕೆಯ ದರವನ್ನು ಕಡಿಮೆ ಮಾಡುತ್ತದೆ.
2018 ಮತ್ತು 2025ರ ನಡುವೆ ಸ್ಥಾಪಿತವಾದ 309 ಕೆ.ಪಿ.ಎಸ್ ಗಳು ಮತ್ತು 16 ಬಿ.ಪಿ.ಎಸ್.ಗಳು ಸುಮಾರು 3 ಲಕ್ಷ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದ್ದು, ಪ್ರಸ್ತುತ 2025-26ರಲ್ಲಿ ದಾಖಲಾತಿಯ ಚೇತರಿಕೆಯು ಭರವಸೆಯನ್ನುಂಟು ಮಾಡಿದೆ.
ಆದರೆ ಈ ಬೆಳವಣಿಗೆಯ ಸುಸ್ಥಿರತೆಗಾಗಿ ಅಗತ್ಯ ನೀತಿಗಳು ಮತ್ತು ಸರ್ಕಾರದ ಮಧ್ಯವರ್ತನಗಳ ಅಗತ್ಯವಿರುತ್ತದೆ. ಕೆ.ಪಿ.ಎಸ್ ಶಾಲೆಗಳಲ್ಲಿ ಏಕರೂಪದ ಕಾರ್ಯಾಚರಣೆ, ಮೇಲ್ವಿಚಾರಣೆ ಮತ್ತು ಆಡಳಿತ ನೀತಿಯನ್ನು ಹೊಂದಿರದಿರುವುದು, ಶಿಕ್ಷಕರ ನಿರಂತರತೆಯ ಕೊರತೆ, ಒಂದೇ ಕೆ.ಪಿ.ಎಸ್ ಶಾಲೆಯಲ್ಲಿ ಶಿಕ್ಷಣವನ್ನು ಮುಂದುವರಿಸಲು ವಿದ್ಯಾರ್ಥಿಗೆ ಕನಿಷ್ಠ ನಾಲ್ಕು ವರ್ಗಾವಣೆ ಪ್ರಮಾಣಪತ್ರಗಳನ್ನು ಪಡೆಯುವ ಅಗತ್ಯ ನಾಲ್ಕು ವಿಭಿನ್ನ UDISE+ ಕೋಡ್ ಗಳ ಇರುವಿಕೆ, ಕೆ.ಪಿ.ಎಸ್ ಶಾಲೆಗಳು ಮತ್ತು ಕಾಲೇಜುಗಳಿಂದ ನಾಲ್ಕು ವಿಭಿನ್ನ ಬ್ಯಾಂಕ್ ಖಾತೆಗಳ ನಿರ್ವಹಣೆ, ಇದರಿಂದಾಗಿ ಅನುದಾನ, ಮೂಲ ಸೌಕರ್ಯ, ಕಲಿಕಾ ಸೌಕರ್ಯಗಳು ಮತ್ತು ಮಾನವ ಸಂಪನ್ಮೂಲಗಳ ಗರಿಷ್ಠ ಬಳಕೆಯಾಗದಿರುವುದು, ನಿರೀಕ್ಷಿತ ಕಲಿಕಾ ಸಾಧನೆಯಾಗದಿರುವುದು ಇವುಗಳು ಕೆ.ಪಿ.ಎಸ್ ಶಾಲೆಗಳ ಇತರೆ ಸಮಸ್ಯೆಗಳಾಗಿವೆ.
ಮೇಲೆ ಓದಲಾದ ಕ್ರಮಾಂಕ (14) ರಲ್ಲಿ ಕರ್ನಾಟಕ ಆಡಳಿತ ಸುಧಾರಣಾ ಆಯೋಗದ 4ನೇ ವರದಿಯ ಅಧ್ಯಾಯ 3ರಲ್ಲಿ ಈ ಕೆಳಕಂಡ ಶಿಫಾರಸ್ಸುಗಳನ್ನು ಮಾಡಲಾಗಿದೆ.
1. ಡ್ರಾಪ್ಔಟ್ ದರವನ್ನು ಕಡಿಮೆ ಮಾಡಲು ಒಂದೇ ಆವರಣದಲ್ಲಿ ಅಥವಾ ಪರಸ್ಪರ ನೂರು ಮೀಟರ್ ಅಂತರದಲ್ಲಿರುವ ಹಿರಿಯ ಪ್ರಾಥಮಿಕ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳನ್ನು ವಿಲೀನಗೊಳಿಸಬಹುದು.
2. ಕೆ.ಪಿ.ಎಸ್ನಲ್ಲಿರುವ ಎಲ್ಲಾ ಸಂಯೋಜಿತ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜಿಗೆ ಮತ್ತು ಸಂಯೋಜಿತ ಕಾಲೇಜಿಗೆ ಒಬ್ಬರೇ ವೇತನ ಸೆಳೆಯುವ ಅಧಿಕಾರಿ ಇದ್ದರೆ ಹೆಚ್ಚು ಪರಿಣಾಮಕಾರಿಯಾಗುತ್ತದೆ.
3. ಕೆಪಿಎಸ್ ಗಳಿಗೆ ಆರ್ಥಿಕ ಇಲಾಖೆಯಿಂದ ಪ್ರತ್ಯೇಕ ಲೆಕ್ಕಶೀರ್ಷಿಕೆಯನ್ನು ಸೃಜಿಸಬಹುದು. ಇದರಿಂದಾಗಿ ಒಂದು ಖಾತೆಯಿಂದ ವೇತನ ಸೆಳೆಯುವುದು ಇತ್ಯಾದಿ ಸಾಧ್ಯವಾಗುತ್ತದೆ.
4. ಪ್ರಾಂಶುಪಾಲರು, ಉಪಪ್ರಾಂಶುಪಾಲರಾದ ಪ್ರೌಢ ಶಾಲಾ ಮುಖ್ಯೋಪಾಧ್ಯಾಯರು ಮತ್ತು ಕೆಪಿಎಸ್ ನ ಪ್ರಾಥಮಿಕ ಶಾಲೆಗಳ ಮುಖ್ಯೋಪಾಧ್ಯಯರುಗಳ ನಡುವೆ ಸೂಕ್ತವಾದ ಕಾರ್ಯ ಹಂಚಿಕೆ ಮಾಡಬಹುದು.
5. ವಿದ್ಯಾರ್ಥಿಯು 1ನೇ ತರಗತಿಯಿಂದ 12ನೇ ತರಗತಿಯವರೆಗೆ ಪ್ರಗತಿ ಹೊಂದಲು 3 ಬಾರಿ ಟಿಸಿ ಮತ್ತು ಪ್ರವೇಶವನ್ನು ತೆಗೆದುಕೊಳ್ಳುವ ಅಗತ್ಯವನ್ನು ತೆಗೆದು ಹಾಕುವ ಮೂಲಕ ಡ್ರಾಪ್ ಔಟ್ ದರ ಮತ್ತು ಪೋಷಕರ ಮೇಲಿನ ವೆಚ್ಚವು ಗಣನೀಯವಾಗಿ ಕಡಿಮೆಯಾಗುತ್ತದೆ.
6. ಇಲಾಖೆಯು 1 ರಿಂದ 12ನೇ ತರಗತಿಯವರೆಗೆ ಎಲ್ಲಾ ತರಗತಿಗಳಿಗೆ ಕೆಪಿಎಸ್ಗಾಗಿ ಒಂದೇ UDISE+ಕೋಡ್ನ್ನು ನೀಡಬಹುದು ಮತ್ತು ಸಂಯೋಜಿತ ಶಾಲೆಗಳ UDISE+ಕೋಡ್ ಗಳನ್ನು ಡಿಲೀಟ್ ಮಾಡಬಹುದು. ಇದು ಆಡಳಿತವನ್ನು ಸುಲಭಗೊಳಿಸುತ್ತದೆ ಮತ್ತು ಡೇಟಾ ನಮೂದನ್ನು ಸರಳಗೊಳಿಸುತ್ತದೆ.
7. ಪ್ರತ್ಯೇಕ ಶಾಲೆಗಳಿಗೆ UDISE+ಕೋಡ್ಗಳ ಆಧಾರದ ಮೇಲೆ ನೀಡಲಾಗುವ ಸ್ವಚ್ಛತ ಶುಲ್ಕಗಳನ್ನು ಮತ್ತು ಇತರ ಅನುದಾನಗಳನ್ನು ಸಂಚಿತವಾಗಿ ಸಂಯೋಜಿತ / ಕ್ಲಸ್ಟರ್ ಶಾಲೆಗಳಿಗೆ ನೀಡಬಹುದು.
8. ಸಂಯೋಜಿತ ಕಾಲೇಜುಗಳು ಮತ್ತು ಸಂಯೋಜಿತ ಶಾಲೆಗಳು ಮತ್ತು ಕೆಪಿಎಸ್ನಲ್ಲಿನ ಘಟಕ ಶಾಲೆಗಳ ಮುಖ್ಯೋಪಾಧ್ಯಾಯರುಗಳು, ಪ್ರಾಂಶುಪಾಲರು ಮತ್ತು ಉಪ ಪ್ರಾಂಶುಪಾಲರುಗಳನ್ನು ಒಳಗೊಂಡಿರುವ ಶೈಕ್ಷಣಿಕ ಸಮಿತಿಯನ್ನು ರಚಿಸಲು ಇಲಾಖೆಯು ಆದೇಶವನ್ನು ಹೊರಡಿಸಬಹುದು.
9. ಹೊಸ ಕೆಪಿಎಸ್ ಗಳನ್ನು ನಿರ್ಮಿಸಲು ಒಂದು ಮಾದರಿ ವಿನ್ಯಾಸ ಯೋಜನೆಯನ್ನು ರಚಿಸಬಹುದು.
10. ಕೆಪಿಎಸ್ನಲ್ಲಿ ಕಾರ್ಯನಿರತ ದ್ವಿ.ದ.ಸ. / ಪ್ರ.ದ.ಸ. ಮತ್ತು ಗ್ರೂಪ್ ಡಿ ಕೆಲಸಗಾರರು ಇಲ್ಲದಿದ್ದಲ್ಲಿ ಒಬ್ಬ ಡಿಇಓ ಮತ್ತು ಒಬ್ಬ ಸಹಾಯಕರನ್ನು ಹೊರಗುತ್ತಿಗೆ ಆಧಾರದ ಮೇಲೆ ತೆಗೆದುಕೊಳ್ಳಲು ಅನುಮತಿ ಮತ್ತು ಅನುದಾನವನ್ನು ಒದಗಿಸಬಹುದು.
11. ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯಿದೆ, 2009 ರ ಕಲಂ 21, ಅನುದಾನರಹಿತ ಶಾಲೆಗಳನ್ನು ಹೊರತುಪಡಿಸಿ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಶಾಲಾ ನಿರ್ವಹಣಾ ಸಮಿತಿಗಳ ರಚನೆಯು ಕಡ್ಡಾಯವಾಗಿದೆ ಎಂದು ಹೇಳುತ್ತದೆ. ಕರ್ನಾಟಕದಲ್ಲಿ ಇವುಗಳನ್ನು ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳು (ಎಸ್ಡಿಎಂಸಿ) ಎಂದು ಕರೆಯಲಾಗುತ್ತದೆ. ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಕರ್ನಾಟಕ ಮಕ್ಕಳ ಹಕ್ಕು ನಿಯಮಗಳು, 2012 ನಿಯಮ 13 (3) ಎಸ್ಡಿಎಂಸಿ.ಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ಪೋಷಕರು ಅಥವಾ ಪಾಲಕ ಸದಸ್ಯರಿಂದ ಆಯ್ಕೆ ಮಾಡುವುದನ್ನು ಕಡ್ಡಾಯಗೊಳಿಸಿದೆ. ಆಯಾ ಗೌರವಾನ್ವಿತ ಶಾಸಕರು ಕರ್ನಾಟಕ ಪಬ್ಲಿಕ್ ಶಾಲೆಗಳ ಎಸ್ಡಿಎಂಸಿಗಳ ಅಧ್ಯಕ್ಷರಾಗಿರುತ್ತಾರೆ. ಮಾನ್ಯ ಶಾಸಕರಿಗೆ ತಮ್ಮ ಕ್ಷೇತ್ರದ ಪ್ರತಿ ಕೆಪಿಎಸ್ ಸಭೆಗಳಿಗೆ ಹಾಜರಾಗಲು ಸಮಯ ಸಿಗದೇ ಇರಬಹುದು. ಇದಲ್ಲದೆ, ಈ ಆದೇಶವು ಆರ್ಟಿಇ ನಿಯಮಗಳ ಉಲ್ಲಂಘನೆಯಾಗಿದೆ. ಆದ್ದರಿಂದ ಕೆಪಿಎಸ್.ನಲ್ಲಿನ ಎಸ್ಡಿಎಂಸಿ ಗಳನ್ನು ನಿಯಮ 13 (3) (ಬಿ) ಗೆ ಅನುಗುಣವಾಗಿ ರಚಿಸಲು ಮತ್ತು ಅಧ್ಯಕ್ಷರನ್ನಾಗಿ ಮಾಡಲು ಶಿಫಾರಸ್ಸು ಮಾಡಲಾಗಿದೆ.
ಮೇಲೆ ಓದಲಾದ ಕ್ರಮಾಂಕ (15) ರಲ್ಲಿ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ಇವರು 2018 ರಿಂದ 2025-26 ನೇ ಸಾಲಿನವರೆಗೆ ಕೆ.ಪಿ.ಎಸ್ ಮತ್ತು ಬಿ.ಪಿ.ಎಸ್. ಶಾಲೆಗಳನ್ನಾಗಿ ಉನ್ನತೀಕರಿಸಲಾದ ಶಾಲೆಗಳ ಡೈಸ್ ಕೋಡ್ ನೊಂದಿಗೆ ಸರ್ಕಾರದ ಆದೇಶಗಳಲ್ಲಿ ನೀಡಿರುವಂತೆ ಅದೇ ಭೌಗೋಳಿಕ ಪ್ರದೇಶದಲ್ಲಿರುವ ಪ್ರಾಥಮಿಕ, ಪ್ರೌಢ ಶಾಲೆ ಮತ್ತು ಪದವಿಪೂರ್ವ ಕಾಲೇಜುಗಳ ಡೈಸ್ ಕೋಡ್ ಗಳನ್ನು ಸಂಯೋಜನೆಗೊಳಿಸಿ ಪೂರ್ವ ಪ್ರಾಥಮಿಕ ದಿಂದ ಪದವಿಪೂರ್ವ ತರಗತಿ (12ನೇ ತರಗತಿ) ವರೆಗೆ ಒಂದೇ ಡ್ರೆಸ್ ಕೋಡ್ ಹೊಂದಿರುವ ಶಾಲೆಯಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ಮುಂದುವರೆಸಲು ಅನುಕೂಲವಾಗುವಂತೆ ಮತ್ತು ಕೆ.ಪಿ.ಎಸ್ ಶಾಲೆಗೆ ಒಂದೇ ಡಿ.ಡಿ.ಒ ಕೋಡ್ ನೀಡುವ ಮೂಲಕ ಆಡಳಿತಾತ್ಮಕ ಮತ್ತು ಶೈಕ್ಷಣಿಕ ಜವಾಬ್ದಾರಿಗಳನ್ನು ಪದವಿಪೂರ್ವ ವಿಭಾಗದ ಪ್ರಾಂಶುಪಾಲರು ಮತ್ತು ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಮುಖ್ಯೋಪಾಧ್ಯಾಯರಿಗೆ (ಉಪ ಪ್ರಾಂಶುಪಾಲರು) ಹಂಚಿಕೆ ಮಾಡುವ ಮೂಲಕ ಕೆ.ಪಿ.ಎಸ್ ಶಾಲೆಗಳ ನಿರ್ವಹಣೆಯನ್ನು ಪರಿಣಾಮಕಾರಿಗೊಳಿಸಲು ಪ್ರಸ್ತಾಪಿಸಿರುತ್ತಾರೆ. ಬೆಂಗಳೂರು ನಗರದಲ್ಲಿರುವ 16 ಬೆಂಗಳೂರು ಪಬ್ಲಿಕ್ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ ಹೆಸರಿಸಿ ಕೆಪಿಎಸ್ ಶಾಲೆಗಳ ಮಾದರಿಯಲ್ಲಿಯೇ ಅಭಿವೃದ್ಧಿಪಡಿಸುವ ಬಗ್ಗೆ ಅನುಮೋದನೆ ಕೋರಿ ಪ್ರಸ್ತಾವನೆ ಸಲ್ಲಿಸಿರುತ್ತಾರೆ.
ಮೇಲ್ಕಂಡ ಪ್ರಸ್ತಾವನೆಯಲ್ಲಿನ ಅಂಶಗಳನ್ನು ಕೂಲಂಕವಾಗಿ ಪರಿಶೀಲಿಸಿ, ಈ ಕೆಳಕಂಡಂತೆ ಆದೇಶಿಸಿದೆ.
ಸರ್ಕಾರದ ಆದೇಶ ಸಂಖ್ಯೆ:ಇಪಿ 54 ಯೋಸಕ 2026, ಬೆಂಗಳೂರು,ದಿನಾಂಕ : 11.06.2026
ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಈಗಾಗಲೇ ಸ್ಥಾಪಿಸಲಾಗಿರುವ 310 ಕರ್ನಾಟಕ ಪಬ್ಲಿಕ್ ಶಾಲೆಗಳೊಂದಿಗೆ ಸ್ಥಾಪಿಸಲಾಗಿರುವ 12 ಬೆಂಗಳೂರು ಪಬ್ಲಿಕ್ ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳೆಂದು ಹೆಸರಿಸಿ, ಒಟ್ಟಾರೆ 322 ಕರ್ನಾಟಕ ಪಬ್ಲಿಕ್ ಶಾಲೆಗಳ UDISE+ಕೋಡ್ ನೊಂದಿಗೆ ಅದೇ ಭೌಗೋಳಿಕ ಪ್ರದೇಶದಲ್ಲಿರುವ 520 ಘಟಕ ಶಾಲೆಗಳ (ಸರ್ಕಾರಿ ಪ್ರಾಥಮಿಕ, ಪ್ರೌಢ ಮತ್ತು ಪದವಿ ಪೂರ್ವ ಕಾಲೇಜು) UDISE+ಕೋಡ್ಗಳನ್ನು ಅನುಬಂಧದಲ್ಲಿ ತಿಳಿಸಿರುವಂತೆ ಸಂಯೋಜನೆಗೊಳಿಸಲು ಮತ್ತು ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಒಂದೇ UDISE+ಕೋಡ್ನಲ್ಲಿ ನಿರ್ವಹಿಸಲು, UDISE+ ಕೋಡ್ ಗಳನ್ನು ಜೋಡಣೆ ಮಾಡಿದ ನಂತರವೂ ಸಹ ಘಟಕ ಶಾಲೆಗಳು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಭೌತಿಕ ಸ್ಥಳಗಳಲ್ಲಿಯೇ ಮುಂದುವರೆಯಲು ಹಾಗೂ ಅನುಬಂಧದಲ್ಲಿ ನೀಡಿರುವ ಪಟ್ಟಿಯಲ್ಲಿರುವ 21 ಪಿಎಂ ಶ್ರೀ ಶಾಲೆಗಳನ್ನು ಪಿಎಂ ಶ್ರೀ ಕರ್ನಾಟಕ ಪಬ್ಲಿಕ್ ಶಾಲೆ ಎಂದು ಮರುನಾಮಕರಣ ಮಾಡಲು ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ಮತ್ತು ನಿರ್ದೇಶಕರು, ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆ ಇವರಿಗೆ ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶಿಸಲಾಗಿದೆ.
ಕಾರ್ಯಕ್ರಮದ ಅನುಷ್ಠಾನಕ್ಕೆ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಮತ್ತು ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ ಇವರು ಪಾಲಿಸಬೇಕಾದ ಷರತ್ತುಗಳು ಮತ್ತು ನಿಬಂಧನೆಗಳು:
1. ಕರ್ನಾಟಕ ಪಬ್ಲಿಕ್ ಶಾಲೆಗಳ UDISE+ ಕೋಡ್ ನೊಂದಿಗೆ ಒಂದೇ ಆವರಣ ಅಥವಾ ಸುತ್ತಮುತ್ತಲಿನ ಭೌಗೋಳಿಕ ಸ್ಥಳಗಳ ವ್ಯಾಪ್ತಿಯಲ್ಲಿರುವ ಘಟಕ ಶಾಲೆಗಳ (ಕಿರಿಯ/ ಹಿರಿಯ ಪ್ರಾಥಮಿಕ, ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜು) UDISE+ ಕೋಡ್ ಗಳನ್ನು ಸಂಯೋಜನೆ ಮಾಡತಕ್ಕದ್ದು.
2. UDISE+ ಕೋಡ್ ಅನ್ನು ಜೋಡಣೆ ಮಾಡಿದ ನಂತರವೂ ಜೋಡಣೆಗೊಂಡ ಘಟಕ ಶಾಲೆಗಳು ಭೌತಿಕವಾಗಿ ಪ್ರಸ್ತುತ ನಡೆಯುತ್ತಿರುವ ಸ್ಥಳದಲ್ಲಿಯೇ ನಡೆಸತಕ್ಕದ್ದು. ಘಟಕ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯ ಅನುಷ್ಠಾನವು ಆಯಾ ಶಾಲಾ ಆವರಣದಲ್ಲಿಯೇ ನಡೆಸತಕ್ಕದ್ದು.
3. ಅನುಬಂಧದಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಯು ಪಿಎಂ ಶ್ರೀ ಶಾಲೆಯಾಗಿಯೂ ಆಯ್ಕೆಗೊಂಡಿದ್ದಲ್ಲಿ ಅಂತಹ ಶಾಲೆಗಳನ್ನು ಪಿಎಂಶ್ರೀ ಕರ್ನಾಟಕ ಪಬ್ಲಿಕ್ ಶಾಲೆ ಯೆಂದು ಹೆಸರಿಸತಕ್ಕದ್ದು ಮತ್ತು ಅಂತಹ ಕರ್ನಾಟಕ ಪಬ್ಲಿಕ್ ಶಾಲೆಗಳ ನಿರ್ವಹಣೆ ಮತ್ತು ಅಭಿವೃದ್ಧಿ ಕಾಮಗಾರಿಗಳಿಗೆ ತಗುಲುವ ವೆಚ್ಚಗಳನ್ನು ಪಿ.ಎಂ. ಶ್ರೀ ಯೋಜನೆಯಡಿ ಬಿಡುಗಡೆ ಮಾಡುವ ಅನುದಾನದಲ್ಲಿ ಭರಿಸತಕ್ಕದ್ದು. ವಿಎಂಶ್ರೀ ಕರ್ನಾಟಕ ಪಬ್ಲಿಕ್ ಶಾಲೆಗಳ ನಿರ್ವಹಣೆಯ ಜವಾಬ್ದಾರಿಯನ್ನು ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ ಇವರು ನಿರ್ವಹಿಸತಕ್ಕದ್ದು.
4. ಅನುಬಂಧದಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಯು ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆಯ ವತಿಯಿಂದ ಕರ್ನಾಟಕ ಪಬ್ಲಿಕ್ ಶಾಲೆಯೆಂದು ಅನುಮೋದನೆಯಾಗಿದ್ದಲ್ಲಿ ಅಂತಹ ಶಾಲೆಗಳ ನಿರ್ವಹಣೆ ಮತ್ತು ಅಭಿವೃದ್ಧಿ ಕಾಮಗಾರಿಗಳಿಗೆ ತಗುಲುವ ವೆಚ್ಚಗಳನ್ನು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ ಒದಗಿಸಲಾಗುವ ಅನುದಾನದಲ್ಲಿ ಭರಿಸತಕ್ಕದ್ದು.
5. ಕರ್ನಾಟಕ ಪಬ್ಲಿಕ್ ಶಾಲೆಯ UDISE+ ಕೋಡ್ ನೊಂದಿಗೆ ಸಂಯೋಜನೆ ಮಾಡಿದ ಘಟಕ ಶಾಲೆಗಳಾದ ಪ್ರಾಥಮಿಕ, ಪ್ರೌಢ ಮತ್ತು ಪದವಿ ಪೂರ್ವ ವಿಭಾಗದ ಮುಖ್ಯಸ್ಥರ ಕರ್ತವ್ಯ ಹಾಗೂ ಜವಾಬ್ದಾರಿಗಳ ಬಗ್ಗೆ ನಿರ್ದಿಷ್ಟ ಜಂಟಿ ಸುತ್ತೋಲೆಯನ್ನು ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಮತ್ತು ನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಇವರು ಹೊರಡಿಸತಕ್ಕದ್ದು.
6. ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಆರ್ಟಿಇ ಕಾಯ್ದೆ 2009 ಕಲಂ 21 ಮತ್ತು ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಕರ್ನಾಟಕ ಮಕ್ಕಳ ಹಕ್ಕು ನಿಯಮಗಳು, 2012 ನಿಯಮ 13 (3) ರಂತೆ ಎಸ್.ಡಿ.ಎಂಸಿ. ರಚನೆ ಮಾಡುವುದನ್ನು ಕಡ್ಡಾಯಗೊಳಿಸಿದ್ದು, ಈ ಸಂಬಂಧ ಪ್ರತ್ಯೇಕ ವಿಸ್ತ್ರತ ಆದೇಶವನ್ನು ಹೊರಡಿಸಲಾಗುವುದು.
7. ಕರ್ನಾಟಕ ಪಬ್ಲಿಕ್ ಶಾಲೆಗಳ ನಿರ್ವಹಣೆಗಾಗಿ ಶಾಲಾ ಹಂತದಲ್ಲಿ ಪದವಿ ಪೂರ್ವ ವಿಭಾಗದ ಪ್ರಾಂಶುಪಾಲರ ಅಧ್ಯಕ್ಷತೆ, ಪ್ರೌಢ ಮತ್ತು ಪ್ರಾಥಮಿಕ ಶಾಲಾ ವಿಭಾಗದ ಮುಖ್ಯಸ್ಥರಾದ ಕ್ರಮವಾಗಿ ಉಪಪ್ರಾಂಶುಪಾಲರು-1 ಮತ್ತು ಉಪಪ್ರಾಂಶುಪಾಲರು-2 ಮತ್ತು ಎಸ್.ಡಿ.ಎಂ.ಸಿ ಹಾಗೂ ಅನುಬಂಧದಲ್ಲಿ ನೀಡಿರುವ ಪಟ್ಟಿಯಲ್ಲಿರುವ 21 ಪಿಎಂ ಶ್ರೀ ಶಾಲೆಗಳನ್ನು ಪಿಎಂ ಶ್ರೀ ಕರ್ನಾಟಕ ಪಬ್ಲಿಕ್ ಶಾಲೆ ಎಂದು ಮರುನಾಮಕರಣ ಮಾಡಲು ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು ಮತ್ತು ನಿರ್ದೇಶಕರು, ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆ ಇವರಿಗೆ ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶಿಸಲಾಗಿದೆ.
ಕಾರ್ಯಕ್ರಮದ ಅನುಷ್ಠಾನಕ್ಕೆ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಮತ್ತು ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ ಇವರು ಪಾಲಿಸಬೇಕಾದ ಷರತ್ತುಗಳು ಮತ್ತು ನಿಬಂಧನೆಗಳು:
1. ಕರ್ನಾಟಕ ಪಬ್ಲಿಕ್ ಶಾಲೆಗಳ UDISE+ ಕೋಡ್ ನೊಂದಿಗೆ ಒಂದೇ ಆವರಣ ಅಥವಾ ಸುತ್ತಮುತ್ತಲಿನ ಭೌಗೋಳಿಕ ಸ್ಥಳಗಳ ವ್ಯಾಪ್ತಿಯಲ್ಲಿರುವ ಘಟಕ ಶಾಲೆಗಳ (ಕಿರಿಯ/ ಹಿರಿಯ ಪ್ರಾಥಮಿಕ, ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜು) UDISE+ ಕೋಡ್ ಗಳನ್ನು ಸಂಯೋಜನೆ ಮಾಡತಕ್ಕದ್ದು.
2. UDISE+ ಕೋಡ್ ಅನ್ನು ಜೋಡಣೆ ಮಾಡಿದ ನಂತರವೂ ಜೋಡಣೆಗೊಂಡ ಘಟಕ ಶಾಲೆಗಳು ಭೌತಿಕವಾಗಿ ಪ್ರಸ್ತುತ ನಡೆಯುತ್ತಿರುವ ಸ್ಥಳದಲ್ಲಿಯೇ ನಡೆಸತಕ್ಕದ್ದು. ಘಟಕ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯ ಅನುಷ್ಠಾನವು ಆಯಾ ಶಾಲಾ ಆವರಣದಲ್ಲಿಯೇ ನಡೆಸತಕ್ಕದ್ದು.
3. ಅನುಬಂಧದಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಯು ಪಿಎಂ ಶ್ರೀ ಶಾಲೆಯಾಗಿಯೂ ಆಯ್ಕೆಗೊಂಡಿದ್ದಲ್ಲಿ ಅಂತಹ ಶಾಲೆಗಳನ್ನು ಪಿಎಂಶ್ರೀ ಕರ್ನಾಟಕ ಪಬ್ಲಿಕ್ ಶಾಲೆ ಯೆಂದು ಹೆಸರಿಸತಕ್ಕದ್ದು ಮತ್ತು ಅಂತಹ ಕರ್ನಾಟಕ ಪಬ್ಲಿಕ್ ಶಾಲೆಗಳ ನಿರ್ವಹಣೆ ಮತ್ತು ಅಭಿವೃದ್ಧಿ ಕಾಮಗಾರಿಗಳಿಗೆ ತಗುಲುವ ವೆಚ್ಚಗಳನ್ನು ಪಿ.ಎಂ. ಶ್ರೀ ಯೋಜನೆಯಡಿ ಬಿಡುಗಡೆ ಮಾಡುವ ಅನುದಾನದಲ್ಲಿ ಭರಿಸತಕ್ಕದ್ದು. ವಿಎಂಶ್ರೀ ಕರ್ನಾಟಕ ಪಬ್ಲಿಕ್ ಶಾಲೆಗಳ ನಿರ್ವಹಣೆಯ ಜವಾಬ್ದಾರಿಯನ್ನು ರಾಜ್ಯ ಯೋಜನಾ ನಿರ್ದೇಶಕರು, ಸಮಗ್ರ ಶಿಕ್ಷಣ ಕರ್ನಾಟಕ ಇವರು ನಿರ್ವಹಿಸತಕ್ಕದ್ದು.
4. ಅನುಬಂಧದಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಯು ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆಯ ವತಿಯಿಂದ ಕರ್ನಾಟಕ ಪಬ್ಲಿಕ್ ಶಾಲೆಯೆಂದು ಅನುಮೋದನೆಯಾಗಿದ್ದಲ್ಲಿ ಅಂತಹ ಶಾಲೆಗಳ ನಿರ್ವಹಣೆ ಮತ್ತು ಅಭಿವೃದ್ಧಿ ಕಾಮಗಾರಿಗಳಿಗೆ ತಗುಲುವ ವೆಚ್ಚಗಳನ್ನು ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ ಒದಗಿಸಲಾಗುವ ಅನುದಾನದಲ್ಲಿ ಭರಿಸತಕ್ಕದ್ದು.
5. ಕರ್ನಾಟಕ ಪಬ್ಲಿಕ್ ಶಾಲೆಯ UDISE+ ಕೋಡ್ ನೊಂದಿಗೆ ಸಂಯೋಜನೆ ಮಾಡಿದ ಘಟಕ ಶಾಲೆಗಳಾದ ಪ್ರಾಥಮಿಕ, ಪ್ರೌಢ ಮತ್ತು ಪದವಿ ಪೂರ್ವ ವಿಭಾಗದ ಮುಖ್ಯಸ್ಥರ ಕರ್ತವ್ಯ ಹಾಗೂ ಜವಾಬ್ದಾರಿಗಳ ಬಗ್ಗೆ ನಿರ್ದಿಷ್ಟ ಜಂಟಿ ಸುತ್ತೋಲೆಯನ್ನು ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಮತ್ತು ನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಇವರು ಹೊರಡಿಸತಕ್ಕದ್ದು.
6. ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ಆರ್ಟಿಇ ಕಾಯ್ದೆ 2009 ಕಲಂ 21 ಮತ್ತು ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಕರ್ನಾಟಕ ಮಕ್ಕಳ ಹಕ್ಕು ನಿಯಮಗಳು, 2012 ನಿಯಮ 13 (3) ರಂತೆ ಎಸ್.ಡಿ.ಎಂಸಿ. ರಚನೆ ಮಾಡುವುದನ್ನು ಕಡ್ಡಾಯಗೊಳಿಸಿದ್ದು, ಈ ಸಂಬಂಧ ಪ್ರತ್ಯೇಕ ವಿಸ್ತ್ರತ ಆದೇಶವನ್ನು ಹೊರಡಿಸಲಾಗುವುದು.
7. ಕರ್ನಾಟಕ ಪಬ್ಲಿಕ್ ಶಾಲೆಗಳ ನಿರ್ವಹಣೆಗಾಗಿ ಶಾಲಾ ಹಂತದಲ್ಲಿ ಪದವಿ ಪೂರ್ವ ವಿಭಾಗದ ಪ್ರಾಂಶುಪಾಲರ ಅಧ್ಯಕ್ಷತೆ, ಪ್ರೌಢ ಮತ್ತು ಪ್ರಾಥಮಿಕ ಶಾಲಾ ವಿಭಾಗದ ಮುಖ್ಯಸ್ಥರಾದ ಕ್ರಮವಾಗಿ ಉಪಪ್ರಾಂಶುಪಾಲರು-1 ಮತ್ತು ಉಪಪ್ರಾಂಶುಪಾಲರು-2 ಮತ್ತು ಎಸ್.ಡಿ.ಎಂ.ಸಿ
ಸಮಿತಿಯಿಂದ ನಾಮನಿರ್ದೇಶನಗೊಂಡ ಇಬ್ಬರು ಸದಸ್ಯರನ್ನು ಒಳಗೊಂಡ ಕೆ.ಪಿ.ಎಸ್ ಶಾಲೆಯ ಕಾರ್ಯಕಾರಿ ಸಮಿತಿ (Governing Council) ಯನ್ನು ರಚಿಸುವುದು ಮತ್ತು ಕರ್ನಾಟಕ ಪಬ್ಲಿಕ್ ಶಾಲೆಗೆ ಸಂಬಂಧಿಸಿದಂತೆ ಎಲ್ಲಾ ಅನುದಾನದ ನಿರ್ವಹಣೆಯನ್ನು ಒಂದೇ ಬ್ಯಾಂಕ್ ಖಾತೆಯ ಮೂಲಕ ಸದರಿ ಶಾಲಾ ಕಾರ್ಯಕಾರಿ ಸಮಿತಿಯು ನಿರ್ವಹಿಸತಕ್ಕದ್ದು. ಸದರಿ ಸಮಿತಿಯು ಪ್ರತೀ 15 ದಿನಗಳಿಗೊಮ್ಮೆ ಸಭೆ ನಡೆಸಿ ಚರ್ಚಿಸಿ ಶಾಲಾಭಿವೃದ್ಧಿಗೆ ಕ್ರಮವಹಿಸತಕ್ಕದ್ದು.
- ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಪ್ರೌಢ ಶಾಲಾ ಹಂತದವರೆಗೆ ಮಾತ್ರ ಅನುಮತಿ ಪಡೆದು ತರಗತಿಗಳು ನಡೆಯುತ್ತಿದ್ದಲ್ಲಿ ಪದವಿ ಪೂರ್ವ ತರಗತಿಗಳನ್ನು ಪ್ರಾರಂಭಿಸಲು ಸೂಕ್ತ ಪ್ರಸ್ತಾವನೆಯನ್ನು ಸಲ್ಲಿಸತಕ್ಕದ್ದು.
- ಎಲ್ಲಾ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ ದ್ವಿಭಾಷಾ ಪೂರ್ವ ಪ್ರಾಥಮಿಕ ತರಗತಿಗಳು ನಡೆಯುತ್ತಿರುವುದನ್ನು ಖಾತ್ರಿ ಪಡಿಸಿಕೊಳ್ಳತಕ್ಕದ್ದು.
- ಎಲ್ಲಾ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ LKG ಯಿಂದ 5ನೇ ತರಗತಿಯವರೆಗೆ ಏಕ ತರಗತಿ ಪಠ್ಯಪುಸ್ತಕ ಆಧಾರಿತ ದ್ವಿಭಾಷಾ ಮಾಧ್ಯಮ ಬೋಧನೆಯನ್ನು ಅಳವಡಿಸಿಕೊಳ್ಳುವುದು, 6 ರಿಂದ 10ನೇ ತರಗತಿಯವರೆಗೆ ಮಾಧ್ಯಮವಾರು ಏಕತರಗತಿ ಪಠ್ಯಪುಸ್ತಕ ಆಧಾರಿತ ತರಗತಿಗಳು ಮತ್ತು ಕ್ರಿಯಾಶೀಲ ಬೋಧನಾ ಪದ್ಧತಿಯನ್ನು ಅಳವಡಿಸಿಕೊಳ್ಳುವುದು
- ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿನ ಗರಿಷ್ಠ ತರಗತಿ ಆಧರಿಸಿ ಪದವಿ ಪೂರ್ವ ವಿಭಾಗದ ಪ್ರಾಂಶುಪಾಲರು/ಪ್ರೌಢಶಾಲಾ ಮುಖ್ಯಶಿಕ್ಷಕರು ಕೆಪಿಎಸ್ ಶಾಲೆಗೆ ವೇತನ ಸೆಳೆಯುವ ಮತ್ತು ವಿತರಣಾ ಅಧಿಕಾರಿ (Drawing and Disbursing Officer) ಆಗಿರತಕ್ಕದ್ದು,
- ಎಲ್ಲಾ ಕರ್ನಾಟಕ ಪಬ್ಲಿಕ್ ಶಾಲೆಗಳಲ್ಲಿ 1ನೇ ತರಗತಿಯಿಂದ ಕಂಪ್ಯೂಟರ್ ಶಿಕ್ಷಣ ಮತ್ತು 6ನೇ ತರಗತಿಯಿಂದ ಉದ್ಯಮ ಸಮ್ಮಿಳಿತ ವೃತ್ತಿಪರ ಕೌಶಲ್ಯ ಆಧಾರಿತ ಪಠ್ಯಕ್ರಮದ ಪರಿಚಯ ಪ್ರಾರಂಭಿಸಲು ಕ್ರಮವಹಿಸತಕ್ಕದ್ದು,
13. ಶಾಲಾ ಶಿಕ್ಷಣ ಇಲಾಖೆಯಲ್ಲಿ ಪ್ರಸ್ತುತ ಲಭ್ಯವಿರುವ ಮಾನವ ಸಂಪನ್ಮೂಲವನ್ನು ಮರುನಿಯೋಜಿಸುವ ಮೂಲಕ ಎಲ್ಲಾ ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಒಬ್ಬರು ಪ್ರಥಮ ದರ್ಜೆ ಸಹಾಯಕ ಮತ್ತು ಒಬ್ಬರು ಗ್ರೂಪ್-ಡಿ ಸಿಬ್ಬಂದಿಯನ್ನು ನಿಯೋಜಿಸಲು ಕ್ರಮವಹಿಸತಕ್ಕದ್ದು.
14. ಕರ್ನಾಟಕ ಪಬ್ಲಿಕ್ ಶಾಲೆಯ UDISE+ ಕೋಡ್ ನೊಂದಿಗೆ ಸಂಯೋಜನೆ ಮಾಡಲಾಗುವ ಪ್ರಾಥಮಿಕ/ಪ್ರೌಢ ಶಾಲೆ/ಪದವಿ ಪೂರ್ವ ಕಾಲೇಜುಗಳ UDISE+ ಕೋಡ್ ನಲ್ಲಿ ಲಭ್ಯವಿರುವ ಹಿಂದಿನ ಶೈಕ್ಷಣಿಕ ವರ್ಷಗಳ ವಿದ್ಯಾರ್ಥಿಗಳ ಶೈಕ್ಷಣಿಕ ದಾಖಲೆಗಳನ್ನು ಅದೇ UDISE+ ಕೋಡ್ನಲ್ಲಿಯೇ ನಿರ್ವಹಿಸುವುದು.
